For Quick Alerts
ALLOW NOTIFICATIONS  
For Daily Alerts

  ಕಿಡ್ನಿಯಲ್ಲಿ ಸಮಸ್ಯೆ ಇದೆಯೇ? ಈ ಆಹಾರಗಳನ್ನು ಸರ್ವಥಾ ಸೇವಿಸಬೇಡಿ!

  By Arshad
  |

  ಇಂದು ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಪ್ರಕರಣಗಳು ಅತಿ ಹೆಚ್ಚಾಗಿ ಕಂಡುಬರುತ್ತಿದ್ದು ಈ ಬಗ್ಗೆ ಹಲವು ಆರೋಗ್ಯ ಸಂಸ್ಥೆಗಳು ಕಾಳಜಿ ವ್ಯಕ್ತಪಡಿಸಿವೆ. ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲೊಂದಾದ ಮೂತ್ರಪಿಂಡಗಳು ನಮ್ಮ ದೇಹದ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಹೊರಹಾಕುವ ಸೋಸುಕಗಳಂತೆ ಕೆಲಸ ಮಾಡುತ್ತವೆ. ಆಹಾರದ ಮೂಲಕ ಆಗಮಿಸಿದ ಹೆಚ್ಚುವರಿ ಲವಣ ಮತ್ತು ನೀರನ್ನು ಮೂತ್ರದ ರೂಪದಲ್ಲಿ ಮೂತ್ರಕೋಶದಲ್ಲಿ ಸಂಗ್ರಹಿಸಿ ಆಗಾಗ ವಿಸರ್ಜಿಸುವಂತೆ ಮಾಡುವುದು ಮೂತ್ರಪಿಂಡಗಳ ಪ್ರಮುಖ ಕಾರ್ಯವಾಗಿದೆ.

  ಇಂದು ಹಿಂದೆಂದಿಗಿಂತಲೂ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿರುವ ತೊಂದರೆ ಅನುಭವಿಸುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಷ್ಟಕ್ಕೂ ಮೂತ್ರಪಿಂಡಗಳ ಒಳಗೆ ಈ ಕಲ್ಲುಗಳು ಹೋಗಿದ್ದಾದರೂ ಹೇಗೆ? ವಾಸ್ತವವಾಗಿ ಯಾವುದೇ ಕಲ್ಲು ಒಳಗೆ ಹೋಗುವುದಿಲ್ಲ, ಬದಲಿಗೆ ಮೂತ್ರಪಿಂಡದೊಳಗೇ ರೂಪುಗೊಳ್ಳುತ್ತವೆ. ಲವಣದ ಕಣಗಳಲ್ಲಿ ಒಂದಕ್ಕೊಂದು ಅಂಟಿಕೊಳ್ಳುವ ಗುಣವಿದೆ. ಮೂತ್ರದ ಸಾಂದ್ರತೆ ಹೆಚ್ಚಿದಷ್ಟೂ ಈ ಲವಣದ ಕಣಗಳು ಒಂದಕ್ಕೊಂದು ಅಂಟಿಕೊಂದು ಘನರೂಪ ಪಡೆಯುವ ಸಾಧ್ಯತೆ ಹೆಚ್ಚುತ್ತದೆ....

