ಆರೋಗ್ಯ ಟಿಪ್ಸ್: ಶೀತ, ಜ್ವರ ಇದ್ದಾಗ ಸೆಕ್ಸ್ ಬೇಡವೇ ಬೇಡ!

Posted By: Hemanth
Subscribe to Boldsky

ಚಳಿಗಾಲ ಕಳೆದು ಬೇಸಿಗೆ ಕಾಲ ಬರುವಂತಹ ನಡುವಿನ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಈಗ ಎಲ್ಲಿ ನೋಡಿದರೂ ನಿಮಗೆ ಜ್ವರ, ಶೀತದಂತಹ ಸಮಸ್ಯೆಯವರು ಕಾಣಸಿಗುವರು. ಹವಾಮಾನ ಒಮ್ಮೆಲೇ ಬದಲಾಗುವುದೇ ಇದಕ್ಕೆ ಕಾರಣವಾಗಿದೆ. ಆದರೆ ಇಂತಹ ಸಮಯದಲ್ಲಿ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದೇ ಎನ್ನುವ ಪ್ರಶ್ನೆ ಕಾಡುವುದು.

ಲೈಂಗಿಕ ಕ್ರಿಯೆ ವೇಳೆ ಸೋಂಕು ಅಥವಾ ಬ್ಯಾಕ್ಟೀರಿಯಾದಿಂದ ಬರುವಂತಹ ರೋಗಗಳು ಹರಡುತ್ತದೆ ಅಥವಾ ಹರಡುವುದಿಲ್ಲ ಎನ್ನುವ ಬಗ್ಗೆ ಹಲವಾರು ವಾದ ಪ್ರತಿವಾದಗಳು ಇವೆ. ಆದರೆ ಜ್ವರ ಅಥವಾ ಶೀತವಿದ್ದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇರುವುದೇ ಸೂಕ್ತ. ಇಬ್ಬರು ಜ್ವರದಿಂದ ಬಳಲುತ್ತಾ ಇರುವಂತಹ ಸಮಯದಲ್ಲಿ ಇದು ಖಂಡಿತಾ ಸಲ್ಲದು. ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಇದು ಹರಡಬಹುದು.

ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು

ಲೈಂಗಿಕ ಕ್ರಿಯೆಯಿಂದ ಕಾಯಿಲೆಗಳು ಗುಣವಾಗುವುದಿಲ್ಲ. ಬದಲಾಗಿ ನಿಮ್ಮ ಸಂಗಾತಿಗೆ ಅದನ್ನು ವರ್ಗಾಯಿಸಿದಂತೆ ಆಗುವುದು. ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾದಾಗ ಲೈಂಗಿಕ ಕ್ರಿಯೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಚಾರಗಳು ಇಲ್ಲಿವೆ. ಸಂಗಾತಿಯು ಜ್ವರ ಅಥವಾ ಶೀತದಿಂದ ಬಳಲುತ್ತಿದ್ದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೇ ಅಥವಾ ಬಾರದೇ ಎನ್ನುವುದು ಈ ಲೇಖನ ಓದಿ ಮುಗಿಸುವ ಹೊತ್ತಿಗೆ ನಿಮಗೆ ಸ್ಪಷ್ಟವಾಗಿರುತ್ತದೆ...

ಲೈಂಗಿಕ ದ್ರವಗಳ ಮೂಲಕ ಜ್ವರ ಅಥವಾ ಶೀತ ಹಬ್ಬಲ್ಲ

ಲೈಂಗಿಕ ದ್ರವಗಳ ಮೂಲಕ ಜ್ವರ ಅಥವಾ ಶೀತ ಹಬ್ಬಲ್ಲ

ಸಾಮಾನ್ಯ ಶೀತ ಅಥವಾ ಜ್ವರವು ವೀರ್ಯ ಅಥವಾ ಯೋನಿಯ ದ್ರವದಿಂದ ಹಬ್ಬುವುದಿಲ್ಲ. ನಿಮಲ್ಲಿ ಯಾವುದೇ ರೀತಿಯ ಲೈಂಗಿಕ ರೋಗಗಳು ಇಲ್ಲವೆಂದಾದರೆ ಇದು ಹಬ್ಬುವಂತಹ ಸಾಧ್ಯತೆಯು ಕಡಿಮೆ. ಆದರೆ ವೈರಸ್ ಸೋಂಕು ಇರುವಾಗ ಲೈಂಗಿಕ ಕ್ರಿಯೆಯು ಸಂಪೂರ್ಣವಾಗಿ ಅಪಾಯಕಾರಿಯಲ್ಲವೆಂದು ಭಾವಿಸಬೇಡಿ.

