For Quick Alerts
ALLOW NOTIFICATIONS  
For Daily Alerts

ದೇಹದ ಕೊಬ್ಬನ್ನು ಸಮರ್ಪಕವಾಗಿ ಕರಗಿಸಲು ಏಳು ಸಮರ್ಥ ವಿಧಾನಗಳು

By Arshad
|

ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಾದ ಕೆಲಸವಲ್ಲ. ಒಂದು ವೇಳೆ ನೀವು ಈಗಾಗಲೇ ತೂಕ ಇಳಿಸುವ ಅಹಾರಪಥ್ಯವನ್ನು ಅನುಸರಿಸುತ್ತಿದ್ದರೆ ಈ ಕಾರ್ಯ ಎಷ್ಟು ಕಷ್ಟಸಾಧ್ಯವಾಗಿದೆ ಎಂದು ನಿಮಗೆ ತಿಳಿದೇ ಇದೆ. ಸ್ಥೂಲಕಾಯ ಕೊಂಚವಾದರೂ ಆವರಿಸಿದ ಯಾರಿಗಾದರೂ ಈ ಕೊಬ್ಬನ್ನು ಕರಗಿಸಿಕೊಂಡು ಆರೋಗ್ಯಕರ ಹಾಗೂ ಸುಂದರ ಅಂಗಸೌಷ್ಟವ ಪಡೆಯಬೇಕೆಂಬ ಇಚ್ಛೆ ಇದ್ದೇ ಇರುತ್ತದೆ ಹಾಗೂ ಇದನ್ನು ಕರಗಿಸಲು ವಿಧಾನಗಳಿಗಾಗಿ ಹುಡುಕಾಟ ನಡೆದೇ ಇರುತ್ತದೆ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ?

ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕೇ? ಪಪ್ಪಾಯಿ ಹಣ್ಣು ತಿನ್ನಿ!

effective ways to reduce body fat in kannada

ಒಂದು ವೇಳೆ ನೀವು ಆಹಾರಪಥ್ಯದ ನಿಯಮವನ್ನು ಅನುಸರಿಸುತ್ತಿದ್ದರೆ ಗರಿಷ್ಟ ಪ್ರಯೋಜನ ಪಡೆಯಬೇಕಾದರೆ ಏನು ಮಾಡಬೇಕು? ಏಕೆಂದರೆ ಹೆಚ್ಚಿನ ಸಮಯದಲ್ಲಿ ಒಂದು ಬಗೆಯ ಆಹಾರದ ಮೂಲಕ ಕಡಿಮೆಗೊಂಡ ಕ್ಯಾಲೋರಿಗಳನ್ನು ಚಪಲ ತಡೆಯಲಾರದೇ ಸೇವಿಸಿದ ಇನ್ನೊಂದು ಆಹಾರದ ಮೂಲಕ ದೇಹ ಮರುತುಂಬಿಸಿಕೊಂಡುಬಿಡುತ್ತದೆ. ಅಲ್ಲದೇ ಒಂದೇ ಬಗೆಯ ಆಹಾರವನ್ನು ನಾವು ದಿನದಲ್ಲಿ ಎರಡು ಹೊತ್ತು ತಿನ್ನಲೂ ಇಷ್ಟಪಡದೇ ಇರುವಾಗ ಒಂದೇ ಬಗೆಯ ಆಹಾರವನ್ನು ತೂಕ ಇಳಿಯುವವರೆಗೂ ಹೇಗೆ ಮುಂದುವರೆಸಿಕೊಂಡು ಹೋಗುವುದು?

ಇಂದು ತೂಕ ಇಳಿಸಲು ನೂರಾರು ಬಗೆಯ ಆಹಾರಪಥ್ಯಗಳಿವೆ. ಆದರೆ ನಿಮಗೆ ಗರಿಷ್ಟ ಪ್ರಯೋಜನ ನೀಡುವ ಹಾಗೂ ಅತಿ ಸೂಕ್ತವಾಗಿರುವುದು ಯಾವುದು ಎಂದು ಆಯ್ಕೆ ಮಾಡುವುದು ಬಲು ಕಷ್ಟ. ಆದ್ದರಿಂದ ಕೇವಲ ಆಹಾರಪಥ್ಯವನ್ನೊಂದೇ ಅವಲಂಬಿಸದೇ ಜೀವನಕ್ರಮದಲ್ಲಿ ಕೊಂಚ ಬದಲಾವಣೆ ಹಾಗೂ ಆಹಾರಕ್ರಮದಲ್ಲಿಯೂ ಕೊಂಚ ಬದಲಾವಣೆಯನ್ನು ಅನುಸರಿಸಿದರೆ ಈ ಕಷ್ಟಕರ ಕೊಬ್ಬನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಬಹುದು.

