For Quick Alerts
ALLOW NOTIFICATIONS  
For Daily Alerts

ಹೆಚ್ಚು ಮೀನು ತಿನ್ನಿ! ಖಂಡಿತವಾಗಿಯೂ ಈ ಕಾಯಿಲೆಗಳಿಂದ ದೂರವಿರಬಹುದು

|

ನೀವು ಮಾಂಸಾಹಾರವನ್ನು, ಅದರಲ್ಲೂ ಸಾಗರದ ಉತ್ಪನ್ನಗಳನ್ನು ಇಷ್ಟ ಪಡುವವರಾಗಿದ್ದರೆ ಈ ಬಗ್ಗೆ ಹೆಮ್ಮೆ ಪಡಲು ಒಂದು ಮಾಹಿತಿ ಇದೆ. ಮೀನಿನ ಪದಾರ್ಥದ ರುಚಿಗೆ ನೀವು ಮನಸೋತಿದ್ದರೂ, ಮೀನಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿರುವುದು ನಿಮಗೆ ಇನ್ನೂ ಹೆಚ್ಚಾಗಿ ಮೀನು ತಿನ್ನಲು ಪ್ರೇರಣೆ ನೀಡಬಹುದು.

ನಮ್ಮ ಕರಾವಳಿಯ ಜನತೆ ನಿತ್ಯದಲ್ಲಿ ಕನಿಷ್ಟ ಒಂದು ಹೊತ್ತಾದರೂ ಮೀನು ಸೇವಿಸುತ್ತಾರೆ. ಒಂದು ವೇಳೆ ನಿಮಗೂ ಮೀನಿನ ಪದಾರ್ಥ ಹೆಚ್ಚೇ ಇಷ್ಟವಿದ್ದರೆ ಇದನ್ನು ಕೊಂಚ ಹೆಚ್ಚಿಸಲು ಈಗ ನಿಮಗೆ ವಿಜ್ಞಾನವೂ ಅನುಮತಿ ನೀಡುತ್ತಿದೆ. ಇದಕ್ಕೆ ನೀಡುವ ಕಾರಣಗಳು ಒಂದಲ್ಲ, ಹಲವಾರಿವೆ. ಇವುಗಳಲ್ಲಿ ಕೆಲವು ನಿಮಗೆ ಇದುವರೆಗೆ ಗೊತ್ತೇ ಇರದಿದ್ದು ನಿಮ್ಮನ್ನು ಅಚ್ಚರಿಗೊಳಿಸಲಿದೆ.

ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ: ಮೀನು ತಿನ್ನಿ ಕೊಬ್ಬು ಕರಗಿಸಿ!

ಇತ್ತೀಚಿನ ಪರೀಕ್ಷಾ ಫಲಿತಾಂಶಗಳಲ್ಲಿ ಕರಾವಳಿಯ ಮಕ್ಕಳು ಮೇಲುಗೈ ಸಾಧಿಸಿರಲು ಮೀನೇ ಕಾರಣ ಎಂದು ಕೆಲವರು ಕುಹವಾಡುತ್ತಿದ್ದರೂ, ಭಾರತ ಸಹಿತ ವಿಶ್ವದ ಬಹುತೇಕ ಎಲ್ಲಾ ಕರಾವಳಿಯ ಜನರು ಹೆಚ್ಚು ಬುದ್ದಿವಂತರು ಎಂಬುದನ್ನು ನೂರಾರು ವರ್ಷಗಳಿಂದ ಪ್ರಮಾಣಿಸಲ್ಪಡುತ್ತಾ ಬರಲಾಗಿದೆ. ಈ ವ್ಯಕ್ತಿಗಳು ಕೇವಲ ಬುದ್ದಿವಂತರು ಮಾತ್ರವಲ್ಲ, ಉತ್ತಮ ಆರೋಗ್ಯವುಳ್ಳವರೂ ಆರೋಗ್ಯವಂತ ತ್ವಚೆಯನ್ನು ಹೊಂದಿರುವವರೂ ಆಗಿದ್ದಾರೆ. ಇದಕ್ಕೆಲ್ಲಾ ಇವರು ಸೇವಿಸುವ ಹೇರಳ ಪ್ರಮಾಣದ ಮೀನೇ ಕಾರಣ! ಈ ನಂಬಿಕೆ ಈಗ ಕೇವಲ ಮಿಥ್ಯೆಯಲ್ಲ, ಮೀನಿನ ಸೇವನೆಯ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳ ಮೂಲಕ ಈ ಉಪಯೋಗಗಳು ವೈಜ್ಞಾನಿಕವಾಗಿಯೂ ಸಾಬೀತಾಗಿವೆ. ಬನ್ನಿ, ನಿಯಮಿತವಾಗಿ ಮೀನನ್ನು ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಪ್ರಮುಖವಾದ ಏಳನ್ನು ನೋಡೋಣ:

1. ಅಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ

1. ಅಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ

ಮೆದುಳಿನ ಜೀವಕೋಶಗಳು ನಶಿಸಿ ಆ ಸ್ಥಾನದಲ್ಲಿ ಹೊಸ ಜೀವಕೋಶಗಳು ಹುಟ್ಟದೇ ಮೆದುಳಿನ ಕ್ಷಮತೆ ಕ್ಷೀಣವಾಗುತ್ತಾ ಸಾಗುವ ಈ ಕಾಯಿಲೆ ಸಾಮಾನ್ಯವಾಗಿ ಅರವತ್ತರ ನಂತರವೇ ಕಾಡುತ್ತದೆ. ಇದೇ ಕಾರಣಕ್ಕೆ 'ಅರವತ್ತಕ್ಕೆ ಅರಳು ಮರಳು'ಎಂಬ ಕನ್ನಡದ ನಾಣ್ಣುಣಿ ವಾಡಿಕೆಯಲ್ಲಿದೆ. ಈ ಕಾಯಿಲೆ ಆವರಿಸಿದ ಬಳಿಕ ಮರೆಗುಳಿತನ, ದ್ವಂದ್ವ, ಎಗರಾಡುವಿಕೆ, ದೇಹದ ನಿಯಂತ್ರಣ ಕಾಯ್ದಿರಿಸಲು ವಿಫಲವಾಗುವುದು, ಕೈಗಳು ನಡುಗುವುದು, ಧ್ವನಿ ಉಡುಗುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆ ಬಹುತೇಕ ಸಂದರ್ಭಗಳಲ್ಲಿ ಗುಣಪಡಿಸಲು ಸಾಧ್ಯವಿಲ್ಲವಾಗಿದ್ದು ಇವುಗಳ ಪ್ರಮಾಣವನ್ನು ಕೊಂಚ ತಗ್ಗಿಸಬಹುದು ಅಥವಾ ಇನ್ನಷ್ಟು ಕುಗ್ಗುವುದರಿಂದ ನಿಲ್ಲಿಸಬಹುದಷ್ಟೇ! 2016ರಲ್ಲಿ ಅಮೇರಿಕಾದ The Journal Of American Medical Association ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಯಮಿತವಾಗಿ ಮೀನನ್ನು ಸೇವಿಸುತ್ತಾ ಬರುವ ಮೂಲಕ ಮೆದುಳಿನಲ್ಲಿರುವ ಗ್ರೇ ಮ್ಯಾಟರ್ ಅಥವಾ ಬೂದುದ್ರವ್ಯ ಎಂಬ ಸ್ನಿಗ್ಧ ದ್ರವದ ಪ್ರಮಾಣವನ್ನು ಹೆಚ್ಚಿಸುತ್ತದೆ. ತನ್ಮೂಲಕ ಮೆದುಳಿನ ಜೀವಕೋಶಗಳು ಶಾಶ್ವತವಾಗಿ ನಷ್ಟವಾಗುವುದರಿಂದ ತಡೆಯುತ್ತದೆ ಹಾಗೂ ಇಳಿವಯಸ್ಸಿನಲ್ಲಿ ಅಲ್ಜೀಮರ್ಸ್ ಕಾಯಿಲೆ ಆವರಿಸುವುದರಿಂದ ರಕ್ಷಿಸುತ್ತದೆ.

