For Quick Alerts
ALLOW NOTIFICATIONS  
For Daily Alerts

ಮಾರಕ 'ಕ್ಯಾನ್ಸರ್' ರೋಗವನ್ನು ಗೋಮೂತ್ರದಿಂದ ಗುಣಪಡಿಸಬಹುದು!

By Hemanth
|

ಹಿಂದಿನಿಂದಲೂ ಭಾರತೀಯರಿಗೆ ಗೋಮೂತ್ರವೆಂದರೆ ತುಂಬಾ ಪವಿತ್ರ. ಕೆಲವು ಪೂಜಾ ಕಾರ್ಯಕ್ರಮಗಳಿಗೂ ಗೋಮೂತ್ರ ಬಳಸಲಾಗುವುದು. ಇಂತಹ ಗೋಮೂತ್ರವನ್ನು ಆಯುರ್ವೇದದಲ್ಲೂ ವಿವಿಧ ರೀತಿಯ ಕಾಯಿಲೆಗಳ ಚಿಕಿತ್ಸೆಗೆ ಬಳಸುತ್ತಾ ಬರಲಾಗಿದೆ. ಅದೇ ರೀತಿ ಗುಜರಾತ್ ನ ಜುನಾಘಡ್ ಕೃಷಿ ವಿಶ್ವ ವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು ಸಂಶೋಧನೆಯೊಂದನ್ನು ನಡೆಸಿ, ಗೋಮೂತ್ರವು ಬಾಯಿ, ಶ್ವಾಸಕೋಶ, ಕಿಡ್ನಿ, ಚರ್ಮ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ನ್ನು ನಿವಾರಿಸಬಲ್ಲದು ಎಂದು ಕಂಡುಕೊಂಡಿದ್ದಾರೆ. ಸಂಶೋಧನಾ ತಂಡದಲ್ಲಿ ಸಹಾಯಕ ಪ್ರಾಧ್ಯಾಪಕಿ ಶ್ರದ್ಧಾ ಭಟ್, ರುಕಾಂಸಿನ್ ತೋಮರ್ ಮತ್ತು ಕವಿತಾ ಜೋಶಿ ಅವರು ಹಲವಾರು ವರ್ಷಗಳ ಸಂಶೋಧನೆ ಮಾಡಿ ಅಧ್ಯಯನ ವರದಿ ತಯಾರು ಮಾಡಿದ್ದಾರೆ.

ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರವಾಗಿ ಪ್ರಯೋಗ ಮಾಡಿದ ಕಾರಣ ಇದು ತುಂಬಾ ಅಪಾಯಕಾರಿಯಾಗಿತ್ತು. ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಒಂದು ದಿನದಲ್ಲಿ ಎಷ್ಟು ಪ್ರಮಾಣದ ಗೋಮೂತ್ರ ಬೇಕೆಂದು ನಾವು ಕಂಡುಕೊಂಡಿದ್ದೇವೆ' ಎಂದು ಶ್ರದ್ಧಾ ಭಟ್ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಕಿಮೋಥೆರಪಿಯು ಕ್ಯಾನ್ಸರ್ ನ ಆರೋಗ್ಯಕರ ಕೋಶಗಳನ್ನು ಮಾತ್ರ ಕೊಲ್ಲುತ್ತದೆ. ಆದರೆ ಗೋಮೂತ್ರವು ಹಾನಿಗೀಡಾದ ಕೋಶಗಳನ್ನು ಕೂಡ ಕೊಲ್ಲುವುದು. ಗೋಮೂತ್ರದಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿವಿಧ ವಿಧಾನಗಳು ಇವೆ. ಗೋಮೂತ್ರ ಸಂಗ್ರಹಿಸಿ, ಶುದ್ಧೀಕರಣ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ಸೂರ್ಯಾಸ್ತ ವೇಳೆ ಕ್ಯಾನ್ಸರ್ ರೋಗಿಗೆ ನೀಡಲಾಗುತ್ತದೆ' ಎಂದು ಆಯುರ್ವೇದದ ಹಿರಿಯ ತಜ್ಞ, ಎಂಡಿ ಡಾ. ಶಾಂತರಾಮನ್ ಬೋಲ್ಡ್ ಸ್ಕೈಗೆ ತಿಳಿಸಿದ್ದಾರೆ.

