ಈ ಏಳು ಆಹಾರ ಪದಾರ್ಥಗಳಿಂದ ನೀವು ಕೆಟ್ಟ ಮೂಡಿನಿಂದ ಹೊರಬರಲು ಸಾಧ್ಯ!

Posted By: Prabha Bhat
Subscribe to Boldsky

ಮೂಡ್ ಸರಿ ಇಲ್ಲ ನನ್ನದು ಎಂಬ ಮಾತು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಆಗಾಗ ಕೇಳಿ ಬರುವಂತದ್ದು. ಮೂಡ್ ಎಂದರೆ ಚಿತ್ತ ಅಥವ ಮನಸ್ಥಿತಿ. ಮನಸ್ಥಿತಿ ಸ್ಥಿಮಿತದಲ್ಲಿ ಇಲ್ಲದೆ ಚಂಚಲತೆಯನ್ನು ಹೊಂದಿದಾಗ ಹೊಂದುವ ಸ್ಥಿತಿಯೇ ಮನದ ತೊಳಲಾಟ. ಚಿತ್ತದ ಚಂಚಲತೆಯನ್ನು ನಿಭಾಯಿಸುವುದೇ ಒಂದು ಸವಾಲೆನಿಸಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ಬಗೆಯ ಚಂಚಲತೆ ಹಾರ್ಮೋನುಗಳ ಕಾರಣದಿಂದ ಆಗುವಂತದ್ದು. ಹಾರ್ಮೋನುಗಳ ವ್ಯತ್ಯಯದಿಂದ ಹಲವು ಮಹಿಳೆಯರಲ್ಲಿ ಅವರ ಮೆನ್ಸುರಲ್ ಅವಧಿಯ ಮುನ್ನ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಸ್ತನದಲ್ಲಿ ನೋವುಕಾಣಿಸುವುದು, ದೇಹದ ವಿವಿಧ ಭಾಗಗಳಲ್ಲಿ ನೋವುಗಳು, ದೇಹಕ್ಕೆ ಸುಸ್ತೆನಿಸುವುದು, ಕಿರಿಕಿರಿಯ ಅನುಭವ, ಭಾವನೆಯನ್ನು ನಿಯಂತ್ರಿಸಿಕೊಳ್ಳಲಾಗದಿರುವ ಸ್ಥಿತಿ ಇತ್ಯಾದಿಗಳು.

ಇಂತಹ ಸಮಸ್ಯೆಗಳು ಅವರ ಮನಸ್ಸಿನ ಮೇಲೂ ಹೆಚ್ಚ್ಚಿನ ಪರಿಣಾಮವನ್ನು ಬೀರಿದಾಗ ಈ ಸಮಸ್ಯೆಯನ್ನು ಪಿಎಮೆಸ್(ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್) ಎನ್ನಲಾಗುತ್ತದೆ. ಹೀಗೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ನಮ್ಮ ಮನಸ್ಥಿತಿಯ ಮೇಲೆ ಕೆಟ್ಟ ಪ್ರಭಾವ ಬೀರುವುದನ್ನು ನೋಡಬಹುದಾಗಿದೆ.

ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಶೀಘ್ರವಾಗಿ ಕೋಪಗೊಂಡು ಸುಮ್ಮನೇ ರೇಗಾಡುವುದು, ಸಕಾರಣವಿಲ್ಲದೆ ಮಕ್ಕಳಿಗೆ ಹೊಡೆಯುವುದು, ಮುಂತಾದ ತಪ್ಪುಗಳು ನಡೆದುಹೋಗಬಹುದು. ಮತ್ತು ಅದರಿಂದ ದುಃಖವನ್ನೂ ಅನಭವಿಸು ವಂತಾಗುವುದಲ್ಲದೆ ಪಶ್ಚಾತಾಪವನ್ನೂ ಪಡಬೇಕಾಗಬಹುದು. ಈ ಸ್ಥಿತಿಯನ್ನು ನಿಭಾಯಿಸಲು ಅಂದರೆ ಒಳ್ಳೆಯ ಮೂಡಿನಲ್ಲಿರಲು ಹೆಚ್ಚು ಅನುಕೂಲವಾಗುವ ಏಳು ಬಗೆಯ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ!

