For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಸೈಲೆಂಟಾಗಿ ಕಾಡುವ ಲೈಂಗಿಕ ರೋಗ! ಇಲ್ಲಿದೆ ಎಂಟು ಲಕ್ಷಣಗಳು

By Arshad
|

ಲೈಂಗಿಕ ರೋಗದ ಪರಿಣಾಮಗಳು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ಬಾಧಿಸುತ್ತವೆ ಏಕೆ ಗೊತ್ತೇ? ಲೈಂಗಿಕ ರೋಗ ಪೀಡಿತ ಮಹಿಳೆಯರು ಈ ರೋಗದ ಕಾರಣದಿಂದ ಮಕ್ಕಳನ್ನು ಪಡೆಯುವ ಸಾಧ್ಯತೆಯನ್ನು ಅಪಾರವಾಗಿ ಕಳೆದುಕೊಳ್ಳುವುದೇ ಇದಕ್ಕೆ ಕಾರಣ. ವಾಸ್ತವದಲ್ಲಿ, ವೈದ್ಯರು ಗರ್ಭಿಣಿಯರ ಆರೋಗ್ಯವನ್ನು ತಪಾಸಣೆಗೊಳಿಸುವಾಗ ಇವರಿಗೆ ಸಿಫಿಲಿಸ್ ಅಥವಾ ಮೇಹರೋಗವೇನಾದರೂ ಇದೆಯೇ ಎಂದು ಅಗತ್ಯವಾಗಿ ಪರೀಕ್ಷಿಸುತ್ತಾರೆ.

ಏಕೆಂದರೆ ಇದೊಂದು ಹರಡುವ ಲೈಂಗಿಕ ರೋಗವಾಗಿದ್ದು ಗರ್ಭದಲ್ಲಿರುವ ಮಗುವಿಗೆ ಅನುವಂಶಿಕ ಅಸಾಮಾನ್ಯತೆಗಳನ್ನು ಅಥವಾ ನ್ಯೂನ್ಯತೆಗಳನ್ನು ಒಡ್ಡಬಲ್ಲುದು. ಸಾಮಾನ್ಯವಾಗಿ ಅಸುರಕ್ಷಿತ ಸಂಬಂಧಗಳೇ ಲೈಂಗಿಕ ರೋಗಗಳು ಹರಡಲು ಮುಖ್ಯ ಕಾರಣವಾಗಿವೆ. ಈ ರೋಗಗಳನ್ನು ಪಡೆಯಲು ಯಾರೂ ಇಚ್ಛಿಸುವುದಿಲ್ಲ. ಒಂದು ವೇಳೆ ಅರಿವಿಲ್ಲದ ಸಂಬಂಧ ಅಥವಾ ಇತರ ಕಾರಣಗಳಿಂದ ಈ ಕಾಯಿಲೆಗಳು ಆವರಿಸಿದರೆ ಈ ರೋಗಗಳ ಇರುವಿಕೆಯನ್ನು ದೇಹ ಕೆಲವು ಸಂಜ್ಞೆಗಳ ಮೂಲಕ ಪ್ರಕಟಿಸುತ್ತದೆ. ಬನ್ನಿ, ಈ ಸಂಜ್ಞೆಗಳಲ್ಲಿ ಪ್ರಮುಖವಾದ ಎಂಟು ಸಂಜ್ಞೆಗಳು ಯಾವುವು ಎಂಬುದನ್ನು ನೋಡೋಣ....

