For Quick Alerts
ALLOW NOTIFICATIONS  
For Daily Alerts

  ಮೈಗ್ರೇನ್ ತಲೆನೋವೇ? ಹಾಗಿದ್ದರೆ ಈ ಒಂಭತ್ತು ಆಹಾರಗಳನ್ನು ಸೇವಿಸದಿರಿ

  |

  ತಲೆನೋವಿನ ಅತ್ಯುಗ್ರರೂಪವಾದ ಮೈಗ್ರೇನ್ ರೋಗಿಯನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಇದರ ಪ್ರಕೋಪವನ್ನು ಅನುಭವಿಸಿದವರೇ ಬಲ್ಲರು. ಅಲ್ಲದೇ ಇದರ ಪ್ರಕೋಪ ಬೆಳಕು, ಶಬ್ದ, ತಾಪಮಾನ ಮೊದಲಾದವುಗಳ ಜೊತೆಗೇ ಏರುಪೇರಾಗುವ ಕಾರಣ ನಿತ್ಯದ ಚಟುವಟಿಕೆಯನ್ನೇ ಸ್ಥಬ್ಧಗೊಳಿಸುತ್ತದೆ. ಒಂದು ವೇಳೆ ರಾತ್ರಿ ಎದುರಾದ ಮೈಗ್ರೇನ್ ಇಡಿಯ ರಾತ್ರಿಯ ನಿದ್ದೆ ಕಸಿದುಕೊಂಡರೆ ಮರುದಿನದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದೇ ಹೋಗಬಹುದು ಹಾಗೂ ಅಮೂಲ್ಯವಾದ ಕೆಲಸ ಅಥವಾ ಅವಕಾಶ ಕೈತಪ್ಪಿ ಹೋಗಬಹುದು.

  ಆದ್ದರಿಂದ ಮೈಗ್ರೇನ್ ತಲೆನೋವಿರುವ ವ್ಯಕ್ತಿಗಳು ಮುಂದಿನ ದಿನದ ಯಾವುದೇ ಮುಖ್ಯ ಕಾರ್ಯಕ್ರಮವಿದ್ದರೂ ತಲೆನೋವು ಮಾತ್ರ ಬರದಿರಲಿ ಎಂದು ಪ್ರಾರ್ಥಿಸಿಯೇ ಮಲಗುತ್ತಾರೆ. ಇದು ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿದ್ದು ಪ್ರತಿವರ್ಷ ಬರೆಯ ಭಾರತವೊಂದರಲ್ಲಿಯೇ ಒಂದು ಕೋಟಿ ಜನರಾದರೂ ಈ ತಲೆನೋವಿನ ದೂರು ಸಲ್ಲಿಸುತ್ತಾರೆ. ತಲೆನೋವು ಚಿಕ್ಕದಾಗಿ ಪ್ರಾರಂಭವಾದರೂ ನಿಧಾನವಾಗಿ ಉಲ್ಬಣಗೊಳ್ಳುತ್ತಾ ತೀವ್ರವಾಗುತ್ತದೆ.

  ಮೆದುಳು ನಮ್ಮ ಪಂಚೇಂದ್ರಿಯಗಳ ಮೂಲಕ ಪಡೆಯುವ ಸೂಚನೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಕೇವಲ ನೋವಿನ ಅನುಭವವನ್ನೇ ಪಡೆಯತೊಡಗುವ ಕಾರಣ ರೋಗಿಗೆ ತನ್ನ ಸುತ್ತ ಮುತ್ತ ಏನಾಗುತ್ತಿದೆ, ಯಾರು ಏನು ಹೇಳುತ್ತಿದ್ದಾರೆ ಎಂದು ಗಮನಿಸುವ ಸ್ಥಿತಿ ಕಳೆದುಕೊಳ್ಳುತ್ತಾ ಹೋಗುತ್ತಾನೆ. ವಾಂತಿ ಬಂದಂತಾಗುವುದು, ಆದರೆ ವಾಂತಿಯಾಗದೇ ಇರುವುದು, ಕಣ್ಣಿನ ದೃಷ್ಟಿಯ ಕೇಂದ್ರ ಭಾಗ ಅದೃಶ್ಯವಾಗುವುದು (ರೋಗಿಯ ಎದುರಿನ ವ್ಯಕ್ತಿಯ ಮುಖವನ್ನು ನೋಡುತ್ತಿದ್ದಾಗ ರುಂಡವಿಲ್ಲದ ಮುಂಡ ಮಾತ್ರವೇ ಕಾಣಿಸುತ್ತದೆ!) ಮೊದಲಾದವು ಇದರ ಲಕ್ಷಣಗಳಾಗಿವೆ.

  ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

  ಈ ಹಂತದಲ್ಲಿ ರೋಗಿಗೆ ಮಲಗುವುದೇ ಸುರಕ್ಷಿತವಾಗಿದ್ದು ವಾಹನ ಚಾಲನೆ, ರಸ್ತೆಯಲ್ಲಿ ನಡೆಯುವುದು ಮೊದಲಾದ ಯಾವುದೇ ಕ್ರಿಯೆ ಅಪಾಯಕರವಾಗಬಹುದು. ಮೈಗ್ರೇನ್‌ಗೆ ಏನು ಕಾರಣ ಎಂದು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಆದರೆ ಕೆಲವು ಆಹಾರಾಭ್ಯಾಸಳು, ಒತ್ತಡ, ರಸದೂತಗಳ ಅಸಮತೋಲನ ಮೊದಲಾದವು ತಲೆನೋವನ್ನು ಪ್ರಚೋದಿಸಬಹುದು. ಇಂದಿನ ಲೇಖನದಲ್ಲಿ ಮೈಗ್ರೇನ್ ರೋಗಿಗಳಿಗೆ ಸಲ್ಲದ ಒಂಬತ್ತು ಆಹಾರಗಳನ್ನು ವಿವರಿಸಲಾಗಿದೆ:

  ಕಾಫಿ

  ಕಾಫಿ

  ನಮ್ಮಲ್ಲಿ ಹೆಚ್ಚಿನವರಿಗೆ ಕಾಫಿ ಇಲ್ಲದೇ ಬೆಳಗಾಗುವುದೇ ಇಲ್ಲ. ಕಾಫಿಯಲ್ಲಿ ಅಂಟಿ ಆಕ್ಸಿಡೆಂಟುಗಳು ಹಾಗೂ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿದ್ದು ಮೆದುಳಿಗೆ ಕೊಂಚ ಮುದನೀಡುವ ಹಾಗೂ ಆರೋಗ್ಯಕ್ಕೆ ಕೊಂಚ ಪ್ರಯೋಜನಕಾರಿಯಾದರೂ ಮೈಗ್ರೇನ್ ರೋಗಿಗಳಿಗೆ ಮಾತ್ರ ಇದು ಸಲ್ಲದು. ಏಕೆಂದರೆ ಇವು ಕೆಲವು ಋಣಾತ್ಮಕ ಅಂಶಗಳನ್ನೂ ಹೊಂದಿದೆ. ವಿಶೇಷವಾಗಿ ಕೆಫೀನ್ ಮೆದುಳಿನಲ್ಲಿರುವ ನರವ್ಯವಸ್ಥೆಯನ್ನು ಬದಲಿಸಿ ಮುದನೀಡುವ ಜೊತೆಜೊತೆಗೇ ನರಗಳಿಗೆ ಕೊಂಚ ಪ್ರಚೋದನೆಯನ್ನೂ ನೀಡಿ ಸುಪ್ತವಾಗಿ ಮಲಗಿದ್ದ ಮೈಗ್ರೇನ್ ಕಿಡಿಯನ್ನು ಹೊತ್ತಿಸುತ್ತದೆ.

  ಕೃತಕ ಸಿಹಿಕಾರಕಗಳು

  ಕೃತಕ ಸಿಹಿಕಾರಕಗಳು

  ಇಂದು ನಾವು ಸೇವಿಸುತ್ತಿರುವ ಸಿದ್ಧರೂಪದಲ್ಲಿ ಸಿಗುವ ಸಿಹಿಪದಾರ್ಥಗಳಲ್ಲಿ ಕೃತಕ ಸಿಹಿಕಾರಕಗನ್ನು ಹೆಚ್ಚು ಸೇರಿಸಿರುತ್ತಾರೆ. ಅಲ್ಲದೇ ಬಣ್ಣ ಬರಲು ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸಂರಕ್ಷಕ, ಸುವಾಸನೆ ಬೀರುವ ರಾಸಾಯನ ಮೊದಲಾದವುಗಳನ್ನೂ ಬೆರೆಸಿರುತ್ತಾರೆ. ಲಘುಪಾನೀಯ, ಚಾಕಲೇಟು, ಸಿಹಿ ಮೊದಲಾದವುಗಳಲ್ಲಿ ಇವು ಹೆಚ್ಚಾಗಿರುತ್ತವೆ. ಇದು ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತವೆ ಹೌದು, ಜೊತೆಗೇ ಮೈಗ್ರೇನ್ ಕಿಡಿಯನ್ನೂ ಜ್ವಲಿಸುತ್ತವೆ. ವಿಶೇಷವಾಗಿ ಸಕ್ಕರೆಯ ಬದಲಾಗಿ ಬಳಸಲಾಗುವ ಆಸ್ಪರ್ಟೇಮ್ (aspartame) ಲೋ ಕ್ಯಾಲೋರಿ, ಜ಼ೀರೋ ಕ್ಯಾಲೋರಿ, ಡಯೆಟ್ ಎಂಬ ಹೆಸರನ್ನು ಹೊತ್ತ ಪಾನೀಯಗಳಲ್ಲಿ ಬಳಸಲಾಗುತ್ತದೆ ಹಾಗೂ ಈ ಆಸ್ಪರ್ಟೇಮ್ ಮೈಗ್ರೇನ್ ತಲೆನೋವಿಗೆ ಪ್ರಮುಖ ಕಾರಣವಾಗಿದೆ.