ತೆಂಗಿನಕಾಯಿ

ತೆಂಗಿನಕಾಯಿ

ತೆಂಗಿನಕಾಯಿಯ ಸಣ್ಣಸಣ್ಣ ತುಂಡುಗಳನ್ನು ತಿನ್ನುವುದರಿಂದ ನಿಮ್ಮ ಮೂಡ್ ಸರಿಯಾಗುತ್ತದೆ. ತೆಂಗಿನಕಾಯಿಯಲ್ಲಿ ಮಧ್ಯಮ ಸರಪಳಿ ಮೇಧಾಮ್ಲವಿರುವುದರಿಂದ ಇದು ನಿಮ್ಮ ಮೆದಳನ್ನು ಚುರುಕಾಗಿರಿಸುವುದರ ಜೊತೆಗೆ ಆನಂದವಾಗಿರುವಂತೆ ಮಾಡುತ್ತದೆ. ಅಲ್ಲದೆ ಇದು ಸಹಜವಾಗಿಯೇ ಸಿಹಿಯಾಗಿರುವುದರಿಂದ ತಿನ್ನಲೂ ರುಚಿಕರವಾಗಿರುತ್ತದೆ. ಇದನ್ನು ಉಷ್ಣವಲಯದ ಹಣ್ಣು ಎಂತಲೂ ಕರೆಯುತ್ತಾರೆ. ಇದರ ಸೇವನೆಯಿಂದ ನೀವು ಬೇಗನೆ ಕೆಟ್ಟ ಮೂಡ್ ನಿಂದ ಹೊರಬರುತ್ತೀರಿ.

ಡಾರ್ಕ್ ಚಾಕಲೇಟುಗಳು

ಡಾರ್ಕ್ ಚಾಕಲೇಟುಗಳು

ಡಾರ್ಕ್ ಚಾಕಲೆಟ್ಟುಗಳು ಕಾರ್ಟಿಸೋಲ್ ಮತ್ತು ಕಾಟೆಕೋಲಮೈನ್ ಎಂಬ ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತವೆ ಎಂಬದು ಅಧ್ಯಯನದಿಂದ ತಿಳಿದುಬಂದಿದೆ. ಮೋಡದಂತಹ ವಾತಾವರಣದಲ್ಲಿ ನಿಮ್ಮ ಮೂಡ್ ಕೆಟ್ಟದಾಗಿದ್ದರೆ ಹಾಟ್ ಚಾಕಲೇಟ್, ಮೌಲ್ಟನ್ ಡಾರ್ಕ್ ಚಾಕಲೇಟ್ ಮತ್ತು ಹಾಲಿನಿಂದ ತಯಾರಿಸಲ್ಪಟ್ಟ ಪಾನೀಯವನ್ನು ಸೇವಿಸುವುದರಿಂದ ಆಹ್ಲಾದಕರವಾದ ಅನುಭವವನ್ನು ಪಡೆಯಬಹುದು.

ಸ್ಪಿನಾಚ್ ಹಸಿರು ಎಲೆಗಳು

ಸ್ಪಿನಾಚ್ ಹಸಿರು ಎಲೆಗಳು

ಸ್ಪಿನಾಚ್ ಹಸಿರು ಎಲೆಗಳೂ ಕೂಡ ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ. ಇದು ತಕ್ಷಣಕ್ಕೆ ಅರಿವಿಗೆ ಬರದಿದ್ದರೂ ನಿಧಾನವಾಗಿ ಅದು ನಿಮ್ಮ ಮನಸ್ಥಿತಿಯನ್ನು ಸ್ಥಿರವಾಗಿಸುವಲ್ಲಿ ಸಹಾಯಕವಾಗಬಲ್ಲದು. ಹಾಗಾಗಿ ನಿಮ್ಮ ಮೆನ್ಸುರಲ್ ದಿನ ಹತ್ತಿರುವಾಗಿರುವಾಗ ಇದನ್ನು ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಲು ಮರೆಯದಿರಿ.

