ಸೆಕ್ಸ್‌ನಿಂದ ಕೂಡ ಸೌಂದರ್ಯ ಹೆಚ್ಚಾಗುತ್ತದೆಯಂತೆ!-ಇಲ್ಲಿದೆ 12 ಕಾರಣಗಳು

Posted By: Arshad Hussain
Subscribe to Boldsky

ಸುಖಕರ ಜೀವನಕ್ಕೆ ಆರೋಗ್ಯಕರ ದಾಂಪತ್ಯ ಭದ್ರ ಅಡಿಪಾಯವಾಗಿದೆ. ನಿಯಮಿತ ಲೈಂಗಿಕ ಕ್ರಿಯೆಯಿಂದ ಆರೋಗ್ಯ ಉತ್ತಮವಾಗಿರುವುದು ಮಾತ್ರವಲ್ಲ, ಮನಸ್ಸಿಗೆ ನೆಮ್ಮದಿಯೂ ಲಭಿಸುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಪತಿ ಪತ್ನಿಯರ ನಡುವೆ ಪರಸ್ಪರ ವಿಶ್ವಾಸ, ಬದ್ಧತೆ ಹೆಚ್ಚಲು ದಾಂಪತ್ಯ ಸಾಂಗತ್ಯವೂ ಅಗತ್ಯ. ಸುಖಕರ ದಾಂಪತ್ಯಜೀವನ ನಡೆಸುವವರು ಆರೋಗ್ಯವಂತರಾಗಿರುವ ಜೊತೆಗೇ ಇವರಲ್ಲಿ ನೈಸರ್ಗಿಕ ಸೌಂದರ್ಯವೂ ತುಂಬಿ ತುಳುಕುತ್ತಿರುತ್ತದೆ.

ನೈಸರ್ಗಿಕ ಸೌಂದರ್ಯದ ಎದುರು ಈ ಜಗತ್ತಿನ ಯಾವುದೇ ಪ್ರಸಾಧನ ಸಾಟಿಯಲ್ಲ! ಮನದನ್ನನನ್ನು ನೆನೆದರೇ ಕೆಂಪೇರುವ ಕೆನ್ನೆಯ ಮೂಲಕ ಆಕೆಯ ಮೊಗದಲ್ಲಿ ಸೂಸುವ ತೃಪ್ತಿಯ ಭಾವವನ್ನು ಯಾವುದೇ ಕೃತಕ ವಿಧಾನದಲ್ಲಿ ಪ್ರಕಟಿಸಲು ಸಾಧ್ಯವೇ ಇಲ್ಲ.

ಕಾಮಾಸಕ್ತಿ ಕುಗ್ಗಿಸುವ ಹತ್ತು ಆಹಾರಗಳು-ಆದಷ್ಟು ಇದರಿಂದ ದೂರವಿರಿ

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡು ಭಾವಪರವಶತೆಯನ್ನು ಪಡೆಯುವ ಮೂಲಕ ದೇಹದ ರಸದೂತಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸುತ್ತವೆ ಹಾಗೂ ಆರೋಗ್ಯ ವೃದ್ಧಿಸುತ್ತದೆ. ಬನ್ನಿ, ಸೌಂದರ್ಯ ವೃದ್ಧಿಗಾಗಿ ನಿಯಮಿತ ಲೈಂಗಿಕ ಕ್ರಿಯೆ ಏಕೆ ಅನಿವಾರ್ಯ ಎಂಬುದನ್ನು ವಿವರಿಸುವ ಹತ್ತು ಕಾರಣಗಳ ಬಗ್ಗೆ ಅರಿಯೋಣ... 