  ಮದ್ಯ

  ಮದ್ಯ

  ಮದ್ಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕೆಟ್ಟದ್ದು ಎಂದು ಗೊತ್ತಿದ್ದೂ ಸೇವಿಸಲು ಕೇವಲ ಪ್ರತಿಷ್ಠೆ ಮಾತ್ರವೇ ಕಾರಣ. ಇಂದು ಯವಜನತೆ ಹೆಚ್ಚು ಹೆಚ್ಚಾಗಿ ಮದ್ಯದ ಅಮಲಿನ ವಲಯಕ್ಕೆ ಪ್ರವೇಶಿಸುತ್ತಿದ್ದಾರೆ. ಇವರಿಗೆ ಮದ್ಯದ ಮೂಲಕ ಪಡೆಯುವ ಮಾದಕತೆ ಮೋಜಿಗೆ ಮೂಲವಾಗಿದೆ. ಮದ್ಯಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ, ಯಕೃತ್ ಕ್ಷಮತೆ ಉಡುಗುವುದು, ಕ್ಯಾನ್ಸರ್ ಎದುರಾಗುವುದು ಮೊದಲಾದವು ಕಾಣಿಸಿಕೊಳ್ಳಬಹುದು. ಇದು ವ್ಯಸನಕಾರಿಯೂ ಹೌದು ಹಾಗೂ ಇದರ ಸೇವನೆಯಿಂದ ಅತಿ ಶೀಘ್ರದಲ್ಲಿ ರಕ್ತದಲ್ಲಿ ಆಲ್ಕೋಹಾಲ್ ತಲುಪುವ ಕಾರಣ ಇದರ ಉರಿಯೂತ ಪ್ರಚೋದಕ ಗುಣ ಮೆದುಳಿನಲ್ಲಿ ನರಗಳಿಗೆ ಪ್ರಚೋದನೆ ದೊರೆತು ಮೈಗ್ರೇನ್ ತಲೆನೋವು ಪ್ರಾರಂಭವಾಗಬಹುದು.

  ಚೈನೀಸ್ ಸಿದ್ಧ ಆಹಾರಗಳು

  ಚೈನೀಸ್ ಸಿದ್ಧ ಆಹಾರಗಳು

  ಇತ್ತೀಚೆಗೆ ಚೀನಾದ ಸಿದ್ಧ ಆಹಾರಗಳು ನಮ್ಮ ನಿತ್ಯದ ಆಹಾರಗಳಾಗಿಬಿಟ್ಟಿವೆ. ನೂಡಲ್ಸ್, ಗೋಬಿ ಮಂಚೂರಿ ಮೊದಲಾದ ಚೈನೀಸ್ ಸಿದ್ದ ಆಹಾರಗಳು ರುಚಿಕರವಾಗಿದ್ದರೂ ಇದರ ರುಚಿಗಾಗಿ ಸೇಸಿರುವ ಅಜಿನೋಮೋಟೋ ಅಥವಾ MSG (ಮೋನೋಸೋಡಿಯಂ ಗ್ಲುಟಮೇಟ್) ಮೊದಲಾದ ಲವಣಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಈ ಲವಣ ರಸದೂತಗಳನ್ನು ಅಸಮತೋಲನಗೊಳಿಸಿ ಮ್ರೆಗ್ರೇನ್ ಪ್ರಾರಂಭವಾಗಲು ಪ್ರಚೋದನೆಯನ್ನೂ ನೀಡಬಹುದು.

