For Quick Alerts
ALLOW NOTIFICATIONS  
For Daily Alerts

  ದೇಹದ ಲಿವರ್‌ನ ಕೊಬ್ಬನ್ನು ಕರಗಿಸುವ ಪವರ್ ಫುಲ್ ಆಹಾರಗಳು

  |

  ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಒಂದು ಕಾಯಿಲೆ ಎಂದರೆ ಕೊಬ್ಬು ಹೆಚ್ಚಾದ ಯಕೃತ್ ಅಥವಾ ಫ್ಯಾಟೀ ಲಿವರ್. ನಮ್ಮ ಸೊಂಟ ಹೊಟ್ಟೆಗಳಲ್ಲಿ ತುಂಬಿಕೊಂಡಿರುವ ಕೊಬ್ಬು ಕೊಂಚ ಪ್ರಮಾಣದಲ್ಲಿ ಯಕೃತ್ ನಲ್ಲಿಯೂ ಸಂಗ್ರಹಗೊಳ್ಳುತ್ತದೆ. ಆದರೆ ಇದು ಅತಿಯಾಗಬಾರದು. ಯಕೃತ್ ನಮ್ಮ ದೇಹದ ಪ್ರಮುಖ ಅಂಗವಾಗಿದ್ದು ಈ ಅಂಗಕ್ಕೆ ಎದುರಾಗುವ ಯಾವುದೇ ದುರ್ಬಲತೆ ಆರೋಗ್ಯವನ್ನು ಕುಂದಿಸಬಹುದು. ಯಕೃತ್ ನ ವೈಫಲ್ಯದಿಂದ ಎದುರಾಗುವ ಕಾಯಿಲೆಗಳಲ್ಲಿ ಪ್ರಮುಖವಾದುದೆಂದರೆ ಕಾಮಾಲೆರೋಗ ಅಥವಾ ಹಳದಿರೋಗ (ಜಾಂಡೀಸ್). ತಕ್ಷಣವೇ ಚಿಕಿತ್ಸೆ ದೊರಕದಿದ್ದರೆ ಇದು ಮಾರಣಾಂತಿಕವೂ ಆಗಬಹುದು.

  ಹೆಚ್ಚಿನವರು ತಿಳಿದುಕೊಂಡಂತೆ ಕೊಬ್ಬು ಇರುವುದೇ ಅನಾರೋಗ್ಯವಲ್ಲ, ನಮ್ಮ ಆರೋಗ್ಯಕ್ಕೆ ಕೊಬ್ಬು ಸಹಾ ಅವಶ್ಯಕ. ಆದರೆ ಇದು ಅಗತ್ಯಕ್ಕಿಂತಲೂ ಹೆಚ್ಚಾಗಬಾರದು ಅಷ್ಟೇ. ಯಕೃತ್ ನಲ್ಲಿಯೂ ಕೊಂಚ ಪ್ರಮಾಣದ ಕೊಬ್ಬು ಅಗತ್ಯ. ಆದರೆ ಇದು ಹೆಚ್ಚಾದರೆ ಕೊಬ್ಬು ಹೆಚ್ಚಾದ ಯಕೃತ್ ಅಥವಾ ಫ್ಯಾಟಿ ಲಿವರ್ ಎಂದು ಪರಿಗಣಿಸಲ್ಪಡುತ್ತದೆ ಹಾಗೂ ಇದರ ಪರಿಣಾಮವಾಗಿ ಸದಾ ಸುಸ್ತು, ತೂಕದಲ್ಲಿ ಇಳಿಕೆ, ಹಸಿವಿಲ್ಲದಿರುವುದು, ನಿಃಶಕ್ತಿ, ವಾಕರಿಕೆ ಮೊದಲಾದವು ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳು ಹೊಟ್ಟೆಯಲ್ಲಿ ನೋವು ಹಾಗೂ ಅಸುಖಕರ ಭಾವನೆಯನ್ನೂ ಅನುಭವಿಸುತ್ತಾರೆ. ಸಾಮಾನ್ಯವಾಗಿ ನಾವು ಕೊಂಚ ಹೊತ್ತು ಹೋದರೆ ಸರಿಹೋಗುತ್ತದೆ ಎಂದು ಈ ಲಕ್ಷಣಗಳನ್ನು ಅಲಕ್ಷಿಸಿಬಿಡುತ್ತೇವೆ. ಆದರೆ ಕೊಬ್ಬಿನ ಪ್ರಮಾಣ ಹೆಚ್ಚುತ್ತಾ ಹೋಗಿ ದೇಹ ತಾಳಿಕೊಳ್ಳಬಹುದಾದ ಮಿತಿ ಮೀರಿದರೆ ವಿಕೋಪದ ಲಕ್ಷಣಗಳು ಪ್ರಕಟಗೊಳ್ಳಲು ಪ್ರಾರಂಭವಾಗುತ್ತವೆ.

  ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

  ಯಕೃತ್ ನ ಕೊಬ್ಬನ್ನು ಕರಗಿಸಲು ಕೆಲವಾರು ಔಷಧಿಗಳಿವೆ. ಆದರೆ ಈ ಔಷಧಿಗಳಲ್ಲಿ ಆಯುರ್ವೇದೀಯ ಔಷಧಿಗಳೇ ಅತ್ಯುತ್ತಮವಾದ ಫಲಿತಾಂಶಗಳನ್ನು ಒದಗಿಸುತ್ತವೆ. ಈ ವಿಧಾನಗಳನ್ನು ಸಾವಿರಾರು ವರ್ಷಗಳಿಂದ ಅನುಸರಿಸುತ್ತಾ ಬರಲಾಗಿದೆ ಹಾಗೂ ಇವೆಲ್ಲವೂ ನೈಸರ್ಗಿಕವಾಗಿವೆ. ಆದ್ದರಿಂದ ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುರಕ್ಷಿತವಾಗಿವೆ. ಆಯುರ್ವೇದದ ಪ್ರಕಾರ ಕೊಬ್ಬು ಹೆಚ್ಚಾದ ಯಕೃತ್ ನ ಸ್ಥಿತಿಗೆ ದೋಶಗಳಲ್ಲಿ ಆಗಿರುವ ಅಸಮತೋಲನ ಅಥವಾ ಪಿತ್ತ ಎಂಬ ಭೌತಿಕ ಶಕ್ತಿಯೂ ಆಗಿರಬಹುದು. ಇಂದು ಈ ತೊಂದರೆಗೆ ಆಯುರ್ವೇದ ಸಲಹೆ ಮಾಡುವ ಎಂಟು ಪ್ರಮುಖ ಚಿಕಿತ್ಸೆಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ.... 

  ತ್ರಿಫಲ

  ತ್ರಿಫಲ

  ಆಯುರ್ವೇದದ ಚಿಕಿತ್ಸೆಗಳಲ್ಲಿ ಪ್ರಮುಖವಾಗಿ ಬಳಸಲ್ಪಡುವ ತ್ರಿಫಲ ಯಕೃತ್ ನಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಹಾಗೂ ಪಿತ್ತರಸ ಸ್ರವಿಸಲು ಪ್ರಚೋದನೆ ನೀಡುತ್ತದೆ ಹಾಗೂ ಹಸಿವನ್ನೂ ಹೆಚ್ಚಿಸುತ್ತದೆ.

  ಕಾಳುಮೆಣಸು ಮತ್ತು ಜೇನು

  ಕಾಳುಮೆಣಸು ಮತ್ತು ಜೇನು

  ಎರಡು ಗ್ರಾಂ ಕಾಳುಮೆಣಸಿನ ಪುಡಿ ಹಾಗೂ ಒಂದು ಚಿಕ್ಕ ಚಮಚ ಜೇನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯಿರಿ. ಇದು ಕೊಬ್ಬು ಹೆಚ್ಚಾದ ಯಕೃತ್ ನ ಕೊಬ್ಬು ಕರಗಿಸಲು ನೆರವಾಗುತ್ತದೆ.

