ದಾಳಿಂಬೆ ಬೀಜಗಳ ಪ್ರಯೋಜನಗಳು ತಿಳಿದರೆ, ಇಷ್ಟಪಟ್ಟು ದಿನಾ ತಿನ್ನುವಿರಿ!

Posted By: Arshad Hussain
Subscribe to Boldsky

ದಾಳಿಂಬೆ ಹಣ್ಣಿನ ಬೀಜಗಳು ಕೊಂಚ ದೃಢವಾಗಿದ್ದರೂ ಇವುಗಳನ್ನು ಹಸಿಯಾಗಿ ಅಥವಾ ಒಣಗಿಸಿ ಸೇವಿಸುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ, ಕೆಲವಾರು ರೋಗಗಳು ಆವರಿಸುವ ಸಾಧ್ಯತೆ ಕಡಿಮೆಯಾಗಿಸುವುದು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಉತ್ಕರ್ಷಣಶೀಲ ಒತ್ತಡ, ಉರಿಯೂತ ಮೊದಲಾದವುಗಳನ್ನು ಕಡಿಮೆಯಾಗಿಸುವುದು ಇದರ ಹೆಗ್ಗಳಿಕೆಯಾಗಿದೆ.

ಅನಾರ್ ದಾನಾ ಎಂಬ ಹೆಸರಿನೊಂದಿಗೆ ಮಾರುಕಟ್ಟೆಯಲ್ಲಿ ದೊರಕುವ ಈ ಬೀಜಗಳನ್ನು ಆಹಾರದಲ್ಲಿ ಒಣಫಲದಂತೆ ಬೆರೆಸಿಯೂ ಸೇವಿಸಬಹುದು ಅಥವಾ ದಾಳಿಂಬೆ ಹಣ್ಣುಗಳಿಂದ ಕಾಳುಗಳನ್ನು ಬೇರ್ಪಡಿಸಿ ಜ್ಯೂಸ್ ಮಾಡಿಕೊಂಡು ಸಹಾ ಸೇವಿಸಬಹುದು. ಈ ಬೀಜಗಳಿಂದ ಹಿಂಡಿ ತೆಗೆದ ತೈಲವೂ ಆರೋಗ್ಯಕ್ಕೆ ಪೂರಕವಾಗಿದೆ.

ಸ್ವರ್ಗಲೋಕದ ಹಣ್ಣು ದಾಳಿಂಬೆ ಸಿಪ್ಪೆಯ ಔಷಧೀಯ ಗುಣಗಳೇನು?

ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವ ಮೂಲಕ ಕೆಲವಾರು ತೊಂದರೆಗಳಿಗೆ ಪರಿಹಾರ ದೊರೆತರೆ ಸೇವಿಸುವ ಮೂಲಕವೂ ಇನ್ನಷ್ಟು ಪ್ರಯೋಜನ ದೊರಕುತ್ತದೆ. ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲ ವಿಟಮಿನ್ ಬಿ, ಸಿ, ಕೆ ಹಾಗೂ ಆಂಟಿ ಆಕ್ಸಿಡೆಂಟುಗಳ ಸಹಿತ ಇತರ ಪೋಷಕಾಂಶಗಳೂ ಇವೆ. ವಿಶೇಷವಾಗಿ ವಿಟಮಿನ್ ಸಿ ವೃದ್ದಾಪ್ಯವನ್ನು ದೂರಗೊಳಿಸುತ್ತದೆ ಹಾಗೂ ತ್ವಚೆಯ ಉರಿಯೂತದ ವಿರುದ್ದ ಹೋರಾಡುತ್ತದೆ. ಬನ್ನಿ, ಈ ಬೀಜಗಳ ಮಹತ್ವದ ಬಗ್ಗೆ ಅರಿಯೋಣ...

ನೈಸರ್ಗಿಕ ಕಾಮೋತ್ತೇಜಕ

ನೈಸರ್ಗಿಕ ಕಾಮೋತ್ತೇಜಕ

ಈ ಬೀಜಗಳು ಮನೋಭಾವ ಹಾಗೂ ರಕ್ತಪರಿಚಲನೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ವಿಶೇಷವಾಗಿ ಇವುಗಳ ಸೇವನೆಯಿಂದ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ನಿಮಿರುದೌರ್ಬಲ್ಯ ಕಡಿಮೆಯಾಗುತ್ತದೆ. ಅಲ್ಲದೇ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ರಸದೂತದ ಮಟ್ಟವನ್ನು ಏರಿಸುವ ಮೂಲಕ ಕಾಮೋತ್ಸಾಹವನ್ನೂ ಹೆಚ್ಚಿಸುತ್ತದೆ.