  ಸಂಸ್ಕರಿಸಿದ ಮಾಂಸ

  ಸಂಸ್ಕರಿಸಿದ ಮಾಂಸ

  ಈ ಉತ್ಪನ್ನಗನ್ನು ಕ್ಯಾನ್ ಅಥವಾ ಇತರ ವಿಧಾನಗಳಲ್ಲಿ ಪ್ಯಾಕ್ ಮಾಡುವಾಗ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಈ ಮೂಲಕ ಅಹಾರ ಬಹುಕಾಲ ಕೆಡದಿರುತ್ತದೆ. ಫಾಸ್ಟ್ ಫುಡ್ ಹಾಗೂ ಉಳಿದ ಮಾಂಸಾಹಾರಿ ಆಹಾರ ಮಳಿಗೆಗಳಲ್ಲಿ ಸಮಯ ಉಳಿಸಲು ಸಿದ್ಧ ರೂಪದ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಇದರಲ್ಲಿರುವ ಸಂರಕ್ಷಕಗಳಲ್ಲಿ ಪ್ರಮುಖವಾಗಿ ನೈಟ್ರಿಕ್ ಆಮ್ಲವಿರುತ್ತದೆ. ಇದು ಮೆದುಳಿನ ನರಗಳನ್ನು ಸಡಿಲಿಸಿ ಮೈಗ್ರೇನ್ ತಲೆನೋವು ಥಟ್ಟನೇ ಪ್ರಾರಂಭವಾಗಲು ಕಾರಣವಾಗುತ್ತದೆ. ಆದ್ದರಿಂದ ಮೈಗ್ರೇನ್ ರೋಗಿಗಳಿಗೆ ತಾಜಾ ಮಾಂಸದ ಉತ್ಪನ್ನಗಳೇ ಸೂಕ್ತವಾಗಿವೆ.

  ಉಪ್ಪು ಹಾಕಿದ ಉತ್ಪನ್ನಗಳು

  ಉಪ್ಪು ಹಾಕಿದ ಉತ್ಪನ್ನಗಳು

  ಕೆಲವು ಆಹಾರಗಳನ್ನು ಉಪ್ಪುನೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸಲಾಗುತ್ತದೆ. ಲಿಂಬೆ, ಮಾವು, ಆಲಿವ್, ಸೌತೆ ಮೊದಲಾದವುಗಳನ್ನು ಈ ರೀತಿಯಾಗಿ ಸೇವಿಸಬಹುದು. ಆದರೆ ಈ ಕ್ರಿಯೆಯಲ್ಲಿ ಆಹಾರ ಬಣ್ಣ ಮತ್ತು ರುಚಿಯನ್ನೂ ಬದಲಿಸಿಕೊಳ್ಳುತ್ತದೆ. ಇದರಲ್ಲಿರುವ ಪೋಷಕಾಂಶಗಳು ಉಪ್ಪಿನ ವಾತಾವರಣದಲ್ಲಿ ಟೈರಮೈನ್ ಎಂಬ ಕಣಗಳಾಗಿ ಪರಿವರ್ತಿತವಾಗುತ್ತವೆ. ಇದು ಆಹಾರವನ್ನು ಕೆಡದಿರುವಂತೆ ರಕ್ಷಿಸಿದರೂ ರಸದೂತಗಳನ್ನು ಏರುಪೇರುಗೊಳಿಸಿ ಮೈಗ್ರೇನ್ ತಲೆನೋವನ್ನು ಪ್ರಚೋದಿಸಬಹುದು.

  ಚೀಸ್

  ಚೀಸ್

  ಒಂದು ವೇಳೆ ನಿಮಗೆ ಪಿಜ್ಜಾ, ಪಾಸ್ತಾ ಮೊದಲಾದ ಚೀಸ್ ಯುಕ್ತ ಆಹಾರಗಳು ಇಷ್ಟವಾಗಿದ್ದರೆ ಮತ್ತು ನೀವು ಗ್ರೇನ್ ತಲೆನೋವಿನ ರೋಗಿಯಾಗಿದ್ದರೆ ನಿಮಗೆ ಈ ಆಹಾರಗಳು ಸೂಕ್ತವಲ್ಲ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹೆಚ್ಚೇ ಇದ್ದರೂ ಇದರಲ್ಲಿ ಕೆಲವು ಅಡ್ಡಪರಿಣಾಮಗಳಿವೆ. ತೂಕದಲ್ಲಿ ಹೆಚ್ಚಳ ಇತ್ಯಾದಿ. ರುಚಿಗಾಗಿ ಹೆಚ್ಚು ಕಾಲ ಉಪ್ಪಿನಲ್ಲಿಟ್ಟ parmesan ಮತ್ತು feta ಚೀಸ್ ಗಳಂತೂ ಗಟ್ಟಿಯಾಗಿ ತಮ್ಮಲ್ಲಿ ಟೈರಮೈನ್‌ಗಳನ್ನು ಹೊಂದಿರುತ್ತವೆ. ಇದು ಮೈಗ್ರೇನ್ ಗೆ ಕಾರಣವಾಗಬಹುದು.

