For Quick Alerts
ALLOW NOTIFICATIONS  
For Daily Alerts

ಮರೆಗುಳಿತನದ ಸಮಸ್ಯೆಯೇ? ಹಾಗಾದರೆ ಇಂತಹ ಆಹಾರಗಳನ್ನು ಸೇವಿಸಿ

By Arshad
|

ನಮ್ಮ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಮೆದುಳು ಅತ್ಯಂತ ಪ್ರಬಲ ಅಂಗವಾಗಿದೆ. ನಮ್ಮ ಯೋಚನೆಗಳು, ಚಲನೆ, ಸಂವೇದನೆ ಮೊದಲಾದ ಸೂಕ್ಷ್ಮ ಸಂಚಲನಗಳು ಅಪ್ರತಿಮ ವೇಗದಲ್ಲಿ ಸಂಚರಿಸಲು ಹಾಗೂ ಮಿಂಚಿನ ಗತಿಯಲ್ಲಿ ಸ್ಪಂದಿಸಲು ಹಾಗೂ ಲೆಕ್ಕಾಚಾರ ಹಾಕಲು, ಶಬ್ದ, ದೃಶ್ಯ, ಅಕ್ಷರ, ವಾಸನೆ ಮೊದಲಾದ ಹಲವು ಬಗೆಯ ಮಾಹಿತಿಗಳನ್ನು ನಂಗ್ರಹಿಸಿಟ್ಟು ಮುಂದಿನ ದಿನದಲ್ಲಿ ಬಳಸಲು ಮೆದುಳು ಬಳಸುವ ನರವ್ಯವಸ್ಥೆಯನ್ನು ಇನ್ನೂ ಅರಿಯಲಾಗಿಲ್ಲ.

ಅಷ್ಟೇ ಅಲ್ಲ, ದೇಹದ ಹಲವು ಅನೈಚ್ಛಿಕ ಕಾರ್ಯಗಳನ್ನೂ ಅತ್ಯಂತ ಕರಾರುವಾಕ್ಕಾಗಿ ನಡೆಸಲು ಸಮರ್ಥವಾಗಿವೆ. circadian rhythm ಅಥವಾ ದಿನದ ಅವಧಿಗೆ ತಕ್ಕಂತೆ ಶಕ್ತಿ ಹೆಚ್ಚಿಸುವ ಅಥವಾ ವಿಶ್ರಾಂತಿಯನ್ನು ಬಯಸುವ ಭಾವನೆ, ಉಸಿರಾಟ, ಜೀರ್ಣಕ್ರಿಯೆ, ರಕ್ತಪರಿಚಲನೆ, ರಸದೂತಗಳ ಸ್ರಾವದ ಸಮತೋಲನ ಮೊದಲಾದವುಗಳನ್ನೂ ಪ್ರತಿ ಕ್ಷಣವೂ ನಮಗೆ ಅರಿಯದಂತೆ ನಡೆಸುತ್ತಿರುತ್ತದೆ. ನಾವು ನಿದ್ರಿಸುತ್ತಿದ್ದಾಗಲೂ ಮೆದುಳು ತನ್ನ ಚಟುವಟಿಕೆಯನ್ನು ನಡೆಸುತ್ತಲೇ ಇರುತ್ತದೆ.

ಬಹುತೇಕ ನೀರೇ ತುಂಬಿರುವ ನಮ್ಮ ಮೆದುಳು ನಮ್ಮ ದೇಹದ ಒಟ್ಟು ತೂಕದ ಶೇಖಡಾ ಎರಡರಷ್ಟಿದ್ದರೂ ಒಟ್ಟಾರೆ ಕ್ಯಾಲೋರಿಗಳ ಇಪ್ಪತ್ತು ಶೇಖಡಾದಷ್ಟು ಬಳಸಿಕೊಳ್ಳುತ್ತದೆ. ದೇಹದ ಚಟುವಟಿಕೆಗಳನ್ನು ನಿಯಂತ್ರಿಸುವ ಹೊರತಾಗಿವೂ ನಮ್ಮ ಮೆದುಳು ಅತಿಸೂಕ್ಷ್ಮ ಸಂವೇದಿಯಾದ ಅಂಗವಾಗಿದೆ. ಇದರಲ್ಲಿ ಸ್ಮರಣಶಕ್ತಿ ಪ್ರಮುಖವಾಗಿದ್ದು ನಮಗೆ ಅಗತ್ಯವಿರುವ ಮಾಹಿತಿಯನ್ನು ಮುಂದಿನ ಸಮಯದಲ್ಲಿ ಪಡೆಯುವುದು ಮೆದುಳಿನ ಒಂದು ಸಾಮರ್ಥ್ಯವಾಗಿದೆ. ಆದರೆ ನಾವು ಮರೆಯಬೇಕಾಗಿರುವುದನ್ನು ಮರೆಯಲಾಗದೇ ಮರೆಯಬಾರದ ಚಿಕ್ಕ ವಿಷಯಗಳನ್ನು ಸುಲಭವಾಗಿ ಮರೆತುಬಿಡುತ್ತೇವೆ. ನಮ್ಮ ಮೆದುಳಿನಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಸ್ಮರಣೆ ಎಂಬ ಎರಡು ವಿಧಗಳಿವೆ. ಆ ಸಮಯದಲ್ಲಿ ಮಾತ್ರವೇ ನೆನಪಿಡಬೇಕಾದ, ಉದಾಹರಣೆಗೆ ಆಗ ಬರೆದಿಡಬೇಕಾದ ಫೋನ್ ಸಂಖ್ಯೆ, ಈಗ ಹೋಗಬೇಕಾದ ಮಾರ್ಗದ ಬಸ್ಸಿನ ಸಂಖ್ಯೆ ಇತ್ಯಾದಿ.

