Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ಇಂತಹ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ! ಕಾಮಾಸಕ್ತಿ ಕಡಿಮೆಯಾಗಬಹುದು!
ಇತ್ತೀಚೆಗೆ ನಿಮ್ಮಲ್ಲಿ ಲೈಂಗಿಕ ನಿಃಶಕ್ತಿ ಎದುರಾಗಿದ್ದು ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆಯೇ? ಇದಕ್ಕೆ ಉತ್ತರ ಹೌದು ಎಂದಾದರೆ ನೀವು ಸೇವಿಸುವ ಕೆಲವು ಸಾಮಾನ್ಯ ಆಹಾರಗಳನ್ನು ಇದಕ್ಕೆ ಹೊಣೆಯಾಗಿಸಬಹುದು. ಉತ್ತಮ ಲೈಂಗಿಕ ಸಂಬಂಧ ದಂಪತಿಗಳ ನಡುವಣ ಬಾಂಧವ್ಯಕ್ಕೆ ಅಡಿಪಾಯವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಯಾವುದೇ ಸಂಬಂಧ ಆರೋಗ್ಯಕರವಾಗಿರಲು ಕೇವಲ ಲೈಂಗಿಕ ಸಂಪರ್ಕವೊಂದೇ ಕಾರಣವಲ್ಲ! ಆದರೆ ಬದ್ಧತೆಯನ್ನು ಉಳಿಸಿಕೊಳ್ಳಲು ಇದೊಂದು ಪ್ರಬಲ ಕಾರಣವಾಗಿರುವುದನ್ನು ಮಾತ್ರ ಅಲ್ಲಗಳೆಯಲಾಗದು.
ಲೈಂಗಿಕ ಕ್ರಿಯೆಯ ವಿಷಯ ಬಂದಾಗ ನಿಮ್ಮ ಸಂಗಾತಿ ಯಾವುದಾದರೂ ತೊಂದರೆಯನ್ನು ಎದುರಿಸುತ್ತಿದ್ದರೆ ದಾಂಪತ್ಯದಲ್ಲಿ ವಿರಸ ಅಥವಾ ಅಸಮಾಧಾನಕ್ಕೆ ಮೂಲವಾಗಬಹುದು. ಕೆಲವೊಮ್ಮೆ ಪರಿಸ್ಥಿತಿ ವಿಕೋಪಕ್ಕೂ ತಿರುಗಿ ಸಂಬಂಧವೇ ಹಳಸಬಹುದು. ಲೈಂಗಿಕ ನಿಃಶಕ್ತಿಗೆ ಲೈಂಗಿಕ ನಿರಾಸಕ್ತಿಯೂ ಕಾರಣವಾಗಿರಬಹುದು ಅಥವಾ ಯಾವುದೋ ಕೊರತೆಯೂ ಆಗಿರಬಹುದು. ಒಂದು ವೇಳೆ ಲೈಂಗಿಕ ನಿಃಶಕ್ತಿ ಎದುರಾಗಿದ್ದರೆ ಆಗ ಲೈಂಗಿಕಾಸಕ್ತಿಯಿದ್ದರೂ ಸಂಗಾತಿಯನ್ನು ತೃಪ್ತಿಪಡಿಸಲು ಅಸಾಧ್ಯವಾಗಬಹುದು. ಈ ನಿಃಶಕ್ತಿ ಕೆಲವು ಪುರುಷರಲ್ಲಿ ನಿಮಿರುದೌರ್ಬಲ್ಯಕ್ಕೂ ಕಾರಣವಾಗಬಹುದು. ಈ ನಿಃಶಕ್ತಿಗೆ ಕಾರಣವಾಗುವ ಕೆಲವು ಸಾಮಾನ್ಯ ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಈ ಆಹಾರಗಳನ್ನು ಸಾಧ್ಯವಾದಷ್ಟು ಸೇವಿಸದಿರುವುದೇ ಉತ್ತಮ.

