Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೇರವಾಗಿ ಕುಳಿತುಕೊಳ್ಳುವುದರಿಂದ ಬೆನ್ನುನೋವು ನಿಜವಾಗಿಯೂ ಕಡಿಮೆಯಾಗುವುದೇ?
ನಾವು ಚಿಕ್ಕವರಾಗಿದ್ದಾಗ, ನಮ್ಮ ಹೆತ್ತವರು ಮತ್ತು ಶಿಕ್ಷಕರು "ನೇರವಾಗಿ ಕೂಳಿತುಕೊ, ಬೆಂಡಾಗಿ ಕುಳಿತುಕೊಳ್ಳಬೇಡ!" ಎಂದು ನಮಗೆ ಹೇಳುತ್ತಿದ್ದರು! ನೆನಪಿದೆಯಾ? ನಮ್ಮ ಹಿರಿಯರು ನಾವು ನಡೆಯುವಾಗ, ಕುಳಿತುಕೊಳ್ಳುವಾಗ ಅಥವಾ ನೆಟ್ಟಗೆ ನಿಲ್ಲುವಂತೆ ಹೇಳುತ್ತಿದ್ದರು. ನಮ್ಮ ಭಂಗಿಯು ಚೆನ್ನಾಗಿರಲಿ ಮತ್ತು ನೋಡುವಾಗ ಗಮನ ಸೆಳೆಯಲಿ ಎಂದು ಹೀಗೆ ಹೇಳುತ್ತಿದ್ದಾರೆ ಅಂತಾ ನಾವು ತಿಳಿದಿದ್ದೇವೆ. ಆದರೆ, ನಮ್ಮ ಭಂಗಿಯು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ದೀರ್ಘಕಾಲದವರೆಗೆ ತಪ್ಪು ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ಸತ್ಯ.
ಸಾಮಾನ್ಯವಾಗಿ ಬಹಳಷ್ಟು ಜನ ತೀವ್ರ ಬೆನ್ನು ನೋವಿನಿಂದ ಬಳಲುತ್ತಾರೆ. ಬೆನ್ನು ನೋವಿನ ತೀವ್ರತೆಯು ಬಹಳಷ್ಟು ಸಂಗತಿಗಳನ್ನು ಅವಲಂಬಿಸಿರುತ್ತದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಿರುತ್ತದೆ. ಉದಾಹರಣೆಗೆ, ಬೆನ್ನು ನೋವು ಒಂದು ಸಣ್ಣ ಉಳುಕಿನಿಂದ ಉಂಟಾಗಬಹುದು. ಅದು ನಿಭಾಯಿಸಬಲ್ಲ ನೋವಾಗಿರಬಹುದು ಮತ್ತು ಕೆಲವು ದಿನಗಳಲ್ಲಿ ಕಡಿಮೆಯಾಗಬಹುದು. ಅಥವಾ ಬೆನ್ನು ನೋವು, ಸಂಧಿವಾತ ಅಥವಾ ಆಸ್ಟಿಯೊಪೊರೋಸಿಸ್ನಿಂದ ಉಂಟಾಗುತ್ತದೆ, ಇದು ಒಂದು ಮೂಳೆ ರೋಗವಾಗಿದ್ದು, ನಂತರದ ದಿನಗಳಲ್ಲಿ ನೋವು ಹೆಚ್ಚಾಗಬಹುದು ಮತ್ತು ದೀರ್ಘಾವಧಿಯ ಪರಿಣಾಮ ನೀಡಬಹುದು.

