ಒಂದೆರಡು ಗಂಟೆಯಲ್ಲಿಯೇ ಜ್ವರ ಕಡಿಮೆ ಮಾಡುವ ಪವರ್ ಫುಲ್ ಮನೆಮದ್ದುಗಳು

Posted By: Deepu
Subscribe to Boldsky

ಜ್ವರ ಬರುವುದು ನಮಗಾರಿಗೂ ಬೇಕಾಗಿಲ್ಲ. ಆದರೆ ಬೇಡದ ಅತಿಥಿಯಂತೆ ಇದು ತಪ್ಪದೇ ಪ್ರತಿ ಮಳೆಗಾಲದಲ್ಲಿ ಮನೆಯಲ್ಲೊಬ್ಬರಿಗಾದರೂ ಬಂದೇ ಬರುತ್ತದೆ. ವಾಸ್ತವವಾಗಿ ಜ್ವರವೆಂದರೆ ವ್ಯಾಧಿಯಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ಶಕ್ತಿ ಉಪಯೋಗಿಸುವ ಒಂದು ವ್ಯವಸ್ಥೆ. ದೇಹವನ್ನು ಪ್ರವೇಶಿಸಿ ಧಾಳಿ ಎಸಗಲು ಸಿದ್ಧರಾಗುತ್ತಿರುವ ಸೂಕ್ಷ್ಮಜೀವಿಗಳು ಹೆಚ್ಚಿನ ತಾಪಮಾನದಲ್ಲಿ ಬದುಕಲಾರವು. ಆದ್ದರಿಂದ ದೇಹದ ತಾಪಮಾನ ಹೆಚ್ಚಿಸಿ ಇವುಗಳನ್ನು ಕೊಲ್ಲುವುದೇ ಜ್ವರ.

ದೇಹದ ತಾಪಮಾನ ಏರಿಸಬೇಕಾದರೆ ದೇಹ ಅನಿವಾರ್ಯವಾಗಿ ಇತರ ಕೆಲಸಗಳಿಗೆ ಶಕ್ತಿ ಮತ್ತು ರಕ್ತಪೂರೈಕೆಯನ್ನು ಕಡಿಮೆ ಮಾಡಬೇಕಾದುದರಿಂದಲೇ ಜ್ವರ ಇದ್ದರೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ಜ್ವರವನ್ನು ಇಳಿಸಬೇಕೆಂದರೆ ದೇಹದಲ್ಲಿರುವ ಕ್ರಿಮಿಗಳನ್ನು ಆದಷ್ಟು ಬೇಗನೇ ಕೊಲ್ಲಬೇಕು. ಈ ಕೆಲಸವನ್ನು ಕೆಲವು ಮನೆಮದ್ದುಗಳು ಸಮರ್ಥವಾಗಿ ಮಾಡಿ ಮುಗಿಸುವ ಮೂಲಕ ಜ್ವರ ಶೀಘ್ರವಾಗಿ ಇಳಿಯಲು ನೆರವಾಗುತ್ತವೆ. ಬನ್ನಿ, ಇವುಗಳಲ್ಲಿ ಕೆಲವು ಸುಲಭವಾದ ಆದರೆ ಪ್ರಬಲವಾದ ಮನೆಮದ್ದುಗಳ ಬಗ್ಗೆ ಅರಿಯೋಣ....

