For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಎರಡೇ ಎರಡು ಒಣ ಖರ್ಜೂರ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

|

ಹಣ್ಣುಗಳು, ಒಣ ಬೀಜಗಳು ಹಾಗೂ ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಒಂದೊಂದು ಬಗೆಯ ಹಣ್ಣುಗಳಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ನಮಗೆ ತಿಳಿಯದೆ ಇರುವಂತಹ ಕೆಲವೊಂದು ಪೋಷಕಾಂಶಗಳು ನಾವು ತಿನ್ನುತ್ತಿರುವಂತಹ ಹಣ್ಣುಗಳು ಹಾಗೂ ಒಣ ಹಣ್ಣುಗಳಲ್ಲಿ ಇರಬಹುದು. ಅದರಲ್ಲೂ ಪ್ರಮುಕವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರವು ದೇಹಕ್ಕೆ ತುಂಬಾ ಲಾಭಕಾರಿ ಎಂದು ಹೇಳಲಾಗುತ್ತದೆ. ಖರ್ಜೂರವನ್ನು ಹಲವಾರು ವಿಧಗಳಿಂದ ಸೇವಿಸಲಾಗುತ್ತಿದೆ. ಹಸಿ ಖರ್ಜೂರ ಹಾಗೂ ಒಣ ಖರ್ಜೂರ ಎಂದು ಎರಡು ವಿಧಗಳು ಇವೆ. ಇವುಗಳ ರುಚಿ ಮಾತ್ರ ಅದೇ ರೀತಿಯಲ್ಲಿರುವುದು ಮತ್ತು ಅದರಲ್ಲಿರುವ ಪೋಷಕಾಂಶಗಳು ಕೂಡ. ಹೆಚ್ಚಾಗಿ ನಾವೆಲ್ಲರೂ ತಿನ್ನುವುದು ಅರೆ ಒಣಗಿಸಿದ ಖರ್ಜೂರು. ಇನ್ನು ಕೆಲವು ಒಣ ಖರ್ಜೂರವು ಇದೆ. ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಅದರಲ್ಲೂ ಚಳಿಗಾಲದಲ್ಲಿ ಇದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಒಣ ಖರ್ಜೂರವನ್ನು ಚುಹರಾಸ್ ಎಂದು ಕೂಡ ಕರೆಯಲಾಗುತ್ತದೆ. ಒಣ ಖರ್ಜೂರವೆಂದರೆ ಅದರಲ್ಲಿ ಯಾವುದೇ ರೀತಿಯ ತೇವಾಂಶವು ಇರದು. ಸಂಪೂರ್ಣವಾಗಿ ಒಣಗಿರುವುದು. ಭಾರತದಲ್ಲಿ ಒಣ ಖರ್ಜೂರವನ್ನು ಕೆಲವೊಂದು ಧಾರ್ಮಿಕ ವಿಧಿವಿಧಾನಗಳಿಗೂ ಬಳಸಲಾಗುತ್ತದೆ. ಇದರಲ್ಲಿ ಅದ್ಭುತವಾಗಿರುವಂತ ಶಕ್ತಿ ವರ್ಧಕ ಮತ್ತು ಶಕ್ತಿಶಾಲಿ ವಿಟಮಿನ್ ಹಾಗೂ ಖನಿಜಾಂಶಗಳು ಇವೆ. ಆರೋಗ್ಯವನ್ನು ಕಾಪಾಡಲು ಇವುಗಳು ಪ್ರಮುಖ ಪಾತ್ರ ನಿರ್ವಹಿಸುವುದು. ದೆಹಲಿ ಮೂಲದ ಪೋಷಕಾಂಶ ತಜ್ಞ ಡಾ. ಲೋಕೇಂದ್ರ ತೋಮರ್ ಅವರು ಹೇಳುವ ಪ್ರಕಾರತಾಜಾ ಖರ್ಜೂರಕ್ಕೆ ಹೋಲಿಸಿದರೆ ಒಣ ಖರ್ಜೂರದಲ್ಲಿ ತೇವಾಂಶವು ತುಂಬಾ ಕಡಿಮೆ ಇರುವುದು ಮತ್ತು ಇದು ದೀರ್ಘ ಕಾಲ ಬಾಳಿಕೆ ಬರುವುದು. ಒಣ ಖರ್ಜೂರದಲ್ಲಿ ಅಧಿಕ ಮಟ್ಟದ ಕ್ಯಾಲರಿಗಳು ಇವೆ. ನೀವು ತೂಕ ಇಳಿಸಿಕೊಳ್ಳುವಂತಹ ವಿಧಾನವನ್ನು ಅನುಸರಿಸಿಕೊಂಡು ಹೋಗುತ್ತಲಿದ್ದರೆ ಆಗ ಇದನ್ನು ಕಡಿಮೆ ಸೇವಿಸಬೇಕು. ಅದಾಗ್ಯೂ, ಇದರಲ್ಲಿ ಉನ್ನತ ಮಟ್ಟದ ನಾರಿನಾಂಶ ಹಾಗೂ ಪ್ರೋಟೀನ್ ಇದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ನೆರವಾಗುವುದು. ಇದರ ಹೊರತಾಗಿ ಇದರಲ್ಲಿ ಉತ್ತಮ ಮಟ್ಟದ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಕೂಡ ಇದೆ.

