For Quick Alerts
ALLOW NOTIFICATIONS  
For Daily Alerts

ಬಾದಾಮಿ ಹಾಲು: ಇದರ ಆರೋಗ್ಯ ಲಾಭ ಕೇಳಿದರೆ ಅಚ್ಚರಿಗೊಳ್ಳುವಿರಿ!

By Hemanth
|

ಬಾದಾಮಿ ಸ್ವಲ್ಪ ದುಬಾರಿಯಾದರೂ ಅದರಲ್ಲಿರುವ ಕೆಲವೊಂದು ಪೌಷ್ಠಿಕಾಂಶಗಳು ದೇಹಕ್ಕೆ ತುಂಬಾ ಲಾಭಗಳನ್ನು ಒದಗಿಸಿಕೊಡುವುದು. ಬಾದಾಮಿಯಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಪೋಸ್ಪರಸ್, ಕಬ್ಬಿಣ, ಮೆಗ್ನಿಶಿಯಂ,ಸೆಲೇನಿಯಂ, ಸತು ಮತ್ತು ನಿಯಾಸಿನ್ ಇದೆ. ಬಾದಾಮಿ ಹಾಲು ತುಂಬಾ ಶಕ್ತಿಯುತ ಪೇಯ ಎಂದು ನಂಬಲಾಗಿದೆ. ಬಾದಾಮಿನ್ನು ಪುಡಿ ಮಾಡಿಕೊಂಡು ಅದರ ಹಾಲು ತಯಾರಿಸಿದರೆ ಅದು ಹಸುವಿನ ಹಾಲಿಗೂ ಪರ್ಯಾಯವಾಗಿದೆ. ಬಾದಾಮಿ ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಮತ್ತು ಇದರಿಂದ ಇದು ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಿದರೆ ಇರುವವರಿಗೆ ಒಳ್ಳೆಯ ಆಯ್ಕೆ ಎಂದು ಪರಿಗಣಿಸಲಾಗಿದೆ. ಬಾದಾಮಿ ಹಾಲಿನಲ್ಲಿ ಲ್ಯಾಕ್ಟೋಸ್ ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಬಾದಾಮಿಯನ್ನು ನೀರಿನಲ್ಲಿ ನೆನೆಯಲು ಹಾಕಿ ಬಳಿಕ ರುಬ್ಬಿಕೊಂಡು ಹಾಲು ತಯಾರಿಸಲಾಗುವುದು.

ಇದು ಬಾದಾಮಿ ಹಾಲು+ ಜೇನುತುಪ್ಪದ ಜೋಡಿಗೆ ನಮ್ಮದೊಂದು ಸಲಾಂ!

ಮನೆಯಲ್ಲಿ ಬಾದಾಮಿ ಹಾಲು ತಯಾರಿಸುವ ತುಂಬಾ ಸುಲಭ ವಿಧಾನ.
ಬಾದಾಮಿ ಹಾಲಿನಿಂದ ಸಿಗುವಂತಹ ಆರೋಗ್ಯ ಲಾಭಗಳೆಂದರೆ ಇದು ತೂಕ ಕಳೆದುಕೊಳ್ಳಲು, ಮೂಳೆಗಳನ್ನು ಬಲಗೊಳಿಸಲು, ಹೃದಯದ ಆರೋಗ್ಯ ಮತ್ತು ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಮನೆಯಲ್ಲೇ ತಯಾರಿಸಿದ ಬಾದಾಮಿ ಹಾಲಿನಲ್ಲಿ ಸಿಗುವ ಪೋಷಕಾಂಶಗಳು ಯಾವುದು ಎಂದು ತಿಳಿಯಿರಿ

ರಕ್ತದೊತ್ತಡ ಕಡಿಮೆ ಮಾಡುವುದು

ರಕ್ತದೊತ್ತಡ ಕಡಿಮೆ ಮಾಡುವುದು

ಬಾದಾಮಿ ಹಾಲು ಸೇವನೆಯಿಂದ ರಕ್ತದೊತ್ತಡ ತಗ್ಗಿಸಿ ಅದನ್ನು ನಿಯಂತ್ರಿಸಲು ನೆರವಾಗುವುದು. ಸೋಯಾ ಮತ್ತು ಹಾಲಿನ ಉತ್ಪನ್ನಗಳಿಗೆ ಅಸಹಿಷ್ಣುತೆ ಇರುವವರಿಗೆ ಇದು ತುಂಬಾ ಒಳ್ಳೆಯ ಪರಿಹಾರ. ರಕ್ತದ ಪರಿಚಲನೆಯು ಸರಿಯಾಗಿ ಆಗದೆ ಇದ್ದರೆ ಅದರಿಂದ ರಕ್ತದೊತ್ತಡ ಕಾಡುವುದು ಮತ್ತು ಬಾದಾಮಿ ಹಾಲು ರಕ್ತದೊತ್ತಡ ನಿವಾರಿಸುವುದು.