ಲೈಂಗಿಕ ಕ್ರಿಯೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ

ಲೈಂಗಿಕ ಕ್ರಿಯೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ

ನಿಮ್ಮ ತ್ವಚೆ ಮತ್ತು ಕೂದಲ ಕಾಂತಿ ಹೆಚ್ಚಲು ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈಸ್ಟ್ರೋಜೆನ್ ಎಂಬ ರಸದೂತ ಸ್ರವಿಸಬೇಕು. ನಿಮ್ಮ ದೇಹದಲ್ಲಿ ಈಸ್ಟ್ರೋಜೆನ್ ಕೊರತೆಯಿದ್ದರೆ ಕೂದಲ ಮತ್ತು ತ್ವಚೆಯ ಆರೋಗ್ಯವೂ ಕುಂಠಿತಗೊಳ್ಳುತ್ತದೆ. ನಿಯಮಿತ ಲೈಂಗಿಕ ಕ್ರಿಯೆಯ ಮೂಲಕ ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದ ಈಸ್ಟ್ರೋಜೆನ್ ಸ್ರವಿಸುತ್ತದೆ ಹಾಗೂ ತ್ವಚೆ ಕೋಮಲ, ಕಾಂತಿಯುಕ್ತ ಹಾಗೂ ತಾಜಾತನದಿಂದ ಕೂಡಿರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಕೊಲ್ಯಾಜೆನ್ ಎಂಬ ಕಣಗಳೂ ಹೆಚ್ಚು ಉತ್ಪಾದನೆಯಾಗುವ ಮೂಲಕ ತ್ವಚೆ ಹಾಗೂ ಕೂದಲು ಇನ್ನಷ್ಟು ಆರೋಗ್ಯಕರವಾಗಿರುತ್ತವೆ.

ತಾರುಣ್ಯವೇ ಸೌಂದರ್ಯ, ಸೌಂದರ್ಯವೇ ತಾರುಣ್ಯ

ತಾರುಣ್ಯವೇ ಸೌಂದರ್ಯ, ಸೌಂದರ್ಯವೇ ತಾರುಣ್ಯ

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾರುಣ್ಯ ಹೆಚ್ಚು ಕಾಲ ಉಳಿಯುತ್ತದೆ. ಸೌಂದರ್ಯದ ಜೀವಾಳಕ್ಕೆ ತಾರುಣ್ಯವೇ ಮೂಲ ಎಂಬ ವಾದ ಸರಿಯಾಗದೇ ಹೋಗಬಹುದು. ಆದರೆ ಯಾವುದೇ ವಯಸ್ಸಿನಲ್ಲಿ ಚಿಮ್ಮುವ ಲವಲವಿಕೆ ಹಾಗೂ ಚೈತನ್ಯವೇ ತಾರುಣ್ಯದ ಲಕ್ಷಣವಾಗಿದೆ. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ವಾರಕ್ಕೆ ಮೂರು ಅಥವಾ ಹೆಚ್ಚು ಬಾರಿ ಭಾವಪರಾಕಾಷ್ಠೆಯನ್ನು ಪಡೆಯುವ ದಂಪತಿಗಳು ಹೆಚ್ಚಿನ ವಯಸ್ಸಿನವರೆಗೆ ತಾರುಣ್ಯವನ್ನು ಪ್ರಕಟಿಸುತ್ತಾರೆ.

