ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸುವ ಆಹಾರಗಳು-ತಪ್ಪದೇ ಸೇವಿಸಿ

By Arshad
Subscribe to Boldsky

ಶ್ವಾಸಕೋಶಗಳ ಆರೋಗ್ಯಕ್ಕೆ ಕೆಲವು ಆಹಾರಗಳು ಹೆಚ್ಚು ಸೂಕ್ತವಾಗಿವೆ. ಈ ಆಹಾರಗಳ ಬಗ್ಗೆ ಅರಿಯುವ ಮುನ್ನ ಶ್ವಾಸಕೋಶಗಳ ಬಗ್ಗೆ ಕೊಂಚ ಅರಿತುಕೊಳ್ಳುವುದು ಅಗತ್ಯ. ನಾವೆಲ್ಲರೂ ತಿಳಿದಂತೆ ಶ್ವಾಸಕೋಶಗಳು ಉಸಿರಾಟಕ್ಕೆ ಅಗತ್ಯವಾದ ಪ್ರಮುಖ ಅಂಗಗಳಾಗಿವೆ. ಇವುಗಳ ಮುಖ್ಯ ಕೆಲಸವೆಂದರೆ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ದೇಹದಲ್ಲಿ ಸಂಗ್ರಹವಾಗಿದ್ದ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೊರಹಾಕುವುದು. ಈ ಕ್ರಿಯೆಯನ್ನು ಉಶ್ವಾಸ ಎಂದರೆ ಉಸಿರನ್ನು ಒಳಗೆಳೆದುಕೊಳ್ಳುವ ಹಾಗೂ ನಿಶ್ವಾಸ ಅಂದರೆ ಉಸಿರನ್ನು ಹೊರಬಿಡುವ ಮೂಲಕ ನಡೆಸಲಾಗುತ್ತದೆ. ಇಲ್ಲಿಗೇ ಶ್ವಾಸಕೋಶಗಳ ಕೆಲಸ ಮುಗಿಯಲಿಲ್ಲ. ಹೃದಯ ದೇಹದ ವಿವಿಧ ಭಾಗಗಳಿಂದ ಮಲಿನ ರಕ್ತವನ್ನು ಶ್ವಾಸಕೋಶಗಳಿಗೆ ಕಳುಹಿಸುತ್ತದೆ.

ಈ ಮಲಿನ ರಕ್ತದಲ್ಲಿನ ಇಂಗಾಲದ ಡೈ ಆಕ್ಸೈಡ್‌ಗಳನ್ನು ನಿವಾರಿಸಿ ಇದರಲ್ಲಿ ಆಮ್ಲಜನಕವನ್ನು ಸೇರಿಸಿ ಮತ್ತೆ ದೇಹದ ವಿವಿಧ ಭಾಗಗಳಿಗೆ ಕಳುಹಿಸುತ್ತದೆ. ಅಂದರೆ ಹೃದಯ ಮತ್ತು ಶ್ವಾಸಕೋಶಗಳು ಜೊತೆ ಜೊತೆಯಾಗಿಯೇ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಹೃದಯದಷ್ಟೇ ಶ್ವಾಸಕೋಶಗಳೂ ಮುಖ್ಯ ಅಂಗಗಳಾಗಿವೆ. ಶ್ವಾಸಕೋಶಗಳು ತುಂಬಾ ಸೂಕ್ಷ್ಮವಾದ ಅಂಗಗಳಾಗಿದ್ದು ಇವುಗಳ ಕಾಳಜಿಯೂ ಸೂಕ್ಷ್ಮರೂಪದಲ್ಲಿಯೇ ಇರಬೇಕು. ಹಾಗಾಗಿ ಬಲ್ಲವರು ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತಾರೆ. ಧೂಮಪಾನದ ಮೂಲಕ ಶ್ವಾಸಕೋಶಗಳನ್ನು ಪ್ರವೇಶಿಸುವ ನಿಕೋಟಿನ್ ಹಾಗೂ ಹೊಗೆ ಶ್ವಾಸಕೋಶದ ಅತಿ ಸೂಕ್ಷ್ಮಭಾಗಗಳನ್ನೆಲ್ಲಾ ಘಾಸಿಗೊಳಿಸುತ್ತವೆ. ಇವುಗಳ ಮುಂದಿನ ಏಕಮಾತ್ರ ಕೆಲಸವೆಂದರೆ ಶ್ವಾಸಕೋಶದ ಕ್ಯಾನ್ಸರ್ ಉಂಟುಮಾಡುವುದು.