  ಲವಣಯುಕ್ತ ಆಹಾರಗಳು

  ಲವಣಯುಕ್ತ ಆಹಾರಗಳು

  ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತು ಮೈಗ್ರೇನ್ ತಲೆನೋವಿನ ರೋಗಿಗಳಿಗೆ ಅನ್ವಯಿಸದು. ಅಲ್ಪ ಪ್ರಮಾಣದ ಉಪ್ಪು ಹೆಚ್ಚು ತೊಂದರೆ ನೀಡದೇ ಇದ್ದರೂ ಉಪ್ಪು ಹೆಚ್ಚಾಗಿರುವ ಆಹಾರಗಳನ್ನು ಸತತವಾಗಿ ಸೇವಿಸುತ್ತಾ ಬಂದರೆ ಮಾತ್ರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾವಾಗ ರಕ್ತದಲ್ಲಿ ಹೆಚ್ಚಿನ ಲವಣಗಳು ಇರುತ್ತವೆಯೋ ಆಗ ಅಧಿಕ ರಕ್ತದೊತ್ತಡ ಎದುರಾಗುತ್ತದೆ. ಈ ಸಮಯದಲ್ಲಿ ಮೆದುಳಿಗೆ ತಲುಪುವ ರಕ್ತದ ಪ್ರಮಾಣ ಕೊಂಚ ಕಡಿಮೆಯಾಗುತ್ತದೆ ಹಾಗೂ ಇದರಿಂದ ಮೆದುಳಿನ ನರಗಳು ಸಡಿಲಗೊಂಡು ಈ ಮೂಲಕವೂ ಮೈಗ್ರೇನ್ ತಲೆನೋವಿಗೆ ಕಾರಣವಾಗಬಹುದು.

  ಸೇಬು

  ಸೇಬು

  ದಿನಕ್ಕೊಂದು ಸೇಬು ವೈದ್ಯರನ್ನು ದೂರಿವಿಡುತ್ತದೆ ಸರಿ, ಆದರೆ ಮೈಗ್ರೇನ್ ತಲೆನೋವನ್ನಲ್ಲ! ವಿಶೇಷವಾಗಿ ಸೇಬನ್ನು ಸಿಪ್ಪೆಸಹಿತ ಸೇವಿಸಿದಾಗ ಮೆದುಳಿನಲ್ಲಿ ಪ್ರಚೋದನೆ ದೊರೆತು ಮೈಗ್ರೇನ್ ತಲೆನೋವು ಎದುರಾಗಬಹುದು. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಕೆಂಪು ಬಣ್ಣದ ಸಿಪ್ಪೆ ಇರುವ ಸೇಬು, ಪಿಯರ್ಸ್ ಮೊದಲಾದ ಹಣ್ಣುಗಳನ್ನು ಸಿಪ್ಪೆ ಸಹಿತ ನಿಯಮಿತವಾಗಿ ಸೇವಿಸುತ್ತಿದ್ದರೆ ಇದರಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ ಮೈಗ್ರೇನ್ ತಲೆನೋವಿಗೆ ಕಾರಣವಾಗಬಲ್ಲುದು. ಈ ಮಾಹಿತಿಗಳು ನಿಮಗೆ ಉಪಯುಕ್ತವೆಂದು ಕಂಡುಬಂದರೆ ಇದರ ಕೊಂಡಿಯನ್ನು ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

  ಮೈಗ್ರೇನ್ ನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಕಾಯಿಲೆಗಳ ಬಗ್ಗೆಯೂ ಎಚ್ಚರ ವಹಿಸಿ

  English summary

  Avoid Having These 9 Foods When You Have A Migraine

  Migraine is one of the most common ailments faced by people of both sexes and over 10 million cases are reported a year, just in India! When a person experiences intense headaches, accompanied by nausea and sensitivity to light and sound, it is usually a migraine. Although the exact cause for a migraine headache is not clearly known, there are a number of factors like food habits, stress, hormonal imbalances, etc., which can trigger a migraine attack. So, here are a few common foods that you should not eat when you have a migraine.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more