For Quick Alerts
ALLOW NOTIFICATIONS  
For Daily Alerts

ಕಪ್ಪು ದ್ರಾಕ್ಷಿ ತಿನ್ನೋದ್ರಿಂದ, ಆರೋಗ್ಯಕ್ಕೆ ಬರೋಬ್ಬರಿ ಹತ್ತು ಲಾಭಗಳಿವೆ!

|

ಕಪ್ಪು ದ್ರಾಕ್ಷಿ ಕೊಂಚ ಹುಳಿಯೇ ಆದರೂ ಇದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಇದನ್ನೊಂದು ಆರೋಗ್ಯಕರ ಆಹಾರವಾಗಿಸಿದೆ. ಪೂರ್ವ ಯೂರೋಪ್‌ನಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲಿಯೆ ಕಪ್ಪು ದ್ರಾಕ್ಷಿಯನ್ನು ಬೆಳೆಯಲಾಗುತ್ತಿತ್ತು. ಕಪ್ಪು ದ್ರಾಕ್ಷಿಯಲ್ಲಿಯೂ ಹಲವಾರು ವಿಧಗಳಿದ್ದು ಚಿಕ್ಕ ಶೇಂಗಾಬೀಜದ ಗಾತ್ರದಿಂದ ತೊಡಗಿ ಅರ್ಧ ಬೆರಳಿನಷ್ಟು ಗಾತ್ರದವೂ ಇವೆ. ಇದರ ಮೂಲ ಅಪ್ಘಾನಿಸ್ತಾನದಲ್ಲಿರುವ ಕಪ್ಪು ಸಮುದ್ರ ತೀರದ ಆಗ್ನೇಯ ಭಾಗದ ಪ್ರದೇಶವಿರಬಹುದು ಎಂದು ಭಾವಿಸಲಾಗಿದೆ. ಅಲ್ಲದೇ ದಕ್ಷಿಣ ಹಾಗೂ ಈಶಾನ್ಯ ಅಮೇರಿಕಾದಿಂದಲೂ ಕೆಲವು ಹೊಸ ತಳಿಗಳು ಹುಟ್ಟಿಕೊಂಡಿವೆ.

ಹುಳಿಮಿಶ್ರಿತ ಸಿಹಿತಿರುಳನ್ನು ಹೊಂದಿರುವ ಕಪ್ಪು ದ್ರಾಕ್ಷಿಯನ್ನು ಹಸಿಯಾಗಿಯೂ, ಒಣಗಿಸಿ ಒಣದ್ರಾಕ್ಷಿಯ ರೂಪದಲ್ಲಿಯೂ, ಮಿಕ್ಸಿಯಲ್ಲಿ ಗೊಟಾಯಿಸಿ ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಹಸಿರು ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿಗಳು ಬಣ್ಣದಲ್ಲಿ ಭಿನ್ನವೇ ಹೊರತು ಇದರ ಪೋಷಕಾಂಶಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ. ಆದರೆ ಕಪ್ಪು ದ್ರಾಕ್ಷಿಯ ಬಣ್ಣವೇ ಇದನ್ನು ಹೆಚ್ಚು ಆಕರ್ಷಕವಾಗಿಸಿದೆ. ಬನ್ನಿ, ಕಪ್ಪು ದ್ರಾಕ್ಷಿಯ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡೋಣ....

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ರೆಸ್ವರೆಟ್ರಾಲ್ ಎಂಬ ಪೋಷಕಾಂಶ ಒಂದು ನೈಸರ್ಗಿಕ ಫಿನಾಲ್ ಆಗಿದ್ದು ದೇಹದಲ್ಲಿ ಇನ್ಸುಲಿನ್ ಉತ್ಪನ್ನಕ್ಕೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ಇದು ವಿಶೇಷವಾಗಿ ಟೈಪ್ 1 ಮಧುಮೇಹಿಗಳಿಗೆ ವರದಾನವಾಗಿದ್ದು ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ನಿಯಮಿತವಾಗಿ ಕಪ್ಪು ದ್ರಾಕ್ಷಿಯನ್ನು ಸೇವಿಸುವ ಮೂಲಕ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುವುದು ಹಾಗೂ ಮೈಗ್ರೇನ್ ತಲೆನೋವು ಕಡಿಮೆಯಾಗಲೂ ನೆರವಾಗುತ್ತದೆ. ಅಲ್ಲದೇ ಸ್ಮರಣಶಕ್ತಿ ಕುಂದುವುದು, ಆಲ್ಜೀಮರ್ಸ್ ಕಾಯಿಲೆ ಆವರಿಸುವುದು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಒಟ್ಟಾರೆಯಾಗಿ ಕಪ್ಪು ದ್ರಾಕ್ಷಿ ಮೆದುಳಿನ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.

ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ

ಹೃದಯದವನ್ನೂ ರಕ್ಷಿಸುತ್ತದೆ

ಹೃದಯದವನ್ನೂ ರಕ್ಷಿಸುತ್ತದೆ

ಇದರಲ್ಲಿರುವ ಫೈಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ಹೃದಯದ ಮೇಲೆ ಉಂಟಾಗುವ ಹಾನಿಯನ್ನು ತಡೆದು ಹೃದಯದ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತದೆ ಹಾಗೂ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ನೆರವಾಗುತ್ತವೆ. ತನ್ಮೂಲಕ ಹೃದಯದ ಸ್ತಂಭನ ಹಾಗೂ ಇತರ ಹೃದಯಸಂಬಂಧಿ ರೋಗಗಳಿಂದ ರಕ್ಷಣೆ ಒದಗಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಪ್ಪು ದ್ರಾಕ್ಷಿಯಲ್ಲಿ ಲ್ಯೂಟಿನ್ ಹಾಗೂ ಜಿಯಾಕ್ಸಾಂಥಿನ್ ಎಂಬ ಪೋಷಕಾಂಶಗಳಿವೆ. ಇವೆರಡೂ ಮೂಲತಃ ಕ್ಯಾರೋಟೀನಾಯ್ಡ್ ಎಂಬ ಕಣಗಳಾಗಿದ್ದು ಕಣ್ಣಿನ ಆರೋಗ್ಯ ಉಳಿಸಿಕೊಳ್ಳಲು ಅಗತ್ಯವಾಗಿವೆ. ಕಪ್ಪು ದ್ರಾಕ್ಷಿಯ ನಿಯಮಿತ ಸೇವನೆಯಿಂದ ಕಣ್ಣಿನ ಪಾಪೆಯ ಮೇಲೆ ಉಂಟಾಗುವ ಉತ್ಕರ್ಷಣಶೀಲ ಪ್ರಭಾವದಿಂದ ಈ ಕ್ಯಾರೋಟಿನಾಯ್ಡುಗಳು ರಕ್ಷಣೆ ಒದಗಿಸುತ್ತವೆ ಹಾಗೂ ಕುರುಡುತನ ಎದುರಾಗದಂತೆ ತಡೆಯುತ್ತವೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕಪ್ಪು ದ್ರಾಕ್ಷಿಗಳಲ್ಲಿ ಅನುವಂಶಿಕ ಲಕ್ಷಣಗಳನ್ನೇ ಬದಲಿಸಬಲ್ಲ (mutagenic) ಗುಣವನ್ನು ತಡೆಯುವ ಹಾಗೂ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿವೆ. ಇದು ಸ್ತನ ಕ್ಯಾನ್ಸರ್ ಸೇರಿದಂತೆ ಎಲ್ಲಾ ವಿಧದ ಕ್ಯಾನ್ಸರುಗಳನ್ನು ಎದುರಿಸಲು ಬಹಳ ಪರಿಣಾಮಕಾರಿಯಾಗಿದೆ. ರೆಸ್ವೆರಾಟ್ರೊಲ್, ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ಸಂಯುಕ್ತ ಪೋಷಕಾಂಶವಾಗಿದ್ದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಆರೋಗ್ಯಕರ ಕೂದಲು ಪಡೆಯಲು ನೆರವಾಗುತ್ತದೆ

