ಕರುಳಿನ ಕ್ಯಾನ್ಸರ್ ಬಗ್ಗೆ ತಿಳಿಯಲೇ ಬೇಕಾದ ಹತ್ತು ಸಂಗತಿಗಳು

Posted By: Hemanth
Subscribe to Boldsky

ಕ್ಯಾನ್ಸರ್ ಅನ್ನುವುದು ತುಂಬಾ ಮಾರಕ ಕಾಯಿಲೆ. ಅದಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಸಿಗದೆ ಇದ್ದರೆ ಆಗ ಪ್ರಾಣಹಾನಿಯಾಗುವುದು ಖಚಿತ. ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಒಂದು ಕರುಳಿನ ಕ್ಯಾನ್ಸರ್. ಈ ಕ್ಯಾನ್ಸರ್ ಬಗ್ಗೆ ಮಾರ್ಚ್ ತಿಂಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರಗಳು ಕೂಡ ನಡೆಯುವುದು. ಇದರಲ್ಲಿ ಕರುಳಿನ ಕ್ಯಾನ್ಸರ್ ಅನ್ನು ಮೀರಿ ಬಂದವರು ಇದರ ಬಗ್ಗೆ ಜಾಗೃತಿ ಮೂಡಿಸುವರು.

ಹಳ್ಳಿಗಾಡಿನ ತೆಂಗಿನ ಎಣ‍್ಣೆ ದೊಡ್ಡ ಕರುಳಿನ ಕ್ಯಾನ್ಸರ್‌ನ್ನು ನಿಯಂತ್ರಿಸುತ್ತದೆ!

ಕ್ಯಾನ್ಸರ್‪ನಲ್ಲಿ ಅತೀ ಹೆಚ್ಚು ಮಂದಿ ಬಲಿಯಾಗಿರುವುದು ಕರುಳಿನ ಕ್ಯಾನ್ಸರ್ ಗೆ ಅಮೆರಿಕಾ ಒಂದರಲ್ಲೇ 2015ರಲ್ಲಿ 93,090 ಮಂದಿ ಕ್ಯಾನ್ಸರ್ ಗೆ ಗುರಿಯಾಗಿದ್ದಾರೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಮೂರನೇ ಹಾಗೂ ಮಹಿಳೆಯರಲ್ಲಿ ಕಾಣಿಸುವ ಎರಡನೇ ವಿಧದ ಕ್ಯಾನ್ಸರ್ ಕರುಳಿನ ಕ್ಯಾನ್ಸರ್. ಕರುಳಿನ ಕ್ಯಾನ್ಸರ್ ಎಂದರೇನು? ಇದು ಮೊದಲು ತುಂಬಾ ಒಳಪದರದಲ್ಲಿ ಆರಂಭದಲ್ಲಿ ಬಳಿಕ ಕರುಳು ಮತ್ತು ಗುದನಾಳದ ಎಲ್ಲಾ ಕೋಶಗಳಿಗೆ ಹರಡುವುದು.

ಜನರಿಗೆ ಇದರ ಲಕ್ಷಣ ತಿಳಿದುಬರಲ್ಲ

ಜನರಿಗೆ ಇದರ ಲಕ್ಷಣ ತಿಳಿದುಬರಲ್ಲ

ಆರಂಭಿಕ ಹಂತದಲ್ಲೇ ಕರುಳಿನ ಕ್ಯಾನ್ಸರ್ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಬಹುದು. ಆದರೆ ಅಚ್ಚರಿಯೆಂದರೆ ಕರುಳಿನ ಕ್ಯಾನ್ಸರ್ ನಲ್ಲಿ ಹೊಸ ಪಾಲಿಪ್ಸ್ ಗಳು ಮತ್ತು ಅಸಾಮಾನ್ಯ ಕೋಶಗಳು ಬೆಳೆಯಲು 10-15 ವರ್ಷ ಬೇಕಾಗುವುದು. ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಸಲಹೆ ನೀಡುವಂತೆ ಕರುಳಿನ ಕ್ಯಾನ್ಸರ್‌ನ ಸ್ಕ್ರೀನಿಂಗ್ 50ರ ಹರೆಯದಲ್ಲಿ ಆರಂಭವಾಗುವುದು ಮತ್ತು ಕ್ಯಾನ್ಸರ್ ನ ಕುಟುಂಬ ಇತಿಹಾಸ ಇರುವವರು ವೈದ್ಯರನ್ನು ಮೊದಲು ಸಂಪರ್ಕಿಸಬೇಕು.

