Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಟ್ಟೆಯ ಬೊಜ್ಜು ಕರಗಿಸುತ್ತೆ ಇಂತಹ ಪವರ್ ಫುಲ್ ಆಹಾರಗಳು
ಹೊಟ್ಟೆಯ ಕೊಬ್ಬ ಅಪಾಯಕರ! ಅನಾರೋಗ್ಯದ ಜೊತೆಗೇ ಸಹಜ ಸೌಂದರ್ಯವನ್ನು ಇದು ಕಳೆಗುಂದಿಸುವುದು ಮಾತ್ರವಲ್ಲ, ವಿಶೇಷವಾಗಿ ಮಹಿಳೆಯರಿಗೆ ತಮ್ಮ ನೆಚ್ಚಿನ ಹಲವಾರು ಉಡುಪುಗಳನ್ನು ತೊಡಲೂ ಸಾಧ್ಯವಾಗುವುದಿಲ್ಲ. ಸ್ಥೂಲಕಾಯ, ಅದರಲ್ಲೂ ಸೊಂಟದ ಕೊಬ್ಬು ಮಧುಮೇಹ, ಹೃದಯದ ಕಾಯಿಲೆ ಹಾಗೂ ಇನ್ಸುಲಿನ್ ವಿರೋಧಿ ಗುಣ ಮೊದಲಾದವುಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಕೊಬ್ಬು ಯಾರಿಗೂ, ಲಿಂಗ, ವಯಸ್ಸಿನ ಅಂತರವಿಲ್ಲದೇ ಯಾವುದೇ ವಯಸ್ಸಿನಲ್ಲಿ ಆವರಿಸಬಹುದು.

ಹಾಗಾಗಿ, ಒಂದು ವೇಳೆ ಈಗಾಗಲೇ ಸೊಂಟದ ಕೊಬ್ಬು ಆವರಿಸತೊಡಗಿದ್ದರೆ ತಕ್ಷಣವೇ ಈ ಕೊಬ್ಬಿನ ಸಂಗ್ರಹವನ್ನು ಹೆಚ್ಚಿಸುವ ಆಹಾರಗಳ ಸೇವನೆಯನ್ನು ನಿಲ್ಲಿಸಬೇಕು. ಇಂದಿನ ಲೇಖನದಲ್ಲಿ ಈ ಆಹಾರಗಳ ಬದಲಿಗೆ ಕೊಬ್ಬನ್ನು ಬಳಸಿಕೊಂಡು ಕರಗಿಸುವ ಕೆಲವು ಆಹಾರಗಳ ಬಗ್ಗೆ ವಿವರಿಸಲಾಗಿದ್ದು ಇವುಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಸೊಂಟದ ಕೊಬ್ಬನ್ನು ಕರಗಿಸಿಕೊಂಡು ಉತ್ತಮ ಆರೋಗ್ಯ ಪಡೆಯುವ ಜೊತೆಗೇ ಸಂತೋಷಕರ ಜೀವನವನ್ನೂ ನಡೆಸಬಹುದು.

ಬಾದಾಮಿಗಳು
ಕೆಲವು ಬಾದಾಮಿಗಳನ್ನು ತಿನ್ನುವ ಮೂಲಕ ಹೊಟ್ಟೆ ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡುತ್ತದೆ ಹಾಗೂ ಇದರಲ್ಲಿರುವ ಕೊಬ್ಬುಗಳು ಆರೋಗ್ಯಕ್ಕೆ ಪೂರಕವೂ ಹೌದು ಹಾಗೂ ದೇಹಕ್ಕೆ ಹೆಚ್ಚುವರಿ ಕ್ಯಾಲೋರಿಗಳನ್ನೂ ನೀಡುವುದಿಲ್ಲ. ಇದರಲ್ಲಿ ಪೋಷಕಾಂಶಗಳು ಸಮೃದ್ದವಾಗಿದ್ದು ಸಸ್ಯಾಹಾರಿಗಳಿಗೂ ಕೊಬ್ಬು ಕರಗಿಸಲು ಸೂಕ್ತವಾದ ಆಹಾರವಾಗಿದೆ. ಅಲ್ಲದೇ ಇದರಲ್ಲಿರುವ ಒಮೆಗಾ ೩ ಕೊಬ್ಬಿನಾಮ್ಲಗಳು ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುವ ಜೊತೆಗೇ ಶಕ್ತಿಯನ್ನೂ ಒದಗಿಸುತ್ತವೆ.

