For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಟಿಪ್ಸ್: ಈರುಳ್ಳಿ-ದೇಹದ ತೂಕ ಇಳಿಸುವಲ್ಲಿ ಎತ್ತಿದ ಕೈ!

By Arshad
|

ತೂಕ ಇಳಿಸುವವರಿಗೆ ಹೆಚ್ಚು ಪರಿಣಾಮಕಾರಿ ಆಹಾರವಾಗಿದೆ. ಈರುಳ್ಳಿಯಲ್ಲಿರುವ ಕ್ವೆರ್ಸಟಿನ್ ಎಂಬ ಫ್ಲೇವಾನಾಯ್ಡು ಕೊಬ್ಬಿನ ಸಂಗ್ರಹವನ್ನು ತಡೆಯುತ್ತದೆಯಲ್ಲದೇ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಹಾಗಾಗಿ ಒಂದು ವೇಳೆ ನೀವು ತೂಕ ಇಳಿಸುವ ಬಗ್ಗೆ ಗಂಭೀರವಾದ ಮತ್ತು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದರೆ ನಿಮ್ಮ ನಿತ್ಯದ ಆಹಾರದಲ್ಲಿ ಈರುಳ್ಳಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಆದರೆ ಇದನ್ನು ಹೇಗೆ ಬಳಸುವುದು ಎಂಬು ಮಾತ್ರ ಗೊತ್ತಿರಬೇಕು.

Effective Ways To Use Onion For Weight Loss

ಕೆಂಪು ಈರುಳ್ಳಿ ವೈದ್ಯಲೋಕದ ಸಂಜೀವಿನಿ

ಸಾಮಾನ್ಯವಾಗಿ ಈರುಳ್ಳಿಯಲ್ಲಿ ವಿವಿಧ ಜಾತಿಯ ಈರುಳ್ಳಿಗಳಿರುವುದನ್ನು ಸಹ ನಾವು ಗಮನಿಸಬಹುದು. ಬಿಳಿ ಈರುಳ್ಳಿ, ಕೆಂಪು ಈರುಳ್ಳಿ, ಹಳದಿ ಈರುಳ್ಳಿ, ಹಸಿರು ಈರುಳ್ಳಿ ಎಂದೂ ಸಹ ಕರೆಯಲಾಗುತ್ತದೆ. ಇವು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೆ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಸೆಪ್ಟಿಕ್ ಗುಣಲಕ್ಷಣಗಳನ್ನು ಒಳಗೊಂಡಿದೆ. ಜಾತಿಯಲ್ಲಿ ವಿವಿಧತೆ ಹೊಂದಿದ್ದರೂ ಆರೋಗ್ಯದ ದೃಷ್ಟಿಯಲ್ಲಿ ಒಂದೇ ಬಗೆಯ ಪರಿಣಾಮವನ್ನು ನೀಡುತ್ತವೆ.

ಇಂದಿನ ಲೇಖನದಲ್ಲಿ ಈರುಳ್ಳಿಯನ್ನು ಹೇಗೆ ಬಳಸಬಹುದು ಎಂಬ ನಿಟ್ಟಿನಲ್ಲಿ ಮೂರು ವಿಧಾನಗಳನ್ನು ವಿವರಿಸಲಾಗಿದ್ದು ಇವುಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಂಡು ಅಳವಡಿಸಿಕೊಳ್ಳುವ ಮೂಲಕ ತೂಕ ಇಳಿಕೆ ಸಾಧ್ಯವಾಗುತ್ತದೆ. ಇದರ ಜೊತೆಗೇ ಈರುಳ್ಳಿಯ ಸೇವನೆಯ ಪ್ರಯೋಜನಗಳು ಹಾಗೂ ಈರುಳ್ಳಿಸೇವನೆಯ ಬಳಿಕ ಎದುರಾಗುವ ಪರೋಕ್ಷ ಪರಿಣಾಮಗಳನ್ನು ಎದುರಿಸುವುದು ಹೇಗೆ ಎಂಬುದನ್ನೂ ವಿವರಿಸಲಾಗಿದೆ. ಬನ್ನಿ ಪ್ರಾರಂಭಿಸೋಣ:

ಈರುಳ್ಳಿ ರಸ

ಈರುಳ್ಳಿ ರಸ

ತೂಕ ಇಳಿಸಲು ಅತ್ಯಂತ ಸೂಕ್ತ ವಿಧಾನವೆಂದರೆ ಈರುಳ್ಳಿಯ ರಸದ ಸೇವನೆ. ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಈರುಳ್ಳಿಯನ್ನು ಹುರಿಯುತ್ತೇವೆ. ಆದರೆ ಇದರಿಂದ ಅಡುಗೆ ರುಚಿಕರವಾದರೂ ಪೋಷಕಾಂಶಗಳು ನಷ್ಟಗೊಳ್ಳುತ್ತವೆ. ಹಾಗಾಗಿ ಈರುಳ್ಳಿಯ ರಸದ ಸೇವನೆಯೇ ಲೇಸು. ಬನ್ನಿ, ಈರುಳ್ಳಿಯ ರಸ ತಯಾರಿಸುವುದು ಹೇಗೆ ಎಂದು ನೋಡೋಣ:

ಸಿದ್ದತಾ ಸಮಯ: ಐದು ನಿಮಿಷ

ತಯಾರಿಕಾ ಸಮಯ: ಏಳು ನಿಮಿಷ

ಪ್ರಮಾಣ: ಎರಡು ಬಾರಿ ಸೇವಿಸುವಷ್ಟು

ಅಗತ್ಯವಿರುವ ಸಾಮಾಗ್ರಿಗಳು:

  • ಒಂದು ತಾಜಾ ದೊಡ್ಡ ಬಿಳಿಈರುಳ್ಳಿ.
  • ಮೂರು ಕಪ್ ನೀರು
  • ತಯಾರಿಕಾ ವಿಧಾನ:

    ಈರುಳ್ಳಿಯ ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಿ

    ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು ಈರುಳ್ಳಿಹಾಕಿ ಕುದಿಸಿ

    ಸುಮಾರು ನಾಲ್ಕು ನಿಮಿಷ ಕುದಿಯುತ್ತಿರಲಿ ಬಳಿಕ ಉರಿ ಆರಿಸಿ ಬ್ಲೆಂಡರಿಗೆ ಬಗ್ಗಿಸಿಕೊಳ್ಳಿ

    ಈಗ ಇನ್ನೂ ಎರಡು ಕಪ್ ನೀರು ಸೇರಿಸಿ ಬ್ಲೆಂಡರಿನಲ್ಲಿ ಚೆನ್ನಾಗಿ ಕಡೆಯಿರಿ.

    ತಣಿದ ಬಳಿಕ ಈ ದ್ರವವನ್ನು ಒಂದು ಲೋಟಕ್ಕೆ ಬಗ್ಗಿಸಿಕೊಂಡು ಕುಡಿಯಿರಿ.

    2. ಈರುಳ್ಳಿ ಸೂಪ್

    2. ಈರುಳ್ಳಿ ಸೂಪ್

    ಶೀಘ್ರವಾಗಿ ತೂಕ ಇಳಿಸಲು ಈರುಳ್ಳಿಯ ಸೂಪ್ ಉತ್ತಮ ಆಹಾರವಾಗಿದೆ. ಪೋಷಕಾಂಶಗಳಿಂದ ಕೂಡಿದ ಈ ರುಚಿಕರ ಆಹಾರ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಈ ಸೂಪ್ ಅನ್ನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯೂಟಕ್ಕೂ ಸೇವಿಸಬಹುದು. ಬನ್ನಿ, ಈರುಳ್ಳಿಸೂಪ್ ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ:

    ತಯಾರಿಕಾ ವಿಧಾನ

    ಸಿದ್ಧತಾ ಸಮಯ: ಹದಿನೈದು ನಿಮಿಷ

    ತಯಾರಿಕಾ ಸಮಯ: ಹದಿನೈದು ನಿಮಿಷ:

    ಪ್ರಮಾಣ: ಎರಡು ಹೊತ್ತಿನ ಸೇವನೆಗಾಗಿ:

    ಅಗತ್ಯವಿರುವ ಸಾಮಾಗ್ರಿಗಳು:

    ಅಗತ್ಯವಿರುವ ಸಾಮಾಗ್ರಿಗಳು:

    ನಾಲ್ಕೈದು ದೊಡ್ಡ ಕೆಂಪು ಈರುಳ್ಳಿ, ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಿ

    ಒಂದು ಕಪ್ ಚಿಕ್ಕದಾಗಿ ಹೆಚ್ಚಿದ ಕೆಂಪು ಟೊಮಾಟೋ

    ಒಂದು ಕಪ್ ತಾಜಾ ಹಸಿ ಎಲೆಕೋಸು, ಚಿಕ್ಕದಾಗಿ ಹೆಚ್ಚಿದ್ದು

    ಮೂರು ಕಪ್ ತರಕಾರಿಯ ಅಥವಾ ಚಿಕನ್ ಸ್ಟಾಕ್

    ಮೂರು ಎಸಳು ಬೆಳ್ಳುಳ್ಳಿ

    ½ ಇಂಚಿನಷ್ಟು ಹಸಿಶುಂಠಿ ಚಿಕ್ಕದಾಗಿ ಹೆಚ್ಚಿದ್ದು

    ¼ ಚಿಕ್ಕಚಮಚ ಕಾಳುಮೆಣಸಿನ ಪುಡಿ

    ಒಂದು ದೊಡ್ಡ ಚಮಚ ಆಲಿವ್ ಎಣ್ಣೆ

    ಉಪ್ಪು -ರುಚಿಗನುಸಾರ

    ಅಲಂಕರಿಸಲು ಒಂದು ಚಿಕ್ಕ ಕಟ್ಟು ಕೊತ್ತಂಬರಿ ಸೊಪ್ಪು

    ತಯಾರಿಕಾ ವಿಧಾನ:

    ತಯಾರಿಕಾ ವಿಧಾನ:

    ಸೂಪ್ ತಯಾರಿಸುವ ಪಾತ್ರೆಯಲ್ಲಿ ಆಲಿವ್ ಎಣ್ಣೆ ಹಾಕಿ

    ಬಳಿಕ ಹಸಿಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ

    ಬಳಿಕ ಈರುಳ್ಳಿಮತ್ತು ಎಲೆಕೋಸು ಹಾಕಿ ಸುಮಾರು ಅರ್ಧ ನಿಮಿಷ ತಳಹತ್ತದಂತೆ ಕಲಕುತ್ತಿರಿ.

    ಬಳಿಕ ರಕಾರಿಯ ಅಥವಾ ಚಿಕನ್ ಸ್ಟಾಕ್ ಹಾಕಿ ಮಿಶ್ರಣ ಮಾಡಿ

    ಬಳಿಕ ಕಾಳುಮೆಣಸು, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಚಿಕ್ಕ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷ ಕುದಿಸಿ

    ಬಳಿಕ ಉರಿ ಆರಿಸಿ ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಬಿಡಿಸಿ ಅಲಂಕರಿಸಿ.

