ಬಿಕ್ಕಳಿಕೆ ಕಡಿಮೆಯಾಗಿಸಲು ಏನು ಮಾಡಬೇಕು? ಇಲ್ಲಿದೆ ಸರಳ ಮನೆಮದ್ದುಗಳು

Posted By: Arshad
Subscribe to Boldsky

ಬಿಕ್ಕಳಿಕೆ ಒಂದು ಸಾಮಾನ್ಯ ತೊಂದರೆಯಾಗಿದ್ದು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಎದುರಾಗಿಯೇ ಇರುತ್ತದೆ ಹಾಗೂ ಇದು ಕಡಿಮೆಯಾಗುವವರೆಗೂ ಅಹಿತಕರ ಭಾವನೆಯನ್ನು ಎದುರಿಸಲೇಬೇಕಾಗುತ್ತದೆ. ನಮ್ಮ ಎದೆ ಮತ್ತು ಹೊಟ್ಟೆಯ ನಡುವೆ ಇರುವ ವಪೆ ಎಂಬ ಪದರ ಕೆಲವೊಮ್ಮೆ ಅಕಸ್ಮಾತ್ತಾಗಿ ಸಂಕುಚಿತಗೊಂಡಾಗ ಗಾಳಿ ಸ್ಫೋಟಿಸಿದಂತೆ ಹೊರಬೀಳುತ್ತದೆ ಹಾಗೂ ಆ ಕ್ಷಣದಲ್ಲಿ ಧ್ವನಿಪೆಟ್ಟಿಗೆಯೂ ಮುಚ್ಚಿಕೊಳ್ಳುತ್ತದೆ.

ಕೆಲವು ಸೆಕೆಂಡುಗಳ ಅಂತರದಲ್ಲಿ ಮತ್ತೊಮ್ಮೆ ಹೀಗೇ ಪುನರಾವರ್ತನೆಯಾಗುತ್ತದೆ ಹಾಗೂ ಸಾಮಾನ್ಯವಾಗಿ ಇದು ಒಂದೆರಡು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ವಿಪರೀತ ಸಂದರ್ಭಗಳಲ್ಲಿ ಘಂಟೆಗಳವರೆಗೂ ಕೆಲವರಲ್ಲಿ ಮುಂದುವರೆಯುತ್ತದೆ. ಹೀಗೆ ದೀರ್ಘಕಾಲ ಕಾಡುವ ಬಿಕ್ಕಳಿಕೆಗೆ ಉಸಿರಾಟದ ತೊಂದರೆಗಳು, ಕೇಂದ್ರ ನರವ್ಯವಸ್ತೆಯಲ್ಲಿ ಏರುಪೇರು, ಜಠರಗರುಳಿನ ತೊಂದರೆ ಹಾಗೂ ಜೀವರಾಸಾಯನಿಕ ಕ್ರಿಯೆಯಲ್ಲಿ ತೊಂದರೆಗಳು ಕಾರಣವಾಗಿರಬಹುದು.

ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಟಿಪ್ಸ್

ಕೆಲವೊಮ್ಮೆ ಬುರುಗುಬರುವ ಲಘು ಪಾನೀಯ ಅಥವಾ ಮದ್ಯವನ್ನು ಸೇವಿಸಿದಾಗಲೂ ಎದುರಾಗಬಹುದು. ಕೆಲವೊಮ್ಮೆ ಹೆಚ್ಚು ಸೇವಿಸಿದಾಗ, ಗಡಿಬಿಡಿಯಲ್ಲಿ ತಿಂದಾಗ ಅಥವಾ ಮಸಾಲೆಯುಕ್ತ ಆಹಾರಸೇವನೆಯಿಂದಲೂ ಎದುರಾಗಬಹುದು. ಕೆಲವರು ಬಿಕ್ಕಳಿಕೆಯಿಂದ ಅತಿಯಾದ ಭಯ, ಒತ್ತಡ ಅಥವಾ ಉದ್ವೇಗ ಮೊದಲಾದ ಭಾವನೆಗಳನ್ನು ಪ್ರಕಟಿಸಬಹುದು. ನಾಲ್ಕು ಜನರ ನಡುವೆ ಇದ್ದಾಗ ಬಿಕ್ಕಳಿಕೆ ಕೊಂಚ ಮುಜುಗರ ತರಿಸಬಹುದು. ಈ ತೊಂದರೆಗೆ ಕೆಲವು ಸರಳ ಹಾಗೂ ಸೂಕ್ತವಾದ ಮನೆಮದ್ದುಗಳಿವೆ. ಪ್ರಮುಖವಾದ ಹತ್ತು ಮನೆಮದ್ದುಗಳನ್ನು ಇಂದು ಸಂಗ್ರಹಿಸಲಾಗಿದ್ದು ನಿಮಗೆ ಸೂಕ್ತವಾದುವನ್ನು ಆರಿಸಿಕೊಳ್ಳಬಹುದು.... 

