For Quick Alerts
ALLOW NOTIFICATIONS  
For Daily Alerts

ಪುರುಷರಿಗೂ ಗುಟ್ಟಾಗಿ ಕಾಡುವ ಲೈಂಗಿಕ ರೋಗ! ಇಲ್ಲಿದೆ ಲಕ್ಷಣಗಳು ಹಾಗೂ ಚಿಕಿತ್ಸೆಗಳು

By Hemanth
|

ಭಾರತದಲ್ಲಿ ಸೆಕ್ಸ್ ಎನ್ನುವ ಶಬ್ದ ಕೇಳಿದರೆ ಸಾಕು, ಆಚೀಚೆ ನೋಡಿ ಮಾತನಾಡುವರು. ಇನ್ನು ಸೆಕ್ಸ್ ಗೆ ಸಂಬಂಧಿಸಿದ ರೋಗಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಲೈಂಗಿಕವಾಗಿ ಹರಡುವಂತಹ ರೋಗಗಳ ಬಗ್ಗೆ ತುಟಿಬಿಚ್ಚಲ್ಲ. ಆದರೆ ಅಮೆರಿಕನ್ ಸೆಕ್ಸುವಲ್ ಹೆಲ್ತ್ ಅಸೋಸಿಯೇಶನ್ ಪ್ರಕಾರ ಅರ್ಧದಷ್ಟು ಮಂದಿ ಜೀವಮಾನದಲ್ಲಿ ಒಂದಲ್ಲ ಒಂದು ರೀತಿಯ ಲೈಂಗಿಕ ರೋಗಕ್ಕೆ ತುತ್ತಾಗುವುದು ಖಚಿತ. ಇದನ್ನು ಯಾರು ಹೇಳಿಕೊಳ್ಳಲ್ಲ.

ಇದರಿಂದ ಲೈಂಗಿಕ ರೋಗಗಳ ಲಕ್ಷಣಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಪುರುಷರಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ರೋಗಗಳು...

ಹ್ಯೂಮನ್ ಪ್ಯಾಪಿಲೋಮಾವೈರಸ್(ಎಚ್ ಪಿವಿ)

ಹ್ಯೂಮನ್ ಪ್ಯಾಪಿಲೋಮಾವೈರಸ್(ಎಚ್ ಪಿವಿ)

ಪುರುಷರು ಹಾಗೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲೈಂಗಿಕ ರೋಗವೇ ಎಚ್ ಪಿವಿ. ಮಹಿಳೆಯರು ಮತ್ತು ಪುರುಷರು ತಮ್ಮ ಜೀವಮಾನದಲ್ಲಿ ನಡೆಸುವ ಲೈಂಗಿಕ ಕ್ರಿಯೆ ವೇಳೆ ಒಂದು ಸಲವಾದರೂ ಎಚ್ ಪಿವಿ ಪಡೆಯುವರು ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೊಲ್ ಆ್ಯಂಡ್ ಪ್ರಿವೆಂಟೇಷನ್ (ಸಿಡಿಸಿಪಿ) ಹೇಳಿದೆ. ಎಚ್ ಪಿವಿಯಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಾದ ಜನನಾಂಗದ ನರೂಲಿ ಮತ್ತು ಕ್ಯಾನ್ಸರ್ ತರಬಹುದು. ಹೆಚ್ಚಿನ ಜನರಿಗೆ ತಮಗೆ ಎಚ್ ಪಿವಿ ತಗುಲಿರುವುದು ಗೊತ್ತೇ ಆಗಲ್ಲ. ಇದು ಯಾವುದೇ ಲಕ್ಷಣ ಮತ್ತು ಆರೋಗ್ಯ ಸಮಸ್ಯೆ ಉಂಟು ಮಾಡಲ್ಲ. ಜನನಾಂಗದ ನರೂಲಿಗಳನ್ನು ಕಂಡಾಗ ಕೆಲವರಿಗೆ ಎಚ್ ಪಿವಿ ಇರುವುದು ತಿಳಿದುಬರಬಹುದು. ಈ ವೈರಸ್ ಗೆ ಈಗ ಔಷಧಿಯಿದೆ. ಆದರೆ ಈಗಾಗಲೇ ಸೋಂಕು ಹರಡಿರುವವರಿಗೆ ಯಾವುದೇ ಚಿಕಿತ್ಸೆಯಿಲ್ಲ.

