For Quick Alerts
ALLOW NOTIFICATIONS  
For Daily Alerts

ದೊಡ್ಡ ಕರುಳಿನ ಹಾಗೂ ಗುದನಾಳದ ಅನುವಂಶೀಯ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು

|

ಓರ್ವ ವ್ಯಕ್ತಿಯ ಕುಟುಂಬವು ಕೊಲೊರೆಕ್ಟಲ್ (ಗುದನಾಳದ) ಕ್ಯಾನ್ಸರ್‌ನ ಇತಿಹಾಸ ಹೊಂದಿದ್ದರೆ, ಅಂಥ ಕುಟುಂಬದ ಇತರ ಸದಸ್ಯರಿಗೂ ಈ ರೋಗ ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಗುದನಾಳ ಕ್ಯಾನ್ಸರ್‌ಗೆ ಕಾರಣವಾಗುವ ರೂಪಾಂತರಗೊಂಡ ಜೀನ್‌ಗಳು ಕುಟುಂಬದ ಇತರ ಸದಸ್ಯರಿಗೂ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ.

ಜೀನ್ ಎಂಬುದು ಡಿಎನ್‌ಎ ಯ ಒಂದು ಭಾಗವಾಗಿದೆ. ನಮ್ಮ ದೇಹದ ಸುಗಮ ಕಾರ್ಯಾಚರಣೆಗೆ ಬೇಕಾದ ಪ್ರೋಟೀನ್‌ಗಳನ್ನು ಉತ್ಪಾದಿಸುವ ಜೆನೆಟಿಕ್ ಕೋಡ್‌ಗಳನ್ನು ಈ ಡಿಎನ್‌ಎಗಳು ಹೊಂದಿರುತ್ತವೆ. ನಾನ್‌ಪಾಲಿಪೋಸಿಸ್ ಕೊಲೊರೆಕ್ಟಲ್ ಕ್ಯಾನ್ಸರ್ ಹಾಗೂ ಫ್ಯಾಮಿಲಿಯಲ್ ಅಡೆನೊಮ್ಯಾಟಸ್ ಪಾಲಿಪೋಸಿಸ್ (ಎಫ್‌ಎಪಿ) ಇವು ಅನುವಂಶಿಕವಾಗಿ ಬರುವ ಗುದನಾಳದ ಎರಡು ಬಗೆಯ ಸಾಮಾನ್ಯ ಕ್ಯಾನ್ಸರ್‌ಗಳಾಗಿವೆ.

facts to know Large Intestine And Rectal Cancer

ಇಂಥ ಜೀನ್‌ಗಳನ್ನು ಹೊಂದಿರುವ ವ್ಯಕ್ತಿಗಳ ಮಕ್ಕಳಿಗೆ ಈ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಶೇ.೫೦ ರಷ್ಟಿದೆ. ಈ ಎರಡು ಬಗೆಯ ಅನುವಂಶೀಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳು ಪುರುಷ ಹಾಗೂ ಮಹಿಳೆಯರನ್ನು ಸಮಾನವಾಗಿ ಬಾಧಿಸುತ್ತವೆ.

ಎಫ್‌ಎಪಿ ಬರಲು ಕಾರಣಗಳು, ರೋಗ ಪತ್ತೆ ಹಾಗೂ ಉಪಚಾರ ಕ್ರಮಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಎಫ್‌ಎಪಿ ಬರಲು ಕಾರಣಗಳೇನು?

ಎಫ್‌ಎಪಿ ಬರಲು ಕಾರಣಗಳೇನು?

ಎಫ್‌ಎಪಿ ಇದು ವಿರಳವಾಗಿ ಬರುವ ರೋಗ ಸ್ಥಿತಿಯಾಗಿದೆ. ಬೆನಿನ್ ಪಾಲಿಪ್ಸ್‌ಗಳ (ಅಂಗಾಂಶಗಳ ಸಣ್ಣ ಗುಂಪು) ಬೆಳವಣಿಗೆಯು ಈ ರೋಗದ ಪ್ರಥಮ ಲಕ್ಷಣವಾಗಿದೆ. (ದೊಡ್ಡ ಕರುಳು ಹಾಗೂ ಶ್ವಾಸನಾಳದ ಮೇಲ್ಭಾಗದಲ್ಲಿ ಅಂಗಾಂಶಗಳ ಬೆಳವಣಿಗೆ). ಬಹುತೇಕ ವ್ಯಕ್ತಿಗಳಲ್ಲಿ ಸುಮಾರು ೩೫ ನೇ ವಯಸ್ಸಿನಲ್ಲಿ ಬೆನಿನ್ ಪಾಲಿಪ್ಸ್ ಬೆಳೆಯುತ್ತವೆ. ಕೆಲವೊಮ್ಮೆ ಹದಿಹರೆಯದವರಲ್ಲಿಯೂ ಇವು ಪತ್ತೆಯಾಗಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಇಂಥ ಅಂಗಾಂಶಗಳನ್ನು ತೆಗೆದು ಹಾಕುವುದು ಅವಶ್ಯವಾಗಿದೆ. ಇಲ್ಲದಿದ್ದರೆ ಮುಂದೆ ಇವು ಕ್ಯಾನ್ಸರ್ ರೂಪ ಪಡೆಯುವ ಸಾಧ್ಯತೆಗಳಿರುತ್ತವೆ.

