ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು, ಇಂತಹ ಆಹಾರಗಳಿಂದ ದೂರವಿರಿ

Posted By: Hemanth Amin
Subscribe to Boldsky

ಇಂದು ವಿಶ್ವದೆಲ್ಲೆಡೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿಯು ದೇಹದಲ್ಲಿರುವ ಕಲ್ಮಶ ಹಾಗೂ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸುತ್ತಿದೆ. ಈ ಸಮಸ್ಯೆಯು ತುಂಬಾ ನೋವು ಉಂಟು ಮಾಡುವುದು ಮತ್ತು ಮೂತ್ರನಾಳದಲ್ಲಿ ಸಿಲುಕಿ ಮೂತ್ರ ಹೊರಹೋಗದಂತೆ ತಡೆಯುವುದು. ಕಿಡ್ನಿಯ ಕಲ್ಲುಗಳನ್ನು ಕ್ಯಾಲ್ಸಿಯಂ ಫಾಸ್ಪೇಟ್, ಸಿಸ್ಟೀನ್, ಕ್ಯಾಲ್ಸಿಯಂ ಆಕ್ಸಲೇಟ್ ಮತ್ತು ಯೂರಿಕ್ ಅಮ್ಲ ಎಂದು ವಿಂಗಡಿಸಲಾಗಿದೆ.

ಇವುಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಮನುಷ್ಯರಲ್ಲಿ ಹೆಚ್ಚಾಗಿ ಕಂಡುಬರುವುದು. ನಿಮಗೆ ಹಿಂದೆ ಯಾವತ್ತಾದರೂ ಕಿಡ್ನಿ ಸಮಸ್ಯೆ ಕಾಣಿಸಿಕೊಂಡು ಅದರಿಂದ ಬಳಲಿದ್ದರೆ ಆಗ ನೀವು ಕೆಲವೊಂದು ಆಹಾರಗಳನ್ನು ಖಂಡಿತವಾಗಿಯೂ ಕಡೆಗಣಿಸಬೇಕು. ಕೆಲವೊಂದು ಆಹಾರ ಸೇವನೆಯಿಂದಾಗಿ ಕಿಡ್ನಿಯಲ್ಲಿ ಕಲ್ಲುಗಳು ಮತ್ತೆ ಕಾಣಿಸಿಕೊಳ್ಳಬಹುದು. ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳು, ಕೋಳಿ, ಬೀಜಗಳು, ಮೀನು ಮತ್ತು ಕಾಳುಗಳನ್ನು ಸೇವಿಸಬಹುದು. ನಿಮ್ಮ ಆಹಾರ ಕ್ರಮದಲ್ಲಿ ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ಮತ್ತೆ ಕಿಡ್ನಿ ಕಲ್ಲುಗಳು ಮರಳದಂತೆ ಯಾವ್ಯಾವ ಆಹಾರಗಳನ್ನು ಕಡೆಗಣಿಸಬೇಕು ಎನ್ನುವುದನ್ನು ನೀವು ಇಲ್ಲಿ ತಿಳಿಯಿರಿ.

ಸೋಡಾ/ ಕೆಫಿನ್

ಸೋಡಾ/ ಕೆಫಿನ್

ಕಿಡ್ನಿ ಕಲ್ಲಿನಿಂದ ಬಳಲುತ್ತಾ ಇದ್ದರೆ ಸಾಕಷ್ಟು ದ್ರವಾಹಾರ ಸೇವನೆ ಮಾಡುವುದು ಅತೀ ಅಗತ್ಯ. ಆದರೆ ಕೆಫಿನ್ ಸೇವನೆ ಮಾತ್ರ ಕಡೆಗಣಿಸಬೇಕು. ಎರಡು ಕಪ್(200-250 ಮಿ.ಲೀ.)ಗಿಂತ ಹೆಚ್ಚಿನ ಕಾಫಿ, ಚಹಾ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು. ಹೆಚ್ಚು ಕೆಫಿನ್ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ನಿರ್ಜಲೀಕರಣವಾಗಬಹುದು.

ಸೋಡಿಯಂ ಅಧಿಕವಾಗಿರುವ ಆಹಾರ

ಸೋಡಿಯಂ ಅಧಿಕವಾಗಿರುವ ಆಹಾರ

ಸೋಡಿಯಂ ಕಡಿಮೆ ಸೇವಿಸಿ. ಸಂಸ್ಕರಿತ ಮತ್ತು ಪ್ಯಾಕ್ ಮಾಡಲ್ಪಟ್ಟಿರುವ ಆಹಾರ ಸೇವಿಸಬೇಡಿ. ಇದರಲ್ಲಿ ಹೆಚ್ಚಿನ ಮಟ್ಟದ ಉಪ್ಪು ಇರುವುದು. ಇದರ ಬದಲಿಗೆ ಕಡಿಮೆ ಉಪ್ಪು ಸೇವಿಸಿ.

