For Quick Alerts
ALLOW NOTIFICATIONS  
For Daily Alerts

ರಾತ್ರಿ ಊಟದ ಬಳಿಕ ಅಪ್ಪಿತಪ್ಪಿಯೂ ಇಂತಹ ಪಾನೀಯಗಳನ್ನು ಕುಡಿಯಬೇಡಿ

|

ದೇಹದಲ್ಲಿ ಯಾವಾಗಲೂ ನೀರಿನಾಂಶವಿರುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ನೀರಿನಾಂಶವಿಲ್ಲದೆ ಇದ್ದರೆ ಅದರಿಂದ ದೇಹವು ಹಲವಾರು ಸಮಸ್ಯೆಗಳು ಬರುವುದು. ನಿರ್ಜಲೀಕರಣವನ್ನು ತಡೆಯಲು ನಾವು ನೀರು ಹಾಗೂ ಇತರ ಪಾನೀಯಗಳನ್ನು ಸೇವಿಸುತ್ತೇವೆ. ನೀರು, ತಂಪುಪಾನೀಯ, ಜ್ಯೂಸ್ ಇತ್ಯಾದಿಗಳನ್ನು ದಿನವಿಡಿ ಕುಡಿಯುವುದರಿಂದ ದೇಹವು ತೇವಾಂಶದಿಂದ ಇರುವುದು. ಆದರೆ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ನೀರನ್ನು ದಿನವಿಡಿ ಸೇವನೆ ಮಾಡುವುದರಿಂದ ಅದು ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಗೂ ಇದು ಸಹಕಾರಿ. ಆದರೆ ಕೆಲವೊಂದು ಪಾನೀಯಗಳನ್ನು ರಾತ್ರಿಯ ಊಟದ ಬಳಿಕ ಕುಡಿಯಬಾರದು. ನೀವು ಹಗಲಿನಲ್ಲಿ ಕುಡಿಯುವ ಕೆಲವು ಪಾನೀಯಗಳು ದೇಹಕ್ಕೆ ಲಾಭ ಉಂಟು ಮಾಡಬಹುದು.

ಆದರೆ ರಾತ್ರಿ ವೇಳೆ ಇದು ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದ ಕೆಲವು ಆರೋಗ್ಯ ಸಮಸ್ಯೆಯು ಕಾಣಿಸಬಹುದು. ಇಂಟರ್ನೆಟ್ ನಲ್ಲಿ ಹರಿದಾಡುವಂತಹ ಕೆಲವು ವಿಷಯಗಳು ನಿಮಗೆ ಭೀತಿ ಉಂಟು ಮಾಡಬಹುದು. ಆದರೆ ನಿಜವಾಗಿಯೂ ಯಾವ ಪಾನೀಯವು ನಿಮಗೆ ಒಳ್ಳೆಯದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ನೈಸರ್ಗಿಕವಾಗಿರುವ ಪಾನೀಯಗಳನ್ನು ಹೊರತುಪಡಿಸಿ, ಬೇರೆಲ್ಲಾ ಪಾನೀಯಗಳು ದೇಹಕ್ಕೆ ಹಾನಿಯುಂಟು ಮಾಡುವುದು.

ರಾತ್ರಿ ಮಲಗುವ ಮೊದಲು, ಅಂದರೆ ರಾತ್ರಿ ಊಟದ ನಂತರ ನೀವು ಸಕ್ಕರೆಯಂಶ ಹೆಚ್ಚಿರುವ ಪಾನೀಯ ಕುಡಿದರೆ ಏನು ಪರಿಣಾಮವಾಗುವುದು? ಇದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಹೆಚ್ಚಾಗಿ, ದೇಹಕ್ಕೆ ಬೊಜ್ಜು ಬರಬಹುದು ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಯಾವೆಲ್ಲಾ ಪಾನೀಯವನ್ನು ರಾತ್ರಿ ಊಟವಾದ ಬಳಿಕ ಕುಡಿಯಬಾರದು ಎಂದು ನೀವು ತಿಳಿದುಕೊಳ್ಳಿ....

ಕ್ರೀಮರ್ ಜತೆ ಕಾಫಿ

ಕ್ರೀಮರ್ ಜತೆ ಕಾಫಿ

ಮೈ ನಡುಗಿಸುವಂತಹ ಚಳಿಗಾಲದಲ್ಲಿ ಕಾಫಿ ಕುಡಿಯುವುದು ತುಂಬಾ ಆರಾಮದಾಯಕವೆನಿಸುವುದು. ರಾತ್ರಿ ವೇಳೆ ಓದಲು ಅಥವಾ ಕೆಲಸ ಮಾಡಲು ತಡರಾತ್ರಿವರೆಗೆ ಎಚ್ಚರವಾಗಿರಬೇಕೆಂದರೆ ಕೆಲವರು ಕಾಫಿ ಮೊರೆ ಹೋಗುವರು. ರಾತ್ರಿ ವೇಳೆ ಕಾಫಿ ಸೇವನೆ ಕಡೆಗಣಿಸಬೇಕು ಅಥವಾ ಕಡಿಮೆ ಮಾಡಬೇಕು. ಕಾಫಿಗೆ ಹಾಕುವಂತಹ ಕ್ರೀಮರ್ ನ್ನು ಜೋಳದ ಸಿರಫ್ ಮತ್ತು ಹೈಡ್ರೋಜನೀಕರಿಸಿದ ತರಕಾರಿ ಎಣ್ಣೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕೊಬ್ಬು ಇರುವುದು ಮತ್ತು ಜೋಳದ ಸಿರಫ್ ನಲ್ಲಿ ಸಕ್ಕರೆಯಂಶವಿರುವುದು. ಇದನ್ನು ದೇಹಕ್ಕೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುವುದು.

ಡಯಟ್ ಸೋಡಾ

ಡಯಟ್ ಸೋಡಾ

ಹೊಟ್ಟೆಯ ಸುತ್ತಲು ಕೊಬ್ಬು ಬರಬಾರದು ಮತ್ತು ಫಿಟ್ ಇರಬೇಕೆಂದು ನೀವು ಬಯಸುವಿರಾದರೆ ಆಗ ರಾತ್ರಿ ಊಟ ಬಳಿಕ ಡಯಟ್ ಸೋಡಾ ಕುಡಿಯಬೇಡಿ. ಅಧ್ಯಯನಗಳ ಪ್ರಕಾರ ತಂಪು ಪಾನೀಯಗಳು ಮತ್ತು ಡಯಟ್ ಸೋಡಾವು ಕ್ಯಾಂಡಿಗಳ ದ್ರವ ರೂಪವಾಗಿದೆ. ಇದರಲ್ಲಿ ಅತಿಯಾದ ಸಕ್ಕರೆಯಂಶವಿದ್ದು, ಇದು ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚಿಸುವುದು. ನೀವು ತುಂಬಾ ಫಿಟ್ ಇರಬೇಕೆಂದು ಬಯಸುವವರು ಆದರೆ ಮಲಗುವ ಮೊದಲು ಇದರ ಸೇವನೆ ಮಾಡಲೇಬಾರದು. ಇದನ್ನು ಕುಡಿದರೆ ನೀವು ಮಾಡುವಂತಹ ವ್ಯಾಯಾಮವೆಲ್ಲವೂ ಇದರಿಂದ ನೀರಿನಲ್ಲಿಟ್ಟ ಹೋಮವಾಗಲಿದೆ.

ಹಸುವಿನ ಹಾಲು

ಹಸುವಿನ ಹಾಲು

ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದೆ ಮತ್ತು ಇದು ಮೂಳೆಯ ಆರೋಗ್ಯ ಸುಧಾರಿಸುತ್ತದೆ. ಹಾಲಿನಿಂದ ಸಿಗುವ ಎಲ್ಲಾ ರೀತಿಯ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿದೆ. ಆದರೆ ಇದೆಲ್ಲವೂ ಬಹುದೊಡ್ಡ ಸುಳ್ಳುಗಳು. ಹಸುವಿನ ಹಾಲಿನಿಂದ ವಿಟಮಿನ್ ಗಳು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಿಗುತ್ತದೆ ಎಂದು ಎಲ್ಲರೂ ಹೇಳುವರು. ಆದರೆ ವಾಸ್ತವವೆಂದರೆ ಹಸುವಿನ ಹಾಲು ನಿಮ್ಮ ಮೂಳೆಗಳಿಗೆ ಮಾರಕ. ಇದರಲ್ಲಿ ಇರುವಂತಹ ಆಮ್ಲೀಯ ಪ್ರಾಣಿ ಕೊಬ್ಬಿನಿಂದಾಗಿ ಇದು ಮೂಳೆಗಳಲ್ಲಿ ಇರುವಂತಹ ಕ್ಯಾಲ್ಸಿಯಂನ್ನು ತೆಗೆಯುವುದು. ಇದನ್ನು ಹೊರತುಪಡಿಸಿ ಹಾಲಿನಲ್ಲಿ ಕ್ಯಾಲರಿ, ಬೇಡದ ಕೊಬ್ಬು, ರೋಗ ನಿರೋಧಕ ಮತ್ತು ಕೊಲೆಸ್ಟ್ರಾಲ್ ಇದೆ. ಇದರಂದ ರಾತ್ರಿ ಮಲಗುವ ಮೊದಲು ಹಸುವಿನ ಹಾಲು ಕುಡಿದರೆ ಅದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಮತ್ತು ಕೊಬ್ಬು ಜಮೆಯಾಗುವುದು.

