Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು
ಲೈಂಗಿಕ ಸಾಮರ್ಥ್ಯವು ನೇರವಾಗಿ ನಾವು ಸೇವಿಸುವ ಆಹಾರ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿರುತ್ತಾರೆ. ನಾವು ತಿನ್ನುವ ಆಹಾರವು ನಮ್ಮ ವರ್ತನೆಯನ್ನು ನಿರ್ಧರಿಸುತ್ತದೆ ಎಂದು ಆಯುರ್ವೇದದಲ್ಲಿಯೇ ಉಲ್ಲೇಖಗೊಂಡಿದ್ದು, ಆಧುನಿಕ ವೈದ್ಯ ಪದ್ಧತಿಯು ಸಹ ಇದನ್ನು ಅನುಮೋದಿಸುತ್ತದೆ. ಆಧುನಿಕ ಜೀವನ ಶೈಲಿಯು ಪುರುಷರ ಲೈಂಗಿಕತೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮವನ್ನು ಬೀರುತ್ತಿರುವುದನ್ನು ಪ್ರತಿಯೊಬ್ಬರೂ ಗಮನಿಸಬಹುದು. ನಿಮಿರುವಿಕೆಯ ದೋಷ ಹಾಗು ಶೀಘ್ರ ವೀರ್ಯ ಸ್ಖಲನವು ಪುರುಷರ ಲೈಂಗಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವಯಾಗ್ರ ಹಾಗು ಅದೇ ರೀತಿಯ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.
ಆದರೂ ಈ ಔಷಧಿಗಳು ತತ್‌ಕ್ಷಣಕ್ಕೆ ನೆರವಾದರೂ ಸಹ ಮುಂದಿನ ಜೀವನದಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ದೀರ್ಘಕಾಲದ ನಿಮಿರುವಿಕೆ ಸಮಸ್ಯೆಗಳು ಮತ್ತು ಇತರೆ ಅಡ್ಡಪರಿಣಾಮಗಳು ಈ ಔಷಧಿಗಳು ಉಂಟು ಮಾಡುತ್ತವೆ. ಆದರೆ ಈಗ ಈ ಔಷಧಿಗಳನ್ನು ನೀವು ಅವಲಂಬಿಸಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಈ ಔಷಧಿಗಳು ಮಾಡುವ ಕೆಲಸವನ್ನು ಕೆಲವೊಂದು ಸ್ವಾಭಾವಿಕ ಆಹಾರ ಪದಾರ್ಥಗಳು ಮಾಡುತ್ತವೆ. ಈ ಆಹಾರ ಪದಾರ್ಥಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ವಯಾಗ್ರಕ್ಕೆ ಬದಲಿಯಾಗಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.. ಬನ್ನಿ ಇನ್ನು ತಡಮಾಡದೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.....

ಹಾಲು
ತಾಜಾ ಹಾಗೂ ಕೊಬ್ಬು ಸಹಿತ ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ.

ಸಿಂಪಿ ಅಥವಾ ಚಿಪ್ಪಿನ ಮೃದಂಗಿ (Oysters)
ಲೈಂಗಿಕ ಶಕ್ತಿ ಹೆಚ್ಚಲು ಸಿಂಪಿಯ ಸೇವನೆ ಉತ್ತಮ ಆಯ್ಕೆಯಾಗಿದೆ. ಪುರುಷರ ಲೈಂಗಿಕಾಸಕ್ತಿ ಹಾಗೂ ಪೌರುಷವನ್ನು ಹೆಚ್ಚಿಸಲು ಸಿಂಪಿಯಿಂದ ತಯಾರಿಸಿದ ಆಹಾರವನ್ನು ಆಗಾಗ ಸೇವಿಸುತ್ತಿರಬೇಕು.

