For Quick Alerts
ALLOW NOTIFICATIONS  
For Daily Alerts

ಕಾಮಾಸಕ್ತಿ ಕುಗ್ಗಿಸುವ ಹತ್ತು ಆಹಾರಗಳು-ಆದಷ್ಟು ಇದರಿಂದ ದೂರವಿರಿ

By Hemanth
|

ದೇಹವು ಆರೋಗ್ಯವಾಗಿದ್ದರೆ ಆಗ ಎಲ್ಲಾ ರೀತಿಯ ಚಟುವಟಿಕೆಗಳು ನಿರ್ವಿಘ್ನವಾಗಿ ನಡೆಯುತ್ತಾ ಇರುತ್ತದೆ. ಇದರಲ್ಲಿ ಲೈಂಗಿಕ ಕ್ರಿಯೆ ಕೂಡ ಒಂದಾಗಿದೆ. ದೇಹದಲ್ಲಿ ಕಾಮಾಸಕ್ತಿಯ ಮೇಲೆ ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೋಜನ್ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೆಸ್ಟೋಸ್ಟೆರಾನ್ ಕಾಮಾಸಕ್ತಿ ಹೆಚ್ಚು ಮಾಡಿದರೆ, ಈಸ್ಟೋಜನ್ ಕಾಮಾಸಕ್ತಿ ಕುಗ್ಗಿಸುವುದು. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಿಕೊಳ್ಳಬೇಕೆಂದರೆ ಅದಕ್ಕೆ ಕೆಲವೊಂದು ಆಹಾರ ಮತ್ತು ಔಷಧಿ ಸೇವನೆ ಮಾಡಬೇಕು. ಇದರಿಂದ ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಾಗುವುದು ಮತ್ತು ಈಸ್ಟೋಜನ್ ಉತ್ತೇಜನಗೊಳ್ಳದಂತೆ ತಡೆಯುವುದು.

ನಿಮ್ಮ ಕಾಮಾಸಕ್ತಿ ಕೊಲ್ಲಬಹುದಾದ 10 ಆಹಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಈ ಮಾಹಿತಿಯನ್ನು ನೀವು ಒಳ್ಳೆಯದು ಅಥವಾ ಕೆಟ್ಟದಕ್ಕೆ ಬಳಸಿಕೊಳ್ಳುತ್ತೀರಾ ಎನ್ನುವುದು ನಮಗೆ ತಿಳಿದಿಲ್ಲ. ಆದರೆ ಇದು ಒಳ್ಳೆಯದಕ್ಕೆ ಎನ್ನುವುದು ನಮ್ಮ ಭಾವನೆಯಾಗಿದೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್

ಇದು ತುಂಬಾ ರುಚಿಕರವಾಗಿರುವುದು. ಆದರೆ ಇದರಲ್ಲಿರುವ ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ ಗಳು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ 3/2 ಭಾಗದಷ್ಟು ಸತು ಕಳೆದುಕೊಳ್ಳುವುದು. ಸತು ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುವುದು.

ವೀಡ್

ವೀಡ್

ನೀವು ಮರಿಜುನಾ ಸೇದಿದ್ದರೆ ಆಥವಾ ವೀಡ್ ಜತೆಗೆ ಏನಾದರೂ ಆಹಾರ ತಿಂದಿದ್ದರೆ ಮರಿಜುನಾವು ಸಂಪೂರ್ಣ ದೇಹಕ್ಕೆ ಆರಾಮ ನೀಡುವುದು. ಇದೇ ವೇಳೆ ವೀಡ್ ನಿಮ್ಮ ಕಾಮಾಸಕ್ತಿಯನ್ನು 24 ಗಂಟೆಗಳ ಕಾಲ ಕೊಲ್ಲುವುದು. ಇದರಿಂದ ಪ್ರಭಾವದಿಂದ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮನಸ್ಸು ಬರಲ್ಲ.

