For Quick Alerts
ALLOW NOTIFICATIONS  
For Daily Alerts

ಸಣ್ಣ-ಪುಟ್ಟ ಸಮಸ್ಯೆಗಳಿಗೆ ಕೆಲವೊಂದು ಸರಳ ತಂತ್ರಗಳು

By Hemanth
|

ದೈನಂದಿನ ಜೀವನದಲ್ಲಿ ನೀವು ಆರೋಗ್ಯವಾಗಿರಬೇಕೆಂದರೆ ಅದಕ್ಕಾಗಿ ನೀವು ತುಂಬಾ ಕಷ್ಟಪಡಬೇಕಿಲ್ಲ. ಯಾಕೆಂದರೆ ಕೆಲವು ಕ್ರಮ ಹಾಗೂ ಉಪಾಯವನ್ನು ಪಾಲಿಸಿಕೊಂಡು ಹೋದರೆ ಆಗ ಜೀವನದಲ್ಲಿ ಆರೋಗ್ಯವಾಗಿರಬಹುದು. ಆರೋಗ್ಯ ಪಡೆದು ಕೊಳ್ಳಲು ಯಾವುದೇ ಅಡ್ಡದಾರಿಗಳು ಇಲ್ಲ. ಈ ವಿಧಾನಗಳಿಂದ ನೀವು ಕಟ್ಟಿದ ಮೂಗು, ಹಲ್ಲುನೋವು, ಮೂಗಿನಲ್ಲಿ ರಕ್ತಸುರಿಯುವುದು ಮತ್ತು ಗಂಟಲು ನೋವು ಕಡಿಮೆ ಮಾಡಬಹುದು. ಇದು ನಿಮ್ಮ ಜ್ಞಾಪಕಶಕ್ತಿಗೆ ಬಲನೀಡಿ, ದೇಹವು ಕಡಿಮೆ ನೋವು ಅನುಭವಿಸುವಂತೆ ಮಾಡುವುದು.

ಜೀವನದ ಉಪಾಯಗಳು ಕಿರಿಕಿರಿ ಉಂಟು ಮಾಡುವಂತಹ ಕೆಲವೊಂದು ಸಮಸ್ಯೆಗಳಿಂದ ತಕ್ಷಣಕ್ಕೆ ಪರಿಹಾರ ಒದಗಿಸುವುದು. ವಿವಿಧ ಮಾರ್ಗಗಳ ಮೂಲಕ ಇದನ್ನು ಪ್ರಯತ್ನಿಸಿ ಅಂತಿಮವಾಗಿ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳುವುದು. ಸಮಯದ ಅಭಾವವಿರುವಂತಹ ಸಮಯದಲ್ಲಿ ಜೀವನದ ತಂತ್ರಗಳು ತುಂಬಾ ನೆರವಾಗುವುದು. ಆರೋಗ್ಯಕಾರಿ ಜೀವನಕ್ಕೆ ನೀವು ಇವುಗಳನ್ನು ಕಲಿಯಲು ಬಯಸುತ್ತೀರಾ? ಉತ್ತಮ ಜೀವನಕ್ಕಾಗಿ ಕೆಲವು ಜೀವನ ತಂತ್ರಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿಯಿರಿ....

ಹಲ್ಲು ನೋವು

ಹಲ್ಲು ನೋವು

ಒಂದು ಲವಂಗವನ್ನು ಹಲ್ಲಿನ ಮೇಲಿಡಿ. ಅಂಗೈಯ ಮೇಲೆ ತೋರು ಬೆರಳು ಮತ್ತು ಹೆಬ್ಬೆರಳಿನ ಮಧ್ಯೆ ಐಸ್ ನ್ನು ಉಜ್ಜಿಕೊಳ್ಳಬಹುದು. ಇದು ಉತ್ತಮ ಜೀವನಕ್ಕೆ ಮಾಡಬಹುದಾದ ಭಿನ್ನತೆ.

ಪವರ್‌ಫುಲ್ ಮನೆ ಔಷಧಿಗಳು- ಐದೇ ಐದು ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ

ಮೂಗು ಕಟ್ಟಿರುವುದು

ಮೂಗು ಕಟ್ಟಿರುವುದು

ಕಟ್ಟಿದ ಮೂಗು ನಿವಾರಣೆಯಾಗಬೇಕಾದರೆ ನಾಲಗೆಯನ್ನು ಬಾಯಿಯ ಮೇಲ್ಬಾಗಕ್ಕೆ ಒತ್ತಿಕೊಳ್ಳಿ ಮತ್ತು ಇದೇ ವೇಳೆ ಬೆರಳನ್ನು ಹುಬ್ಬುಗಳ ಮಧ್ಯೆ ಒತ್ತಿಕೊಳ್ಳಿ.