  ಕೆಫೀನ್/ಸೋಡಾ ಇರುವ ಪೇಯಗಳು

  ಕೆಫೀನ್/ಸೋಡಾ ಇರುವ ಪೇಯಗಳು

  ಒಂದು ವೇಳೆ ನಿಮಗೆ ಈಗಾಗಲೇ ಮೂತ್ರಪಿಂಡಗಳ ಕಲ್ಲುಗಳ ತೊಂದರೆ ಇದ್ದರೆ ನಿಮಗೆ ಸಾಕಷ್ಟು ದ್ರವಾಹಾರ ಅಗತ್ಯ. ಆದರೆ ಈ ದ್ರವಾಹಾರಗಳಲ್ಲಿ ಕೆಫೀನ್ ಅತ್ಯಲ್ಪವಾಗಿರಬೇಕು. ಒಂದು ವೇಳೆ ನೀವು ಕಾಫಿ ಟೀ ವ್ಯಸನಿಯಾಗಿದ್ದು ಬಿಡಲಾರದ ಸ್ಥಿತಿಯಲ್ಲಿದ್ದರೆ ನೀವು ದಿನಕ್ಕೆ ಒಂದರಿಂದ ಎರಡು ಕಪ್ (250-500 ಮಿಲೀ)ಯಷ್ಟು ಮಾತ್ರವೇ ಕಾಫಿ ಟೀ ಅಥವಾ ತಂಪುಪಾನೀಯವನ್ನು ಸೇವಿಸಬಹುದು. ಸೋಡಾ ಬೇಡವೇ ಬೇಡ. ಬುರುಗು ಬರುವ ಲಘು ಪಾನೀಯಗಳನ್ನಂತೂ ನೀವು ಕಲ್ಪಿಸಲೂ ಬಾರದು. ಹೆಚ್ಚು ಕೆಫೇನ್ ನಿಮ್ಮ ದೇಹ ಸೇರಿದಷ್ಟೂ ನಿಮ್ಮ ಮೂತ್ರಪಿಂಡಗಳಲ್ಲಿ ಈಗಾಗಲೇ ಇರುವ ಕಲ್ಲುಗಳು ಇನ್ನಷ್ಟು ದೊಡ್ಡದಾಗಲು ಕಾರಣವಾಗುತ್ತದೆ ಹಾಗೂ ನಿರ್ಜಲೀಕರಣದ ಭಾವನೆ ಮೂಡಿಸುತ್ತದೆ.

  ಸೋಡಿಯಂ ಹೆಚ್ಚಿರುವ ಆಹಾರಗಳು

  ಸೋಡಿಯಂ ಹೆಚ್ಚಿರುವ ಆಹಾರಗಳು

  ಸಿದ್ಧ ಆಹಾರಗಳು ಹೆಚ್ಚು ಕಾಲ ಕೆಡದಂತಿಡಲು ಉಪ್ಪು ಹಾಗೂ ಇತರ ಸಂರಕ್ಷಕಗಳನ್ನು ಸೇರಿಸಿರುತ್ತಾರೆ. ಹಾಗಾಗಿ ಉಪ್ಪಿನಕಾಯಿ, ಕ್ಯಾನ್ ನಲ್ಲಿ ಪ್ಯಾಕ್ ಮಾಡಿದ ಸಿದ್ಧ ಆಹಾರಗಳು, ಉಪ್ಪು ಸಿಂಪಡಿಸಿದ ಕುರುಕು ತಿಂಡಿಗಳು, ಬಿಸಿ ಮಾಡಿ ತಿನ್ನಬಹುದಾದ ಪ್ಯಾಕೆಟ್ ನಲ್ಲಿ ಲಭ್ಯವಿರುವ ಸಿದ್ದ ಆಹಾರಗಳು, ಪಾನಿ ಪೂರಿ ಮೊದಲಾದ ರಸ್ತೆಬದಿಯ ಆಹಾರಗಳು ಮೊದಲಾದವುಗಳನ್ನು ವರ್ಜಿಸಬೇಕು. ಸಾಧ್ಯವಾದಷ್ಟೂ ಉಪ್ಪು ಅತಿ ಕಡಿಮೆ ಇರುವ ಆಹಾರಗಳನ್ನೇ ಸೇವಿಸಬೇಕು.