ಆರೋಗ್ಯಕರ ಕೂದಲು ಪಡೆಯಲು ನೆರವಾಗುತ್ತದೆ

ಕಪ್ಪು ದ್ರಾಕ್ಷಿಗಳಲ್ಲಿ ಆಂಟಿಆಕ್ಸಿಡೆಂಟುಗಳು ಮತ್ತು ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದೆ. ಇದು ವಿಶೇಷವಾಗಿ ನೆತ್ತಿಯ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಮಿತಿಮೀರಿದ ಕೂದಲು ನಷ್ಟ, ವಿಭಜಿತ ತುದಿಗಳು ಮತ್ತು ಅಕಾಲಿಕ ಕೂದಲು ನೆರಯುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ತಲೆಯ ಚರ್ಮ ಒಣಗುವುದನ್ನು ತಡೆದು ತುರಿಕೆ ಹಾಗೂ ತಲೆಹೊಟ್ಟು ಉಂಟಾಗದಿರಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಮಿನ್ ಸಿ, ಕೆ ಮತ್ತು ಎ ಹಾಗೂ ಇತರ ಖನಿಜಗಳು ಮತ್ತು ಫ್ಲೇವನಾಯ್ಡುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ದ್ರಾಕ್ಷಿಯಲ್ಲಿರುವ ಫ್ರುಕ್ಟೋಸ್ ಸಕ್ಕರೆ ಮತ್ತು ಸಾವಯವ ಆಮ್ಲಗಳು ಮತ್ತು ಪ್ರಮುಖವಾಗಿ ಕರಗುವ ನಾರು ಮಲಬದ್ದತೆ, ಅಜೀರ್ಣತೆ ಮೊದಲಾದ ತೊಂದರೆಗಳಿಂದ ರಕ್ಷಣೆ ನೀಡುತ್ತವೆ ಹಾಗೂ ಮೂತ್ರಪಿಂಡದ ಕಲ್ಲುಗಳ ತೊಂದರೆಯಿಂದಲೂ ಶಮನ ನೀಡುತ್ತವೆ.

ಮೂಳೆಗಳ ಸಾಂದ್ರತೆ ಕಡಿಮೆಯಾಗುವುದನ್ನು ತಡೆಯುತ್ತದೆ

ಮೂಳೆಗಳ ಸಾಂದ್ರತೆ ಕಡಿಮೆಯಾಗುವುದನ್ನು ತಡೆಯುತ್ತದೆ

ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ರೆಸ್ವಾರಾಟ್ರೋಲ್ ಟೈಪ್ ೨ ಮಧುಮೇಹ ಹಾಗೂ ಹೃದಯ ಸಂಬಂಧಿ ತೊಂದರೆಗಳಿಂದ ಕಂಡುಬರುವ metabolic syndrome ಎಂಬ ಸ್ಥಿತಿಯಿಂದ ರಕ್ಷಣೆ ಒದಗಿಸುತ್ತದೆ. ಈ ಸ್ಥಿತಿ ಹೃದಯದ ಕಾಯಿಲೆ, ಸ್ತಂಭನ, ಮಧುಮೇಹ ಮೊದಲಾದವುಗಳನ್ನು ಇನ್ನಷ್ಟು ಉಲ್ಬಣಗೊಳಿಸಿ ಮೂಳೆಗಳ ಸಾಂದ್ರತೆ ಕಡಿಮೆಯಾಗಲು ಕಾರಣವಾಗುತ್ತದೆ. ಆದರೆ ರೆಸ್ವಾರಾಟ್ರೋಲ್ ಇದಕ್ಕೆ ತಡೆಯೊಡ್ಡಿ ಮೂಳೆಗಳ ಸಾಂದ್ರತೆ ಹೆಚ್ಚಿಸುತ್ತದೆ ಹಾಗೂ ಮೂಳೆಗಳು ಟೊಳ್ಳಾಗುವ osteoporosis ಎಂಬ ಸ್ಥಿತಿಯಿಂದಲೂ ರಕ್ಷಣೆ ಒದಗಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಕಪ್ಪು ದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಅನಗತ್ಯ ವಿಶಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ತನ್ಮೂಲಕ ತೂಕ ಇಳಿಯಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಬಲ ಹಾಗೂ ಶೀಘ್ರವಾಗಿ ಇಳಿಯಲು ಸಾಧ್ಯವಾಗುತ್ತದೆ.

ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ

ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ

ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತವೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಇ ಗಳನ್ನು ಹೊಂದಿದ್ದು ಚರ್ಮದಿಂದ ನಷ್ಟವಾಗಿದ ಜೀವಕೋಶಗಳನ್ನು ಹೊಸದಾಗಿ ನಿರ್ಮಿಸಲು ನೆರವಾಗುತ್ತದೆ ಮತ್ತು ತಕ್ಕಂತೆ ತೇವಾಂಶವನ್ನು ಚರ್ಮದಲ್ಲಿ ಉಳಿಸಿಕೊಳ್ಳಲು ನೆರವಾಗುವ ಮೂಲಕ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಲೇಖನವನ್ನು ಇಷ್ಟಪಟ್ಟರೆ ಈ ಲೇಖನದ ಕೊಂಡಿಯನ್ನು ನಿಮ್ಮ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳಿ.

English summary

10-health-benefits-of-black-grapes

The delicious sweet and juicy black grapes can be consumed fresh and raw, dried as raisins or as a juice. Black grapes are rich in nutrients and are similar in taste and texture to red or green grapes. Black grapes taste delicious due to their deep and rich black colour. Let us have a look at the health benefits of black grapes.
X
Desktop Bottom Promotion