ಒಂದು ಸರಳ ಹಾಗೂ ವಾಸ್ತವಿಕ ಆಹಾರ ಯೋಜನೆ

ಒಂದು ಸರಳ ಹಾಗೂ ವಾಸ್ತವಿಕ ಆಹಾರ ಯೋಜನೆ

ನಿಮ್ಮ ತೂಕವನ್ನು ನಿಜವಾಗಿಯೂ ಇಳಿಸುತ್ತದೆ ಎಂದು ನಿಮಗೆ ಖಚಿತವಾಗಿ ಅನ್ನಿಸುವ ಆಹಾರಪಥ್ಯವನ್ನೇ ಅನುಸರಿಸಿ. ಹೀಗೆ ಮಾಡುವಾಗ ಜಿಹ್ವಾಚಪಲವನ್ನು ಅವಲಂಬಿಸದೇ ವಾಸ್ತವ ಸಂಗತಿಗಳನ್ನೇ ಆಧರಿಸಿ. ಇಂದು ಎಷ್ಟೋ ಆಹಾರಕ್ರಮಗಳು ವಿಫಲವಾಗಲಿಕ್ಕೆ ಪ್ರಮುಖ ಕಾರಣವೆಂದರೆ ಇವು ತೋರಿದಷ್ಟು ವಾಸ್ತವದಲ್ಲಿ ಕಾರ್ಯನಿರ್ವಹಿಸದೇ ಇರುವುದು ಹಾಗೂ ಒಂದು ಬಗೆಯ ಆಹಾರವನ್ನು ಸತತವಾಗಿ ಸೇವಿಸಿದ ಕೊಂಚ ಸಮಯದ ಬಳಿಕ ಇದು ಬೇಸರ ತರಿಸುವುದು. ನಿಮ್ಮ ಜೀವನಕ್ರಮಕ್ಕೆ .ಪೂರಕ ಹಾಗೂ ತೂಕ ಇಳಿಸುವ ಗುರಿಗಳನ್ನು ನಿಜವಾಗಿಯೂ ಸಾಧಿಸುವ ಆಹಾರಗಳನ್ನೇ ಆಯ್ದುಕೊಳ್ಳಿ. ಅಲ್ಲದೇ ತೂಕ ಇಳಿಸುವುದು ಒಂದು ದೀರ್ಘಾವಧಿಯ ಪ್ರಯತ್ನದ ಫಲವಾಗಿದ್ದು ಇದರ ಪರಿಣಾಮಗಳನ್ನು ಒಂದೆರಡು ದಿನಗಳಲ್ಲಿಯೇ ನಿರೀಕ್ಷಿಸದಿರಿ. ಈ ನಿಟ್ಟಿನಲ್ಲಿ ಸರಳ ಹಾಗೂ ಸೂಕ್ತ ಪ್ರಮಾಣದ ಆಹಾರಕ್ರಮವನ್ನು ಆಯ್ದುಕೊಳ್ಳಿ.

ಪ್ರೋಟೀನ್ ಆಧಾರಿತ ಆಹಾರಪಥ್ಯ

ಪ್ರೋಟೀನ್ ಆಧಾರಿತ ಆಹಾರಪಥ್ಯ

ಪ್ರೋಟೀನ್ ಆಧಾರಿತ ಆಹಾರಕ್ರಮವನ್ನು ಅಳವಡಿಸಿಕೊಳ್ಳಿ. ಪ್ರೋಟೀನ್ ಹೆಚ್ಚಿದ್ದಷ್ಟೂ ದೇಹದ ಕೊಬ್ಬು ಕಡಿಮೆಯಾಗಲು ನೆರವಾಗುತ್ತದೆ. ಏಕೆಂದರೆ ಪ್ರೋಟೀನುಗಳನ್ನು ಜೀರ್ಣಿಸಿಕೊಳ್ಳಲು ಹಾಗೂ ಚಯಾಪಚಕ ಕ್ರಿಯೆಗಾಗಿ ದೇಹ ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಆದ್ದರಿಂದ ಆಹಾರದಲ್ಲಿ ಹೆಚ್ಚಿನ ಪ್ರೋಟೀನುಗಳನ್ನು ಅಳವಡಿಸಿಕೊಳ್ಳುವುದು ಕೊಬ್ಬನ್ನು ಕರಗಿಸಲು ಒಂದು ಸಮರ್ಥ ವಿಧಾನವಾಗಿದೆ.