 ಖಿನ್ನತೆಯನ್ನು ನಿವಾರಿಸಲು ಭಾವಪರಾಕಾಷ್ಠೆಯೆ ಅಂತಿಮ ಔಷಧಿ

ಖಿನ್ನತೆಯನ್ನು ನಿವಾರಿಸಲು ಭಾವಪರಾಕಾಷ್ಠೆಯೆ ಅಂತಿಮ ಔಷಧಿ

ಭಾವಪರಾಕಾಷ್ಠೆಯ ಸಮಯದಲ್ಲಿ ದೇಹದಲ್ಲಿ ಸೆರೋಟೋನಿನ್ ಹಾಗೂ DHEA (Dehydroepiandrosterone) ಎಂಬ ರಸದೂತಗಳು ಬಿಡುಗಡೆಯಾಗುತ್ತವೆ. ಸೆರೋಟೋನಿನ್ ಒಂದು ನರಸಂವೇದಕ ಅಥವಾ ನ್ಯೂರೋಟ್ರಾನ್ಸ್ ಮಿಟರ್ ಆಗಿದ್ದು ನಿಮ್ಮ ಮನೋಭಾವವನ್ನು ಪ್ರಫುಲ್ಲಗೊಳಿಸಲು ಅಗತ್ಯವಾಗಿದೆ. DHEA ಖಿನ್ನತೆ ನಿವಾರಕವಾಗಿದ್ದು ಉದ್ವೇಗ, ಬೇಸರ ಮೊದಲಾದ ಭಾವನೆಗಳನ್ನು ನಿವಾರಿಸಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತನ್ಮೂಲಕ ಲೈಂಗಿಕ ಕ್ರಿಯೆ ದಂಪತಿಗಳ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಕಾಂತಿ ಹಾಗೂ ಸೌಂದರ್ಯ ಹೆಚ್ಚಲೂ ನೆರವಾಗುತ್ತದೆ.

ಲೈಂಗಿಕ ಚಟುವಟಿಕೆ ಹಾಗೂ ಭಾವಪರಾಕಾಷ್ಠೆ ಫೆರೋಮೋನುಗಳನ್ನು ಬಿಡುಗಡೆ ಮಾಡುತ್ತದೆ

ಲೈಂಗಿಕ ಚಟುವಟಿಕೆ ಹಾಗೂ ಭಾವಪರಾಕಾಷ್ಠೆ ಫೆರೋಮೋನುಗಳನ್ನು ಬಿಡುಗಡೆ ಮಾಡುತ್ತದೆ

ಪರಲಿಂಗಿಗಳನ್ನು ನೋಡಿದಾಗ ಮನಸ್ಸಿನಲ್ಲಿ ಆಸೆಯ ಭಾವನೆಗಳು ಮೂಡಲು ಈ ಫೆರೋಮೋನುಗಳೇ ಕಾರಣ. ಲೈಂಗಿಕ ಕ್ರಿಯೆಯಿಂದ ದೇಹದಲ್ಲಿ ಫೆರೋಮೋನುಗಳು ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತದೆ ಹಾಗೂ ಸಂಗಾತಿಗಳು ಪರಸ್ಪರರ ಕಡೆ ಇನ್ನಷ್ಟು ಹೆಚ್ಚು ಆಕರ್ಷಿತರಾಗುತ್ತಾರೆ. ಇದು ದಾಂಪತ್ಯ ಇನ್ನಷ್ಟು ಬಲಗೊಳ್ಳಲು ನೆರವಾಗುತ್ತದೆ. ಆದ್ದರಿಂದ ಕೃತಕ ಸುಗಂಧದ್ರವ್ಯಗಳನ್ನು ಬಳಸಿ ಸಂಗಾತಿಯ ಆಕರ್ಷಣೆ ಪಡೆಯುವ ಬದಲು ಭಾವಪರಾಕಾಷ್ಠೆಯ ನೆರವು ಪಡೆಯುವುದು ಜಾಣತನ.

