For Quick Alerts
ALLOW NOTIFICATIONS  
For Daily Alerts

ನುಗ್ಗೆಸೊಪ್ಪು+ ಶುಂಠಿಯ ಜೋಡಿ- ಬರೋಬ್ಬರಿ ಏಳು ರೋಗಕ್ಕೆ ಮದ್ದು

|

ನುಗ್ಗೆ ಸೊಪ್ಪು ಮತ್ತು ಶುಂಠಿ, ಎರಡನ್ನೂ ನಾವು ಬೇರೆ ಬೇರೆಯಾಗಿ ಅಡುಗೆಯಲ್ಲಿ ಬಳಸಿಕೊಂಡಿದ್ದೇವೆ. ಆದರೆ ಇವೆರಡನ್ನೂ ಜೊತೆಯಾಗಿಸಿದಾಗ ಇವೆರಡರ ಒಟ್ಟು ಶಕ್ತಿ ಹಲವು ಪಟ್ಟು ವೃದ್ಧಿಯಾಗುವುದು ಮಾತ್ರವಲ್ಲ, ಆರೋಗ್ಯ ಮತ್ತು ಆಯಸ್ಸು ಸಹಾ ವೃದ್ಧಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಇದೇನೂ ಇಂದು ನಿನ್ನೆ ಕಂಡುಕೊಂಡ ವಿಷಯವಲ್ಲ, ನಮ್ಮ ಹಿರಿಯರು ನೂರಾರು ವರ್ಷಗಳ ಹಿಂದೆಯೇ ಈ ವಿಧಾನದಿಂದ ಆರೋಗ್ಯದ ತೊಂದರೆ ಮೂಲದಿಂದಲೇ ನಿವಾರಣೆಯಾಗುವ ಶಕ್ತಿಯನ್ನು ಕಂಡುಕೊಂಡಿದ್ದರು. ಇದು ಅತ್ಯಂತ ಸುರಕ್ಷಿತ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದಿದ್ದು ಎಲ್ಲರಿಗೂ ಸೂಕ್ತವಾದ ಔಷಧಿಯಾಗಿದೆ.

ನುಗ್ಗೆ ಎಲೆಗಳಲ್ಲಿ ಅಗತ್ಯ ಪೋಷಕಾಂಶಗಳ ಜೊತೆಗೇ ಪ್ರಬಲ ಆಂಟಿ ಆಕ್ಸಿಡೆಂಟುಗಳೂ ಇವೆ. ಈ ಎಲೆಗಳನ್ನು ಬಿಸಿ ನೀರಿನಲ್ಲಿ ಕೊಂಚ ಹೊತ್ತು ನೆನೆಸಿಟ್ಟರೆ ನಿಧಾನವಾಗಿ ಈ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಕರಗುತ್ತವೆ. ಈ ನೀರನ್ನು ಕುಡಿಯುವ ಮೂಲಕ ದೇಹಕ್ಕೆ ಶಕ್ತಿ ಹಾಗೂ ಆರೋಗ್ಯ ಲಭಿಸುತ್ತದೆ. ಇದರೊಂದಿಗೆ ಕೊಂಚ ಶುಂಠಿಯನ್ನು ಬೆರೆಸಿದರೆ ಇದರ ಔಷಧೀಯ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ಅಲ್ಲದೇ ಸ್ಥೂಲಕಾಯ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗಿಸುತ್ತದೆ. ಅಲ್ಲದೇ ಜೀರ್ಣಸಂಬಂಧಿ ತೊಂದರೆ, ವಾಕರಿಕೆ, ಹಸಿವಿಲ್ಲದಿರುವುದು, ಪ್ರಯಾಣದಲ್ಲಿ ಆವರಿಸುವ ವಾಂತಿ ಹಾಗೂ ನೋವುಗಳನ್ನು ಕಡಿಮೆಯಾಗಿಸುತ್ತದೆ.

ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಇಂದಿನ ಲೇಖನದಲ್ಲಿ ನುಗ್ಗೆಸೊಪ್ಪು-ಶುಂಠಿಯನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವ ಮೂಲಕ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಹಾಗೂ ರಕ್ಷಣೆ ಪಡೆಯಬಹುದಾದ ಕಾಯಿಲೆಗಳ ವಿವರಿಸಲಾಗಿದೆ. ಅಲ್ಲದೇ ನುಗ್ಗೆಸೊಪ್ಪು-ಶುಂಠಿಯನ್ನು ಕುದಿಸಿ ಟೀ ತಯಾರಿಸುವ ವಿಧಾನವನ್ನೂ ವಿವರಿಸಲಾಗಿದೆ....

