For Quick Alerts
ALLOW NOTIFICATIONS  
For Daily Alerts

  ಪಪ್ಪಾಯಿ ಹಣ್ಣಿನ ಪ್ರಯೋಜನಗಳು ತಿಳಿದರೆ, ಇಷ್ಟಪಟ್ಟು ದಿನಾ ತಿನ್ನುವಿರಿ!

  By Deepu
  |

  ಎಲ್ಲಾ ಹಣ್ಣುಗಳಂತೆ ಪಪ್ಪಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದನ್ನು ಹಣ್ಣಾದಾಗ ತಿನ್ನಲು ಬಳಸುವರು. ಇದು ದೇಹದ ಪ್ರತಿರೋಧಕ ಶಕ್ತಿ ಬಲಗೊಳಿಸುವುದು ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಪಪ್ಪಾಯಿ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದಿದ್ದರೆ ನೀವು ಸ್ಕ್ರೋಲ್ ಡೌನ್ ಮಾಡಿಕೊಂಡು ಹೋಗಿ ಸಾಕು....

  ಅಧಿಕ ಪೋಷಕಾಂಶಗಳನ್ನು ಒಳಗೊಂಡಿರುವ ಪಪ್ಪಾಯಿಯು ತುಂಬಾ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದ್ದು, ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಬಹುದು. ಈ ಹಣ್ಣಿನಲ್ಲಿ ಖನಿಜಾಂಶಗಳು ಮತ್ತು ವಿಟಮಿನ್ ಗಳಿವೆ. ಪೋಸ್ಪರಸ್, ತಾಮ್ರ, ಪೊಟಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನಿಶಿಯಂ ಇದರಲ್ಲಿದೆ.

  ಇದರಲ್ಲಿ ಉನ್ನತ ಮಟ್ಟದ ನಾರಿನಾಂಶ, ವಿಟಮಿನ್ ಎ, ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದರಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಸುಲಭವಾಗಿ ಹೀರಿಕೊಳ್ಳಬಹುದು. ಇದರಿಂದ ದೇಹಕ್ಕೆ ಶಕ್ತಿ ದೊರೆಯುವುದು. ಪಪ್ಪಾಯಿಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ ಮತ್ತು ಇದರಲ್ಲಿ ಕಿಣ್ವಗಳು ಅಧಿಕ ಮಟ್ಟದಲ್ಲಿದ್ದು, ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಲಿದೆ....  

   ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ

  ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ

  ಪಪ್ಪಾಯಿಯಲ್ಲಿ ಇರುವಂತ ನಾರಿನಾಂಶವು ಊಟದ ಬಳಿಕ ಜೀರ್ಣಕ್ರಿಯೆಯು ಸುಧಾರಣೆಯಾಗಲು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಮಲಬದ್ಧತೆ ನಿವಾರಣೆ ಮಾಡುವುದು. ಪಪ್ಪಾಯಿಯ ಕೆಲವು ತುಂಡುಗಳನ್ನು ತಿಂದರೆ ಅದರಿಂದ ದಿನನಿತ್ಯಕ್ಕೆ ಬೇಕಾಗುವ ಆಹಾರದ ನಾರಿನಾಂಶವು ಲಭ್ಯವಾಗುವುದು. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ಆಗುವುದು. ಒಂದು ತುಂಡು ಪಪ್ಪಾಯಿ ತಿಂದರೆ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶಗಳು ಹೊರಹೋಗುವುದು ಮತ್ತು ಕರುಳಿನ ಕ್ರಿಯೆಯು ಸರಾಗವಾಗಿ ಆಗುವುದು.