ಕೆಲವು ಜನರಿಗೆ, ಯಾವುದೇ ಕಾಯಿಲೆ, ಗಾಯ, ಶಸ್ತ್ರಚಿಕಿತ್ಸೆ, ಮುಂತಾದ ನಿರ್ದಿಷ್ಟ ಕಾರಣವಿಲ್ಲದೆ ಬೆನ್ನು ನೋವು ಕಾಡಬಹುದು. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ, ಕುಳಿತಿರುವಾಗ, ಮಲಗಿರುವಾಗ, ನಿಂತಿರುವಾಗ, ವಾಕಿಂಗ್ ಮತ್ತು ಕೆಲಸ ಮಾಡುವಾಗ ತಾವು ಸರಿಯಾದ ಭಂಗಿ ಹೊಂದಿದ್ದೇವೆಯೇ ಎಂಬುದನ್ನು ಪರೀಕ್ಷಿಸಬೇಕು. ಆದ್ದರಿಂದ, ಬೆನ್ನು ನೋವು ಕಡಿಮೆ ಮಾಡಲು "ಪರಿಪೂರ್ಣ" ಅಥವಾ ಸರಿಯಾದ ಭಂಗಿ ಇದೆಯೇ ಎಂದು ತಿಳಿಯಲು, ಮುಂದೆ ಓದಿ....
ಭಂಗಿ ಮತ್ತು ಬೆನ್ನು ನೋವಿನ ನಡುವಿನ ಸಂಬಂಧ
ಸಾಮಾನ್ಯವಾಗಿ, ಕುಳಿತುಕೊಂಡು ಮಾಡುವ ಕೆಅಸವಿರುವವರು, ದಿನಕ್ಕೆ 6-7 ಗಂಟೆಗಳ ಕಾಲ ಕಂಪ್ಯೂಟರ್ ಪರದೆಯ ಮುಂದೆ ಕುಳಿತು ಟೈಪ್ ಮಾಡುವುದು, ಕುತ್ತಿಗೆ ನೋವು, ಬೆನ್ನುನೋವು, ತಲೆನೋವು ಮುಂತಾದವುಗಳ ಬಗ್ಗೆ ಹೇಳುತ್ತಿರುತ್ತಾರೆ. ಆದ್ದರಿಂದ, ದಿನನಿತ್ಯ ಒಬ್ಬ ವ್ಯಕ್ತಿ ತನ್ನ ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡುತ್ತಿದ್ದರೆ ಅವರ ಭಂಗಿಗಳಿಂದಾಗಿ ಬೆನ್ನು ನೋವು ಮತ್ತು ಕುತ್ತಿಗೆ ನೋವು ಉಂಟಾಗುತ್ತದೆ ಎಂದು ಯೋಚಿಸುವುದು ಸುಲಭ.
ಇತ್ತೀಚೆಗೆ ನಡೆಸಿದ ಹಲವಾರು ಸಮೀಕ್ಷೆಗಳ ಪ್ರಕಾರ, ಪ್ರಜ್ಞಾಪೂರ್ವಕವಾಗಿ ನೇರವಾಗಿ ಕುಳಿತುಕೊಳ್ಳಲು ಮತ್ತು ಉತ್ತಮ ಭಂಗಿಗೆ ಸಹಾಯಕ ಎಂದು ಹೇಳಲ್ಪಡುವ ಕುರ್ಚಿಯನ್ನು ಹೊಂದಿದ್ದವರೂ, ಬೆನ್ನು ನೋವನ್ನು ಅನುಭವಿಸಿದ್ದಾರೆ. ಆದ್ದರಿಂದ, ನೇರವಾಗಿ ಕುಳಿತುಕೊಳ್ಳುವ ಭಂಗಿ, ಬೆನ್ನುನೋವಿಗೆ ಏಕೈಕ ಪರಿಹಾರವಾಗಿದೆಯೇ ಎಂದು ನಮಗೆ ಆಶ್ಚರ್ಯವಾಗುತ್ತದೆ.ವಾಸ್ತವವಾಗಿ, ಆಶ್ಲೇ ಜೇಮ್ಸ್, ದಿ ಚಾರ್ಟರ್ಡ್ ಸೊಸೈಟಿ ಫಾರ್ ಫಿಸಿಯೋಥೆರಪಿಯ ವಕ್ತಾರರಾಗಿದ್ದು, ದೈಹಿಕ ಅಪಾಯಗಳು ಮತ್ತು ಕಾರಣಗಳ ಬಗ್ಗೆ ಸಂಷೋಧನೆ ನಡೆಸಿದ್ದಾರೆ. ಕೆಳ ಬೆನ್ನುನೋವು, ಭಂಗಿಗೆ ಸಂಬಂಧಿಸಿದೆ ಎಂದು ಅವರು ಒಪ್ಪಿಕೊಳ್ಳುವುದಿಲ್ಲ.