ಸಂಧಿವಾತ ಕಡಿಮೆ ಮಾಡುತ್ತದೆ

ಸಂಧಿವಾತ ಕಡಿಮೆ ಮಾಡುತ್ತದೆ

ದಾಳಿಂಬೆಯ ಬೀಜಗಳಲ್ಲಿರುವ ಫ್ಲೇವನಾಲ್ ಎಂಬ ಆಂಟಿ ಆಕ್ಸಿಡೆಂಟ್ ಗಳು ಸಂಧಿವಾತದ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇವುಗಳು ಉರಿಯೂತ ನಿವಾರಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹದ ಹಲವು ನೋವುಗಳನ್ನು ಕಡಿಮೆ ಮಾಡುತ್ತವೆ. ಒಂದು ವೇಳೆ ಸಂಧಿವಾತದ ತೊಂದರೆ ಇದ್ದರೆ ದಾಳಿಂಬೆಯ ಬೀಜಗಳನ್ನು ನಿತ್ಯವೂ ಕೊಂಚಕೊಂಚವಾಗಿ ಸೇವಿಸುತ್ತಾ ಬರಬೇಕು.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ದಾಳಿಂಬೆಯ ಬೀಜಗಳು ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತವೆ. ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಹಾನಿಕಾರಕ ಆಕ್ಸಿಡೀಕೃತ ಮೇದಸ್ಸನ್ನು (oxidized lipids) ಒಡೆದು ಇವುಗಳಿಂದಾಗುವ ಹಾನಿಯಂದ ರಕ್ಷಿಸುತ್ತವೆ. ತನ್ಮೂಲಕ ಇದರಿಂದ ಎದುರಾಬಹುದಾಗಿದ್ದ ಅಪಧಮನಿ ಕಾಠಿಣ್ಯ ಅಥವಾ ನರಗಳು ಗಟ್ಟಿಯಾಗುವ atherosclerosis ಎಂಬ ಸ್ಥಿತಿಯಿಂದ ರಕ್ಷಣೆ ಒದಗಿಸುತ್ತದೆ.

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ದಾಳಿಂಬೆಯ ಬೀಜಗಳು ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯುವ ಗುಣ ಹೊಂದಿವೆ. ಇದರ ಬೀಜಗಳಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿದ್ದು ಕ್ಯಾನ್ಸರ್ ಕಣಗಳು ಅಭಿವೃದ್ದಿಗೊಳ್ಳಲು ಬಿಡದೇ ಈ ಕೋಶಗಳನ್ನು ನಾಶಗೊಳಿಸಲು ನೆರವಾಗುತ್ತದೆ.

ಮಧುಮೇಹಿಗಳಿಗೂ ಸೂಕ್ತವಾಗಿದೆ

ಮಧುಮೇಹಿಗಳಿಗೂ ಸೂಕ್ತವಾಗಿದೆ

ದಾಳಿಂಬೆಯ ಬೀಜಗಳು ಮಧುಮೇಹಿಗಳಿಗೂ ಸೂಕ್ತವಾಗಿವೆ. ಇದರಲ್ಲಿರುವ ಕೆಲವು ಆಮ್ಲಗಳು ಮಧುಮೇಹದ ವಿರುದ್ದ ಕಾರ್ಯನಿರ್ವಹಿಸುವ ಗುಣ ಹೊಂದಿವೆ. ಇದರಲ್ಲಿರುವ ಸಕ್ಕರೆಗಳಲ್ಲಿ ಕೆಲವು ವಿಶಿಷ್ಟ ಆಂಟಿ ಅಕ್ಸಿಡೆಂಟುಗಳಿದ್ದು ವಿಶೇಷವಾಗಿ ಟೈಪ್ 2 ಮಧುಮೇಹವನ್ನು ತಡೆಗಟ್ಟುವ ಶಕ್ತಿ ಹೊಂದಿದೆ.

ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ

ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ

ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಎದುರಾಗುವ ಉರಿಯೂತ ಮತ್ತು ಇತರ ಸಂಬಂಧಿತ ತೊಂದರೆಗಳಿಂದ ರಕ್ಷಣೆ ಒದಗುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳ ಮೂಲಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಉತ್ಕರ್ಷಣಶೀಲ ಘರ್ಷಣೆಯನ್ನು ತಡೆಯುವ ಕ್ಷಮತೆಯನ್ನು ದಾಳಿಂಬೆ ಬೀಜಗಳು ಹೊಂದಿವೆ ಎಂದು ತಿಳಿದುಬಂದಿದೆ.

ಒಸಡುಗಳನ್ನು ದೃಢಗೊಳಿಸುತ್ತದೆ

ಒಸಡುಗಳನ್ನು ದೃಢಗೊಳಿಸುತ್ತದೆ

ನಿಯಮಿತವಾಗಿ ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಒಸಡುಗಳು ದೃಢಗೊಳ್ಳುತ್ತವೆ ಹಾಗೂ ಸಡಿಲವಾದ ಹಲ್ಲುಗಳು ಗಟ್ಟಿಯಾಗುತ್ತವೆ. ಅಲ್ಲದೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಈ ಬೀಜಗಳ ಸೇವನೆಯಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಇದಕ್ಕೆ ಇದರಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು ಕಾರಣ. ಈ ವಿಟಮಿನ್ನುಗಳು ದೇಹದಲ್ಲಿರುವ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತವೆ. ದಾಳಿಂಬೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಕರಿಸುತ್ತದೆ

ತೂಕ ಇಳಿಕೆಗೆ ಸಹಕರಿಸುತ್ತದೆ

ತೂಕ ಇಳಿಸುವ ಪ್ರಯತ್ನಲ್ಲಿದ್ದವರಿಗೆ ದಾಳಿಂಬೆ ಬೀಜಗಳು ವರದಾನವಾಗಿವೆ. ಇವುಗಳಲ್ಲಿರುವ ಕರಗದ ನಾರು ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ಸ್ಥೂಲಕಾಯದಿಂದ ಬಿಡುಗಡೆ ನೀಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಈ ಬೀಜಗಳು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಕೊಂದು ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

English summary

10 Health Benefits Of Pomegranate Seeds

Pomegranate seeds are the edible seeds found inside the pomegranates. Research shows that pomegranate seeds can help prevent or treat various disease risk factors, including high blood pressure, high cholesterol, oxidative stress and inflammation. Pomegranate seeds are either eaten raw or are processed into pomegranate juice. One pomegranate holds over 600 seeds and they are full of nutrition. So, have a look at the health benefits of pomegranate seeds.