ತುಳಸಿ ಎಲೆ ಹಾಕಿ ಕುದಿಸಿದ ನೀರು

ತುಳಸಿ ಎಲೆ ಹಾಕಿ ಕುದಿಸಿದ ನೀರು

ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಹಾಕಿ. ಅರ್ಧ ಚಿಕ್ಕ ಚಮಚದಷ್ಟು ಒಣಶುಂಠಿಯ ಪುಡಿಯನ್ನು ಹಾಕಿ ಸುಮಾರು ಐದು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ ಹಾಗೇ ತಣಿಯಲು ಬಿಡಿ. ಉಗುರುಬೆಚ್ಚಗಾದ ಬಳಿಕ ಸೋಸಿ ಈ ನೀರಿಗೆ ಒಂದು ಚಿಕ್ಕ ಚಮಚ ಜೇನು ಬೆರೆಸಿ. ಈ ನೀರನ್ನು ದಿನಕ್ಕೆ ಮೂರು ಲೋಟದಷ್ಟು ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಕುಡಿಯಿರಿ. ತುಳಸಿಯಲ್ಲಿರುವ ಜ್ವರದ ವಿರುದ್ಧ ಹೋರಾಡುವ ಗುಣ ಜ್ವರವನ್ನು ಶೀಘ್ರವೇ ಇಳಿಸಲು ನೆರವಾಗುತ್ತದೆ.

ಕೊತ್ತಂಬರಿ ಕಾಳಿನ ಟೀ ಮಾಡಿ ಕುಡಿಯಿರಿ

ಕೊತ್ತಂಬರಿ ಕಾಳಿನ ಟೀ ಮಾಡಿ ಕುಡಿಯಿರಿ

ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಧನಿಯ ಕಾಳುಗಳನ್ನು ಹಾಕಿ ಕುದಿಸಿ. ಸುಮಾರು ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಪೂರ್ಣವಾಗಿ ತಣಿದ ಬಳಿಕ ಇದನ್ನು ಸೋಸಿ ಕೊಂಚ ಹಾಲು ಮತ್ತು ಸಕ್ಕರೆ ಬೆರೆಸಿ ಮತ್ತೊಮ್ಮೆ ಕೊಂಚವೇ ಬಿಸಿ ಮಾಡಿ ಕುಡಿಯಿರಿ. ಜ್ವರ ಹೆಚ್ಚಿದ್ದಾಗ ದಿನಕ್ಕೆ ಮೂರು ಲೋಟ ಕುಡಿಯಿರಿ. ಬಳಿಕವೂ ದಿನಕ್ಕೆರಡು ಲೋಟ ಕುಡಿಯುವ ಮೂಲಕ ಜ್ವರ ಮತ್ತೆ ಏರದಂತೆ ನೋಡಿಕೊಳ್ಳಬಹುದು.

ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ರಸ ಜ್ವರದಿಂದ ದೇಹ ಬಳಲಿದ್ದಾಗ ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಜಾಣತನ. ಈಗತಾನೇ ಹಿಂಡಿ ತೆಗೆದ ತಾಜಾ ಕಿತ್ತಳೆ ರಸವನ್ನು ಕುಡಿಯುವ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಶೀಘ್ರವೇ ವೈರಸ್ಸುಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ.

ಶುಂಠಿಯ ಕಷಾಯ ಕುಡಿಯಿರಿ

ಶುಂಠಿಯ ಕಷಾಯ ಕುಡಿಯಿರಿ

ಒಂದು ಕಪ್ ಕಪ್ಪು ಚಹಾ ತಯಾರಿಸಿ. ಇದಕ್ಕೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸೇರಿಸಿ ಒಂದು ದೊಡ್ಡಚಮಚ ಜೇನುತುಪ್ಪ ಸೇರಿಸಿ. ಬಿಸಿಬಿಸಿಯಿರುವಂತೆಯೇ ಈ ಕಷಾಯವನ್ನು ಕುಡಿಯಿರಿ. ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶೀಘ್ರವೇ ಕಡಿಮೆಯಾಗುತ್ತದೆ.