1. ಇತ್ತೀಚೆಗೆ ನಿಮ್ಮ ಯೋನಿಸ್ರಾವ ಬದಲಾಗಿರುವುದು

1. ಇತ್ತೀಚೆಗೆ ನಿಮ್ಮ ಯೋನಿಸ್ರಾವ ಬದಲಾಗಿರುವುದು

ಒಂದು ವೇಳೆ ನಿಮ್ಮ ಯೋನಿಸ್ರಾವ ಇತ್ತೀಚೆಗೆ ಬದಲಾಗಿದ್ದರೆ ಹಾಗೂ ಇದರ ಬಣ್ಣ ಬಿಳಿ ಅಥವಾ ಪಾರದರ್ಶಕ ಹಾಗೂ ಸ್ನಿಗ್ಧದಿಂದ ನೀರಿನಷ್ಟು ತೆಳ್ಳಗಿದ್ದರೆ ಹಾಗೂ ಒಂದು ವೇಳೆ ಈ ದ್ರವ ವಿಶಿಷ್ಟ ಕಮಟು ವಾಸನೆ ಹೊಂದಿದ್ದರೆ ಇದು ನಿಮಗೆ ಲೈಂಗಿಕ ರೋಗ ಆವರಿಸಿರುವ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಅದರಲ್ಲೂ ಈ ದ್ರವ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದರೆ ಹಾಗೂ ಇದರ ವಾಸನೆ ಮೀನಿನ ವಾಸನೆಗೆ ಹತ್ತಿರವಾಗಿದ್ದರೆ ಇದು ಗುಪ್ತಾಂಗಗಳಲ್ಲಿ ಭಾರೀ ಸೋಂಕು ಉಂಟಾಗಿರುವುದನ್ನು ಪ್ರಕಟಿಸುತ್ತದೆ.

2. ಮೂತ್ರ ವಿಸರ್ಜಿಸುವಾಗ ನೋವಾಗುವುದು

2. ಮೂತ್ರ ವಿಸರ್ಜಿಸುವಾಗ ನೋವಾಗುವುದು

ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವಾಗಲು ನೀರಿನ ಕೊರತೆಯೂ ಒಂದು ಕಾರಣವಾಗಿರಬಹುದು. ನೀವು ಸಾಕಷ್ಟು ನೀರು ಕುಡಿಯದೇ ಇದ್ದರೆ ಮೂತ್ರ ಹೆಚ್ಚು ಸಾಂದ್ರೀಕೃತವಾಗುತ್ತದೆ ಹಾಗೂ ಈ ಅಧಿಕ ಸಾಂದ್ರತೆಯ ಮೂತ್ರವನ್ನು ವಿಸರ್ಜಿಸಲು ಕೊಂಚ ನೋವು ಅಥವಾ ಉರಿಯ ಅನುಭವವಾಗಬಹುದು. ಆದರೆ ನೀವು ಲೋಟಗಳಲ್ಲ, ದೊಡ್ಡ ಹೂಜಿತುಂಬಾ ನೀರು ಕುಡಿದರೂ ಮೂತ್ರ ವಿಸರ್ಜಿಸುವ ವೇಳೆ ನೋವಾಗುತ್ತಿದ್ದರೆ ಅಥವಾ ಬೆಂಕಿಯಂತೆ ಉರಿಯುತ್ತಿದ್ದರೆ ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಗಾಗಬೇಕು. ಇದು ಖಚಿತವಾಗಿಯೂ ಯಾವುದಾದರೊಂದು ಸೋಂಕಿನ ಲಕ್ಷಣವಾಗಿದೆ. ಇದು ಲೈಂಗಿಕ ರೋಗದಿಂದರೂ ಎದುರಾಗಿರಬಹುದು.

3. ಮಹಿಳೆಯರಿಗೆ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುವುದು

3. ಮಹಿಳೆಯರಿಗೆ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುವುದು

ಹೆಚ್ಚಿನ ಸಮಯದಲ್ಲಿ ನಿಮ್ಮ ಖಾಸಗಿ ಸ್ಥಳಗಳಲ್ಲಿ ಭಾರೀ ತುರಿಕೆ ಎದುರಾಗುತ್ತಿದ್ದರೆ ಹಾಗೂ ಈ ತುರಿಕೆ ಸದಾ ಇದ್ದರೆ ನಾಲ್ಕು ಜನರ ನಡುವೆ ಈ ನವೆ ಪರಿಹರಿಸಲು ಭಾರೀ ಮುಜುಗರ ಎದುರಿಸಬೇಕಾಗುತ್ತದೆ. ಈ ಸಂಜ್ಞೆ trichomoniasis ಎಂಬ ಲೈಂಗಿಕ ರೋಗದ ಸ್ಪಷ್ಟ ಲಕ್ಷಣವಾಗಿದೆ. ಈ ರೋಗದ ಪ್ರಮುಖ ಲಕ್ಷಣವೇ ಖಾಸಗಿ ಸ್ಥಳಗಳಲ್ಲಿ ತುರಿಕೆಯುಂಟುಮಾಡುವುದಾಗಿದೆ.