ಸಂಧಿವಾತವನ್ನು ಗುಣಪಡಿಸುತ್ತದೆ

ಸಂಧಿವಾತವನ್ನು ಗುಣಪಡಿಸುತ್ತದೆ

ನುಗ್ಗೆ ಎಲೆಗಳಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದ್ದು ಸಂಧಿವಾತಕ್ಕೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಕಬ್ಬಿಣ, ತಾಮ್ರ, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಸಹಿತ ವಿವಿಧ ಖನಿಜ ಹಾಗೂ ವಿಟಮಿನ್ನುಗಳಿದ್ದು ಎಲ್ಲವೂ ಒಟ್ಟಾಗಿ ಸಂಧಿವಾತ ಕಡಿಮೆಯಾಗಲು ನೆರವಾಗುತ್ತವೆ.

ಕ್ಯಾನ್ಸರ್ ಆವರಿಸುವುದರಿಂದ ತಡೆಯುತ್ತದೆ

ಕ್ಯಾನ್ಸರ್ ಆವರಿಸುವುದರಿಂದ ತಡೆಯುತ್ತದೆ

ಕೆಲವಾರು ಆಧ್ಯಯನಗಳಲ್ಲಿ ಕಂಡುಕೊಂಡಂತೆ ನುಗ್ಗೆಸೊಪ್ಪಿನಲ್ಲಿರುವ ಬೆನ್ಜೈಲ್ ಐಸೋಥಿಯೋಸಯನೇಟ್ ಎಂಬ ಪೋಷಕಾಂಶ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಇದೇ ಕಾರಣಕ್ಕೆ ಕ್ಯಾನ್ಸರ್ ಗೆ ಖೀಮೋಥೆರಪಿ ವಿಧಾನದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈ ಸೊಪ್ಪಿನ ನೀರನ್ನು ಕುಡಿಯಲು ಸಲಹೆ ಮಾಡಲಾಗುತ್ತದೆ. ಅಲ್ಲದೇ ಶುಂಠಿಯಲ್ಲಿರುವ ರೇಡಿಯೋ-ರಕ್ಷಣಾ ಪರಿಣಾಮ (radio-protective effects) ಖೀಮೋಥೆರಪಿಯ ಪ್ರಬಲ ಕಿರಣಗಳಿಂದ ರಕ್ಷಣೆ ಒದಗಿಸುತ್ತದೆ. ಈ ಮೂಲಕ ರೋಗಿಯ ಅಂಗಾಂಶಗಳು ಆರೋಗ್ಯಕರವಾಗಿರಲು ಹಾಗೂ ನಂಜು ಹರಡದಂತೆ ತಡೆಯುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ನುಗ್ಗೆಸೊಪ್ಪಿನ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಿತಿಗಳಿಗೆ ಮರಳುವುದನ್ನು ಸಾಬೀತು ಗೊಳಿಸಲಾಗಿದೆ ಹಾಗೂ ಆರೋಗ್ಯವೂ ಈ ಮೂಲಕ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಶುಂಠಿ ದೇಹದ ಉರಿಯೂತವನ್ನು ತಗ್ಗಿಸಿ ಹೃದಯವನ್ನು ಪರೋಕ್ಷವಾಗಿ ರಕ್ಷಿಸುತ್ತದೆ. ಈ ಮೂಲಕ ನುಗ್ಗೆಸೊಪ್ಪು-ಶುಂಠಿಯ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಇದು ಆತ್ಯುತ್ತಮ ಆಹಾರವಾಗಿದೆ.