  ಗುಡುಚಿ ಪುಡಿ

  ಗುಡುಚಿ ಪುಡಿ

  ಅಮೃತಬಳ್ಳಿ ಎಂದೂ ಕರೆಯಲ್ಪಡುವ ಗುಡುಚಿಪುಡಿಯನ್ನು ಯಕೃತ್ ನ ಸ್ವಚ್ಛತೆಗೆ ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. ಸುಮಾರು ಎರಡು ಗ್ರಾಂ ಗುಡುಚಿ ಪುಡಿಯನ್ನು ಎರಡು ಗ್ರಾಂ ಮುಸ್ತಾ ಪುಡಿ (musta powder (cyperus rotundus) ಅಥವಾ ತುಂಗೆ ಗಡ್ಡೆ) ಯನ್ನು ಚೆನ್ನಾಗಿ ಬೆರೆಸಿ ಬಿಸಿನೀರಿನಲ್ಲಿ ಕದಡಿ ದಿನಕ್ಕೊಂದು ಲೋಟ ಕುಡಿಯಿರಿ.

   ಅರಿಶಿನ

  ಅರಿಶಿನ

  ಅರಿಶಿನದಲ್ಲಿರುವ ದೇಹದ ಕಲ್ಮಶಗಳನ್ನು ನಿವಾರಿಸುವ ಆಂಟಿ ಆಕ್ಸಿಡೆಂಟ್ ಗುಣಗಳು ಯಕೃತ್ ನ ಕಲ್ಮಶಗಳನ್ನೂ ನಿವಾರಿಸಲು ಯೋಗ್ಯವಾಗಿವೆ. ಇದಕ್ಕಾಗಿ ಎರಡು ಗ್ರಾಂ ಅರಿಶಿನ ಪುಡಿಯನ್ನು ಎರಡು ಚಿಕ್ಕ ಚಮಚ ನೆಲ್ಲಿಕಾಯಿ ರಸದೊಂದಿಗೆ ಮಿಶ್ರಣ ಮಾಡಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ.

  ಅರ್ಜುನ ಮರದ ತೊಗಟೆ

  ಅರ್ಜುನ ಮರದ ತೊಗಟೆ

  ಈ ಹೆಸರಿನ ಗಿಡಮೂಲಿಕೆಯನ್ನು ಆಯುರ್ವೇದ ಯಕೃತ್ ನ ಕಲ್ಮಶಗಳನ್ನು ನಿವಾರಿಸಲು ಹಾಗೂ ಆರೋಗ್ಯಕರವಾಗಿರಿಸಲು ಬಳಸುತ್ತದೆ. ಅಲ್ಲದೇ ಈ ಮೂಲಿಕೆ ಹೃದಯವನ್ನು ಆರೋಗ್ಯಕರವಾಗಿರಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  ದಾಲ್ಚಿನ್ನಿ ಪುಡಿ

  ದಾಲ್ಚಿನ್ನಿ ಪುಡಿ

  ಈ ಪುಡಿಯಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣವಿದ್ದು ಯಕೃತ್ ನಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ. ಕೆಲವು ಸೆಕೆಂಡು ಕುದಿದ ಬಳಿಕ ಉರಿ ಆರಿಸಿ ಉಗುರುಬೆಚ್ಚಗಾಗುವಷ್ಟು ತಣಿಯಲು ಬಿಡಿ. ಬಳಿಕ ಈ ನೀರನ್ನು ದಿನಕ್ಕೆ ಎರಡು ಕಪ್ ನಷ್ಟು ಸೇವಿಸಿ.

  ನೆಲ್ಲಿಕಾಯಿ

  ನೆಲ್ಲಿಕಾಯಿ

  ಒಂದು ಚಿಕ್ಕಚಮಚ ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಕುಡಿಯಿರಿ. ಇದರಿಂದ ದೇಹದ ಕಲ್ಮಶಗಳು ನಿವಾರಣೆಯಾಗುವ ಜೊತೆಗೇ ಯಕೃತ್ ನಲ್ಲಿ ಸಂಗ್ರಹವಾಗಿದ್ದ ಕೊಬ್ಬು ಸಹಾ ಕರಗುತ್ತದೆ.

