ಸತತವಾಗಿ ತಲೆ ನೋವು ಬರುತ್ತಿದ್ದರೆ, ಇದೇ 10 ಕಾರಣಗಳಿರಬಹುದು!

Posted By: Arshad
Subscribe to Boldsky

ಕಂಪ್ಯೂಟರ್ ಮುಂದೆ ಕುಳಿತಿದ್ದಾಗ ತಲೆಯಲ್ಲೊಂದು ಚಿಕ್ಕದಾದ ಚಳಕು ಕಾಣಿಸಿಕೊಳ್ಳುತ್ತದೆ. ಏನಾಯಿತು ಎಂದು ತಿಳಿದು ಮೂರು ಸೆಕೆಂದು ಕಳೆಯುವಾಗ ಮೆದುಳಿನ ಒಳಗೆ ಕೆಲವಾರು ಇರುವೆಗಳು ಚಲಿಸುತ್ತಿದ್ದಂತೆ, ಅವುಗಳ ಕಾಲುಗಳು ಚಿಕ್ಕದಾಗಿ ಇರಿಯುತ್ತಿರುವಂತೆ ಭಾಸವಾಗುತ್ತದೆ. ಈ ನೋವನ್ನು ಸಹಿಸಿಕೊಂಡು ಕೆಲಸವನ್ನು ಮುಂದುರೆಸುತ್ತೀರಿ. ಕೊಂಚ ಹೊತ್ತಿನ ಬಳಿಕ ಇನೊಂದು ಆಘಾತ ಎದುರಾಗುತ್ತದೆ.

ತಲೆಯೊಳಗಿದ್ದ ಇರುವೆಗಳೆಲ್ಲಾ ಆನೆಗಾತ್ರಕ್ಕೆ ಬೆಳೆಯುತ್ತವೆ ಹಾಗೂ ನಿಮ್ಮ ಮೆದುಳನ್ನು ತುಳಿಯುತ್ತಾ ಸಾಗುತ್ತವೆ. ತಲೆನೋವು ನಿಮಗೂ ಹೀಗೇ ಕಾಡುತ್ತಿದೆಯೇ? ಹೆಚ್ಚಿನ ತಲೆನೋವುಗಳು ಹೀಗೇ ಇರುತ್ತವೆ. ಒಂದು ವೇಳೆ ನಿಮಗೆ ಈ ತಲೆನೋವು ಸತತವಾಗಿ ಕಾಡುತ್ತಿದ್ದರೆ ಇದಕ್ಕೆ ಹತ್ತು ಕಾರಣಗಳು ಹೀಗಿರಬಹುದು ಹಾಗೂ ಇವುಗಳ ಅಭ್ಯಾಸವನ್ನು ಕಡೆಗಣಿಸಿದರೆ ತಲೆನೋವು ತನ್ನಿಂತಾನೇ ಕಡಿಮೆಯಾಗುವ ಸಾಧ್ಯತೆಯೂ ಹೆಚ್ಚು. ಬನ್ನಿ, ಈ ಕಾರಣಗಳು ಯಾವುವು ಎಂಬುದನ್ನು ನೋಡೋಣ...  

ನೀವು ಅತಿಯಾಗಿ ಕಾಫಿ ಕುಡಿಯುತ್ತೀರಿ

ನೀವು ಅತಿಯಾಗಿ ಕಾಫಿ ಕುಡಿಯುತ್ತೀರಿ

ಕಾಫಿ ಒಂದು ಎರಡಲುಗಿನ ಕತ್ತಿಯಿದ್ದಂತೆ. ಕಾಫಿಯನ್ನು ಸೂಕ್ತ ಸಮಯದಲ್ಲಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರವೇ ಇದರ ಪ್ರಯೋಜನಗಳು ದೊರಕುತ್ತವೆಯೇ ಹೊರತು ತಪ್ಪಾದ ಸಮಯ ಮತ್ತು ಮಿತಿಮೀರಿದ ಪ್ರಮಾಣವೆರಡೂ ಕಾಫಿಯನ್ನು ವಿಷವಾಗಿಸಬಹುದು! ಆದ್ದರಿಂದ ಕಾಫಿಯ ಸೇವನೆಯ ಸಮಯ ಮತ್ತು ಪ್ರಮಾಣದ ಮೇಲೆ ಮಿತಿ ಇರಲಿ. ಆಹಾರ ತಜ್ಞರ ಪ್ರಕಾರ ಬೆಳಗ್ಗಿನ ಒಂದು ಕಪ್ ಮತ್ತು ಸಂಜೆಯ ವೇಳೆಗೆ ಒಂದು ಕಪ್ ಕಾಫಿ ಸೂಕ್ತ ಪ್ರಮಾಣವಾಗಿದೆ ಅದರಲ್ಲೂ ಸಂಜೆ ಆರುವರೆಯ ನಂತರದ ಕಾಫಿ ಸೇವನೆ ವಿಷಕ್ಕೆ ಸಮಾನ.