4. ನೋವಿಲ್ಲದ ಬೊಬ್ಬೆ

4. ನೋವಿಲ್ಲದ ಬೊಬ್ಬೆ

ಒಂದು ವೇಳೆ ಜನನಾಂಗಗಳು ಅಥವಾ ತುಟಿಗಳಲ್ಲಿ ಚಿಕ್ಕದಾದ ಬೊಬ್ಬೆಗಳೆದ್ದಿದ್ದರೆ ಹಾಗೂ ಇವುಗಳಲ್ಲಿ ತುರಿಕೆಯಾಗಲೇ ನೋವಾಗಲೀ ಇಲ್ಲದೇ ಇದ್ದರೆ ಇದು ಸಿಫಿಲಿಸ್ ಎಂಬ ಮೇಹರೋಗದ ಲಕ್ಷಣವಾಗಿದೆ. ಒಂದು ವೇಳೆ ನೀವಿದನ್ನು ಗಮನಿಸಿದರೆ ತಕ್ಷಣ ಚರ್ಮವೈದ್ಯರಲ್ಲಿ ತಪಾಸಣೆಗೊಳಗಾಗಬೇಕು. ಏಕೆಂದರೆ ಇದು ಈ ರೋಗದ ಪ್ರಥಮ ಹಂತದ ಲಕ್ಷಣವಾಗಿದೆ. ಇದು ಉಲ್ಬಣಗೊಂಡು ಎರಡನೆಯ ಹಂತ ತಲುಪಿದರೆ ಈ ಬೊಬ್ಬೆಗಳೆಲ್ಲಾ ಒಳಗಿ ಒಳಕ್ಕಿಳಿಯುತ್ತವೆ ಹಾಗೂ ರಕ್ತವೆಲ್ಲಾ ಬ್ಯಾಕ್ಟೀರಿಯಾಗಳಿಂದ ತುಂಬಿಕೊಳ್ಳುತ್ತದೆ.

5. ಮೈಯಲ್ಲೆಲ್ಲಾ ಕೆಂಪುಗೀರುಗಳಾಗುವುದು

5. ಮೈಯಲ್ಲೆಲ್ಲಾ ಕೆಂಪುಗೀರುಗಳಾಗುವುದು

ಸಿಫಿಲಿಸ್ ರೋಗದ ಮುಂದಿನ ಹಂತದಲ್ಲಿ ಹಸ್ತ, ಪಾದಗಳು ಹಾಗೂ ಎದೆ,ಹೊಟ್ಟೆ,ಬೆನ್ನಿನ ಚರ್ಮದಲ್ಲಿ ಸೂಕ್ಷ್ಮ ಹಾಗೂ ಕೆಂಪಗಿನ ಗೀರುಗಳು ಕಾಣಿಸಿಕೊಳ್ಳುತ್ತವೆ. ಈ ಹಂತಕ್ಕೆ ರೋಗ ತಲುಪಿದರೆ ಇದರ ಪರಿಣಾಮವಾಗಿ ಗಂಭೀರ ಸ್ವರೂಪದ ಹೃದಯಸಂಬಂಧಿ ರೋಗ ಅಥವಾ ನರಸಂಬಂಧಿ ತೊಂದರೆಗಳು ಎದುರಾಗಬಹುದು. ಈ ಲಕ್ಷಣ ಕಂಡುಬಂದರೆ ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ (ER stat) ದಾಖಲಿಸಿಕೊಳ್ಳಬೇಕು.

