For Quick Alerts
ALLOW NOTIFICATIONS  
For Daily Alerts

ಸ್ಲೀಪ್ ಆಪ್ನೆಯಾ ಸಮಸ್ಯೆಗೆ ಕಾರಣಗಳು ಮತ್ತು ಪರಿಹಾರಗಳು

By Sushma Charhra
|

ನಿದ್ದೆ ಬಾರದೇ ಇರುವುದು ಒಂದು ಸಮಸ್ಯೆಯಾದರೆ, ನಿದ್ದೆಯಲ್ಲಿ ಶಬ್ಧ ಬರುವುದು ಮತ್ತೊಂದು ರೀತಿಯ ಸಮಸ್ಯೆ, ಹೌದು ನಾವು ಮಾತನಾಡುತ್ತಿರುವುದು ಗೊರಕೆಯ ಬಗ್ಗೆ. ಗೊರಕೆ ಎಂದರೆ ಮೂಗು, ಬಾಯಿ ಇಲ್ಲವೇ ಗಂಟಲು ಅಥವಾ ಶ್ವಾಸಕೋಶದಲ್ಲಿ ತಡೆಯುಂಟಾಗಿ ಮಲಗಿದಾಗ ಉಸಿರಾಟದಲ್ಲಿ ತೊಂದರೆಯುಂಟಾಗುವ ಒಂದು ಪ್ರಕ್ರಿಯೆ. ಈ ಸಂದರ್ಬದಲ್ಲಿ ಸಣ್ಣ, ಅಥವಾ ನಿಧಾನವಾದ ಇಲ್ಲವೇ ದೊಡ್ಡದಾದ ಅಥವಾ ಕರ್ಕಶವಾದ ಶಬ್ದವು ಹೊರಬರುತ್ತೆ. ಇದು ಸ್ಲೀಪ್ ಆಪ್ನಿಯಾ ಸಮಸ್ಯೆಯ ಮೊದಲ ಘಂಟೆಯಾಗಿರುತ್ತೆ. ಹಲವಾರು ಮಂದಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

ಹಾಗಾದ್ರೆ ಸ್ಲೀಪ್ ಆಪ್ನೆಯಾ ಅಂದರೆ ಏನು? ಮಲಗಿದಾಗ ಉಸಿರಾಟ ಪ್ರಕ್ರಿಯೆಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ತಡೆಯುಂಟಾಗುವ ಪ್ರಕ್ರಿಯೆ. ಈ ತಡೆಯು ಕೆಲವೇ ಸೆಕೆಂಡ್ ಗಳಿಂದ ಹಿಡಿದು ಒಂದು ನಿಮಿಷವೂ ಇರಬಹುದು. ಅಥವಾ ಗಂಟೆಗೆ ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ಬಾರಿಯೂ ಆಗಿರಬಹುದು. ಉಸಿರಾಟವು ಪುನರಾರಂಭವಾಗುವಾದ ದೊಡ್ಡದೊಂದು ಶಬ್ಧವೂ ಬರಬಹುದು. ಈ ಸಮಸ್ಯೆ ನಿದ್ದೆಯಲ್ಲಿ ಪದೇ ಪದೇ ಬರಬಹುದು ಅಥವಾ ಎಲ್ಲೊ ಒಮ್ಮೆ ಬಂದು ಹೋಗಬಹುದು ಅಥವಾ ಎರಡೂ ಆಗಿರಬಹುದು.