  ಅತಿ ಹೆಚ್ಚು ಪ್ರೋಟೀನ್ ಯುಕ್ತ ಆಹಾರಗಳು

  ಅತಿ ಹೆಚ್ಚು ಪ್ರೋಟೀನ್ ಯುಕ್ತ ಆಹಾರಗಳು

  ಮಾಂಸ, ಮೀನು ಒದಲಾದ ಆಹಾರಗಳಲ್ಲಿ ಅತಿ ಹೆಚ್ಚಿನ ಪ್ರೋಟೀನ್ ಇರುತ್ತವೆ. ಹಾಗಾಗಿ ಇವುಗಳನ್ನು ಮಿತ ಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕೇ ವಿನಃ ವರ್ಜಿಸಬಾರದು. ಏಕೆಂದರೆ ದೇಹದ ಇತರ ಕೆಲಸಗಳಿಗೆ ನಮಗೆ ಪ್ರೋಟೀನ್ ಬೇಕೇ ಬೇಕು. ಆದ್ದರಿಂದ ಕೆಂಪು ಮಾಂಸದ ಬದಲು ಬಿಳಿಯ ಮಾಂಸವಾದ ಕೊಬ್ಬುರಹಿತ ಕೋಳಿ ಮಾಂಸ, ಮೀನು ಮೊದಲಾದವುಗಳನ್ನು ಅಲ್ಪ ಎಣ್ಣೆಯಲ್ಲಿ ತಯಾರಿಸಿದ ಅಥವಾ ನೀರಿನಲ್ಲಿ ಬೇಯಿಸಿದ ಖಾದ್ಯಗಳ ರೂಪದಲ್ಲಿ ಸೇವಿಸಬೇಕು. ಮಸಾಲೆ ಪದಾರ್ಥಗಳನ್ನು ವರ್ಜಿಸುವುದೇ ಉತ್ತಮ.

  ಹೆಚ್ಚು ಕೊಬ್ಬು ಇರುವ ಆಹಾರಗಳು

  ಹೆಚ್ಚು ಕೊಬ್ಬು ಇರುವ ಆಹಾರಗಳು

  ಅತಿ ಹೆಚ್ಚಿನ ಕೊಬ್ಬಿರುವ ಆಹಾರಗಳಾದ ಬೆಣ್ಣೆ, ಚೀಸ್, ಕ್ರೀಂ, ಮಾರ್ಜರಿನ್ ಮೊದಲಾದವುಗಳನ್ನು ವರ್ಜಿಸಿ ಇದರ ಸ್ಥಾನದಲ್ಲಿ ಕೊಬ್ಬು ರಹಿತ ಅಥವಾ ಅತಿ ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ಮಿತಪ್ರಮಾಣದಲ್ಲಿ ಸೇವಿಸಬೇಕು. ತಾಜಾ ಹಾಲಿನ ಬದಲು ಸಂಸ್ಕರಿಸಿದ ಹಾಲನ್ನು (skimmed milk) ಉಪಾಹಾರದ ಸಮಯದಲ್ಲಿ ಸೇವಿಸಬಹುದು. ಆದರೆ ದಿನದ ಯಾವುದೇ ಹೊತ್ತಿನಲ್ಲಿ ಕೊಬ್ಬು ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಕೊಬ್ಬು ಹೆಚ್ಚಿದಷ್ಟೂ ಕಲ್ಲುಗಳ ಗಾತ್ರವೂ ಹೆಚ್ಚುತ್ತದೆ.

  ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು

  ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು

  ಉಪ್ಪು ಹೆಚ್ಚಿರುವ ಆಹಾರಗಳಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಹೆಚ್ಚಾಗಿರುತ್ತವೆ. ಈ ಆಹಾರಗಳನ್ನು ಮೂತ್ರಪಿಂಡಗಳ ಕಲ್ಲುಗಳ ತೊಂದರೆ ಇರುವ ವ್ಯಕ್ತಿಗಳು ಖಡಾಖಂಡಿತವಾಗಿ ವರ್ಜಿಸಬೇಕು. ಹೊಟ್ಟೆಯಲ್ಲಿ ಗ್ಯಾಸ್ ಉಂಟಾದರೆ ಸೇವಿಸುವ ಅಂಟಾಸಿಡ್ ಔಷಧಿಯನ್ನೂ ಈ ವ್ಯಕ್ತಿಗಳು ಅತಿ ಎಚ್ಚರಿಕೆಯಿಂದ ಸೇವಿಸಬೇಕು. ಏಕೆಂದರೆ ಇದರಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳ ಸೇವನೆ ಮೂತ್ರಪಿಂಡಗಳ ಕಲ್ಲುಗಳ ಗಾತ್ರದ ಹೆಚ್ಚಳಕ್ಕೆ ಮುಕ್ತ ಆಹ್ವಾನವಾಗಿದೆ. ಉಪ್ಪೇ ಇಲ್ಲದ ಆಹಾರ ಸೇವನೆ ಕಷ್ಟವಾದರೂ, ಅತ್ಯಲ್ಪ ಉಪ್ಪು ಸೇವಿಸಬೇಕು. ಇದಕ್ಕಾಗಿ ಮೀನೆಣ್ಣೆ ಅಥವಾ ವಿಟಮಿನ್ ಡಿ ಗುಳಿಗೆಗಳನ್ನು ಸೇವಿಸಬಹುದಾದರೂ ಇದಕ್ಕೆ ವೈದ್ಯರ ಅನುಮತಿ ಅಗತ್ಯ.

  ಆಕ್ಸಲೇಟ್ ಹೆಚ್ಚಿರುವ ಆಹಾರಗಳು

  ಆಕ್ಸಲೇಟ್ ಹೆಚ್ಚಿರುವ ಆಹಾರಗಳು

  ಮೂತ್ರಪಿಂಡದಲ್ಲಿ ಕಲ್ಲುಗಳಿರುವ ರೋಗಿಗಳಿಗೆ, ವಿಶೇಷವಾಗಿ ನಿಮ್ಮ ಕಲ್ಲುಗಳು ಆಕ್ಸಲೇಟ್ ಕಲ್ಲುಗಳಾಗಿದ್ದರೆ ಈ ಆಹಾರಗಳು ಸರ್ವಥಾ ಸಲ್ಲದು. ಟೀ, ಕಾಫಿ ಬೀಟ್ರೂಟ್, ಸ್ಕ್ವಾಶ್, ಆಲುಗಡ್ಡೆ, ಪಾಲಕ್, ಟೊಮಾಟೋ ಸೂಪ್, ಕ್ಯಾನುಗಳಲ್ಲಿ ಪ್ಯಾಕ್ ಮಾಡಿದ ಹಣ್ಣುಗಳು, ರುಬಾರ್ಬ್ (rhubarb) ಬೇರು, ಸ್ಟ್ರಾಬೆರಿ ಮೊದಲಾದ ಆಹಾರಗಳನ್ನು ಸೇವಿಸಬಾರದು. ಅಲ್ಲದೇ ಚಾಕಲೇಟು, ಟೋಫು, ಒಣಫಲಗಳು, ಓಟ್ಸ್ ರವೆ ಆಧಾರಿತ ಆಹಾರಗಳನ್ನೂ ಸೇವಿಸಬಾರದು. ನಿಮ್ಮ ಆರೋಗ್ಯದ ತಪಾಸಣೆಯನ್ನು ಅನುಸರಿಸಿ ನಿಮ್ಮ ವೈದ್ಯರೇ ನಿಮಗೆ ಸೂಕ್ತವಾಗಿರುವ ಆಹಾರಗಳನ್ನು ಸೂಚಿಸುತ್ತಾರೆ. ಒಂದು ವೇಳೆ ನಿಮ್ಮ ಕಲ್ಲುಗಳು ಯೂರಿಕ್ ಆಮ್ಲದಿಂದ ಉಂಟಾಗಿದ್ದರೂ ಈ ಆಹಾರಗಳನ್ನು ಸೇವಿಸಬಾರದು.