ಪ್ರೋಟೀನ್ ಆಹಾರ ಅತಿಯಾಗಿ ಸೇವನೆ

ಪ್ರೋಟೀನ್ ಆಹಾರ ಅತಿಯಾಗಿ ಸೇವನೆ

ಮಾಂಸ ಮತ್ತು ಮೀನಿನಂತಹ ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು. ಕೋಳಿ ಮಾಂಸ ತಿನ್ನಬೇಕು. ಇದನ್ನು ತುಂಬಾ ಕಡಿಮೆ ಎಣ್ಣೆ ಬಳಸಿ ತಯಾರಿಸಿ ಅಥವಾ ಕೇವಲ ಬೇಯಿಸಿ ತಿನ್ನಿ. ಖಾರ ಪದಾರ್ಥ ಸೇವಿಸಬೇಡಿ.

ಅತಿಯಾಗಿ ಕೊಬ್ಬು ಇರುವ ಆಹಾರ

ಅತಿಯಾಗಿ ಕೊಬ್ಬು ಇರುವ ಆಹಾರ

ನಿಮ್ಮ ಆಹಾರ ಕ್ರಮದಲ್ಲಿ ಅತಿಯಾಗಿ ಕೊಬ್ಬು ಇರುವಂತಹ ಚೀಸ್ ನಂತಹ ಆಹಾರ ಸೇರಿಸಬೇಡಿ. ಕಡಿಮೆ ಕೊಬ್ಬು ಇರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ. ಉಪಾಹಾರಕ್ಕೆ ಕೆನೆ ತೆಗೆದಿರುವ ಹಾಲು ಸೇವಿಸಬಹುದು. ಅತಿಯಾಗಿ ಕೊಬ್ಬು ಇರುವ ಆಹಾರ ಸೇವನೆ ಮಾಡಬೇಡಿ. ಕೊಬ್ಬು ದೇಹದಲ್ಲಿ ಜಮೆಯಾಗಿ ಅಪಾಯ ಹೆಚ್ಚಿಸುವುದು.

ಕ್ಯಾಲ್ಸಿಯಂ ಆಹಾರಗಳು

ಕ್ಯಾಲ್ಸಿಯಂ ಆಹಾರಗಳು

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವಂತಹ ಆಹಾರಗಳನ್ನು ಕಡೆಗಣಿಸಲೇಬೇಕು. ಇದೇ ವೇಳೆ ನೀವು ಪ್ರತ್ಯಾಮ್ಲಗಳನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಇದರಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇರುವುದು. ಕ್ಯಾಲ್ಸಿಯಂ ಇರುವ ಆಹಾರವನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ನಿಮಗೆ ಕಿಡ್ನಿಯಲ್ಲಿ ಕಲ್ಲು ಇದ್ದರೆ ಮೀನಿನ ಎಣ್ಣೆ ಅಥವಾ ವಿಟಮಿನ್ ಡಿ ಸೇವಿಸುವ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

ಆಕ್ಸಲೇಟ್ ಅಧಿಕವಾಗಿರುವ ಆಹಾರಗಳು

ಆಕ್ಸಲೇಟ್ ಅಧಿಕವಾಗಿರುವ ಆಹಾರಗಳು

ನೀವು ಕ್ಯಾಲ್ಸಿಯಂ ಆಕ್ಸಲೇಟ್ ನಿಂದಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಅನುಭವಿಸುತ್ತಾ ಇದ್ದರೆ ಆಗ ನೀವು ಆಕ್ಸಲೇಟ್ ಅಧಿಕವಾಗಿರುವಂತಹ ಆಹಾರದ ಸೇವನೆ ಮಾಡಬಾರದು. ಚಹಾ, ಕಾಫಿ, ಬೀಟ್ ರೂಟ್, ಸಿಹಿಗೆಣಸು, ಟೊಮೆಟೋ ಸೂಪ್, ಡಬ್ಬದಲ್ಲಿರುವ ಹಣ್ಣಿನ ಸಲಾಡ್, ಸ್ಟ್ರಾಬೆರಿ, ಪಾಲಕ ಇತ್ಯಾದಿಗಳನ್ನು ಸೇವಿಸಬಾರದು. ಚಾಕಲೇಟ್, ತೊಫು, ಬೀಜಗಳನ್ನು ಕೂಡ ಸೇವಿಸಬಾರದು. ಇನ್ನು ಯೂರಿಕ್ ಆಮ್ಲದಿಂದಾಗಿ ಕಲ್ಲು ನಿರ್ಮಾಣವಾಗಿದೆ ಎಂದಾದರೆ ಆಗ ನೀವು ಈ ಆಹಾರಗಳನ್ನು ಸೇವಿಸಬಾರದು.