sleeping

•ಕಾರಣಗಳು
ಗೊರಕೆ ಮತ್ತು ನಿದ್ದೆಯಲ್ಲಿ ಉಸಿರಾಟದ ತಡೆ ಸಮಸ್ಯೆ: ಮೂಗಿನ ಮೂಳೆಯಲ್ಲಿ ಸಮಸ್ಯೆಗಳಿದ್ದರೆ ಇದು ಸಾಮಾನ್ಯವಾಗಿ ಕಂಡುಬರುತ್ತೆ. ಗಂಟಲು, ಗಂಟಲಿನ ಮಾಂಸಖಂಡಗಳು ವೀಕ್ ಆಗಿದ್ದರೆ, ಕುತ್ತಿಗೆಯಲ್ಲಿ ಫ್ಯಾಟ್ ಇದ್ದರೆ, ದಪ್ಪ ನಾಲಗೆಯಾಗಿದ್ದರೆ, ಬಾಯಿಯ ಮೇಲ್ಬಾಗವು ಸಡಿಲವಾಗಿದ್ದರೆ, ಸಡಿಲವಾದ ಅಥವಾ ಗಟ್ಟಿಯಾದ ದವಡೆ, ಹಿಂಭಾಗದಲ್ಲಿ ಮಲಗಿದರೆ ನಾಲಗೆಯು ಹಿಂಭಾಗಕ್ಕೆ ಬೀಳುವುದು ಇತ್ಯಾದಿಗಳು ಈ ಸಮಸ್ಯೆಗೆ ಕಾರಣಗಳು. ಆಲ್ಕೋಹಾಲ್ ಸೇವನೆ ಮತ್ತು ಕೆಲವು ಮೆಡಿಸಿನ್ ಗಳೂ ಕೂಡ ಇದಕ್ಕೆ ಕಾರಣವಾಗುತ್ತೆ.

•ಪರಿಣಾಮಗಳು
ಮೆಡಿಕಲ್ - ರಕ್ತದೊತ್ತಡವನ್ನು ಹೆಚ್ಚಿಸಬಹುದು, ಹೃದಯಾಘಾತ, ಸ್ಟ್ರೋಕ್, ಒಬೆಸಿಟಿ, ಡಯಾಬಿಟೀಸ್, ಹಾರ್ಟ್ ಫೈಲ್ಯೂರ್, ಡ್ರೈವಿಂಗ್ ಮತ್ತು ಕೆಲಸದ ಸಂಬಂಧಿ ಅಪಘಾತಗಳು

ಸೈಕೋಸೋಷಿಯಲ್ - ಹಿಂಸೆ ಅನುಭವಿಸುವುದು ಮತ್ತು ಕಡಿಮೆ ಏಕಾಗ್ರತೆ ಸಾಮಾಜಿಕ - ನಿಮ್ಮ ಸಂಗಾತಿ ಇದರಿಂದ ತೊಂದರೆಗೆ ಒಳಗಾಗಬಹುದು, ಹಿಂಸೆ ಅನುಭವಿಸಬಹುದು, ಗಟ್ಟಿ ಗೊರಕೆಯ ಪರಿಣಾಮದಿಂದಾಗಿ ಯಾವಾಗಲೂ ಎಲ್ಲರೊಂದಿಗೆ ನಿದ್ರಿಸಲು ಮುಜುಗರವಾಗಬಹುದು, ಎಷ್ಟೋ ಕೇಸುಗಳಲ್ಲಿ ಗೊರಕೆಯೇ ಡೈವೋರ್ಸ್ ತನಕವೂ ಹೋಗಿದೆ, ಪ್ರಾಪಂಚಿಕವಾಗಿ ಬೇರ್ಪಟ್ಟ ಭಾವನೆ ಬರಬಹುದು.

•ಚಿಹ್ನೆಗಳು ಮತ್ತು ಗುಣಲಕ್ಷಣಗಳು
ದೊಡ್ಡವರಲ್ಲಾದ್ರೆ, ಪ್ರತಿ ರಾತ್ರಿ ದೊಡ್ಡದಾಗಿ ಗೊರಕೆ ಹೊಡೆಯುವುದು, ಉಸಿರಾಟದಲ್ಲಿ ತಡೆ ಇರುವುದು, ಉಸಿರಾಟಕ್ಕಾಗಿ ಪದೇ ಪದೇ ಏಳಬೇಕಾಗುವುದು, ಹಗಲಿನಲ್ಲಿ ನಿದ್ದೆಯ ಅನುಭವ ಮತ್ತು ಸುಸ್ತು, ಒಣಗಿದಂತ ಬಾಯಿ, ರಾತ್ರಿಯ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುವುದು, ಮರೆಗುಳಿತನ, ಏಕಾಗ್ರತೆ ಕಡಿಮೆಯಾಗುವುದು, ಹಗಲಿನಲ್ಲಿ ತಲೆನೋವು ಇತ್ಯಾದಿಗಳು ಗುಣಲಕ್ಷಣಗಳಾಗಿದೆ. ಮಕ್ಕಳಲ್ಲಿ, ಗಟ್ಟಿಯಾದ ಗೊರಕೆ, ಮಲಗುವಿಕೆಯಲ್ಲಿ ಆಶ್ಚರ್ಯಹುಟ್ಟಿಸೋ ಭಂಗಿಗಳು, ಹಾಸಿಗೆಯಲ್ಲಿ ಮೂತ್ರವಿಸರ್ಜನೆ, ರಾತ್ರಿಯ ವೇಳೆ ಅತಿಯಾಗಿ ಬೆವರುವುದು,

