ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ ತಿನ್ನೋದರಿಂದ ಬರೋಬ್ಬರಿ ಎಂಟು ಲಾಭಗಳಿವೆ!

Posted By: Arshad
Subscribe to Boldsky

ನೆಲ್ಲಿಕಾಯಿಯ ಬಗ್ಗೆ ನೀವು ಹಲವು ಮಾಹಿತಿಗಳನ್ನು ಪಡೆದಿರಬಹುದು. ಇಂಡಿಯನ್ ಗೂಸ್ಬೆರಿ ಎಂದು ಕರೆಯುವ ಈ ಕಾಯಿಯನ್ನು ಹಾಗೇ ತಿಂದರೆ ಇದರ ರುಚಿ ಹೆಚ್ಚಿನವರಿಗೆ ಇಷ್ಟವಾಗಲಿಕ್ಕಿಲ್ಲ. ಆದರೆ ಇದನ್ನು ತಿಂದ ಬಳಿಕ ನೀರು ಕುಡಿದರೆ ನೀರು ಸಿಹಿಯಾಗಿರುವಂತೆ ಅನ್ನಿಸುತ್ತದೆ. ಆದ್ದರಿಂದ ನೆಲ್ಲಿಕಾಯಿಯನ್ನು ಹಾಗೇ ತಿನ್ನುವ ಬದಲು ಜೇನಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದುವರೆಗೆ ಕಹಿಯಾಗಿದ್ದ ಈ ನೆಲ್ಲಿಕಾಯಿ ಈಗ ಸಿಹಿಯಾಗಿ ರುಚಿಕರವಾಗಿರುತ್ತದೆ.

ಜೇನಿನಲ್ಲಿ ನೆನೆಸಿಡುವ ಮೂಲಕ ಹೆಚ್ಚು ಕಾಲ ಕೆಡದಂತೆ ಇರಿಸಬಹುದು ಮಾತ್ರವಲ್ಲ, ರುಚಿಯ ಜೊತೆ ಆರೋಗ್ಯವೂ ವೃದ್ದಿಸುತ್ತದೆ. ಒಂದು ವೇಳೆ ಕೆಲವು ತಿಂಗಳುಗಳ ಕಾಲ ಜೇನಿನಲ್ಲಿ ನೆಲ್ಲಿಕಾಯಿಯನ್ನು ನೆನೆಸಿಟ್ಟರೆ ಇದರ ರುಚಿ ಅತ್ಯದ್ಭುತವಾಗುತ್ತದೆ. ಇದರ ಹುಳಿ ಮತ್ತು ಸಿಹಿ ಮಿಶ್ರಿತ ರುಚಿ ಎಲ್ಲರ ಮನಗೆಲ್ಲುತ್ತದೆ. ಪ್ರತಿದಿನ ಬೆಳಿಗ್ಗೆ ಈ ನೆಲ್ಲಿಕಾಯಿಯನ್ನು ಸೇವಿಸಿದರೆ ಹಾಗೂ ಈ ಜೇನನ್ನೂ ಸೇವಿಸಿದರೆ ನೆಲ್ಲಿಕಾಯಿ ಹಾಗೂ ಜೇನು ಎರಡರ ಪ್ರಯೋಜನಗಳೂ ಲಭಿಸುತ್ತವೆ. ಇವುಗಳ ಪೋಷಕಾಂಶಗಳು ಒಂದಕ್ಕೊಂದು ಪೂರಕವಾಗಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ.

ಈ ಅದ್ಭುತ ಆಹಾರವನ್ನು ಪಡೆಯಲು ಒಂದು ಜಾಡಿಯಲ್ಲಿ ಅರ್ಧದಷ್ಟು ಅಪ್ಪಟ ಜೇನನ್ನು ತುಂಬಿಸಿ ಇದರಲ್ಲಿ ತಾಜಾ ನೆಲ್ಲಿಕಾಯಿಗಳನ್ನು ತುಂಬಿಸಿ ಜೇನು ಮುಚ್ಚಳದವರೆಗೂ ಬರುವಂತೆ ಮಾಡಿ. ಬಳಿಕ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ತಣ್ಣನೆಯ ಸ್ಥಳದಲ್ಲಿಡಿ. ಕೆಲವು ದಿನಗಳ ಬಳಿಕ ನೆಲ್ಲಿಕಾಯಿಗಳು ಜೇನುತುಂಬಿಕೊಂಡು ಮೃದುವಾಗುತ್ತವೆ. ಈ ನೆಲ್ಲಿಕಾಯಿಗಳನ್ನು ಪ್ರತಿದಿನ ಮುಂಜಾನೆ ಒಂದು ಅಥವಾ ಎರಡು ತಿನ್ನುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ..

