For Quick Alerts
ALLOW NOTIFICATIONS  
For Daily Alerts

ಸೊಂಟದ ಕೊಬ್ಬುಗಳಲ್ಲೂ ಏಳು ವಿಧಗಳಿವೆ! ಇವುಗಳಿಂದ ಪಾರಾಗುವುದು ಹೇಗೆ?

|

ಸೊಂಟದ ಕೊಬ್ಬು ಕರಗಿಸುವುದು ಅತ್ಯಂತ ಕಷ್ಟದ ಕೆಲಸ. ಒಂದು ಕಡೆಯಲ್ಲಿ ನಿಮ್ಮ ಪ್ರಯತ್ನ ಹೆಚ್ಚುತ್ತಿದ್ದಂತೆಯೇ ಇನ್ನೊಂದೆಡೆ ಸೊಂಟದ ಕೊಬ್ಬು ಕಡಿಮೆಯಾಗುವ ಬದಲು ಹೆಚ್ಚೇ ಆಗುತ್ತದೆ. ವಾಸ್ತವದಲ್ಲಿ ಈ ಪ್ರಯತ್ನಗಳಿಗೂ ಮುನ್ನ ನಿಮ್ಮ ಸೊಂಟದಲ್ಲಿ ಆವರಿಸಿರುವ ಕೊಬ್ಬು ಯಾವ ಬಗೆಯದ್ದೆಂದು ತಿಳಿದುಕೊಳ್ಳುವುದು ಅವಶ್ಯ. ಏನು? ಸೊಂಟದ ಕೊಬ್ಬಿನಲ್ಲಿಯೂ ಭಿನ್ನತೆ ಇದೆಯೇ? ಹೌದು, ನಾವು ಸೇವಿಸುವ ಆಹಾರದಿಂದ ಲಭ್ಯವಾದ ಪೋಷಕಾಂಶಗಳ ಒಂದಂಶವನ್ನು ಮುಂದಿನ ಸಮಯಕ್ಕಾಗಿ ದೇಹ ಸಂಗ್ರಹಿಸಿಡುತ್ತದೆ. ಹೆಚ್ಚು ಕೊಬ್ಬುಯುಕ್ತ ಆಹಾರ ಸೇವನೆ, ಹೆರಿಗೆಯ ಸಮಯ ಅಥವಾ ದೇಹದಲ್ಲಿ ನೀರು ತುಂಬಿಕೊಳ್ಳುವುದು ಮೊದಲಾದ ಮೂಲಕ ಸೊಂಟದ ಸುತ್ತಳತೆ ಹೆಚ್ಚುತ್ತದೆ. ಅಂದಹಾಗೆ, ಕೊಬ್ಬು ಸಹಾ ನಮ್ಮ ದೇಹಕ್ಕೆ ಅವಶ್ಯವೇ ಆಗಿದೆ. ಆದರೆ ನಿಮ್ಮ ತೂಕ ಎತ್ತರಕ್ಕೆ ತಕ್ಕಂತೆ ಇದ್ದರೆ ದೇಹದಲ್ಲಿ ಕೊಬ್ಬಿನ ಜೀವಕೋಶಗಳು ಸ್ರವಿಸುವ ರಸದೂತಗಳು ಹಾಗೂ ರಾಸಾಯನಿಕಗಳು ಸಹಾ ಮಿತಿಯೊಳಗೇ ಇದ್ದು ಆರೋಗ್ಯವನ್ನು ಕಾಪಾಡುತ್ತವೆ. ಯಾವಾಗ ದೇಹದಲ್ಲಿ ಕೊಬ್ಬಿನ ಜೀವಕೋಶಗಳು ಹೆಚ್ಚುತ್ತವೆಯೋ ಆಗ ತೂಕ ಮಿತಿಮೀರುತ್ತದೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