ತಲೆನೋವನ್ನು ಕಡಿಮೆ ಮಾಡುತ್ತದೆ

ತಲೆನೋವನ್ನು ಕಡಿಮೆ ಮಾಡುತ್ತದೆ

ನುಗ್ಗೆಸೊಪ್ಪಿನಲ್ಲಿರುವ ಕೆಲವರು ಪೋಷಕಾಂಶಗಳು ನೋವು ನಿವಾರಕಗಳಂತೆ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ತಲೆನೋವಿನ ಉಗ್ರರೂಪವದ ಮೈಗ್ರೇನ್‌ನ ಅತಿಯಾದ ತಲೆನೋವನ್ನು ಗುಣಪಡಿಸಲೂ ಸಮರ್ಥವಾಗಿದೆ. ಇದರೊಂದಿಗೆ ಶುಂಠಿಯ ಔಷಧೀಯ ಗುಣಗಳು ಮೈಗ್ರೇನ್ ಹಾಗೂ ಇತರ ನೋವುಗಳಿಂದ ಶಮನ ನೀಡುವುದರ ಜೊತೆಗೇ ಈ ನೋವುಗಳ ಜೊತೆಗೇ ಆವರಿಸುವ ವಾಂತಿ ಹಾಗೂ ವಾಕರಿಕೆಯನ್ನೂ ಇಲ್ಲವಾಗಿಸುತ್ತದೆ.

ಕಾಯಿ ಕಾಯಿ ನುಗ್ಗೆಕಾಯಿಯ ಪವರ್‌ಗೆ ತಲೆಬಾಗಲೇಬೇಕು!

ಅಧಿಕ ರಕ್ತದೊತ್ತಡವನ್ನು ಸರಿಪಡಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಸರಿಪಡಿಸುತ್ತದೆ

ನುಗ್ಗೆಸೊಪ್ಪಿನಲ್ಲಿ ಥಿಯೋಕಾರ್ಬಾಮೇಟ್ ಹಾಗೂ ಐಸೋಥಿಯೋಸಯನೇಟ್ ಎಂಬ ಪೋಷಕಾಂಶಗಳಿದ್ದು ಇವು ಹೆಚ್ಚಿದ್ದ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಸಮರ್ಥವಾಗಿವೆ. ಇದರೊಂದಿಗೆ ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣ ಹಾಗೂ ರಕ್ತವನ್ನು ತೆಳುವಾಗಿಸುವ ಗುಣ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಇನ್ನಷ್ಟು ನೆರವು ನೀಡುತ್ತದೆ.

ಹೊಟ್ಟೆಯ ಉರಿಯಿಂದ ಶಮನ ಒದಗಿಸುತ್ತದೆ

ಹೊಟ್ಟೆಯ ಉರಿಯಿಂದ ಶಮನ ಒದಗಿಸುತ್ತದೆ

ಇದರಲ್ಲಿ ಹೊಟ್ಟೆಯ ಮತ್ತು ಕರುಳಿನ ಹುಣ್ಣುಗಳಾದಂತೆ ತಡೆಯುವ ಗುಣವಿದೆ. ತನ್ಮೂಲಕ ಹೊಟ್ಟೆ ಮತ್ತು ಕರುಳುಗಳ ತೊಂದರೆಯನ್ನು ಇಲ್ಲವಾಗಿಸಲು ನೆರವಾಗುತ್ತದೆ. ನುಗ್ಗೆಸೊಪ್ಪಿನ ಸೇವನೆಯಿಂದ ಅಜೀರ್ಣತೆ ಹಾಗೂ ಇತರ ಜಠರಸಂಬಂಧಿ ತೊಂದರೆಗಳು ಇಲ್ಲವಾಗುತ್ತವೆ. ಶುಂಠಿ ಸಹಾ ಜಠರದ ತೊಂದರೆ ಮತ್ತು ಬೆಳಗ್ಗಿನ ವಾಕರಿಕೆಯನ್ನು ತಡೆಯುವ ಗುಣ ಹೊಂದಿದೆ. ಇವೆರಡರ ಗುಣಗಳು ಜೊತೆಯಾದಾಗ ಜೀರ್ಣಕ್ರಿಯೆ ಉತ್ತಮಗೊಳ್ಳುವ ಕಾರಣ ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಲು ಅತ್ಯುತ್ತಮವಾದ ಪೇಯವಾಗಿದೆ