  ಮದ್ಯ

  ಮದ್ಯ

  ಮದ್ಯದಿಂದ ಮೂತ್ರಪಿಂಡಗಳ ಕಲ್ಲುಗಳು ನೇರವಾಗಿ ರೂಪುಗೊಳ್ಳದೇ ಇದ್ದರೂ ಕಲ್ಲುಗಳು ರೂಪುಗೊಳ್ಳುವ ಇತರ ಕಾರಣಗಳಿಗೆ ಪ್ರಚೋದನೆ ನೀಡುವ ಮೂಲಕ ಪರೋಕ್ಷವಾಗಿ ಕಾರಣವಾಗಬಹುದು. ಮದ್ಯದಲ್ಲಿರುವ ಪ್ಯೂರೀನ್ ಎಂಬ ಪೋಷಕಾಂಶ ಯೂರಿಕ್ ಆಮ್ಲದ ಕಲ್ಲುಗಳಾಗಲು ನೇರವಾಗಿ ಕಾರಣವಾಗುತ್ತದೆ. ಅಲ್ಲದೇ ಮದ್ಯದ ಪ್ರಭಾವದಿಂದ ಮೂತ್ರಪಿಂಡಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ್ದರಿಂದ ಮದ್ಯಪಾನವನ್ನು ವರ್ಜಿಸುವುದೇ ಉತ್ತಮ.

  ಉಪ್ಪು ಹಾಕಿ ಒಣಗಿಸಿದ ಮೀನು (Anchovies, ಒಣಮೀನು)

  ಉಪ್ಪು ಹಾಕಿ ಒಣಗಿಸಿದ ಮೀನು (Anchovies, ಒಣಮೀನು)

  ಸಾಮಾನ್ಯವಾಗಿ ಹೆಚ್ಚಿನ ಮೀನು ಒಮ್ಮೆಲೇ ಸಿಕ್ಕಿದಾದ ಇವನ್ನು ಉಪ್ಪು ಹಾಕಿ ಒಣಗಿಸಿ ನಂತರದ ಸಮಯದಲ್ಲಿ ಸೇವಿಸಲಾಗುತ್ತದೆ. ಆದರೆ ಮೂತ್ರಪಿಂಡದ ಕಲ್ಲುಗಳಿರುವ ರೋಗಿಗಳಿಗೆ ಈ ಆಹಾರ ವಿಷಸಮಾನ. ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಿದರೂ ಇವು ನೇರವಾಗಿ ಕಲ್ಲುಗಳ ಗಾತ್ರ ಹೆಚ್ಚಿಸಲು ನೆರವಾಗುತ್ತವೆ. ಆದ್ದರಿಂದ ಒಣಮೀನಿನ ಹೆಸರನ್ನೂ ಎತ್ತದಿರುವುದು ಒಳ್ಳೆಯದು.

  ಶತಾವರಿ

  ಶತಾವರಿ

  ಇದೊಂದು ಅತ್ಯುತ್ತಮ ಮೂತ್ರವರ್ಧಕವಾಗಿದೆ. ಆದರೆ ಮೂತ್ರಪಿಂಡದ ಕಲ್ಲುಗಳಿರುವ ರೋಗಿಗಳಿಗೆ ಇದು ಸಲ್ಲದು.

  ಬೇಕಿಂಗ್ ಸೋಡಾ / ಬ್ರೆಡ್ ಮಾಡುವ ಯೀಸ್ಟ್

  ಬೇಕಿಂಗ್ ಸೋಡಾ / ಬ್ರೆಡ್ ಮಾಡುವ ಯೀಸ್ಟ್

  ಒಂದು ವೇಳೆ ನಿಮಗೆ ಯೂರಿಕ್ ಆಮ್ಲದ ಕಲ್ಲುಗಳ ತೊಂದರೆ ಇದ್ದರೆ ಅಡುಗೆ ಸೋಡಾ ಹಾಕಿದ ಅಥವಾ ಬ್ರೆಡ್ ಉಬ್ಬಲಿಕ್ಕೆ ಬಳಸುವ brewer's yeast ಸೇರಿಸಿದ ಆಹಾರಗಳು ನಿಮಗೆ ಸಲ್ಲದು. ಇದರಲ್ಲಿರುವ ಪ್ಯೂರಿನ್ ಎಂಬ ಪೋಷಕಾಂಶ ಕಲ್ಲುಗಳ ಗಾತ್ರವನ್ನು ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ.