ಸ್ತನಗಳ ಗಾತ್ರ ಹೆಚ್ಚಿಸಲು ನೈಸರ್ಗಿಕ ವಿಧಾನ

ಸ್ತನಗಳ ಗಾತ್ರ ಹೆಚ್ಚಿಸಲು ನೈಸರ್ಗಿಕ ವಿಧಾನ

ಲೈಂಗಿಕ ತಜ್ಞರಾದ ಡಾ. ಮೈಕಲ್ ರೋಯ್ಜನ್ ಹಾಗೂ ಡಾ. ಓಝ್ಸ್ ಪಾಲ್ ರವರ ಪ್ರಕಾರ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸ್ತನಗಳ ಗಾತ್ರ ಸುಮಾರು 25%ರಷ್ಟು ಹಿಗ್ಗುತ್ತವೆ ಹಾಗೂ ಸ್ತನತೊಟ್ಟುಗಳ ಉದ್ದವೂ ಸುಮಾರು ಒಂದೂವರೆ ಇಂಚಿನಷ್ಟು ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ನೀವು ತಪ್ಪಿಸಿಕೊಳ್ಳಲಾಗದ ಪಾರ್ಟಿಯೊಂದಿದೆಯೇ ಅಲ್ಲಿ ನಿಮ್ಮ ಸ್ತನಗಳನ್ನು ಎತ್ತುವ ಬ್ರಾ ಧರಿಸಿ ನೈಸರ್ಗಿಕ ಗಾತ್ರವನ್ನು ಪ್ರಕಟಿಸಿ ಎಲ್ಲರ ಗಮನ ಸೆಳೆಯಲಿಚ್ಛಿಸಿದ್ದೀರಾದರೆ ಹೀಗೆ ಮಾಡಿ: ಇಂದಿನ ಸಮಾಗಮಕ್ಕೂ ಮುನ್ನ ಸುಮಾರು ಇಪ್ಪತ್ತು ನಿಮಿಷ ನಿಮ್ಮ ಸಂಗಾತಿಯೊಡನೆ ಮುನ್ನಲಿವಿನಲ್ಲಿ ತೊಡಗಿಕೊಳ್ಳಿ. ಬಳಿಕವೇ ಮುಂದಿನ ಭಾಗಕ್ಕೆ ಪ್ರವೇಶಿಸಿ. ಸ್ತನಗಳ ಗಾತ್ರ ಇನ್ನೂ ಹೆಚ್ಚಬೇಕೇ? ಸಂಗಾತಿಯೊಡನೆ ಇನ್ನಷ್ಟು ಹೆಚ್ಚು ಹೊತ್ತು ಆತ್ಮೀಯ ಸಮಯವನ್ನು ಕಳೆಯಿರಿ.

ಲೈಂಗಿಕ ಕ್ರಿಯೆ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಲೈಂಗಿಕ ಕ್ರಿಯೆ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ

ಭಾವಪರಾಕಾಷ್ಠೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಟೋಸಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ. ಇದು ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಎಂಬ ರಸದೂತವನ್ನು ಮೆದುಳಿನಿಂದ ನಿವಾರಿಸುತ್ತದೆ. ನಗರಜೀವನಕ್ಕೆ ಒಗ್ಗಿಕೊಂಡು ಸಮಯದ ಮಿತಿಯಲ್ಲಿಯೇ ಕೆಲಸ ನಿರ್ವಹಿಸುವ ನಮಗೆ ಒತ್ತಡದ ಕಾರಣದಿಂದ ಕಾರ್ಟಿಸೋಲ್ ನಮ್ಮ ಮೆದುಳಿನಲ್ಲಿ ಹೆಚ್ಚು ಸಂಗ್ರಹವಾಗಿದೆ. ಹೆಚ್ಚು ಹೆಚ್ಚು ಭಾವಪರಾಕಾಷ್ಠೆಗಳನ್ನು ಪಡೆಯುವ ಮೂಲಕ ಈ ಕಾರ್ಟಿಸೋಲ್ ಅನ್ನೂ ಪೂರ್ಣವಾಗಿ ಮೆದುಳಿನಿಂದ ಹೊರಹಾಕಲು ಸಾಧ್ಯವಾಗುತ್ತದೆ. ತನ್ಮೂಲಕ ಮಾನಸಿಕ ನೆಮ್ಮದಿ ಲಭಿಸುತ್ತದೆ.