2. ಹೃದಯದ ಕಾಯಿಲೆ ಆವರಿಸುವ ಸಾಧ್ಯತೆ ತಗ್ಗಿಸುತ್ತದೆ

2. ಹೃದಯದ ಕಾಯಿಲೆ ಆವರಿಸುವ ಸಾಧ್ಯತೆ ತಗ್ಗಿಸುತ್ತದೆ

ನಮ್ಮ ದೇಹದ ಅತಿ ಪ್ರಮುಖ ಅಂಗಗಳಲ್ಲೊಂದಾದ ಹೃದಯ ಒಂದು ಕ್ಷಣವೂ ನಿಲ್ಲದೇ ಕೆಲಸ ಮಾಡುತ್ತಿರಲೇಬೇಕಾಗುತ್ತದೆ. ಈ ಅಂಗಕ್ಕೆ ಯಾವುದೇ ತೊಂದರೆಯುಂಟಾದರೆ ಪ್ರಾಣಾಪಾಯ ತಪ್ಪಿದ್ದಲ್ಲ! American Journal Of Cardiology ಎಂಬ ಹೃದಯ ಆರೋಗ್ಯಕ್ಕೆ ಸಂಬಂಧಿಸಿದ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಯಮಿತವಾಗಿ ಮೀನನ್ನು ಸೇವಿಸುವ ಮೂಲಕ ದೇಹಕ್ಕೆ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳು ದೊರಕುತ್ತವೆ ಹಾಗೂ ಇವು ರಕ್ತದಲ್ಲಿ ಟ್ರೈಗ್ಲಿಸರೈಡ್ ಗಳ ಪ್ರಮಾಣವನ್ನು ತಗ್ಗಿಸುವ ಮೂಲಕ ರಕ್ತ ಹೆಪ್ಪುಗಟ್ಟುವ ಹಾಗೂ ಅಧಿಕ ಹೃದಯದೊತ್ತಡವನ್ನು ಕಡಿಮೆಗೊಳಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ

3. ಖಿನ್ನತೆಯನ್ನು ಕಡಿಮೆ ಮಾಡುತ್ತದೆ

3. ಖಿನ್ನತೆಯನ್ನು ಕಡಿಮೆ ಮಾಡುತ್ತದೆ

ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎಂಬ ಮಾನಸಿಕ ತೊಂದರೆ ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತಿದೆ. ಮೆದುಳಿನಲ್ಲಿರುವ ರಾಸಾಯನಿಕಗಳು ಮತ್ತು ರಸದೂತಗಳ ಪ್ರಮಾಣದಲ್ಲಿ ಆಗುವ ವ್ಯತ್ಯಾಸಗಳಿಂದ ಅತೀವ ಪ್ರಮಾಣದ ಬೇಸರ, ಸದಾ ದುಃಖಿತನಾಗಿರುವುದು, ಸುಸ್ತು ಮತ್ತು ಆತ್ಮಹತ್ಯೆಯತ್ತ ಒಲವು ಮೂಡುವ ಮೊದಲಾದ ಲಕ್ಷಣಗಳು ಕಂಡುಬರುತದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ The Journal Of Psychiatry & Neuroscience ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೀನಿನಲ್ಲಿರುವ ಎಣ್ಣೆ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ಈ ರಸದೂತ ಮನೋಭಾವವನ್ನು ಉತ್ತಮಗೊಳಿಸಿ ಖಿನ್ನತೆಯನ್ನು ದೂರವಾಗಿಸಲು ನೆರವಾಗುತ್ತದೆ.

4. ಮೂಳೆಗಳನ್ನು ಇನ್ನಷ್ಟು ಆರೋಗ್ಯಕರವಾಗಿಸುತ್ತದೆ

4. ಮೂಳೆಗಳನ್ನು ಇನ್ನಷ್ಟು ಆರೋಗ್ಯಕರವಾಗಿಸುತ್ತದೆ

ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ಸತ್ಯವಾಗಿಸಲು ಸಂತುಲಿತ ಪ್ರಮಾಣದ, ಆರೋಗ್ಯಕರ ಆಹಾರಸೇವನೆ ಅಗತ್ಯವಾಗಿದೆ. ಸಂತುಲಿತ ಪ್ರಮಾಣದ ಆಹಾರವೆಂದರೆ ನಮ್ಮ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನುಗಳು, ವಿಟಮಿನ್ನುಗಳು, ಖನಿಜಗಳು, ಪೋಷಕಾಂಶಗಳು ಮೊದಲಾಗಿ ಅವಶ್ಯವಾಗಿರುವ ಎಲ್ಲವೂ ಅಗತ್ಯಪ್ರಮಾಣದಲ್ಲಿರಬೇಕು. ಮೀನಿನಲ್ಲಿ ಈ ಎಲ್ಲವೂ ಇದ್ದು ಇದರೊಂದಿಗೆ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಒಟ್ಟಾರೆ ಆರೋಗ್ಯ ವೃದ್ಧಿಸುವ ಜೊತೆಗೇ ಮೂಳೆಗಳ ದೃಢತೆಯನ್ನು ಹೆಚ್ಚಿಸಲು ಮತ್ತು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಮೀನಿನಲ್ಲಿ ಸಮೃದ್ದ ಪ್ರಮಾಣದ ವಿಟಮಿನ್ ಡಿ ಇದ್ದು ನಿಯಮಿತವಾಗಿ ಸೇವಿಸುವ ಮೂಲಕ ತ್ವಚೆ ಹಾಗೂ ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ.