ಅವರು ಹೇಳುವ ಪ್ರಕಾರ, ಪ್ರತಿ ವ್ಯಕ್ತಿಯೂ ವಿಭಿನ್ನ ಭಂಗಿಗಳನ್ನು ಹೊಂದಿರುತ್ತಾರೆ ಮತ್ತು "ಸರಿಯಾದ ಭಂಗಿ" ಎಂದು ಇಲ್ಲ, ಮತ್ತು ಎಲ್ಲರೂ ಬೆನ್ನುನೋವಿನಿಂದ ಬಳಲುತ್ತಿಲ್ಲ!. ಭಂಗಿ ಮತ್ತು ಬೆನ್ನು ನೋವಿನ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಹಲವಾರು ಸಂಶೋಧನಾ ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಉಂಟಾಗುವುದಿಲ್ಲ ಎಂದಾದರೆ, ಯಾವುದರಿಂದಾಗಿ ಬೆನ್ನುನೋವು ಉಂಟಾಗುತ್ತದೆ ಎಂಬುದು ಆಶ್ಚರ್ಯವನ್ನು ಉಂಟುಮಾಡುತ್ತದೆ.
ಕುಳಿತುಕೊಳ್ಳುವುದು ಮತ್ತು ಬೆನ್ನು ನೋವಿನ ನಡುವಿನ ಸಂಬಂಧ
ಸರಿ, ಕುಳಿತುಕೊಂಡು ಅಥವಾ ದೀರ್ಘಕಾಲದವರೆಗೆ ಕುಳಿತು ಕೆಲಸಮಾಡುವ ಜನರ ಬೆನ್ನು ನೋವಿಗೆ ಭಂಗಿ ಕಾರಣ ಅಲ್ಲದಿದ್ದರೆ , ಹಾಗಾದರೆ, ಇನ್ನೇನು?
ತಜ್ಞರ ಪ್ರಕಾರ, ಚಲನೆಯ ಕೊರತೆ ರೋಗಿಗಳ ಈ ಸ್ಥಿತಿಗೆ ಕಾರಣವಾದ ಅಪರಾಧಿ, ಜನರು ತಮ್ಮ ಮೇಜುಗಳಲ್ಲಿ ದೀರ್ಘಕಾಲ ಕುಳಿತು ಕೆಲಸಮಾಡುವುದು, ಪುಸ್ತಕಗಳನ್ನು ಓದುವುದು ಅಥವಾ ದೂರದರ್ಶನ ವೀಕ್ಷಿಸುತ್ತಾರೆ.ಕೆಟ್ಟ ಭಂಗಿಗಳಿಗಿಂತ ಹೆಚ್ಚಾಗಿ, ದೊಡ್ಡ ಕಾರಣವೆಂದರೆ ಜನರು ಯಾವುದೇ ರೀತಿಯ ಚಲನೆಯಿಲ್ಲದೇ, ನಡೆಯದೇ, ವಿರಾಮವನ್ನು ತೆಗೆದುಕೊಳ್ಳದೆ ದೀರ್ಘಕಾಲ ಕುಳಿತುಕೊಳ್ಳುವುದು.
ಕುಳಿತುಕೊಳ್ಳುವ ಸುದೀರ್ಘ ಅವಧಿಗಳು ಏಕೆ ನೋವನ್ನು ಉಂಟುಮಾಡಬಹುದು?