ಈ ಮಾಹಿತಿಯನ್ನು ಬಳಸಿದ ಬಳಿಕ ಇದರ ಅಗತ್ಯವಿಲ್ಲದನ್ನು ಮನಗಂಡ ಮೆದುಳು ಶಾಶ್ವತ ಸ್ಮರಣೆಗೆ ಇವನ್ನು ಶೇಖರಿಸುವುದಿಲ್ಲ. ಇದನ್ನೇ ನಾವು ಅಲ್ಪಕಾಲದ ಮರೆಗುಳಿತನ ಎಂದು ಕರೆಯುತ್ತೇವೆ. ಇದು ಪ್ರತಿ ವ್ಯಕ್ತಿಯಲ್ಲಿಯೂ ಇದೆ. ಕೆಲವೊಮ್ಮೆ ನಮಗೆ ಅಗತ್ಯವಿರುವ ಮಾಹಿತಿಯನ್ನೂ ನಮ್ಮ ಮೆದುಳು ನಮಗೆ ಅಗತ್ಯವಿಲ್ಲವೆಂದು ಮರೆತೇ ಬಿಡುತ್ತದೆ. ಇದನ್ನು ಉತ್ತಮಗೊಳಿಸಬೇಕಾದರೆ ಮೆದುಳಿಗೆ ನೆರವಾಗುವ ಕೆಲವು ಆಹಾರಗಳು ಅಗತ್ಯ. ಈ ನಿಟ್ಟಿನಲ್ಲಿ ಕೆಳಗೆ ಪಟ್ಟಿಮಾಡಿರುವ ಹನ್ನೊಂದು ನೈಸರ್ಗಿಕ ಆಹಾರಗಳು ನೆರವಾಗಬಲ್ಲವು...

ಸಾಲ್ಮನ್ ಮೀನು

ಸಾಲ್ಮನ್ ಮೀನು

ಕೊಬ್ಬು ಹೆಚ್ಚಿರುವ ಮೀನುಗಳಾದ ಸಾಲ್ಮನ್, ಭೂತಾಯಿ, ಟ್ಯೂನಾ, ಬಂಗಡೆ ಮೊದಲಾದವುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ನರವ್ಯವಸ್ಥೆಯಲ್ಲಿ ಸಂಕೇತಗಳು ಮಿಂಚಿನ ವೇಗದಲ್ಲಿ ಸಂಚರಿಸಲು ನೆರವಾಗುತ್ತವೆ ಹಾಗೂ ತನ್ಮೂಲಕ ಜೀವಕೋಶಗಳ ನಡುವಣ ಸಂವಹನವನ್ನು ಇನ್ನಷ್ಟು ಉತ್ತಮವಾಗಿಸುತ್ತವೆ. ವಿಶೇಷವಾಗಿ ಸಾಲ್ಮನ್ ಮೀನಿನಲ್ಲಿರುವ ಪೋಷಕಾಂಶಗಳು ಏಕಾಗ್ರತೆ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ಬ್ಲೂಬೆರಿ ಹಣ್ಣುಗಳು

ಬ್ಲೂಬೆರಿ ಹಣ್ಣುಗಳು

ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವನಾಯ್ದುಗಳಿದ್ದು ಇವು ಮೆದುಳಿನಲ್ಲಿರುವ ನ್ಯೂರಾನುಗಳೆಂಬ ಸೂಕ್ಷ್ಮತಂತುಗಳನ್ನು ಹೆಚ್ಚು ಹೆಚ್ಚಾಗಿ ಉತ್ಪಾದಿಸಲು ಹಾಗೂ ನರವ್ಯವಸ್ಥೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ಅಲ್ಪಕಾಲದ ಮರೆಗುಳಿತನ ನಿವಾರಿಸಲು ಬ್ಲೂಬೆರಿ ಹಣ್ಣುಗಳು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಮೆದುಳಿನ ಕ್ಷಮತೆಯನ್ನೂ ಹೆಚ್ಚಿಸುತ್ತವೆ.