ಜೇನು ಮತ್ತು ಹರಳೆಣ್ಣೆ

ಜೇನು ಮತ್ತು ಹರಳೆಣ್ಣೆ

ಆಯುರ್ವೇದ ಬಿಕ್ಕಳಿಕೆಯ ಚಿಕಿತ್ಸೆಗಾಗಿ ಈ ವಿಧಾನವನ್ನು ಸೂಚಿಸುತ್ತದೆ. ಒಂದು ವೇಳೆ ಬಿಕ್ಕಳಿಕೆ ಸತತವಾಗಿ ಮುಂದುವರೆಯುತ್ತಲೇ ಇದ್ದರೆ ಈ ವಿಧಾನವನ್ನು ಅನುಸರಿಸಬಹುದು. ಒಂದು ಚಿಕ್ಕಚಮಚ ಜೇನು ಹಾಗೂ ಒಂದು ಚಿಕ್ಕಚಮಚ ಹರಳೆಣ್ಣೆಯನ್ನು ಬೆರೆಸಿ ಬೆರಳಿನಲ್ಲಿ ಅದ್ದಿ ಬೆರಳನ್ನು ಚೀಪಿ ನುಂಗಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಬೇಕು.

ತಣ್ಣೀರು

ತಣ್ಣೀರು

ತಕ್ಷಣದ ಬಿಕ್ಕಳಿಕೆ ಕಡಿಮೆಯಾಗಲು ತಕ್ಷಣ ತಣ್ಣೀರನ್ನು ಕುಡಿಯಬೇಕು. ಇದು ಸಂಕುಚಿತಗೊಂಡಿದ್ದ ವಪೆಯನ್ನು ಮತ್ತೊಮ್ಮೆ ಮೊದಲಿನ ಸ್ಥಿತಿಗೆ ತರಲು ನೆರವಾಗುತ್ತದೆ. ಇನ್ನೂ ಉತ್ತಮ ಪರಿಣಾಮ ಪಡೇಯಲು ನೀರಿಗೆ ಕೊಂಚ ಜೇನು ಬೆರೆಸಿ ಕುಡಿದರೆ ತಕ್ಷಣ ಬಿಕ್ಕಳಿಕೆ ಇಲ್ಲವಾಗುತ್ತದೆ.