ನಿದ್ದೆಯಲ್ಲಿ ಕನವರಿಸುವುದು ಪ್ರಮುಖ ಲಕ್ಷಣಗಳು
ತೊಂದರೆ ನೀಡುವ ಅಂಶಗಳು
ಅತಿಯಾಗಿ ತೂಕ ಹೆಚ್ಚಳ, ರಕ್ತದೊತ್ತಡ ಅಧಿಕವಾಗುವುದು, 40 ಸೆಂಟೀ ಮೀಟರ್ ನ ಕುತ್ತಿಗೆಯಾಗುವುದು, ಮೂಗಿನ ಮೂಳೆಯಲ್ಲಿ ತೊಂದರೆ, ದೊಡ್ಡ ಗಂಟಲು, ತೆಳುವಾದ ಗಲ್ಲ, ಅಲರ್ಜಿಗಳು, ಆಲ್ಕೋಹಾಲಿಕ್ ಸಮಸ್ಯೆ ಇತ್ಯಾದಿ ತೊಂದರೆಗಳು ಎದುರಾಗಬಹುದು.

ಚಿಕಿತ್ಸೆಗಳು
ಮೆಡಿಕಲ್ : ಗೊರಕೆ ಮತ್ತು ಸ್ಲೀಪ್ ಆಪ್ನೆ ಸಮಸ್ಯೆಗೆ ಚಿಕಿತ್ಸೆ ಎಂದರೆ ಬ್ಲಾಕ್ ಅಥವಾ ಬೈಪಾಸ್ ನ್ನು ಫಿಕ್ಸ್ ಮಾಡುವುದು. ಇವು ವಿಶೇಷ ಮಾತ್ರೆಗಳನ್ನು, ಮಗು ಮತ್ತು ಬಾಯಿಯಲ್ಲಿಡುವ ಕೆಲವು ಡಿವೈಸ್ ಗಳ ಬಳಕೆ, ಮೂಗು ಮತ್ತು ಗಂಟಲನಲ್ಲಿ ಯಾವಾಗಲೂ ಗಾಳಿಯನ್ನು ಹೋಗಿಸುವಂತ ಮತ್ತು ತೆರೆದಿಡುವಂತೆ ಮಾಡುವ ಕೆಲವು ಮೆಷಿನ್ ಗಳ ಬಳಕೆ ಮಾಡಲಾಗುತ್ತೆ. ಆದರೆ ಅದು ಕೇಸು ಹೇಗಿದೆ ಎಂಬುದರ ಆಧಾರದಲ್ಲಿ ನಿರ್ಧರಿತವಾಗುತ್ತೆ.

ಸರ್ಜಿಕಲ್ : Uvulopalatopharyngoplasty ಅಂದರೆ, ಗಂಟಲಿನ ಹಿಂಭಾಗದಲ್ಲಿರುವ ಟಿಶ್ಯುವನ್ನು ತೆಗೆಯುವುದು ಎಂದರ್ಥ. ಮೂಗಿನ ಮೂಳೆಯನ್ನು ಸರಿಪಡಿಸುವಂತ ಸರ್ಜರಿ ಮಾಡುವುದು, ಅಥವಾ ಹೆಚ್ಚಾಗಿರುವ ಟಿಶ್ಯೂವನ್ನು ಮೂಗಿನಿಂದ ತೆಗೆಯುವ ಸರ್ಜರಿ ಮಾಡುವುದು. ಟಾನ್ಸಿಲ್ಸ್ ತೆಗೆಯುವುದು,ನಾಲಗೆಯ ಗಾತ್ರವನ್ನು ಕಡಿಮೆಗೊಳಿಸುವುದು, ಬಾಯಿಯ ಮೇಲ್ಬಾಗಕ್ಕೆ ಗಟ್ಟಿಯಾಗಿರುವ ವಸ್ತುವನ್ನು ಕೂರಿಸುವಂತ ಸರ್ಜರಿಯನ್ನು ಮಾಡಲಾಗುತ್ತೆ.

