For Quick Alerts
ALLOW NOTIFICATIONS  
For Daily Alerts

ಕುತ್ತಿಗೆ ನೋವು ನಿರ್ಲಕ್ಷ್ಯ ಮಾಡಬೇಡಿ- ಇದು ಕ್ಯಾನ್ಸರ್‌ನ ಲಕ್ಷಣ ಕೂಡ ಆಗಿರಬಹುದು!!

|

ಕುತ್ತಿಗೆಯು ನಮ್ಮ ದೇಹದ ಸೂಕ್ಷ್ಮ ಭಾಗ. ಇಲ್ಲಿ ತುಂಬಾ ಮೃಧುವಾದ ಅಂಗಾಂಶಗಳಾದ ಸ್ನಾಯುಗಳು, ರಕ್ತನಾಳಗೂ ಮತ್ತು ನರಗಳು ಇವೆ. ಹಿಂದಿನ ಭಾಗದಲ್ಲಿ ಬೆನ್ನಿನ ಮೂಳೆಯು ಹಾದು ಹೋದರೆ ಮುಂಭಾಗದಲ್ಲಿ ವಾಯುನಾಳವಿದೆ. ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ನೋವು ಅಥವಾ ಬಿಗಿತವನ್ನು ಕುತ್ತಿಗೆ ನೋವು ಎಂದು ಕರೆಯಲಾಗುವುದು. ಈ ನೋವು ಭುಜಗಳು, ಕೈಗಳು ಮತ್ತು ಕುತ್ತಿಗೆಗೆ ವಿಸ್ತರಿಸಬಹುದು. ಇದರಿಂದ ಒಂದು ಬದಿಯ ಅಥವಾ ಎರಡು ಬದಿಯಲ್ಲಿ ತಲೆನೋವು ಕಾಣಿಸಿಕೊಳ್ಳಬಹುದು. ಕುತ್ತಿಗೆಯ ಸ್ನಾಯುಗಳು ತುಂಬಾ ಒತ್ತಡದಿಂದ, ಊದಿಕೊಂಡು ಮತ್ತು ಸ್ಪರ್ಶಿಸುವಾಗ ಕಠಿಣವಾಗಿರಬಹುದು.

ಸ್ನಾಯುಗಳ ಮೇಲೆ ಒತ್ತಡ ಮತ್ತು ಇತರ ಮೃಧುವಾದ ಅಂಗಾಂಶಗಳಾದ ಅಸ್ಥಿರಜ್ಜುಗಳು ಮತ್ತು ಸ್ನಾಯುಗಳ ಉಳುಕುವಿನಿಂದಾಗಿ ನೋವು ಕಾಣಿಸಿಕೊಳ್ಳುವುದು. ಗಾಯವು ಹಠಾತ್ ಆಗಿ ಬಿದ್ದ ಒತ್ತಡದ ಪರಿಣಾಮವಾಗಿರ ಬಹುದು. ಇದು ಯಾವುದಾದರೂ ಅಪಘಾತ ಅಥವಾ ಕುತ್ತಿಗೆಗೆ ಒತ್ತಡ ಹೇರುವಂತೆ ಆಗಬಹುದು. ಭಾರವಾಗಿರು ಸೂಟ್ ಕೇಸ್ ಅನ್ನು ಹೊತ್ತುಕೊಂಡು ಹೋಗುವುದು ಅಥವಾ ಸರಿಯಾದ ಭಂಗಿಯಲ್ಲಿ ನಿದ್ರಿಸದೆ ಇರುವುದು ಕೂಡ ಕುತ್ತಿಗೆ ನೋವಿಗೆ ಕಾರಣವಾಗಬಹುದು...