ಮೂಗಿನಲ್ಲಿ ರಕ್ತಸ್ರಾವ

ಮೂಗಿನಲ್ಲಿ ರಕ್ತಸ್ರಾವ

ಮೇಲ್ಬಾಗದ ಒಸಡಿನ ಮೇಲೆ ಹತ್ತಿಯನ್ನಿಡಿ ಮತ್ತು ಒತ್ತಿ. ಇದರಿಂದ ಮೂಗಿನ ಸ್ರಾವ ನಿಲ್ಲುವುದು. ಇದು ಆರೋಗ್ಯಕಾರಿ ಜೀವನಕ್ಕೆ ಒಳ್ಳೆಯ ಪರಿಹಾರ.

ಗರ್ಭಿಣಿಯಾಗಿರುವಾಗ ಮೂಗಿನಲ್ಲಿ ರಕ್ತ ಸೋರುವುದು ಸಹಜವೇ?

ಆಮ್ಲದ ಹಿಮ್ಮುಖ ಹರಿವು

ಆಮ್ಲದ ಹಿಮ್ಮುಖ ಹರಿವು

ಇದು ನೀವು ಪಾಲಿಸಬಹುದಾದ ತುಂಬಾ ಸರಳ ಜೀವನ ಕ್ರಮ. ಆಮ್ಲ ಹಿಮ್ಮುಖವಾಗಿ ಹರಿಯುವುದನ್ನು ನಿವಾರಿಸಲು ನೀವು ಎಡದ ಬದಿಗೆ ಬಲಗಿ. ಇದು ಯಾವುದೇ ಔಷಧಿ ತೆಗೆದುಕೊಳ್ಳುವುದಕ್ಕಿಂತ ಉತ್ತಮ.

ಧೈರ್ಯಗೆಡುವುದು(ನರ್ವಸ್ ಆಗುವುದು)

ಧೈರ್ಯಗೆಡುವುದು(ನರ್ವಸ್ ಆಗುವುದು)

ನೀವು ಯಾವುದೇ ವಿಷಯಕ್ಕೆ ತುಂಬಾ ನರ್ವಸ್ ಆಗಿದ್ದರೆ ಆಗ ಮುಖಕ್ಕೆ ತಣ್ಣೀರು ಹಾಕಿ ಮತ್ತು ಸ್ವಲ್ಪ ಸಮಯ ಉಸಿರು ಹಿಡಿದಿಟ್ಟುಕೊಳ್ಳಿ. ಇದರಿಂದ ನೀವು ಶಾಂತರಾಗಿರುವಿರಿ. ದೀರ್ಘವಾಗಿ ಉಸಿರಾಡಿದರೂ ನರಗಳಿಗೆ ಆರಾಮ ಸಿಗುವುದು.

ಆಲಿಸುವುದರಲ್ಲಿ ತೊಂದರೆ

ಆಲಿಸುವುದರಲ್ಲಿ ತೊಂದರೆ

ತುಂಬಾ ಗದ್ದಲದ ಪ್ರದೇಶದಲ್ಲಿ ನಿಮಗೆ ಗೆಳೆಯರು ಏನು ಹೇಳುತ್ತಿದ್ದಾರೆಂದು ಹೇಳದೆ ಇದ್ದರೆ ಆಗ ನಿಮ್ಮ ಬಲದ ಬದಿಯನ್ನು ಸ್ನೇಹಿತರತ್ತ ಇಡಿ. ಯಾಕೆಂದರೆ ಎಡಗಿವಿಗಿಂತ ಬಲದ ಕಿವಿಗೆ ಹೆಚ್ಚು ಕೇಳುವುದು.