ಪಾಲಕ್ ಹಾಗೂ ಇತರ ಹಸಿರು ತರಕಾರಿಗಳು
ಪಾಲಕ್, ಕೇಲ್ ಎಲೆಗಳು, ಹಸಿಯಾಗಿ ಸೇವಿಸಬಹುದಾದ ಎಲೆಗಳು, ಬಿಳಿ ಮೂಲಂಗಿ, ಕ್ಯಾರೆಟ್, ಬ್ರೋಕೋಲಿ ಹಾಗೂ ಕೆಂಪುಮೂಲಂಗಿ ಮೊದಲಾದವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಇವುಗಳಲ್ಲಿರುವ ವಿಟಮಿನ್ನುಗಳು, ಖನಿಜಗಳು, ನೀರಿನಂಶ ಹಾಗೂ ಕರಗದ ನಾರು ಲಭಿಸುತ್ತದೆ. ಈ ಆಹಾರಗಳನ್ನು ಸೇವಿಸುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆಯಿಂದ ಇನ್ನಷ್ಟು ಆಹಾರ ಸೇವಿಸದಂತೆ ತಡೆಯುತ್ತದೆ ಹಾಗೂ ಈ ಮೂಲಕ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೂ ಕರುಳುಗಳನ್ನು ಸ್ವಚ್ಛಗೊಳಿಸಲೂ ನೆರವಾಗುತ್ತದೆ. ಈ ಆಹಾರಗಳಲ್ಲಿ ಕ್ಯಾಲೋರಿಗಳೂ ಕಡಿಮೆ ಇರುತ್ತವೆ ಹಾಗೂ ಅನಾರೋಗ್ಯಕರ ಕುರುಕುತಿಂಡಿಗಳನ್ನು ತಿನ್ನುವ ಬದಲು ಸೌತೆ, ಕ್ಯಾರೆಟ್ ಬೀಟ್ರೂಟ್ ಮೊದಲಾದವುಗಳನ್ನು ಸೇವಿಸುವ ಮೂಲಕ ಆನಾರೋಗ್ಯಕರ ಸಿದ್ದ ಆಹಾರಗಳನ್ನು ಸೇವಿಸುವ ಬಯಕೆಯಿಂದ ದೂರವಿರಬಹುದು.

ಬೆಣ್ಣೆಹಣ್ಣು
ಬರೆಯ ಅರ್ಧ ಬೆಣ್ಣೆಹಣ್ಣಿನಲ್ಲಿ ಹತ್ತು ಗ್ರಾಂನಷ್ಟು ಆರೋಗ್ಯಕರ ಏಕಸಂತೃಪ್ತ ಕೊಬ್ಬುಗಳಿರುತ್ತವೆ. ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಥಟ್ಟನೇ ಏರದಂತೆ ತಡೆಯಲು ಸಕ್ಷಮವಾಗಿವೆ. ಹೀಗೆ ಥಟ್ಟನೇ ಏರುವ ಸಕ್ಕರೆಯ ಮಟ್ಟ ಸೊಂಟದ ಕೊಬ್ಬು ಏರಲು ಪ್ರಮುಖ ಕಾರಣವಾಗಿದೆ. ಬೆಣ್ಣೆಹಣ್ಣಿನಲ್ಲಿ ಕೊಬ್ಬಿಗಳಿವೆ, ಆದರೆ ಇವು ಆರೋಗ್ಯಕ್ಕೆ ಪೂರಕವಾಗಿದ್ದು ಹೊಟ್ಟೆಯುಬ್ಬರಿಕೆಯಿಂದ ತಡೆಯುತ್ತವೆ ಹಾಗೂ ಟೊಮಾಟೋ ಕ್ಯಾರೆಟ್, ಪಾಲಕ್ ಹಾಗೂ ಚಳಿಗಾಲದಲ್ಲಿ ಲಭಿಸುವ ಹಣ್ಣುಗಳ ಸೇವನೆಯಿಂದ ಲಭಿಸುವ ಕ್ಯಾರೋಟಿನಾಯ್ಡುಗಳನ್ನು ಹೆಚ್ಚು ಹೆಚ್ಚಾಗಿ ಹೀರಿಕೊಳ್ಳಲು ನೆರವಾಗುತ್ತವೆ ಹಾಗೂ ಈ ಕ್ಯಾರೋಟಿನಾಯ್ಡುಗಳಲ್ಲಿರುವ ಕ್ಯಾನ್ಸರ್ ವಿರುದ್ದ ಹೋರಾಡುವ ಗುಣವನ್ನು ದೇಹ ಪಡೆಯಲು ನೆರವಾಗುತ್ತದೆ. ವಾಸ್ತವದಲ್ಲಿ, ಸಾಲಾಡ್ ಗಳ ಜೊತೆಗೇ ಬೆಣ್ಣೆಹಣ್ಣನ್ನೂ ಸೇವಿಸುವ ಅಭ್ಯಾಸವಿರುವ ವ್ಯಕ್ತಿಗಳಲ್ಲಿ ಕ್ಯಾರೋಟಿನಾಯ್ಡುಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಇತರ ವ್ಯಕ್ತಿಗಳಿಗಿಂತ ಹದಿನೈದು ಪಟ್ಟು ಹೆಚ್ಚಾಗಿರುತ್ತದೆ ಎಂದು ಕೊಲಂಬಸ್ ನಗರದಲ್ಲಿರುವ ಓಹಿಯೋ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಬಾಳೆಹಣ್ಣು
ಬಾಳೆಹಣ್ಣಿನ ಒಂದು ಪ್ರಮಾಣದಲ್ಲಿ 422 ಮಿಲಿಗ್ರಾಂ ಪೊಟ್ಯಾಶಿಯಂ ಇದೆ. ಈ ಖನಿಜ ಸೋಡಿಯಂ ಲವಣದ ಮಟ್ಟವನ್ನು ನಿಯಂತ್ರಿಸುವ ಮೂಲಕ ಸೊಂಟದ ಕೊಬ್ಬಿನ ಸಂಗ್ರಹವನ್ನೂ ನಿಯಂತ್ರಿಸುತ್ತದೆ.

ಮೊಸರು
ಊಟದ ಜೊತೆಗೆ ಒಂದು ಕಪ್ ಮೊಸರಿನ ಸೇವನೆಯಿಂದ ಹೊಟ್ಟೆಯಲ್ಲಿ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಉತ್ತಮವಾದ ಬೆಳವಣಿಗೆ ಪಡೆಯುತ್ತವೆ ಹಾಗೂ ಹೊಟ್ಟೆಯುಬ್ಬರಿಕೆಗೆ ಕಾರಣವಾಗುವ ಇತರ ಕ್ರಿಮಿಗಳನ್ನು ನಿವಾರಿಸುತ್ತದೆ. ಮೊಸರಿನ ಒಂದು ವಿಧವಾದ ಕ್ರೀಮಿ ಗ್ರೀಕ್ ಯೋಗರ್ಟ್ ಎಂಬ ಉತ್ಪನ್ನ ರುಚಿಕರವಾಗಿರುವ ಜೊತೆಗೇ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳ ಮಿಶ್ರಣವೂ ಆಗಿದ್ದು ದೇಹದಲ್ಲಿರುವ ಇನ್ಸುಲಿನ್ ಎಂಬ ರಸದೂತವನ್ನು ಸ್ಥಿರೀಕರಿಸಲು ನೆರವಾಗುತ್ತದೆ, ತನ್ಮೂಲಕ ಇದರ ಮಟ್ಟ ಏರಿದರೆ ದೇಹ ಕ್ಯಾಲೋರಿಗಳನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಲು ಸೂಚನೆ ನೀಡುವುದನ್ನು ತಡೆಯುವ ಮೂಲಕ ಕೊಬ್ಬಿನ ಸಂಗ್ರಹದಿಂದ ರಕ್ಷಿಸುತ್ತದೆ.