ಜನನಾಂಗದ ಹರ್ಪಿಸ್

ಜನನಾಂಗದ ಹರ್ಪಿಸ್

ಮಹಿಳೆಯರಲ್ಲಿ ಜನನಾಂಗದ ಹರ್ಪಿಸ್ ಸಾಮಾನ್ಯ. ಆದರೆ ಅಮೆರಿಕಾದಲ್ಲಿ ಪ್ರತೀ ಐದರಲ್ಲಿ ಒಬ್ಬರು ಪುರುಷರಿಗೆ ಈ ಸಮಸ್ಯೆ ಕಾಡುವುದು. ಈ ಲೈಂಗಿಕ ಕಾಯಿಲೆ ಇರುವವರು ಹೆಚ್ಚಾಗಿ 25ರ ಹರೆಯದವರು ಅಥವಾ ಅದಕ್ಕಿಂತ ಕಡಿಮೆ ಪ್ರಾಯದವರು. ಈ ಲೈಂಗಿಕ ರೋಗಗಳನ್ನು ಎರಡು ಭಿನ್ನ ವೈರಸ್ ಗಳಾಗಿರುವ ಎಚ್ ಎಸ್ ವಿ 1 ಮತ್ತು ಎಚ್ ಎಸ್ ವಿ 2 ಹರಡುವುದು. ಈ ಸೋಂಕು ಇರುವವರೊಂದಿಗೆ ನೀವು ಯೋನಿ, ಬಾಯಿ ಅಥವಾ ಗುದ ಸೆಕ್ಸ್ ನಡೆಸಿದರೂ ಇದು ಬರುವುದು. ಸೋಂಕು ಇರುವಂತಹ ವ್ಯಕ್ತಿಯಲ್ಲಿ ಲಕ್ಷಣಗಳು ಕಾಣಿಸದೆ ಇರಬಹುದು. ಈ ಲೈಂಗಿಕ ಕಾಯಿಲೆಗೆ ಯಾವುದೇ ಔಷಧಿಯಿಲ್ಲ. ಆದರೆ ಇದು ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡುವುದಿಲ್ಲವಾದರೂ ಕಿರಿಕಿರಿ ಉಂಟು ಮಾಡುವುದು.ಜನನಾಂಗದ ಹರ್ಪಿಸ್‌ನ ಕೆಲವು ಸಾಮಾನ್ಯ ರೋಗಲಕ್ಷಣಗಳು ಜನನಾಂಗದ ಪ್ರದೇಶದ (ಶಿಶ್ನ ಮತ್ತು ಯೋನಿಯ) ನೋವು, ಜನನಾಂಗದ ಪ್ರದೇಶದಲ್ಲಿನ ಮತ್ತು ಸುತ್ತಲಿನ ತುರಿಕೆ, ಜನನಾಂಗದ ಪ್ರದೇಶದಲ್ಲಿ ಹುಣ್ಣುಗಳ ರಚನೆ, ಜನನಾಂಗದ ಪ್ರದೇಶದಲ್ಲಿ ಗುಳ್ಳೆಗಳು, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಸಂಭೋಗದ ಸಮಯದಲ್ಲಿ ನೋವು ಚರ್ಮದ ದದ್ದುಗಳು, ಜನನಾಂಗದ ಪ್ರದೇಶದಲ್ಲಿ ಪಿನ್ ಗಳು ಮತ್ತು ಸೂಜಿಗಳ ಸಂವೇದನೆ, ಮರುಕಳಿಸುವ ಜ್ವರ, ಊದಿಕೊಂಡ ದುಗ್ಧರಸ ಗ್ರಂಥಿಗಳು, ಕಡಿಮೆ ರೋಗನಿರೋದಕ ಶಕ್ತಿ, ಇತ್ಯಾದಿ.