 ನುಂಗಲು ಕಷ್ಟವಾಗುವುದು

ನುಂಗಲು ಕಷ್ಟವಾಗುವುದು

ನಿಮಗೆ ದೊಡ್ಡ ಮಾತ್ರ ಅಥವಾ ಕ್ಯಾಪ್ಸೂಲ್ ನುಂಗಲು ಕಷ್ಟವಾಗುತ್ತಾ ಇದ್ದರೆ ಅಗ ನೀವು ನೀರು ತೆಗೆದುಕೊಳ್ಳಿ. ಇದರ ಬಳಿಕ ತಲೆಯನ್ನು ಸ್ವಲ್ಪ ಹಿಂದಕ್ಕೆ ಕೊಂಡುಹೋಗಿ. ಇದರಿಂದ ಮಾತ್ರೆ ಅಥವಾ ಕ್ಯಾಪ್ಸೂಲ್ ನಿಮ್ಮ ಬಾಯಿಯ ಕೊನೆಯ ಭಾಗಕ್ಕೆ ಹೋಗುವುದು. ಇದರಿಂದ ನುಂಗಲು ಸುಲಭವಾಗುವುದು.

ಸುಟ್ಟ ಗಾಯ

ಸುಟ್ಟ ಗಾಯ

ಸುಟ್ಟ ಗಾಯದಿಂದ ತಕ್ಷಣಕ್ಕೆ ಪರಿಹಾರ ಬೇಕೆಂದರೆ ಆಗ ನೀವು ಟೂಥ್ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇದು ನಿಮಗೆ ತಂಪಾದ ಅನುಭವ ನೀಡುವುದು ಮತ್ತು ಅದು ದೀರ್ಘಕಾಲ ತನಕ ಇರುವುದು.

ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು

ಗಂಟಲು ಕಚಗುಳಿಯಿಡುವುದು

ಗಂಟಲು ಕಚಗುಳಿಯಿಡುವುದು

ಗಂಟಲಿನ ಕಚಗುಳಿಗೆ ನೀವು ಕಿವಿಯನ್ನು ಉಜ್ಜಿಕೊಳ್ಳಿ. ಇದರಿಂದ ಗಂಟಲಿನಲ್ಲಿ ಸ್ನಾಯು ಸೆಳೆತ ಉಂಟು ಮಾಡುವುದು ಮತ್ತು ಗಂಟಲಿನ ಕಚಗುಳಿಯಿಂದ ಪರಿಹಾರ ಒದಗಿಸುವುದು.

ವೇಗ ಎದೆಬಡಿತಕ್ಕೆ

ವೇಗ ಎದೆಬಡಿತಕ್ಕೆ

ಕೆಲವೊಂದು ವಿಧಾನ ಮತ್ತು ಉಪಾಯಗಳು ಜೀವನದಲ್ಲಿ ತುಂಬಾ ಮಹತ್ವದ ಸಮಯದಲ್ಲಿ ನಿಮಗೆ ನೆರವಿಗೆ ಬರುವುದು. ಕೆಲವೊಮ್ಮೆ ಎದೆಬಡಿತ ಹೆಚ್ಚಾದರೆ ಆಗ ನಿಮ್ಮ ನಾಲಗೆಗೆ ಮಸಾಜ್ ಮಾಡಿ ಅಥವಾ ತಿರುಗಿಸಿ. ಇದರಿಂದ ಎದೆಬಡಿತ ಸಾಮಾನ್ಯವಾಗುವುದು.

ದೀರ್ಘಕಾಲದ ನೆನಪಿನ ಶಕ್ತಿಗೆ

ದೀರ್ಘಕಾಲದ ನೆನಪಿನ ಶಕ್ತಿಗೆ

ನಿಮಗೆ ಭಾಷಣ ಮಾಡಲಿಕ್ಕಿದ್ದರೆ ಅಥವಾ ಪರೀಕ್ಷೆ ಎದುರಾಗಿದ್ದರೆ ಆಗ ಮಲಗುವ ಮೊದಲು ಅದನ್ನು ಓದಿಕೊಳ್ಳಿ. ಇದರಿಂದ ಮೆದುಳು ದೀರ್ಘಕಾಲ ತನಕ ನೆನಪಿನಲ್ಲಿಟ್ಟುಕೊಳ್ಳುವುದು.

ಮೈಗ್ರೇನ್

ಮೈಗ್ರೇನ್

ಮೈಗ್ರೇನ್ ನಿಂದ ನಿವಾರಣೆ ಪಡೆಯಲು ಕೈಗೆ ಚಿವುಟಿಕೊಳ್ಳಿ. ಇದರಿಂದ ಪರಿಹಾರ ಸಿಗದಿದ್ದರೆ ಮತ್ತೆ ಚಿವುಟಿ. ಕತ್ತಲಿನಲ್ಲಿ ಜಾಗಕ್ಕೆ ಹೋಗಿ ವಿಶ್ರಾಂತಿ ಪಡೆದರೆ ಪರಿಹಾರ ಸಿಗುವುದು.

ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

ಒತ್ತಡ

ಒತ್ತಡ

ನಿಮಗೆ ಒತ್ತಡ ನೀವುವಂತಹ ಪ್ರತಿಯೊಂದು ವಿಚಾರವನ್ನು ಒಂದು ಕಾಗದದಲ್ಲಿ ಬರೆಯಿರಿ. ಇದು ನಿಮಗೆ ತಕ್ಷಣಕ್ಕೆ ಪರಿಹಾರ ನೀಡುವುದು. ಇನ್ನೊಂದು ಪರಿಹಾರವೆಂದರೆ ಕಿತ್ತಳೆ ಹಣ್ಣಿನ ವಾಸನೆ ತೆಗೆದುಕೊಳ್ಳಿ. ಕಿತ್ತಳೆ ಹಣ್ಣಿನ ಸುವಾಸನೆಯು ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚು ಚುರುಕಾಗಿಡುವುದು. ಉಪಾಹಾರಕ್ಕೆ ಒಂದು ಕಿತ್ತಳೆ ಸೇವಿಸಿ, ಅದರ ಸುವಾಸನೆ ತೆಗೆದುಕೊಂಡರೆ ದಿನವಿಡಿ ಉಲ್ಲಾಸದಿಂದ ಇರುವಿರಿ.

ಕಣ್ಣಿಗೆ ಶ್ರಮ

ಕಣ್ಣಿಗೆ ಶ್ರಮ

ದಿನವಿಡಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ನಿಮ್ಮ ಕಣ್ಣುಗಳಿಗೆ ತುಂಬಾ ಶ್ರಮ ಬೀಳಬಹುದು. ನೀವು 20/20/20 ನಿಯಮ ಪಾಲಿಸಬೇಕು. ನೀವು 20 ನಿಮಿಷಕೊಮ್ಮೆ ಸುಮಾರು 20 ಅಡಿ ದೂರದಲ್ಲಿರುವ ವಸ್ತುವಿನ ಕಡೆ ನೋಡಬೇಕು. ಇದರಿಂದ ಕಣ್ಣಿನ ಶ್ರಮ ಕಡಿಮೆಯಾಗುವುದು ಮತ್ತು ಇದರಿಂದ ಕಣ್ಣಿನಲ್ಲಿ ನಿಮಗೆ ಭಿನ್ನತೆ ಕಂಡುಬರುವುದು.

ಬಿಕ್ಕಳಿಕೆ

ಬಿಕ್ಕಳಿಕೆ

ಬಿಕ್ಕಳಿಕೆಯು ತುಂಬಾ ಕಿರಿಕಿರಿ ಉಂಟು ಮಾಡುವಂತಹ ಸಮಸ್ಯೆ. ಆದರೆ ಇದರಿಂದ ಮುಕ್ತಿ ಪಡೆಯುವುದು ತುಂಬಾ ಸರಳ. ಒಂದು ಲೋಟ ನೀರನ್ನು ಸ್ಟ್ರಾದಿಂದ ಕುಡಿಯುವಾಗ ಎರಡು ಕಿವಿಗಳನ್ನು ಮುಚ್ಚಿಕೊಳ್ಳಿ ಅಥವಾ ಬೇರೆಯವರಿಂದ ಮುಚ್ಚಲು ಹೇಳಿ. ಇದರಿಂದ ಬಿಕ್ಕಳಿಕೆ ದೂರವಾಗುವುದು.

ಬಿಕ್ಕಳಿಕೆ ತಡೆಗೆ ಸರಳ ಟ್ರಿಕ್ಸ್- ಕೂಡಲೇ ಕಡಿಮೆಯಾಗುವುದು!

English summary

15 Must-Try Tricks For A Healthy Life

Life hacks for a better living means to get relief from small but annoyinghealth issues instantaneously. It's a great way to try out different ways of doing things and achieving the ultimate desired end result. Sometimes, life hacks can be very beneficial when you are running out of time. You can try these tricks to live a healthy life. Boldsky is glad to share with you some life hacks for a better living. Here are some tricks for a healthy life.
Story first published: Monday, March 5, 2018, 19:21 [IST]
X
Desktop Bottom Promotion