ಕಾಡುಕತ್ತರಿ (Capers)

ಕಾಡುಕತ್ತರಿ (Capers)

ಈ ಪುಟ್ಟ ಹಣ್ಣುಗಳಲ್ಲಿ ಕ್ವೆರ್ಸಟಿನ್ ಎಂಬ ಪೋಷಕಾಂಶ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಹಸಿರು ಟೀ ಯಲ್ಲಿಯೂ ಕಂಡುಬರುವ ಈ ಪೋಷಕಾಂಶ ಮೆದುಳಿಗೆ ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ಅಲ್ಪಕಾಲದ ಮರೆಗುಳಿತನದಿಂದ ನೀವು ಹೆಚ್ಚು ಬಾಧಿತರಾಗಿದ್ದರೆ ಕಾಡುಕತ್ತರಿ ಹಣ್ಣುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಲು ಮರೆಯದಿರಿ.

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು

ಗೋಧಿ, ಮೆಕ್ಕೆಜೋಳ, ಅಕ್ಕಿ, ಓಟ್ಸ್ ಮೊದಲಾದ ಧಾನ್ಯಗಳನ್ನು ಪಾಲಿಷ್ ಮಾಡದೇ ಇಡಿಯಾಗಿ ಸೇವಿಸುವ ಮೂಲಕ ಮೆದುಳಿನ ಕಾರ್ಯಕ್ಷಮತೆ ಹಾಗೂ ಆರೋಗ್ಯ ಉತ್ತಮವಾಗಿರಿಸಲು ನೆರವಾಗುತ್ತದೆ. ಈ ಧಾನ್ಯಗಳಲ್ಲಿ ಖೋಲೈನ್ ಎಂಬ ಪೋಷಕಾಂಶವಿದೆ. ಈ ಅವಶ್ಯಕ ಪೋಷಕಾಂಶ ಸ್ಮರಣಶಕ್ತಿ ಹಾಗೂ ಅಲ್ಪಕಾಲಿಕ ಮರೆಗುಳಿತನದಿಂದ ರಕ್ಷಿಸುತ್ತದೆ.

ಬ್ರೋಕೋಲಿ

ಬ್ರೋಕೋಲಿ

ಬ್ರೋಕೋಲಿಯ ರೋಗದ ವಿರುದ್ಧ ಹೋರಾಡುವ ಗುಣದ ಸಹಿತ ಇದರಲ್ಲಿರುವ ಫೋಷಕಾಂಶಗಳು ಮೆದುಳಿಗೆ ಉತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಕೆ ಹಾಗೂ ಫೋಲಿಕ್ ಆಮ್ಲ, ಎರಡೂ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಅಗತ್ಯವಾಗಿರುವ ಪೋಷಕಾಂಶಗಳಾಗಿವೆ. ಒಂದು ವೇಳೆ ನಿಮಗೆ ಮರೆಗುಳಿತನ ಎದುರಾದರೆ ಈ ತರಕಾರಿಯನ್ನು ನಿಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು ಯಾರಿಗೆ ಇಷ್ಟವಿಲ್ಲ? ಮನೋಭಾವವನ್ನು ಉಲ್ಲಸಿತಗೊಳಿಸುವ ಈ ಕಪ್ಪು ಚಾಕಲೇಟು ಎಲ್ಲರ ಮೆಚ್ಚಿನ ಸಿಹಿಯಾಗಿದ್ದು ಇದರಲ್ಲಿರುವ ಕೋಕೋ ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ತನ್ಮೂಲಕ ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ.