ಭಾವಪರಾಕಾಷ್ಠೆಯಿಂದ ಹೊಟ್ಟೆಯೂ ಕರಗುತ್ತದೆ

ಭಾವಪರಾಕಾಷ್ಠೆಯಿಂದ ಹೊಟ್ಟೆಯೂ ಕರಗುತ್ತದೆ

ಕಾರ್ಟಿಸೋಲ್ ಹೆಚ್ಚಾದರೆ ಮೆದುಳಿಗೆ ಮಾತ್ರವಲ್ಲ, ಸೊಂಟದ ಸುತ್ತಳತೆಗೂ ಅಪಾಯವಿದೆ. ಇಲ್ಲಿಯೂ ಭಾವಪರಾಕಾಷ್ಠೆಯ ಮೂಲಕ ಲಭಿಸುವ ಆಕ್ಸಿಟೋಸಿನ್ ಕಾರ್ಟೀಸೋಲ್ ಅನ್ನು ನಿವಾರಿಸುವ ಮೂಲಕ ಸೊಂಟದ ಕೊಬ್ಬು ಕರಗಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಸುಲಭ ವ್ಯಾಯಾಮಗಳಿಂದ ಕರಗದ ಐದು ಹತ್ತು ಪೌಂಡು ಕೊಬ್ಬು ನಿಯಮಿತವಾದ ಲೈಂಗಿಕ ಕ್ರೀಡೆಯಿಂದ ಸುಲಭವಾಗಿ ಕರಗುತ್ತದೆ.

ನಿಮ್ಮ ವ್ಯಕ್ತಿತ್ವವೂ ಉತ್ತಮಗೊಳ್ಳುತ್ತದೆ

ನಿಮ್ಮ ವ್ಯಕ್ತಿತ್ವವೂ ಉತ್ತಮಗೊಳ್ಳುತ್ತದೆ

ಭಾವಪರವಶತೆಯಿಂದ ದೇಹದಲ್ಲಿ ಸ್ರವಿಸುವ ಕೆಲವು ರಾಸಾಯನಿಕಗಳು ಮನಸ್ಸಿಗೆ ಸುಖದ ಭಾವನೆಯನ್ನು ನೀಡುತ್ತವೆ. ಆ ಸಮಯದಲ್ಲಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿಯೂ ಈ ಭಾವನೆ ಮುಂದುವರೆಯುತ್ತದೆ. ಇದಕ್ಕೆ ಡೋಪಮೈನ್ ಎಂಬ ರಸದೂತದ ಪಾತ್ರ ಪ್ರಮುಖವಾಗಿದೆ. ಇದು ನಿಮ್ಮ ಜೀವನದ ಗುರಿಯತ್ತ ಹೆಚ್ಚು ಏಕಾಗ್ರತೆಯಿಂದ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಆಕ್ಸಿಟೋಸಿ ಮಾನಸಿಕ ನಿರಾಳತೆ ನೀಡುವ ಜೊತೆಗೇ ತಾಳ್ಮೆ, ಕರುಣೆ ಹಾಗೂ ಪ್ರೀತಿಯ ಭಾವನೆಗಳನ್ನೂ ಹೆಚ್ಚಿಸುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ಹೆಚ್ಚುವ ಮೂಲಕ ಕೆಲಸದಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಏಂಡಾರ್ಫಿನ್ ಗಳು ಮನಸ್ಸಿನ ಒತ್ತಡವನ್ನು ನಿವಾರಿಸಿ ನಿರಾಳತೆಯನ್ನು ಅನುಭವಿಸಲು ನೆರವಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಲು ಭಾವಪರಾಕಾಷ್ಠೆಯಿಂದ ವಂಚಿತರಾಗಲು ಸಾಧ್ಯವೇ ಇಲ್ಲ!