6. ದೈಹಿಕ ಸಂಪರ್ಕದಲ್ಲಿ ನೋವು

6. ದೈಹಿಕ ಸಂಪರ್ಕದಲ್ಲಿ ನೋವು

ರೋಗ ಆವರಿಸಿದ ಬಳಿಕ ಸಂಸರ್ಗ ಮೊದಲಿನಷ್ಟು ಅಪ್ಯಾಯಮಾನವಾಗಿರುವುದಿಲ್ಲ. ವಿಶೇಷವಾಗಿ ಸ್ವರತಿಯ ಮೂಲಕವೂ ಮೊದಲಿನ ತೃಪ್ತಿ ಸಿಗುವುದಿಲ್ಲ. ಈ ಮೂಲಕ ಅತೃಪ್ತಿ ಎದುರಾಗುತ್ತದೆ. ಅಲ್ಲದೇ ಅತಿ ತೀಕ್ಷ್ಣವಾದ ನೋವು ಸಹಾ ಎದುರಾಗುತ್ತದೆ. ಕೆಲವೊಂದು ಸಮಯದಲ್ಲಿ ಯಾವುದೇ ಚಟುವಟಿಕೆಯಿಲ್ಲದಿದ್ದರೂ ಒಳಭಾಗದಲ್ಲಿ ನೋವು ಎದುರಾದರೆ ಈ ಭಾಗದಲ್ಲಿ ಸೋಂಕು ಉಂಟಾಗಿರುವ ಸಾಧ್ಯತೆ ಅಧಿಕವಾಗಿದೆ.

7. ಋತುಸ್ರಾವದ ಸಮಯಕ್ಕಿಂತ ಭಿನ್ನವಾದ ಸೊಂಟದ ಕೆಳಭಾಗದ ನೋವು

7. ಋತುಸ್ರಾವದ ಸಮಯಕ್ಕಿಂತ ಭಿನ್ನವಾದ ಸೊಂಟದ ಕೆಳಭಾಗದ ನೋವು

ಒಂದು ವೇಳೆ ಋತುಸ್ರಾವದ ಸಮಯವಲ್ಲದ ದಿನದಲ್ಲಿಯೂ ಗರ್ಭಕಂಠ ಅಥವಾ ಗರ್ಭನಾಳದಲ್ಲಿ ತೀವ್ರವಾದ ಸೋಂಕು ಎದುರಾಗಿ ಥಟ್ಟನೇ ಭಾರೀ ನೋವು ಎದುರಾದರೆ ಹಾಗೂ ಈ ನೋವಿಗೆ ಏನು ಕಾರಣ ಎಂದು ಸ್ಪಷ್ಟವಾದ ಕಾರಣ ನೀಡಲು ಅಸಮರ್ಥರಾದರೆ ಈ ಸಂಜ್ಞೆ ಸಹಾ ಲೈಂಗಿಕ ರೋಗ ಆವರಿಸಿರುವ ಸಾಧ್ಯತೆಯನ್ನು ಪ್ರಕಟಿಸುತ್ತದೆ.

8. ಮಾಸಿಕ ದಿನಗಳಲ್ಲದ ದಿನಗಳಲ್ಲೂ ಒಳ ಉಡುಪುಗಳಲ್ಲಿ ರಕ್ತದ ಕಲೆಗಳು

8. ಮಾಸಿಕ ದಿನಗಳಲ್ಲದ ದಿನಗಳಲ್ಲೂ ಒಳ ಉಡುಪುಗಳಲ್ಲಿ ರಕ್ತದ ಕಲೆಗಳು

ಒಂದು ವೇಳೆ ಮಾಸಿಕ ದಿನಗಳಲ್ಲದ ದಿನಗಳಲ್ಲಿಯೂ ಒಳ ಉಡುಪಿನ ಒಳಭಾಗದಲ್ಲಿ ರಕ್ತದ ಕಲೆಗಳು ಮೂಡಿದ್ದರೆ ಇದು ಸಹಾ ಲೈಂಗಿಕ ರೋಗ ಆವರಿಸಿರುವ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಇವುಗಳಲ್ಲಿ ಕನಿಷ್ಠ ಒಂದಾದರೂ ಲಕ್ಷಣ ಕಂಡುಬಂದರೆ ಇದು ಲೈಂಗಿಕ ರೋಗದಿಂದ ಎದುರಾದ ಸೋಂಕಿನ ಸ್ಪಷ್ಟ ಸಂಜ್ಞೆಯಾಗಿದ್ದು ತಕ್ಷಣವೇ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

English summary

8 Telling Signs You Have An STD

Did you know that the consequences of contracting an STD is worse for women than for men? It's because STDs are one of the biggest reasons behind infertility in women. In fact, doctors usually test pregnant women for syphilis as well because this STD is known to cause genetic abnormalities in the unborn child.So here are 8 telling signs you have an STD.
X
Desktop Bottom Promotion