ಕುತ್ತಿಗೆ ನೋವಿಗೆ ಸಾಮಾನ್ಯ ಕಾರಣಗಳು

ಕುತ್ತಿಗೆ ನೋವಿಗೆ ಸಾಮಾನ್ಯ ಕಾರಣಗಳು

ಸ್ನಾಯುಗಳು ದಣಿಯುವುದು ಅತಿಯಾಗಿ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ನೋಡುವುದರಿಂದ ಅದು ಸ್ನಾಯುಗಳು ದಣಿಯುವಂತೆ ಮಾಡುವುದು. ಹಾಸಿಗೆ ಮೇಲೆ ಮಲಗಿಕೊಂಡು ಪುಸ್ತಕ ಓದುವುದು ಅಥವಾ ಹಲ್ಲುಗಳನ್ನು ಒಲಿಯುವುದರಿಂದಲೂ ಕುತ್ತಿಗೆ ಸ್ನಾಯುಗಳು ದಣಿಯುವುದು.

ಗಾಯಾಳು

ಕುತ್ತಿಗೆ ಒಮ್ಮೆ ಹಿಂದಕ್ಕೆ ಮತ್ತು ಮತ್ತೆ ಮುಂದಕ್ಕೆ ಭಾಗಿದರೆ ಆಗ ಹಠಾತ್ ಆಗಿ ಗಾಯಾಳುವಾಗಿ ಮೃಧುಅಂಗಾಂಶಗಳು ದಣಿಯುವುದು.

ನರಗಳ ಸಂಕೋಚನ

ಬೋನ್ ಸ್ಪರ್ಸ್ ನರಗಳನ್ನು ಒತ್ತುತ್ತದೆ

ಕೀಲುಗಳು ತಪ್ಪುವುದು

ದೇಹದಲ್ಲಿರುವ ಇತರ ಗಂಟುಗಳಂತೆ ಕುತ್ತಿಗೆಯ ಗಂಟುಗಳು ಕೂಡ. ವಯಸ್ಸಾಗುತ್ತಾ ಇರುವಂತೆ ಇದು ದುರ್ಬಲವಾಗುವುದು. ಅಸ್ಥಿ ಸಂಧಿವಾತವು ನಿಮ್ಮ ಕಶೇರುಖಂಡಗಳ ನಡುವೆ ಕಾರ್ಟಿಲೆಜ್ ಕ್ಷೀಣಿಸಲು ಕಾರಣವಾಗುತ್ತದೆ.

ಕಾಯಿಲೆಗಳು

ಕಾಯಿಲೆಗಳಾಗಿರುವ ಸಂಧಿವಾತ, ಮೈನಿಂಜೈಟಿಸ್ ಅಥವಾ ಕ್ಯಾನ್ಸರ್ ನಂತಹ ಕಾಯಿಲೆಗಳು ಕುತ್ತಿಗೆ ನೋವು ಉಂಟು ಮಾಡಬಹುದು.

ಕಂಪ್ಯೂಟರ್ ಮುಂದೆ 8-10 ಗಂಟೆಗಳ ಕಾಲ ನಿರಂತರವಾಗಿ ಕೂತು ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಕಾಡಬಹುದು.. ಇತಂಹ ಸಮಯದಲ್ಲಿ ಕುತ್ತಿಗೆಯನ್ನು ಎಡಗಡೆಗೆ ಎಷ್ಟು ಸಾಧ್ಯವೋ ಅಷ್ಟು ತಿರುಗಿಸಿ 20 ಸೆಕೆಂಡ್ ಹಾಗೆಯೇ ಇರಬೇಕು. ಇದನ್ನೇ ಬಲಗಡೆಗೂ ಅನುಸರಿಸಬೇಕು. ಆದರೆ ತುಂಬಾ ಬೇಗಬೇಗನೆ ಈ ವ್ಯಾಯಾಮವನ್ನು ಮಾಡಬಾರದು. ನಿಧಾನವಾಗಿ ಅನುಸರಿಸಬೇಕು.

ಕುತ್ತಿಗೆ ನೋವು ಏನನ್ನು ಸೂಚಿಸುವುದು?