ಸಂಸ್ಕರಿಸಿದ ಆಹಾರ
ಸಿದ್ಧರೂಪದಲ್ಲಿ ಸೇವಿಸಲು ಸಾಧ್ಯವಾಗುವಂತೆ ತಯಾರಿಸಲಾಗಿರುವ ಆಹಾರಗಳನ್ನು ಸಂಸ್ಕರಿಸಿದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಬ್ರೆಡ್, ಮಾಂಸದ ಉತ್ಪನ್ನಗಳು ಮೊದಲಾದವುಗಳಲ್ಲಿ ಆಹಾರ ಹೆಚ್ಚು ಕಾಲ ಕೆಡದಂತೆ ಸೇರಿಸಿರುವ ಸಂರಕ್ಷಕಗಳು ಆರೋಗ್ಯಕರ ಲೈಂಗಿಕ ರಸದೂತಗಳ ಉತ್ಪನ್ನಕ್ಕೆ ತಡೆಯೊಡ್ಡುವ ಮೂಲಕ ಲೈಂಗಿಕ ನಿಃಶಕ್ತಿಯ ಕಾರಣವಾಗುತ್ತದೆ.

ಡಯೆಟ್ ಹೆಸರಿನ ಪಾನೀಯಗಳು
ಬುರುಗು ಬರುವ ಯಾವುದೇ ಪಾನೀಯ ಆರೋಗ್ಯಕರವಲ್ಲ! ಅದರಲ್ಲೂ ಈ ಪಾನೀಯಗಳು ಮಧುಮೇಹಿಗಳಿಗೆ ಅಥವಾ ಆರೋಗ್ಯದ ಕಾಳಜಿಯುಳ್ಳವರಿಗೂ ಮಾರಾಟ ಮಾಡುವ ಉದ್ದೇಶದಿಂದ ಸಕ್ಕರೆಯ ಬದಲಿಗೆ ಆಸ್ಪರ್ಟೇಮ್ ಅಥವಾ ಬೇರಾವುದೋ ಸಿಹಿಕಾರಕವಸ್ತುಗಳನ್ನು ಬೆರೆಸಿ 'ಡಯೆಟ್' ಎಂಬ ಸುಂದರ ಹೆಸರಿನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಪಾನೀಯಗಳು ರುಚಿಯಾಗಿರುತ್ತವೆಯೇ ವಿನಃ ಈ ಸಿಹಿಕಾರಕಗಳು ಮೆದುಳಿನಲ್ಲಿ ಸ್ರವಿಸುವ, ಮುದಕಾರಕ ರಸದೂತವಾದ ಸೆರೋಟೋನಿನ್‌ನ ಮಟ್ಟವನ್ನು ಕಡಿಮೆ ಮಾಡುತ್ತವೆ. ಈ ಕೊರತೆಯೂ ಲೈಂಗಿಕ ನಿಃಶಕ್ತಿಗೆ ಕಾರಣವಾಗಿದೆ.

ಮೈಕ್ರೋವೇವ್‌ನಲ್ಲಿ ಮಾಡಿದ ಪಾಪ್ ಕಾರ್ನ್
ಮೈಕ್ರೋವೇವ್ ನಲ್ಲಿ ಮೆಕ್ಕೆಜೋಳದ ಕಾಳುಗಳನ್ನು ಸಿಡಿಸಿ ತಯಾರಿಸಲಾದ ಪಾಪ್ ಕಾರ್ನ್ ಸಹಾ ಲೈಂಗಿಕ ನಿಃಶಕ್ತಿಗೆ ಕಾರಣವಾಗಿದೆ. ಏಕೆಂದರೆ ಈ ಉತ್ಪನ್ನಗಳಲ್ಲಿ ಕಂಡುಬರುವ ಪರ್ಫ್ಲೂರೋಆಕ್ಟಾನಿಕ್ ಆಮ್ಲ (perfluorooctanoic acid) ಲೈಂಗಿಕ ಶಕ್ತಿಯನ್ನು ಕುಂದಿಸುವುದನ್ನು ಕಂಡುಕೊಳ್ಳಲಾಗಿದೆ.

