For Quick Alerts
ALLOW NOTIFICATIONS  
For Daily Alerts

  ಕ್ಯಾನ್ಸರ್ ತಡೆಗಟ್ಟುವ ಪಿಜಾ ಬಗ್ಗೆ ನಿಮಗೆ ಗೊತ್ತಾ?

  By Sushma Charhra
  |

  ಕಳೆದ ಹಲವು ವರ್ಷಗಳಿಂದ ಮೆಡಿಟರೇನಿಯನ್ ಡಯಟ್ ಅಂದರೆ ಅದೊಂದು ಆರೋಗ್ಯಪೂರ್ಣವಾದ ಡಯಟ್ ಕ್ರಮ ಎಂದು ಪರಿಗಣಿಸಲಾಗುತ್ತಿದೆ. ಈ ಡಯಟ್ ನ ಅನುಸಾರ ಇದರಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟ್, ಅಗತ್ಯ ಪೋಷಕಾಂಶಗಳು, ಬಾಯಲ್ಲಿ ನೀರೂರಿಸುವ ಆಹಾರಗಳು, ಮತ್ತು ರುಚಿಯಾದ ಆಹಾರಗಳೂ ಕೂಡ ಇರುತ್ತವೆ.

  ಹಾಗಾಗಿ ಹಲವು ದಶಕಗಳಿಂದ ಅಧ್ಯಯನಕಾರರು ನೋಡಿರುವಂತೆ, ಈ ಮೆಡಿಟರೇನಿಯನ್ ಡಯಟ್ ಹೃದಯ ಸಂಬಂಧಿ ಹಲವು ಅಂಶಗಳಿಗೆ ಸಹಾಯ ಮಾಡುತ್ತೆ ಎಂದು ಹೇಳಿದ್ದಾರೆ. ಆದರೆ ಈಗ ಈ ಅಧ್ಯಯನಕಾರರು, ಈ ಮೆಡಿಟರೇನಿಯನ್ ಡಯಟ್ ನಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶಗಳಿವೆ ಎಂಬುದನ್ನು ಹೇಳುತ್ತಿದ್ದಾರೆ. ಪಾಸ್ಕಲಿನಾ ಪೀಝಾ ಇದೊಂದು ಪಿಝಾದ ಬಗೆಯಾಗಿದ್ದು, ಮೆಡಿಟರೇನಿಯನ್ ಆಹಾರ ಪದಾರ್ಥಗಳ ಸಮ್ಮಿಲನ ಇದರಲ್ಲಿ ಇರಲಿದೆ.

  ಈ ಪಿಜಾದಲ್ಲಿ ಯಾವುದೇ ಚೀಸ್ ಅಥವಾ ಮಾಂಸದ ಅಂಶವಿರುವುದಿಲ್ಲ.ಈ ಪೀಜಾದ ಮೇಲ್ಬಾಗದಲ್ಲಿ ಟೊಮೆಟೋ, ಆಲಿವ್, ಮತ್ತು ರಪಿನಿ ಇರಲಿದೆ. ರಪಿನಿ ಅಂದರೆ ಒಂದು ರೀತಿಯ ಬ್ರೋಕೋಲಿ ಆಗಿದೆ. ಸರಿಯಾದ ಪ್ರಮಾಣದಲ್ಲಿ ಈ ಪಾಸ್ಕಲಿನಾ ಪಿಜ್ಜಾಸೇವಿಸುವುದು ಕೆಲವು ರೀತಿಯ ಕ್ಯಾನ್ಸರ್ ಗಳನ್ನು ಉದಾಹರಣೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಕ್ಯಾನ್ಸರ್ ಅಂದರೆ ಕರುಳಿನ ಕ್ಯಾನ್ಸರ್ ಗಳ ರಿಸ್ಕ್ ನ್ನು ಕಡಿಮೆ ಮಾಡುತ್ತೆ ಎಂದು ಹೇಳಲಾಗುತ್ತಿದೆ.

  ಕ್ಯಾನ್ಸರ್ ತಡೆಗಟ್ಟುವ ಪಿಜಾ ಬಗ್ಗೆ ನಿಮಗೆ ಗೊತ್ತಾ?

  ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಪಿಜಾದ ಪಾತ್ರ..