ಒಣ ಖರ್ಜೂರದಲ್ಲಿ ಇರುವಂತಹ ಆರೋಗ್ಯ ಲಾಭಗಳನ್ನು ನೀವು ತಿಳಿದುಕೊಂಡರೆ ಅದನ್ನು ಖಂಡಿತವಾಗಿಯೂ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವಿರಿ.

1. ಹೃದಯ ಸ್ನೇಹಿ

1. ಹೃದಯ ಸ್ನೇಹಿ

ಒಣ ಖರ್ಜೂರದಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇದೆ ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಮಟ್ಟವು ನಗಣ್ಯ. ಒಣ ಖರ್ಜೂರವು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ರಕ್ತದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ನ್ನು ಇದು ನಿಯಂತ್ರಣದಲ್ಲಿ ಇಡುವುದು. ಇದರ ಹೊರತಾಗಿ ಇದರಲ್ಲಿ ಸೋಡಿಯಂ ತುಂಬಾ ಕಡಿಮೆ ಇದೆ ಮತ್ತು ಪೊಟಾಶಿಯಂ ಸಮೃದ್ಧವಾಗಿದೆ. ಇದರಿಂದ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಲಿದೆ.

2. ಜೀರ್ಣಕ್ರಿಯೆ ಸುಧಾರಣೆ

2. ಜೀರ್ಣಕ್ರಿಯೆ ಸುಧಾರಣೆ

ಒಣ ಖರ್ಜೂರದಲ್ಲಿ ಆ್ಯಂಟಿ ಆಕ್ಸಿಡೇಟಿವ್ ಗುಣಗಳು ಇದೆ. ಇದರಿಂದ ಚಯಾಪಚಯ ಕ್ರಿಯೆಯು ಉತ್ತೇಜನವಾಗುವುದು ಮತ್ತು ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಇದರ ಹೊರತಾಗಿ ಒಣ ಖರ್ಜೂರದಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶಗಳು ಇವೆ. ಇದು ಜೀರ್ಣಕ್ರಿಯೆಯ ರಸದ ಸ್ರವಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಸೇವಿಸಿದ ಆಹಾರವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿ. ಅದಾಗ್ಯೂ, ನೀವು ದಿನಕ್ಕೆ 2-3 ಕ್ಕಿಂತ ಹೆಚ್ಚು ಒಣ ಖರ್ಜೂರ ಸೇವನೆ ಮಾಡಬೇಕು. ಇದರಿಂದ ನೀವು ಅತಿಯಾಗಿ ಕ್ಯಾಲರಿ ಸೇವನೆ ಮಾಡಿದಂತೆ ಆಗಬಹುದು.