5. ಕಣ್ಣಿನ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ

5. ಕಣ್ಣಿನ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ

ಇಂದು ಕಂಪ್ಯೂಟರ್, ಮೊಬೈಲ್ ಮೊದಲಾದ ಆಧುನಿಕ ಉಪಕರಣಗಳನ್ನು ನಾವೆಲ್ಲರೂ ಅತಿಹೆಚ್ಚೇ ವೀಕ್ಷಿಸುತ್ತಿದ್ದೇವೆ. ಇದು ಕೆಲಸಕ್ಕೂ ಆಗಿರಬಹುದು ಅಥವಾ ಮನರಂಜನೆಗೂ ಆಗಿರಬಹುದು, ಆದರೆ ಇದರ ಪರಿಣಾಮವಾಗಿ ನಮ್ಮ ಕಣ್ಣುಗಳು ವಿಪರೀತವಾದ ಪ್ರಮಾಣದ ಬೆಳಕನ್ನು ತೀಕ್ಷ್ಣವಾಗಿ ಗಮನಿಸ ಬೇಕಾಗುತ್ತದೆ ಹಾಗೂ ಇದರ ಪರಿಣಾಮವಾಗಿ ಕಣ್ಣುಗಳು ಒಣಗುವುದು, ದೃಷ್ಟಿ ಮಂದವಾಗುವುದು, ಕಣ್ಣಿನಲ್ಲಿ ತುರಿಕೆ, ಉರಿ, ಅಸಮವಾದತೆ ಮೊದಲಾದವು ಕಾಣಿಸಿಕೊಳ್ಳಬಹುದು. ಮೀನಿನಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಕಣ್ಣಿನ ಸ್ನಾಯುಗಳನ್ನು ಬಲಪಡಿಸಿ ನರಗಳ ಕ್ಷಮತೆಯನ್ನೂ ಹೆಚ್ಚಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಈ ಮೂಲಕ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ಈ ಮಾಹಿತಿಯನ್ನು Agency Of Healthcare Research And Quality ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.

6. ಸಂಧಿವಾತವನ್ನು ಗುಣಪಡಿಸುತ್ತದೆ

6. ಸಂಧಿವಾತವನ್ನು ಗುಣಪಡಿಸುತ್ತದೆ

ಸಾಮಾನ್ಯವಾಗಿ ಐವತ್ತೈದು ವರ್ಷ ದಾಟಿದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಸಂಧಿವಾತ ಅಥವಾ ಮೂಳೆಗಳ ಗಂಟುಗಳಲ್ಲಿ ಉರಿಯೂತವುಂಟಾಗಿ ಎದುರಾಗುವ ನೋವು ಚಲನೆಯನ್ನೇ ನಿರ್ಬಂಧಿಸುತ್ತದೆ. the American College Of Rheumatology ಎಂಬ ವೈದ್ಯಕೀಯ ಸಂಸ್ಥೆ ಪ್ರಕಟಿಸಿದ ವರದಿಯ ಪ್ರಕಾರ ನಿಯಮಿತವಾಗಿ ಮೀನನ್ನು ಸೇವಿಸುವ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಇ ಹಾಗೂ ಒಮೆಗಾ ೩ ಕೊಬ್ಬಿನ ಆಮ್ಲಗಳು ಲಭಿಸಿ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

7. ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ

7. ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ

American Journal Of Clinical Nutrition ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿತ್ಯವೂ ಮೀನನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ಹಲವಾರು ಬಗೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಪ್ರಮುಖವಾಗಿ ಕರುಳಿನ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಮೀನಿನಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಕ್ಯಾನ್ಸರ್ ಪೀಡಿತ ಜೀವಕೋಶಗಳು ಅನಿಂತ್ರಿತವಾಗಿ ಬೆಳವಣಿಗೆ ಹೊಂದುವುದನ್ನು ತಡೆಯುತ್ತವೆ.

English summary

7 Reasons Why You Should Eat More Fish

Are you a fan of seafood, especially fish? If yes, there is some good news for you! Apart from enjoying the yumminess of fish delicacies, you now have more than a few health reasons to consume more of them! Well, even if you are not someone who likes fish in particular, it is time you add more of it to your diet, because, even science has proven that it has not just one, but a number of health benefits, some of which could surprise you!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more