ಆಲ್ಕೋಹಾಲ್

ಆಲ್ಕೋಹಾಲ್

ಕಿಡ್ನಿ ನಿರ್ಮಾಣಕ್ಕೆ ಆಲ್ಕೋಹಾಲ್ ನ ನೇರ ಸಂಬಂಧವಿಲ್ಲ. ಆದರೆ ಆಲ್ಕೋಹಾಲ್ ನಿಂದಾಗಿ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಅಪಾಯವಿದೆ. ಇದರಲ್ಲಿ ಇರುವಂತಹ ಪ್ಯೂರಿನ್ ಎನ್ನುವ ಅಂಶವು ಯೂರಿಕ್ ಆಮ್ಲದ ಕಲ್ಲು ನಿರ್ಮಾಣ ಮಾಡುವುದು. ಇದರಿಂದ ಕಲ್ಲು ನಿರ್ಮಾಣವಾಗಿ ಕಿಡ್ನಿಯ ಕ್ರಿಯೆಗಳಿಗೆ ಕೂಡ ಹಾನಿಯುಂಟು ಮಾಡಬಹುದು.

ಉಪ್ಪಿನ ಮೀನುಗಳು

ಉಪ್ಪಿನ ಮೀನುಗಳು

ಉಪ್ಪಿನ ಮೀನುಗಳಲ್ಲಿ ಕೊಬ್ಬಿನಾಂಶವು ಹೆಚ್ಚಾಗಿರುವುದು. ಇದು ತಿನ್ನಲು ತುಂಬಾ ರುಚಿಯಾಗಿರುವುದು. ಆದರೆ ಇದರಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದು. ಕಿಡ್ನಿ ಕಲ್ಲಿನಿಂದ ಬಳಲುತ್ತಾ ಇರುವ ವ್ಯಕ್ತಿಗಳು ಈ ಮೀನುಗಳನ್ನು ಕಡೆಗಣಿಸಬೇಕು.

ಆಸ್ಪಾರಗಸ್

ಆಸ್ಪಾರಗಸ್

ಮೂತ್ರವರ್ಧಕವಾಗಿ ಬಳಸಲ್ಪಡುವಂತಹ ಇದನ್ನು ಕಿಡ್ನಿಯಲ್ಲಿ ಕಲ್ಲು ಇರುವಂತಹ ವ್ಯಕ್ತಿಗಳು ಕಡೆಗಣಿಸಲೇಬೇಕು.

ಅಡುಗೆ ಸೋಡಾ

ಅಡುಗೆ ಸೋಡಾ

ಯೂರಿಕ್ ಆಮ್ಲದಿಂದಾಗಿ ಕಲ್ಲು ಉಂಟಾಗಿದ್ದರೆ ಆಗ ನೀವು ಅಡುಗೆ ಸೋಡಾ ಕಡೆಗಣಿಸಲೇಬೇಕು. ಯಾಕೆಂದರೆ ಇದರಲ್ಲಿ ಪ್ಯೂರಿನ್ ಅಂಶವಿದೆ. ಇದನ್ನು ಹೊರತಾಗಿ ಹೂಕೋಸು, ಮಾಂಸದ ಅಂಗಾಂಗಗಳಾದ ಯಕೃತ್ ಮತ್ತು ಕಿಡ್ನಿ, ಅಣಬೆ, ಆಲಿವ್ ತೈಲ, ದ್ವಿದಳ ಧಾನ್ಯಗಳು ಇತ್ಯಾದಿಗಳನ್ನು ಸೇವಿಸಬಾರದು.

ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವೊಂದು ಪ್ರಮುಖ ಅಂಶಗಳು

  • ನೀವು ಆಹಾರ ಕ್ರಮದಲ್ಲಿ 85ಗ್ರಾಂಕ್ಕಿಂತ ಹೆಚ್ಚಿನ ಮಾಂಸ ಸೇವನೆ ಮಾಡಬಾರದು.
  • ಐಸ್ ಕ್ರೀಮ್, ಕರಿದ ಆಹಾರ ಮತ್ತು ಉಪ್ಪಿನಾಂಶ ಹೆಚ್ಚಿರುವ ಆಹಾರದ ಆಸೆ ಬಿಡಿ.
  • ಆದಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿ.
  • ಸಾಕಷ್ಟು ಪ್ರಮಾಣದಲ್ಲಿ ಕಾರ್ಬ್ರೋಹೈಡ್ರೇಟ್ಸ್, ಕಿತ್ತಳೆ, ಲಿಂಬೆ ಸೇವನೆ ಮಾಡಿದರೆ ಕಿಡ್ನಿ ಕಲ್ಲು ತಡೆಯಬಹುದು.
  • ನಿಯಮಿತವಾಗಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕಿಡ್ನಿ ಕಲ್ಲಿನಿಂದ ಬಳಲುತ್ತಿದ್ದರೆ ಔಷಧ ಸೇವಿಸಲು ಮರೆಯಬೇಡಿ.

English summary

Avoid these foods when You Have Kidney Stones

The kidney is a vital organ of our body that mostly acts as a filter, flushing out the toxins and excess water from the body through urination. But today, a number of people complain about kidney stones. These are solid masses formed from the crystals present in urine. It causes pain and blockage in the path of the urinary tract.Kidney stones have been classified as calcium phosphate, cystine, calcium oxalate, and uric acid. Out of these, calcium oxalates are mostly seen in human beings.