3. ಮಲಬದ್ಧತೆ ನಿವಾರಣೆ

3. ಮಲಬದ್ಧತೆ ನಿವಾರಣೆ

ಒಣ ಖರ್ಜೂರ ಸೇವನೆ ಮಾಡುವುದರಿಂದ ಸಿಗುವಂತಹ ಅತ್ಯುತ್ತಮ ಲಾಭವೆಂದರೆ ಅದು ಮಲಬದ್ಧತೆಗೆ ಒಳ್ಳೆಯ ಪರಿಹಾರ ಒದಗಿಸುವುದು. ಆಹಾರದಲ್ಲಿ ಹೆಚ್ಚಿನ ನಾರಿನಾಂಶವು ಇಲ್ಲದೆ ಇರುವ ಕಾರಣದಿಂದಾಗಿ ಮಲಬದ್ಧತೆ ಸಮಸ್ಯೆಯು ಕಾಡಬಹುದು. ಆದರೆ ಒಣ ಖರ್ಜೂರದಲ್ಲಿ ಹೆಚ್ಚಿನ ಮಟ್ಟದ ಆಹಾರದ ನಾರಿನಾಂಶವಿದೆ ಮತ್ತು ಇದನ್ನು ನೈಸರ್ಗಿಕ ವಿರೇಚಕವೆಂದು ಪರಿಗಣಿಸಲಾಗಿದೆ. ಆರೋಗ್ಯಕಾರಿ ಹಾಗೂ ಸಂತೋಷದ ಜೀವನ ಸಾಗಿಸಬೇಕಾದರೆ ಆಗ ನಮ್ಮ ಹೊಟ್ಟೆಯು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ನಿಮ್ಮ ಆಹಾರ ಕ್ರಮದಲ್ಲಿ ಒಣ ಖರ್ಜೂರ ಸೇರಿಸಿಕೊಳ್ಳಿ. ಒಣ ಖರ್ಜೂರವು ನಿಮ್ಮ ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

4. ಮೂಳೆಗಳ ಆರೋಗ್ಯ ಕಾಪಾಡುವುದು

4. ಮೂಳೆಗಳ ಆರೋಗ್ಯ ಕಾಪಾಡುವುದು

ಒಣ ಖರ್ಜೂರದಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ ಇದೆ. ಇದು ಮೂಳೆಗಳು ಹಾಗೂ ಹಲ್ಲುಗಳನ್ನು ಬಲಪಡಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ದಿನಕ್ಕೆ ನೀವು ಕೆಲವು ಒಣ ಖರ್ಜೂರ ಸೇವನೆ ಮಾಡಿದರೆ ಅದರಿಂದ ಕ್ಯಾಲ್ಸಿಯಂ ಕೊರತೆಯಿಂದ ಕಾಡುವಂತಹ ಅಸ್ಥಿರಂಧ್ರತೆ ಮತ್ತು ಸಂಧಿವಾತ ಹಾಗೂ ಹಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ. ಮೂಳೆಗಳು ದುರ್ಬಲಗೊಂಡರೆ ಆಗ ಗಂಟು ನೋವಿನಂತಹ ಹಲವಾರು ಸಮಸ್ಯೆಗಳು ಕಾಡುವುದು.

5. ಶಕ್ತಿ ನೀಡುವ ಅದ್ಭುತ ಆಹಾರ

5. ಶಕ್ತಿ ನೀಡುವ ಅದ್ಭುತ ಆಹಾರ

ಒಣ ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ(ಗ್ಲೂಕೋಸ್ ಮತ್ತು ಪ್ರುಕ್ಟೋಸ್) ಅಂಶ ಸಮೃದ್ಧವಾಗಿದೆ. ಇದರಿಂದಾಗಿ ಇದು ನಿಮಗೆ ಹಠಾತ್ ಶಕ್ತಿ ನೀಡುವಂತಹ ಒಳ್ಳೆಯ ಆಹಾರವಾಗಿದೆ. ನಿಮ್ಮ ಶಕ್ತಿ ಹಾಗೂ ದೇಹವನ್ನು ಚುರುಕಾಗಿಸಲು ನೀವು ಒಂದು ಒಣ ಖರ್ಜೂರವನ್ನು ಒಣ ಹಣ್ಣುಗಳ ಜತೆಗೆ ಸೇವನೆ ಮಾಡಿ.