ಕರುಳಿನ ಕ್ಯಾನ್ಸರ್ ಬರುವುದು ಅಧಿಕ

ಕರುಳಿನ ಕ್ಯಾನ್ಸರ್ ಬರುವುದು ಅಧಿಕ

ಕರುಳಿನ ಕ್ಯಾನ್ಸರ್ ನ ಅರ್ಧದಷ್ಟು ಸಾವುಗಳು ಓಟ, ಭೌಗೋಳಿಕತೆ ಮತ್ತು ಶಿಕ್ಷಣದ ಅಸಾಮಾನ್ಯತೆಯಿಂದ ಕೂಡಿದೆ ಎಂದು ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಹೇಳಿದೆ. ಜನಾಂಗೀಯ ಅಲ್ಪಸಂಖ್ಯಾತರಾಗಿರುವವರು ಕರುಳಿನ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯು ಹೆಚ್ಚಿರುವುದು. ಕೆಲವೊಂದು ಜನಸಂಖ್ಯೆಯಲ್ಲಿ ಫಲಿತಾಂಶವು ತುಂಬಾ ಕೆಟ್ಟದಾಗಿರುವುದು.

ವೈದ್ಯರಿಗೆ ಲಕ್ಷಣ ತಿಳಿಯದೇ ಇರಬಹುದು

ವೈದ್ಯರಿಗೆ ಲಕ್ಷಣ ತಿಳಿಯದೇ ಇರಬಹುದು

ಕರುಳಿನ ಕ್ಯಾನ್ಸರ್‌ನ ಲಕ್ಷಣಗಳು ಕಂಡುಬಂದರೂ ಅದು ವೈದ್ಯರಿಗೆ ತಿಳಿಯದೆ ಇರುವ ಅಪಾಯವು ಇದೆ ಎಂದು 2014ರ ಅಧ್ಯಯನವು ಹೇಳಿದೆ. 1-20 ಮಂದಿ ಅಮೆರಿಕಾದ ಜನರು ಇಂತಹ ತಪ್ಪುಗಳಿಗೆ ಗುರಿಯಾಗಿದ್ದಾರೆ. ವಿವಿಧ ರೀತಿಯ ಪರೀಕ್ಷೆಗಳು ಒಂದೊಂದು ರೀತಿಯ ವರದಿ ನೀಡಬಹುದು. ಇದರಿಂದ ವೈದ್ಯರು ಗೊಂದಲಕ್ಕೀಡಾಗಬಹುದು. ಇದರಿಂದ ನೀವು ಎರಡನೇ ಸಲ ಪರೀಕ್ಷೆಗೊಳಗಾಗಿ.

ಟೈಪ್ 2 ಮಧುಮೇಹವು ಅಪಾಯ ಹೆಚ್ಚಿಸುವುದು

ಟೈಪ್ 2 ಮಧುಮೇಹವು ಅಪಾಯ ಹೆಚ್ಚಿಸುವುದು

ಉರಿಯೂತದ ಕರುಳಿನ ಚಲನೆ ಮತ್ತು ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಗಳು ಕರುಳಿನ ಕ್ಯಾನ್ಸರ್ ಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ. ಕ್ರೋಹನ್ಸ್ ಮತ್ತು ಅಲ್ಸರೇಟಿವ್ ಕೊಲಿಟಿಸ್ ನಂತಹ ಕಾಯಿಲೆಗಳು ಕರುಳಿನಲ್ಲಿ ದೀರ್ಘಕಾಲ ಉರಿಯೂತ ಉಂಟು ಮಾಡುವುದರಿಂದ ಇಂತವರಿಗೆ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ವಯಸ್ಸು ದೊಡ್ಡ ಅಪಾಯ ತಂದೊಡ್ಡಬಹುದು