ಬೆರ್ರಿ ಹಣ್ಣುಗಳು
ನಮ್ಮ ಅಹಾರದಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕ ಒದಗಿಸುತ್ತದೆ. ಈ ಮೂಲಕ ವ್ಯಾಯಾಮದ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ. ವ್ಯಾಯಾಮಕ್ಕೂ ಮುನ್ನ ಮೊಸರಿನೊಂದಿಗೆ ಕೊಂಚ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ವ್ಯಾಯಾಮಕ್ಕೆ ಹೆಚ್ಚಿನ ಶಕ್ತಿ ದೊರಕುವಂತಾಗುತ್ತದೆ.

ಹಸಿರು ಟೀ
ದಿನಕ್ಕೆ ಮೂರು ಕಪ್ ನಷ್ಟು ಹಸಿರು ಟೀ ಕುಡಿಯುವ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ಸುಮಾರು ಮೂವತ್ತು ಕ್ಯಾಲೋರಿಗಳನ್ನು ದಹಿಸಲು ಸಾಧ್ಯವಾಗುತ್ತದೆ. Medicine & Science in Sports & Exercise shows ಎಂಬ ಸಂಸ್ಥೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ. ಹಸಿರು ಟೀಯಲ್ಲಿರುವ ECGC ಎಂಬ ಸಂಯುಕ್ತ ಕೊಬ್ಬನ್ನು ಹೆಚ್ಚು ಹೆಚ್ಚಾಗಿ ಕರಗಿಸಲು ನೆರವಾಗುತ್ತದೆ.

ಲಿಂಬೆ
ಲಿಂಬೆ, ಕೆಂಪು ದೊಣ್ಣೆಮೆಣಸು ಮೊದಲಾದ ಲಿಂಬೆಜಾತಿಯ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ದವಾಗಿದ್ದು ವ್ಯಾಯಾಮದ ಸಮಯದಲ್ಲಿ ಇತರ ಸಮಯಕ್ಕಿಂತಲೂ ಮೂವತ್ತು ಶೇಖಡಾ ಹೆಚ್ಚು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಮೇಸಾದಲ್ಲಿರುವ ಅರಿಜೋನಾ ರಾಜ್ಯ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ.

ಇಡಿಯ ಧಾನ್ಯಗಳು
ಕಾರ್ಬೋಹೈಡ್ರೇಟುಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುತ್ತಿದ್ದರೆ ನಿಮಗೆ ಅಭಿನಂದನೆಗಳು, ಓಟ್ಸ್, ಕಂದು ಅಕ್ಕಿ ಹಾಗೂ ಗೋಧಿಯ ಖಾದ್ಯಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆ ಇರಲು ನೆರವಾಗುತ್ತದೆ. ಕೆಲವು ಸಂಶೋಧಕರ ಪ್ರಕಾರ ಇವು ಕೊಬ್ಬಿನ ಜೀವಕೋಶಗಳನ್ನು ಸಂಕುಚಿತಗೊಳಿಸಲು ನೆರವಾಗುತ್ತವೆ. ಈ ಅಹಾರಗಳಲ್ಲಿರುವ ಪೋಷಕಾಂಶಗಳನ್ನು ದೇಹ ನಿಧಾನವಾಗಿ ಹೀರಿಕೊಂಡು ಬಳಸಿಕೊಳ್ಳುವ ಮೂಲಕ ಹೆಚ್ಚು ಹೊತ್ತು ಸತತವಾಗಿ ಶಕ್ತಿಯನ್ನು ಪೂರೈಸಲು ನೆರವಾಗುತ್ತದೆ. ಮೈದಾ ಮತ್ತು ಪಾಲಿಶ್ ಮಾಡಿದ ಅಕ್ಕಿಯ ಬದಲಿಗೆ ಇಡಿಯ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯವೂ ಉತ್ತಮಗೊಳ್ಳುತ್ತದೆ.



Click it and Unblock the Notifications