ಲೈಂಗಿಕ ಕ್ರೀಡೆಯಿಂದ ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ

ಲೈಂಗಿಕ ಕ್ರೀಡೆಯಿಂದ ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ

ಲೈಂಗಿಕ ಕ್ರೀಡೆಯಿಂದ ಕೇವಲ ಸೊಂಟದ ಕೊಬ್ಬು ಕರಗುವುದು ಮಾತ್ರವಲ್ಲ, ಒಟ್ಟಾರೆ ಆರೋಗ್ಯವೇ ಉತ್ತಮಗೊಳ್ಳುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ನಿಮ್ಮ ಹೃದಯದ ಬಡಿತ ದ್ವಿಗುಣಗೊಳ್ಳುತ್ತದೆ ಹಾಗೂ ರಕ್ತದೊತ್ತಡವೂ ಸಾಮಾನ್ಯಕ್ಕಿಂತ ದುಪ್ಪಟ್ಟಾಗುತ್ತದೆ. ಈ ಕ್ರಿಯೆಯಲ್ಲಿ ಬಳಸುವ ಶಕ್ತಿ ಯಾವುದೇ ಶ್ರಮದಾಯಕ ಯೋಗಾಭ್ಯಾಸದ ತರಗತಿಯಲ್ಲಿ ಪಡೆಯುವುದಕ್ಕಿಂತಲೂ ಹೆಚ್ಚಿರುತ್ತದೆ. ಅಲ್ಲದೇ ಈ ಸಮಯದಲ್ಲಿ ಫೀನೈಲಿಥೈಲಮೈನ್ ಎಂಬ ಪೋಷಕಾಂಶವೂ ಉತ್ಪತ್ತಿಗೊಳ್ಳುತ್ತದೆ. ಈ ಅದ್ಭುತ ಪೋಷಕಾಂಸ ಆನಂದ, ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಮುಖ್ಯವಾಗಿ ಹಸಿವನ್ನು ನಿಗ್ರಹಿಸಲು ನೆರವಾಗುತ್ತದೆ.

ಆತ್ಮವಿಶ್ವಾಸ ಹೆಚ್ಚುತ್ತದೆ

ಆತ್ಮವಿಶ್ವಾಸ ಹೆಚ್ಚುತ್ತದೆ

ಸಾಮಾನ್ಯವಾಗಿ ಸುಂದರ ವಸ್ತುಗಳು ಹಾಗೂ ಸುಂದರ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳೇ ಹೆಚ್ಚು ಆಕರ್ಷಣೆ ಪಡೆಯುತ್ತವೆ/ತ್ತಾರೆ. ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಧ್ಯಾನ ಮತ್ತು ಲೈಂಗಿಕ ಕ್ರಿಯೆಯ ಮೂಲಕ ಮೆದುಳಿನ ಕೆಲವು ಭಾಗಗಳು ಏಕಪ್ರಕಾರವಾದ ಪ್ರಚೋದನೆ ಪಡೆಯುತ್ತವೆ. ಧ್ಯಾನದ ಮೂಲಕ ಪಡೆಯುವ ಪ್ರಯೋಜನಗಳೇ ಭಾವಪರಾಕಾಷ್ಠೆಯಿಂದಲೂ ಪಡೆಯಬಹುದು. ನೀವು ನಿಮ್ಮ ಅಂತರಂಗ ಹಾಗೂ ಬಹಿರಂಗದೊಂದಿಗೆ ಇನ್ನಷ್ಟು ಹೆಚ್ಚು ಸುಲಭವಾಗಿ ಬೆರೆಯಲು ಸಾಧ್ಯವಾಗುತ್ತದೆ ಹಾಗೂ ನಿಮ್ಮ ಆಂತರಿಕ ಮಾರ್ಗದರ್ಶನವೂ ಉತ್ತಮಗೊಳ್ಳುತ್ತದೆ. ಹೆಚ್ಚು ಶಾಂತರಾಗಿರಲು, ಎದುರಾದ ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಲು ಹಾಗೂ ನಿಷ್ಕಲ್ಮಶ ಮನಸ್ಸು ಹೊಂದಲು ಭಾವಪರಾಕಾಷ್ಠೆ ನೆರವಾಗುತ್ತದೆ. ದಿನಕ್ಕೊಂದು ಬಾರಿಯ ಭಾವಪರಾಕಾಷ್ಠೆ ಅಥವಾ ವಾರದಲ್ಲಿ ಕೆಲವಾರಿ ಬಾರಿ ಪಡೆದುಕೊಳ್ಳುವ ಮೂಲಕ ಪವಾಡಸದೃಶ ಆರೋಗ್ಯಕರ ಪ್ರಯೋಜನಗಳನ್ನು ಪಡೆಯುವುದರ ಜೊತೆಗೇ ನಿಮ್ಮ ಅಂಗಸೌಷ್ಟವವನ್ನೂ ಇತರರ ಅಸೂಯೆಗೆ ಗುರಿಯಾಗಿಸುವಷ್ಟು ಸುಂದರವಾಗಿಸುತ್ತದೆ.