  ಈ ಆಹಾರಗಳಲ್ಲದೆ, ದ್ವಿದಳ ಧಾನ್ಯಗಳು, ಹೂಕೋಸು, ಮೂತ್ರಪಿಂಡ ಮತ್ತು ಯಕೃತ್ತು ಮೊದಲಾದ ಮಾಂಸಾಹಾರ, ಅಣಬೆ, ಆಲಿವ್ ಎಣ್ಣೆ, ತಾರ್ಲಿ ಮೀನು ಮೊದಲಾದವುಗಳ ಸೇವನೆಯನ್ನೂ ಅತಿ ಕಡಿಮೆ ಮಾಡಬೇಕು ಅಥವಾ ವರ್ಜಿಸಬೇಕು.

  ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕ ಸಂಗತಿಗಳು

  ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕ ಸಂಗತಿಗಳು

  * ನೀವು ಮಾಂಸಾಹಾರಿಗಳಾಗಿದ್ದರೆ ಒಂದು ಹೊತ್ತಿನಲ್ಲಿ ನೀವು ಸೇವಿಸಬಹುದಾದ ಮಾಂಸ 85ಗ್ರಾಂ ಮೀರದಿರಲಿ.

  * ಐಸ್ ಕ್ರೀಂ, ಹುರಿದ ತಿಂಡಿಗಳು, ಸಾಲಾಡ್ ಡ್ರೆಸ್ಸಿಂಗ್ ಮೊದಲಾದವುಗಳನ್ನು ಕಣ್ಣಿನಿಂದ ನೋಡಿ ಆಸ್ವಾದಿಸಿದರೆ ಸಾಕು.

  * ನಿಮ್ಮ ದೇಹದ ತೂಕಕ್ಕೆ ತಕ್ಕಷ್ಟು ನೀರನ್ನು ಸತತವಾಗಿ ಕುಡಿಯುತ್ತಿರಿ

  * ಅಗತ್ಯಕ್ಕೆ ತಕ್ಕಷ್ಟು ಕಾರ್ಬೋಹೈಡ್ರೇಟುಗಳನ್ನು ಸೇವಿಸಿ

  * ಕಲ್ಲುಗಳನ್ನು ಕರಗಿಸಲು ನೆರವಾಗುವ ಕಿತ್ತಳೆ ಹಣ್ಣು, ಲಿಂಬೆ ಮೊದಲಾದವುಗಳನ್ನು ಕೊಂಚ ಪ್ರಮಾಣದಲ್ಲಿ ನಿತ್ಯವೂ ಸೇವಿಸಿ.

  * ಮುಖ್ಯವಾಗಿ ನಿಮ್ಮ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡು ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಹಾಗೂ ವೈದ್ಯರು ಸೂಚಿಸುವ ಔಷಧಿಗಳನ್ನು ತಪ್ಪಿಸದೇ ಸೇವಿಸಬೇಕು.

  English summary

  Foods To Avoid For Kidney Stones

  The kidney is a vital organ of our body that mostly acts as a filter, flushing out the toxins and excess water from the body through urination. But today, a number of people complain about kidney stones. These are solid masses formed from the crystals present in urine. It causes pain and blockage in the path of the urinary tract.Kidney stones have been classified as calcium phosphate, cystine, calcium oxalate, and uric acid. Out of these, calcium oxalates are mostly seen in human beings.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more