    3. ಹಸಿ ಈರುಳ್ಳಿ

    3. ಹಸಿ ಈರುಳ್ಳಿ

    ಬೇಯಿಸಿದ ಬಳಿಕವೂ ಈರುಳ್ಳಿ ಆರೋಗ್ಯಕರವಾಗಿದ್ದರೂ ಹಸಿಯಾಗಿದ್ದಾಗ ಗರಿಷ್ಟ ಪರಿಣಾಮಕಾರಿಯಾಗಿವೆ. ಈರುಳ್ಳಿಯಲ್ಲಿರುವ ಫೈಟೋನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳು ಹಸಿಯಾಗಿದ್ದಾಗ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳದಿರುವುದೇ ಇದಕ್ಕೆ ಕಾರಣ. ಹಾಗಾಗಿ ತೂಕ ಇಳಿಸಲು ಹಸಿ ಈರುಳ್ಳಿ ತಿಂದಷ್ಟೂ ಹೆಚ್ಚು ಪ್ರಯೋಜನ ಲಭಿಸುತ್ತದೆ. ತೂಕ ಇಳಿಸಲು ಹಸಿ ಈರುಳ್ಳಿಯನ್ನು ಹೇಗೆ ಸೇವಿಸಬೇಕು ಎಂಬ ವಿಧಾನವನ್ನು ಇಲ್ಲಿ ನೀಡಲಾಗಿದೆ:

    ಸಿದ್ಧತಾ ಸಮಯ: ಐದು ನಿಮಿಷಗಳು

    ತಯಾರಿಕಾ ಸಮಯ: ಐದು ನಿಮಿಷ

    ಪ್ರಮಾಣ: ಎರಡು ಹೊತ್ತಿಗಾಗುವಷ್ಟು

    ಅಗತ್ಯವಿರುವ ಸಾಮಾಗ್ರಿಗಳು:

    ಅಗತ್ಯವಿರುವ ಸಾಮಾಗ್ರಿಗಳು:

    * ಒಂದು ಮಧ್ಯಮ ಗಾತ್ರದ ಕೆಂಪು ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ್ದು

    * ಒಂದು ಲಿಂಬೆಯ ಅರ್ಧಭಾಗ

    * ಚಿಟಿಕೆಯಷ್ಟು ಹಿಮಾಯಲದ ಕೆಂಪು ಉಪ್ಪು

    ತಯಾರಿಕಾ ವಿಧಾನ:

    ತಯಾರಿಕಾ ವಿಧಾನ:

    ಒಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿಯನ್ನು ಹಾಕಿ

    ಲಿಂಬೆಹಣ್ಣನ್ನು ಹಿಂಡಿ ರಸ ಈರುಳ್ಳಿಯ ಮೇಲೆ ಸುರಿಯಿರಿ

    ಹಿಮಾಲಯನ್ ಉಪ್ಪನ್ನು ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ

    ಮಧ್ಯಾಹ್ನದ ಅಥವಾ ರಾತ್ರಿಯ ಊಟದ ಜೊತೆಗೇ ಪಲ್ಯದ ರೂಪದಲ್ಲಿ ಈ ಖಾದ್ಯವನ್ನು ಸೇವಿಸಿ.

    ಹಾಗಾಗಿ, ತೂಕ ಇಳಿಸುವ ನಿಟ್ಟಿನಲ್ಲಿ ಈರುಳ್ಳಿಯನ್ನು ಸೇವಿಸಲು ಈ ಮೂರೂ ವಿಧಾನಗಳು ಅತಿ ಸೂಕ್ತವಾಗಿವೆ. ತೂಕ ಇಳಿಸಲು ಈರುಳ್ಳಿಯ ನೆರವನ್ನು ಪಡೆಯುವ ಇನ್ನೂ ಹಲವು ವಿಧಾನಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದೇವೆ. ಈ ಮಾಹಿತಿಯನ್ನು ಪಡೆಯಲು ಈ ಅಂಕಣವನ್ನು ಗಮನಿಸುತ್ತಿರಿ.

    ಕೂದಲುದುರುವ ಸಮಸ್ಯೆಗೆ ಸುಲಭ ಪರಿಹಾರ ಈರುಳ್ಳಿ ರಸ

English summary

Effective Ways To Use Onion For Weight Loss

Onions are highly effective in promoting weight loss. They are rich in quercetin, a flavonoid that prevents fat accumulation and also boosts metabolism. So, if you are serious about losing weight, include onion in your daily diet, But you should also know how to use it for weight loss. In this article, you will learn 3 best ways to use onion for weight loss, benefits of onions, and how to tackle the after effects of eating onions. Let’s begin.
X
Desktop Bottom Promotion