ವಯಸ್ಸು ದೊಡ್ಡ ಅಪಾಯ ತಂದೊಡ್ಡಬಹುದು

ಕರುಳಿನ ಕ್ಯಾನ್ಸರ್ ಪುರುಷರು ಹಾಗೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು 50ರ ಹರೆಯದ ಬಳಿಕ. ವಯಸ್ಸಾಗುತ್ತಿರುವಂತೆ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯು ಹೆಚ್ಚಾಗಿರುವುದು. ಆದರೆ ಹದಿಹರೆಯದಲ್ಲೂ ಕೆಲವರಿಗೆ ಕರುಳಿನ ಕ್ಯಾನ್ಸರ್ ಬಂದಿರುವಂತಹ ಉದಾಹರಣೆಗಳು ಇವೆ.

ಜೀವನಶೈಲಿ ಕರುಳಿನ ಕ್ಯಾನ್ಸರ್ ನ ಅಪಾಯ ಹೆಚ್ಚಿಸಿದೆ

ಜೀವನಶೈಲಿ ಕರುಳಿನ ಕ್ಯಾನ್ಸರ್ ನ ಅಪಾಯ ಹೆಚ್ಚಿಸಿದೆ

ದೈನಂದಿನ ಜೀವನಶೈಲಿಯಲ್ಲಿ ಮಾಡಿಕೊಳ್ಳುವಂತಹ ಕೆಲವು ಬದಲಾವಣೆಗಳು ಕರುಳಿನ ಕ್ಯಾನ್ಸರ್ ನ ಅಪಾಯ ಹೆಚ್ಚಿಸುವುದು. ಧೂಮಪಾನದಿಂದ ಕರುಳಿನ ಕ್ಯಾನ್ಸರ್ ಬರುವ ಮತ್ತು ಅದಕ್ಕೆ ಬಲಿಯಾಗುವ ಸಾಧ್ಯತೆ ಶೇ.14ರಷ್ಟಿದೆ ಮತ್ತು ಬೊಜ್ಜಿನಿಂದಾಗಿ ಇದು ಶೇ.30ರಷ್ಟಿದೆ.ಅತಿಯಾಗಿ ಆಲ್ಕೋಹಾಲ್ ಸೇವನೆ, ವ್ಯಾಯಾಮದ ಕೊರತೆ ಮತ್ತು ಅತಿಯಾಗಿ ಕೆಂಪು ಹಾಗೂ ಸಂಸ್ಕರಿ ಮಾಂಸ ಸೇವನೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚು ಮಾಡುವುದು.

ಕೌಟುಂಬಿಕ ಹಿನ್ನೆಲೆಯ ಪರಿಣಾಮ

ಕೌಟುಂಬಿಕ ಹಿನ್ನೆಲೆಯ ಪರಿಣಾಮ

ಹತ್ತಿರದ ಸಂಬಂಧಿಗಳು(ಹೆತ್ತವರು, ಸೋದರಿಯರು ಇತ್ಯಾದಿ) ಕರುಳಿನ ಕ್ಯಾನ್ಸರ್ ಗೆ ಒಳಗಾಗಿದ್ದರೆ ಆ ಕುಟುಂಬದಲ್ಲಿ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯು ಮೂರು ಪಟ್ಟು ಹೆಚ್ಚಾಗಿರುವುದು. ಪಾಲಿಪ್ಸ್ ಗಳ ಕೌಟುಂಬಿಕ ಇತಿಹಾಸವು ಅಪಾಯದ ಮಟ್ಟ ಹೆಚ್ಚಿಸುವುದು. ಪಾಲಿಪ್ಸ್ ತುಂಬಾ ದೊಡ್ಡದಾಗಿದ್ದರೆ ಅಥವಾ ಇದರಲ್ಲಿ ಹಲವಾರು ಇದ್ದರೆ ಇಂತಹ ಸಾಧ್ಯತೆಯು ಹೆಚ್ಚಾಗಿರುವುದು.