ಶತಾವರಿ (Asparagus)
ಇದೊಂದು ನೈಸರ್ಗಿಕ ರಸದೂತ ಸಮತೋಲನ ಉಳಿಸಿಕೊಳ್ಳುವ ಆಹಾರವಾಗಿದ್ದು ಲೈಂಗಿನ ಆರೋಗ್ಯವನ್ನೂ ಸುಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಯಕೃತ್
ಯಕೃತ್ ಗಳಲ್ಲಿ ಸತು ಹೆಚ್ಚಿನ ಪ್ರಮಾಣದಲ್ಲಿದ್ದು ಪುರುಷರಿಗೆ ಮೀಸಲಾದ ಟೆಸ್ಟಾಸ್ಟೆರಾನ್ ರಸದೂತದ ಮಟ್ಟವನ್ನು ಸುಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಮೊಟ್ಟೆಗಳು
ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮ್ಯಾಂಗನೀಸ್, ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿವೆ. ಈ ಪೋಷಕಾಂಶಗಳು ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ.

ಅಗಸೆಬೀಜ (Flaxseed)
ಈ ಗುಂಪಿಗೆ ಸೇರಿದ ಯಾವುದೇ ಆಹಾರಗಳು ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಗಸೆಬೀಜದ ಸಹಿತ ಒಣಗಿದ ಬೀಜಗಳು, ಇಡಿಯ ಧಾನ್ಯಗಳು ಹಾಗೂ ಹಣ್ಣುಗಳನ್ನು ಸೇರಿಸಬಹುದು.

ಸಿಹಿಗೆಣಸು
ಇದನ್ನೊಂದು ಲೈಂಗಿಕ ಆಹಾರವನ್ನಾಗಿ ಪರಿಗಣಿಸಲಾಗುತ್ತದೆ. ಈ ತರಕಾರಿಯಲ್ಲಿ ಹೆಚ್ಚಿನ ಬೀಟಾ ಕ್ಯಾರೋಟಿನ್ ಇದ್ದು ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ.

ಕಾಫಿ
ನಿಮ್ಮ ನೆಚ್ಚಿನ ಕಾಫಿ ಸಹಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಜಾನೆಯ ಉಪಾಹಾರದ ಬಳಿಕ ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿಯುವ ಮೂಲಕ ಮನೋಭಾವ ಉತ್ತಮಗೊಳ್ಳುವ ಜೊತೆಗೇ ನಿಮಿರು ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ಚಾಕಲೇಟು
ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

ಕುಂಬಳದ ಬೀಜಗಳು
ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಸತು ಇದೆ. ಪುರುಷರ ಲೈಂಗಿಕ ಶಕ್ತಿ ಉತ್ತಮವಾಗಿರಿಸಲು ಸತು ಅಗತ್ಯವಾಗಿದೆ.

ಜಾಯಿಕಾಯಿ (Nutmeg)
ಜಾಯಿಕಾಯಿ ನರಗಳ ಜೀವಕೋಶಗಳಿಗೆ ಪ್ರಚೋದನೆ ನೀಡಿ ಹೆಚ್ಚಿನ ರಕ್ತಸಂಚಾರಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಪುರುಷರಲ್ಲಿ ನಿಮಿರುತನ ಇನ್ನಷ್ಟು ಉತ್ತಮಗೊಳ್ಳುತ್ತದೆ.

ಟ್ರಫಲ್ (ಒಂದು ಬರೆಯ ಶಿಲೀಂಧ್ರ)
ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಉತ್ತಮಪಡಿಸಲು ಈ ಆಹಾರವಸ್ತು ಸಹಾ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ನಿಮಿರು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಲೈಂಗಿಕ ಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.

ಸೂರ್ಯಕಾಂತಿ ಬೀಜಗಳು
ಇದರಲ್ಲಿರುವ ಎಣ್ಣೆಯ ಪ್ರಮಾಣ ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಪ್ರಚೋದಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೀನು
ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ ೩ ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ.

ಶೇಂಗಾಬೀಜ
ಶೇಂಗಾಬೀಜಗಳಲ್ಲಿರುವ ಸತು ಆರೋಗ್ಯಕರ ವೀರ್ಯಾಣುಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಹಾಗೂ ಈ ಮೂಲಕ ವೀರ್ಯಾಣುಗಳ ಸಂಖ್ಯೆಯೂ ಹೆಚ್ಚುತ್ತದೆ. ಈ ಸಂಖ್ಯೆ ಹೆಚ್ಚಿದಷ್ಟೂ ಫಲವತ್ತತೆಯೂ ಹೆಚ್ಚುತ್ತದೆ.