ಅಗತ್ಯಕ್ಕೆ ತಕ್ಕಂತೆ ಗೋಮೂತ್ರದ ಜತೆಗೆ ಕೆಲವು ಗಿಡಮೂಲಿಕೆಗಳನ್ನು ಕೂಡ ಬಳಸಿಕೊಂಡಿದ್ದೇವೆ ಎಂದು ಹೇಳಿದ ಶಾಂತರಾಮನ್ ಅವರಲ್ಲಿ, ಗೋಮೂತ್ರದಲ್ಲಿ ಹೇಗೆ ಔಷಧೀಯ ಗುಣಗಳು ಇವೆ ಎಂದು ಕೇಳಿದಾಗ, ಹಸುಗಳು ಸೂರ್ಯನ ಕಿರಣಗಳಿಂದ ಔಷಧೀಯ ಗುಣಗಳನ್ನು ಪಡೆಯುತ್ತವೆ. ಇದರಿಂದ ಮೂತ್ರ ಮತ್ತು ಸೆಗಣಿಯಲ್ಲಿ ಔಷಧೀಯ ಗುಣಗಳು ಬರುವುದು. ಇದು ಎಲ್ಲಾ ರೀತಿಯ ಸೂಕ್ಷ್ಮಾಣುಗಳು ಕೊಲ್ಲುವುದು, ಅದೇ ರೀತಿ ಕ್ಯಾನ್ಸರ್ ನ್ನು ಕೂಡ ಎಂದರು...

ಹಸುಗಳ ರಾಸಾಯನಿಕ ಸಂಯೋಜನೆ ಎಂದರೇನು?

ಹಸುಗಳ ರಾಸಾಯನಿಕ ಸಂಯೋಜನೆ ಎಂದರೇನು?

ಗೋಮೂತ್ರದಲ್ಲಿರುವ ಶೇ.95ರಷ್ಟು ನೀರಿನಾಂಶವಿದ್ದು, ಇದರಲ್ಲಿ ಶೇ.2.5ರಷ್ಟು ಯೂರಿಯಾ, ಖನಿಜಗಳು, ಶೇ.2.5ರಷ್ಟು ಕಿಣ್ವ, ಹಾರ್ಮೋನುಗಳು ಮತ್ತು 24 ರೀತಿಯ ಉಪ್ಪಿನಾಂಶವಿದೆ. ಗೋಮೂತ್ರದಲ್ಲಿರುವ ಇತರ ಅಂಶಗಳೆಂದರೆ ಕ್ಯಾಲ್ಸಿಯಂ, ಕಬ್ಬಿಣ, ಫೋಸ್ಪರಸ್, ಪೊಟಾಶಿಯಂ, ಕಾರ್ಬ್ರೋನಿಕ್ ಆಮ್ಲ, ಸಾರಜನಕ, ಮ್ಯಾಂಗನೀಸ್, ಸಲ್ಫರ್, ಅಮೋನಿಯ, ಫಾಸ್ಫೇಟ್ ಗಳು, ಯೂರಿಯಾ, ಅಮೈನೊ ಆಮ್ಲ ಕಿಣ್ವಗಳು, ಯೂರಿಕ್ ಆಸಿಡ್, ಸಿಟೊಕಿನ್ ಮತ್ತು ಲ್ಯಾಕ್ಟೋಸ್. ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂದು ತಿಳಿಯುವ.

ಗೋಮೂತ್ರದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳಿವೆ

ಗೋಮೂತ್ರದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳಿವೆ

ಗೋಮೂತ್ರದಲ್ಲಿರುವಂತಹ ಯೂರಿಯಾ, ಔರಮ್ ಹೈಡ್ರಾಕ್ಸೈಡ್, ಕ್ರಿಯಾಟೈನ್, ಕಾರ್ಬೋಲಿಕ್ ಆಮ್ಲ, ಕ್ಯಾಲ್ಸಿಯಂ, ಮ್ಯಾಂಗನೀಸ್, ಮತ್ತು ಫಿನಾಲ್ ಗಳಿಂದಾಗಿ ಇದರಲ್ಲಿ ಸೂಕ್ಷ್ಮಾಣು ಮತ್ತು ಕೀಟಾಣು ವಿರೋಧಿ ಗುಣಗಳು ಬಂದಿವೆ. ಈಕೋಲಿ, ಸಾಲ್ಮೊನೆಲ್ಲಾ ಟೈಫಿ, ಪ್ರೋಟಿಯಸ್ ವಲ್ಗ್ಯಾರಿಸ್, ಎಸ್ ಔರೆಸ್, ಬ್ಯಾಸಿಲಸ್ ಸೀರೆಸ್ ಮತ್ತು ಸ್ಟ್ಯಾಫಿಲೋಕೊಕಸ್ ಎಪಿಡರ್ಮಿಡಿಸ್ ಯಂತಹ ರೋಗಕಾರಕಗಳನ್ನು ಪ್ರತಿಬಂಧಿಸುವ ಅದ್ಭುತ ಸೂಕ್ಷ್ಮಾಣು ವಿರೋಧಿ ಶಕ್ತಿ ಇದರಲ್ಲಿದೆ.

