For Quick Alerts
ALLOW NOTIFICATIONS  
For Daily Alerts

  ವ್ಯಾಯಾಮವಿಲ್ಲದೆ ಸೊಂಟದ ಕೊಬ್ಬಿನಾಂಶ ಕರಗಿಸುವ 7 ಸರಳ ಸೂತ್ರಗಳು

  By Sushma Charhra
  |

  ನೀವು ಅತ್ಯಂತ ಹೆಚ್ಚು ಸಡಿಲವಾಗಿರುವ ಬಟ್ಟೆಗಳನ್ನು ಖರೀದಿಸಲು ಇಚ್ಚಿಸುತ್ತಿದ್ದೀರಾ.. ಕೇವಲ ನಿಮ್ಮ ಸೊಂಟದಲ್ಲಿರುವ ಕೊಬ್ಬಿನಾಂಶವು ಯಾರಿಗೆ ಕಾಣಿಸಬಾರದು, ಹೇಗಾದರೂ ಮಾಡಿ ಅದನ್ನು ಮರೆಮಾಚಬೇಕು ಎಂಬ ಉದ್ದೇಶದಿಂದ ನೀವು ಇಂತಹ ಬಟ್ಟೆಗಳಿಗೆ ಮೊರೆ ಹೋಗುತ್ತಿದ್ದೀರಾ? ನೀವು ನಿಮ್ಮ ಕಾಲುಗಳನ್ನು ಬಗ್ಗಿ ನೋಡುವಾಗ ನಿಮ್ಮ ಹೊಟ್ಟೆಯ ಕಾರಣದಿಂದಾಗಿ ಸರಿಯಾಗಿ ಕಾಣುವುದೇ ಇಲ್ಲವೇ? ನಿಮ್ಮ ಬೊಜ್ಜು ನಿಮ್ಮ ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಕಾಡುತ್ತಿದೆಯೇ? ಅದನ್ನು ಕರಗಿಸಿಕೊಳ್ಳುವುದಕ್ಕೆ ನೀವು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದೀರಾ?

  ಕೇವಲ ಸೌಂದರ್ಯದ ದೃಷ್ಟಿಕೋನದಿಂದ ಮಾತ್ರವಲ್ಲ ಬದಲಾಗಿ ಆರೋಗ್ಯದ ನಿಟ್ಟಿನಿಂದಲೂ ಕೂಡ ನೀವು ನಿಮ್ಮ ಈ ಬೆಲ್ಲಿ ಫ್ಯಾಟನ್ನು ಕರಗಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತಿದ್ದೀರಾದರೆ ಏನು ಮಾಡುತ್ತಿದ್ದೀರಿ?

  ನಮಗೆಲ್ಲರಿಗೂ ತಿಳಿದಿರುವಂತೆ ಸರಿಯಾದ ವ್ಯಾಯಾಮ ಕ್ರಮವು ಈ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಹೊಟ್ಟೆಯ ಮತ್ತು ಸೊಂಟದ ಭಾಗದಲ್ಲಿ ಸೇರಿಕೊಳ್ಳುವ ಬೊಜ್ಜಿನಾಂಶವು ಹಲವು ಕಾಯಿಲೆಗಳಿಗೆ ಬುನಾದಿ ಆಗುತ್ತದೆ ಮತ್ತು ನಿಮ್ಮನ್ನ ಸಂಕಷ್ಟಕ್ಕೆ ದೂಡುತ್ತದೆ ಎಂಬುದು ಸತ್ಯವಾದ ವಿಚಾರವೇ ಆಗಿದೆ. ಹಾಗಾಗಿ ಆದಷ್ಟು ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿರುವ ಬೊಜ್ಜಿನಾಂಶವನ್ನು ಕರಗಿಸುವುದಕ್ಕೆ ಪ್ರಯತ್ನವನ್ನು ನಡೆಸಲೇ ಬೇಕು.