  ಯಷ್ಟಿಮಧು (Licorice)

  ಯಷ್ಟಿಮಧು (Licorice)

  ಆಯುರ್ವೇದ ನೂರಾರು ವರ್ಷಗಳಿಂದ ಹಲವಾರು ಕಾಯಿಲೆಗಳಿಗೆ ಪ್ರಮುಖವಾಗಿ ಬಳಸುವ ಯಷ್ಟಿಮಧು ಯಕೃತ್ ಸಂಬಂಧಿತ ತೊಂದರೆಗಳಿಗೂ ಉತ್ತಮವಾಗಿದೆ. ಒಂದು ಚಿಕ್ಕ ಚಮಚ ಯಷ್ಟಿಮಧು ಪುಡಿಯನ್ನು ಒಂದು ಲೋಟ ಕುದಿಯುತ್ತಿರುವ ನೀರಿಗೆ ಹಾಕಿದ ತಕ್ಷಣ ಉರಿ ಆರಿಸಿ ತಣಿಯಲು ಬಿಡಿ. ಉಗುರುಬೆಚ್ಚಗಾದ ಬಳಿಕ ಇದನ್ನು ಸೋಸಿ ದಿನಕ್ಕೊಂದು ಲೋಟ ಕುಡಿಯಿರಿ. ಇದರಿಂದ ಯಕೃತ್ ನ ಕೊಬ್ಬು ನಿವಾರಣೆಯಾಗುತ್ತದೆ.

  ಬೆಳ್ಳುಳ್ಳಿ ಮತ್ತು ಜೇನುತುಪ್ಪ

  ಬೆಳ್ಳುಳ್ಳಿ ಮತ್ತು ಜೇನುತುಪ್ಪ

  ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಯಕೃತ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಆ್ಯಂಟಿಆಕ್ಸಿಡೆಂಟ್ ನ ಪ್ರಭಾವ ಹೆಚ್ಚಿಸಿ ದೇಹವನ್ನು ನಿರ್ವಿಷಗಳಿಸುವುದು. ಯಕೃತ್‌ಗೆ ಬೆಳ್ಳುಳ್ಳಿ ಅತ್ಯುತ್ತಮ ಆಹಾರ. ಇದರಲ್ಲಿ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಯಕೃತ್ ನ ರಕ್ತದೊತ್ತಡ ಕಡಿಮೆ ಮಾಡುವುದು.

  ಗ್ರೀನ್ ಟೀ

  ಗ್ರೀನ್ ಟೀ

  ಹಸಿರು ಟೀಯನ್ನು (ಗ್ರೀನ್ ಟೀ) ದಿನಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿರುವ ಕಲ್ಮಶ ಮತ್ತು ಕೊಬ್ಬಿನಾಂಶ ಹೊರಹೋಗುವ ಸಮಯದಲ್ಲಿ ಉತ್ವತ್ತಿಯಾಗುವ ಹೈಡ್ರೇಶನ್ ತಾಪದ ಪರಿಣಾಮದಿಂದ ಹೊರಬರಬಹುದು. 2002ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಹಸಿರು ಟೀನಲ್ಲಿರುವ ಕ್ಯಾಚಿನ್ಸ್ 2002ರ ಅಧ್ಯಯನವೊಂದು ಹಸಿರು ಚಹಾದಲ್ಲಿರುವ ಕ್ಯಾಟ್ಚಿನ್ಸ್ ಯಕೃತ್ತು ಲಿಪಿಡ್ ನ ಅಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದರು. ಇದು ಲಿವರ್ ನಲ್ಲಿರುವ ಕೊಬ್ಬಿನಾಂಶ ಶೇಖರವಾಗುವುದನ್ನು ತಡೆಗಟ್ಟುತ್ತದೆ. ಈ ಆರೋಗ್ಯದಾಯಕ ಪಾನೀಯ ದೇಹದಲ್ಲಿರುವ ಕಲ್ಮಶಗಳನ್ನು ಮತ್ತು ಮದ್ಯಪಾನ ಮುಂತಾದವುಗಳಿಂದಾಗುವ ದುಷ್ಪರಿಣಾಮಗಳಿಂದ ಹೊರಬರಲು ಸಹಾಯ ಮಾಡುತ್ತದೆ.