ಅಡೆನೊಮ್ಯಾಟಸ್ ಪಾಲೊಪೋಸಿಸ್ ಕೋಲಿ ಎಂಬ ಜೀನ್‌ನಲ್ಲಿನ ದೋಷದಿಂದ ಎಫ್‌ಎಪಿ ಉಂಟಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಈ ಜೀನ್ ಪಾಲಕರಿಂದ ಮಕ್ಕಳಿಗೆ ವರ್ಗಾವಣೆ ಆಗಿರುತ್ತದೆ. ದೊಡ್ಡ ಕರುಳು ಹಾಗೂ ಗುದನಾಳದಲ್ಲಿ ಹೆಚ್ಚುವರಿ ಅಂಗಾಂಶಗಳ ಬೆಳವಣಿಗೆ ಇದರ ಲಕ್ಷಣವಾಗಿದೆ. ಕೆಲ ಬಾರಿ ಜಠರ ಕರುಳಿನ ಮೇಲ್ಭಾಗದಲ್ಲಿಯೂ ಈ ಅಂಗಾಂಶಗಳು ಕಂಡು ಬರಬಹುದು.

Most Read: ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು

ಎಫ್‌ಎಪಿ ಲಕ್ಷಣಗಳೇನು?

ಎಫ್‌ಎಪಿ ಲಕ್ಷಣಗಳೇನು?

ರೆಕ್ಟಮ್ ಮತ್ತು ಕೊಲೊನ್ ಭಾಗದಲ್ಲಿ ಬಹಳಷ್ಟು ಸಂಖ್ಯೆಯ (ಸುಮಾರು ಸಾವಿರದಷ್ಟು) ಅಂಗಾಂಶಗಳ ಬೆಳವಣಿಗೆ ಇದರ ಪ್ರಮುಖ ಲಕ್ಷಣವಾಗಿದೆ. ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಿಂದ ಈ ಬೆಳವಣಿಗೆ ಆರಂಭವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಅದರಲ್ಲೂ ಇದಕ್ಕೆ ಯಾವುದೇ ಚಿಕಿತ್ಸೆ ಮಾಡದಿದ್ದರೆ, ೪೦ ನೇ ವಯಸ್ಸಿನ ಆಸುಪಾಸು ಇವು ಕೊಲೊನ್ ಅಥವಾ ರೆಕ್ಟಲ್ ಕ್ಯಾನ್ಸರ್ ಆಗಿ ಬದಲಾವಣೆ ಆಗುತ್ತವೆ.

ಎಫ್‌ಎಪಿ ಇರುವ ಲಕ್ಷಣಗಳು

*ಹೊಟ್ಟೆ ನೋವು

*ಹಿಂಬದಿ ಮಲದ್ವಾರದಲ್ಲಿ ನೋವು

*ಕಾರಣವಿಲ್ಲದೆ ಹಠಾತ್ ತೂಕ ಕಡಿಮೆಯಾಗುವಿಕೆ

*ಮಲದಲ್ಲಿ ರಕ್ತ ಅಥವಾ ಲೋಳೆ

*ಗುದದ್ವಾರದಿಂದ ರಕ್ತಸ್ರಾವ

*ಮಲಬದ್ಧತೆ ಅಥವಾ ಅತಿಸಾರ

ಕರುಳಿನ ಚಟುವಟಿಕೆಗಳಲ್ಲಿ ಬದಲಾವಣೆಗಳು ಕಂಡು ಬಂದಾಗ ಹಾಗೂ ಈ ಬದಲಾವಣೆಗಳು ಆರು ವಾರಕ್ಕಿಂತಲೂ ಹೆಚ್ಚು ಅವಧಿಗೆ ಮುಂದುವರೆದಲ್ಲಿ ಎಫ್‌ಎಪಿ ಲಕ್ಷಣಗಳ ಬಗ್ಗೆ ವೈದ್ಯರಿಂದ ತಪಾಸಣೆ ಮಾಡಿಸುವುದು ಅಗತ್ಯ.

Most Read: ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?