ಲೈಂಗಿಕ ಕ್ರಿಯೆ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಲೈಂಗಿಕ ಕ್ರಿಯೆ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಲೈಂಗಿಕ ಕ್ರಿಯೆ ಎನ್ನುವುದು ತುಂಬಾ ಅದಲುಬದಲಿನ ವ್ಯವಹಾರ. ಇಲ್ಲಿ ಒಬ್ಬರ ಬಾಯಿ ಜೊಲ್ಲು ಮತ್ತೊಬ್ಬರಿಗೆ ಹೋಗಬಹುದು. ಹರಡುವಂತಹ ರೋಗವಾಗಿದ್ದರೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲೇಬಾರದು. ನಿಮ್ಮ ಜನನಾಂಗವು ತಕ್ಷಣಕ್ಕೆ ವಿಕಿರಣಶೀಲವಾಗಿದೆ ಎನ್ನುವುದಕ್ಕೆ ಅಲ್ಲ. ಯಾಕೆಂದರೆ ಕೆಮ್ಮು ಮತ್ತು ಸೀನಿನಂತಹ ಸಾಂಕ್ರಾಮಿಕವಾಗುವಂತಹ ವೈರಸ್ ಇರುವವರೊಂದಿಗೆ ಯಾವುದೇ ರೀತಿಯ ಲೈಂಗಿಕ ಕ್ರಿಯೆ ನಡೆಸಿದಾಗ ಅದು ಹರಡುವುದು.

ಲೈಂಗಿಕ ಕ್ರಿಯೆ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಲೈಂಗಿಕ ಕ್ರಿಯೆ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಹೊಟ್ಟೆಯ ಜ್ವರದಿಂದ ಬಳಲುತ್ತಾ ಇರುವಂತಹ ವ್ಯಕ್ತಿಗಳು ಯಾವುದೇ ರೀತಿಯಿಂದಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಯಸುವುದಾದರೆ ಆಗ ಸ್ನಾನ ಮಾಡಿಕೊಂಡು ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನಲಾಗುತ್ತದೆ. ಜನರು ಇದನ್ನೆಲ್ಲಾ ತಮ್ಮ ಉಪಯೋಗಕ್ಕೆ ತಕ್ಕಂತೆ ಮಾಡಿಕೊಂಡಿರುವುದು. ಆದರೆ ದೇಹದಲ್ಲಿ ಮತ್ತು ಅದರ ಹೊರಗಡೆ ಗ್ಯಾಸ್ಟ್ರೋಎಂಟರೈಟಿಸ್ ಸೂಕ್ಷ್ಮಜೀವಿಗಳು ಸುಮಾರು 72 ಗಂಟೆಗಳ ಕಾಲ ಬದುಕುಳಿಯುವುದು. ಇದು ಬಾಯಿಯ ಮೂಲಕ ದೇಹದೊಳಗೆ ಪ್ರವೇಶಿಸಬಹುದು. ಲೈಂಗಿಕ ಕ್ರಿಯೆ ವೇಳೆ ತುಂಬಾ ಸುಲಭವಾಗಿರುವುದು. ಇದರಿಂದ ಲೈಂಗಿಕ ಕ್ರಿಯೆ ವೇಳೆ ವೈರಸ್ ನಿಂದ ಕಾಂಡೋಮ್ ಕೂಡ ಹರಡದಂತೆ ತಡೆಯುವುದಿಲ್ಲ.