  ಮೊಣಕಾಲು ನೋವು ಅಥವಾ ಜಾಯಿಂಟ್ ಪೇನ್, ನಡೆದಾಡುವಾಗ ಬ್ಯಾಲೆನ್ಸ ಸರಿಯಾಗಿ ಇಲ್ಲದೇ ಇರುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾಗಿರುವ ಗ್ಯಾಸ್ಟ್ರಿಕ್, ಅತಿಯಾದ ರಕ್ತದೊತ್ತಡ, ಹೈ ಕೊಲೆಸ್ಟ್ರಾಲ್, ಹೃದಯದ ಸಮಸ್ಯೆಗಳು, ಲಿವರ್ ಕಾಯಿಲೆಗಳು, ಡಯಾಬಿಟೀಸ್,ಪಿತ್ತಗಲ್ಲುಗಳು ಹಾಗೂ ಕೆಲವು ರೀತಿಯ ಕ್ಯಾನ್ಸರ್ ಸಮಸ್ಯೆಗಳಿಗೂ ಕೂಡ ಈ ಅತಿಯಾದ ಬೆಲ್ಲಿ ಫ್ಯಾಟ್ ಬೇರುಮಟ್ಟದಲ್ಲಿ ಕಾರಣವಾಗುತ್ತದೆ ಎಂಬುದು ಪ್ರಮುಖ ವಿಚಾರವಾಗಿದೆ.

  ದೈಹಿಕ ಆರೋಗ್ಯ ಸಮಸ್ಯೆಗಳನ್ನು ಹೊರತು ಪಡಿಸಿ, ಅತಿಯಾದ ಸೊಂಟ ಮತ್ತು ಹೊಟ್ಟೆಯ ಭಾಗದ ಬೊಜ್ಜು ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ ಉದಾಹರಣೆಗೆ ಖಿನ್ನತೆ , ಮತ್ತು ಆತ್ಮವಿಶ್ವಾಸದ ಮಟ್ಟವನ್ನು ಕುಗ್ಗಿಸಿ, ಅವರ ಗೋಚರತೆ ಅಥವಾ ನೋಟದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.

  ಒಟ್ಟಾರೆ, ಸೊಂಟದ ಕೊಬ್ಬಿನಾಂಶವನ್ನು ಕರಗಿಸಬೇಕು ಅಂದರೆ ಸರಿಯಾದ ಆಹಾರ ಕ್ರಮ ಮತ್ತು ಅಗತ್ಯ ವ್ಯಾಯಾಮದ ಅಭ್ಯಾಸ ಎರಡು ಕೂಡ ಪ್ರಮುಖ ಅಂಶಗಳಾಗಿರುತ್ತದೆ ಎಂಬುದು ದಿಟವಾದ ವಿಚಾರವೇ ಆಗಿದೆ. ಆದರೆ, ಕೆಲವು ಮಂದಿಗೆ ವ್ಯಾಯಾಮ ಮಾಡುವುದಕ್ಕೆ ಸಮಯವೇ ಇರುವುದಿಲ್ಲ.

  ಅಂತಹ ಸಂದರ್ಬಗಳಲ್ಲಿ ಕೆಲವು ಸರಳ ಸಲಹೆಗಳನ್ನು ಅನುಸರಿಸಿದರೆ ಮತ್ತು ನಿಯಮಿತವಾದ, ಕಠಿಣವಾದ ಕಡಿಮೆ ಕೊಬ್ಬಿನಾಂಶದ ಆಹಾರ ಸೇವನೆಯು ಅವರ ನೆರವಿಗೆ ಬರುತ್ತದೆ. ಹಾಗಾದರೆ ವ್ಯಾಯಾಮ ಮಾಡದೇ ಸೊಂಟದ ಕೊಬ್ಬಿನ ಅಂಶವನ್ನು ಕರಗಿಸಲು ಏನು ಮಾಡಬೇಕು ಎಂಬ ಬಗ್ಗೆ ಕೆಲವು ಸರಳ ವಿಧಾನಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ನಿಮಗೂ ಅದನ್ನು ತಿಳಿಯುವ ಆಸಕ್ತಿ ಇದ್ದರೆ, ಲೇಖನದ ಮುಂದಿನ ಭಾಗವನ್ನು ತಪ್ಪದೇ ಓದಿ.

  1. ಪ್ರೋಬಯೋಟಿಕ್ಸ್ ಗಳನ್ನು ಸೇವಿಸಿ

  2. ಉಪ್ಪಿನಾಂಶವನ್ನು ಕಡಿತ ಮಾಡಿ

  3. ಚೂಯಿಂಗ್ ಗಮ್ ನ್ನು ತಪ್ಪಿಸಿ

  4. ಅಲ್ಕೋಹಾಲ್ ಸೇವನೆಯನ್ನು ಬಿಟ್ಟುಬಿಡಿ

  5. ನಿಮ್ಮ ಹಾರ್ಮೋನುಗಳನ್ನು ಟೆಸ್ಟ್ ಮಾಡಿಸಿಕೊಳ್ಳಿ

  6. ಕಟುವಾದ ತರಕಾರಿಗಳನ್ನು ಸೇವಿಸಬೇಡಿ

  7. ಮಲಬದ್ಧತೆಯನ್ನು ನಿವಾರಿಸಿಕೊಳ್ಳಿ

  1. ಪ್ರೋಬಯೋಟಿಕ್ಸ್ ಗಳನ್ನು ಸೇವಿಸಿ

  1. ಪ್ರೋಬಯೋಟಿಕ್ಸ್ ಗಳನ್ನು ಸೇವಿಸಿ

  ನೀವು ಹೆಚ್ಚು ವ್ಯಾಯಾಮವಿಲ್ಲದೆ ನಿಮ್ಮ ಸೊಂಟದ ಕೊಬ್ಬಿನ ಅಂಶವನ್ನು ಕರಗಿಸಿಕೊಳ್ಳಬೇಕು ಎಂದರೆ, ಕಠಿಣವಾದ ಆರೋಗ್ಯಕಾರಿಯಾದ ಮತ್ತು ಕಡಿಮೆ ಕೊಬ್ಬಿನಾಂಶದ ಆಹಾರ ಕ್ರಮದ ಜೊತೆಗೆ ಮತ್ತೂ ಒಂದು ವಿಚಾರ ಬಹಳ ಮಹತ್ವಪೂರ್ಣವಾಗಿರುತ್ತದೆ. ಅದುವೇ ನೀವು ನಿಮ್ಮ ಡಯಟ್ ನಲ್ಲಿ ಪ್ರೋಬಯೋಟಿಕ್ಸ್ ಗಳನ್ನು ಸೇವಿಸುವುದು. ಹೌದು, ಪ್ರೋಬಯೋಟಿಕ್ಸ್ ಗಳು ಅಂದರೆ ಗ್ರೀಕ್ ಯೋಗರ್ಟ್ ನಂತಹ ಪದಾರ್ಥಗಳು ನಿಮ್ಮ ಹೊಟ್ಟೆಯಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳ ಉತ್ಪಾದನೆಯನ್ನು ಹೆಚ್ಚಿಸಿ ನಿಮ್ಮ ಸಮಸ್ಯೆಗೆ ಮುಕ್ತಿ ನೀಡಲು ನೆರವು ನೀಡುತ್ತದೆ.

  ಇದು ಕೇವಲ ನಿಮ್ಮ ಸೊಂಟದ ಭಾಗದಲ್ಲಿ ಶೇಖರಣೆಗೊಂಡಿರುವ ಕೊಬ್ಬಿನಾಂಶದ ಜೀವಕೋಶಗಳನ್ನು ಕರಗಿಸುವುದು ಮಾತ್ರವಲ್ಲ ಬದಲಾಗಿ ಇದು ಕರುಳಿನ ಆರೋಗ್ಯವನ್ನು ಹೆಚ್ಚಿಸಿ ಬ್ಲೋಟಿಂಗ್ ನಂತರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೊಟ್ಟೆಯನ್ನು ಕರಗಿಸಲು ನೆರವಾಗುತ್ತದೆ.

  2. ಉಪ್ಪಿನಾಂಶವನ್ನು ಕಡಿತ ಮಾಡಿ

  2. ಉಪ್ಪಿನಾಂಶವನ್ನು ಕಡಿತ ಮಾಡಿ

  ಚಿಟಿಕೆ ಉಪ್ಪನ್ನು ನಿಮ್ಮ ಯಾವುದೇ ಆಹಾರ ಪದಾರ್ಥಕ್ಕೂ ಮೇಲಿಂದ ಸೇರಿಸಿಕೊಂಡು ತಿನ್ನುವುದರಿಂದ ಆಹಾರವು ಮತ್ತಷ್ಟು ರುಚಿಯಾಗುತ್ತದೆ ಮತ್ತು ಉಪ್ಪೇ ಇಲ್ಲದ ಸಪ್ಪೆಯ ಮತ್ತು ಕೆಲವು ಸಾಧಾರಣ ಸ್ಪೈಸ್ ಗಳು ಅಡುಗೆಯಲ್ಲಿ ಇಲ್ಲದೇ ಇದ್ದರೆ ಅದು ನಿಜಕ್ಕೂ ನಾಲಗೆಗೆ ಹಿತವೆನಿಸುವುದಿಲ್ಲ. ಆದರೆ, ನೀವು ನಿಮ್ಮ ಸೊಂಟದ ಕೊಬ್ಬಿನಾಂಶವನ್ನು ಕರಗಿಸಿಕೊಳ್ಳಬೇಕು, ಹೊಟ್ಟೆಯಲ್ಲಿ ಬ್ಲೋಟಿಂಗ್ ನ ಸಮಸ್ಯೆ ನಿಲ್ಲಬೇಕು ಮತ್ತು ಹೆಚ್ಚು ಪರಿಶ್ರಮವಿಲ್ಲದೆ ನಿಮ್ಮ ಸಮಸ್ಯೆ ನಿವಾರಣೆಯಾಗಬೇಕು ಅಂದರೆ ಖಂಡಿತ ಉಪ್ಪು ಸೇವನೆಯನ್ನು ಕಡಿತಗೊಳಿಸಲೇಬೇಕು. ನಿಮ್ಮ ಪ್ರತಿ ಆಹಾರದಲ್ಲೂ ಉಪ್ಪು ಸೇವನೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ. ಅತಿಯಾದ ಉಪ್ಪಿನಂಶದ ಆಹಾರ ಪದಾರ್ಥವು ನಿಮ್ಮ ಬೆಲ್ಲಿ ಫ್ಯಾಟ್ ಮತ್ತು ಬ್ಲೋಟಿಂಗ್ ನ ಪ್ರಮುಖ ಕಾರಣವಾಗಿರುತ್ತದೆ. ಇದು ನೀರನ್ನೂ ಅತಿಯಾಗಿ ಬಯಸುತ್ತದೆ.

  3. ಚೂಯಿಂಗ್ ಗಮ್ ನ್ನು ತಪ್ಪಿಸಿ

  3. ಚೂಯಿಂಗ್ ಗಮ್ ನ್ನು ತಪ್ಪಿಸಿ

  ಇದೊಂದು ಚಿಕ್ಕ ವಿಷಯವು ನಿಮ್ಮ ಬೆಲ್ಲಿ ಫ್ಯಾಟ್ ನ್ನು ಅಧಿಕಗೊಳಿಸುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕೆಲವೊಂದು ನಾವು ರೂಢಿಸಿಕೊಳ್ಳುವ ದಿನನಿತ್ಯದ ಅಭ್ಯಾಸಗಳು, ಅಂದರೆ ಪ್ರತಿ ದಿನ ಚೂಯಿಂಗ್ ಗಮ್ ಸೇವನೆ ಮಾಡುವುದು ಬೆಲ್ಲಿ ಫ್ಯಾಟ್ ನ್ನು ಅಧಿಕಗೊಳಿಸಲು ಕಾರಣವಾಗಿರುತ್ತದೆ.ಹೆಚ್ಚಿನ ಗಮ್ ಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ ಮತ್ತು ಅದು ಕೃತಕ ಸಕ್ಕರೆಯಂಶವಾಗಿರುತ್ತದೆ. ಹಾಗಾಗಿ ಈ ಸಿಹಿಯು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುವ ಸಾಮರ್ಥ್ಯ ಹೊಂದಿದೆ. ಚೂಯಿಂಗ್ ಗಮ್ ಸೇವಿಸುವುದನ್ನು ಬಿಟ್ಟು ಏನಾದರೂ ಆರೋಗ್ಯಕರವಾದ ಉದಾಹರಣೆಗೆ ಬೀಜಗಳು, ಲವಂಗಗಳು ಅಥವಾ ದಾಲ್ಚಿನ್ನಿಯನ್ನು ಬಾಯಲ್ಲಿಟ್ಟು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

  4. ಅಲ್ಕೋಹಾಲ್ ಸೇವನೆಯನ್ನು ಬಿಟ್ಟುಬಿಡಿ

  4. ಅಲ್ಕೋಹಾಲ್ ಸೇವನೆಯನ್ನು ಬಿಟ್ಟುಬಿಡಿ

  ಇದೊಂದು ಸರ್ವರೋಗದ ಜೀವಾಣುವಾಗಿದೆ. ನೀವು ನಿಮ್ಮ ಬೆಲ್ಲಿಫ್ಯಾಟ್ ಕರಗಿಸಿಕೊಳ್ಳಬೇಕು ಎಂದರೆ ಆಲ್ಕೋಹಾಲ್ ಸೇವನೆಯನ್ನು ಕಡಿತಗೊಳಿಸಬೇಕು ಇಲ್ಲವೇ ಸಂಪೂರ್ಣವಾಗಿ ಬಿಟ್ಟು ಬಿಡಬೇಕು.ಇಲ್ಲದೇ ಇದ್ದರೆ ಖಂಡಿತವಾಗಲೂ ನಿಮ್ಮ ಕೊಬ್ಬಿನಾಂಶ ಕರಗಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಆಲ್ಕೋಹಾಲ್ ಹೆಚ್ಚು ವೇಗವಾಗಿ ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಶೇಕರಣೆಗೊಳ್ಳುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಬಿಟ್ಟು ಬಿಟ್ಟರೆ, ನೈಸರ್ಗಿಕವಾಗಿ ಬೆಲ್ಲಿ ಫ್ಯಾಟ್ ಕರಗುತ್ತದೆ. ಯಾವುದೇ ಹೆಚ್ಚಿನ ಪರಿಶ್ರಮದ ಅಗತ್ಯವೂ ಇರುವುದಿಲ್ಲ ಮತ್ತು ವ್ಯಾಯಾಮವೂ ಹೆಚ್ಚು ಬೇಕಾಗುವುದಿಲ್ಲ. ನಿಮ್ಮ ಸಾಮಾನ್ಯ ಆರೋಗ್ಯವನ್ನು ಹೆಚ್ಚಿಸುವುದಕ್ಕೂ ಆಲ್ಕೋಹಾಲ್ ಸೇವನೆ ಬಿಡುವುದು ಬಹಳ ಒಳ್ಳೆಯದು.

  5. ನಿಮ್ಮ ಹಾರ್ಮೋನುಗಳನ್ನು ಟೆಸ್ಟ್ ಮಾಡಿಸಿಕೊಳ್ಳಿ

  5. ನಿಮ್ಮ ಹಾರ್ಮೋನುಗಳನ್ನು ಟೆಸ್ಟ್ ಮಾಡಿಸಿಕೊಳ್ಳಿ

  ಹೆಚ್ಚಿನ ಸಂದರ್ಬಗಳಲ್ಲಿ , ನಿಮ್ಮದು ಆರೋಗ್ಯಕಾರಿಯಾದ ಆಹಾರ ಕ್ರಮವೇ ಆಗಿದ್ದರೂ ಕೂಡ, ಜೀವನಶೈಲಿ ಅತ್ಯುತ್ತಮವಾಗಿದ್ದರೂ ಕೂಡ, ನಿಮ್ಮ ಬೆಲ್ಲಿ ಫ್ಯಾಟ್ ಕರಗದೇ ಹಾಗೆಯೇ ನಿಮ್ಮ ಸೌಂದರ್ಯಕ್ಕೆ ಮಾರಕವಾಗಿರುವ ಸಂದರ್ಬಗಳು ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅದಕ್ಕೆ ಕಾರಣ ಹಾರ್ಮೋನುಗಳ ವ್ಯತ್ಯಾಸವು ನಿಮ್ಮ ದೇಹದ ಒಳಭಾಗದಲ್ಲಿ ಆಗಿರುವ ಸಾಧ್ಯತೆ ಇರುತ್ತದೆ. ಆಗಿರಬಹುದು. ಇದನ್ನು ನೀವು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ವೈದ್ಯರು ಇದನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಚಿಕಿತ್ಸೆಯ ನಂತರ ನೈಸರ್ಗಿಕವಾಗಿಯೇ ನಿಮ್ಮ ಬೆಲ್ಲಿ ಫ್ಯಾಟ್ ಕರಗಲು ಆರಂಭವಾಗುತ್ತದೆ.

  6. ಕಟುವಾದ ತರಕಾರಿಗಳನ್ನು ಸೇವಿಸಬೇಡಿ

  6. ಕಟುವಾದ ತರಕಾರಿಗಳನ್ನು ಸೇವಿಸಬೇಡಿ

  ಅಧ್ಯಯನಗಳು ತಿಳಿಸಿರುವಂತೆ ಕ್ರೂಸಿಫೆರಸ್ ತರಕಾರಿಗಳು ಉದಾಹರಣೆಗೆ ಕ್ಯಾಬೇಜ್, ಬ್ರಕೋಲಿ, ಹೂಕೋಸು ಇತ್ಯಾದಿ ತರಕಾರಿಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಬೇಡಿ. ಹೀಗೆ ಮಾಡುವುದರಿಂದಾಗಿ ನೈಸರ್ಗಿಕವಾಗಿ ನೀವು ನಿಮ್ಮ ಸೊಂಟ ಮತ್ತು ಹೊಟ್ಟೆಯ ಫ್ಯಾಟ್ ಅಂಶಗಳನ್ನು ಕರಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ ಇವುಗಳಲ್ಲಿ ರಾಫಿನೋಸ್ ಎಂಬ ಅಂಶವಿರುತ್ತದೆ ಮತ್ತು ಇದು ಹೊಟ್ಟೆಯಲ್ಲಿ ಕೊಬ್ಬು ಮತ್ತು ಗ್ಯಾಸ್ ಅಂಶಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಆಹಾರ ಪದಾರ್ಥಗಳನ್ನು ತುಂಡರಿಸಲು ನಿಮ್ಮ ನೆರವಿಗೆ ಬರುತ್ತದೆ.

  7. ಮಲಬದ್ಧತೆಯನ್ನು ನಿವಾರಿಸಿಕೊಳ್ಳಿ

  7. ಮಲಬದ್ಧತೆಯನ್ನು ನಿವಾರಿಸಿಕೊಳ್ಳಿ

  ನೀವು ಒಂದು ವೇಳೆ ಪ್ರತಿದಿನ ಬಾತ್ ರೂಮ್ ಗೆ ಹೋಗುವುದಕ್ಕೆ ಕಷ್ಟ ಪಡುತ್ತಿದ್ದರೆ ಅಂದರೆ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಅದನ್ನು ಕೂಡಲೇ ನಿವಾರಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಯಾಕೆಂದರೆ ಮಲಬದ್ಧತೆಯೂ ಕೂಡ ನಿಮ್ಮ ಸೊಂಟದ ಭಾಗದ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ ಅಷ್ಟೇ ಅಲ್ಲ ಹೊಟ್ಟೆಯಲ್ಲಿ ಬ್ಲೋಟಿಂಗ್ ನಂತಹ ಸಮಸ್ಯೆಗೂ ಕಾರಣವಾಗುತ್ತದೆ. ಮಲಬದ್ಧತೆ ನಿವಾರಣೆಗೆ ಸಾಕಷ್ಟು ನೈಸರ್ಗಿಕ ವಿಧಾನಗಳಿವೆ. ಆ ಮೂಲಕ ನೀವು ನಿಮ್ಮ ಮಲ ವಿಸರ್ಜನೆಯನ್ನು ಸರಿ ಪಡಿಸಿಕೊಂಡು ಸೊಂಟದ ಫ್ಯಾಟ್ ಅಂಶವನ್ನು ಕರಗಿಸಿಕೊಳ್ಳಬಹುದಾಗಿದೆ.

  English summary

  7 Simple Tricks To Reduce Belly Fat Without Exercise!

  Are you tired of trying to buy loser clothes that do not flatter you just because you want to hide your protruding tummy? Do you feel like you cannot see your feet anymore when you look down because your stomach is just getting bigger? If yes, you definitely need to make an effort to get rid of that stubborn belly fat as it can not only be bothersome but also unhealthy!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more