  ಉರಿಯೂತ ತಗ್ಗಿಸುವುದು

  ಉರಿಯೂತ ತಗ್ಗಿಸುವುದು

  ಪಪ್ಪಾಯಿಯಲ್ಲಿ ಪಾಪೈನ್ ಮತ್ತು ಚಿಮೊಪಪೈನ್ ಎನ್ನುವ ಕಿಣ್ವಗಳಿವೆ. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಮತ್ತು ದೀರ್ಘಕಾಲದ ಸಮಸ್ಯೆಯಿಂದ ಬಳಲುವುದನ್ನು ಇದು ಕಡಿಮೆ ಮಾಡುವುದು. ಉರಿಯೂತಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಾದ ಸಂಧಿವಾತ ಇತ್ಯಾದಿ ಸಮಸ್ಯೆಗಳಿಂದ ರಕ್ಷಣೆ ನೀಡುವುದು.

  ಪ್ರಮುಖ ಪೋಷಕಾಂಶಗಳನ್ನು ಒದಗಿಸುವುದು

  ಪ್ರಮುಖ ಪೋಷಕಾಂಶಗಳನ್ನು ಒದಗಿಸುವುದು

  ಪಪ್ಪಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಜತೆಗೆ ವಿಟಮಿನ್ ಗಳಾದ ವಿಟಮಿನ್ ಎ, ಇ ಮತ್ತು ಸಿ ಇದೆ. ಕಿತ್ತಳೆ ಬಣ್ಣದ ಈ ಹಣ್ಣಿನಲ್ಲಿ ವಿಟಮಿನ್ ಬಿ ಸಂಕೀರ್ಣವಿದೆ. ಖನಿಜಾಂಶಗಳಾದ ಪೊಟಾಶಿಯಂ, ತಾಮ್ರ ಮತ್ತು ಮೆಗ್ನಿಶಿಯಂ ಇದೆ. ಈ ವಿಟಮಿನ್ ಗಳು ಮತ್ತು ಖನಿಜಾಂಶಗಳು ಜತೆಯಾಗಿ ಕೆಲಸ ಮಾಡಿ ಕೋಶಗಳ ಪುನರ್ ಶ್ಚೇತನಗೊಳಿಸಲು ಮತ್ತು ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿ ತಡೆಯುವುದು.

  ಪ್ರೋಟೀನ್ ಜೀರ್ಣಿಸಿಕೊಳ್ಳಲು ನೆರವು

  ಪ್ರೋಟೀನ್ ಜೀರ್ಣಿಸಿಕೊಳ್ಳಲು ನೆರವು

  ಪ್ರತಿನಿತ್ಯ ಪಪ್ಪಾಯಿ ಸೇವನೆ ಮಾಡಿದರೆ ಅದರಿಂದ ನಿಮ್ಮ ದೇಹವು ಪ್ರೋಟೀನ್ ಜೀರ್ಣಿಸಿಕೊಳ್ಳಲು ನೆರವಾಗುವುದು. ಪಪ್ಪಾಯಿಯಲ್ಲಿ ಇರುವಂತಹ ಪಾಪೈನ್ ಎನ್ನುವ ಕಿಣ್ವವು ಬ್ಯಾಕ್ಟೀರಿಯಾ ಸಸ್ಯಕ್ಕೆ ತಿಳಿಯದಂತೆ ಪ್ರೋಟೀನ್ ವಿಘಟನೆಗೆ ನೆರವಾಗುವುದು. ಇದರಿಂದ ಕರುಳಿನ ರಕ್ಷಣೆಯಾಗುವುದು.

  ವಿಟಮಿನ್ ಎ ಒದಗಿಸುವುದು

  ವಿಟಮಿನ್ ಎ ಒದಗಿಸುವುದು

  ಪಪ್ಪಾಯಿಯಲ್ಲಿ ಇರುವಂತಹ ವಿಟಮಿನ್ ಎ ಯಿಂದಾಗಿ ದೃಷ್ಟಿಯು ಉತ್ತಮವಾಗುವುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೃಷ್ಟಿಯನ್ನು ರಕ್ಷಿಸುವುದು ಮತ್ತು ಕ್ಯಾಟರ್ಯಾಕ್ಟ್ ಮತ್ತು ಮ್ಯಾಕ್ಯುಲರ್ ಡಿಜೆನೆರೇಶನ್ಸ್ ಸಮಸ್ಯೆಯು ಬರದಂತೆ ತಡೆಯುವುದು. ಕಣ್ಣಿನ ಆರೋಗ್ಯಕ್ಕಾಗಿ ದಿನದಲ್ಲಿ ಮೂರು ಸಲ ಪಪ್ಪಾಯಿ ಸೇವಿಸಿ.