6. ಚರ್ಮಕ್ಕೆ ಕಾಂತಿ ನೀಡುವುದು

6. ಚರ್ಮಕ್ಕೆ ಕಾಂತಿ ನೀಡುವುದು

ಒಣ ಖರ್ಜೂರದಲ್ಲಿ ನೈಸರ್ಗಿಕವಾಗಿರುವಂತಹ ವಿಟಮಿನ್ ಬಿ5 ಅಥವಾ ಪ್ಯಾಂಥೋಥೆನಿಕ್ ಆಮ್ಲವು ಸಮೃದ್ಧವಾಗಿದೆ. ಇದು ಚರ್ಮದ ಅಂಗಾಂಶಗಳಿಗೆ ತುಂಬಾ ಲಾಭಕಾರಿ ಮತ್ತು ಇದು ಫ್ರೀ ರ್ಯಾಡಿಕಲ್ ನಿಂದಾಗಿ ಚರ್ಮಕ್ಕೆ ಆಗುವಂತಹ ಹಾನಿಯನ್ನು ಸರಿಪಡಿಸುವುದು. ಒಣ ಖರ್ಜೂರದಲ್ಲಿ ಇರುವಂತಹ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿಂದಾಗಿ ನಿಮಗೆ ಯೌವನಯುತ ಚರ್ಮ ಪಡೆಯಲು ಸಹಕಾರಿಯಾಗುವುದು. ಇದು ನಿಮ್ಮ ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಅದರ ಸೌಂದರ್ಯ ಸುಧಾರಿಸುವುದು.

7. ಕೂದಲಿನ ಸಮಸ್ಯೆಗೆ ಇದು ಪರಿಹಾರ

7. ಕೂದಲಿನ ಸಮಸ್ಯೆಗೆ ಇದು ಪರಿಹಾರ

ಒಣ ಖರ್ಜೂರದಲ್ಲಿ ಇರುವಂತಹ ವಿಟಮಿನ್ ಬಿ5 ಆರೋಗ್ಯಕಾರಿ ತಲೆಬುರುಡೆಯನ್ನು ಕಾಪಾಡುವುದು. ಇದರ ಪರಿಣಾಮವಾಗಿ ಕೂದಲಿನ ಬುಡಗಳು ಬಲಗೊಳ್ಳುವುದು. ಒಣ ಖರ್ಜೂರವನ್ನು ನೀವು ಪ್ರತಿನಿತ್ಯ ಸೇವನೆ ಮಾಡಿದರೆ ಅದರಿಂದ ಒಡೆದ ತುದಿಗಳು, ಕೂದಲು ಒಣಗುವ ಸಮಸ್ಯೆ ನಿವಾರಣೆ ಮಾಡಬಹುದು. ಇನ್ನು ನೀವು ತಡ ಮಾಡುವುದು ಯಾಕೆ? ತಕ್ಷಣ ನೀವು ಹೋಗಿ ಮಾರುಕಟ್ಟೆಯಿಂದ ಖರ್ಜೂರ ತಂದಿಟ್ಟುಕೊಳ್ಳಿ ಮತ್ತು ಅದನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

English summary

fantastic-dry-dates-chhuara-benefits

Dates are known to possess many health benefits, but did you know that dried dates too, or Chhuaras as they are called, are no less when it comes to being wholesome and nourishing. Dry dates are basically dates without the moisture which make them look harder and shriveled; these are also used for religious purposes during festivals in Indian households.
X
Desktop Bottom Promotion