ಕಾಫಿ

ಕಾಫಿ

ದೀರ್ಘಾವಧಿಯ ಮರೆಗುಳಿತನ ಹಾಗೂ ಅಲ್ಪಕಾಲದ ಮರೆಗುಳಿತನ ಎರಡೂ ಬಗೆಯ ತೊಂದರೆಗಳಿಗೆ ಕಾಫಿ ಉತ್ತಮವಾಗಿದೆ. ಒಂದು ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಕಪ್ ಕಾಫಿ ಕುಡಿಯುವ ಮೂಲಕ ದಿನದ ಇಪ್ಪತ್ತನಾಲ್ಕು ಘಂಟೆಗಳ ಅವಧಿಯಲ್ಲಿ ಎದುರಾಗುವ ಅಲ್ಪಕಾಲದ ಮರೆಗುಳಿತನ ನಿವಾರಿಸಲು ನೆರವಾಗುತ್ತದೆ. ಇದರಲ್ಲಿರುವ ಕೆಫೀನ್ ನಲ್ಲಿ ನಾರ್ಫಿನೆಫ್ರೀನ್ (norepinephrine) ಎಂಬ ರಸದೂತ ಮೆದುಳಿನ ಒತ್ತಡವನ್ನು ನಿವಾರಿಸುತ್ತದೆ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯ ಬಿಳಿಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೋಲೈನ್ ಎಂಬ ಪೋಷಕಾಂಶವಿದ್ದು ಜೀವಕೋಶಗಳ ಕಾರ್ಯಸೂಚಿ ಸೂಚನೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೇ ಮೊಟ್ಟೆಯಲ್ಲಿರುವ phosphatidylserine ಎಂಬ ಪೋಷಕಾಂಶ ಸ್ಮರಣಶಕ್ತಿಯನ್ನು ಹೆಚ್ಚಿಸುವ ಹಾಗೂ ಮೆದುಳಿನ ಸೂಚನೆಗಳನ್ನು ಕ್ಷಿಪ್ರವಾಗಿ ತಲುಪಿಸಲು ನೆರವಾಗುತ್ತದೆ.

ಸೇಜ್ ಎಲೆಗಳು

ಸೇಜ್ ಎಲೆಗಳು

ಈ ಎಲೆಗಳ ಸೇವನೆಯಿಂದಲೂ ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಲು ನೆರವಾಗುತ್ತದೆ. ವಿಶೇಷವಾಗಿ ಸೇಜ್ ಎಣ್ಣೆಯಲ್ಲಿರುವ ಕಿಣ್ವಗಳು ಮೆದುಳಿನ ನ್ಯೂರೋಟ್ರಾನ್ಸ್ ಮಿಟರ್ ಗಳಿಗೆ ಪ್ರಚೋದನೆ ನೀಡುವ ಮೂಲಕ ಹೆಚ್ಚು ಚುರುಕಾಗಲು ನೆರವಾಗುತ್ತದೆ. ಒಂದು ವೇಳೆ ಅಲ್ಪಕಾಲದ ಮರೆಗುಳಿತನ ನಿಮಗೆ ಎದುರಾದರೆ ಈ ಎಣ್ಣೆಯನ್ನು ನಿತ್ಯದ ಆಹಾರದಲ್ಲಿ ಹೆಚ್ಚುವರಿಯಾಗಿ ಬಳಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು.

ಟೊಮಾಟೋ

ಟೊಮಾಟೋ

ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ. ಇದು ಅಲ್ಪಕಾಲದ ಮರೆಗುಳಿತನವನ್ನು ಕಡಿಮೆ ಮಾಡುವುದಲ್ಲದೇ ಮರೆಗುಳಿತನದ ರೋಗಿಗಳಲ್ಲಿ ಕಾಣಬರುವ ಜೀವಕೋಶಗಳ ಘಾಸಿಯಿಂದಲೂ ರಕ್ಷಿಸುತ್ತದೆ.

ನೇರಳೆ ಹಣ್ಣು

ನೇರಳೆ ಹಣ್ಣು

ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಸ್ಮರಣಶಕ್ತಿಯನ್ನು ಹೆಚ್ಚಿಸಲು ಉತ್ತಮವಾದ ಪೋಷಕಾಂಶವಾಗಿದೆ. ಈ ವಿಟಮಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆಯಿಂದ ರಕ್ಷಣೆ ಒದಗಿಸುವುದು ಮಾತ್ರವಲ್ಲ, ಒತ್ತಡ ಹಾಗೂ ಉದ್ವೇಗಗಳನ್ನೂ ಕಡಿಮೆಯಾಗಿಸುತ್ತದೆ.

English summary

Foods To Improve Short-term Memory

Our brains are very powerful that has the ability to control all of our thoughts, movement, and sensation while calculating and reacting with a blistering speed. Brains can store an immense amount of data as images, concepts and texts. They also can regulate thousands of complex functions such as circadian rhythm, hormone balance, breathing, unconscious activity and blood flow. In order to increase brain fitness and improve short-term memory. You can choose these 11 foods to improve your memory and try to manage the short-term memory problem naturally.
X
Desktop Bottom Promotion