For Quick Alerts
ALLOW NOTIFICATIONS  
For Daily Alerts

ಹುಣಸೆ ಹಣ್ಣಿನ ಪ್ರಯೋಜನಗಳು ಒಂದೇ ಎರಡೇ? ಇದು ತುಂಬಾನೇ ಆರೋಗ್ಯಕಾರಿ

|

ಬಹುತೇಕ ಆರೋಗ್ಯ ಸಮಸ್ಯೆಗಳು ಉದ್ಭವ ಆಗುವುದು ದೇಹದ ತೂಕ ಹೆಚ್ಚುವುದರಿಂದಲೇ ಎಂದು ಅನೇಕ ಸಂಶೋಧನೆ ಹಾಗೂ ಅಧ್ಯಯನಗಳು ಸಾಬೀತು ಪಡಿಸಿವೆ. ದೇಹದ ತೂಕ ಅತಿಯಾಗಿದ್ದರೆ ನಮ್ಮ ದೇಹದ ಆಕರ್ಷಣೆಯೂ ಕುಗ್ಗುವುದು. ಅದರಲ್ಲೂ ಆಧುನಿಕ ಶೈಲಿಯ ಉಡುಗೆಯನ್ನು ತೊಡಲು ಕಷ್ಟವಾಗುವುದು. ಈ ಹಿನ್ನೆಲೆಗಳಲ್ಲಿಯೇ ಇಂದು ಅನೇಕರು ದೇಹದ ತೂಕ ಇಳಿಸಲು ವ್ಯಾಯಾಮ, ವಾಕಿಂಗ್, ಆಹಾರದಲ್ಲಿ ಪಥ್ಯವನ್ನು ಅನುಸರಿಸುತ್ತಾರೆ.

ಒತ್ತಡದ ಜೀವನಶೈಲಿಯಲ್ಲಿ ಅಸ್ತವ್ಯಸ್ಥವಾಗಿರುವ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಮತ್ತು ತೀವ್ರ ಒತ್ತಡದಿಂದಾಗಿ ಕ್ರೋಢೀಕರಣಗೊಂಡ ಕಲ್ಮಶದಿಂದಾಗಿ ನಮ್ಮ ದೇಹದಲ್ಲಿರುವ ಜೀವಾಣು ವಿಷಗಳಿಗೆ ಕಾರಣವಾಗಿದೆ. ನೀರಿನಲ್ಲಿ ಕರಗುವ ಜೀವಾಣು ವಿಷಗಳು ಮೂತ್ರ, ಮಲ ಮತ್ತು ಬೆವರಿನ ಮೂಲಕ ಸುಲಭವಾಗಿ ಹೊರಹೋಗುತ್ತವೆ. ಆದರೆ ಕೆಲವು ಹಾಗೆ ಮಾಡಲು ವಿಫಲವಾಗುತ್ತವೆ. ಸರಿಯಾದ ಪಥ್ಯಕ್ರಮ ಮತ್ತು ವ್ಯಾಯಾಮದಿಂದ ಇಂತ ಜೀವಾಣು ವಿಷವನ್ನು ಹೊರಹಾಕಬಹುದು. ಆದಾಗ್ಯೂ ಕೊಬ್ಬಿನಲ್ಲಿ ಕರಗುವ ಜೀವಾಣು ವಿಷವನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗದೆ ಇದ್ದಾಗ ಸಮಸ್ಯೆ ಉದ್ಭವ ಆಗುವುದು. ಆಗ ಅನಗತ್ಯ ಕೊಬ್ಬುಗಳು ಹೊಟ್ಟೆ, ಸೊಂಟ ಮತ್ತು ತೊಡೆಯಲ್ಲಿ ಶೇಖರಣೆಯಾಗುತ್ತದೆ.