ಎಫ್‌ಎಪಿ ಇದು ವಿರಳ ರೋಗವೆ?

ಎಫ್‌ಎಪಿ ಇದು ವಿರಳ ರೋಗವೆ?

ಹೌದು. ಎಫ್‌ಎಪಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ರೋಗವಾಗಿದೆ. ೨೨ ಸಾವಿರ ಜನರಲ್ಲಿ ಓರ್ವನಿಗೆ ಈ ಕಾಯಿಲೆ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಇದು ಎಲ್ಲೋ ಒಬ್ಬರಿಗೆ ಬರುವ ರೋಗವಾಗಿದೆ.

ಎಫ್‌ಎಪಿ ಯಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಪ್ರಮಾಣ ಶೇ.೧ ಕ್ಕಿಂತಲೂ ಕಡಿಮೆ ಇದೆ ಅಧ್ಯಯನಗಳು ತಿಳಿಸಿವೆ.

ಎಫ್‌ಎಪಿ ಪತ್ತೆ ಹೇಗೆ?

ಎಫ್‌ಎಪಿ ಪತ್ತೆ ಹೇಗೆ?

ಒಂದು ವೇಳೆ ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಕೆಳಗೆ ತೋರಿಸಿದ ವಿಧಾನಗಳಲ್ಲಿ ವರ್ಷಕ್ಕೊಮ್ಮೆ ಈ ತಪಾಸಣೆ ಮಾಡಲಾಗುತ್ತದೆ;

*ಕೊಲೊನೊಸ್ಕೋಪಿ :

ಗುದನಾಳದ ಮೂಲಕ ಟ್ಯೂಬ್ ಸೇರಿಸಿ ಕೋಲನ್ ಅನ್ನು ಪರೀಕ್ಷಿಸಲಾಗುತ್ತದೆ.

ಸಿಗ್ಮೊಡೊಸ್ಕೋಪಿ :

ಗುದನಾಳದಲ್ಲಿ ಟ್ಯೂಬ್ ತೂರಿಸಿ ರೆಕ್ಟಮ್ ಹಾಗೂ ಸಿಗ್ಮಾಯ್ಡ್ ಅನ್ನು ಪರೀಕ್ಷಿಸಲಾಗುತ್ತದೆ.

*ಸಿಟಿ ಅಥವಾ ಎಂಆರ್‌ಐ :

ಇಮೇಜಿಂಗ್ ಮೂಲಕ ಮೂತ್ರನಾಳ ಹಾಗೂ ಹೊಟ್ಟೆಯಲ್ಲಿನ ಡೆಸ್ಮಾಯ್ಡ್ ಗಂಟುಗಳನ್ನು ತಪಾಸಣೆ ಮಾಡಲಾಗುತ್ತದೆ.

*ಡ್ಯುಡೆನೊಸ್ಕೋಪಿ :

ಇದರಲ್ಲಿ ಅನ್ನನಾಳ, ಹೊಟ್ಟೆ ಮತ್ತು ಸಣ್ಣ ಕರುಳಿನ ಮೇಲ್ಭಾಗಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಬಯಾಪ್ಸಿಯನ್ನು ಸಹ ಮಾಡಬಹುದು.

ಡಿಎನ್‌ಎ ತಪಾಸಣೆ ಸಹ ರೋಗ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ತಪಾಸಣೆಯ ಮೂಲಕ ಸುಲಭವಾಗಿ ಎಫ್‌ಎಪಿಗೆ ಕಾರಣವಾಗುವ ದೋಷಪೂರಿತ ವಂಶವಾಹಿಯನ್ನು ಗುರುತಿಸಬಹುದು. ಎಫ್‌ಎಪಿ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಕುಟುಂಬದಲ್ಲಿ ಯಾರಿಗಾದರೂ ಎಫ್‌ಎಪಿ ಇದ್ದಲ್ಲಿ ಈ ಪರೀಕ್ಷೆ ಮಾಡಲಾಗುತ್ತದೆ.

ಎಫ್‌ಎಪಿ ಉಪಚಾರ ಹೇಗೆ?

ಎಫ್‌ಎಪಿ ಉಪಚಾರ ಹೇಗೆ?