ಯಕೃತ್ ಅನ್ನು ಬಲಪಡಿಸುತ್ತದೆ ಹಾಗೂ ಕಾಮಾಲೆ ರೋಗದಿಂದ ರಕ್ಷಿಸುತ್ತದೆ

ಯಕೃತ್ ಅನ್ನು ಬಲಪಡಿಸುತ್ತದೆ ಹಾಗೂ ಕಾಮಾಲೆ ರೋಗದಿಂದ ರಕ್ಷಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಯಕೃತ್ ಅತ್ಯುತ್ತಮ ಆರೋಗ್ಯದಲ್ಲಿರಲು ನೆರವಾಗುತ್ತದೆ ಹಾಗೂ ಕಾಮಾಲೆ ರೋಗ ಬರದಂತೆ ತಡೆಯುತ್ತದೆ. ಅಲ್ಲದೇ ಕಾಮಾಲೆ ರೋಗಿಗಳು ಸೇವಿಸಿದರೆ ರೋಗ ಗುಣವಾಗಲೂ ನೆರವಾಗುತ್ತದೆ. ಅಲ್ಲದೇ ದೇಹದಲ್ಲಿ ಸಂಗ್ರಹಗೊಂಡಿದ್ದ ಪಿತ್ತರಸ ವರ್ಣದ್ರವ್ಯಗಳನ್ನು ನಿವಾರಿಸುತ್ತದೆ ಹಾಗೂ ಯಕೃತ್ ನಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಪೂರ್ಣ ಕ್ಷಮತೆಯಲ್ಲಿ ಕೆಲಸ ಮಾಡಲು ನೆರವಾಗುತ್ತದೆ.

ವೃದ್ಧಾಪ್ಯವನ್ನು ತಡವಾಗಿಸುತ್ತದೆ

ವೃದ್ಧಾಪ್ಯವನ್ನು ತಡವಾಗಿಸುತ್ತದೆ

ನಿತ್ಯವೂ ಬೆಳಿಗ್ಗೆ ಒಂದು ನೆಲ್ಲಿಕಾಯಿ ಹಾಗೂ ಒಂದು ಚಮಚ ಜೇನು ಸೇವಿಸುವ ಮೂಲಕ ತಾರುಣ್ಯ ಹೆಚ್ಚು ಕಾಲ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ವೃದ್ದಾಪ್ಯ ಆವರಿಸುವುದು ತಡವಾಗುತ್ತದೆ. ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುವ ಮೂಲಕ ದೇಹ ಪುನಶ್ಚೇತನ ಪಡೆಯಲು ನೆರವಾಗುತ್ತದೆ. ಅಲ್ಲದೇ ತ್ವಚೆಯ ಸೆಳೆತವನ್ನು ಹೆಚ್ಚಿಸಿ ನೆರಿಗೆ ಹಾಗೂ ಸೂಕ್ಷ್ಮ ಗೆರೆಗಳು ಆವರಿಸುವುದನ್ನು ತಡೆಯುತ್ತದೆ.

ಅಸ್ತಮಾದಿಂದ ರಕ್ಷಿಸುತ್ತದೆ

ಅಸ್ತಮಾದಿಂದ ರಕ್ಷಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಅಸ್ತಮಾ, ಬ್ರಾಂಖೈಟಿಸ್ ಹಾಗೂ ಇತರ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಗೆ ಉತ್ತಮ ಪರಿಹಾರ ಒದಗುತ್ತದೆ. ಇವು ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದ್ದು ದೇಹದಿಂದ ಕಲ್ಮಶಗಳನ್ನು ಹಾಗೂ ಶ್ವಾಸಕೋಶಗಳಿಂದ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುತ್ತದೆ. ತನ್ಮೂಲಕ ಕಿರಿದಾಗಿದ್ದ ಶ್ವಾಸಕೋಶಗಳ ನಾಳಗಳು ಕಿರಿದಾಗುವುದನ್ನು ತಪ್ಪಿಸಿ ಅಸ್ತಮಾ ಆಘಾತವಾಗುವುದರಿಂದ ರಕ್ಷಣೆ ಒದಗಿಸುತ್ತದೆ.

ಕೆಮ್ಮು ಶೀತ, ಗಂಟಲ ಸೋಂಕನ್ನು ಗುಣಪಡಿಸುತ್ತದೆ

ಕೆಮ್ಮು ಶೀತ, ಗಂಟಲ ಸೋಂಕನ್ನು ಗುಣಪಡಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯ ಸೇವನೆಯಿಂದ ಕೆಮ್ಮು, ಶೀತ ಹಾಗೂ ಗಂಟಲ ಸೋಂಕು ಹಾಗೂ ಕೆರೆತವನ್ನು ಕಡಿಮೆಗೊಳಿಸುತ್ತದೆ. ಈ ದ್ರವಕ್ಕೆ ಕೊಂಚ ಹಸಿಶುಂಠಿಯ ರಸವನ್ನು ಬೆರೆಸಿ ಸೇವಿಸುವ ಮೂಲಕ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ನೆಲ್ಲಿಕಾಯಿ ಮತ್ತು ಜೇನು ದೇಹದಲ್ಲಿ ಸೋಂಕು ಹರಡಿಸುವ ಬಹುತೇಕ ಎಲ್ಲಾ ಕ್ರಿಮಿಗಳನ್ನು ಕೊಲ್ಲುವ ಮೂಲಕ ಸೋಂಕು ಉಂಟಾಗುವುದರಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆಯ ತೊಂದರೆಗಳಿಂದ ರಕ್ಷಿಸುತ್ತದೆ