ಸಿಗಡಿ
ಸಾಗರ ಉತ್ಪನ್ನಗಳನ್ನು ಇಷ್ಟಪಡುವವರಿಗೆ ಸಿಗಡಿ ಎಂದರೆ ಅತಿ ಹೆಚ್ಚೇ ಇಷ್ಟವಾಗಿರುತ್ತದೆ. ಆದರೆ ವಿವಾಹಿತ ದಂಪತಿಗಳಿಗೆ ಇವು ಸೂಕ್ತ ಆಹಾರವಲ್ಲ! ಏಕೆಂದರೆ ಸಿಗಡಿಗಳ ಬಹುತೇಕ ಎಲ್ಲಾ ಬಗೆಗಳಲ್ಲಿಯೂ ಲೈಂಗಿಕ ರಸದೂತಗಳ ಮಟ್ಟವನ್ನು ಏರುಪೇರುಗೊಳಿಸುವ ಗುಣವಿದ್ದು ತನ್ಮೂಲಕ ಲೈಂಗಿಕ ನಿಃಶಕ್ತಿಗೂ ಕಾರಣವಾಗುತ್ತದೆ.

ಚೀಸ್
ಹೆಚ್ಚಿನ ಬಗೆಯ ಚೀಸ್ ಗಳನ್ನು ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ ಆದರೆ ಇವುಗಳಲ್ಲಿ ಕೃತಿಮವಾಗಿ ಸ೦ಯೋಜಿತ ರಸದೂತಗಳಿರಬಹುದು. ಇವು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾಗೂ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತಗಳ ಏರುಪೇರಿಗೆ ಕಾರಣವಾಗುತ್ತವೆ. ಈ ಏರುಪೇರು ಸಹಾ ಲೈಂಗಿಕ ನಿಃಶಕ್ತಿಗೆ ಕಾರಣವಾಗುತ್ತದೆ.

ಪುದೀನಾ
ಪುದೀನಾ ಎಲೆಗಳು ಬೇರೆಲ್ಲಾ ವಿಷಯಗಳಿಗೆ ಉತ್ತಮವಾಗಿದ್ದರೂ ಲೈಂಗಿಕ ಶಕ್ತಿಯ ವಿಷಯ ಬಂದಾಗ ಮಾತ್ರ ತಪ್ಪು ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿರುವ ಮೆಂಥಾಲ್ ಟೆಸ್ಟಾಸ್ಟೆರೋನ್ ರಸದೂತದ ಮಟ್ಟವನ್ನು ಕೆಳಕ್ಕಿಳಿಸಬಹುದು.

ಬಾಟಲಿ ನೀರು
ಕುಡಿಯುವ ನೀರು ಸುರಕ್ಷಿತವಾಗಿರಬೇಕೆಂದು ನಾವು ಇಂದು ದುಬಾರಿ ಬೆಲೆ ನೀಡಿ ಬಾಟಲಿ ನೀರನ್ನೇ ಖರೀದಿಸುತ್ತೇವೆ. ಆದರೆ ಈ ನೀರಿನ ಕುಡಿಯುವಿಕೆಯೂ ಲೈಂಗಿಕ ನಿಃಶಕ್ತಿಗೆ ಕಾರಣವಾಗಬಹುದು. ಏಕೆಂದರೆ ಈ ನೀರನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಬಿಪಿಎ (ಅಥವಾ bisphenol A) ಎಂಬ ರಾಸಾಯನಿಕ ಈ ಬಾಟಲಿ ಸೂರ್ಯನ ಬೆಳಕಿಗೆ ಬಿದ್ದಾಗ ನೀರಿನಲ್ಲಿ ಕರಗಿಬಿಡುತ್ತದೆ. ನೀರಿನೊಂದಿಗೆ ದೇಹ ಸೇರಿದ ಈ ರಾಸಾಯನಿಕ ಲೈಂಗಿಕ ಶಕ್ತಿ ಹಾಗೂ ಫಲವತ್ತತೆಯನ್ನೆ ಕಸಿದು ಬಿಡಬಹುದು.



Click it and Unblock the Notifications