ತ್ವಚೆಗೆ ಯೌವನವನ್ನು ನೀಡುತ್ತದೆ

ತ್ವಚೆಗೆ ಯೌವನವನ್ನು ನೀಡುತ್ತದೆ

ಡಾ.ಡೇವಿಡ್ ವೀಕ್ಸ್ ಎಂಬ ಬ್ರಿಟೀಷ್ ಮನಃಶಾಸ್ತ್ರಜ್ಞರ ಪ್ರಕಾರ ನೀವು ಪ್ರತಿನಿತ್ಯ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿದ್ದಲ್ಲಿ, ನಿಮ್ಮ ಮುಖದಲ್ಲಿ ವಯಸ್ಸು, ನಿಮ್ಮ ಈಗಿನ ವಯಸ್ಸಿಗಿಂತ ಐದರಿಂದ ಏಳು ವರ್ಷ ಕಡಿಮೆ ಕಾಣಿಸುತ್ತದೆಯಂತೆ. ಮಿಲನದ ಸಮಯದಲ್ಲಿ ಹೊರತುಪಡಿಸಿ, ನಮ್ಮ ದೇಹವು ಮಗುವಿಗೆ ಜನ್ಮ ನೀಡುವ ಸಹ ಆಕ್ಸಿಟೊಸಿನನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ಸಮರ್ಥ ವಯಸ್ಸಾದಂತೆ ಕಾಣುವುದನ್ನು ತಡೆಯುವ ಹಾರ್ಮೋನ್ ಆಗಿರುತ್ತದೆ.

ಕೂದಲಿಗೆ ಹೊಳಪನ್ನು ನೀಡುತ್ತದೆ!

ಕೂದಲಿಗೆ ಹೊಳಪನ್ನು ನೀಡುತ್ತದೆ!

ಮಂಕಾದ ಕೂದಲು ನಿಮ್ಮ ಸಮಸ್ಯೆಯೇ? ಹಾಗಾದರೆ ನಿಮಗೆ ಮಿಲನವು ಒಂದು ಚಿಕಿತ್ಸೆ ಎಂದು ಹೇಳಬಹುದು! ಮಿಲನದಲ್ಲಿ ಪಾಲ್ಗೊಳ್ಳುವುದರಿಂದ ಹೆಂಗಸರ ದೇಹದಲ್ಲಿ ಎಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ. ಇದು ಕೂದಲಿನ ಮಂಕುತನವನ್ನು ದೂರವಿಡುತ್ತದೆ. ಜೊತೆಗೆ ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ. ಇದು ನಿಮ್ಮ ಕೂದಲು ಮತ್ತು ತ್ವಚೆ ಎರಡಕ್ಕೂ ಒಳ್ಳೆಯದು.

English summary

12 Reasons intercourse Makes You Beautiful

Sex is the consummate beauty enhancer. It puts all other products and procedures to shame. Here are 10 reasons to incorporate orgasms into your beauty routine: