For Quick Alerts
ALLOW NOTIFICATIONS  
For Daily Alerts

ಇದೇ ನೋಡಿ ಚರ್ಮದ ಕ್ಯಾನ್ಸರ್‌ನ ಆರು ಲಕ್ಷಣಗಳು, ಆದಷ್ಟು ಎಚ್ಚರವಾಗಿರಿ!

By Arshad
|

ಹೀಗೊಮ್ಮೆ ಊಹಿಸಿಕೊಳ್ಳಿ, ಒಮ್ಮೆಲೇ ನಿಮಗೆ ವಿವರಿಸಲಸಾಧ್ಯವಾದ ಫ್ಲೂ ಆವರಿಸುತ್ತದೆ, ಇದರ ಲಕ್ಷಣಗಳು ಕೊಂಚ ವಿಚಿತ್ರವಾಗಿಯೇ ಇರುತ್ತವೆ. ಕಾರಣವಿಲ್ಲದೇ ಮೈಬಿಸಿಯಾದರೆ ನಿಮಗೆ ಆತಂಕ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ದೊಡ್ಡ ರೋಗವೊಂದರ ಪ್ರಾರಂಭ ಈ ಚಿಕ್ಕ ಲಕ್ಷಣದಿಂದಲೇ ಪ್ರಾರಂಭವಾಗುತ್ತದೆ, ಅಲ್ಲವೇ?

ಹೆಚ್ಚಿನವರು ಜ್ವರ ಬಂದ ಬಳಿಕ ಇದನ್ನು ಕಡಿಮೆಗೊಳಿಸಲು ತಮ್ಮ ಪ್ರಯತ್ನಗಳನ್ನು ಮೊದಲು ಮಾಡಿ ಕಡಿಮೆಯಾಗದಿದ್ದರೆ ವೈದ್ಯರ ಬಳಿ ತೆರಳುತ್ತಾರೆ. ಕಾಯಿಲೆ ಯಾವುದೇ ಬರಲಿ, ಇದು ಜೀವನವನ್ನು ಬಾಧಿಸುವುದು ಮಾತ್ರ ಸುಳ್ಳಲ್ಲ. ಎಷ್ಟೋ ಬಾರಿ ಕಾಯಿಲೆ ಉಲ್ಬಣಗೊಂಡು ಕೆಲವೇ ನಿಮಿಷಗಳಲ್ಲಿ ಸಾವು ಎದುರಾಗುವುದೂ ಇದೆ. ಕೆಲವು ಅಂಗಗಳು ಕಾಯಿಲೆಗೊಳಗಾಗಿದ್ದು ಅಂತಿಮ ಕ್ಷಣದವರೆಗೂ ತನ್ನ ಕಾರ್ಯವನ್ನು ಪೂರೈಸಿ ಹಠಾತ್ತಾಗಿ ಸ್ಥಗಿತಗೊಂಡು ಸಾವಿಗೆ ಕಾರಣವಾಗುತ್ತವೆ.

causes for skin cancer

ಕೆಲವು ಕಾಯಿಲೆಗಳು ಒಮ್ಮೆ ಆವರಿಸಿದರೆ ವರ್ಷಗಟ್ಟಲೇ ರೋಗಿಯನ್ನು ಕಾಡುತ್ತವೆ ಹಾಗೂ ಜೀವನವನ್ನೇ ನರಕಸದೃಶವಾಗಿಸಿ ಕಡೆಗೊಂದು ದಿನ ರೋಗಿಯ ಜೀವವನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಕ್ಯಾನ್ಸರ್ ಇದಕ್ಕೊಂದು ತಕ್ಕ ಉದಾಹರಣೆಯಾಗಿದೆ. ಕ್ಯಾನ್ಸರ್ ಆವರಿಸಿದ ಪ್ರಾರಂಭದ ಹಂತಗಳಲ್ಲಿದ್ದರೆ ಇದರ ಚಿಕಿತ್ಸೆಯೂ ಸುಲಭ ಹಾಗೂ ಗುಣಪಡಿಸಲೂಬಹುದಾಗಿದೆ. ಆದರೆ ಗುಣಪಡಿಸಲಾರದ ಹಂತ ಮೀರಿದರೆ ಮಾತ್ರ ಸಾವನ್ನು ಮುಂದೂಡಬಹುದೇ ಹೊರತು ತಡೆಯಲು ಸಾಧ್ಯವಿಲ್ಲ. ಯಾವುದೋ ಒಂದು ಅಂಗಕ್ಕೆ ತಗಲಿರುವ ಕ್ಯಾನ್ಸರ್ ಅನ್ನು ಆಯಾ ಅಂಗದ ಕ್ಯಾನ್ಸರ್ ಎಂದೇ ಕರೆಯಲಾಗುತ್ತದೆ. ಪ್ರಮುಖ ಅಂಗಗಳ ಕ್ಯಾನ್ಸರ್ ಮೂಲಕ ಅಂಗವೈಫಲ್ಯ ಎದುರಾಗುವ ಸಾಧ್ಯತೆ ಹೆಚ್ಚು. ಇಂದು ಚರ್ಮದ ಕ್ಯಾನ್ಸರ್ ಆವರಿಸಲು ಕಾರಣವಾಗುವ ಅಮೂಲ್ಯ ಮಾಹಿತಿಯನ್ನು ನೋಡೋಣ...

ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

1. ಸೂರ್ಯನ ಬೆಳಕಿಗೆ ಒಮ್ಮೆ ಹೋದರೂ ಚರ್ಮ ಕುಂದುವುದು

ಸಾಮಾನ್ಯವಾಗಿ ಸಮುದ್ರ ತೀರದ ಪ್ರಖರ ಬಿಸಿಲಿನಲ್ಲಿ ಚರ್ಮ ಕುಂದುತ್ತದೆ ಹಾಗೂ ಬಣ್ಣ ಗಾಢವಾಗುತ್ತದೆ. ಸಮುದ್ರ ತೀರವೇ ಆಗಬೇಕೆಂದಿಲ್ಲ, ಇತರ ಪ್ರದೇಶಗಳಲ್ಲಿಯೂ ಬಿಸಿಲಿಗೆ ಸುಮ್ಮನೇ ಕೊಂಚ ಹೊತ್ತು ಅಡ್ಡಾಡಿದರೂ ಬಿಸಿಲಿಗೆ ಒಡ್ಡಿದ ಚರ್ಮ ಶೀಘ್ರವೇ ಬಣ್ಣ ಬದಲಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ಈ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಆದರೆ, ಮೆಲನೋಮಾ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಒಂದು ಬಾರಿ ಬಿಸಿಲಿನ ಝಳಕ್ಕೆ ತ್ವಚೆ ಬಿಳಿಚಿತೋ, ಆ ಕ್ಷಣದಿಂದ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಈ ಝಳದಿಂದ ಒಂದು ವೇಳೆ ಚರ್ಮದಲ್ಲಿ ಕ್ಯಾನ್ಸರ್ ಗೆ ಒಳಗಾದ ಜೀವಕೋಶಗಳು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಇವುಗಳು ವೃದ್ದಿಗೊಳ್ಳುವ ಗತಿ ತೀವ್ರಗೊಳ್ಳುತ್ತದೆ, ತನ್ಮೂಲಕ ಕ್ಯಾನ್ಸರ್ ಆವರಿಸುತ್ತದೆ. ಹಾಗಾಗಿ ಪ್ರತಿ ಬಾರಿ ಪ್ರಖರ ಬಿಸಿಲಿಗೆ ಒಡ್ಡಿಕೊಳ್ಳುವ ಸಂದರ್ಭ ಎದುರಾದರೆ ತಪ್ಪದೇ ಸನ್ ಸ್ಕ್ರೀನ್ ಬಳಸಬೇಕು. ಏನೂ ಇಲ್ಲದ ಸಂದರ್ಭ ಎದುರಾದರೆ ನೆರಳಿನ ಆಶ್ರಯ ಪಡೆಯಬೇಕು.