ಕುತ್ತಿಗೆ ನೋವು ಏನನ್ನು ಸೂಚಿಸುವುದು?

ಕುತ್ತಿಗೆಯಲ್ಲಿರುವಂತಹ ಸ್ನಾಯುಗಳು ಚೂಪು, ನೋವು ಮತ್ತು ಸ್ಪರ್ಶಿಸಿದಾಗ ಗಟ್ಟಿಯಾದ ಅನುಭವವಾಗಬಹುದು. ನಿಮ್ಮ ತಲೆಯು ಒಂದೇ ಬದಿಗೆ ಇದ್ದಾಗ ಅಸಾಮಾನ್ಯವಾಗಿರುವಂತಹ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು.

ತಲೆಬುರುಡೆಯಲ್ಲಿ ಒಂದು ರೀತಿಯ ನೋವು, ಭುಜಗಳು ಮತ್ತು ಕೈಗಗಳಲ್ಲಿ ಬಳಲಿಕೆ ಕಂಡುಬರಬಹುದು. ಗಂಭೀರವಾಗ ಕಾಯಿಲೆಯಿಂದ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಹೆಚ್ಚಾಗಿ ಕುತ್ತಿಗೆ ನೋವು ಕೇವಲ ಒಂದು ವಾರದಲ್ಲಿ ಕಾಣೆಯಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಮಿದುಳ್ಪೊರೆಯುರಿತದ ಲಕ್ಷಣವಾಗಿರಬಹುದು.

ಅದಾಗ್ಯೂ, 3-6 ವಾರಗಳಲ್ಲಿ ನೋವು ಹಾಗೆ ಉಳಿದಿಕೊಂಡರೆ ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಇದು ಬಾಯಿ ಅಥವಾ ಗಂಟಲಿನ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಇದರ ಗಡ್ಡೆಗಳು ಕುತ್ತಿಗೆ ಹರಡಿರಬಹುದು. ತಲೆ ಮತ್ತು ಕುತ್ತಿಗೆಯ ಭಾಗದಲ್ಲಿ ನಿಮಗೆ ನೋವಿನ ಅನುಭವವಾಗಬಹುದು. ಇದರಿಂದ ಜಗಿಯಲು ಮತ್ತು ನುಂಗಲು ಕಷ್ಟವಾಗಬಹುದು.

ಇದರರ್ಥ ಕುತ್ತಿಗೆ ನೋವು ಕ್ಯಾನ್ಸರ್ ನ ಲಕ್ಷಣವೇ?

ಇದರರ್ಥ ಕುತ್ತಿಗೆ ನೋವು ಕ್ಯಾನ್ಸರ್ ನ ಲಕ್ಷಣವೇ?

ಯಾವಾಗಲೂ ಅಲ್ಲ, ಕ್ಯಾನ್ಸರ್ ಗೆ ಸಂಬಂಧಪಟ್ಟ ಕೆಲವೊಂದು ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ನಾವು ಇಲ್ಲಿ ತಿಳಿಯುವ.

• ಸಾಮಾನ್ಯವಾಗಿರುವ ಲಕ್ಷಣವೆಂದು ಊತವು ಕಡಿಮೆಯಾಗದೆ ಇರುವದು.

• ಬಾಯಿಯಲ್ಲಿ ಕೆಂಪು ಅಥವಾ ಬಿಳಿ ಬಣ್ಣದ ಕಲೆಗಳು

• ನಿರಂತರವಾಗಿ ಇರುವಂತಹ ಗಂಟಲು ನೋವು

• ಸ್ವಚ್ಛವಾಗಿಟ್ಟುಕೊಂಡರೆ ಬಾಯಿಯಲ್ಲಿ ದುರ್ಗಂಧ ಬರುವುದು.