ಅತಿಯಾದ ನಿದ್ದೆ

ಅತಿಯಾದ ನಿದ್ದೆ

ಅಗತ್ಯಕ್ಕೂ ಹೆಚ್ಚಾದ ನಿದ್ದೆ ಮಾಡುವ ಮೂಲಕ ವಾರಾಂತ್ಯದಲ್ಲಿ ನಡುವೆ ಎಚ್ಚರಾಗುತ್ತದೆ ಹಾಗೂ ಎದ್ದಾಗ ಭಾರೀ ತಲೆನೋವಿರುತ್ತದೆ. ಹಾಗಾಗಿ ವಾರಾಂತ್ಯವನ್ನೂ ಸೇರಿಸಿ ಎಲ್ಲಾ ದಿನಗಳಲ್ಲಿ ಕ್ಲುಪ್ತಕಾಲಕ್ಕೆ ನಿದ್ರಿಸಿ ಕ್ಲುಪ್ತಕಾಲದಲ್ಲಿ ಎಚ್ಚರಾಗುವ ಮೂಲಕ ತಲೆನೋವಾಗುವುದನ್ನು ತಪ್ಪಿಸಿಕೊಳ್ಳಬಹುದು.

 ನಿಮ್ಮ ಕಾರ್ಯದ ಸ್ಥಳವನ್ನು ದ್ವೇಷಿಸುತ್ತೀರಿ

ನಿಮ್ಮ ಕಾರ್ಯದ ಸ್ಥಳವನ್ನು ದ್ವೇಷಿಸುತ್ತೀರಿ

ನಮ್ಮಲ್ಲಿ ಹೆಚ್ಚಿನವರು ನಮ್ಮ ಕಾರ್ಯಸ್ಥಳದಲ್ಲಿ ದಿನದ ಹೆಚ್ಚಿನ ಮತ್ತು ಪ್ರಮುಖ ಸಮಯವನ್ನು ಕಳೆಯುತ್ತೇವೆ. ಒಂದು ವೇಳೆ ಯಾವುದೋ ಒತ್ತಡ ಅಥವಾ ಅನಿವಾರ್ಯತೆಯಿಂದ ನಿಮಗಿಷ್ಟವಿಲ್ಲದ ಸ್ಥಳದಲ್ಲಿ ಕೆಲಸ ಮಾಡಬೇಕಾಗಿ ಬಂದರೆ ಇದು ತಲೆನೋವಿಗೆ ಅವ್ಯಕ್ತ ಕಾರಣವಾಗಿರಬಹುದು. ನೀವು ಕಾರ್ಯನಿರ್ವಹಿಸುವ ಸ್ಥಳ ಒತ್ತಡರಹಿತವಾಗಿದ್ದು ಧನಾತ್ಮಕವೂ ಆಗಿರಬೇಕು. ನಿಮ್ಮ ಕಾರ್ಯಸ್ಥಳ ನಿಮ್ಮ ಇಚ್ಛೆಗೆ ವಿರುದ್ದವಾಗಿದ್ದರೆ ಇದು ಋಣಾತ್ಮಕ ಪರಿಣಾಮವನ್ನು ಬೀರುವ ಮೂಲಕ ಸತತ ತಲೆನೋವಿಗೆ ಕಾರಣವಾಗಬಹುದು.