ಸಕ್ಕರೆ

ಸಕ್ಕರೆ

ಬಿಕ್ಕಳಿಕೆ ಕಡಿಮೆಯಾಗಲು ಸಕ್ಕರೆ ಸಹಾ ಉತ್ತಮ ಆಯ್ಕೆಯಾಗಿದೆ. ಸಕ್ಕರೆಯ ಸೇವನೆಯಿಂದ ಜೀರ್ಣಾಂಗ, ಮೆದುಳು, ಹೃದಯ, ಶ್ವಾಸಕ್ರಿಯೆ ಮೊದಲಾದ ಪ್ರಮುಖ ಕಾರ್ಯಗಳಿಗೆ ಸಂಪರ್ಕ ಒದಗಿಸುವ ಮುಖ್ಯ ನರವಾದ vagus nerve ಎಂಬ ನರಕ್ಕೆ ಪ್ರಚೋದನೆ ನೀಡುತ್ತದೆ ಹಾಗೂ ತನ್ಮೂಲಕ ತಕ್ಷಣವೇ ಬಿಕ್ಕಳಿಕೆ ಇಲ್ಲವಾಗಲು ನೆರವಾಗುತ್ತದೆ. ಒಂದು ಚಿಕ್ಕಚಮಚ ಸಕ್ಕರೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಬಾಯಿಯಲ್ಲಿ ಸಕ್ಕರೆ ಕರಗುವಂತೆ ಮಾಡಿ, ಅಗಿಯಬೇಡಿ. ಜೊಲ್ಲಿನಲ್ಲಿ ಸಕ್ಕರೆ ಚೆನ್ನಾಗಿ ಕರಗಿದೆ ಎಂದಾಗ ಕೊಂಚ ನೀರಿನೊಂದಿಗೆ ನುಂಗಬೇಕು.

ಶಿರ್ಕಾ

ಶಿರ್ಕಾ

ಬಿಕ್ಕಳಿಕೆಯ ನಿವಾರಣೆಗೆ ಇನ್ನೊಂದು ಸುಲಭ ವಿಧಾನವೆಂದರೆ ಸಾಮಾನ್ಯ ಶಿರ್ಕಾ ಸೇವನೆ. ಇದರ ಹುಳಿಯಾದ ರುಚಿ ಬಿಕ್ಕಳಿಕ ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಕೇವಲ ಅರ್ಧ ಚಿಕ್ಕ ಚಮಚ ಶಿರ್ಕಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬೇಕು.

ಪೀನಟ್ ಬಟರ್

ಪೀನಟ್ ಬಟರ್

ಈ ಆಹಾರದ ಸೇವನೆಯಿಂದಲೂ ಉಸಿರಾಟದಲ್ಲಿ ಆಗಿದ್ದ ಏರುಪೇರು ಸರಿಯಾಗುತ್ತದೆ ಹಾಗೂ ಇದು ಸತತವಾದ ಬಿಕ್ಕಳಿಕೆಯಿಂದ ಮುಕ್ತಿ ದೊರಕುತ್ತದೆ. ಒಂದು ಚಿಕ್ಕ ಚಮಚ ಪೀನಟ್ ಬಟರ್ ಅನ್ನು ಬಾಯಿಗೆ ಹಾಕಿಕೊಂಡು ಕೊಂಚ ಹೊತ್ತು ಹಾಗೇ ಬಿಟ್ಟು ಜೊಲ್ಲಿನಲ್ಲಿ ಕರಗುವಂತೆ ಮಾಡಬೇಕು. ಬಳಿಕ ನಿಧಾನವಾಗಿ ನುಂಗಬೇಕು.

ಲಿಂಬೆ

ಲಿಂಬೆ

ಬಿಕ್ಕಳಿಕೆಯನ್ನು ಕಡಿಮೆ ಮಾಡಲು ಲಿಂಬೆ ಸಹಾ ಉತ್ತಮ ಆಯ್ಕೆಯಾಗಿದೆ. ಇದರ ಹುಳಿಯಾದ ರುಚಿ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಿ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಲಿಂಬೆರಸವನ್ನು ನೇರವಾಗಿ ಸೇವಿಸಬೇಕು. ಲಿಂಬೆಯ ಹುಳಿ ಸಹಿಸಲು ಸಾಧ್ಯವಾಗದಿದ್ದರೆ ಈ ರಸವನ್ನು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬಹುದು.

ಏಲಕ್ಕಿ

ಏಲಕ್ಕಿ

ಬಿಕ್ಕಳಿಕೆ ಕಡಿಮೆಯಾಗಲು ಏಲಕ್ಕಿ ಉತ್ತಮ ಆಯ್ಕೆಯಾಗಿದೆ. ಇದರ ಸ್ನಾಯುಗಳನ್ನು ಸಡಿಲಿಸುವ ಗುಣ ಬಿಕ್ಕಳಿಕೆ ಕಡಿಮೆಮಾಡಲು ನೆರವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ಬಿಸಿನೀರಿನಲಲ್ಲಿರಿಸಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಈ ನೀರನ್ನು ಸೋಸಿ ನಿಧಾನವಾಗಿ ಕುಡಿಯಿರಿ.