ಅನಗತ್ಯವಾಗಿ ದೇಹವನ್ನು ಆವರಿಸಿರುವ ಕೊಬ್ಬುಗಳನ್ನು ನಿವಾರಿಸಲು ಅಥವಾ ದೇಹದ ತೂಕವನ್ನು ಇಳಿಸುವ ಪ್ರಯತ್ನದಲ್ಲಿ ನೀವಿದ್ದೀರಿ ಎಂದಾದರೆ ನಿಮಗೊಂದು ಸರಳ ಆಯ್ಕೆ ಹುಣಸೆ ಹಣ್ಣಿನ ರಸ. ಅದ್ಭುತ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಹುಣಸೆ ಹಣ್ಣು ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದು. ಹುಣಸೆ ಹಣ್ಣಿನ ನೀರಿನಿಂದ ನಿಮ್ಮ ದೇಹದ ತೂಕವು ಇಳಿಯಬೇಕು ಎಂದು ನೀವು ಬಯಸುವುದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಹುಣಸೆ ಹಣ್ಣು

ಹುಣಸೆ ಹಣ್ಣು

ಹುಣಸೆ ಫ್ಯಾಬದಿಯಾ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಮರ. ಈ ಮರದಲ್ಲಿ ಬಿಡುವ ಫಲಗಳಿಗೆ ಹುಣಸೆ ಹಣ್ಣು ಎಂದು ಕರೆಯಲಾಗುವುದು. ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯುವ ಈ ಮರದ ಹಣ್ಣನ್ನು ವಿವಿಧ ಪಾಕವಿಧಾನದಲ್ಲಿ ಬಳಸಲಾಗುತ್ತದೆ. ಇದು ಕೇವಲ ಸೀಮಿತ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಪ್ರಪಂಚದಾದ್ಯಂತ ಇದರ ಬೆಳೆ ಹಾಗೂ ಬಳಕೆಯನ್ನು ಕಾಣಬಹುದು. ನಮಗೆಲ್ಲರಿಗೂ ತಿಳಿಸಿರುವ ಹಾಗೆ ಖಾದ್ಯದ ರುಚಿಯನ್ನು ಹೆಚ್ಚಿಸಲು ಉಪ್ಪು ಎಷ್ಟು ಪ್ರಾಮುಖ್ಯವೋ ಅಂತೆಯೇ ಹುಣಸೆ ಹಣ್ಣು ತನ್ನ ಹುಳಿ ರುಚಿಯಿಂದ ಹೆಚ್ಚು ಫೇಮಸ್ಸು. ಸಿಹಿ ಹುಳಿ ಮಿಶ್ರಿತ ಈ ಹಣ್ಣು ತನ್ನಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ರುಚಿಯನ್ನು ಒದಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ವಿಟಮಿನ್ ಸಿ, ಇ, ಬಿ ಅಂಶಗಳು, ಕಬ್ಬಿಣ, ಮೆಗ್ನೇಷಿಯಂ, ರಂಜಕ, ಪೊಟಾಷಿಯಮ್ ಗುಣಗಳು ಹುಣಸೆ ಹಣ್ಣಿನಲ್ಲಿರುವುದರಿಂದ ಆರೋಗ್ಯದ ದೃಷ್ಟಿಯಲ್ಲೂ ಇದು ಟಾಪ್‌ ಸ್ಥಾನದಲ್ಲಿದೆ. ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹುಣಸೆ ಹಣ್ಣು ಹೊಂದಿರುವುದರಿಂದ ನಮ್ಮ ದೇಹ ಸದೃಢವಾಗಿ ಇರುತ್ತದೆ.

ಹುಣಸೆ ಹಣ್ಣಿನ ಪೌಷ್ಟಿಕ ಮೌಲ್ಯಗಳು

ಹುಣಸೆ ಹಣ್ಣಿನ ಪೌಷ್ಟಿಕ ಮೌಲ್ಯಗಳು

ಹುಣಸೆ ಹಣ್ಣಿನ ರಸ ಹೇಗೆ ದೇಹದಲ್ಲಿರುವ ತೂಕವನ್ನು ಕರಗಿಸುವುದು? ಎನ್ನುವುದನ್ನು ತಿಳಿದುಕೊಳ್ಳಲು ಮೊದಲು ನಾವು ಅದರಲ್ಲಿರುವ ಪೋಷಕಾಂಶಗಳ ಗುಣವನ್ನು ತಿಳಿಯಬೇಕು. ಹೌದು, ಅದ್ಭುತ ಪೌಷ್ಟಿಕಾಂಶವನ್ನು ಹೊಂದಿರುವ ಹುಣಸೆ ಹಣ್ಣಿನಲ್ಲಿ ಶಕ್ತ, ಕಾರ್ಬೋಹೈಡ್ರೇಟ್, ಸಕ್ಕರೆ, ನಾರಿನಂಶ, ಕೊಬ್ಬು, ಪ್ರೋಟೀನ್ಗಳು, ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಮ್, ಜಿಂಕ್ ಸೇರಿದಂತೆ ವಿವಿಧ ಪೋಷಕಾಂಶಗಳಿರುವುದನ್ನು ಅರಿಯಬಹುದು.

ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್

ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್

ಹುಣಸೆ ಹಣ್ಣಿನಲ್ಲಿ ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ (ಎಚ್ಸಿಎ) ಅಧಿಕವಾಗಿದೆ. ಈ ಅಂಶವು ಕೊಬ್ಬಿನ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಈ ಆಮ್ಲವು ಸಿಟ್ರಿಕ್ ಆಮ್ಲವನ್ನು ಹೋಲುತ್ತದೆ. ಈ ಗುಣವು ವಿವಿಧ ಸಸ್ಯಗಳಲ್ಲಿ ಇರುವುದನ್ನು ನಾವು ಗಮನಿಸಬಹುದು. ಹುಣಸೆ ಹಣ್ಣಿನಲ್ಲಿ ಇದು ಸಮೃದ್ಧ ವಾಗಿರುವುದನ್ನು ಕಾಣಬಹುದು. ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ ದೇಹದಲ್ಲಿ ಇರುವ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಕೊಬ್ಬನ್ನು ಉತ್ತೇಜಿಸುವ ಕಿಣ್ವಗಳನ್ನು ನಿಯಂತ್ರಿಸುವುದು. ಸೆರೊಟೋನಿನ್ ನರಸಂವಾಹಕ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಹೈಡ್ರೋಕ್ಸಿಟ್ರಿಕ್ ಆಮ್ಲವು ಹಸಿವನ್ನು ನಿಗ್ರಹಿಸುವುದು. ದೀರ್ಘಕಾಲದ ವ್ಯಾಯಾಮದ ಸಮಯದಲ್ಲಿ ಇದು ಕೊಬ್ಬನ್ನು ಸುಡುತ್ತದೆ.

ಸೌಮ್ಯ ವಿರೇಚಕ

ಸೌಮ್ಯ ವಿರೇಚಕ

ಹುಣಸೆ ಹಣ್ಣಿನ ರಸವು ಸೌಮ್ಯವಾದ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಪಿತ್ತರಸದ ಅಸ್ವಸ್ಥತೆಗೆ ಚಿಕಿತ್ಸೆಯನ್ನು ನೀಡುವುದು. ಅಲ್ಲದೆ ಅನಗತ್ಯ ಪಿತ್ತರಸದ ಉತ್ಪಾದನೆಯನ್ನು ಹುಣಸೆ ಹಣ್ಣಿನ ರಸವು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇಡುವುದು.

ಜೀರ್ಣಕ್ರಿಯೆಗೆ ಸಹಾಯಮಾಡುವುದು

ಜೀರ್ಣಕ್ರಿಯೆಗೆ ಸಹಾಯಮಾಡುವುದು

ಉತ್ತಮ ಜೀರ್ಣಕ್ರಿಯೆಗೆ ಹುಣಸೆ ಹಣ್ಣು ಅದ್ಭುತ ಸಹಕಾರ ನೀಡುವುದು. ಜೀರ್ಣಕ್ರಿಯೆಯು ಸದಾ ಉತ್ತಮವಾಗಿರುವಂತೆ ಪೋಷಿಸುವುದು.

 ಅತಿಯಾದ ತಿನ್ನುವಿಕೆಯನ್ನು ತಡೆಯುವುದು

ಅತಿಯಾದ ತಿನ್ನುವಿಕೆಯನ್ನು ತಡೆಯುವುದು

ಕೆಲವರು ನಿರಂತರವಾಗಿ ಏನಾದರೂ ತಿನ್ನುತ್ತಲೇ ಇರುತ್ತಾರೆ. ಇದರ ಪರಿಣಾಮವಾಗಿ ತೂಕ ಹೆಚ್ಚುವುದು, ಕೊಬ್ಬು ಶೇಖರಣೆಯಾಗುವುದು. ಅಂತಹ ಸಂದರ್ಭದಲ್ಲಿ ಹುಣಸೆ ಹಣ್ಣಿನ ಸೇವನೆಯು ಹಸಿವನ್ನು ಸರಿಹೊಂದಿಸುವುದರ ಮೂಲಕ ತೂಕ ನಷ್ಟಕ್ಕೆ ಸಹಕಾರ ನೀಡುವುದು.