ಕ್ಲಾಮಿಡಿಯಾ

ಕ್ಲಾಮಿಡಿಯಾ

ಕ್ಲಾಮಿಡಿಯಾ ಸಾಮಾನ್ಯ ಲೈಂಗಿಕ ಕಾಯಿಲೆಯಾಗಿದ್ದು, ಶೇ. 25ರಿಂದ 50ರಷ್ಟು ಭಾದಿತ ಪುರುಷರಲ್ಲಿ ಇದು ಪತ್ತೆಯಾಗುವುದಿಲ್ಲ. ಯಾಕೆಂದರೆ ಇದು ಪುರುಷರಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಕ್ಲಾಮಿಡಿಯಾವು ಪುರುಷರಲ್ಲಿ ಗಂಭೀರ ರೀತಿಯ ಆರೋಗ್ಯ ಸಮಸ್ಯೆ ಉಂಟುಮಾಡುವುದು ತುಂಬಾ ಅಪರೂಪ. ಆದರೆ ಕೆಲವೊಂದು ಸಲ ವೃಷಣದಿಂದ ವೀರ್ಯವನ್ನು ಸರಬರಾಜು ಮಾಡುವ ನಾಳಗಳಿಗೆ ಈ ಸೋಂಕು ಹರಡಬಹುದು. ಇದರಿಂದ ನೋವು ಮತ್ತು ಜ್ವರ ಕಾಣಿಸಬಹುದು. ಕ್ಲಾಮಿಡಿಯಾವು ಪುರುಷರು ಸಂತಾನೋತ್ಪತ್ತಿ ಮಾಡದಂತೆ ತಡೆಯಬಹುದು. ಆದರೆ ಇದು ತುಂಬಾ ಅಪರೂಪ. ಶಿಶ್ನದಿಂದ ಡಿಸ್ಚಾರ್ಚ್ ಆಗುವುದು, ಮೂತ್ರ ವಿಸರ್ಜನೆ ವೇಳೆ ಉರಿಯೂತ ಮತ್ತು ನೋವು. ಜನನಾಂಗಗಳು ಊದಿಕೊಳ್ಳುವುದು ಇದರ ಲಕ್ಷಣಗಳು. ಇದನ್ನು ಕೆಲವೊಂದು ಆ್ಯಂಟಿಬಯೋಟಿಕ್ ನೀಡುವ ಮೂಲಕ ಪರಿಹರಿಸಿಕೊಳ್ಳಬಹುದು.

ಗೊನೊರಿಯಾ

ಗೊನೊರಿಯಾ

ಪುರುಷರು ಹಾಗೂ ಮಹಿಳೆಯರಲ್ಲಿ ಗೊನೊರಿಯಾ ಕಾಯಿಲೆಯು ಸಾಮಾನ್ಯವಾಗಿರುವುದು. ಪ್ರತೀ ವರ್ಷ ಅಮೆರಿಕಾದಲ್ಲೇ ಸುಮಾರು 8,20,000 ಗೊನೊರಿಯಾ ಸೋಂಕು ಪತ್ತೆಯಾಗುತ್ತಿದೆ ಎಂದು ಸಿಡಿಸಿಪಿ ಹೇಳಿದೆ. ಹೆಚ್ಚಿನ ಪುರುಷರಲ್ಲಿ ಗೊನೊರಿಯಾದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. ಪುರುಷರಲ್ಲಿ ಈ ಸೋಂಕು ಕಾಣಿಸಿಕೊಂಡಾಗ 14 ದಿನಗಳಲ್ಲಿ ಬಿಳಿ, ಹಳದಿ ಅಥವಾ ಹಸಿರು ಬಣ್ಣದ ಡಿಸ್ಚಾರ್ಚ್ ಆಗುವುದು ಕಂಡುಬರುವುದು. ಎಪಿಡಿಡಿಮಿಮಿಸ್ ನಿಂದ ಮೂತ್ರನಾಳದ ಸೋಂಕು ಸಂಕೀರ್ಣಗೊಂಡರೆ ಆಗ ಗೊನೊರಿಯಾ ಇರುವವರಲ್ಲಿ ಜನನಾಂಗದ ನೋವು ಕಾಣಿಸಬಹುದು. ಆ್ಯಂಟಿಬಯೋಟಿಕ್ ನಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಸಿಫಿಲಿಸ್

ಸಿಫಿಲಿಸ್

ಇತರ ಲೈಂಗಿಕ ಕಾಯಿಲೆಗಳಂತೆ ಸಿಫಿಲಿಸ್ ಸಾಮಾನ್ಯವಲ್ಲ. 2014ರಲ್ಲಿ ಸಿಫಿಲಿಸ್ ಸೋಂಕಿಗೆ 63, 450 ಮಂದಿ ತುತ್ತಾಗಿದ್ದಾರೆ ಎಂದು ಸಿಡಿಸಿಪಿ ವರದಿಗಳು ಹೇಳಿವೆ. ಈ ಕಾಯಿಲೆಯು ಪುರುಷರಲ್ಲಿ ಹೆಚ್ಚಾಗಿ ಕಂಡುಬರುವುದು. ಅದರಲ್ಲೂ ಸಲಿಂಗ ಕಾಮಿ ಪುರುಷರಲ್ಲಿ ಇದು ಸಾಮಾನ್ಯ. ಆ್ಯಂಟಿ ಬಯೋಟಿಕ್ ನಿಂದ ಈ ಸೋಂಕನ್ನು ನಿವಾರಣೆ ಮಾಡಬಹುದು. ಸಿಫಿಲಿಸ್ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುವುದು. ಪ್ರತಿಯೊಂದಕ್ಕೂ ತನ್ನದೇ ಆಗಿರುವಂತಹ ಲಕ್ಷಣಗಳು ಇವೆ. ಉದಾಹರಣೆಗೆ ಮೊದಲ ಹಂತದಲ್ಲಿ ಸಿಫಿಲಿಸ್ ಜನನಾಂಗದಲ್ಲಿ ಊತ ಮೂಲಕ ಕಾಣಿಸಬಹುದು. ಆದರೆ ಒಳಗಿನಿಂದ ಕೂದಲು ಬೆಳವಣಿಗೆಯಾಗಿ ಹೀಗೆ ಆಗಿರಬಹುದು ಎಂದು ಭಾದಿತರು ಭಾವಿಸಬಹುದು. ಎರಡನೇ ಹಂತದಲ್ಲಿ ಸೋಂಕು ತಗಲಿರುವ ವ್ಯಕ್ತಿಯ ಸಂಪೂರ್ಣ ದೇಹದ ಮೇಲೆ ಕೆಂಪುಕಲೆಗಳು ಕಂಡುಬರುವುದು. ಅಂತಿಮ ಹಂತದಲ್ಲಿ ಸೋಂಕು ಕೆಲವು ಒಳಗಿನ ಅಂಗಾಂಗಗಳಾದ ಮೆದುಳು, ನರಗಳು, ಕಣ್ಣು, ಹೃದಯ, ರಕ್ತನಾಳ, ಯಕೃತ್, ಮೂಳೆ ಮತ್ತು ಗಂಟುಗಳಿಗೆ ಹಾನಿಯುಂಡು ಮಾಡಬಹುದು. ಸಿಲಿಫಿಸ್ ನ ಕೊನೆಯ ಹಂತದಲ್ಲಿ ಸ್ನಾಯುಗಳು ಸರಿಯಾಗಿ ಚಲಿಸಲು ಶ್ರಮಪಡುವುದು, ಪಾರ್ಶ್ವವಾಯು, ಮರಗಟ್ಟುವಿಕೆ, ಕಣ್ಣು ಮಂದವಾಗುವುದು ಮತ್ತು ಬುದ್ಧಿಮಾಂದ್ಯತೆ.

English summary

Common STDs In Men, Their Symptoms And Treatments

No one likes talking about sexually transmitted diseases, but according to the American Sexual Health Association, nearly half of us will get one at some point in our lifetime. For that reason, it’s important to recognize the signs of an STD so that you can treat the infection before it becomes a serious health risk. Here are the most common STDs among men.
X
Desktop Bottom Promotion