  ಪ್ರತಿರೋಧಕ ಶಕ್ತಿ ಬಲಗೊಳಿಸುವುದು

  ಪ್ರತಿರೋಧಕ ಶಕ್ತಿ ಬಲಗೊಳಿಸುವುದು

  ಪಪ್ಪಾಯಿಯ ತಿರುಳಿನಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ವಿಟಮಿನ್ ಸಿ ಇದೆ. ಇದು ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವುದು ಮತ್ತು ಸೋಂಕುಗಳು ಬರದಂತೆ ತಡೆಯುವುದು. ಪ್ರತಿನಿತ್ಯ ಪಪ್ಪಾಯಿ ಸೇವನೆ ಮಾಡಿದರೆ ಅದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ಬರಬಹುದಾದ ಶೀತ, ಜ್ವರ ಮತ್ತು ಇತರ ಶ್ವಾಸಕೋಶದ ಸೋಂಕನ್ನು ತಪ್ಪಿಸಬಹುದು.

  ಮುಖದ ಸೌಂದರ್ಯವನ್ನು ಹೆಚ್ಚಿಸುವುದು

  ಮುಖದ ಸೌಂದರ್ಯವನ್ನು ಹೆಚ್ಚಿಸುವುದು

  ನಿಮ್ಮ ಚರ್ಮದ ಸಹಜ ಬಣ್ಣವನ್ನು ಬೆಳಗುವುಂತೆಮಾಡುವುದು ಪಪ್ಪಾಯಿಹಣ್ಣಿನ ಅತ್ಯಂತ ಪರಿಣಾಮಕಾರಿ ಸೌಂದರ್ಯವರ್ಧಕ ಪ್ರಯೋಜನಗಳಲ್ಲಿ ಒಂದಾಗಿದೆ. ಅದರಲ್ಲಿ ನೈಸರ್ಗಿಕವಾಗಿ ಬಿಳಿಚಿಸುವ ಗುಣಗಳಿವೆ. ಜೊತೆಗೆ, ಅದರ ಶುದ್ಧೀಕರಣ ಗುಣಗಳಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳನ್ನು ತೆರವುಗೊಳಿಸಲು ಸಹಾಯಮಾಡುತ್ತದೆ. ಅದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ.

  *ಹಣ್ಣಿನ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು ನಿಮ್ಮ ಮುಖ, ಕತ್ತು, ಕೈ ಮತ್ತು ಕಾಲುಗಳ ಮೇಲೆ ಉಜ್ಜಿ. ಹಾಗೆಯೇ ಒಣಗಲು ಬಿಡಿ. ನಂತರ ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 3 ಅಥವಾ 4 ಸಲ ಮಾಡಬೇಕು.

  *ಮತ್ತೊಂದು ವಿಧಾನವೆಂದರೆ, ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಹಣ್ಣಿನ ಜೊತೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.

  ವಯಸ್ಸು ಕಾಣುವ ಚಿಹ್ನೆಗಳನ್ನು ಮರೆ ಮಾಚುತ್ತದೆ

  ವಯಸ್ಸು ಕಾಣುವ ಚಿಹ್ನೆಗಳನ್ನು ಮರೆ ಮಾಚುತ್ತದೆ

  ಪಪ್ಪಾಯಿ ಹಣ್ಣಿನಲ್ಲಿರುವ ವಿಟಮಿನ್ ಎ ಚರ್ಮದೊಳಗಿರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಲು ಸಹಾಯಕಾರಿ ಮತ್ತು ಚರ್ಮವನ್ನು ಮೃದು ಮತ್ತು ಮೆದುವಾಗಿ ಇಡುತ್ತದೆ. *ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.

  *ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ನವತಾರುಣ್ಯದ ಚರ್ಮವನ್ನು ಅನುಭವಿಸಲು ಸಹಾಯಕಾರಿಯಾಗಿದೆ.