ಸಕ್ಕರೆ ಎಂಬ ವಿಷಕ್ಕೆ ’ಬೇಡ’ ಎನ್ನಿ

ಸಕ್ಕರೆ ಎಂಬ ವಿಷಕ್ಕೆ ’ಬೇಡ’ ಎನ್ನಿ

ನಿಮ್ಮ ಆಹಾರ ಪಥ್ಯದಲ್ಲಿ ಸಕ್ಕರೆಗೆ ಕನಿಷ್ಟ ಪ್ರಾಮುಖ್ಯತೆ ಒದಗಿಸಿ. ಸಿಹಿವಸ್ತುಗಳನ್ನು ನೋಡಿದಾಗ ತಿನ್ನುವ ಬಯಕೆಗಳನ್ನು ಹತ್ತಿಕ್ಕಿ ಸಾಧ್ಯವಾದಷ್ಟೂ ಈ ಆಹಾರಗಳ ಕಡೆಗೆ ಗಮನ ನೀಡದಿರಿ. ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಂಸ್ಕರಿತ ಆಹಾರ, ಬೇಕರಿ ತಿನಿಸುಗಳು, ಸಕ್ಕರೆ ಬೆರೆಸಿದ ಸಿಹಿ ಪೇಯಗಳು, ಇತರ ಪೇಯಕ್ಕಿಂತಲೂ ಏಳು ಪಟ್ಟು ಹೆಚ್ಚು ಸಕ್ಕರೆ ಇರುವ ಬುರುಗು ಬರುವ ಲಘು ಪಾನೀಯಗಳು ಇತ್ಯಾದಿಗಳನ್ನು ವರ್ಜಿಸಿ.

ಹಣ್ಣುಗಳು ಮತ್ತು ಹಸಿ ತರಕಾರಿಗಳತ್ತ ಒಲವು ತೋರಿಸಿ

ಹಣ್ಣುಗಳು ಮತ್ತು ಹಸಿ ತರಕಾರಿಗಳತ್ತ ಒಲವು ತೋರಿಸಿ

ದಿನದಲ್ಲಿ ಯಾವಾಗ ಹಸಿವಾದರೂ, ಆ ಸಮಯದಲ್ಲಿ ಅನಾರೋಗ್ಯಕರ ಸಿದ್ದ ಆಹಾರಗಳತ್ತ ತೋರುತ್ತಿದ್ದ ಆಸಕ್ತಿಯನ್ನು ನೈಸರ್ಗಿಕ ಹಣ್ಣುಗಳು ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳತ್ತ ತೋರಿಸಿ. ಇದರಿಂದ ಅನಗತ್ಯ ಕ್ಯಾಲೋರಿಗಳ ಸೇವನೆ ತಡೆದಂತಾಗುತ್ತದೆ. ತಾಜಾ ಹಣ್ಣುಗಳು ಮತ್ತು ಹಸಿ ತರಕಾರಿಗಳು ಆರೋಗ್ಯಕರ ಆಯ್ಕೆಯಾಗಿವೆ ಹಾಗೂ ನಿಮ್ಮ ಆಹಾರಪಥ್ಯದಲ್ಲಿ ಖಂಡಿತವಾಗಿಯೂ ಅಳವಡಿಸಿಕೊಳ್ಳಲೇಬೇಕು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ದೇಹದ ಕೊಬ್ಬನ್ನು ಕರಗಿಸಲು ಹೆಚ್ಚಿನ ನೆರವು ದೊರಕುತ್ತದೆ ಎಂದು ಕೆಲವಾರು ಅದ್ಯಯನಗಳಿಂದ ಕಂಡುಕೊಳ್ಳಲಾಗಿದೆ. ದೇಹದ ಬಾಯಾರಿಕೆಯನ್ನು ನೀಗಿಸಲು ಹಾಗೂ ತೂಕವನ್ನು ಇಳಿಸಲು ನೀರು ಅತಿ ಸೂಕ್ತವಾದ ಆಯ್ಕೆಯಾಗಿದೆ. ದಿನದ ಪ್ರಥಮ ಆಹಾರವಾಗಿ ನೀರನ್ನು ಸೇವಿಸಿ ಹಾಗೂ ಪ್ರತಿ ಊಟಕ್ಕೂ ಕೊಂಚ ಹೊತ್ತಿನ ಮುನ್ನ ಸಾಕಷ್ಟು ನೀರನ್ನು ಸೇವಿಸುವುದು ಅತಿ ಪರಿಣಾಮಕಾರಿಯಾದ ವಿಧಾನವಾಗಿದೆ.