ಕಿಡ್ನಿ ಕ್ರಿಯೆ ಸುಧಾರಣೆ

ಕಿಡ್ನಿ ಕ್ರಿಯೆ ಸುಧಾರಣೆ

ಬಾದಾಮಿ ಹಾಲಿನಲ್ಲಿ ಪೊಟಾಶಿಯಂ, ಪೋಸ್ಪರಸ್ ತುಂಬಾ ನಿಗದಿತ ಪ್ರಮಾಣದಲ್ಲಿದೆ. ಇದರಿಂದ ಕಿಡ್ನಿ ಸಮಸ್ಯೆ ಇರುವಂತವರು ಈ ಹಾಲನ್ನು ಸುರಕ್ಷಿತವಾಗಿ ಸೇವಿಸಬಹುದು. ಖನಿಜಾಂಶ ಅಧಿಕ ಇರುವಂತಹ ಆಹಾರಗಳನ್ನು ಕಿಡ್ನಿ ಸಮಸ್ಯೆ ಇರುವವರು ಸೇವಿಸಲ್ಲ.

ಆರೋಗ್ಯಕರ ಹೃದಯಕ್ಕೆ

ಆರೋಗ್ಯಕರ ಹೃದಯಕ್ಕೆ

ಕೊಲೆಸ್ಟ್ರಾಲ್ ಇಲ್ಲದೆ ಇರುವಂತಹ ಬಾದಾಮಿ ಹಾಲು ಹೃದಯವನ್ನು ಬಲ ಹಾಗೂ ಆರೋಗ್ಯವಾಗಿರಿಸುವುದು. ಬಾದಾಮಿ ಹಾಲನ್ನು ಸೇವಿಸುವುದರಿಂದ ಪರಿಧಮನಿ ಹೃದಯ ಕಾಯಿಲೆಗಳನ್ನು ತಡೆಯಬಹುದು ಎಂದು ಅಧ್ಯಯನಗಳು ಹೇಳುತ್ತದೆ. ಬಾದಾಮಿ ಹಾಲಿನಲ್ಲಿರುವ ಪೊಟಾಶಿಯಂ ಹೃದಯದ ಒತ್ತಡ ಮತ್ತು ಭಾರ ಕಡಿಮೆ ಮಾಡುವುದು.

ಸ್ನಾಯುಗಳು ಬಲಗೊಳ್ಳುವುದು

ಸ್ನಾಯುಗಳು ಬಲಗೊಳ್ಳುವುದು

ಬಾದಾಮಿ ಹಾಲಿನಲ್ಲಿ ವಿಟಮಿನ್ ಬಿಯ ಒಂದು ರೂಪ ರಿಬೊಫ್ಲಾವಿನ್ ಇದೆ. ಇದು ಇತರ ಕೆಲವು ಖನಿಜಾಂಶಗಳೊಂದಿಗೆ ಕೆಲಸ ಮಾಡಿ ಸ್ನಾಯುಗಳ ಬೆಳವಣಿಗೆ ಮತ್ತು ಬಲಗೊಳ್ಳಲು ನೆರವಾಗುವುದು. ಬಾದಾಮಿ ಹಾಲಿನಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ. ಇದು ದೇಹದ ಕೋಶಗಳು ಮತ್ತು ಅಂಗಾಂಶಗಳನ್ನು ಸಮತೋಲನದಲ್ಲಿಡುವುದು.

ದೃಷ್ಟಿ ಸುಧಾರಣೆ

ದೃಷ್ಟಿ ಸುಧಾರಣೆ

ಬಾದಾಮಿ ಹಾಳಿನಲ್ಲಿ ವಿಟಮಿನ್ ಎ ಕೂಡ ಇದ್ದು, ಕಣ್ಣಿನ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಗತ್ಯ. ದೃಷ್ಟಿ ಸುಧಾರಣೆ ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಬಾದಾಮಿ ಹಾಲಿನ ಸೇವನೆ ಹೆಚ್ಚಿಸಿ.

ಕ್ಯಾನ್ಸರ್ ತಡೆಗಟ್ಟುವ ಅಂಶಗಳು

ಕ್ಯಾನ್ಸರ್ ತಡೆಗಟ್ಟುವ ಅಂಶಗಳು

ಬಾದಾಮಿ ಹಾಲಿನ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಆಗದಂತೆ ತಡೆಯುವುದು. ಇದು ಪ್ರಮುಖವಾಗಿ ಜನನೇಂದ್ರಿಯ ಕ್ಯಾನ್ಸರ್ ತಡೆಯುವುದು. ಬಾದಾಮಿ ಹಾಲಿನ ಸೇವನೆ ಹೆಚ್ಚಿಸಿದರೆ ಅದರಿಂದ ಸ್ತನ ಕ್ಯಾನ್ಸರ್ ಬರುವುದನ್ನು ತಡೆಯಬಹುದು.

