ಗುದ ಸಂಭೋಗ, ಆರೋಗ್ಯದ ವಿಚಾರದಲ್ಲಿ ತುಂಬಾ ಅಪಾಯಕಾರಿ!

Posted By: Hemanth
Subscribe to Boldsky

ಭಾರತದಂತಹ ರಾಷ್ಟ್ರದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡುವುದು ಎಂದರೆ ಅದು ದೊಡ್ಡ ಅಪರಾಧವೆನ್ನುವಂತೆ ಪರಿಗಣಿಸಲಾಗುತ್ತದೆ. ಸೆಕ್ಸ್ ಯಾನೆ ಲೈಂಗಿಕ ಕ್ರಿಯೆ ಬಗ್ಗೆ ಹಲವಾರು ರೀತಿಯ ಕನಸುಗಳನ್ನು ಕಟ್ಟಿಕೊಂಡು ದಂಪತಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಹುಡುಗನಿಗೆ ತಾನು ನೋಡಿರುವಂತಹ ನೀಲಿಚಿತ್ರಕ್ಕೂ ವಾಸ್ತವಕ್ಕೂ ತುಂಬಾ ವ್ಯತ್ಯಾಸವಿದೆಯೆಂದು ಅರ್ಥವಾಗುತ್ತದೆ.

ಲೈಂಗಿಕ ಜೀವನವೆನ್ನುವುದು ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತಹ ಕ್ರಿಯೆ ಎಂದು ಇಂದಿಗೂ ಭಾರತೀಯರು ನಂಬಿದ್ದಾರೆ. ಇದರಿಂದಾಗಿಯೇ ಕೆಲವರು ಎಳೆ ವಯಸ್ಸಿನಲ್ಲೇ ಗರ್ಭ ಧರಿಸುತ್ತಾರೆ ಮತ್ತು ಇತರ ಕೆಲವು ಲೈಂಗಿಕ ರೋಗಗಳಿಗೆ ಗುರಿಯಾಗುವರು. ವೈವಾಹಿಕ ಸಂಬಂಧದಲ್ಲಿ ಲೈಂಗಿಕ ಕ್ರಿಯೆ ಕೂಡ ಅತೀ ಅಗತ್ಯ. ಸಂಬಂಧವನ್ನು ಹಿಡಿದಿಟ್ಟುಕೊಳ್ಳುವುದೇ ಈ ದೈಹಿಕ ಆಕರ್ಷಣೆ.

ಲೈಂಗಿಕ ಆರೋಗ್ಯಕ್ಕೆ ಸುರಕ್ಷಿತ ಕ್ರಮಗಳು

ಇದು ಇಲ್ಲವೆಂದಾದರೆ ವೈವಾಹಿಕ ಜೀವನ ಕೂಡ ಬೋರ್ ಹೊಡೆಸಿಬಿಡುವುದು. ಆದರೆ ಕೆಲವರು ಲೈಂಗಿಕ ಕ್ರಿಯೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇದನ್ನು ಆನಂದಿಸುತ್ತಿರುವರು. ಕೆಲವು ದಂಪತಿ ಗುದಸಂಭೋಗದ ಮೂಲಕವಾಗಿ ತಮ್ಮ ಸಂಬಂಧವನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಯೋನಿ ಸಂಭೋಗ ಮತ್ತು ಗುದ ಸಂಭೋಗಕ್ಕೆ ತುಂಬಾ ವ್ಯತ್ಯಾಸವಿದೆ. ಗುದ ಸಂಭೋಗವು ಭಾರತದಲ್ಲಿ ಅನೈಸರ್ಗಿಕ ಮತ್ತು ಕೆಲವರಿಗೆ ಧರ್ಮಕ್ಕೆ ವಿರುದ್ಧವಾಗಿರುವುದು ಎಂದು ಭಾವಿಸಿದ್ದಾರೆ. ಇದರಿಂದಾಗಿ ಗುದಸಂಭೋಗ ಮಾಡುವ ಮೊದಲು ನೀವು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ.

ಕೆಲವೊಂದು ಪುಸ್ತಕಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ನೀವು ಓದಿರಬಹುದು. ಆದರೆ ಇದು ಕೇವಲ ಕಟ್ಟುಕಥೆಗಳು. ಇವುಗಳನ್ನು ಯಾವತ್ತಿಗೂ ನಂಬಬಾರದು. ಗುದದ್ವಾರದಿಂದ ಉಂಟಾಗುವ ಕೆಲವೊಂದು ಆರೋಗ್ಯ ಸಮಸ್ಯೆಗಳ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ. ಅದನ್ನು ತಿಳಿದುಕೊಳ್ಳಿ.... 