ಆರಂಭಿಕ ಲಕ್ಷಣಗಳು ಗೋಚರಿಸದು

ಆರಂಭಿಕ ಲಕ್ಷಣಗಳು ಗೋಚರಿಸದು

ಗರ್ಭಕಂಠದ ಕ್ಯಾನ್ಸರ್ ಅಥವಾ ಶ್ವಾಸಕೋಶದ ಕ್ಯಾನ್ಸರ್ ನಂತೆ ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ತುಂಬಾ ಕಷ್ಟ. ಹೊಟ್ಟೆಯ ಹವ್ಯಾಸಗಳು, ಭೇದಿ, ಮಲದಲ್ಲಿ ರಕ್ತ, ಮಲಬದ್ಧತೆ, ಗ್ಯಾಸ್‌ನಿಂದ ಸದಾ ನೋವು, ಸೆಳೆತ, ತೂಕ ಕಳೆದುಕೊಳ್ಳುವುದು, ಹೊಟ್ಟೆಯುಬ್ಬರ ಇತ್ಯಾದಿಗಳು ಕಡೆಗಣಿಸಲಾರದ ಕೆಲವು ಲಕ್ಷಣಗಳು.

ವಿವಿಧ ಪರೀಕ್ಷಾ ವಿಧಾನಗಳಿವೆ

ವಿವಿಧ ಪರೀಕ್ಷಾ ವಿಧಾನಗಳಿವೆ

ಕೊಲೊನೋಸ್ಕೋಪಿ, ಸಿಗ್ಮೋಯಿಡೋಸ್ಕೊಪಿ, ಬೇರಿಯಂ ಎನಿಮಾ, ವರ್ಚುವಲ್ ಕೊಲೊನೋಸ್ಕೋಪಿಯಂತಹ ಪರೀಕ್ಷಾ ವಿಧಾನಗಳು ಇವೆ. ಎಕಲ್ ಪ್ರತಿರೋಧಕ ಪರೀಕ್ಷೆ ಮತ್ತು ಸ್ಟೂಲ್ ಜಿನ್ ಪರೀಕ್ಷೆಯು ಕರುಳಿನ ಕ್ಯಾನ್ಸರ್ ಅನ್ನು ಕಂಡುಹಿಡಿಯಬಲ್ಲದು. ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಯಾವ ರೀತಿಯ ಪರೀಕ್ಷೆ ಮಾಡಿಕೊಳ್ಳಬೇಕೆಂದು ತಿಳಿಯಿರಿ. ನಿಮ್ಮ ಜೀವನಶೈಲಿ ಮತ್ತು ಕೌಟುಂಬಿಕ ಇತಿಹಾಸ ತಿಳಿದು ಇದನ್ನು ಮಾಡಬೇಕಾಗುವುದು.

ನಿಯಮಿತ ಪರೀಕ್ಷೆಯಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು

ನಿಯಮಿತ ಪರೀಕ್ಷೆಯಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು

ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳುವುದರಿಂದ ಹಲವಾರು ಜೀವ ಕಾಪಾಡಬಹುದು ಮತ್ತು ಪಾಲಿಪ್ಸ್ ಗಳು ಕ್ಯಾನ್ಸರ್ ಆಗಿ ಪರಿವರ್ತನೆ ಯಾಗದಂತೆ ತಡೆಯಬಹುದು. ಪರೀಕ್ಷೆಯಿಂದ ಕರುಳಿನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಬಹುದು. ಆರೋಗ್ಯಕರ ಆಹಾರ ಸೇವನೆ ಮಾಡಿದರೆ ಕರುಳಿನ ಕ್ಯಾನ್ಸರ್ ಸಾಧ್ಯತೆ ತಡೆಯಬಹುದು.

ನಿಯಮಿತವಾಗಿ ಒಣಫಲಗಳನ್ನು ತಿಂದರೆ 'ಕರುಳಿನ ಕ್ಯಾನ್ಸರ್' ನಿಯಂತ್ರಣಕ್ಕೆ!

English summary

10 Important Facts About Colon Cancer You Should Know

Colon cancer or colorectal cancer is the second leading cause of death in the United States which affects both the men and women with 93,090 new cases noted in 2015. Colon cancer is the third most leading cause of cancer in men and the second most leading cause of cancer in women. So, what is colon cancer? It first starts in the innermost layer and can expand through all of the tissue layers that make up the colon and rectum.