ಶ್ವಾಸಕೋಶಗಳಿಗೆ ಗಾಳಿಯನ್ನು ಕೊಂಡೊಯ್ಯುವ ಕೊಳವೆಗಳಾದ ಶ್ವಾಸನಾಳದಲ್ಲಿಯೂ ಕೆಲವೊಮ್ಮೆ ಸೋಂಕು ಉಂಟಾಗಿ ನ್ಯುಮೋನಿಯಾ, ಯಾವುದೇ ಪ್ರಕಾರದ ಫ್ಲೂ, ಅಸ್ತಮಾ ಮೊದಲಾದ ರೋಗಗಳು ಎದುರಾಗಬಹುದು. ಈ ಸ್ಥಿತಿ ಎದುರಾಗದೇ ಇರಲು ಸೂಕ್ತ ಮುಂಜಾಗರೂಕತೆಗಳನ್ನು ವಹಿಸಬೇಕು. ಗಾಳಿಯ ಮೂಲಕ ತೇಲಿ ಬರುವ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ಸುಗಳು ಮೂಗು, ಗಂಟಲು ಹಾಗೂ ಶ್ವಾಸನಾಳಗಳ ಒಳಭಾಗದ ತೇವಭಾಗದಲ್ಲಿ ಸುಲಭವಾಗಿ ಅಂಟಿಕೊಂಡು ಸೋಂಕು ಹರಡಿಸಬಲ್ಲವು. ಈ ಸೋಂಕನ್ನು ಎದುರಿಸಲು ಕೇವಲ ರೋಗ ನಿರೋಧಕ ಶಕ್ತಿಗೆ ಮಾತ್ರವೇ ಸಾಧ್ಯ. ಕೆಲವು ಆಹಾರಗಳ ಸೇವನೆಯ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಈ ಸೋಂಕುಗಳಿಂದ ರಕ್ಷಣೆ ಒದಗುತ್ತದೆ....

ಇಂತಹ ಕೆಲವು ಆಹಾರಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ. ಈ ಆಹಾರಗಳ ಸೇವನೆಯ ಮೂಲಕ ಗಾಳಿಯ ಮೂಲಕ ದೇಹಪ್ರವೇಶಿಸುವ ಹೊಗೆ, ಪರಾಗ ಅಥವಾ ಬೇರಾವುದೇ ಪ್ರದೂಷಕಗಳಿಂದ ಹೆಚ್ಚಿನ ರಕ್ಷಣೆ ಪಡೆಯಬಹುದು....  

ಕ್ಯಾರೋಟಿನಾಯ್ಡು ಹೆಚ್ಚಿರುವ ಆಹಾರಗಳು

ಕ್ಯಾರೋಟಿನಾಯ್ಡು ಹೆಚ್ಚಿರುವ ಆಹಾರಗಳು

ಕ್ಯಾರೋಟೀನ್ ಎಂಬುದೊಂದು ವರ್ಣದ್ರವ್ಯವಾಗಿದ್ದು ಆಹಾರದ ಬಣ್ಣಕ್ಕೆ ಕಾರಣವಾಗಿವೆ. ಕ್ಯಾರೆಟ್, ಸಿಹಿಗೆಣಸು, ಹಸಿರು ಮತ್ತು ದಪ್ಪನೆಯ ಎಲೆಗಳು, ಟೊಮಾಟೋ ಮೊದಲಾದವುಗಳಲ್ಲಿ ಈ ಕ್ಯಾರೋಟಿನಾಯ್ಡುಗಳು ಹೆಚ್ಚಿರುತ್ತವೆ. ಕ್ಯಾರೋಟಿನಾಯ್ಡುಗಳು ಶ್ವಾಸಕೋಶದ ಆರೋಗ್ಯಕ್ಕೆ ಅತಿ ಅಗತ್ಯವಾದ ಪೋಷಕಾಂಶಗಳಾಗಿವೆ. ಅಲ್ಲದೇ ಶ್ವಾಸಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಆಂಟಿ ಆಕ್ಸಿಡೆಂಟು ಸಹಾ ಆಗಿದೆ. ಅಲ್ಲದೇ ಈಗಾಗಲೇ ಅಸ್ತಮಾ ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಆದ್ದರಿಂದ ಆಗಾಗ ಕ್ಯಾರೋಟಿನಾಯ್ಡು ಹೆಚ್ಚಿರುವ ಆಹಾರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳು

ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳು

ಈ ಆಹಾರಗಳು ಶ್ವಾಸಕೋಶದ ಆರೋಗ್ಯ ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲೊಂದಾಗಿವೆ. ಒಟ್ಟಾರೆ ಆರೋಗ್ಯ, ವಿಶೇಷವಾಗಿ ಹೃದಯದ ಆರೋಗ್ಯಕ್ಕೆ ಕೊಬ್ಬಿನ ಆಮ್ಲಗಳು ಎಷ್ಟು ಮುಖ್ಯ ಎಂದು ನಾವೀಗಾಗಲೇ ಅರಿತಿದ್ದೇವೆ. ಇವುಗಳು ಹೆಚ್ಚಿರುವ ಆಹಾರ ಸೇವನೆಯಿಂದ ಇನ್ನೊಂದು ಉತ್ತಮ ಕಾರ್ಯವಾಗುತದೆ. ಇವು ಅಸ್ತಮಾದ ಲಕ್ಷಣಗಳಾದ ಉಸಿರು ಕಟ್ಟುವುದು, ಉಸಿರಾಡುವಾಗ ಸೀಟಿಯಂತಹ ಸದ್ದು ಬರುವುದು ಮೊದಲಾದ ತೊಂದರೆಗಳನ್ನು ನಿವಾರಿಸುತ್ತವೆ. ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಅಸ್ತಮಾ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಿದೆ. ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳೆಂದರೆ ಸಾಲ್ಮನ್, ಟ್ಯೂನಾ, ಟ್ರೌಟ್ ಮೊದಲಾದ ಮೀನುಗಳು, ಒಣಫಲಗಳೂ ಹಾಗೂ ಅಗಸೆ ಬೀಜಗಳು.

ಕೋಸಿನ ಜಾತಿಯ ತರಕಾರಿಗಳು

ಕೋಸಿನ ಜಾತಿಯ ತರಕಾರಿಗಳು

ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಕೋಸಿನ ಬಗೆಯ ಆಹಾರಗಳು ಅತ್ಯುತ್ತಮವಾಗಿವೆ. ಇದರಲ್ಲಿ ಎಲೆಕೋಸು, ಬ್ರೋಕೋಲಿ, ನವಿಲುಕೋಸು, ಹೂಕೋಸು, ಬ್ರಸಲ್ಸ್ ಮೊಳಕೆ ಮೊದಲಾದವು ಸೇರಿವೆ. ಇವುಗಳು ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿವೆ. ಇವುಗಳ ಸೇವನೆಯಿಂದ ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ಎಲ್ಲಾ ಕಲ್ಮಶಗಳು ನಿವಾರಿಸಲ್ಪಡುತ್ತವೆ. ಈ ತರಕಾರಿಗಳ ಅತ್ಯುತ್ತಮ ಪ್ರಯೋಜನವನ್ನು ಆದಷ್ಟು ಇವುಗಳನ್ನು ಹಸಿಯಾಗಿಯೇ ಸಾಲಾಡ್ ರೂಪದಲ್ಲಿ ಸೇವಿಸುವ ಮೂಲಕ ಪಡೆಯಬಹುದು.

ಫೋಲೇಟ್ ಹೆಚ್ಚಿರುವ ಆಹಾರಗಳು

ಫೋಲೇಟ್ ಹೆಚ್ಚಿರುವ ಆಹಾರಗಳು

ಫೋಲೇಟ್ ಭರಿತ ಆಹಾರಗಳನ್ನು ಸೇವಿಸಿದ ಬಳಿಕ ನಮ್ಮ ದೇಹದಲ್ಲಿ ಇವು ಫೋಲಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತವೆ. ಪಾಲಕ್ ಸೊಪ್ಪು. ಬ್ರೋಕೋಲಿ, ಬೀಟ್ರೂಟ್, ಲಿಂಬೆಯ ಜಾತಿಯ ಹಣ್ಣುಗಳು, ದ್ವಿದಳ ಧಾನ್ಯಗಳು ಹಾಗೂ ಬೆಣ್ಣೆಹಣ್ಣಿನಲ್ಲಿ ಫೋಲೇಟ್ ಹೆಚ್ಚಿರುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು, ವಿಶೇಷವಾಗಿ ಶ್ವಾಸಕೋಶದಲ್ಲಿರುವ ಕಣಗಳನ್ನು ನಿವಾರಿಸಿ ಶ್ವಾಸಕೋಶದ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ. ಶ್ವಾಸಕೋಶದ ಆರೋಗ್ಯ ಕಾಪಾಡಲು ಇವು ಅತ್ಯುತ್ತಮ ಆಹಾರಗಳಾಗಿವೆ.