ಎಡಮೇಮ್ (Edamame)
ನಮ್ಮ ಹಸಿರು ಬಟಾಣಿಯಂತೆಯೇ ತೋರುವ ಈ ಬೀಜಗಳು ಸಹಾ ಪುರುಷರ ಲೈಂಗಿಕ ಆರೋಗ್ಯ ಉತ್ತಮಗೊಳಿಸಲು ಯೋಗ್ಯವಾದ ಆಹಾರಗಳಾಗಿವೆ. ಇದರಲ್ಲಿರುವ ಕೆಲವು ರಾಸಾಯನಿಕಗಳು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಬೀಫ್ ರೋಸ್ಟ್
ಯಕೃತ್ ನಂತೆಯೇ ಈ ಮಾಂಸದಲ್ಲಿಯೂ ಉತ್ತಮ ಪ್ರಮಾಣದ ಸತು ಇದೆ. ನಿಮ್ಮ ಆಹಾರದಲ್ಲಿ ಚಿಕ್ಕ ಪ್ರಮಾಣದಲ್ಲಿ ಈ ಮಾಂಸವನ್ನು ಸೇರಿಸಿಕೊಳ್ಳುವುದರಿಂದ ಖಂಡಿತವಾಗಿಯೂ ಲಾಭವಿದೆ.

ಕುರಿಮಾಂಸ
ಈ ಮಾಂಸದಲ್ಲಿಯೂ ಸತು ಉತ್ತಮ ಪ್ರಮಾಣದಲ್ಲಿದೆ. ಈ ಮಾಂಸದಿಂದ ತಯಾರಿಸುವ ಯಾವುದೇ ಖಾದ್ಯವನ್ನು ಆಗಾಗ ಸೇವಿಸುವ ಮೂಲಕ ಲೈಂಗಿಕ ಶಕ್ತಿ ಉತ್ತಮವಾಗಿರುತ್ತದೆ.

ಬೆಣ್ಣೆಹಣ್ಣು
ಈ ಹಣ್ಣಿನ ತಿರುಳಿನಲ್ಲಿ ವಿಟಮಿನ್ B6 ಹಾಗೂ ಪೊಟ್ಯಾಶಿಯಂ ಇದ್ದು ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಓಟ್ಸ್ ರವೆ
ಈ ರವೆಯನ್ನು ಉಪಾಹಾರದ ರೂಪದಲ್ಲಿ ಸೇವಿಸುವ ಮೂಲಕ ಹಾಗೂ ಇತರ ಗೋಧಿ ಮತ್ತು ಸಣ್ಣಗೋಧಿಯ ಖಾದ್ಯಗಳೊಂದಿಗೆ ಬೆರೆಸಿ ಸೇವಿಸುವ ಮೂಲಕವೂ ಪುರುಷರ ಲೈಂಗಿಕ ಆರೋಗ್ಯ ಉತ್ತಮವಾಗಿರುತ್ತದೆ.

ಸ್ಟ್ರಾಬೆರಿ ಹಣ್ಣುಗಳು
ಈ ಹಣ್ಣುಗಳಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದು ಇದರ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಸಿಟ್ರುಲಿನ್ ಉತ್ತಮ ಪ್ರಮಾಣದಲ್ಲಿದ್ದು ರಕ್ತನಾಳಗಳನ್ನು ಸಡಿಲಿಸಿ ರಕ್ತಪರಿಚಲನೆ ಉತ್ತಮಗೊಳ್ಳಲು ನೆರವಾಗುತ್ತವೆ.

ಕೆಂಪು ವೈನ್
ಮದ್ಯದ ವ್ಯಸನಿಗಳಿಗೆ ಇದೊಂದು ಉತ್ತಮ ಪರ್ಯಾಯವಾಗಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ಕೆಂಪು ವೈನ್ ಕುಡಿಯುವ ಮೂಲಕ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.



Click it and Unblock the Notifications