ಹಸಿರು ಟೀ ಸೇವಿಸಿ

ಹಸಿರು ಟೀ ಸೇವಿಸಿ

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ದಿನಕ್ಕೆ ಒಂದೆರಡು ಕಪ್ ಹಸಿರು ಟೀ ಗುಟುಕರಿಸುವುದರಿಂದ ಕೊಬ್ಬು ಕರಗುವ ಗತಿಯೂ ಹೆಚ್ಚುತ್ತದೆ. ಆದರೆ ಈ ಟೀ ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಸಕ್ಕರೆಯನ್ನು ಹೆಚ್ಚಾಗಿಯೇ ಬೆರೆಸುತ್ತಾರೆ. ಆದರೆ ಹಸಿರು ಟೀ ಪರಿಣಾಮವನ್ನು ಪೂರ್ಣವಾಗಿ ಪಡೆಯಲು ಇದಕ್ಕೆ ಸಕ್ಕರೆ ಸೇರಿಸಲೇಬಾರದು. ಕಹಿಯಾದರೂ ಸರಿ, ಇದರ ಸೇವನೆಯಿಂದ ತೂಕ ಇಳಿಕೆಯ ಫಲಿತಾಂಶ ಮಾತ್ರ ಸಿಹಿಯಾಗಿರುತ್ತದೆ.

ನಿಧಾನವಾಗಿ, ಆಹಾರದತ್ತ ಗಮನ ನೀಡಿ ಸೇವಿಸಿ

ನಿಧಾನವಾಗಿ, ಆಹಾರದತ್ತ ಗಮನ ನೀಡಿ ಸೇವಿಸಿ

ನಿಮ್ಮ ಆಹಾರದ ತಟ್ಟೆಯಲ್ಲಿ ಸೂಕ್ತವಾದ ಆಹಾರ ಇರುವುದು ಅಗತ್ಯ ಮಾತ್ರವಲ್ಲ, ಈ ಆಹಾರವನ್ನು ನೀವು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯವಾಗಿದೆ. ಆಹಾರವನ್ನು ಸಾಕಷ್ಟು ನಿಧಾನವಾಗಿ, ನೀವು ತಿನ್ನುತ್ತಿರುವಾಗ ಆಹಾರದ ರುಚಿಯತ್ತ ಪೂರ್ಣಗಮನ ನೀಡುವಂತೆ ಸೇವಿಸಬೇಕು. ಇದೇ ಆರೋಗ್ಯಕರ ಆಹಾರ ಸೇವನೆಯ ಕ್ರಮವಾಗಿದೆ. ಅಂದರೆ ಊಟದ ಸಮಯದಲ್ಲಿ ಪ್ರತಿ ತುತ್ತನ್ನೂ ಬಾಯಿಯಲ್ಲಿ ಸಾಕಷ್ಟು ಬಾರಿ ಜಗಿದು ಹೆಚ್ಚೂ ಕಡಿಮೆ ದ್ರವರೂಪಕ್ಕೆ ಬಂದ ಬಳಿಕವೇ ನುಂಗಬೇಕು. ಈ ಸಮಯದಲ್ಲಿ ಟೀವಿ, ಕ್ರಿಕೆಟ್ ಮೊದಲಾದ ಬೇರಾವುದೇ ನಿಮ್ಮ ಗಮನವನ್ನು ಸೆಳೆಯುವ ಮಾಧ್ಯಮವಿರಬಾರದು. ಗಮನ ಆಹಾರದತ್ತ ಇರಬೇಕು. ಹೀಗೆ ಮಾಡುವ ಮೂಲಕ ತೂಕ ಇಳಿಸಲು ಗರಿಷ್ಟ ಪ್ರಯೋಜನ ಲಭಿಸುತ್ತದೆ ಎಂದು ಸಂಶೋಧನೆಗಳಲ್ಲಿ ಕಂಡುಕೊಳ್ಳಲಾಗಿದೆ. ಮೇಲೆ ತಿಳಿಸಿದ ಏಳು ವಿಧಾನಗಳನ್ನು ನಿತ್ಯವೂ ಅನುಸರಿಸುವ ಮೂಲಕ ತೂಕ ಇಳಿಸುವ ನಿಮ್ಮ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ದೊರಕಲಿದೆ. ಈ ಮೂಲಕ ಪಡೆಯಬಹುದಾದ ಅಂಗಸೌಷ್ಟವದ ಮೂಲಕ ಆರೋಗ್ಯವೂ ವೃದ್ದಿಸುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

7 Effective Ways To Reduce Body Fat

Reducing body fat is not as simple as it seems. If you are already on a diet plan, you would probably agree how persistent one needs to be to cut down on the unwanted flab. Nevertheless, we all want to reduce our body fat to look good and stay healthy with many of the other reasons that always keep us finding ways to cut down on the calories. here we discuss a few of the methods which can be really effective in reducing body fat.
Story first published: Saturday, March 24, 2018, 18:19 [IST]
X
Desktop Bottom Promotion