For Quick Alerts
ALLOW NOTIFICATIONS  
For Daily Alerts

ದೊಡ್ಡ ಜೀರಿಗೆಯಲ್ಲಿದೆ ಬರೋಬ್ಬರಿ 12 ಚಿನ್ನದಂತಹ ಗುಣಗಳು....

|

ಜೀರಿಗೆಗಳು ಆರೋಗ್ಯಕ್ಕೆ ನೀಡಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ....

ಅಧಿಕ ರಕ್ತದೊತ್ತಡವನ್ನು ಕಡಿಮೆಯಾಗಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಯಾಗಿಸುತ್ತದೆ

ದೊಡ್ಡ ಜೀರಿಗೆಯನ್ನು ಬಾಯಿಯಲ್ಲಿ ಹಾಕಿ ಜಗಿಯುವ ಮೂಲಕ ಜೊಲ್ಲಿನಲ್ಲಿ ನೈಟ್ರೈಟುಗಳ ಪ್ರಮಾಣ ಹೆಚ್ಚುತ್ತದೆ. ಇದು ರಕ್ತದ ಒತ್ತಡವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ದೊಡ್ಡ ಜೀರಿಗೆಯಲ್ಲಿ ಪೊಟ್ಯಾಶಿಯಂ ಉತ್ತಮ ಪ್ರಮಾನದಲ್ಲಿದ್ದು ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿಮಟ್ಟದಲ್ಲಿರಿಸಲು ನೆರವಾಗುತ್ತದೆ ತನ್ಮೂಲಕ ಹೃದಯದ ಒತ್ತಡವೂ ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ.

ನೀರನ್ನು ಉಳಿಸಿಕೊಳ್ಳುವುದನ್ನು ತಡೆಯುತ್ತದೆ

ನೀರನ್ನು ಉಳಿಸಿಕೊಳ್ಳುವುದನ್ನು ತಡೆಯುತ್ತದೆ

ದೊಡ್ಡ ಜೀರಿಗೆ ಉತ್ತಮವಾದ ಮೂತ್ರವರ್ಧಕವಾಗಿದ್ದು ಇವುಗಳನ್ನು ಸೇವಿಸುವ ಮೂಲಕ ಹೆಚ್ಚು ಮೂತ್ರದ ಮೂಲಕ ದೇಹದಲ್ಲಿದ್ದ ವಿಷಕಾರಿ ವಸ್ತುಗಳು ಹೊರಹಾಕಲ್ಪಡುತ್ತವೆ. ಈ ಮೂಲಕ ಮೂತ್ರನಾಳ ಹಾಗೂ ಮೂತ್ರಕೋಶದ ಸೋಂಕು ತಗಲುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಅಲ್ಲದೇ ಇದರ ಪೋಷಕಾಂಶಗಳು ಹೆಚ್ಚು ಬೆವರಲೂ ಪ್ರಚೋದನೆ ನೀಡುವ ಮೂಲಕವೂ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಿ ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯುತ್ತದೆ. ಈ ಮೂಲಕ ಮೂತ್ರನಾಳದ ಸೋಂಕಿನ ಸಹಿತ ಇತರ ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ.

ರಕ್ತಹೀನತೆಯಾಗದಂತೆ ತಡೆಯುತ್ತದೆ

ರಕ್ತಹೀನತೆಯಾಗದಂತೆ ತಡೆಯುತ್ತದೆ

ನಮ್ಮ ದೇಹದ ರಕ್ತಕಣಗಳಿಗೆ ಕಬ್ಬಿಣ ಅವಶ್ಯವಾಗಿ ಬೇಕಾಗಿರುವ ಖನಿಜವಾಗಿದೆ. ದೊಡ್ಡ ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣ ಹಾಗೂ ಹಿಸ್ಟಿಡೈನ್ ಎಂಬ ಪೋಷಕಾಂಶ ಹೀಮೋಗ್ಲೋಬಿನ್ ರಚನೆಗೆ ಮತ್ತು ರಕ್ತದ ಇತರ ಕಣಗಳ ವೃದ್ದಿಗೆ ನೆರವಾಗುವ ಮೂಲಕ ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ದೊಡ್ಡ ಜೀರಿಗೆಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ ಹಾಗೂ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ. ತನ್ಮೂಲಕ ಅನಗತ್ಯ ಅಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಆಹಾರದ ಪೋಷಕಾಂಶಗಳನ್ನು ಪೂರ್ಣವಾಗಿ ಪಡೆದುಕೊಳ್ಳಲು ಮತ್ತು ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೊಬ್ಬು ಹೆಚ್ಚಿದ್ದರೆ ನಿತ್ಯವೂ ದೊಡ್ಡ ಜೀರಿಗೆಯನ್ನು ಕೊಂಚ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಶೀಘ್ರವೇ ಕೊಬ್ಬು ಕಡಿಮೆಯಾಗತೊಡಗುತ್ತದೆ.

ಅಜೀರ್ಣತೆಯನ್ನು ಗುಣಪಡಿಸುತ್ತದೆ

ಅಜೀರ್ಣತೆಯನ್ನು ಗುಣಪಡಿಸುತ್ತದೆ

ಊಟದ ಬಳಿಕ ಕೊಂಚ ದೊಡ್ಡಜೀರಿಗೆಯನ್ನು ಸೇವಿಸಿದರೆ ಇದು ಅಜೀರ್ಣತೆ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ದೊಡ್ಡ ಜೀರಿಗೆ ಜಠರ ಹಾಗೂ ಸಣ್ಣಕರುಳಿನಲ್ಲಿ ಜೀರ್ಣರಸಗಳನ್ನು ಹೆಚ್ಚಾಗಿ ಸ್ರವಿಸಲು ಪ್ರಚೋದನೆ ನೀಡುತ್ತದೆ ಹಾಗೂ ಕರುಳಿನಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿ ಎದುರಾಗುವ ಹುಣ್ಣು ಮೊದಲಾದ ತೊಂದರೆಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ದೊಡ್ಡ ಜೀರಿಗೆಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ. ಈ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ತನ್ಮೂಲಕ ಎದುರಾಗಬಹುದಾಗಿದ್ದ ಹೃದಯಸಂಬಂಧಿ ಕಾಯಿಲೆ ಹಾಗೂ ಹೃದಯಸ್ತಂಭನದಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ದೊಡ್ಡ ಜೀರಿಗೆ ಕಾಳುಗಳಿಗೆ ಹಲವಾರು ಬಗೆಯ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುವ ಶಕ್ತಿ ಇದೆ. ಇದರಲ್ಲಿರುವ ಫ್ಲೇವನಾಯ್ಡುಗಳು ಮತ್ತು ಫಿನಾಲ್ ಗಳು ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ನಿತ್ಯವೂ ದೊಡ್ಡ ಜೀರಿಗೆಯನ್ನು ಸೇವಿಸುವ ಮೂಲಕ ಯಕೃತ್ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಎದುರಾಗುವ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ದೊಡ್ಡ ಜೀರಿಗೆಯಲ್ಲಿ ವಿಟಮಿನ್ ಸಿ ಸಮೃದ್ದವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಘಾಸಿಗೊಂಡ ಚರ್ಮದ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳನ್ನು ಸೃಷ್ಟಿಸಿ ಹೊಸ ಕಾಂತಿ ನೀಡುತ್ತದೆ ಹಾಗೂ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ತನಾಳಗಳನ್ನು ರಕ್ಷಿಸುತ್ತದೆ. ಒಂದು ಈರುಳ್ಳಿ ಗಾತ್ರದ ದೊಡ್ಡ ಜೀರಿಗೆಯ ಗಡ್ಡೆಯಲ್ಲಿ ನಿತ್ಯದ ಅಗತ್ಯದ 20ಶೇಖಡಾದಷ್ಟು ವಿಟಮಿನ್ ಸಿ ಲಭಿಸುತ್ತದೆ.

ಮಾಸಿಕ ದಿನಗಳ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ದೊಡ್ಡ ಜೀರಿಗೆ ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಈ ಬೀಜಗಳಲ್ಲಿ ಮಾಸಿಕ ದಿನಗಳಲ್ಲಿ ರಸದೂತಗಳ ಕ್ರಿಯೆಯನ್ನು ನಿಯಂತ್ರಿಸುವ ಮೂಲಕ ಸ್ರಾವವನ್ನು ಸುಲಭವಾಗಿಸಲು ನೆರವಾಗುತ್ತದೆ ಹಾಗೂ ನೋವನ್ನು ಕಡಿಮೆಗೊಳಿಸಿ ಆರಾಮ ನೀಡುತ್ತದೆ.

ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ನಿತ್ಯದ ಅಡುಗೆಯಲ್ಲಿ ಕೊಂಚ ಪ್ರಮಾಣದ ದೊಡ್ಡಜೀರಿಗೆಯನ್ನು ಸೇವಿಸುವ ಮೂಲಕ ಕಣ್ಣುಗಳ ಉರಿಯಿಂದ ರಕ್ಷಣೆ ಪಡೆಯಬಹುದು. ಇದರಲ್ಲಿರುವ ವಿಟಮಿನ್ ಸಿ ಮತ್ತು ಅಮೈನೋ ಆಮ್ಲಗಳು ಕಣ್ಣುಗಳ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ಒಂದು ವೇಳೆ ಕಣ್ಣುಗಳು ತೀರಾ ದಣಿದಿದ್ದರೆ ಹಾಗೂ ಉರಿ ಆವರಿಸಿದ್ದರೆ ದೊಡ್ಡಜೀರಿಗೆಯನ್ನು ಹಾಕಿ ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ಕಣ್ಣುಗಳಿಗೆ ಉತ್ತಮವಾದ ಶಮನ ದೊರಕುತ್ತದೆ.

ಉಸಿರಾಟದ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ಉಸಿರಾಟದ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ಉಸಿರಾಟ ಹಾಗೂ ಇತರ ಸಂಬಂಧಿ ತೊಂದರೆಗಳಾದ ಕೆಮ್ಮು, ಎದೆಯಲ್ಲಿ ಕಫ ತುಂಬಿಕೊಂಡಿರುವುದು ಹಾಗೂ ಬ್ರಾಂಖೈಟಿಸ್ ಮೊದಲಾದ ತೊಂದರೆಗಳಿಗೂ ದೊಡ್ಡ ಜೀರಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ಕಫ ಕಟ್ಟಿಕೊಳ್ಳುವುದನ್ನು ತಡೆಯುತ್ತದೆ ಹಾಗೂ ಮೂಗಿನ ನಾಳ ಹಾಗೂ ಗಂಟಲಿನಲ್ಲಿ ಸಂಗ್ರಹವಾಗಿದ್ದ ಕಫವನ್ನು ಸಡಿಲಿಸಿ ಉಸಿರಾಟವನ್ನು ಸರಾಗಗೊಳಿಸಲು ನೆರವಾಗುತ್ತದೆ.

ಯಕೃತ್ ನ ಆರೋಗ್ಯ ಹೆಚ್ಚಿಸುತ್ತದೆ

ಯಕೃತ್ ನ ಆರೋಗ್ಯ ಹೆಚ್ಚಿಸುತ್ತದೆ

ದೊಡ್ಡ ಜೀರಿಗೆಯಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಂ ಇದೆ. ಈ ಪೋಷಕಾಂಶ ಯಕೃತ್ ನ ಕಿಣ್ವಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಕಲ್ಮಶಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಯಕೃತ್ ನ ಕ್ಷಮತೆ ಹೆಚ್ಚಿಸಲು ದೊಡ್ಡ ಜೀರಿಗೆಯನ್ನು ಕುದಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ಅಥವಾ ಕೆಲವು ಕಾಳುಗಳನ್ನು ಜಗಿಯುವ ಮೂಲಕ ಯಕೃತ್ ನ ಆರೋಗ್ಯ ಉತ್ತಮಗೊಳಿಸುತ್ತದೆ ಹಾಗೂ ಯಕೃತ್ ನ ಸೋಂಕುಗಳಿಂದ ರಕ್ಷಿಸುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

12 Health Benefits Of Fennel Seeds

Fennel seeds have high amounts of essential minerals like copper, potassium, zinc, vitamin C, iron, selenium, manganese and calcium. Apart from their health benefits, fennel seeds are also used in various medicinal purposes and in culinary as well. The seeds can be found all year around and they are often in the form of processed ground powder or in the form of seeds. Have a look at the health benefits of fennel seeds.
X
Desktop Bottom Promotion