ಯಕೃತ್ ಅನ್ನು ಸುರಕ್ಷಿತವಾಗಿರಿಸುತ್ತದೆ

ಯಕೃತ್ ಅನ್ನು ಸುರಕ್ಷಿತವಾಗಿರಿಸುತ್ತದೆ

ಯಕೃತ್ ನ ತೊಂದರೆಗಳನ್ನು ದೂರವಾಗಿಸಲು ನುಗ್ಗೆಸೊಪ್ಪನ್ನು ಆಗಾಗ ಸೇವಿಸುತ್ತಿರಬೇಕು. ಇದರಿಂದ ಕಾಯಿಲೆಗೆ ಒಳಗಾಗಿದ್ದ ಯಕೃತ್ ಶೀಘ್ರವಾಗಿ ಗುಣಹೊಂದಲು ಹಾಗೂ ಯಕೃತ್ ಅನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ರೈಗ್ಲಿಸರೈಡುಗಳು ಯಕೃತ್ ನಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಿ ಯಕೃತ್ ನ ಕೊಬ್ಬಿನ ಕಾಯಿಲೆ (fatty liver disease) ಯಿಂದ ರಕ್ಷಣೆ ಒದಗಿಸುತ್ತದೆ.

ರಕ್ತಹೀನತೆಯನ್ನು ಇಲ್ಲವಾಗಿಸುತ್ತದೆ

ರಕ್ತಹೀನತೆಯನ್ನು ಇಲ್ಲವಾಗಿಸುತ್ತದೆ

ಶುಂಠಿ ಮತ್ತು ನುಗ್ಗೆಸೊಪ್ಪುಗಳಲ್ಲಿರುವ ಹಲವು ಖನಿಜಗಳು ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ವರದಾನವಾಗಿದೆ. ಈ ಜೋಡಿಯಲ್ಲಿ ಹಲವು ವಿಟಮಿನ್ನುಗಳು, ಪ್ರೋಟೀನುಗಳು ಹಾಗೂ ಪ್ರಮುಖವಾಗಿ ಕಬ್ಬಿಣ ಇದ್ದು ರಕ್ತದ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ನುಗ್ಗೆಸೊಪ್ಪು-ಶುಂಠಿಯ ಟೀ ಸೇವನೆಯಿಂದ ರಕ್ತಹೀನತೆ ಶೀಘ್ರವಾಗಿ ಇಲ್ಲವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳು ಪ್ರತಿ ಮುಂಜಾನೆ ಈ ಟೀ ಸೇವಿಸುವ ಮೂಲಕ ಉತ್ತಮವಾದ ಚೇತರಿಕೆಯನ್ನು ಪಡೆಯಬಹುದು.

ನುಗ್ಗೆಸೊಪ್ಪು-ಶುಂಠಿಯ ಟೀ ತಯಾರಿಸುವ ವಿಧಾನ

ನುಗ್ಗೆಸೊಪ್ಪು-ಶುಂಠಿಯ ಟೀ ತಯಾರಿಸುವ ವಿಧಾನ

*85 ಗ್ರಾಂ ತಾಜಾ ಹಸಿಶುಂಠಿ

*10 ತಾಜಾ ಹಸಿರು ನುಗ್ಗೆ ಎಲೆಗಳು

*ಒಂದು ಚಿಕ್ಕಚಮಚ ಜೇನು

*4 ಕಪ್ ನೀರು

ವಿಧಾನ

ವಿಧಾನ

ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ತುರಿಯಿರಿ. ಇದನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಕುದಿಸಿ ಬಳಿಕ ಉರಿ ಆರಿಸಿ. ಈ ನೀರಿಗೆ ಈಗ ನುಗ್ಗೆ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಕೊಂಚ ಹೊತ್ತು ಹಾಗೇ ಇರಲು ಬಿಡಿ. ಬಳಿಕ ಜೇನು ಸೇರಿಸಿ ಕಲಕಿ. ನೀರು ಸುಮಾರು ಅರ್ಧ ದಷ್ಟಾಗಿರುತ್ತದೆ. ಈ ನೀರನ್ನು ಸೋಸಿ ಬೆಳಿಗ್ಗೆ ಪ್ರಥಮ ಆಹಾರವಾಗಿ ಒಂದು ಲೋಟ ಹಾಗೂ ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯಿರಿ.

English summary

combination-of-moringa-ginger-to-fight-several-diseases

There is this incredible duo that is known to promote better health and longevity. It is none other than the combination of moringa and ginger. This combination has been in use for several centuries to treat numerous health conditions and also due to its ability to get into the root of an issue and fix it. People have been using moringa as a natural remedy and it is a completely safe remedy to use and comes without any side effects.
X
Desktop Bottom Promotion