  ಆಕ್ರೋಟ್

  ಆಕ್ರೋಟ್

  ಆಕ್ರೋಟ್ ನಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಮತ್ತು ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳು ಇವೆ. ಯಕೃತ್‌ನಲ್ಲಿ ಶೇಖರಣೆಯಾಗುವ ಕೊಬ್ಬು ತಡೆಯಲು ಇದು ನೆರವಾಗುವುದು. ಈ ಆರೋಗ್ಯಕರ ಕೊಬ್ಬುಗಳು ಯಕೃತ್ತಿನ ಕೋಶಗಳ ಸುತ್ತ ಬಲವಾದ ಜೀವಕೋಶದ ಪೊರಗಳ ನಿರ್ಮಾಣ ಮಾಡಲು ಅವಶ್ಯಕವಾಗಿದೆ.

  ಬೀಟ್ರೂಟ್

  ಬೀಟ್ರೂಟ್

  ಲಿವರ್ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಬೀಟ್ರೂಟ್ ಕೂಡಾ ಒಂದು ಒಳ್ಳೆಯ ತರಕಾರಿ. ಭೂಮಿಯ ಕೆಳಗೆ ಬೆಳೆಯುವ ಗೆಡ್ಡೆಗೆಣಸು ಇದಾಗಿರುವುದರಿಂದ ಕ್ರೋಟೀನ್ ಅಂಶ ಇದರಲ್ಲಿ ಹೆಚ್ಚಿರುತ್ತದೆ, ಬೀಟ್ರೂಟ್ ಒಟ್ಟಾರೆಯಾಗಿ ಲಿವರ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಉತ್ತಮ ತರಕಾರಿಯಲ್ಲೊಂದು.

  ದ್ರಾಕ್ಷಿ ಹಣ್ಣು

  ದ್ರಾಕ್ಷಿ ಹಣ್ಣು

  ವಿಟಮಿನ್ ಸಿ, ಶರ್ಕರ ಪಿಷ್ಟ (ಪೆಕ್ಟಿನ್), ಆಂಟಿಯೋಡ್ಯಾಂಟ್ಸ್ ಅಂಶ ಹೆಚ್ಚು ಇರುವುದರಿಂದ ದ್ರಾಕ್ಷಿಹಣ್ಣು ಲಿವರ್ ಉತ್ತಮವಾಗಿ ಕೆಲಸ ಮಾಡಲು ಇರುವ ಅತ್ಯುತ್ತಮ ಹಣ್ಣುಗಳಲ್ಲೊಂದು. ಇದಲ್ಲದೇ ಗ್ಲುಟತೋನ್, ಶಕ್ತಿಶಾಲಿ ಅಂಶವನ್ನು ಹೊಂದಿರುವ ಆಂಟಿಯೊಡೆಂಟ್, ಕೂಲಂಕುಷವಾಗಿ ಲಿವರ್ ಭಾಗಕ್ಕೆ ಸರಬರಾಜು ಆಗುತ್ತದೆ. ದ್ರಾಕ್ಷಿಹಣ್ಣಿನಲ್ಲಿರುವ ಕೆಲವೊಂದು ಅಂಶಗಳಿಂದ ಇದು ಕೊಬ್ಬಿನಾಂಶ ಕಡಿಮೆ ಮಾಡಲೂ ಸಹಾಯಕಾರಿ.

  English summary

  Best Ayurvedic Remedies For Fatty Liver

  There are several medications available over the counter to tackle fatty liver disease, but among all of them ayurveda is believed to give the best results. The ayurvedic herbs used for treating fatty liver disease are being used since the ancient times and are all natural. So this comes with no side effects too. According to Ayurveda, a fatty liver is caused due to the imbalance in one of the doshas or physical energies called pitta. Today at Boldsky we are listing ayurvedic remedies for a fatty liver. Have a look:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more