ಲೈಂಗಿಕ ಕ್ರಿಯೆಯಿಂದ ಜ್ವರ ಕಡಿಮೆಯಾಗಲ್ಲ

ಲೈಂಗಿಕ ಕ್ರಿಯೆಯಿಂದ ಜ್ವರ ಕಡಿಮೆಯಾಗಲ್ಲ

ಲೈಂಗಿಕ ಕ್ರಿಯೆಯಿಂದ ಬರುವಂತಹ ಬೆವರು ಜ್ವರವನ್ನು ಹೊರಹಾಕುತ್ತದೆ ಮತ್ತು ಚೇತರಿಕೆಗೆ ನೆರವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದು ದೊಡ್ಡ ಸುಳ್ಳು. ಯಾಕೆಂದರೆ ಜ್ವರವನ್ನು ಬೆವರಿನ ಮೂಲಕ ಹೊರಹಾಕುವಂತಹ ಕ್ರಮವೇ ಸರಿಯಾದದ್ದಲ್ಲ. ಇದಕ್ಕಾಗಿ ನೀವು ಅತಿಯಾದ ಚಟುವಟಿಕೆ ಅಥವಾ ಹಲವಾರು ಕಂಬಳಿ ಹೊದ್ದುಕೊಂಡು ಬೆವರು ಬರುವಂತೆ ಮಾಡುವುದರಿಂದ ಜ್ವರ ಕಡಿಮೆ ಆಗಲ್ಲ. ಯಾವುದೇ ರೀತಿಯ ಸೋಂಕಿಗೆ ದೇಹದ ತಾಪಮಾನವು ಹೆಚ್ಚಾಗುವುದೇ ಜ್ವರ ಎಂದು ಕರೆಯಲಾಗುವುದು. ಇದರಿಂದ ಪ್ರತಿರೋಧಕ ಶಕ್ತಿಯು ಕಡಿಮೆಯಾಗುವುದು.

ಜ್ವರ ಮತ್ತು ಬೆವರಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ!

ಜ್ವರ ಮತ್ತು ಬೆವರಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ!

ಲೈಂಗಿಕ ಕ್ರಿಯೆ ನಡೆಸಿ ಬೆವರುವುದರಿಂದ ಜ್ವರ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ತಪ್ಪು. ಇದರಿಂದ ನೀವು ಬೇಗನೆ ಚೇತರಿಸಿಕೊಳ್ಳುವುದಕ್ಕೆ ಸಮಸ್ಯೆಯಾಗುವುದು. ಜ್ವರದಿಂದಾಗಿ ದೇಹವು ತುಂಬಾ ಬಳಲಿರುತ್ತದೆ. ಇಂತಹ ಸಮಯದಲ್ಲಿ ಅದಕ್ಕೆ ಮತ್ತಷ್ಟು ಒತ್ತಡ ಹಾಕುವುದರಿಂದ ಪರಿಸ್ಥಿತಿ ಕೆಡುವುದು. ನಿಮ್ಮ ಜ್ವರವು ಸಂಪೂರ್ಣವಾಗಿ ಗುಣಮುಖವಾಗುವ ತನಕ ಸೆಕ್ಸ್ ಬೇಡವೇ ಬೇಡ.

ಅನಾರೋಗ್ಯದಿಂದ ಇರುವಾಗ ಹಸ್ತಮೈಥುನ ಸರಿಯಾದ ಕ್ರಮವೇ?

ಅನಾರೋಗ್ಯದಿಂದ ಇರುವಾಗ ಹಸ್ತಮೈಥುನ ಸರಿಯಾದ ಕ್ರಮವೇ?