ಇದು ಅತ್ಯುತ್ತಮ ಶಿಲೀಂಧ್ರ ನಾಶಕ

ಇದು ಅತ್ಯುತ್ತಮ ಶಿಲೀಂಧ್ರ ನಾಶಕ

ತಲೆಹೊಟ್ಟು ನಿವಾರಣೆಗೆ ಬೇವಿನ ಎಲೆಗಳು ಮತ್ತು ನಿಂಬೆರಸಕ್ಕಿಂತ ಗೋಮೂತ್ರವು ತುಂಬಾ ಪರಿಣಾಮಕಾರಿ ಎಂದು ಅಧ್ಯಯನವು ಹೇಳಿವೆ. ತಲೆಹೊಟ್ಟಿಗೆ ಕಾರಣವಾಗುವಂತಹ ಮಲಸಜಿಯಾ ಶಿಲೀಂಧ್ರದ ಬೆಳವಣಿಗೆಯನ್ನು ಗೋಮೂತ್ರವು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಇತರ ಕೆಲವು ಶಿಲೀಂಧ್ರಗಳನ್ನು ಇದು ನಾಶ ಮಾಡುವುದು.

ಇದು ಒಳ್ಳೆಯ ನಂಜುನಿರೋಧಕ

ಇದು ಒಳ್ಳೆಯ ನಂಜುನಿರೋಧಕ

ಗೋಮೂತ್ರದಲ್ಲಿರುವ ಮತ್ತೊಂದು ಔಷಧೀಯ ಗುಣವೆಂದರೆ ಇದು ನಂಜುನಿರೋಧಕ. ಇದನ್ನು ಗಾಯಕ್ಕೆ ಹಚ್ಚಿದಾಗ ಅದು ಶಮನಗೊಳಿಸುವುದು.

ಪರಾವಲಂಬಿಗಳ ವಿರುದ್ಧ ರಕ್ಷಣೆ ನೀಡುವುದು

ಪರಾವಲಂಬಿಗಳ ವಿರುದ್ಧ ರಕ್ಷಣೆ ನೀಡುವುದು

ಕರುಳಿನಲ್ಲಿರುವ ಕೆಲವೊಂದು ಪರಾವಲಂಬಿಗಳು ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳಾದ ಹೊಟ್ಟೆ ನೋವು, ಭೇದಿ ಮತ್ತು ದೇಹದಲ್ಲಿನ ಪೋಷಕಾಂಶಗಳ ಹಾನಿಗೆ ಕಾರಣವಾಗುವುದು. ಈ ಸಮಸ್ಯೆಗಳನ್ನು ಉಂಟುಮಾಡುವ ಪರಾವಲಂಬಿಗಳಿಗೆ ಗೋಮೂತ್ರವು ತುಂಬಾ ಪರಿಣಾಮಕಾರಿ ಔಷಧಿ.

ಪ್ರತಿರೋಧಕ ಶಕ್ತಿ ಉತ್ತೇಜಿಸುವುದು

ಪ್ರತಿರೋಧಕ ಶಕ್ತಿ ಉತ್ತೇಜಿಸುವುದು

ಭಾರತೀಯ ಹಳೆಯ ಪುಸ್ತಕವೊಂದರ ಪ್ರಕಾರ ಗೋಮೂತ್ರವು ಕಾಯಿಲೆಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಶೇ.104ರಷ್ಟು ಹೇಗೆ ಹೆಚ್ಚಿಸುವುದು ಎಂದು ಹೇಳಲಾಗಿದೆ. ಸೋಂಕಿನ ವಿರುದ್ಧ ಹೋರಾಡಲು ಇದು ದೊಡ್ಡ ಮಟ್ಟದಲ್ಲಿ ಪ್ರತಿರೋಧಕ ಶಕ್ತಿ ಉತ್ತೇಜಿಸುವುದು.