  *ಅರ್ಧ ಕಪ್ ಸಂಪೂರ್ಣವಾಗಿ ಹಣ್ಣಾಗಿರುವ ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಹಿಸುಕಿಕೊಳ್ಳಿ.

  *ಇದನ್ನು ಕಚ್ಚಾ ಜೇನಿನ ಕೆಲವು ಹನಿ ಮತ್ತು 1 ಟೇಬಲ್ ಚಮಚ ಹಾಲು ಹಣ್ಣಿನ ಜೊತೆ ಮಿಶ್ರಣ ಮಾಡಿ.

  *ನಿಮ್ಮ ಮುಖ ಮತ್ತು ಕತ್ತುಗಳ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಹಾಗೆಯೇ ಬಿಟ್ಟ ನಂತರ ತಣ್ಣಗಿರುವ ನೀರಿನಿಂದ ನೆನೆಸಿ ತೊಳೆದುಕೊಳ್ಳಿ.

  *ಈ ಮಿಶ್ರಣವನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಹಾಗೂ, ಪ್ರತಿ ದಿನವೂ ವಯಸ್ಸಾದ ಚಿಹ್ನೆಗಳನ್ನು ವಿಳಂಬಿಸಲು ಪಪ್ಪಾಯಿಹಣ್ಣನ್ನು ತಿನ್ನಿ.

  ಮಲಬದ್ಧತೆಯನ್ನು ನಿವಾರಿಸುತ್ತದೆ

  ಮಲಬದ್ಧತೆಯನ್ನು ನಿವಾರಿಸುತ್ತದೆ

  ನಮ್ಮ ಬದಲಾದ ಜೀವನಶೈಲಿ ಹಾಗೂ ಸುಲಭ ಆಹಾರಗಳು ಮಲಬದ್ಧತೆಗೆ ಮೂಲವಾಗಿವೆ. ಪ್ರಮುಖವಾಗಿ ಮೈದಾ ಆಧಾರಿತ ಆಹಾರಗಳು ದೊಡ್ಡಕರುಳಿನಲ್ಲಿ ಪೂರ್ಣವಾಗಿ ಜೀರ್ಣವಾಗದೇ, ಗಟ್ಟಿಯಾಗಿದ್ದು ಮುಂದೆ ಹೋಗಲಾಗದೇ ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ.

  ತೂಕ ಇಳಿಸಿಕೊಳ್ಳಬಹುದು

  ತೂಕ ಇಳಿಸಿಕೊಳ್ಳಬಹುದು

  ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ ಪರಂಗಿ ಹಣ್ಣನ್ನು ತಿನ್ನಿ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿರುತ್ತದೆ. ಇದರೊಂದಿಗೆ ಇದು ಜೀರ್ಣಕ್ರಿಯೆಗೆ ಸಹಕಾರಿಯಾದ್ದರಿಂದ ತೂಕ ಇಳಿಸಿಕೊಳ್ಳಲು ಇದು ಒಳ್ಳೆಯ ಆಹಾರ

  ಒಡೆದ ಚರ್ಮಕ್ಕೆ ಪರಿಹಾರ

  ಒಡೆದ ಚರ್ಮಕ್ಕೆ ಪರಿಹಾರ

  ಒಂದು ವೇಳೆ ನೀವು ಕಾಲುಗಳ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ, ಪಪ್ಪಾಯಿ ಹಣ್ಣಿನ ಪೇಸ್ಟನ್ನು ಹಚ್ಚಿಕೊಳ್ಳಿ. ಇದರಿಂದ ಒಡೆದ ಹಿಮ್ಮಡಿಗೆ ತಕ್ಷಣ ಆರಾಮವನ್ನು ನೀಡಬಹುದು.

  English summary

  Benefits Of Eating Papaya Daily

  The health benefits of papaya are both internal and external; from improving your digestion and strengthening the immune system to nourishing the skin and stimulating hair growth. Read this article to find out what happens if you eat a slice of ripe papaya every day.
  Story first published: Tuesday, July 10, 2018, 15:10 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more