ಕುಚ್ಚಲಕ್ಕಿ ಗಂಜಿ ಮಾಡಿ ಸೇವಿಸಿ

ಕುಚ್ಚಲಕ್ಕಿ ಗಂಜಿ ಮಾಡಿ ಸೇವಿಸಿ

ಜ್ವರವಿದ್ದಾಗ ಸೇವಿಸಲು ಕುಚ್ಚಲಕ್ಕಿ ಗಂಜಿ ಉತ್ತಮ ಆಯ್ಕೆಯಾಗಿದೆ. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವುದು ಹಾಗೂ ಜ್ವರವನ್ನು ಕಡಿಮೆಗೊಳಿಸಲು ಅಗತ್ಯವಿರುವ ಶಕ್ತಿಯನ್ನೂ ಪಡೆದಂತಾಗುವುದು. ಇದಕ್ಕಾಗಿ ಕುಚ್ಚಿಗೆ ಅಕ್ಕಿಯ ಗಂಜಿ ಉತ್ತಮವಾಗಿದೆ.

ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಹೆಚ್ಚು ಸೇವಿಸಿ

ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಹೆಚ್ಚು ಸೇವಿಸಿ

ಒಂದು ವೇಳೆ ಜ್ವರ ಅತಿಯಾಗಿದ್ದರೆ ಸಿಪ್ಪೆ ಸುಲಿಯಬಹುದಾದ ಹಣ್ಣುಗಳನ್ನು ಸಿಪ್ಪೆ ಸುಲಿದು ಸೇವಿಸಿ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ಸೇವಿಸಿ. ಇದರಿಂದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಂಡು ಜ್ವರ ಶೀಘ್ರವೇ ಇಳಿಯುತ್ತದೆ.

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಜ್ವರ ಹೆಚ್ಚಿದ್ದರೆ ಅರ್ಧ ಕಪ್ ನೀರಿಗೆ ಸುಮಾರು ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಹಾಕಿ ಕೊಂಚಕಾಲ ನೆನೆಸಿ. ಬಳಿಕ ಈ ದ್ರಾಕ್ಷಿಗಳನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ.

ಸಾಸಿವೆ ಕುದಿಸಿದ ನೀರು ಕುಡಿಸಿ

ಸಾಸಿವೆ ಕುದಿಸಿದ ನೀರು ಕುಡಿಸಿ

ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚ ಸಾಸಿವೆ ಸೇರಿಸಿ ಐದು ನಿಮಿಷ ಹಾಗೇ ಬಿಡಿ. ಬಳಿಕ ಸೋಸಿದ ನೀರನ್ನು ಸಾಧ್ಯವಿದ್ದಷ್ಟು ಬಿಸಿಯಾಗಿಯೇ ಕುಡಿಸಿ.

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ!

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ!

ಒಂದು ಲಿಂಬೆಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಪ್ರತಿ ಅರ್ಧಹಣ್ಣನ್ನು ಪಾದದಡಿ ಇಟ್ಟು ಒದ್ದೆಯಾದ ಹತ್ತಿಯ ಕಾಲುಚೀಲಗಳನ್ನು ಧರಿಸಿ. ಇದರ ಮೇಲೆ ಒಣಗಿದ ಉಣ್ಣೆಯ ಬಟ್ಟೆ ಅಥವಾ ಕಾಲುಚೀಲ ಧರಿಸಿ. ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಒಂದು ಒದ್ದೆಬಟ್ಟೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಸವರಿ ಮೊಟ್ಟೆ ಸವರಿದ ಭಾಗ ಪಾದಗಳಿಗೆ ತಾಕುವಂತಿಟ್ಟು ಅದರ ಮೇಲೆ ಉಣ್ಣೆಯ ಕಾಲುಚೀಲ ಧರಿಸಿ. ರಾತ್ರಿ ಧರಿಸಿ ಮಲಗಿದ್ದು ಬೆಳಿಗ್ಗೆದ್ದಾಗ ಜ್ವರ ಕಡಿಮೆಯಾಗುತ್ತದೆ.

English summary

Effective Home Remedies For Fever You Must Know About

A fever is your body’s way of fighting an infection during a flu or infection. Suppressing a fever is not advised, as the fever will kill the bacteria and virus. However, high fevers can be dangerous, especially for small children. Natural medicine has numerous treatments to reduce a high fever. have a look