For Quick Alerts
ALLOW NOTIFICATIONS  
For Daily Alerts

ನೋಡಿ ಇವೆಲ್ಲಾ ಆಹಾರಗಳನ್ನು ಸರಿಯಾದ ಸಮಯದಲ್ಲಿ ಸೇವಿಸಿ

By Lekhaka
|

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಪ್ರಮುಖವಾಗಿ ಬೇಕಾಗಿರುವುದು ಪೋಷಕಾಂಶಗಳು. ಇದು ನಾವು ತಿನ್ನುವ ಆಹಾರದಿಂದ ನಮಗೆ ಸಿಗುವುದು. ಆದರೆ ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಇರುವ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತದೆ ಎಂದೇನಿಲ್ಲ. ತಿನ್ನುವ ಆಹಾರದೊಂದಿಗೆ ಅದನ್ನು ಸೇವಿಸುವ ಸಮಯವು ಸರಿಯಾಗಿರದೆ ಇದ್ದಲ್ಲಿ ಅದರಿಂದ ದೇಹದ ಮೇಲೆ ದುಷ್ಪರಿಣಾಮವಾಗುವುದು.

ಕೆಲವೊಂದು ಆಹಾರಗಳನ್ನು ನಾವು ಸರಿಯಾದ ಸಮಯದಲ್ಲಿ ಸೇವಿಸದೆ ಇದ್ದರೆ ಅದರಿಂದ ಅಜೀರ್ಣ ಉಂಟಾಗುವುದು. ಸರಿಯಾದ ಸಮಯದಲ್ಲಿ ಸೂಕ್ತ ಆಹಾರ ಸೇವಿಸುವುದು ಅತೀ ಅಗತ್ಯ. ಬಾಳೆಹಣ್ಣು ನಿಮ್ಮ ಹಸಿವು ನೀಗಿಸಬಹುದು. ಅದೇ ರೀತಿ ಚಾಕಲೇಟ್ ಮನಸ್ಥಿತಿ ಉತ್ತಮಪಡಿಸಬಹುದು. ಆದರೆ ಇದನ್ನು ಸರಿಯಾದ ಸಮಯದಲ್ಲಿ ಸೇವಿಸದೆ ಇದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರುವುದು.

ನಿಮ್ಮ ಆಹಾರ ಸೇವನೆಯ ಸಮಯವು ನಕಾರಾತ್ಮಕ ಪರಿಣಾಮ ಬೀರಬಹುದು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಕೂಡ ಲಭ್ಯವಾಗುವುದು. ನೀವು ಸರಿಯಾದ ಸಮಯದಲ್ಲಿ ತಿನ್ನದೆ ಇರುವ ಕೆಲವು ಆಹಾರಗಳು ಇಲ್ಲಿವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಇರುವಂತಹ ಪ್ರತ್ಯಾಮ್ಲಗಳು ಎದೆಉರಿಯನ್ನು ಕಡಿಮೆ ಮಾಡುವುದು. ದಿನದಲ್ಲಿ ಇದರ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಶಕ್ತಿ ಲಭ್ಯವಾಗುವುದು. ಅದೇ ರಾತ್ರಿ ವೇಳೆ ಸೇವನೆ ಮಾಡಿದರೆ ಅದರಿಂದ ಶೀತ ಮತ್ತು ಕಫ ಉಂಟಾಗುವುದು. ರಾತ್ರಿ ವೇಳೆ ಬಾಳೆಹಣ್ಣು ಸೇವಿಸಬೇಡಿ.

ಮೊಸರು

ಮೊಸರು

ಮೊಸರನ್ನು ದಿನದಲ್ಲಿ ಸೇವನೆ ಮಾಡುವುದರಿಂದ ಅದು ಜೀರ್ಣಕ್ರಿಯೆಗೆ ನೆರವಾಗುವುದು ಮತ್ತು ಹೊಟ್ಟೆಯ ಆರೋಗ್ಯ ಸುಧಾರಿಸುವುದು. ರಾತ್ರಿ ವೇಳೆ ಮೊಸರು ಸೇವನೆ ಮಾಡಿದರೆ ಅದರಿಂದ ದೇಹದ ಉಷ್ಣತೆ ಹೆಚ್ಚಾಗುವುದು ಮತ್ತು ಅಸಿಡಿಟಿ ಉಂಟಾಗುವುದಲ್ಲದೆ ಇತರ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಬಹುದು. ಶೀತ ಮತ್ತು ಕಫ ಉಂಟು ಮಾಡಿ ಶ್ವಾಸಕೋಶಕ್ಕೆ ತೊಂದರೆಯಾಗಬಹುದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಆದರೆ ಇದನ್ನು ಸರಿಯಾದ ಸಮಯದಲ್ಲಿ ಕುಡಿಯಬೇಕು. ಗ್ರೀನ್ ಟೀಯಲ್ಲಿ ಕೆಫಿನ್ ಅಂಶವಿರುವ ಕಾರಣದಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಅದರಿಂದ ನಿರ್ಜಲೀಕರಣ ಮತ್ತು ಅಸಿಡಿಟಿ ಉಂಟಾಗಬಹುದು. ಇದರಿಂದ ಹಗಲಿನಲ್ಲಿ ಇದರ ಸೇವನೆ ಮಾಡಿ.

ಅನ್ನ

ಅನ್ನ

ಅನ್ನದಲ್ಲಿ ಹೆಚ್ಚಿನ ಪಿಷ್ಟವಿರುವ ಕಾರಣದಿಂದ ರಾತ್ರಿ ವೇಳೆ ಇದರಿಂದ ದೂರವಿರಬೇಕು ಎಂದು ಆಹಾರತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಟ್ಟೆ ಉಬ್ಬರ ಕಾಣಿಸಿಕೊಂಡು ನಿದ್ರೆಗೆ ಸಮಸ್ಯೆಯಾಗಬಹುದು. ಅನ್ನ ಕರಗಲು ಹೆಚ್ಚಿನ ಸಮಯ ಬೇಕಾಗಿರುವ ಕಾರಣದಿಂದ ರಾತ್ರಿ ವೇಳೆ ಸೇವಿಸಿದರೆ ಅದರಿಂದ ತೂಕ ಹೆಚ್ಚಳವಾಗಬಹುದು.

ಹಾಲು

ಹಾಲು

ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಆದರೆ ದಿನವಿಡಿ ಹಾಲು ಕುಡಿಯುತ್ತಾ ಇದ್ದರೆ ಅದರಿಂದ ನೀವು ಅಲಸ್ಯಕ್ಕೊಳಗಾಗಬಹುದು. ಯಾಕೆಂದರೆ ಹಾಲು ಕರಗಲು ಹೆಚ್ಚು ಸಮಯ ಬೇಕಾಗುತ್ತದೆ. ರಾತ್ರಿ ವೇಳೆ ಹಾಲು ಕುಡಿದರೆ ದೇಹವು ಆರಾಮವಾಗಿರುವುದು ಮತ್ತು ಪೋಷಕಾಂಶಗಳು ಸಂಪೂರ್ಣವಾಗಿ ಹೀರಿಕೊಳ್ಳುವುದು.

ಸೇಬು

ಸೇಬು

ಕೆಲವು ಪ್ರಮುಖ ಆ್ಯಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿರುವಂತಹ ಸೇಬು ಅದ್ಭುತ ಆಹಾರವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ರಾತ್ರಿ ವೇಳೆ ಸೇಬು ಸೇವಿಸಿದರೆ ಅದರಿಂದ ಅಸಿಡಿಟಿ ಉಂಟಾಗಬಹುದು. ಇದು ಹೊಟ್ಟೆಯಲ್ಲಿ ಅಸಿಡಿಟಿ ಪ್ರಮಾಣ ಹೆಚ್ಚಿಸುವುದು. ಹೊಟ್ಟೆಯ ಕ್ರಿಯೆಗಳು ಸರಾಗವಾಗಿ ಸಾಗಲು ಹಗಲಿನಲ್ಲಿ ಮಾತ್ರ ಸೇಬನ್ನು ಸೇವಿಸಿ.

ಕಡು ಚಾಕಲೇಟ್

ಕಡು ಚಾಕಲೇಟ್

ಕಡುಗಪ್ಪು ಚಾಕಲೇಟಿನಲ್ಲಿ ಕೆಲವೊಂದು ಸಾವಯವ ಅಂಶಗಳು ಇದ್ದು, ಇವುಗಳಿಂದ ಆರೋಗ್ಯ ಸುಧಾರಣೆಯಾಗುವುದು ಮತ್ತು ಹೃದಯದ ಕಾಯಿಲೆ ಕಡಿಮೆಯಾಗುವುದು. ಚಾಕಲೇಟ್ ನಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಿದೆ ಮತ್ತು ಕೋಕಾ ಹೆಚ್ಚಿದೆ. ರಾತ್ರಿ ವೇಳೆ ಸೇವಿಸಿದರೆ ಅದರಿಂದ ಮನಸ್ಥಿತಿ ಸುಧಾರಿಸುವುದು ಮತ್ತು ರಕ್ತದೊತ್ತಡ ಕಡಿಮೆಯಾಗುವುದು.

ಕೆಂಪು ವೈನ್

ಕೆಂಪು ವೈನ್

ಕೆಂಪು ವೈನ್ ನಲ್ಲಿ ಕೆಲವೊಂದು ಆಲ್ಕೋಹಾಲ್ ಮತ್ತು ಇತರ ಕೆಲವೊಂದು ಅಂಶಗಳಿವೆ. ಇದನ್ನು ಆ್ಯಂಟಿಆಕ್ಸಿಡೆಂಟ್ ಎಂದು ಕರೆಯಲಾಗುತ್ತದೆ. ಇದು ಪರಿಧಮನಿಯ ಹಲವಾರು ಕಾಯಿಲೆ ನಿವಾರಣೆ ಮಾಡುವುದು. ರಾತ್ರಿ ಊಟದ ವೇಳೆ ಆಥವಾ ಸಂಜೆ ಬಳಿಕ ಕೆಂಪು ವೈನ್ ಸೇವನೆ ಮಾಡಿದರೆ ದೇಹವು ಅದನ್ನು ಬೇಗನೆ ಹೀರಿಕೊಳ್ಳುವುದು. ಇದರಿಂದ ದೇಹವು ಚಟುವಟಿಕೆಯಿಂದ ಇರುವುದು. ಹಗಲಿನಲ್ಲಿ ಕೆಂಪು ವೈನ್ ಸೇವಿಸಬೇಡಿ.

ಕಾಫಿ

ಕಾಫಿ

ರಾತ್ರಿ ವೇಳೆ ನಿದ್ರೆ ಬರಬಾರದೆಂದು ಕೆಲವರು ಕಾಫಿ ಸೇವನೆ ಮಾಡುವರು. ಆದರೆ ಇದು ತುಂಬಾ ಅನಾರೋಗ್ಯಕರ ಅಭ್ಯಾಸ. ರಾತ್ರಿ ವೇಳೆ ಕಾಫಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಕಿರಿಕಿರಿಯಾಗುವುದು ಮತ್ತು ಕಾಫಿಯಲ್ಲಿ ಕೆಫಿನ್ ಇರುವ ಕಾರಣ ದೇಹಕ್ಕೆ ವಿಶ್ರಾಂತಿ ಸಿಗದು. ಹಗಲಿನಲ್ಲಿ ಕಾಫಿ ಸೇವನೆ ಮಾಡಿದರೆ ಒಳ್ಳೆಯದು.

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಗಲಿನ ಸಮಯದಲ್ಲಿ ಇದರ ಜ್ಯೂಸ್ ಸೇವಿಸಿದರೆ ಅದು ದೇಹಕ್ಕೆ ಶಕ್ತಿ ನೀಡುವುದು ಮತ್ತು ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಇದರಲ್ಲಿ ಫಾಲಿಕ್ ಆಮ್ಲ ಮತ್ತು ವಿಟಮಿನ್ ಡಿ ಕೂಡ ಲಭ್ಯವಿದೆ. ಆದರೆ ರಾತ್ರಿ ವೇಳೆ ಕಿತ್ತಳೆ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ಅಸಿಡಿಟಿ ಉಂಟಾಗುವುದು.

ಸಕ್ಕರೆ

ಸಕ್ಕರೆ

ಬೆಳಗ್ಗೆ ನೀವು ಸ್ಮೂಥಿ ಅಥವಾ ಓಟ್ ಮೀಲ್ ಸೇವನೆ ಮಾಡಿದರೆ ಅದರಿಂದ ನಿಮ್ಮ ದೇಹಕ್ಕೆ ಶಕ್ತಿ ಲಭ್ಯವಾಗುವುದು. ಇದರಿಂದ ದಿನವಿಡಿ ನೀವು ಚುರುಕಾಗಿರಬಹುದು. ಆದರೆ ರಾತ್ರಿ ವೇಳೆ ಇದರ ಸೇವನೆ ಮಾಡಿದರೆ ಅದರಿಂದ ದೇಹದ ಕೊಬ್ಬು ಹೆಚ್ಚುವುದು. ಯಾಕೆಂದರೆ ರಾತ್ರಿ ವೇಳೆ ಯಾವುದೇ ದೈಹಿಕ ಚಟುವಟಿಕೆ ಇರುವುದಿಲ್ಲ.

English summary

11 Foods We Eat At Wrong Hours That Affect Our Health

Having a banana to get rid of the hunger pangs or snacking on a bar of chocolate to boost your mood, comes very naturally. But did you know that having these foods at the wrong time of the day can actually have the very opposite reaction? This habit may have negative effects on your health in the long run. So, it is very crucial to be aware of when to eat so that you have a better control over your diet. Check out these 11 foods we eat at wrong hours that affect our health!
X
Desktop Bottom Promotion