ಕೊಲೊನೊಸ್ಕೋಪಿ ಪರೀಕ್ಷೆಯಲ್ಲಿ ಸಣ್ಣ ಪ್ರಮಾಣದ ಅಂಗಾಂಶಗಳು ಪತ್ತೆ ಆದಲ್ಲಿ ಅವುಗಳನ್ನು ತೆಗೆದು ಹಾಕಬಹುದಾಗಿದೆ. ವಯಸ್ಸಾದಂತೆ ಈ ಅಂಗಾಂಶಗಳ ಬೆಳವಣಿಗೆ ದ್ವಿಗುಣಗೊಳ್ಳುತ್ತ ಹೋಗುವುದರಿಂದ ಅಂಥ ಪರಿಸ್ಥಿತಿಯಲ್ಲಿ ಇವುಗಳನ್ನು ತೆಗೆಯುವುದು ಕಷ್ಟಕರವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಗುದನಾಳದ ಕ್ಯಾನ್ಸರ್ ಮರುಕಳಿಸದಂತೆ ಮಾಡಲು ಶಸ್ತ್ರ ಚಿಕಿತ್ಸೆ ಮಾಡುವುದು ಅವಶ್ಯಕ.

ಒಂದು ವೇಳೆ ಲ್ಯಾಪೊರೊಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ಮಾಡಿದರೆ ಆಸ್ಪತ್ರೆಯಲ್ಲಿ ದೀರ್ಘ ಕಾಲ ಉಳಿಯುವುದು ಬೇಕಿಲ್ಲ. ಚಿಕ್ಕ ರಂಧ್ರಗಳ ಮೂಲಕ ಕೈಗೊಳ್ಳಲಾಗುವ ಈ ಚಿಕಿತ್ಸೆಯಲ್ಲಿ ಒಂದೆರಡು ಹೊಲಿಗೆಗಳು ಬೇಕಾಗಬಹುದು.

ಆದರೂ ರೋಗ ಲಕ್ಷಣವನ್ನು ಆಧರಿಸಿ ವೈದ್ಯರು ಯಾವ ರೀತಿಯ ಚಿಕಿತ್ಸೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ಸಬ್‌ಟೋಟಲ್ ಕೊಲೆಕ್ಟಮಿ ವಿತ್ ಇಲೆರೆಕ್ಟಲ್ ಅನಾಸ್ಟೊಮೊಸಿಸ್ ವಿಧಾನದಲ್ಲಿ ಗುದನಾಳವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ.

ಟೋಟಲ್ ಪ್ರೊಕ್ಟೊಕೊಲೆಕ್ಟಮಿ ವಿತ್ ಎ ಕಾಂಟಿನೆಂಟ್ ಇಲಿಯೊಸ್ಟೊಮಿ ವಿಧಾನದಲ್ಲಿ ಕೋಲನ್ ಹಾಗೂ ಗುದನಾಳಗಳನ್ನು ತೆಗೆದು ಹಾಕಿ ಹೊಟ್ಟೆಯ ಬಲಭಾಗದಲ್ಲಿ ರಂಧ್ರ ಮಾಡಲಾಗುತ್ತದೆ. ಟೋಟಲ್ ಪ್ರೊಕ್ಟೊಕೊಲೆಕ್ಟಮಿ ವಿತ್ ಇಲಿಯೋನಲ್ ಅನಾಸ್ಟೊಮೊಸಿಸ್ ವಿಧಾನದಲ್ಲಿ ಕೋಲನ್ ಹಾಗೂ ಗುದನಾಳಗಳನ್ನು ತೆಗೆದು ಹಾಕಿ, ಸಣ್ಣ ಕರುಳಿನ ಭಾಗವನ್ನು ಗುದನಾಳಕ್ಕೆ ಜೋಡಿಸಲಾಗುತ್ತದೆ. ಎಫ್‌ಎಪಿ ನಿವಾರಣೆಗೆ ಶಸ್ತ್ರ ಚಿಕಿತ್ಸೆಯೇ ಅಂತಿಮ ಪರಿಹಾರವಲ್ಲ. ಅಂಗಾಂಶಗಳು ಮತ್ತೆ ಬೆಳೆಯುವ ಸಾಧ್ಯತೆಗಳು ಇರುತ್ತವೆ. ಅಂಗಾಂಶಗಳು ಚಿಕ್ಕದಾಗಿದ್ದರೆ ಎಂಡೊಸ್ಕೊಪಿ ಮೂಲಕ ಅವುಗಳನ್ನು ತೆಗೆದು ಹಾಕಲಾಗುತ್ತದೆ. ಎಫ್‌ಎಪಿ ಉಪಚಾರಕ್ಕೆ ನಿಯಮಿತ ತಪಾಸಣೆ ಹಾಗೂ ಚಿಕಿತ್ಸೆ ಅಗತ್ಯವಾಗಿದೆ.

English summary

facts to know Large Intestine And Rectal Cancer

Familial adenomatous polyposis (FAP) is an inherited colorectal cancer. Its primary characteristic is the presence of benign polyps (growth in the large intestine and in the upper respiratory tract). Mostly, people develop polyps by about the age of 35. It is important to remove the polyps surgically or else they would take the shape of cancer.
X
Desktop Bottom Promotion