ನಿಮ್ಮ ವೈಯಕ್ತಿಕ ಜೀವನ ಗೋಜಲುಮಯವಾಗಿದೆ

ನಿಮ್ಮ ವೈಯಕ್ತಿಕ ಜೀವನ ಗೋಜಲುಮಯವಾಗಿದೆ

ಕಾರ್ಯದ ಸ್ಥಳದಂತೆಯೇ ನಿಮ್ಮ ಮನೆಯ ವಾತಾವರಣವೂ ಧನಾತ್ಮಕವಾರುವುದು ಅಷ್ಟೇ ಮುಖ್ಯವಾಗಿದೆ. ಅಲ್ಲದೇ ಪ್ರತಿಯೊಬ್ಬರೂ ದಿನದ ಪರಿಶ್ರಮದ ಬಳಿಕ ತೆರಳುವುದು ಮನೆ ಎಂಬ ಸ್ವರ್ಗಕ್ಕೇ ಅಲ್ಲವೇ? ಒಂದು ವೇಳೆ ಮನೆಯಲ್ಲಿ ನಿಮ್ಮ ಸಂಗಾತಿ ಸತತವಾಗಿ ದೂಷಿಸುವ ವ್ಯಕ್ತಿಯಾಗಿದ್ದರೆ? ಅಥವಾ ನಿಮ್ಮ ಆತ್ಮೀಯ ವಲಯದಲ್ಲಿರುವವರೊಂದಿಗೆ ನಿಮ್ಮ ಸತತ ಜಗಳ ಕಲಹ ನಡೆಯುತ್ತಿದ್ದು ನಿಮ್ಮ ಶಕ್ತಿಯನ್ನೆಲ್ಲಾ ಉಡುಗಿಸುತ್ತಿದ್ದರೆ ಇದು ಖಂಡಿತವಾಗಿಯೂ ನಿಮ್ಮ ತಲೆನೋವಿಗೆ ಮೂಲವಾಗಿರುತ್ತದೆ. ಅಲ್ಲದೇ ತಲೆನೋವಿನ ಉಗ್ರರೂಪವಾದ ಮೈಗ್ರೇನ್ ಆವರಿಸಿದರೂ ಅತಿಶಯೋಕ್ತಿಯಲ್ಲ!

ನಿಮ್ಮ ಕಂಪ್ಯೂಟರ್ ಪರದೆಯ ಪ್ರಖರತೆ ತೀರಾ ಹೆಚ್ಚಾಗಿದೆ

ನಿಮ್ಮ ಕಂಪ್ಯೂಟರ್ ಪರದೆಯ ಪ್ರಖರತೆ ತೀರಾ ಹೆಚ್ಚಾಗಿದೆ

ನಮ್ಮ ಕಣ್ಣುಗಳು ಪ್ರಖರ ಬೆಳಕನ್ನು ಸತತವಾಗಿ ಪಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿಲ್ಲ. ಒಂದು ವೇಳೆ ನಿಮ್ಮ ಕಂಪ್ಯೂಟರ್ ಪರದೆ ತೀರಾ ಪ್ರಖರವಾಗಿದ್ದರೆ ಕಣ್ಣುಗಳು ವಿಪರೀತವಾಗಿ ದಣಿಯುತ್ತವೆ. ಕೆಲವಾರು ಘಂಟೆಗಳ ಕಾಲ ಈ ಪ್ರಖರ ಬೆಳಕು ಕಣ್ಣುಗಳ ಮೂಲಕ ನೋಡುತ್ತಿದ್ದರೆ ಕಡೆಕಡೆಗೆ ಈ ಪರದೆ ಕಾರಿನ ಹೆಡ್ ಲೈಟ್ ನ ಪ್ರಖರ ಬೆಳಕನ್ನು ನೋಡುವಂತೆ ಕಾಣತೊಡಗುತ್ತದೆ. ಹೀಗಾದರೆ ತಲೆನೋವು ಆವರಿಸುವುದು ನಿಶ್ಚಿತ. ಇದಕಕಗಿ ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಆಂಟಿ ಗ್ಲೇರ್ ಸ್ಕ್ರೀನ್ ಒಂದನ್ನು ಅಳವಡಿಸಿಕೊಳ್ಳಿ ಹಾಗೂ ಪ್ರಖರತೆಯನ್ನು ಕಡಿಮೆಗೊಳಿಸಿ. ಇದರಿಂದ ನಿಮ್ಮ ಕಣ್ಣಿನ ಪಾಪೆಗಳಿಗೆ ಹೆಚ್ಚಿನ ದಣಿವು ಎದುರಾಗುವುದಿಲ್ಲ.