2. ಚರ್ಮದ ಬಣ್ಣ ಗೌರವರ್ಣವಾಗಿರುವುದು

ಭಾರತದಂತಹ ಸಮಶೀತೋಷ್ಣವಲಯದ ಜನರಿಗೆ ಸ್ವಾಭಾವಿಕವಾಗಿಯೇ ತ್ವಚೆಯ ಬಣ್ಣ ಗೋಧಿ ಬಣ್ಣದ್ದಾಗಿದ್ದು ಗೌರವರ್ಣ ಪಡೆಯಲು ಹೆಚ್ಚಿನವರು ವಿವಿಧ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ. ಆದರೆ ಅಧ್ಯಯನಗಳ ಮೂಲಕ ಕಂಡುಕೊಂಡಂತೆ ಗೌರವರ್ಣ ಹೊಂದಿರುವ ವ್ಯಕ್ತಿಗಳು ಕೃಷ್ಣವರ್ಣದ ವ್ಯಕ್ತಿಗಳಿಗಿಂತಲೂ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು! ಏಕೆಂದರೆ ಗೌರವರ್ಣದ ತ್ವಚೆಯಲ್ಲಿ ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಮೆಲನಿನ್ ಹೆಚ್ಚಿದ್ದಷ್ಟೂ ಸೂರ್ಯನ ಅತಿನೇರಳೆ ಕಿರಣಗಳು ತ್ವಚೆಯನ್ನು ಬಾಧಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಗೌರವರ್ಣದ ವ್ಯಕ್ತಿಗಳು ಸೂರ್ಯನ ಪ್ರಖರ ಕಿರಣಗಳ ವಿರುದ್ದ ಹೆಚ್ಚಿನ ಕಾಳಜಿ ವಹಿಸಬೇಕು.

3. ಪರ್ವತ ಪ್ರದೇಶದಲ್ಲಿ ವಾಸವಾಗಿರುವುದು

ಚರ್ಮದ ಕ್ಯಾನ್ಸರ್ ಎದುರಾಗಲು ಸೂರ್ಯನ ಬೆಳಕಿನಲ್ಲಿರುವ ಅತಿನೇರಳೆ ಕಿರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾವು ಈಗಾಗಲೇ ಅರಿತಿದ್ದೇವೆ. ಹಾಗಾಗಿ, ಈ ಭೂಮಿಯ ಯಾವ ಭಾಗದಲ್ಲಿ ಜನರು ವಾಸವಾಗಿದ್ದಾರೆ ಎಂಬುದೂ ಈ ಅಂಶದ ಪರಿಗಳಣನೆಗೆ ಅಗತ್ಯವಾಗಿದೆ. ಕೆಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ, ಪರ್ವತಪ್ರದೇಶಗಳು ಸಮುದ್ರಮಟ್ಟಕ್ಕಿಂತಲೂ ಎತ್ತರವಾಗಿದ್ದು ಸೂರ್ಯರ ಕಿರಣಗಳು ಅಷ್ಟು ಮಟ್ಟಿಗೆ ಹತ್ತಿರದಲ್ಲಿ ಲಭ್ಯವಾಗುತ್ತವೆ. ಹಾಗಾಗಿ ಈ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸೂರ್ಯನ ಅತಿನೇರಳೆ ಕಿರಣಗಳು ಸಮುದ್ರಮಟ್ಟಕ್ಕಿಂತಲೂ ಹೆಚ್ಚು ಪ್ರಖರವಾಗಿರುವ ಕಾರಣ ಈ ಜನರಿಗೆ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಹೆಚ್ಚು.

4. ಅನುವಂಶೀಯ ಕಾರಣಗಳು:

ಕೆಲವಾರು ಕಾಯಿಲೆಗಳು ಅನುವಂಶೀಯವಾಗಿವೆ. ಉದಾಹರಣೆಗೆ ಮಧುಮೇಹ, ಹೀಮೋಫಿಲಿಯಾ ಅಥವಾ ರಕ್ತಹೆಪ್ಪುಗಟ್ಟುವ ಅಸಮರ್ಥತೆ ಮೊದಲಾದ ಕಾಯಿಲೆಗಳು ವಂಶಾವಳಿಯಿಂದ ಮುಂದಿನ ಪೀಳಿಗೆಗೆ ದಾಟುತ್ತಾ ಹೋಗುತ್ತದೆ. ಕ್ಯಾನ್ಸರ್ ವಿಷಯದಲ್ಲಿ ಈ ಕಾರಣವನ್ನು ಎಲ್ಲ ಬಗೆಯ ಕ್ಯಾನ್ಸರ್ ಗಳಲ್ಲಿ ಖಚಿತಪಡಿಸಲಾಗಿಲ್ಲ. ಆದರೆ ಚರ್ಮದ ಕ್ಯಾನ್ಸರ್ ಅನುವಂಶೀಯ ಕಾರಣಗಳಿಂದಲೂ ಎದುರಾಗಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ. ಒಂದು ವೇಳೆ ಓರ್ವ ವ್ಯಕ್ತಿಯ ವಂಶಸ್ಥರಲ್ಲಿ ಚರ್ಮದ ಕ್ಯಾನ್ಸರ್ ಕಂಡುಬಂದಿದ್ದರೆ ಭವಿಷ್ಯದಲ್ಲಿ ಈ ವ್ಯಕ್ತಿಗೂ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆ 50% ರಷ್ಟಿದೆ!

5. ಅತಿಯಾದ ವಿಮಾನಪ್ರಯಾಣ

ಒಂದು ವೇಳೆ ವಿಮಾನಯಾನವನ್ನು ಅತಿಯಾಗಿ ಮಾಡುವ ವ್ಯಕ್ತಿ ನೀವಾಗಿದ್ದರೆ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆ ನಿಮಗೆ ಹೆಚ್ಚು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ 2014ರಲ್ಲಿ ನಡೆಸಿದ ಸಂಶೋಧನೆಯೊಂದು ತಿಳಿಸಿದೆ. ಈ ಸಂಶೋಧನೆ ವಿವರಿಸುವ ಪ್ರಕಾರ, ಹೆಚ್ಚು ವಿಮಾನಪ್ರಯಾಣ ಮಾಡುವ ಪ್ರಯಾಣಿಕರು, ವಿಮಾನದ ಚಾಲಕರು ಹಾಗೂ ಸಿಬ್ಬಂದಿವರ್ಗ ಹೆಚ್ಚಿನ ಸಮಯವನ್ನು ಭೂಮಿಗಿಂತ ಹೆಚ್ಚಿನ ಎತ್ತರದಲ್ಲಿಯೇ ಕಳೆಯುತ್ತಾರೆ ಈ ಎತ್ತರದಲ್ಲಿ ಸೂರ್ಯನ ಕಿರಣಗಳು ನೇರವಾಗಿ ತ್ವಚೆಯನ್ನು ಬಾಧಿಸದಿದ್ದರೂ ಅತಿನೇರಳೆ ಕಿರಣಗಳು ಮಾತ್ರ ವಿಮಾನದ ಒಳಗೂ ಪ್ರಖರವಾಗಿಯೇ ಇರುತ್ತವೆ.

6. ಅತಿ ದೂರದ ಪ್ರಯಾಣವನ್ನು ಸತತವಾಗಿ ಮಾಡುವುದು:

ಇಂದು ಉದ್ಯೋಗ ಅಥವಾ ಇತರ ಕಾರಣಗಳಿಗಾಗಿ ಸಾರ್ವಜನಿಕ ಸಾರಿಕ, ರೈಲು, ಕಾರು ಅಥವಾ ದ್ವಿಚಕ್ರವಾಹನದ ಮೂಲಕ ನಿತ್ಯವೂ ನೂರಾರು ಕಿ.ಮೀ ದೂರ ಸಾಗುವ ವ್ಯಕ್ತಿಗಳಿದ್ದಾರೆ. ಇವರು ರಸ್ತೆಯಲ್ಲಿಯೇ ನಿತ್ಯದ ಪ್ರಮುಖ ಅವಧಿಯನ್ನು ಕಳೆಯುತ್ತಾರೆ. ರಸ್ತೆಯಲ್ಲಿ ಪ್ರದೂಷಣೆ ಗರಿಷ್ಟವಾಗಿದ್ದು ಸೂರ್ಯನ ಅತಿನೇರಳೆ ಕಿರಣಗಳೂ ಹೆಚ್ಚೇ ಇರುತ್ತವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಮಯ ಕಳೆಯುವ ವ್ಯಕ್ತಿಗಳೂ ಚರ್ಮದ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು.

English summary

6 Skin Cancer Symptoms You Should Know

Imagine this, you have suddenly developed a flu and the symptoms seem slightly strange, so immediately, you start to panic, because the possibility of developing a major disease is very scary, right? Well, most people would react the same way to the possibility of impending diseases, as diseases can not only create a lot of hassle in a person's life, but they can also cause the death of a person. There are a number of diseases which can take a person's life away within a matter of minutes, such as organ failure.
Story first published: Monday, July 30, 2018, 17:51 [IST]
X
Desktop Bottom Promotion