ಜೀರ್ಣಕ್ರಿಯೆಯ ತೊಂದರೆಗಳಿಂದ ರಕ್ಷಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಅಜೀರ್ಣತೆ ಹಾಗೂ ಜಠರದ ಆಮ್ಲೀಯತೆ ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಹಸಿವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಂದ ರಕ್ಷಿಸುತ್ತದೆ. ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಮಲಬದ್ದತೆ ಹಾಗೂ ಮೂಲವ್ಯಾಧಿಯಾಗುವುದನ್ನೂ ತಪ್ಪಿಸಬಹುದು.

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ದೇಹದಿಂದ ಕಲ್ಮಶಗಳು ನಿವಾರಣೆಯಾಗುತ್ತವೆ ಹಾಗೂ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನೂ ನಿವಾರಿಸಬಹುದು. ಇಅರಿಂದ ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಇತರ ತೊಂದರೆಗಳಿಂದಲೂ ರಕ್ಷಣೆ ಪಡೆದಂತಾಗುತ್ತದೆ. ನಿತ್ಯವೂ ಬೆಳಿಗೆ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯೊಂದನ್ನು ಜೇನಿನ ಸಹಿತ ತಿನ್ನುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗುವುದು ಮಾತ್ರವಲ್ಲ, ರಕ್ತವೂ ಶುದ್ಧಗೊಳ್ಳುತ್ತದೆ.

ಪುರುಷರ ಫಲವತ್ತತೆ ಹೆಚ್ಚಿಸುತ್ತದೆ

ಪುರುಷರ ಫಲವತ್ತತೆ ಹೆಚ್ಚಿಸುತ್ತದೆ

ನಿತ್ಯವೂ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಪುರುಷರ ಫಲವತ್ತತೆ ಹೆಚ್ಚುತ್ತದೆ ಹಾಗೂ ಸಂತಾನಭಾಗ್ಯ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಮಹಿಳೆಯರು ಈ ನೆಲ್ಲಿಕಾಯಿಗಳನ್ನು ಸೇವಿಸುವ ಮೂಲಕ ಮಾಸಿಕ ದಿನಗಳ ನೋವು ಕಡಿಮೆಯಾಗುತ್ತದೆ. ಅಲ್ಲದೇ ಋತುಚಕ್ರ ಅನಿಯಮಿತವಾಗಿದ್ದರೆ ಇದನ್ನು ನಿಯಮಿತಗೊಳಿಸಲೂ ನೆರವಾಗುತ್ತದೆ.

ಕೂದಲನ್ನು ಆರೋಗ್ಯಕರವಾಗಿಸುತ್ತದೆ:ರ ಫಲವತ್ತತೆ ಹೆಚ್ಚಿಸುತ್ತದೆ

ಕೂದಲನ್ನು ಆರೋಗ್ಯಕರವಾಗಿಸುತ್ತದೆ:ರ ಫಲವತ್ತತೆ ಹೆಚ್ಚಿಸುತ್ತದೆ

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿಗಳ ಸೇವನೆಯಿಂದ ಕೂದಲಿಗೆ ಹೆಚ್ಚಿನ ಪೋಷಣೆ ದೊರಕುವ ಮೂಲಕ ಕೂದಲು ಸಮೃದ್ದ, ಕಾಂತಿಯುಕ್ತ ಹಾಗೂ ಸೌಮ್ಯವಾಗುತ್ತದೆ. ಅಲ್ಲದೇ ಕೂದಲು ಉದುರುವುದನ್ನು ತಪ್ಪಿಸಿ ಶಿಥಿಲವಾಗಿದ್ದ ಕೂದಲುಗಳನ್ನು ಬಲಪಡಿಸುತ್ತದೆ. ನಿಮ್ಮ ಕೂದಲಿಗೆ ಕಂಡೀಶನರ್ ಬಳಸುವ ಬದಲಿಗೆ ಜೇನು ಮತ್ತು ನೆಲ್ಲಿಕಾಯಿಯನ್ನು ಸೇವಿಸಬಹುದು.

English summary

Benefits Of Amla Soaked In Honey

You might have heard many health benefits of amla, also known as an Indian gooseberry. However, having amla along with honey comes with a unique set of health benefits. It also makes those sour green amlas a tasty treat to eat. Soaking amlas in honey not only preserves them but also enhances their health benefits and their taste as well. Honey in amla will preserve the amlas for months and will tingle your taste buds for sure.