ರೋಗಿಗಳು ತಮಗೆ ತಾವೇ ಸಹಕರಿಸಿಕೊಳ್ಳುವಂತೆ ಏನು ಮಾಡಬಹುದು ಎಂಬ ಸಲಹೆ:
ತೂಕ ಇಳಿಸಿಕೊಳ್ಳುವುದು, ನಡೆದಾಡುವುದು ಮತ್ತು ವ್ಯಾಯಾಮ ಮಾಡುವುದು, ಜೀವನಶೈಲಿ ಬದಲಿಸಿಕೊಳ್ಳುವುದು, ಬಾಯಿ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಡಿವೈಸ್ ಗಳ ಬಳಕೆ ಮಾಡಬಹುದು. ಅಲರ್ಜಿ ಉಂಟುಮಾಡುವ ಪದಾರ್ಥಗಳಿಂದ ದೂರವಿರುವುದು.ಮೂಗು ಕಟ್ಟಿಕೊಳ್ಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಇತ್ಯಾದಿ ಮಾಡಬಹುದು.

ಆಲ್ಕೋಹಾಲ್ ಸೇವನೆ, ಧೂಮಪಾನ ಮಾಡುವುದು, ನಿದ್ದೆ ಮಾತ್ರೆಗಳನ್ನು ಸೇವಿಸುವುದನ್ನು ಬಿಡುವುದು ಇಂತಹ ದುರಭ್ಯಾಸಗಳನ್ನು ಬಿಟ್ಟು ಬಿಡುವುದು ಸೂಕ್ತ. ಕೆಫೀನ್ ಅಂಶವನ್ನು ಕಡಿಮೆ ಸೇವಿಸಿ, ಅತಿಯಾಗಿ ಊಟ ಬೇಡ. ನಿದ್ದೆ ಮಾಡುವುದಕ್ಕೂ ಎರಡು ಗಂಟೆ ಮುನ್ನ ಊಟ ಮಾಡಿ, ಯೋಗ ಮಾಡಿ ಗಂಟಲಿನ ಮಾಂಸಖಂಡಗಳನ್ನು ಬಲಪಡಿಸಿಕೊಳ್ಳಿ.

ಪ್ರತಿದಿನ ಸರಿಯಾದ ನಿದ್ದೆಯ ಸಮಯವನ್ನು ಕಾಪಾಡಿಕೊಳ್ಳಿ. ಹಿಂಭಾಗಕ್ಕೆ ತಿರುಗಿ ಮಲಗುವುದನ್ನು ತಪ್ಪಿಸಿಕೊಳ್ಳಲು ದಿಂಬುಗಳನ್ನು ಬಳಕೆ ಮಾಡಬಹುದು, ನಿಮ್ಮ ಸಂಗಾತಿಗೆ ನೀವು ಮಲಗುವ ವಿರುದ್ಧ ದಿಕ್ಕಿಗೆ ಮಲಗಲು ಹೇಳಿ. ನಿದ್ದೆಯ ಈ ಸಮಸ್ಯೆ ಹೃದಯ ಮತ್ತು ನರ ವ್ಯೂಹದ ಸಮಸ್ಯೆಯಾಗಿ ಅಥವಾ ಮೆದುಳಿನ ಇಲ್ಲವೇ ಡಯಾಬಿಟೀಸ್ ಸಮಸ್ಯೆಯಾಗಿ ಪರಿಣಮಿಸಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆದು ಪರಿಹರಿಸಿಕೊಳ್ಳಿ