  ಅಧ್ಯಯನಕಾರರು ತಿಳಿಸುವಂತೆ ಪಾಸ್ಕಲಿನಾ ಪಿಜಾವನ್ನು ಯಾರು ವಾರಕ್ಕೆ ಎರಡು ಬಾರಿ ಸೇವಿಸುತ್ತಾರೋ ಅಂತವರಲ್ಲಿ ಶೇಕಡಾ 59 ರಷ್ಟು ಅನ್ನನಾಳದ ಕ್ಯಾನ್ಸರ್ ನ ಅಂಶಗಳು ಅಧಿಕವಾಗುವುದು ಕಡಿಮೆಯಾಗುತ್ತೆ ಮತ್ತು ಶೇಕಡಾ 34 ರಷ್ಟು ಗಂಟಲು ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆಯಾಗುತ್ತೆ ಮತ್ತು ಶೇಕಡಾ 26 ರಷ್ಟು ಕರುಳಿನ ಕ್ಯಾನ್ಸರ್ ಬರುವುದು ನಿಯಂತ್ರಣಕ್ಕೆ ಬರುತ್ತೆ.

  ಈ ಪಿಜಾದಲ್ಲಿ ಹಲವು ಆಹಾರ ಪದಾರ್ಥಗಳಿದ್ದು ಅವು ಆಂಟಿ ಕ್ಯಾನ್ಸರ್ ಗಳಂತೆ ಕೆಲಸ ಮಾಡಿ ಲಾಭ ನೀಡುತ್ತೆ, ಚೆರ್ರೀ ಟೊಮೆಟೋ, ಬ್ರೋಕೊಲಿ ರೀತಿಯ ಪದಾರ್ಥಗಳಾದ ರಪಿನಿ, ಮತ್ತು ಆಲಿವ್ ಅಂಶಗಳು ಮನುಷ್ಯನ ಆಯಸ್ಸನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಮತ್ತು ಕ್ಯಾನ್ಸರ್ ನ್ನು ನಿಗ್ರಹಿಸುವ ಸಾಮರ್ಥ್ಯವಿದೆ. ಅಧ್ಯಯನಕಾರರು ಪಿಜ್ಜಾಸೇವನೆಯಿಂದ ಹಲವು ರೀತಿಯ ಕ್ಯಾನ್ಸರ್ ಗಳು ಬರುವುದಿಲ್ಲವಂತೆ, ಅದರಲ್ಲೂ ಪ್ರಮುಖವಾಗಿ ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ಬರುವುದು ತೀರಾ ವಿರಳವಾಗುತ್ತಂತೆ. ಟೊಮೆಟೋ ಈ ಪಿಜಾದ ಪ್ರಮುಖ ಪದಾರ್ಥವಾಗಿದೆ.

  ಟೊಮೆಟೋದಲ್ಲಿ ಲೈಕೋಪಿನ್ ಅಂಶ ಅಧಿಕವಾಗಿರುತ್ತೆ ಮತ್ತು ಅದುವೇ ಟೊಮೆಟೋಗೆ ಕೆಂಪು ವರ್ಣ ಬರುವಂತೆ ಮಾಡುವುದು. ಇದು ಬಲಿಷ್ಟ ಆಂಟಿ ಆಕ್ಸಿಡೆಂಟ್ ನಂತೆ ವರ್ತಿಸುತ್ತೆ. ಇದು ದೇಹದಲ್ಲಿ ಸುಲಭವಾಗಿ ಹೀರಿಹೋಗುತ್ತೆ ಮತ್ತು ಸಣ್ಣ ಪ್ರಮಾಣದ್ದೇ ಆದರೂ ಕೂಡ ಇದರ ಲಾಭಗಳು ಅತ್ಯಧಿಕವಾಗಿರುತ್ತದೆ. ಕೆಲವು ವರ್ಷಗಳ ಮುಂಚೆ ಪಿಜ್ಜಾ ಕ್ಯಾನ್ಸರ್ ನ್ನು ತಡೆಗಟ್ಟುತ್ತೆ ಎಂದು ಹೇಳಿದರೆ ಯಾರೂ ಒಪ್ಪಿಕೊಳ್ಳಲು ತಯಾರಿರಲಿಲ್ಲ, ಆದರೆ ಅಧ್ಯಯನವು 3,315 ಜೀರ್ಣಕ್ರಿಯೆ ಕ್ಯಾನ್ಸರ್ ಎದುರಿಸುತ್ತಿರುವ ರೋಗಿಗಳನ್ನು ಸುಮಾರು 5000 ಬೇರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಜೊತೆ ಹೋಲಿಗೆ ಮಾಡಿ ನೋಡಿದೆಯಂತೆ. ಆಹಾರ ಕ್ರಮಗಳ ಅಭ್ಯಾಸವನ್ನು ರೋಗಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನೋಡಿ ಜಡ್ಜ್ ಮಾಡಲಾಗಿದೆಯಂತೆ.