ನೀವು ಕುಳಿತುಕೊಳ್ಳುವ ಭಂಗಿ ತಪ್ಪಾಗಿದೆ

ನೀವು ಕುಳಿತುಕೊಳ್ಳುವ ಭಂಗಿ ತಪ್ಪಾಗಿದೆ

ಆಸಕ್ತಿ ಇದರ ತರಗತಿಯಲ್ಲಿ ಎದುರಾಗುವ ನಿದ್ದೆಯ ಮೂಲಕ ಶರೀರದ ಭಂಗಿಯೂ ಬದಲಾಗುತ್ತದೆ ಹಾಗೂ ನಿದ್ದೆಯಿಂದ ಥಟ್ಟನೇ ಎದ್ದಾಗ ಸೆಳೆಯಲ್ಪಡುವ ಸ್ನಾಯುಗಳು ಕುತ್ತಿಗೆ ನೋವು, ಸೊಂಟನೋವನ್ನೂ ತಂದೊಡ್ಡಬಹುದು. ಅಲ್ಲದೇ ಇತರ ಸಮಯಗಳಲ್ಲಿಯೂ ತಪ್ಪಾದ ಭಂಗಿಗಳಲ್ಲಿ ಕುಳಿತುಕೊಂಡಿದ್ದರೆ ಮೆದುಳುಬಳ್ಳಿಯ ಮೇಲೆ ಬೀಳುವ ಹೆಚ್ಚಿನ ಸಳೆತ ತಲೆನೋವಿಗೂ ಕಾರಣವಾಗಬಹುದು. ಬೆನ್ನುಹುರಿ ನೆಟ್ಟಗಿರುವಂತೆ ಕುಳಿತುಕೊಳ್ಳುವ ಭಂಗಿಗಳ ಮೂಲಕ ಹೆಚ್ಚಿನ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಈ ಮೂಲಕ ತಲೆನೋವು ಹಾಗೂ ಇತರ ನೋವುಗಲು ಆವರಿಸುವುದನ್ನು ತಡೆಗಟ್ಟಬಹುದು.

ಹೆಚ್ಚಿನ ಸಮಯ ಪ್ರಬಲ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು

ಹೆಚ್ಚಿನ ಸಮಯ ಪ್ರಬಲ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು

ತಲೆನೋವಿಗೆ ಕೆಲವು ಬಗೆಯ ವಾಸನೆಗಳು ಪ್ರಚೋದನೆ ನೀಡುತ್ತವೆ. ಕೆಲವು ರಾಸಾಯನಿಕಗಳು ಅಥವಾ ಔಷಧಿ ಅಥವಾ ಸ್ವಚ್ಛಕಾರಕಗಳ ವಾಸನೆಯೂ ತಲೆನೋವಿಗೆ ಕಾರಣವಾಗಬಹುದು. ಒಂದು ವೇಳೆ ನೀವು ಕೆಲಸ ಮಾಡುವ ಅಥವಾ ವಾಸ್ತವ್ಯವಿರುವ ಸ್ಥಳದಲ್ಲಿ ಈ ಪರಿಮಳ ಸದಾ ಇರುತ್ತಿದ್ದರೆ ಒಂದೇ ಈ ಸ್ಥಳದ ಬದಲಾವಣೆಗೆ ಯತ್ನಿಸಿ ಅಥವಾ ಪ್ರದೂಷಣೆಯನ್ನು ನಿವಾರಿಸುವ ಮುಖವಾಡವೊಂದನ್ನು ಧರಿಸಿ. ತಕ್ಷಣಕ್ಕೆ ಏನೂ ಸಿಗದೇ ಇದ್ದರೆ ನಿಮ್ಮ ಬಳಿ ಇರುವ ಕರವಸ್ತ್ರ ಅಥವಾ ಸಾಮಾನ್ಯ ಟಿಶ್ಯೂ ಕಾಗದವನ್ನೇ ನೀರಿನಲ್ಲಿ ಮುಳುಗಿಸಿ ಹಿಂಡಿ ಮುಖವಾಡದ ಬದಲು ಉಪಯೋಗಿಸಿ.