ಹುಡಿಯಾಗಿರುವ ಮಿಕ್ಸರ್

ಹುಡಿಯಾಗಿರುವ ಮಿಕ್ಸರ್

ಮಲಗುವ ಮೊದಲು ಕುಡಿಯುವ ನೀರಿಗೆ ನೀವು ಹುಡಿಯಾಗಿರುವ ಮಿಕ್ಸರ್ ಹಾಕಿಕೊಳ್ಳುತ್ತೀರಾ? ನಿಮ್ಮ ಉತ್ತರ ಹೌದು ಎಂದಾದರೆ ಮಲಗುವ ಮೊದಲು ನೀವು ನೀರಿಗೆ ಸಿಹಿ ಹಾಕಿ ಕುಡಿಯುತ್ತಿದ್ದೀರಿ. ಈ ಹುಡಿಯು ಹೊಟ್ಟೆಯ ಒಳಗೆ ಹೋದಾಗ ಅದರಿಂದ ಹೊಟ್ಟೆ ನೋವು, ಆತಂಕ, ವಾಕರಿಕೆ ಮತ್ತು ತಲೆನೋವು ಕಾಣಿಸಬಹುದು. ಇದರಿಂದ ಮಲಗುವ ಮೊದಲು ಇದನ್ನು ಸೇವಿಸಬೇಡಿ.

ಸುವಾಸನೆಭರಿತ ನೀರು

ಸುವಾಸನೆಭರಿತ ನೀರು

ನೀವು ಸಾಮಾನ್ಯ ನೀರು ಕುಡಿಯಲು ಬಯಸದೆ ಇದ್ದರೆ ಸುವಾಸನೆಯುಕ್ತ ನೀರು ನಿಮ್ಮ ಬಾಯಾರಿಕೆ ತಣಿಸಿ ದೇಹಕ್ಕೆ ತೇವಾಂಶ ನೀಡಬಹುದು. ಆದರೆ ನೈಸರ್ಗಿಕವಲ್ಲದೆ ಇರುವುದು ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. 20 ಔನ್ಸ್ ನ ವಿಟಮಿನ್ ನೀರಿನ ಬಾಟಲಿಯನ್ನು ಗಮನಿಸಿದರೆ ಅದರಲ್ಲಿ 120 ಕ್ಯಾಲರಿ ಮತ್ತು 30 ಗ್ರಾಂ ಸಕ್ಕರೆ ಇರುವುದು. ಈ ಕೃತಕ ನೀರನ್ನು ಮಲಗುವ ಮೊದಲು ನೀವು ಕುಡಿಯುವ ಕಾರಣದಿಂದ ಅದು ದೇಹದ ಮೇಲೆ ಪರಿಣಾಮ ಬೀರವುದು.