ವಿಟಮಿನ್ ಸಿ ಇರುವ ಆಹಾರಗಳು

ವಿಟಮಿನ್ ಸಿ ಇರುವ ಆಹಾರಗಳು

ಶ್ವಾಸಕೋಶಗಳ ಆರೋಗ್ಯ ಉತ್ತಮವಾಗಿರಲು ಆಗಾಗ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸೇವಿಸುತ್ತಿರಬೇಕು. ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಶ್ವಾಸಕೋಶಕ್ಕೆ ಆಗಮಿಸುವ ರಕ್ತದಲ್ಲಿ ಆಮ್ಲಜನಕವನ್ನು ಪೂರೈಸುವ ಕೆಲಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ಶ್ವಾಸಕೋಶದ ಸಹಿತ ದೇಹದ ಎಲ್ಲಾ ಅಂಗಗಳನ್ನು ರಕ್ಷಿಸುತ್ತದೆ. ಆದ್ದರಿಂದ ವಿಟಮಿನ್ ಸಿ ಇರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವುದು ಅಗತ್ಯ. ಎಲ್ಲಾ ಬಗೆಯ ಲಿಂಬೆಯ ಜಾತಿಯ ಹಣ್ಣುಗಳು, ಅಂದರೆ ಕಿತ್ತಳೆ, ಲಿಂಬೆ, ಚಕ್ಕೋತ, ಮೂಸಂಬಿ ಹಾಗೂ ಟೊಮಾಟೋ ಮತ್ತು ದೊಣ್ಣೆಮೆಣಸು, ಕಿವಿ ಹಣ್ಣು, ಸ್ಟ್ರಾಬೆರಿ, ದ್ರಾಕ್ಷಿ, ಅನಾನಾಸು ಮತ್ತು ಮಾವಿನ ಹಣ್ಣಿನಲ್ಲಿಯೂ ವಿಟಮಿನ್ ಸಿ ಇದೆ. ಈ ಎಲ್ಲಾ ಹಣ್ಣುಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಶ್ವಾಸಕೋಶದಿಂದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಹಲವು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುತ್ತದೆ. ವಿಶೇಷವಾಗಿ ಶ್ವಾಸಕೋಶದ ಸೋಂಕಿನ ವಿರುದ್ದ ಹೋರಾಡುತ್ತದೆ ಹಾಗೂ ಸೋಂಕು ಉಂಟಾಗಿದ್ದರೆ ಇದನ್ನು ಶೀಘ್ರವೇ ಕಡಿಮೆಗೊಳಿಸಲೂ ನೆರವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಉತ್ತಮ ಆಂಟಿ ಆಕ್ಸಿಡೆಂಟ್ ಗುಣವಿದೆ ಹಾಗೂ ಕ್ಯಾನ್ಸರ್‌ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಶ್ವಾಸಕೋಶ ಹಾಗೂ ದೇಹದ ಇತರ ಭಾಗಗಳಿಂದ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಶ್ವಾಸಕೋಶದ ಕ್ಯಾನ್ಸರ್ ಆವರಿಸುವುದರಿಂದಲೂ ರಕ್ಷಣೆ ಒದಗಿಸುತ್ತದೆ. ಅಸ್ತಮಾ ರೋಗಿಗಳಿಗೆ ಬೆಳ್ಳುಳ್ಳಿ ಅತ್ಯುತ್ತಮ ಆಹಾರವಾಗಿದೆ ಹಾಗೂ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿರುವವರಿಗೂ ಇದು ಅತ್ಯುತ್ತಮವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Best Foods For Lung Cleansing

    Taking into consideration your lung health, we at bold sky want to share with you best foods for lung health that will keep your lungs clean and help to remove toxins from them incorporated through smoke of any kind and pollutants. Have a look at some healthy food for your lungs.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more