ಸ್ಲೀಪ್ ಆಪ್ನೆಯ ಟೆಸ್ಟ್ ಆಗಿರುವ polysomnography ವನ್ನು ಮಾಡಿಸಿಕೊಳ್ಳಿ. ಕೊಳಲು ಇತ್ಯಾದಿ ಊದುವ ಸಾಧನಗಳನ್ನು ಬಳಕೆ ಮಾಡುವುದು, ಹಾಡುವುದು ಕೂಡ ನಿಮ್ಮ ಗಂಟಲನ್ನು ಗಟ್ಟಿಗೊಳಿಸುತ್ತೆ ಮತ್ತು ಗಂಟಲಿನ ಮಾಂಸಖಂಡಗಳ ಶಕ್ತಿಯನ್ನು ವರ್ಧಿಸುತ್ತೆ. ಹಾಗಾಗಿ ನಿದ್ದೆಯ ಈ ಸಮಸ್ಯೆಯಿಂದ ದೂರವಿರಲು ಸಾಧ್ಯವಿದೆ.

ಸಮಸ್ಯೆ ನಿವಾರಣೆಗೆ ಮನೆಯಲ್ಲಿ ಮಾಡಬಹಾದ ವ್ಯಾಯಾಮಗಳು:
• ನಾಲಗೆಯನ್ನು ಕೆಳಗೆ ಒತ್ತಿ, ಮೇಲ್ಬಾಗದಲ್ಲಿ ಬ್ರಷ್ ಮಾಡಿ ಮತ್ತು ನಾಲಗೆಯ ಬದಿಯನ್ನೂ ಟೂತ್ ಬ್ರಷ್ ನಿಂದ ಬ್ರಷ್ ಮಾಡಿ .
• ನಾಲಗೆಯನ್ನು ಮೇಲ್ಬಾಗಕ್ಕೆ ಒತ್ತಿ ಮತ್ತು ದಿನಕ್ಕೆ ಮೂರು ನಿಮಿಷ ಹಾಗೆಯೇ ಒತ್ತಿ ಹಿಡಿದು ಇಟ್ಟುಕೊಂಡಿರಿ .
• ಮುತ್ತು ಕೊಡುವಾಗ ತುಟಿಗಳನ್ನು ಹೇಗೆ ಮಾಡುತ್ತೀರೋ ಹಾಗೆ ಮಾಡಿ ಮತ್ತು ಬಿಗಿಯಾಗಿ ಇಟ್ಟುಕೊಳ್ಳಿ. ಮತ್ತು ಅದನ್ನು 10 ಬಾರಿ ಆಚೆಈಚೆ ತಿರುಗಿಸಿ. ಮೂರು ಬಾರಿ ರಿಪೀಟ್ ಮಾಡಿ.
• 5 ಬಾರಿಬಲೂನ್ ನ್ನು ಮೂಗು ಮತ್ತು ಬಾಯಿಯ ಉಸಿರಾಟ ಪ್ರಕ್ರಿಯೆಯಿಂದ ತುಂಬಿಸಿ.
• ಬಾಯಿಗೆ ನೀರು ಹಾಕಿ 5 ನಿಮಿಷ ಗುಳುಗುಳು ಮಾಡಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ .
• ಹಲ್ಲುಗಳ ನಡುವೆ ನಾಲಗೆಯನ್ನು ಗಟ್ಟಿಯಾಗಿ 5 ಬಾರಿ ಇಟ್ಟುಕೊಳ್ಳಿ. ದಿನಕ್ಕೆ 5 ರಿಂದ 10 ಬಾರಿ ಪುನರಾವರ್ತಿಸಿ

English summary

Causes And Remedies For Sleep Apnea

Snoring is a condition where something in the nose, mouth, throat, or lungs blocks breathing while sleeping, producing a soft or loud and unpleasant sound. It is a sign or first alarm of OSA (obstructive sleep apnea) Sleep apnea is where there are one or more pauses in breathing while you sleep. Pauses may last a few seconds to minutes, and as many as 30 times an hour. Breathing usually restarts with a loud snort or choking sound. Sleep apnea may be obstructive, central, or a combination called complex sleep apnea.
X
Desktop Bottom Promotion