ಸೋಂಕು

ಸೋಂಕು

ಗುದಸಂಭೋಗದಿಂದಾಗಿ ಹಲವಾರು ಎಸ್ ಟಿಐ(ಲೈಂಗಿಕವಾಗಿ ಹರಡುವ ಸೋಂಕು)ಗಳಾದ ಗೊನೊರಿಯಾ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್ ಬರುವುದು. ಗುದದ್ವಾರದ ಪದರವು ತುಂಬಾ ತೆಳುವಾಗಿರುವುದು. ಇದು ಬೇಗನೆ ಹರಿದುಹೋಗುವುದು ಮತ್ತು ಇದರಿಂದ ಸೋಂಕು ಸುಲಭವಾಗಿ ಹರಡುವುದು.

ಗುದದ್ವಾರ ಬಾವು ಕಾಣಿಸಬಹುದು

ಗುದದ್ವಾರ ಬಾವು ಕಾಣಿಸಬಹುದು

ಗುದಸಂಭೋಗದಿಂದ ತುಂಬಾ ಸೂಕ್ಷ್ಮವಾಗಿರುವಂತಹ ಒಳಪದರವನ್ನು ಹರಿದುಹಾಕುವುದು. ಇದು ಅಷ್ಟು ಬೇಗನೆ ಗುಣವಾಗದು. ಈ ಪದರವು ಗುದದ್ವಾರದೊಳಗೆ ಬ್ಯಾಕ್ಟೀರಿಯಾವು ಹೋಗದಂತೆ ತಡೆಯುವುದು. ಒಳಪದರ ಹರಿದುಹೋಗುವ ಕಾರಣದಿಂದ ಗುದದ್ವಾರದಲ್ಲಿ ಬಾವು ಕಾಣಿಸಬಹುದು. ಇದು ಗಂಭೀರ ಸೋಂಕು ಹರಡುವ ಸಾಧ್ಯತೆ ತುಂಬಾ ಹೆಚ್ಚಿರುವುದು.

ಫಿಸ್ತುಲಾ ಬರಬಹುದು

ಫಿಸ್ತುಲಾ ಬರಬಹುದು

ಗುದದ್ವಾರದ ಒಳಪದರ ಹರಿದು ಹೋಗುವುದರಿಂದ ಸೋಂಕು ತುಂಬಾ ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನು ಫಿಸ್ತುಲಾ ಎಂದು ಕರೆಯಲಾಗುವುದು. ಇದರಿಂದ ಮಲ ಹೊರಹೋಗುವಾಗ ತುಂಬಾ ಕಷ್ಟಪಡಬೇಕಾಗಬಹುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆ ಅಗತ್ಯ.

ಗರ್ಭಧಾರಣೆ

ಗರ್ಭಧಾರಣೆ

ಅಸುರಕ್ಷಿತವಾದ ಗುದಸಂಭೋಗದಿಂದ ಗರ್ಭಧಾರಣೆಯಾಗದು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಗುದಸಂಭೋಗ ಕೂಡ ಗರ್ಭಕ್ಕೆ ಕಾರಣವಾಗಬಹುದು. ಗುದವು ಯೋನಿಗೆ ತುಂಬಾ ಹತ್ತಿರದಲ್ಲಿ ಇರುವುದು ಮತ್ತು ಕಾಂಡೋಮ್ ಧರಿಸದೆ ಇದ್ದರೆ ಆಗ ವೀರ್ಯವು ಯೋನಿಯೊಳಗಡೆ ಹೋಗುವ ಮತ್ತು ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ಕಾಂಡೋಮ್ ಧರಿಸುವಾಗ ಇದನ್ನು ಸರಿಯಾಗಿ ಧರಿಸಬೇಕು ಮತ್ತು ಪೆಟ್ರೋಲಿಯಂ ಜೆಲ್ ಬಳಸಬೇಕು. ಯೋನಿಯಂತೆ ಗುದದಲ್ಲಿ ಯಾವುದೇ ರೀತಿಯ ನೈಸರ್ಗಿಕ ಲ್ಯೂಬ್ರಿಕೆಂಟ್ ಇರುವುದಿಲ್ಲ. ಇದರಿಂದ ಒಳಪದರ ಹರಿಯುವುದು ಮತ್ತು ಜಾರುವುದು.

ಗುದ ಮತ್ತು ಗರ್ಭಕೋಶದ ಕ್ಯಾನ್ಸರ್ ಸಾಧ್ಯತೆ

ಗುದ ಮತ್ತು ಗರ್ಭಕೋಶದ ಕ್ಯಾನ್ಸರ್ ಸಾಧ್ಯತೆ

ಗುದ ಮತ್ತು ಗರ್ಭಕೋಶದ ಕ್ಯಾನ್ಸರ್ ಮನುಷ್ಯರ ಪಾಪಿಲೋಮವೈರಸ್‌ನಿಂದ ಬರುತ್ತದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಇದು ಹರಡಲು ಪ್ರಮುಖ ಕಾರಣವೇ ಗುದಸಂಭೋಗ ಎಂದು ಅಧ್ಯಯನಗಳು ಹೇಳಿವೆ.

English summary

5 Health Risks Of Having Anal Sex

The topic of "Sex" is the most taboo subject in our country. That is one of the reasons why it instantly attracts attention of the people. Sex has always garnered interest among individuals and thanks to porn freely accessible to everyone across the world, people are always either talking about it or watching it.