ಸೇಬಿನ ಜ್ಯೂಸ್

ಸೇಬಿನ ಜ್ಯೂಸ್

ಮಾರುಕಟ್ಟೆಯಲ್ಲಿ ಸಿಗುವಂತಹ ರೆಡಿಮೇಡ್ ಸೇಬಿನ ಜ್ಯೂಸ್ ಬದಲಿಗೆ ಒಂದು ಲೋಟ ತಾಜಾ ಸೇವಿನ ಜ್ಯೂಸ್ ಕುಡಿಯಿರಿ. ಮಲಗುವ ಮೊದಲು ಪ್ಯಾಕ್ ಮಾಡಲ್ಪಟ್ಟಿರುವ ಸೇಬಿನ ಜ್ಯೂಸ್ ಕುಡಿಯುವುದಿದ್ದರೆ ಎರಡು ಸಲ ಯೋಚಿಸಿ. ತಾಜಾ ಸೇಬಿನ ಜ್ಯೂಸ್ ನಲ್ಲಿ ಸಿಗುವಂತಹ ಫ್ರಕ್ಟೋಸ್ ಜತೆಗೆ ಪ್ಯಾಕ್ ಮಾಡಲ್ಪಟ್ಟ ಜ್ಯೂಸ್ ನಲ್ಲಿ ಸಕ್ರೋಸ್ ಇರುವುದು. ಸಕ್ಕರೆ ಮತ್ತು ಫ್ರಕ್ಟೋಸ್ ನಿಂದ ಹೊಟ್ಟೆ ತುಂಬಿದಂತೆ ಆಗುವುದು. ದೇಹಕ್ಕೆ ಇದನ್ನು ವಿಘಟಿಸಲು ಕಷ್ಟವಾಗುವುದು. ಇದಕ್ಕಾಗಿ ದೇಹಕ್ಕೆ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಕ್ರೀಡಾ ಪಾನೀಯಗಳು

ಕ್ರೀಡಾ ಪಾನೀಯಗಳು

ದಿನವಿಡಿ ಮೈದಾನ ಮತ್ತು ಅಭ್ಯಾಸದಲ್ಲಿ ದೇಹವನ್ನು ದಂಡಿಸಿದ ಬಳಿಕ ರಾತ್ರಿ ಬಂದು ವಿದ್ಯುದ್ವಿಚ್ಛೇದಗಳು ಇರುವಂತಹ ಶಕ್ತಿ ಪೇಯವನ್ನು ಕುಡಿಯಬೇಕು ಎಂದು ನಿಮಗೆ ಅನಿಸಿದರೆ ಆ ಆಲೋಚನೆ ಬಿಟ್ಹಾಕಿ. ನಿಮಗೆ ಆಯಾಸವಾಗಿದೆ ಎಂದು ರಾತ್ರಿ ವೇಳೆ ಶಕ್ತಿ ಪೇಯ ಸೇವನೆ ಮಾಡುವುದು ಸರಿಯಲ್ಲ. ರಾತ್ರಿ ಊಟದ ಬಳಿಕ ವ್ಯಾಯಾಮ ಮಾಡುವಂತಿದ್ದರೆ ಆಥವಾ ಮ್ಯಾರಥಾನ್ ಗೆ ಹೋಗುವವರು ನೀವಾಗಿದ್ದರೆ ಮಾತ್ರ ಇದನ್ನು ಸೇವಿಸಿ! ಇದರಲ್ಲಿ ಇರುವಂತಹ ಕೆಲವು ಅಂಶಗಳು ರಾತ್ರಿ ವೇಳೆ ದಹಿಸದೆ ಹೋದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ನೀವು ರಾತ್ರಿ ಊಟದ ಬಳಿಕ ತುಂಬಾ ಚಟುವಟಿಕೆಯಿಂದ ಮತ್ತು ಹೊಟ್ಟೆಯ ಸುತ್ತಲೂ ಕೊಬ್ಬು ಬರದಂತೆ ಆರೋಗ್ಯಕರವಾಗಿರಬೇಕೆಂದರೆ ಮೇಲೆ ತಿಳಿಸಿರುವಂತಹ ಪಾನೀಯಗಳನ್ನು ರಾತ್ರಿ ಊಟದ ಬಳಿಕ ನೀವು ಸೇವಿಸಲೇಬಾರದು.

English summary

7 Drinks You Shouldn't Have After Dinner

The drinks which we are talking about can be beneficial for you during the daytime but can have the reverse effect if consumed after dinner. These may cause health problems and make you unfit. With so many drinking myths circulating over the internet, people are now aware of what drink is best suited for them. But studies reveal that any drink other the natural ones can be harmful to your health. So, it is best that you avoid your soda drinks no matter how tempting they might be to you. While you think of drinking some unhealthy drinks, studies show that these drinks can show their worst effect at certain hours of the day.
X
Desktop Bottom Promotion