  ಈ ಪ್ರಶ್ನೆಗಳ ಪಟ್ಟಿಯಲ್ಲಿ ನೀವು ಎಷ್ಟು ದಿನಗಳಿಗೊಮ್ಮೆ ಪಿಜ್ಜಾ ಸೇವಿಸುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆಯಂತೆ. ಎಷ್ಟು ಪ್ರಮಾಣದ್ದು ಎಂಬ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೇ ಇದ್ದರೂ ಅಧ್ಯಯನಕಾರರು ಸಮತೋಲನವಾಗಿ ಪದೇ ಪದೇ ಪಿಜ್ಜಾ ಸೇವಿಸಿದ ರೋಗಿಗಳಲ್ಲಿ ಕ್ಯಾನ್ಸರ್ ಅಂಶದಿಂದ ದೂರವಿರಲು ಸಹಾಯಕವಾಗಿರುವುದನ್ನು ಗಮನಿಸಲು ಯಶಸ್ವಿಯಾಗಿದ್ದಾರಂತೆ. ಹೆಚ್ಚಿನ ಪಿಜಾಗಳಲ್ಲಿ ಟೋಮೆಟೋ ಸಾಸ್ ಇದ್ದೇ ಇರುತ್ತೆ ಮತ್ತು ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತಂತೆ. ಲೈಕೋಪಿನ್ ಎಂಬ ಅಂಶವನ್ನು ಏನು ನಾವು ಟೊಮೆಟೋದ ಚರ್ಮದಲ್ಲಿ ಗಮನಿಸುತ್ತೀವೋ ಅಂದು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ದೇಹದಲ್ಲಿ ಬೇಗನೆ ಹೀರಿಹೋಗುತ್ತೆ. ಯಾರು ಹೆಚ್ಚು ಲೈಕೋಪಿನ್ ಸೇವಿಸುತ್ತಾರೋ ಅಂತವರಲ್ಲಿ ಕಾಯಿಲೆಗಳ ಸಂಖ್ಯೆಯೂ ಕಡಿಮೆ ಇದೆಯಂತೆ.

  ಹಲವು ಅಧ್ಯಯನಕಾರರು ಪಿಜಾದಿಂದ ಕ್ಯಾನ್ಸರ್ ಬರುತ್ತೆ ಎಂಬುದಕ್ಕೆ ಆಧಾರ ನೀಡುತ್ತಾರೆ. ಆದರೆ ಪಿಜ್ಜಾತಿನ್ನುವುದರ ದುಷ್ಪರಿಣಾಮವೇನೆಂದರೆ ಸಣ್ಣವಯಸ್ಕರಲ್ಲಿ ತೂಕ ಹೆಚ್ಚಳವಾಗುವುದು ಮತ್ತು ಕ್ಯಾನ್ಸರ್ ನ ರಿಸ್ಕ್ ಹೆಚ್ಚಳವಾಗುವುದು. ಇದು ಹೊಸ ಅಧ್ಯಯನಕಾರ ಅಭಿಪ್ರಾಯ.ಈ ಅಧ್ಯಯನ ಮಾಡಿದ ವಿಜ್ಞಾನಿಗಳ ಅಭಿಪ್ರಾಯದಂತೆ ಇವರು DED(dietary energy density)ಯನ್ನು ಪರೀಕ್ಷೆ ಮಾಡಿದ್ದಾರೆ. ಮತ್ತು ಜರ್ನಲ್ ಆಫ್ ಅಕಾಡಮಿ ಆಫ್ ನ್ಯೂಟ್ರೀಷಿಯನ್ ಮತ್ತು ಡಯಟಿಕ್ಸ್ ಪ್ರಕಟ ಪಡಿಸಿರುವಂತೆ, ಪಿಜ್ಜಾಸೇವನೆಯಿಂದ 10 ಶೇಕಡಾ ಒಬೆಸಿಡಿ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಸಹಜ ತೂಕವಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆಯಂತೆ.

  ಡಯಟರಿ ಎನರ್ಜಿ ಡೆನ್ಸಿಟಿ ಎಂದರೆ ಆಹಾರ ಪದಾರ್ಥ ಮತ್ತು ನ್ಯೂಟ್ರೀಷಿಯಸ್ ಕ್ಯಾಲೋರಿಗಳ ನಡುವಿನ ಸಂಬಂಧವಾಗಿರುತ್ತದೆ. ಒಂದು ಗ್ರಾಮ್ ಆಹಾರದಲ್ಲಿಲ್ಲಿ ಹೆಚ್ಚು ಕ್ಯಾಲೋರಿ ಇದ್ದರೆ ಅದರ DED ಕೂಡ ಅಧಿಕವಾಗಿರುತ್ತದೆ. ಪ್ರೊಸೆಸ್ಡ್ ಆಹಾರಗಳಾದ ಪಿಝಾವು ಅತೀ ಹೆಚ್ಚು DED ಹೊಂದಿರುತ್ತದೆ ಯಾಕೆಂದರೆ ಹೆಚ್ಚು ನ್ಯೂಟ್ರಿಯಂಟ್ಸ್ ಪಡೆಯಬೇಕೆಂದರೆ ಹೆಚ್ಚು ಪಿಜ್ಜಾತಿನ್ನಬೇಕಾಗುತ್ತದೆ.