ಪರಿಣಾಮಕಾರಿ ಜೈವಿಕ ವರ್ಧಕ

ಪರಿಣಾಮಕಾರಿ ಜೈವಿಕ ವರ್ಧಕ

ಜೈವಿಕ ವರ್ಧಕವೆಂದರೆ ಒಂದು ವಸ್ತುವನ್ನು ಇನ್ನೊಂದರ ಜತೆಗೆ ಮಿಶ್ರ ಗೊಳಿಸಿದಾಗ ಅದು ಆ ವಸ್ತುವಿನ ದಕ್ಷತೆ ಹೆಚ್ಚಿಸುವುದು. ಉದಾಹರಣೆಗೆ ಹಾಲು ಮತ್ತು ಅರಶಿನ. ಆಯುರ್ವೇದದ ಪ್ರಕಾರ ಗೋಮೂತ್ರವು ಶಿಲೀಂಧ್ರ ವಿರೋಧಿ, ಸೂಕ್ಷ್ಮಾಣು ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡುವ ಜೈವಿಕವರ್ಧಕ.

ಗೋಮೂತ್ರದಲ್ಲಿರುವ ಇನ್ನಷ್ಟು ಪ್ರಯೋಜನಗಳು

ಗೋಮೂತ್ರದಲ್ಲಿರುವ ಇನ್ನಷ್ಟು ಪ್ರಯೋಜನಗಳು

ಸಾಮಾನ್ಯವಾಗಿ ಗೋವಿನ ಮೂತ್ರದಲ್ಲಿ ವಿಷವಿರುವುದು ಎಂದು ಭಾವಿಸಲಾಗುತ್ತದೆ. ಇದರಲ್ಲಿ ಶೇ.95ರಷ್ಟು ನೀರನ್ನು ಹೊರತುಪಡಿಸಿ ಯೂರಿಯಾ, ಖನಿಜಾಂಶಗಳು, ಉಪ್ಪು, ಹಾರ್ಮೋನು, ಕಿಣ್ವಗಳು ಇತ್ಯಾದಿಗಳಿರುವುದು. ಇದರ ಹೊರತಾಗಿಯೂ ಗೋಮೂತ್ರದ ಬಳಕೆಯಿಂದ ಹಲವಾರು ರೋಗಗಳು ಶಮನಗೊಂಡಿವುದು ಪತ್ತೆ ಮಾಡಲಾಗಿದೆ. ಆದರೆ ಈಗಲೂ ಇದರ ಬಳಕೆ ಬಗ್ಗೆ ವಾದಗಳು ನಡೆಯುತ್ತಿದೆ.

ವೈಜ್ಞಾನಿಕವಾಗಿ ಗೋಮೂತ್ರವನ್ನು ಔಷಧಿಯಾಗಿ ಬಳಕೆ ಮಾಡುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಇದ್ದರೂ ಶತಮಾನಗಳಿಂದಲೂ ಇದನ್ನು ಔಷಧಿ ರೂಪದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ತುಂಬಾ ಅಚ್ಚರಿ ಮೂಡಿಸುವ ವಿಚಾರವೆಂದರೆ ಇತ್ತೀಚೆಗೆ ಅಧ್ಯಯನಕ್ಕಾಗಿ ಗುಜರಾತ್ ನ ಗಿರಿ ಜಾತಿಯ ಗೋವುಗಳ ಮೂತ್ರದ 400 ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಅದರಲ್ಲಿ ಚಿನ್ನದ ಅಂಶವು ಪತ್ತೆಯಾಗಿದೆ.

ಗಿರ್ ಗೋವುಗಳ ಮೂತ್ರದಲ್ಲಿ ಕಂಡುಬಂದಿರುವ ಸುಮಾರು 5100 ಅಂಶಗಳಲ್ಲಿ 388ರಲ್ಲಿ ಔಷಧೀಯ ಗುಣಗಳು ಇವೆ ಮತ್ತು ಇದು ಹಲವಾರು ರೋಗಗಳಿಗೆ ಪರಿಣಾಮಕಾರಿ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆರೋಗ್ಯದ ವಿವಿಧ ಘಟ್ಟಗಳಲ್ಲಿ ಗೋಮೂತ್ರವು ಎಷ್ಟು ಲಾಭಕಾರಿ ಎಂದು ಚರ್ಚಿಸುವ.