ಆರೋಗ್ಯಕರ ಮೂಳೆಗಳಿಗಾಗಿ

ಆರೋಗ್ಯಕರ ಮೂಳೆಗಳಿಗಾಗಿ

ಹಲ್ಲು ಮತ್ತು ಮೂಳೆಗಳು ಬಲವಾಗಿರುವಂತೆ ಕಾಪಾಡಲು ಕ್ಯಾಲ್ಸಿಯಂ ಬೇಕಾಗುವುದು. ಬಾದಾಮಿ ಹಾಲಿನಲ್ಲಿ ಕ್ಯಾಲ್ಸಿಯಂ ಇದೆ. ಕ್ಯಾಲ್ಸಿಯಂ ಸ್ನಾಯುಗಳಿಗೆ ಆರಾಮ ನೀಡುವುದು, ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದು ಮತ್ತು ಹೃದಯ ಬಡಿತ ಸಾಮಾನ್ಯವಾಗಿಡುವುದು. ಅಸ್ಥಿರಂಧ್ರತೆಯನ್ನು ತಡೆಯಲು ಕ್ಯಾಲ್ಸಿಯಂ ನೆರವಾಗುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಬಾದಾಮಿ ಹಾಲಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಇದು ಪ್ರತಿರೋಧಕ ವ್ಯವಸ್ಥೆಯ ಆರೋಗ್ಯ ಕಾಪಾಡುವುದು. ಪ್ರತಿರೋಧಕ ವ್ಯವಸ್ಥೆಯು ಕೀಟಾಣುಗಳು ಮತ್ತು ಇತರ ಸೂಕ್ಷ್ಮಾಣು ಜೀವಿಗಳು ರೋಗ ಹರಡುವುದನ್ನು ತಡೆಯುವುದು.

ಕ್ಯಾಲರಿ ಕಡಿಮೆ

ಕ್ಯಾಲರಿ ಕಡಿಮೆ

ಹಸುವಿನ ಹಾಲಿಗೆ ಹೋಲಿಸಿದರೆ ಬಾದಾಮಿ ಹಾಲಿನಲ್ಲಿ ಕ್ಯಾಲರಿ ಕಡಿಮೆ ಇದೆ. ಒಂದು ಕಪ್ ಸಕ್ಕರೆ ಹಾಕದೆ ಇರುವ ಬಾದಾಮಿ ಹಾಲಿನಲ್ಲಿ 30-50ರಷ್ಟು ಕ್ಯಾಲರಿ ಇದೆ. ಇದರಿಂದ ತೂಕ ಕಡಿಮೆ ಮಾಡಿಕೊಂಡು ಮಧುಮೇಹದಂತಹ ಪರಿಸ್ಥಿತಿ ತಡೆಯಲು ನೆರವಾಗುವುದು.

ಸಕ್ಕರೆಯಂಶ ಕಡಿಮೆ

ಸಕ್ಕರೆಯಂಶ ಕಡಿಮೆ

ಪ್ಯಾಕ್ ಮಾಡಲ್ಪಟ್ಟಿರುವ ಬಾದಾಮಿ ಹಾಲಿನಲ್ಲಿ ಕೃತಕ ಸಿಹಿ ಹಾಕಿರುವರು. ಇದರಿಂದ ಮನೆಯಲ್ಲಿ ತಯಾರಿಸಿದ ಬಾದಾಮಿ ಹಾಲಿನಲ್ಲಿ ಸಕ್ಕರೆಯಂಶ ಕಡಿಮೆ ಇರುವುದು. ಮನೆಯಲ್ಲೇ ತಯಾರಿಸಿಕೊಂಡ ಬಾದಾಮಿ ಹಾಲನ್ನು ಮಧುಮೇಹಿಗಳು ಯಾವುದೇ ಚಿಂತೆಯಿಲ್ಲದೆ ಕುಡಿಯಬಹುದು.

English summary

10 Nutrition Facts Of Homemade Almond Milk

Almond milk contains no lactose or cholesterol and it's prepared by soaking the almonds in water and then later on crushing them in the blender. This is the easiest way to enjoy almond milk at home. The health benefits of almond milk range from losing weight and maintaining stronger bones to having a healthy heart and kidney function.
X
Desktop Bottom Promotion