 ಅತಿಯಾದ ತಿನ್ನುವಿಕೆಯನ್ನು ತಡೆಯುವುದುಹುಣಸೆ ಹಣ್ಣಿನ ಇತರ ಪ್ರಯೋಜನಗಳು

ಅತಿಯಾದ ತಿನ್ನುವಿಕೆಯನ್ನು ತಡೆಯುವುದುಹುಣಸೆ ಹಣ್ಣಿನ ಇತರ ಪ್ರಯೋಜನಗಳು

* ಹುಣಸೆ ಹಣ್ಣು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತಗೆ ದೇಹಕ್ಕೆ ಅಗತ್ಯವಾದ ಜೀವಸತ್ವ , ಖನಿಜಗಳು, ಫೈಬರ್ಗಳನ್ನು ಒದಗಿಸುತ್ತದೆ.

* ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ನಿವಾರಿಸುವುದು.

* ಹುಣಸೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಕ್ಯಾನ್ಸರ್ ಅನ್ನು ತಡೆಯುವುದು.

* ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಅದ್ಭುತ ಚಿಕಿತ್ಸೆಯ ರೂಪದಲ್ಲಿ ನಿವಾರಿಸುತ್ತದೆ.

* ಹುಣಸೆ ಹಣ್ಣಿನ ರಸವು ಸಂಧುನೋವು, ಮೊಣಕಾಲು ನೋವು ಸೇರಿದಂತೆ ಇನ್ನಿತರ ಜಂಟಿ ನೋವುಗಳನ್ನು ನಿಯಂತ್ರಿಸುವುದು.

* ತ್ವಚೆಯ ಮೇಲೆ ಉಂಟಾಗುವ ಸುಟ್ಟ ಗಾಯಕ್ಕೆ ಹುಣಸೆ ಹಣ್ಣಿನ ಲೇಪನ ಹೊಂದುವುದರಿಂದ ಬಹುಬೇಗ ಗುಣಮುಖವಾಗುವುದು.

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಇದರಲ್ಲಿರುವ ಪೊಟಾಶಿಯಂ ಈ ಕೆಲಸವನ್ನು ಸರಳವಾಗಿ ಮಾಡಿ ಮುಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದರಲ್ಲಿನ ಆಂಟಿ-ಆಕ್ಸಿಡೆಂಟ್‌ಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ. ಇವೆಲ್ಲವು ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ.

ಮಧುಮೇಹ ರೋಗಕ್ಕೂ ಒಳ್ಳೆಯದು

ಮಧುಮೇಹ ರೋಗಕ್ಕೂ ಒಳ್ಳೆಯದು

ಹುಣಸೆ ಹಣ್ಣು ಎಂಬುದು ಒಂದು ಆಲ್ಫಾ-ಅಮೈಲೇಸ್ ಇನ್‌ಹಿಬಿಟರ್-ಆಗಿದೆ. ಇದು ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಆ ಮೂಲಕ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆಯುವ ಇದು, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವು ಹಿಡಿತದಲ್ಲಿರುವಂತೆ ಮಾಡುತ್ತದೆ. ದಿನ ಅರ್ಧ ಸ್ಪೂನ್ ಹುಣಸೆಹಣ್ಣನ್ನು ಸೇವಿಸುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡುವ ಜೊತೆಗೆ ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.

English summary

amazing-health-benefits-of-tamarind

That pulpy sweet and sour tasting tamarind juice not just adds that tangy flavour to your food like rasam and sambar, but also comes with a lot of health benefits. Widely used in India to prepare sauces, marinades, chutneys and drinks, tamarind pulp is even added to curries. For those of you who are keen on knowing the health benefits of tamarind, then this article is a must read. We will be explaining about a few of the benefits of consuming tamarind.
X
Desktop Bottom Promotion