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ದೇಹದಲ್ಲಿ ತಗ್ಗಿಸುವ ಕೆಲಸ ಮಾಡುವುದು. ಇದು ದೇಹದಲ್ಲಿ ಚಯಾಪಚಯಾ ಕ್ರಿಯೆ, ಹಾರ್ಮೋನು ಉತ್ಪತ್ತಿ ಮತ್ತು ನರಗಳ ಉತ್ತೇಜನ ತಗ್ಗಿಸುವುದು. ಸ್ವಲ್ಪ ಮಟ್ಟದಲ್ಲಿ ಇದು ಪರಿಣಾಮ ಬೀರದೆ ಇದ್ದರೂ ಅತಿಯಾಗಿ ಸೇವನೆ ಮಾಡಿದರೆ ಖಂಡಿತವಾಗಿಯೂ ಲೈಂಗಿಕ ಶಕ್ತಿಗೆ ಒಳ್ಳೆಯದಲ್ಲ.

ಸೋಯಾಬೀನ್ಸ್

ಸೋಯಾಬೀನ್ಸ್

ತಳಿ ಪರಿವರ್ತಿತವಾಗಿರುವ ತರಕಾರಿಗಳು ಕೃಷಿ ಲೋಕದಲ್ಲಿ ತನ್ನದೇ ಆಗಿರುವಂತಹ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಸೋಯಾಬೀನ್ ಹೊರತಾಗಿಲ್ಲ. ಸೋಯಾಬೀನ್ ಮಹಿಳೆಯ ಅಂಡಾಶಯದ ಚಟುವಟಿಕೆ ಮತ್ತು ಲೈಂಗಿಕ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವುದು. ಇದು ಪುರುಷರಲ್ಲಿ ವೀರ್ಯದ ಉತ್ಪತ್ತಿಯನ್ನು ಶೇ.40ರಷ್ಟು ಕುಗ್ಗಿಸುವುದು. ನಿಮಗೆ ಸೋಯಾ ಉತ್ಪನ್ನಗಳು ಇಷ್ಟವಾಗಿದ್ದರೆ ಇದು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ.

ಚೀಸ್

ಚೀಸ್

ಹೈನುಗಾರಿಕೆ ವೇಳೆ ಹಾಲಿನ ಉತ್ಪತ್ತಿ ಹೆಚ್ಚು ಮಾಡುವ ಸಲುವಾಗಿ ಕೆಲವೊಂಧು ಹಾರ್ಮೋನುಗಳನ್ನು ದನಗಳಿಗೆ ಇಂಜೆಕ್ಷನ್ ಮೂಲಕ ಚುಚ್ಚಲಾಗುತ್ತದೆ. ಇದು ಹಾಲಿನೊಂದಿಗೆ ಬಂದು ಸೇರ್ಪಡೆಯಾಗುವುದು. ಹಾಲಿನಿಂದ ತಯಾರಿಸಿದ ಚೀಸ್ ನಂತಹ ವಸ್ತು ಸೇವಿಸಿದಾಗ ಅದು ಪ್ರತಿಯೊಬ್ಬರ ಕಾಮಾಸಕ್ತಿ ಕೊಂದು ಬಿಡುವುದು.

ಸಕ್ಕರೆ

ಸಕ್ಕರೆ

ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಸೊಂಟದ ಸುತ್ತಲು ಬೊಜ್ಜು ಬರುವುದು. ಇದು ಹಲವಾರು ರೀತಿಯ ಕಾಯಿಲೆಗಳ ಜತೆಗೆ ಕಾಮಾಸಕ್ತಿಯನ್ನು ತಗ್ಗಿಸುವುದು. ರಕ್ತದಲ್ಲಿನ ಅತಿಯಾದ ಸಕ್ಕರೆಯಂಶವು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಕಡಿಮೆ ಮಾಡುವುದು. ಇದರಿಂದಾಗಿ ಕಾಮಾಸಕ್ತಿ ಹೆಚ್ಚಿಸುವ ಹಾರ್ಮೋನ್ ಟೆಸ್ಟೋಸ್ಟೆರಾನ್ ಉತ್ಪತ್ತಿಯು ಕಡಿಮೆಯಾಗುವುದು. ಸೊಂಟದ ಸುತ್ತಲಿನ ಬೊಜ್ಜಿನಿಂದಾಗಿ ಈಸ್ಟೋಜನ್ ಉತ್ಪತ್ತಿಯಾಗುವುದು. ಇದು ಕೂಡ ಕಾಮಾಸಕ್ತಿ ತಗ್ಗಿಸುವುದು.