what type of belly fat do i have

ಸೊಂಟದ ಕೊಬ್ಬು ಅತಿಹೆಚ್ಚಾದರೆ ಇದರ ಪರಿಣಾಮವಾಗಿ ಹಲವಾರು ಕಾಯಿಲೆಗಳು ಎದುರಾಗುತ್ತವೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಅತಿಯಾದ ಉರಿಯೂತ ಮತ್ತು ಮಧುಮೇಹ. ಹಾಗಾದರೆ ನಿಮ್ಮ ಸೊಂಟದ ಕೊಬ್ಬು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತಿದೆ? ಸಾಮಾನ್ಯವಾಗಿ ಸೊಂಟದ ಕೊಬ್ಬು ಕರಗಬೇಕೆಂಬ ಇರಾದೆಯುಳ್ಳ ಪುರುಷರೂ ಮಹಿಳೆಯರೂ ಒಂದೇ ತಮ್ಮ ಆಹಾರಸೇವನೆಯ ಮಿತಿಗಳನ್ನು ಕನಿಷ್ಟಕ್ಕಿಳಿಸುತ್ತಾರೆ ಅಥವಾ ಸಮೀಪದ ವ್ಯಾಯಾಮಶಾಲೆಗೆ ಓಡುತ್ತಾರೆ.

ಆದರೂ ಈ ಪ್ರಯತ್ನಗಳು ಹೆಚ್ಚಿನ ಸಂದರ್ಭದಲ್ಲಿ ಕೈಗೂಡದೇ ಸೊಂಟದ ಸುತ್ತಳತೆ ಇನ್ನಷ್ಟು ಹೆಚ್ಚಬಹುದು. ಏಕೆಂದರೆ ಈ ವ್ಯಕ್ತಿಗಳು ತಮ್ಮ ಸೊಂಟದ ಕೊಬ್ಬು ಯಾವ ಬಗೆಯದ್ದೆಂದು ಅರಿಯದೇ ಇದಕ್ಕೆ ಸೂಕ್ತವಾದ ಕ್ರಮವನ್ನೇ ಕೈಗೊಂಡಿರುವುದಿಲ್ಲ. ಆದ್ದರಿಂದ ಕೊಬ್ಬನ್ನು ಕರಗಿಸುವ ಪ್ರಯತ್ನಗಳನ್ನು ಪ್ರಾರಂಭಿಸುವ ಮುನ್ನ ಇದು ಯಾವ ಬಗೆಯ ಕೊಬ್ಬು ಎಂದು ಅರಿಯುವುದು ಅಗತ್ಯವಾಗಿದೆ. ಸೊಂಟದ ಕೊಬ್ಬಿನ ಬಗೆ ಹಾಗೂ ಆಕಾರವನ್ನು ಅರಿತ ಬಳಿಕ ಇದಕ್ಕೆ ಸೂಕ್ತ ಕ್ರಮವನ್ನು ಆಯ್ದುಕೊಳ್ಳಬಹುದು. ಬನ್ನಿ, ಈ ಬಗೆಗಳು ಯಾವುವು ಎಂಬುದನ್ನು ನೋಡೋಣ:

1. ಉಬ್ಬಿದ ಅಥವಾ ಹೊಟ್ಟೆಯುಬ್ಬರಿಕೆಯ ಭಾವನೆ ಮೂಡಿಸುವ ಹೊಟ್ಟೆ

1. ಉಬ್ಬಿದ ಅಥವಾ ಹೊಟ್ಟೆಯುಬ್ಬರಿಕೆಯ ಭಾವನೆ ಮೂಡಿಸುವ ಹೊಟ್ಟೆ

ಸಾಮಾನ್ಯವಾಗಿ ಈ ವ್ಯಕ್ತಿಗಳ ಹೊಟ್ಟೆ ದಿನದ ಘಂಟೆಗಳಿಗನುಗುಣವಾಗಿ ಉಬ್ಬುತ್ತಾ ಹೋಗುತ್ತದೆ. ಇದಕ್ಕೆ ಹೊಟ್ಟೆಯಲ್ಲಿ ಸಂಗ್ರಹವಾಗುವ ವಾಯು ಅಥವಾ ಅಜೀರ್ಣತೆ ಕಾರಣವಾಗಬಹುದು. ಇದು ತೆಳ್ಳಗಿನ ಮಹಿಳೆಯರಲ್ಲಿಯೂ ಅತಿತೂಕದ ವ್ಯಕ್ತಿಗಳಲ್ಲಿಯೂ ಕಂಡುಬರುತ್ತದೆ. ವಿಶೇಷವಾಗಿ ಈ ವ್ಯಕ್ತಿಗಳ ಆಹಾರಕ್ರಮದಲ್ಲಿ ಅಗತ್ಯ ಪೌಷ್ಟಿಕಾಂಶಗಳ ಕೊರತೆ ಇದ್ದಾಗ ಈ ಉಬ್ಬರಿಕೆ ಕಂಡುಬರುತ್ತದೆ. ಅಲ್ಲದೇ ಕೆಲವು ವ್ಯಕ್ತಿಗಳಿಗೆ ಕೆಲವು ಆಹಾರಗಳು ಒಗ್ಗದೇ ಹೋಗದ ಮೂಲಕವೂ ಈ ತೊಂದರೆ ಎದುರಾಗಬಹುದು. ಉದಾಹರಣೆಗೆ ಲ್ಯಾಕ್ಟೋಸ್, ಶಿಲೀಂಧ್ರ, ಗೋಧಿಯಲ್ಲಿರುವ ಗ್ಲುಟೆನ್ ಹಾಗೂ ಮದ್ಯದ ಒಗ್ಗದಿರುವಿಕೆ. ಒಂದು ವೇಳೆ ನಿಮಗೆ ಈ ಬಗೆಯ ಹೊಟ್ಟೆಯುಬ್ಬರಿಕೆ ಎದುರಾಗಿದ್ದರೆ ಇದಕ್ಕೂ ಹಿಂದೆ ಸೇವಿಸಿದ್ದ ಆಹಾರ ಯಾವುದು ಎಂಬುದನ್ನು ಪರಿಶೀಲಿಸಿ. ಅನುಮಾನ ಬಂದ ಆಹಾರಗಳ ಸೇವನೆಯನ್ನು ನಿಲ್ಲಿಸಿ. ಒಮ್ಮೆ ಈ ಆಹಾರ ಯಾವುದು ಎಂದು ಖಚಿತವಾಯಿತೋ, ಈ ಆಹಾರವನ್ನೆಂದೂ ಸೇವಿಸದಿರಿ. ಈ ತೊಂದರೆ ಇರುವ ವ್ಯಕ್ತಿಗಳು ತೀರಾ ತಡವಾಗಿ ಊಟ ಮಾಡಬಾರದು, ಬದಲಿಗೆ ಇಡಿಯ ದಿನ ಸಾಕಷ್ಟು ನೀರನ್ನು ಸತತವಾಗಿ, ಕೊಂಚಕೊಂಚವಾಗಿ ಸೇವಿಸುತ್ತಿರಬೇಕು ಹಾಗೂ ಸಂಜೆಯ ಹೊತ್ತಿಗೇ ಆಹಾರಸೇವನೆಯನ್ನು ಮುಗಿಸಿಬಿಡಬೇಕು. ಆಹಾರದಲ್ಲಿ ಸಾಕಷ್ಟು ಮೊಸರು ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ ಸೇವಿಸಬೇಕು.