• ಸ್ವರದಲ್ಲಿ ಹಠಾತ್ ಬದಲಾವಣೆ

• ನಿರಂತ ಮೂಗಿನ ದಟ್ಟಣೆ

ಕುತ್ತಿಗೆ ನೋವಿಗೆ ಚಿಕಿತ್ಸೆ ಮತ್ತು ಪರಿಹಾರಗಳು

ಕುತ್ತಿಗೆ ನೋವಿಗೆ ಚಿಕಿತ್ಸೆ ಮತ್ತು ಪರಿಹಾರಗಳು

ಕ್ಯಾನ್ಸರ್ ಗೆ ಸಂಬಂಧಪಟ್ಟಿರುವ ಮೇಲಿನ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಕಾಣಿಸದೆ ಇದ್ದರೆ ಆಗ ಕುತ್ತಿಗೆ ನೋವು ಬೇರೆ ಕಾರಣದಿಂದ ಬಂದಿರಬಹುದು. ಸಾಮಾನ್ಯವಾಗಿ ಕುತ್ತಿಗೆ ನೋವು ಸರಿಯಾದ ಭಂಗಿಯಲ್ಲಿ ಮಲಗದೆ ಇರುವುದು ಮತ್ತು ವಯಸ್ಸಿಗೆ ಸಂಬಂಧಪಟ್ಟ ಸ್ನಾಯುಗಳ ದುರ್ಬಲತೆಯಿಂದ ಬರಬಹುದು. ಆದಷ್ಟು ಮಟ್ಟಿಗೆ ಚಟುವಟಿಕೆಯಿಂದ ಇರಿ. ನಿಮಗೆ ವಿಶ್ರಾಂತಿ ಬೇಕೆಂದಿಲ್ಲ. ಕೆಲಸಕ್ಕೆ ಹೋಗಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಬಹುದು.

ಕುತ್ತಿಗೆ ನೋವಿಗೆ ಚಿಕಿತ್ಸೆ ಮತ್ತು ಪರಿಹಾರಗಳು

ಕುತ್ತಿಗೆ ನೋವಿಗೆ ಚಿಕಿತ್ಸೆ ಮತ್ತು ಪರಿಹಾರಗಳು

ಭಂಗಿಯನ್ನು ಸುಧಾರಿಸಿ, ಆಗಾಗ ವಿಶ್ರಾಂತಿ ಪಡೆಯಿರಿ ಮತ್ತು ನಿಮ್ಮ ಡೆಸ್ಕ್ ಮತ್ತು ಕುರ್ಚಿ ಮತ್ತು ಕಂಪ್ಯೂಟರ್ ನ್ನು ಹೊಂದಾಣಿಕೆ ಮಾಡಿ. ಫೋನ್ ನಲ್ಲಿ ಮಾತನಾಡಲು ಹೆಡ್ ಸೆಟ್ ಮತ್ತು ಸ್ಪೀಕರ್ ಬಳಸಿ. ಧೂಮಪಾನ ಬಿಡಿ, ಭಾರವಾದ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಬೇಡಿ ಮತ್ತು ಸರಿಯಾದ ಭಂಗಿಯಲ್ಲಿ ಮಲಗಿ.