ದೀರ್ಘಕಾಲದವರೆಗೆ ಕುಳಿತು ಕೆಲಸಮಾಡುವ ಜನರ ಬೆನ್ನು ನೋವಿಗೆ ಭಂಗಿ ಕಾರಣ ಅಲ್ಲ. ಹೊರತಾಗಿ, ತುಂಬಾ ಹೊತ್ತು ಚಲನೆಯಿಲ್ಲದೇ ಕುಳಿತಿರುವುದು ಕಾರಣ ಎಂದು ನಾವು ಕಂಡುಕೊಂಡೆವು. ಆಶ್ಲೇ ಜೇಮ್ಸ್ ಹೇಳುವಂತೆ, ನಮ್ಮ ದೇಹದ ಯಾಂತ್ರಿಕ ವ್ಯವಸ್ಥೆಯು ನಿರಂತರ ಚಲನೆಯನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಬಹಳ ಕಾಲ ಕುಳಿತುಕೊಂಡಿದ್ದಾಗ, ದೇಹದಲ್ಲಿ ನೊಸೆಸೆಪ್ಟರ್ ಎಂದು ಕರೆಯುವ ನರದ ತುದಿಗಳು, ಕುಳಿತುಕೊಳ್ಳುವ ದೀರ್ಘಾವಧಿಗಳಿಂದ ಉಂಟಾಗುವ ಒತ್ತಡ ಮತ್ತು ಉದ್ವೇಗವನ್ನು ಪತ್ತೆಹಚ್ಚುತ್ತದೆ, ಇದು ದೀರ್ಘಕಾಲ ನೋವನ್ನು ಉಂಟುಮಾಡುತ್ತದೆ.
ಆದ್ದರಿಂದ, ತಪ್ಪು ಭಂಗಿಗಳಿಗಿಂತ ಹೆಚ್ಚಾಗಿ, ಚಲನೆಯಿಲ್ಲದೇ ದೀರ್ಘಾವಧಿಗಳ ತನಕ ಕುಳಿತುಕೊಳ್ಳುವುದು ಬೆನ್ನುನೋವಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಬಹುದು,
ಬೆನ್ನಿಗೆ ಮಸಾಜ್
ಬೆನ್ನಿಗೆ ಸರಿಯಾದ ಮಸಾಜ್ ಮಾಡುವುದರಿಂದ ನಿಮ್ಮ ಬೆನ್ನುನೋವು ಶಮನವಾಗಿ ಆರಾಮವನ್ನುಂಟುಮಾಡಬಹುದು. ಇದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ. ಮೊದಲು ನಿಮ್ಮ ಪಾಕೆಟ್ ನಲ್ಲಿ ಹಣ ತುಂಬಿಸಿ. ಮಸಾಜ್ ಮಾಡಿಸಿಕೊಳ್ಳುವಷ್ಟು ಹಣವಿಲ್ಲದಿದ್ದರೆ ಟೆನಿಸ್ ಬಾಲ್ ನಿಂದ ಬೆನ್ನಿನ ನೋವಿಗೆ ವಿರುದ್ಧವಾಗಿ ಮಸಾಜ್ ಮಾಡಿ. ಆಗ ನಿಮಗೆ ಬೆನ್ನು ನೋವು ಉಪಶಮನವಾಗುವುದು ತಿಳಿಯುತ್ತದೆ. ಮೇಲಿನ ಟಿಪ್ಸ್ ಗಳನ್ನು ಪಾಲಿಸಿ ಮತ್ತು ಬೆನ್ನು ನೋವಿನಿಂದ ಮುಕ್ತರಾಗಿ.
ವಿಟಮಿನ್ ಇರುವ ಆಹಾರ ಸೇವಿಸಿ
ಬೆನ್ನುನೋವನ್ನು ಗುಣಪಡಿಸಲು ನೀವು ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಯೆಂದರೆ ಸರಿಯಾಗಿ ವಿಟಮಿನ್ ತೆಗೆದುಕೊಳ್ಳಿ. ಬೆನ್ನು ನೋವು ನಿವಾರಿಸಲು ವಿಟಮಿನ್ ಬಿ' ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ವಿಟಮಿನ್ ಬಿ' ಕೇಂದ್ರ ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ದೇಹದ ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ. ಬೆನ್ನು ನೋವಿರುವವರು ತಮ್ಮ ಆಹಾರ ಕ್ರಮದಲ್ಲಿ ಒಮೆಗಾ-3 ನ್ನು ಬಳಸಲು ಪ್ರಯತ್ನಿಸಿ.