ಹಸ್ತಮೈಥುನ ದೇಹದ ದ್ರವ ಹಾಗೂ ಪ್ರಮುಖ ಖನಿಜಾಂಶಗಳನ್ನು ಹೊರಹಾಕುವುದು ಎಂದು ಹೇಳಲಾಗುತ್ತದೆ. ಇದರಿಂದ ಅನಾರೋಗ್ಯದ ವೇಳೆ ಹಸ್ತಮೈಥುನ ಮಾಡಬಾರದು ಎನ್ನಲಾಗುತ್ತದೆ. ನಿಮಗೆ ಹಸ್ತಮೈಥುನದ ಅಭ್ಯಾಸವಿದ್ದರೆ ಅದರ ಬಳಿಕ ನಿಮಗೆ ಐದು ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ. ಅತಿಯಾದ ವ್ಯಾಯಾಮದ ಕಾರಣಕ್ಕಾಗಿಯೂ ಇದನ್ನು ನೀವು ಕಡೆಗಣಿಸಬೇಕಾಗುತ್ತದೆ. ಆದರೆ ಸಾಮಾನ್ಯ ಯೋನಿ ದ್ರವ ಮತ್ತು ಖನಿಜಾಂಶ ಸ್ರವಿಸುವಿಕೆ ಒಳ್ಳೆಯದು. ಮಹಿಳೆಯರಲ್ಲಿ ಹಸ್ತಮೈಥುನ ವೇಳೆ ಖನಿಜಾಂಶಗಳು ಕಳೆದುಕೊಳ್ಳುವ ಬಗ್ಗೆ ಇದುವರೆಗೆ ಗಂಭೀರವಾಗಿ ಅಧ್ಯಯನಗಳು ನಡೆದಿಲ್ಲ.

ಅನಾರೋಗ್ಯದಿಂದ ಇರುವಾಗ ಹಸ್ತಮೈಥುನ ಸರಿಯಾದ ಕ್ರಮವೇ?

ಅನಾರೋಗ್ಯದಿಂದ ಇರುವಾಗ ಹಸ್ತಮೈಥುನ ಸರಿಯಾದ ಕ್ರಮವೇ?

ಇದರ ಪ್ರಮಾಣ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಹೆಚ್ಚು ಪರಿಣಾಮ ಬೀರದು. ಸತುವಿನಂತೆ ಕೆಲವೊಂದು ಖನಿಜಾಂಶಗಳನ್ನು ಸೇವನೆ ಮಾಡುತ್ತಾ ನೀವು ದೇಹವನ್ನು ತೇವಾಂಶದಿಂದ ಇಡಬೇಕು. ಇದರಿಂದ ಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ಆದರೆ ನೀವು ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಸೋಂಕು ಅಥವಾ ವೈರಸ್ ವೇಗವಾಗಿ ಹರಡುವುದು.

ಪ್ರತಿರೋಧಕ ಶಕ್ತಿ ಹೆಚ್ಚಾಗಲ್ಲ

ಪ್ರತಿರೋಧಕ ಶಕ್ತಿ ಹೆಚ್ಚಾಗಲ್ಲ

ನೀವು ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವ ಕಾರಣದಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ನಿಮ್ಮ ಪ್ರತಿರೋಧಕ ಶಕ್ತಿಯು ಹೆಚ್ಚಾಗದು. ಆರೋಗ್ಯವಾಗಿರುವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದರಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದು. ಆದರೆ ಅನಾರೋಗ್ಯದಲ್ಲಿ ಇದ್ದಾಗ ಅಲ್ಲ. ಈಗಾಗಲೇ ಸರಿಯಾಗಿರದ ಯಂತ್ರದ ಮೇಲೆ ಬೇಕಾದಷ್ಟು ಕೀಲೆಣ್ಣೆ ಸುರಿದಂತೆ ಪರಿಸ್ಥಿತಿ ಇದಾಗಿರುವುದು. ಸಮಸ್ಯೆಯನ್ನು ಅಪಾರ್ಥ ಮಾಡಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ.

English summary

Does Having Sex While Sick Help? Things To Know

It's nearing the end of the cold season and the beginning of Spring ... which means that everybody will shortly be developing spring colds and will still be sneezing everywhere in your office. It's a joyous time of year. But if you have concerns and beliefs about having sex while you're sick with a virus or infection, you may want to check up on them. There's a lot of misinformation about the spread of non-STD illnesses during sex, from the belief that you might get a virus from a flu-sufferer's sperm to the idea that sweaty sex might break a fever. (Both untrue, alas.)