ಕಡಿಮೆಯಿಂದ ಮಧ್ಯಮದವರಿಗಿನ ಕುತ್ತಿಗೆ ನೋವು ಸ್ವಯಂ ಚಿಕಿತ್ಸೆಯಿಂದ ಎರಡರಿಂದ ಮೂರು ವಾರಗಳಲ್ಲಿ ಕಡಿಮೆಯಾಗುವುದು. ಕುತ್ತಿಗೆ ನೋವಿಗೆ ಕೆಲವೊಂದು ಚಿಕಿತ್ಸೆಗಳು ಕೂಡ ಇದೆ. ನಿಮ್ಮ ವೈದ್ಯರು ದೈಹಿಕ ಚಿಕಿತ್ಸೆ, ಟ್ರಾನ್ಸ್ಕಟೀನಿಯಸ್ ವಿದ್ಯುತ್ ನರ ಉತ್ತೇಜನ (TENS),ಎಳೆತ ಮತ್ತು ಅಲ್ಪಾವಧಿಯ ನಿಶ್ಚಲತೆ ಚಿಕಿತ್ಸೆಗಳನ್ನು ಹೇಳಬಹುದು. ಅಕ್ಯೂಪಂಕ್ಚರ್, ಚಿರೋಪ್ರಾಕ್ಟಿಕ್ ಅಥವಾ ಕುತ್ತಿಗೆ ನೋವಿಗೆ ಮಸಾಜ್ ಮಾಡುವಂತಹ ಕೆಲವೊಂದು ಚಿಕಿತ್ಸೆಗಳು ಇವೆ. ಕೆಲವೊಂದು ಸಲ ತೀವ್ರವಾಗಿ ಕಾಡುವಂತಹ ಕುತ್ತಿಗೆ ನೋವು ಹುಸಿ ಎಚ್ಚರಿಕೆಯಾಗಿರಬಹುದು ಮತ್ತು ಇದರ ಬಗ್ಗೆ ಚಿಂತೆ ಮಾಡಬೇಕೆಂದಿಲ್ಲ. ಕುತ್ತಿಗೆಯಲ್ಲಿನ ಬಿಗಿತವು ಹುಸಿ ಎಚ್ಚರಿಕೆಯನ್ನು ಉಂಟು ಮಾಡುವಂತಹ ಮತ್ತೊಂದು ಕಾರಣವಾಗಿದೆ. ಕುತ್ತಿಗೆಯ ಬಿಗಿತ ಅಪಾಯಕಾರಿಯಲ್ಲ ಮತ್ತು ಸಾಮಾನ್ಯವಾಗಿ ಮಸ್ಕ್ಯುಲೋಸ್ಕೆಲಿಟಲ್ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವಂತಹ ನೋವಾಗಿದೆ. ಕುತ್ತಿಗೆ ನೋವು ಇದ್ದರೆ ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಇದು ಮಾನಸಿಕ ಯೋಗಕ್ಷೇಮ ಮತ್ತು ದೈಹಿಕ ಯೋಗಕ್ಷೇಮವನ್ನು ತಿಳಿಸುವ ಒಂದು ಸಣ್ಣ ಸೂಚನೆಯಾಗಿರಬಹುದು. ಕುತ್ತಿಗೆ ನೋವಿನ ಕೆಲವು ಕಾರಣಗಳು ತುಂಬಾ ತೀವ್ರವಾದ ನೋವು ಉಂಟುಮಾಡುವುದು ಅಪರೂಪ. ಕುತ್ತಿಗೆ ನೋವು ಹಾನಿಯುಂಟು ಮಾಡುವ ಸಾಧ್ಯತೆ ಕೇವಲ ಶೇ.1 ಮಾತ್ರ ಮತ್ತು ಕ್ಯಾನ್ಸರ್, ಸ್ವರಕ್ಷಿತ ರೋಗ ಮತ್ತು ಬೆನ್ನುಮೂಳೆಗೆ ಉಂಟಾಗಿರುವ ಹಾನಿಯಿಂದ ಉಂಟಾಗುವ ನೋವಿಗೂ ಚಿಕಿತ್ಸೆಯಿದೆ.

English summary

Can Neck Pain Be A Sign Of Cancer?

Our neck comprises soft tissues including muscles, blood vessels, and nerves. There is a spine that runs down at the back, and the air pipe at the front. A general discomfort in the neck area and stiffness in the neck muscles can be referred to as neck pain. The pain may spread out to the shoulder, out into the arms, the hands or up into the head, causing a one-sided or a double-sided headache. The muscles in the neck are likely to be tense, sore and feel hard to the touch.
X
Desktop Bottom Promotion