*ಇದರಲ್ಲಿ ಹಲವಾರು ರೀತಿಯ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ರೋಗ ಉಂಟು ಮಾಡುವ ಕೀಟಾಣುಗಳನ್ನು ಕೊಲ್ಲುವುದು.

*ದೇಹದಲ್ಲಿ ಆಗುವಂತಹ ಅಸಮತೋಲವನ್ನು ಗೋಮೂತ್ರವು ಕಡಿಮೆ ಮಾಡುವುದು. ಆಯುರ್ವೇದಲ್ಲಿ ಇದನ್ನು ವಾತ, ಪಿತ್ತ ಮತ್ತು ಕಫ ಎನ್ನಲಾಗುತ್ತದೆ.

*ಇದು ದೇಹದಲ್ಲಿ ಕೊರತೆ ನೀಗಿಸಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. *ಇದು ದೇಹದಲ್ಲಿ ವಿಷಕಾರಿ ಅಂಶವನ್ನು ನಿವಾರಿಸಲು ಬಳಸಲಾಗುವುದು.

*ಗೋಮೂತ್ರವು ಕೆಲವೊಂದು ಕಾಯಿಲೆಗಳಾದ ಕ್ಯಾನ್ಸರ್, ಕುಷ್ಠರೋಗ, ಅಪಸ್ಮಾರ, ಮಧುಮೇಹ, ಮೆದುಳು ಮತ್ತು ಹೃದಯದ ಕಾಯಿಲೆ, ಚರ್ಮದ ಸಮಸ್ಯೆ ಮತ್ತು ಗರ್ಭಕೋಶದ ಸಮಸ್ಯೆ ನಿವಾರಣೆಗೆ ಇದು ಪರಿಣಾಮಕಾರಿ. ಜ್ವರ, ರಕ್ತಹೀನತೆ, ಯಕೃತ್ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಇದು ಉಪಯೋಗಕಾರಿ.

*ಇದನ್ನು ಜೈವಿಕವರ್ಧಕವಾಗಿಯೂ ಬಳಸಲಾಗುತ್ತದೆ. ಶತಮಾನಗಳಿಂದಲೂ ಭಾರತೀಯ ಔಷಧೀಯ ಕ್ರಮದಲ್ಲಿ ಬಳಸಲಾಗುತ್ತಿರುವ ಗೋಮೂತ್ರವು ತುಂಬಾ ಪರಿಣಾಮಕಾರಿ. ಇದು ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡುವುದು.

ಆದರೆ ಇದರ ಬಗ್ಗೆ ಈಗಲೂ ಹಲವಾರು ಸಂಶಯಗಳು ಇರುವ ಕಾರಣದಿಂದಮುಂದಿನ ದಿನಗಳಲ್ಲಿ ಇದರ ಸರಿಯಾದ ಅಧ್ಯಯನಗಳು ನಡೆದು ಔಷಧೀಯ ಗುಣಗಳು ಸಾಬೀತಾಗಬಹುದು. ಇದು ಚಿಕಿತ್ಸೆಯಲ್ಲಿ ತುಂಬಾ ಆರ್ಥಿಕ ಹಾಗೂ ಪರಿಸರ ಸ್ನೇಹಿ ಎಂದು ಸಾಬೀತಾಗಿದೆ. ಗೋಮೂತ್ರದ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇರುವ ಕಾರಣದಿಂದ ಇದರ ಔಷಧೀಯ ಗುಣಗಳು ನಮಗೆ ತಿಳಿದುಬರಲಿ.

English summary

Can Cow Urine Cure Cancer?

Biotechnology scientists in Gujarat claimed that cow urine can cure cancer such as those of mouth, lungs, kidney, skin, cervix and breast. "Cow urine is procured and processed through distillation and given to the cancer patients during sunset", Dr. Shantharaman, an Ayurvedic consultant told Boldsky exclusively.
Story first published: Monday, July 9, 2018, 13:04 [IST]
X
Desktop Bottom Promotion