ನಿಮ್ಮ ತಲೆಗೂದಲಲ್ಲಿ ಅತಿ ಬಿಗಿಯಾಗಿ ಕಟ್ಟಿದ್ದೀರಿ

ನಿಮ್ಮ ತಲೆಗೂದಲಲ್ಲಿ ಅತಿ ಬಿಗಿಯಾಗಿ ಕಟ್ಟಿದ್ದೀರಿ

ಮಹಿಳೆಯರಿಗೆ ಎದುರಾಗುವ ತಲೆನೋವಿಗೆ ಬಿಗಿಯಾದ ತುರುಬು ಸಹಾ ಇನ್ನೊಂದು ಕಾರಣವಾಗಿದೆ. ಕೇಶವಿನ್ಯಾಸಕ್ಕಾಗಿ ಕೂದಲನ್ನು ಅತಿಯಾಗಿ ಸೆಳೆಯುವ ಬಾಬಿ ಪಿನ್ ಅಥವಾ ಅತಿಯಾಗಿ ಬಿಗಿಯಾದ ಪೋನಿ ಟೇಲ್ ಜುಟ್ಟನ್ನು ಹೊಂದಲೂ ಸಹಾ ತಲೆಗೂದಲನ್ನು ಬಿಗಿಯಾಗಿಸುವುದು ತಲೆನೋವಿಗೆ ಕಾರಣವಾಗಿದೆ. ಹಾಗಾಗಿ ಈ ಅಭ್ಯಾಸವಿರುವ ಮಹಿಳೆಯರು ತಮ್ಮ ಸೌಂದರ್ಯಕ್ಕಿಂತಲೂ ಆರೋಗ್ಯಕ್ಕೇ ಹೆಚ್ಚಿನ ಮಹತ್ವ ನೀಡಿ ತಲೆಗೂದಲು ಸಡಿಲವಾಗಿರುವ ಕೇಶವಿನ್ಯಾಸವನ್ನು ಅಳವಡಿಸಿಕೊಂಡರೆ ಈ ತೊಂದರೆ ಇಲ್ಲವಾಗುತ್ತದೆ.

ಇಡಿಯ ದಿನ ಫೋನ್ ನಲ್ಲಿ ಮುಳುಗಿರುವುದು

ಇಡಿಯ ದಿನ ಫೋನ್ ನಲ್ಲಿ ಮುಳುಗಿರುವುದು

ಇಂದು ಸ್ಮಾರ್ಟ್ ಫೋನ್ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಒಂದು ವೇಳೆ ಮೊಬೈಲ್ ಫೋನಿನ ಬಳಕೆ ಅತಿ ಎನಿಸುವಷ್ಟಿದ್ದರೆ ಇದರ ಮೂಲಕ ನೀವು ಕುತ್ತಿಗೆಯ ನರಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದೀರಿ. ಇದರೊಂದಿಗೆ ಹಲವು ಆಲೋಚನೆಗಳಿಂದ ವ್ಯಸ್ತವಾಗಿರುವ ಮೆದುಳಿಗೆ ಸಹಾ ಸೂಕ್ತ ವಿರಾಮ ದೊರಕದೇ ತಲೆನೋವಿಗೆ ಕಾರಣವಾಗಬಹುದು.

ನೀವು ಸತತವಾಗಿ ಬಿಸಿಲಿಗೆ ಒಡ್ಡಿಕೊಳ್ಳುತ್ತಿದ್ದೀರಿ

ನೀವು ಸತತವಾಗಿ ಬಿಸಿಲಿಗೆ ಒಡ್ಡಿಕೊಳ್ಳುತ್ತಿದ್ದೀರಿ

ದಿನದ ಹೆಚ್ಚಿನ ಸಮಯ ನೀವು ಬಿಸಿಲಿನಲ್ಲಿಯೇ ಇರುವ ಸಂದರ್ಭ ಎದುರಾದರೆ ಹಾಗೂ ನಿಮ್ಮ ಸುತ್ತಲೂ ಸಾವಿರ ವ್ಯಾಟಿನ ಬಲ್ಬುಗಳು ಉರಿಯುವಷ್ಟು ಪ್ರಖರ ಬೆಳಕಿನಲ್ಲಿ ವಸ್ತುಗಳು ಬೆಳಗುತ್ತಿದ್ದರೆ ಇದು ದಣಿವಿನ ಜೊತೆಗೇ ತಲೆನೋವನ್ನೂ ಎದುರಿಸಬಹುದು. ಬಿಸಿಲಿಗೆ ಒಡ್ಡಿಕೊಳ್ಳುವುದು ಅನಿವಾರ್ಯವಾಗಿದ್ದರೆ ಸೂಕ್ತವಾದ ತಂಪು ಕನ್ನಡಕವನ್ನು ಬಳಸಿ, ಸೂರ್ಯನ ವಿಕಿರಣ ತಡೆಗಟ್ಟುವ ಕ್ರೀಮುಗಳನ್ನು ಬಳಸಿ ಹಾಗೂ ನೆರಳು ನೀಡುವ ಟೊಪ್ಪಿ ಅಥವಾ ಛತ್ರಿಯನ್ನು ಉಪಯೋಗಿಸಿ. ಸಾಕಷ್ಟು ನೀರು ಮತ್ತು ದ್ರವಾಹಾರಗಳನ್ನೂ ಸೇವಿಸಿ.

English summary

10 Reasons Why You Are Having Frequent Headaches

Wondering why you are having frequent headaches? It could be because your eyes are constantly burned by the glare of the computer, you are out in the sun too much, are being exposed to too harsh smells, or are constantly surrounded by negative energy in your workplace or at home.
Story first published: Monday, March 26, 2018, 15:04 [IST]