ಮೊಟ್ಟೆ

ಮೊಟ್ಟೆ

ಮೊಟ್ಟೆಯನ್ನು ಪ್ರೋಟೀನ್ ಬಾಲುಗಳೆಂದೂ ಕರೆಯಲಾಗುತ್ತದೆ.ಇದರಲ್ಲಿ ವಿಟಮಿನ್ ಮತ್ತು ಮೂಡ್ ಬೂಸ್ಟಿಂಗ್ ಒಮೆಗಾ ತ್ರಿ ಎಂಬ ಮೇಧಾಮ್ಲಗಳು ಹಚ್ಚಿನ ಪ್ರಮಾಣದಲ್ಲಿರುತ್ತವೆ. ಅಷ್ಟೇ ಅಲ್ಲದೆ ಪ್ರೋಟೀನ್ ಅಂಶವೂ ಕೂಡ ಅಧಿಕ ಪ್ರಮಾಣದಲ್ಲಿರುತ್ತದೆ. ಇವು ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿವೆ.

ಟೊಮೆಟೋ

ಟೊಮೆಟೋ

ಟೊಮೆಟೋದಲ್ಲಿ ಲೈಕೋಪೀನ್ ಅಂಶವಿದ್ದು, ಇದರಲ್ಲಿ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಿರುವುದರಿಂದ ನಿಮ್ಮ ಮೆದುಳಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನೀವು ಕೆಟ್ಟ ಮೂಡಿನಲ್ಲಿದ್ದಾಗ ಟೊಮೇಟೋ ಸಲಾಡಿಗೆ ಆಲೀವ್ ಎಣ್ಣೆಯನ್ನು ಹಾಕಿ ತಿನ್ನುವುದರಿಂದ ಟೊಮೆಟೋದಲ್ಲಿನ ಲೈಕೋಪೀನ್ ಅಂಶವನ್ನು ಕರುಳು ಹೀರಿಕೊಳ್ಳಲು ಸಹಾಯವಾಗುತ್ತದೆ.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪದಲ್ಲಿ ನಿಮ್ಮ ಮೆದುಳನ್ನು ಆರೋಗ್ಯವಾಗಿರಿಸುವ ಮತ್ತು ಖಿನ್ನತೆಯನ್ನು ದೂರಮಾಡುವ ಕ್ಯಾಮ್ಪೆರ್ಫಾಲ್ ಮತ್ತು ಕ್ವೆರ್ಸೆಟಿನ್ ಅಂಶಗಳನ್ನು ಹೊಂದಿದ್ದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಅಲ್ಲದೆ ಜೇನುತುಪ್ಪವು ಸಕ್ಕರೆಗಿಂತ ಐದು ಪಟ್ಟು ಹೆಚ್ಚಿನ ಸಿಹಿಯನ್ನು ಹೊಂದಿದ್ದು ತಿನ್ನಲೂ ರುಚಿಕರ ಹಾಗೂ ಸ್ವಲ್ಪವನ್ನು ತಿಂದರೂ ಸ್ವಾದಕರವಾಗಿ ಮನಸ್ಸಿಗೆ ಹಿತ ನೀಡುತ್ತದೆ.

ಗ್ರೀಕ್ ಮೊಸರು

ಗ್ರೀಕ್ ಮೊಸರು

ಗ್ರೀಕ್ ಮೊಸರು ಹೆಚ್ಚಿನ ಪ್ರಮಾಣದ ಕಾಲ್ಸಿಯಂ ಹೊಂದಿದೆ. ಮತ್ತು ಇದು ಮೆದುಳಿನಲ್ಲಿ ನರಪ್ರೇಕ್ಷಕಗಳ ಬಿಡುಗಡೆಗೆ ಅವಶ್ಯಕವಾಗಿದೆ. ಬಹುಮುಖ್ಯವಾಗಿ ಉಲ್ಲಾಸದ ಭಾವನೆಗಳ ಉತ್ಪತ್ತಿಗೆ ಕಾರಣವಾಗುವಂತಹದಾಗಿದೆ.ಹಾಗಾಗಿ ಹಣ್ಣುಗಳ ಜೊತೆಗೆ ಸೇರಿಸಿಕೊಂಡು ಸೇವಿಸಿದರೆ ಇದು ತಿನ್ನಲೂ ರುಚಿ ಹಾಗೂ ಮನಸ್ಸಿಗೂ ಆನಂದದಾಯಕ.

English summary

7 Foods You Should Eat When You Are In A Bad Mood!

Mood swings are a b*tch to deal with! And most of the time they are caused by hormonal fluctuations over which you have no control (hint: PMS). So if you are tired of snapping at innocents and then melting into a puddle of tears, you are in luck. In this article we will discuss X foods you should eat when you are in a bad mood that are known to work wonders on the foulest of temperaments.