ಸರಿಯಾಗಿ ನಿದ್ದೆ ಮಾಡಿ
ರಾತ್ರಿಯ ಸರಿಯಾದ ನಿದ್ರೆ ಬೆನ್ನು ನೋವಿಗೆ ಉಪಶಮನವಾಗಬಲ್ಲದು. ಸರಿಯಾದ ನಿದ್ರೆಯಿಲ್ಲದೆ ಬೆನ್ನು ನೋವು ಬರಬಹುದು. ಸರಿಯಾದ ನಿದ್ರೆ ಬಿದ್ದರೆ ಎಲ್ಲಾ ಹಾನಿಗೊಳಗಾದ ಸ್ನಾಯುಗಳ ದುರಸ್ತಿ ಮತ್ತು ಊತ ಕೀಲುಗಳು ಗುಣಪಡಿಸುತ್ತದೆ. ಒಳ್ಳೆಯ ಹಾಸಿಗೆಯಲ್ಲಿ ಮಲಗಿ. ಹಾಸಿಗೆ ತುಂಬಾ ಗಡುಸಾಗಿದ್ದರೆ ಅದು ನಿಮ್ಮ ದೇಹದಲ್ಲಿ ನೋವು ಉಂಟುಮಾಡಬಹುದು. ಒಳ್ಳೆಯ ಹಾಸಿಗೆ ಆಯ್ಕೆ ಮಾಡಿ ಮತ್ತು ವಿವಿಧ ಭಂಗಿಯಲ್ಲಿ ಮಲಗಲು ಪ್ರಯತ್ನಿಸಿ. ನಿಮಗೆ ಆರಾಮದಾಯಕವಾಗುವ ಭಂಗಿ ಆಯ್ಕೆ ಮಾಡಿ. ಬೆನ್ನುಮೂಳೆಯನ್ನು ಬಗ್ಗಿಸಿ ಮಲಗಲು ಪ್ರಯತ್ನಿಸಬೇಡಿ.
ಏನೇ ಆದರೂ, ಭಂಗಿ ಮತ್ತು ವಯಸ್ಸು ಸಹ ಒಂದಕ್ಕೊಂದು ಸಂಬಂಧಿಸಿದೆ
ಲೀಡ್ಸ್ ವಿಶ್ವವಿದ್ಯಾನಿಲಯದ ಮಸ್ಕ್ಯುಲೋಸ್ಕೆಲೆಟಲ್ ಮೆಡಿಸಿನ್ ನ ಪ್ರೊಫೆಸರ್ ಫಿಲಿಪ್ ಕೊನಾಘನ್ ಹೇಳುತ್ತಾರೆ,' ನಾವು ವಯಸ್ಸಾದಂತೆ, ವಿಶೇಷವಾಗಿ 60 ವರ್ಷ ವಯಸ್ಸಿನ ನಂತರ, ಬಾಗುವಿಕೆ ಬೆನ್ನುನೋವಿಗೆ ಕಾರಣವಾಗಬಹುದು, ಏಕೆಂದರೆ ಈ ವಯಸ್ಸಿನಲ್ಲಿ ನಮ್ಮ ಸ್ನಾಯುಗಳು ದುರ್ಬಲವಾಗಿರುತ್ತವೆ. ಆದ್ದರಿಂದ, ನೀವು ಕುಳಿತುಮಾಡುವ ಕೆಲಸವನ್ನು ಹೊಂದಿದ್ದರೆ, ಅಥವಾ ನೀವು ತುಂಬಾ ಕಾಲ ಕುಳಿತುಕೊಳ್ಳಲು ಒಲವು ತೋರಿದರೆ, ಆ ಅಭ್ಯಾಸವನ್ನು ಬಿಟ್ಟು ಬಿಡಿ ಮತ್ತು ಬೆನ್ನು ನೋವು ಕಡಿಮೆ ಮಾಡಲು ಕಾಲಕಾಲಕ್ಕೆ ಚಲನೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