ಲೈಕೋರೈಸ್

ಲೈಕೋರೈಸ್

ಗ್ಲೈಸ್ರೈಜಿಝಿಕ್ ಆಮ್ಲದ ಸುವಾಸನೆಯಿಂದ ಲೈಕೋರೈಸ್ ಉಂಟಾಗುವುದು. ಇದು ಕೂಡ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುವುದು. ದಿನಕ್ಕೆ 7 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಲೈಕೋರೈಸ್ ಸೇವನೆ ಮಾಡಿದರೆ ಅದರಿಂದ ಟೆಸ್ಟೋಸ್ಟೆರಾನ್ ಮಟ್ಟ ಶೇ.35ರಷ್ಟು ಕಡಿಮೆಯಾಗುವುದು.

ಪುದೀನಾ

ಪುದೀನಾ

ಇದು ಬಾಯಿಗೆ ಸುವಾಸನೆ ನೀಡುವುದು. ಆದರೆ ಇದರಲ್ಲಿ ಇರುವ ಮೆಂಥಾಲ್ ಟೆಸ್ಟೋಸ್ಟೆರಾನ್ ಮಟ್ಟ ತಗ್ಗಿಸುವುದು ಮತ್ತು ಲೈಂಗಿಕಾಸಕ್ತಿ ತಗ್ಗಿಸುವುದು.

ಅಗಸೆ ಬೀಜಗಳು

ಅಗಸೆ ಬೀಜಗಳು

ಈ ಬೀಜಗಳು ಚೀಯಾ ಬೀಜಗಳು ಮತ್ತು ಅವಕಾಡೋ ದೇಹಕ್ಕೆ ಒಳ್ಳೆಯ ಶಕ್ತಿ ನೀಡುವ ಆಹಾರಗಳು. ಆದರೆ ಇದರಿಂದಲೂ ಕೆಲವು ಅಡ್ಡಪರಿಣಾಮಗಳು ಇವೆ. ಇದು ಟೆಸ್ಟೋಸ್ಟೆರಾನ್ ಮಟ್ಟ ಮತ್ತು ಕಾಮಾಸಕ್ತಿ ಕಡಿಮೆ ಮಾಡುವುದು.

ಅಮೆರಿಕಾದಲ್ಲಿ ಮಹಿಳೆಯರಿಗೆ ಪ್ರತಿನಿತ್ಯ 30 ಗ್ರಾಂ ಅಗಸೆ ಬೀಜ ತಿನ್ನಲು ಹೇಳಿದಾಗ ಅವರ ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ದೀರ್ಘ ಪರಿಣಾಮ ಬೀರಿದೆ ಎಂದು ಅಧ್ಯಯನಗಳು ಹೇಳಿವೆ. 7 ದಿನಗಳಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಶೇ.89ರಷ್ಟು ಕುಸಿದಿದೆ ಎಂದು ಅಧ್ಯಯನಗಳು ತಿಳಿಸಿವೆ.

ಸ್ಟ್ರಾಬೆರಿ

ಸ್ಟ್ರಾಬೆರಿ

ಸ್ಟ್ರಾಬೆರಿ ತಿನ್ನುವ ಮೊದಲು ಅದನ್ನು ನೀವು ಸರಿಯಾಗಿ ತೊಳೆಯಬೇಕು. ಯಾಕೆಂದರೆ ಇದರ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿರುವರು. ಇದು ಈಸ್ಟ್ರೋಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ದೇಹದಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುವುದು.

English summary

10 Foods That Kill Your Sex Drive

An individual's sex drive is determined by the ratio of testosterone and estrogen in their body because while testosterone increases a person's sex drive, estrogen effectively decreases it. That's why, if you want to increase your sex drive, you should gravitate towards foods and remedies that increase your testosterone level, and stay away from those that stimulate estrogen.So here are 10 foods that can kill your sex drive.
Story first published: Tuesday, March 13, 2018, 16:19 [IST]
X
Desktop Bottom Promotion