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ನಲ್ಲಿ ಸ್ನಾಯುಗಳನ್ನು ಸಡಿಲಿಸುವ ಗುಣವನ್ನು ಹೊಂದಿದೆ. ಹಾಗೂ ಬಿಕ್ಕಳಿಕೆಗೆ ಕಾರಣವಾದ ವಪೆಯ ಸಂಕುಚನವನ್ನು ಸಡಿಲಿಸಿ ಬಿಕ್ಕಳಿಕೆ ಇಲ್ಲವಾಗಿಸುತ್ತದೆ. ಒಂದು ಕಪ್ ಕುದಿಯುವ ನೀರಿನಲ್ಲಿ ಒಂದು ಚಿಕ್ಕಚಮಚ ಕ್ಯಾಮೋಮೈಲ್ ಟೀ ಹಾಕಿ ಸುಮಾರು ಐದು ನಿಮಿಷ ಕುದಿಸಿ ಬಳಿಕ ಸೋಸಿ ಈ ಟೀ ಯನ್ನು ನಿಧಾನವಾಗಿ ಕುಡಿಯಿರಿ.

ಹಸಿ ಜೇನು

ಹಸಿ ಜೇನು

ಜೇನಿನ ಹಲ್ಲೆಯಿಂದ ಹಿಂಡಿ ತೆಗೆದ ತಾಜಾ ಜೇನು ಬಿಕ್ಕಳಿಕೆ ತಡೆಯಲು ಅತ್ಯುತ್ತಮ ಔಷಧಿಯಾಗಿದೆ. ಇದು ವಪೆಯ ಸಂಕುಚನವನ್ನು ತಡೆದು ಬಿಕ್ಕಳಿಕೆಯನ್ನು ಇಲ್ಲವಾಗಿಸುತ್ತದೆ. ಒಂದು ಚಿಕ್ಕ ಚಮಚ ಹಸಿ ಜೇನನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬೇಕು.

ಸಬ್ಬಸಿಗೆ ಬೀಜಗಳು

ಸಬ್ಬಸಿಗೆ ಬೀಜಗಳು

ಬಿಕ್ಕಳಿಕೆ ತಡೆಯಲು ನೂರಾರು ವರ್ಷಗಳಿಂದ ಸಬ್ಬಸಿಗೆ ಬೀಜಗಳನ್ನು ಬಳಸಲಾಗುತ್ತಾ ಬರಲಾಗಿದೆ. ಒಂದು ವೇಳೆ ಜೀರ್ಣಕ್ರಿಯೆಯ ತೊಂದರೆಯಿಂದ ಬಿಕ್ಕಳಿಕೆ ಎದುರಾಗಿದ್ದರೆ ಈ ಬೀಜಗಳು ಉತ್ತಮ ಪರಿಹಾರ ಒದಗಿಸುತ್ತವೆ. ಬಿಕ್ಕಳಿಕೆ ಎದುರಾದಾಗ ಒಂದುಚಿಕ್ಕಚಮಚ ಸಬ್ಬಸಿಗೆ ಬೀಜಗಳನ್ನು ಬಾಯಿಗೆ ಹಾಕಿ ಅಗಿದು ನುಂಗಬೇಕು. ಬಿಕ್ಕಳಿಕೆ ತಕ್ಷಣ ಕಡಿಮೆಯಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Easy Home Remedies For Hiccups

Hiccups can happen when you drink something carbonated or alcoholic. It may also occur when you overeat, eat too quickly, eat spicy foods, and show extreme emotions like fear, stress or excitement. Hiccups are mostly annoying and to get rid of it, you can try these simple home remedies. Here is a list of 10 home remedies for hiccups. Take a look.