2. ಜೋತು ಬಿದ್ದಿರುವ ಹೊಟ್ಟೆ

2. ಜೋತು ಬಿದ್ದಿರುವ ಹೊಟ್ಟೆ

ಜೋತು ಬಿಟ್ಟಿರುವ ಹೊಟ್ಟೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಆರೋಗ್ಯದ ಕಾಳಜಿ ಕಡಿಮೆ ವಹಿಸುವ ಮಹಿಳೆಯರು ಅಥವಾ ತಮ್ಮ ಕೆಲಸದಿಂದ ಸಮಯವೇ ಸಿಗದ ತಾಯಂದಿರೇ ಇರುತ್ತಾರೆ. ಅಚ್ಚರಿ ಎಂಬಂತೆ, ಒಂದೇ ಬಗೆಯ ವ್ಯಾಯಾಮಗಳನ್ನು ಮಾಡುವ ಹಾಗೂ ಒಂದೇ ಬಗೆಯ ಆಹಾರಕ್ರಮವನ್ನು ಅನುಸರಿಸುವ ಮಹಿಳೆಯರಲ್ಲಿಯೂ ಈ ಬಗೆಯ ಹೊಟ್ಟೆ ಕಂಡುಬರುತ್ತದೆ. ಇವರ ಹೊಟ್ಟೆಯೂ ಮೇಲ್ಭಾಗದ ಶರೀರ ಉತ್ತಮ ಆರೋಗ್ಯವನ್ನು ಹೊಂದಿದ್ದರೂ ಜೋತು ಬಿದ್ದಿರುವ ಹೊಟ್ಟೆ ದೇಹದ ಆಕಾರವನ್ನೇ ಅನಾಕರ್ಷಣೀಯವಾಗಿಸಬಹುದು. ಇನ್ನೂ ಒಂದು ಕಾರಣವೆಂದರೆ ದೇಹದ ಕೊಬ್ಬನ್ನು ಕರಗಿಸಲು ಅತಿಯಾದ ವ್ಯಾಯಾಮ ಮಾಡುವ ವ್ಯಕ್ತಿಗಳು ಹೊಟ್ಟೆಯ ಕೊಬ್ಬನ್ನು ಕರಗಿಸುವ ವ್ಯಾಯಾಮವನ್ನೂ ಮಾಡುವುದರಿಂದ ತೋಳು, ಕಾಲು ಮತ್ತು ನಿತಂಬಗಳಿಂದ ಕೊಬ್ಬು ಕರಗಿದರೂ ಹೊಟ್ಟೆಯ ಮುಂಭಾಗದ ಕೊಬ್ಬು ಕರಗದೇ ಜೋಲು ಬೀಳುತ್ತದೆ. ಇದನ್ನು ಸರಿಪಡಿಸಲು ನಿಮ್ಮ ವ್ಯಾಯಾಮಗಳನ್ನು ಕೊಂಚ ಬದಲಿಸಬೇಕಾಗುತ್ತದೆ. ವಿಶೇಷವಾಗಿ ಪುಷ್ ಅಪ್ ವ್ಯಾಯಾಮ ಹಾಗೂ ಇಳಿಜಾರಿನಲ್ಲಿ ಮಲಗಿ ನಿಧಾನವಾಗಿ ಹಿಂದೆ ಬರಲು ಹೊಟ್ಟೆಯ ಸ್ನಾಯುಗಳ ಮೇಲೆ ಸೆಳೆತ ನೀಡುವ ವ್ಯಾಯಾಮಗಳನ್ನು ಮಾಡುವುದು ಉತ್ತಮ. ಇದರ ಜೊತೆಗೇ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ವರ್ಜಿಸಿ ಆರೊಗ್ಯಕರ ಆಹಾರಗಳನ್ನೇ ಸೇವಿಸಬೇಕು.

4. ಒತ್ತಡದಿಂದ ದೂಡಿರುವ ಹೊಟ್ಟೆ:

4. ಒತ್ತಡದಿಂದ ದೂಡಿರುವ ಹೊಟ್ಟೆ:

ಈ ಬಗೆಯ ಹೊಟ್ಟೆ ಮೂಡುವ ಕಾರಣವೇನು ಗೊತ್ತೇ? ಸಾಮಾನ್ಯವಾಗಿ ಘಂಟೆಗಳ ಕಾಲ ಕುಳಿತೇ ಇದ್ದು ತಮ್ಮ ಕಾರ್ಯ ನಿರ್ವಹಿಸುವ ಹಾಗೂ, ತಾವು ಕುಳಿತಲ್ಲಿಯೇ ಊಟವನ್ನೂ ಕೆಲಸ ಮಾಡುತ್ತಲೇ ಪೂರೈಸುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಪರಿಣಾಮವಾಗಿ ಹೊಟ್ಟೆಯ ಕೊಬ್ಬು ಸಹಾ ಹೊಟ್ಟೆಯ ಮೇಲ್ಭಾಗದಲ್ಲಿ ಒತ್ತಡದ ಕಾರಣ ಚಿಕ್ಕದೊಂದು ಸೈಕಲ್ ಟೈರಿನ ಭಾಗವನ್ನು ಹೊಟ್ಟೆಯೊಳಗಿರಿಸಿದಂತೆ ಉಬ್ಬಿರುತ್ತದೆ. ಈ ಕೊಬ್ಬು ಸಾಮಾನ್ಯವಾಗಿ ಹೆಚ್ಚು ದೃಢ ಹಾಗೂ ಎದ್ದು ಕಾಣುವಷ್ಟು ಸ್ಪಷ್ಟವಾಗಿರುತ್ತದೆ. ಇದಕ್ಕೆ ಕೇವಲ ಕುಳಿತು ಮಾಡುವ ಕೆಲಸವೊಂದೇ ಕಾರಣವಲ್ಲ, ಬದಲಿಗೆ ಅನಾರೋಗ್ಯಕರ ಆಹಾರ ಸೇವನೆ ಹಾಗೂ ನಮ್ಮ ದೇಹದಲ್ಲಿ ಉತ್ಪಾದನೆಯಾಗುವ ಕಾರ್ಟಿಸೋಲ್ ಎಂಬ ರಸದೂತದ ಪರಿಣಾಮದಿಂದಲೂ ಎದುರಾಗುತ್ತದೆ.

5. ವಿಸೆರಲ್ ಹೊಟ್ಟೆಯ ಕೊಬ್ಬು (Visceral Abdominal Fat)

5. ವಿಸೆರಲ್ ಹೊಟ್ಟೆಯ ಕೊಬ್ಬು (Visceral Abdominal Fat)

ಸಾಮಾನ್ಯವಾಗಿ ಡೊಳ್ಳು ಹೊಟ್ಟೆ ಎಂದು ಕರೆಯಲ್ಪಡುವ ಈ ಬಗೆಯ ಹೊಟ್ಟೆ ಬರಲು ಮುಖ್ಯ ಕಾರಣ ಹೊಟ್ಟೆ ಮತ್ತು ಈ ಭಾಗದಲ್ಲಿರುವ ಪ್ರಮುಖ ಅಂಗಗಳ ನಡುವಣ ಭಾಗವನ್ನು ಗಾಢವಾದ ಕೊಬ್ಬು ಆವರಿಸಿಕೊಂಡು ಹೊಟ್ಟೆಯನ್ನು ಮುಂದೂಡುವುದಾಗಿದೆ ಹಾಗೂ ಈ ಕೊಬ್ಬು ಗ್ಲುಕೋಸ್ ಮತ್ತು ಮೇಧಸ್ಸಿನ ಜೀವರಾಸಾಯನಿಕ ಕ್ರಿಯೆಯ ಅಡ್ಡಿಯಾಗುವಲ್ಲಿ ಸಂಬಂಧ ಹೊಂದಿದೆ. ಈ ಬಗೆಯ ಹೊಟ್ಟೆ ಹೊಂದಿರುವ ವ್ಯಕ್ತಿಗಳಿಗೆ ಜೀವರಾಸಾಯನಿಕ ಕ್ರಿಯೆಗೆ ಸಂಬಂಧಿಸಿದ ಅಪಾಯಗಳನ್ನು ಎದುರಿಸಬೇಕಾದ ಸಾಧ್ಯತೆ ಹೆಚ್ಚೇ ಇರುತ್ತದೆ. ಏಕೆಂದರೆ ದೇಹಕ್ಕೆ ರಕ್ತಸರಬರಾಜು ಮಾಡುವ ಪ್ರಮುಖ ನರಗಳೆಲ್ಲಾ ಯಕೃತ್ ಸಹಿತ ಇತರ ಪ್ರಮುಖ ಅಂಗಗಳಿಗೆ ಹಾಗೂ ಈ ಮೂಲಕವೇ ಹಾದು ಹೋಗಬೇಕಾದುದರಿಂದ ನರಗಳ ಮೇಲೆ ಸದಾ ಒತ್ತಡವಿರುತ್ತದೆ. ಈ ಕೊಬ್ಬು ತುಂಬಿಕೊಳ್ಳಲು ಪ್ರಮುಖ ಕಾರಣವನ್ನು ಪರಿಶೀಲಿಸಿದಾಗ ವಯಸ್ಸಿನ ಪ್ರಭಾವ, ಲೈಂಗಿಕ ಹಾರ್ಮೋನುಗಳು, ದೈಹಿಕ ಕಸರತ್ತಿನ ಕೊರತೆ ಹಾಗೂ ಸಕ್ಕರೆಯ ರೂಪದಲ್ಲಿ ಸುಕ್ರೋಸ್ ಅನ್ನು ಹೆಚ್ಚಾಗಿ ಸೇವಿಸುವುದು ಪ್ರಮುಖ ಅಂಶಗಳೆಂದು ಕಂಡುಬಂದಿದೆ.

ನಿಮ್ಮ ಹೊಟ್ಟೆಯಲ್ಲಿರುವುದು ವಿಸೆರಲ್ ಕೊಬ್ಬು ಹೌದೇ ಅಲ್ಲವೇ ಎಂದು ಕಂಡುಕೊಳ್ಳುವುದು ಹೇಗೆ? ಸುಲಭವಾಗಿ ಹೇಳಬೇಕೆಂದರೆ ಈ ವ್ಯಕ್ತಿಗಳ ಶರಾಯಿ ಅಥವಾ ಶರ್ಟ್ ಭುಜದಲ್ಲಿ ಸೂಕ್ತ ಅಳತೆಯಲ್ಲಿದ್ದರೂ ಹೊಟ್ಟೆಯ ಮೇಲ್ಭಾಗದಲ್ಲಿ ಬಿಗಿಯಾಗಿರುತ್ತದೆ. ಅಲ್ಲದೇ ಈ ವ್ಯಕ್ತಿಗಳು ಒಂದು ಮಹಡಿ ಮೆಟ್ಟಿಲನ್ನೇರಲೂ ಏದುಸಿರು ಬಿಡುತ್ತಾರೆ.

6. ಟೈರೊಂದು ಪಂಕ್ಚರ್ ಆದಂತೆ ಕಾಣುವ ಕೊಬ್ಬು (Punctured Tire Belly Fat)

6. ಟೈರೊಂದು ಪಂಕ್ಚರ್ ಆದಂತೆ ಕಾಣುವ ಕೊಬ್ಬು (Punctured Tire Belly Fat)

ಈ ಬಗೆಯ ಕೊಬ್ಬು ಹೊಟ್ಟೆಯ ಮುಂಭಾಗದ ಜೊತೆಗೇ ಪಕ್ಕದ ಸೊಂಟವನ್ನೂ ಆವರಿಸಿಕೊಂಡು ಕುಳಿತಾಗ ಒಂದು ಟೈರಿನಿಂತೆ ಕೊಳವೆಯಾಕಾರ ತಾಳುತ್ತದೆ. ಇದಕ್ಕೆ ಪ್ರಮುಖ ಕಾರಣ ಚಲನವಲನದ ಕೊರತೆ ಇರುವ ಆರಾಮದಾಯಕ ಜೀವನ. ನಿಂತಿದ್ದಾಗ ಈ ಟೈರು ಪಂಕ್ಚರ್ ಆದರೆ ಹೇಗೆ ಜೋತು ಬೀಳುತ್ತದೆಯೋ ಹಾಗೇ ಕಾಣುತ್ತದೆ. ಸೌಂದರ್ಯದ ದೃಷ್ಟಿಯಿಂದ ನೋಡಿದರೆ ಇದೊಂದು ಕುರೂಪವೇ ಸರಿ. ಸಾಮಾನ್ಯವಾಗಿ ಸಿದ್ಧ ಆಹಾರ ಸೇವನೆ ಮತ್ತು ಇಡಿಯ ದಿನ ಕುಳಿತಿರುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಈ ವ್ಯಕ್ತಿಗಳು ಸಿದ್ದ ಮತ್ತು ಸಂಸ್ಕರಿಸಿದ ಅಹಾರ, ಮದ್ಯ, ಸಕ್ಕರೆ, ಸೋಡಾ ಮೊದಲಾದವುಗಳನ್ನು ತ್ಯಜಿಸಿ ಇವುಗಳ ಬದಲಿಗೆ ಇಡಿಯ ಧಾನ್ಯಗಳು, ಒಣಫಲಗಳು, ಬೀಜಗಳು, ಆರೋಗ್ಯಕರ ಕೊಬ್ಬು ಹಾಗೂ ಕಡಿಮೆ ಕ್ಯಾಲೋರಿ ಇರುವ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಬೇಕು. ಇದರ ಜೊತೆಗೇ ದೈಹಿಕ ವ್ಯಾಯಾಮವನ್ನೂ ಸಾಕಷ್ಟು ಅನುಸರಿಸುವ ಮೂಲಕ ಈ ಟೈರು ನಿಧಾನವಾಗಿ ಮಾಯವಾಗತೊಡಗುತ್ತದೆ.

7. ಚರ್ಮದ ಅಡಿ ಸಂಗ್ರಹವಾಗಿರುವ ಕೊಬ್ಬು (Subcutaneous Fat)

7. ಚರ್ಮದ ಅಡಿ ಸಂಗ್ರಹವಾಗಿರುವ ಕೊಬ್ಬು (Subcutaneous Fat)

ಸಾಮಾನ್ಯವಾಗಿ ಚರ್ಮದ ಪದರಗಳ ಒಳಗೂ ಕೊಂಚ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಆದರೆ ಸೊಂಟ, ತೊಡೆ, ನಿತಂಬ ಮೊದಲಾದ ಕಡೆಯ ಚರ್ಮದ ಅಡಿಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಸಂಗ್ರಹವಾಗುತ್ತದೆ ಹಾಗೂ ಈ ಅಂಗಗಳನ್ನೇ ಬೆಲೂನಿನಂತೆ ಉಬ್ಬಿಸಿ ಸಹಜಸೌಂದರ್ಯವನ್ನು ಕಸಿದುಕೊಳ್ಳುತ್ತದೆ. ಬೇರೆಲ್ಲಾ ಬಗೆಯ ಕೊಬ್ಬಿಗಿಂತಲೂ ಈ ಕೊಬ್ಬನ್ನು ಕರಗಿಸುವುದು ತೀರಾ ಕಷ್ಟಕರವಾಗಿದ್ದು ಇದಕ್ಕಾಗಿ ದೀರ್ಘ ಅವಧಿಯ ನಿತ್ಯದ ವ್ಯಾಯಾಮ, ಆಹಾರಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ. ಆದರೆ ಈ ಕೊಬ್ಬು ಹಲವಾರು ಕಾಯಿಲೆಗಳನ್ನು ಆಹ್ವಾನಿಸುವ ಕಾರಣ ಇವನ್ನು ನಿವಾರಿಸುವುದು ಅಗತ್ಯವೂ ಆಗಿದೆ.

English summary

7 Types Of Belly Fat And How To Get Rid Of Them

The more you are trying to decrease your belly fat, the more it's increasing no matter what you do. First of all, you need to know the different types of bellies and which one you actually have. These bellies are formed because of eating excess of fatty foods or because of giving birth or water retention. And when you have an ideal weight, the hormones and chemicals secreted by fat cells are healthy. The real problem arises when you have larger and more fat cells which occur when you are overweight.
X
Desktop Bottom Promotion