  ಅಧ್ಯಯನ ಮಾಡಿದ ವಿಜ್ಞಾನಿಗಳ ನಂಬಿಕೆ ಏನೆಂದರೆ DED ಹೆಚ್ಚಿರುವ ಆಹಾರಗಳನ್ನು ನಾರ್ಮಲ್ ತೂಕವಿರುವ ಮಹಿಳೆಯರು ಸೇವಿಸಿದಾಗ ಮೆಟಬಾಲಿಕ್ ಡಿಸ್ ರೆಗ್ಯುಲೇಷನ್ ಕಾಣಿಸಿಕೊಳ್ಳುತ್ತೆ ಮತ್ತು ಇದು ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.ಆದರೂ DED ಯು ಕ್ಯಾನ್ಸರ್ ರಿಸ್ಕ್ ನ ಮೇಲೆ ಎಷ್ಟರ ಪ್ರಮಾಣದಲ್ಲಿ ಪರಿಣಾಮ ಬೀರುತ್ತೆ ಎಂಬ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದ್ದು ಪುರುಷರಲ್ಲಿ ಮತ್ತು ಯುವಕ-ಯುವತಿಯರಲ್ಲಿ ಇದರ ಪರಿಣಾಮ ಹೇಗಿರುತ್ತೆ ಎಂಬ ಬಗ್ಗೆ ಮಾಹಿತಿ ತಿಳಿದುಬರಬೇಕಾಗಿದೆ...

  ನೆನಪಿಡಿ-

  ಪಿಜ್ಜಾದ ರುಚಿ ಹೆಚ್ಚಿಸಲು ಬಳಸಲಾಗುವ ಚೀಸ್ ಅತ್ಯಧಿಕ ಪ್ರಮಾಣದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿದ್ದು ರಕ್ತದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಶೀಘ್ರವಾಗಿ ಹೆಚ್ಚಿಸುತ್ತದೆ. ಒಂದು ವೇಳೆ ಮಾಂಸಾಹಾರಿ ಪಿಜ್ಜಾ ನಿಮ್ಮ ಆಯ್ಕೆಯಾದರೆ ಮಾಂಸದಲ್ಲಿರುವ ಕೊಬ್ಬುಗಳು ಸಹಾ ತಮ್ಮ ದೇಣಿಗೆಯನ್ನು ಸೇರಿಸುವ ಮೂಲಕ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶಗಳನ್ನು ವಿಪರೀತವಾಗಿ ಏರಿಸುತ್ತವೆ. ಹಾಗಾಗಿ ಪಿಜಾ ಅತಿಯಾಗಿ ಸೇವಿಸಬೇಡಿ 

  ಪಿಜ್ಜಾದ ರುಚಿ ಹೆಚ್ಚಿಸಲು ಉಪ್ಪಿನ ಜೊತೆ ಸೋಡಿಯಂ ಅನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಈ ಲವಣ ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಕಾರಣವಾಗಿದೆ. ಒಂದು ಇಡಿಯ ಪಿಜ್ಜಾ ತಿಂದ ಬಳಿಕ ದಿನದ ಅಗತ್ಯದ ಸಂಪೂರ್ಣ ಪ್ರಮಾಣದ ಸೋಡಿಯಂ ಅನ್ನು ಈ ಪಿಜ್ಜಾದಿಂದಲೇ ಪಡೆದುಕೊಂಡಂತಾಗಿದ್ದು ದಿನದ ಇತರ ಆಹಾರಗಳ ಮೂಲಕ ಸೇವಿಸುವ ಉಪ್ಪಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವಾಗಿ ಈಗಾಗಲೇ ಆವರಿಸಿದ್ದ ಅಧಿಕ ರಕ್ತದೊತ್ತಡವನ್ನು ಇನ್ನಷ್ಟು ಅಧಿಕವಾಗಿಸುತ್ತದೆ. 

  English summary

  Do You Know About The Cancer-preventing Pizza?

  The Mediterranean diet is thought to be one of the healthiest forms of diet for numerous years. This form of diet comprises unsaturated fats, sufficient amount of nutrients, and delicious and mouth-watering food. Through many decades researchers observed that this Mediterranean diet helped in preventing heart ailments but now these researchers are also claiming that this form of diet is also providing cancer-preventing benefits.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more