For Quick Alerts
ALLOW NOTIFICATIONS  
For Daily Alerts

ಎಕ್ಸ್‎ಪೈರಿ ಡೇಟ್ ಮುಗಿದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ...

|

ನೋಡಲು ಚೆನ್ನಾಗೇ ಇದೆ ಎಂದು ಕಾಣುವ ಆಹಾರಗಳ ಪೊಟ್ಟಣಗಳ ಮೇಲೆ ಮುದ್ರಿತವಾಗಿರುವ ಗಡುವು ದಿನಾಂಕ ಮೀರಿದ್ದರೂ ಇದನ್ನು ಸಾಮಾನ್ಯವಾಗಿ ಅಲಕ್ಷಿಸಿಬಿಡುತ್ತೇವೆ. ಸಾಮಾನ್ಯವಾಗಿ ಗಡುವು ದಿನಾಂಕವನ್ನು ಆಯಾ ಆಹಾರ ಸಾಮಾನ್ಯವಾಗಿ ಕೆಡುವ ದಿನಕ್ಕೂ ಕೆಲದಿನಗಳ ಹಿಂದಿನ ದಿನಾಂಕವನ್ನೇ ನೀಡಲಾಗುತ್ತದೆ. ಆದರೂ, ಈ ದಿನಾಂಕ ಮೀರಿದ ಆಹಾರಗಳನ್ನು ಸೇವಿಸಿದರೆ ಇದು ಆರೋಗ್ಯವನ್ನು ಕೆಡಿಸಬಹುದು.

ಕೆಲವೊಮ್ಮೆ ಕೆಲವು ದುಬಾರಿ ಆಹಾರಗಳನ್ನು ಗಡುವು ದಿನಾಂಕ ಮೀರಿದ ಕಾರಣದಿಂದ ಎಸೆಯಲೂ ಮನಸ್ಸಾಗುವುದಿಲ್ಲ. ಆದರೂ, ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವಾದ ಕಾರಣ ಗಡುವು ಮೀರಿದ ಆಹಾರಗಳನ್ನು ತ್ಯಜಿಸುವುದೇ ಮೇಲು. ಎಂದಿಗೂ ಆಹಾರವಸ್ತುಗಳನ್ನು ಸಾಧ್ಯವಾದಷ್ಟು ತಾಜಾವಿರುವಾಗಲೇ ಸೇವಿಸಬೇಕು.

ಆಹಾರಗಳನ್ನು ಹೆಚ್ಚು ಕಾಲ ಕೆಡದೇ ಇರಲು ಕೆಲವು ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಉದಾಹರಣೆಗೆ ಕ್ಯಾನ್ ನಲ್ಲಿ ಲಭಿಸುವ ಸಿದ್ಧ ಆಹಾರಗಳು, ಒಣ ಪಾಸ್ತಾ, ಶೈತ್ಯೀಕರಿಸಿದ ಆಹಾರಗಳು ಇದ್ಯಾದಿಗಳನ್ನು ಸೂಕ್ತ ವಾತಾವರಣದಲ್ಲಿ ಸಂಗ್ರಹಿಸಿದಾಗ ಹೆಚ್ಚು ಕಾಲ ಕೆಡದಂತೆ ಇರಿಸಬಹುದು. ಆದರೆ ಕೆಂಪು ಮಾಂಸ, ಕೋಳಿಮಾಂಸ, ಅರೆದ ದನದ ಮಾಂಸ, ಮೃದುವಾದ ಚೀಸ್, ಬೆರ್ರಿಗಳು, ಮೀನು ಮೊದಲಾದವುಗಳನ್ನು ತಾಜಾ ರೂಪದಲ್ಲಿಯೇ ಸೇವಿಸಬೇಕು.

ಎಕ್ಸ್‎ಪೈರಿ ಡೇಟ್ ಮುಗಿದಿದ್ದರೂ ಇವು ಹಾಳಾಗುವುದಿಲ್ಲವಂತೆ!

ಇವುಗಳು ಕೊಂಚವೇ ಹಾಳಾದರೂ, ಕೊಳೆತಿದ್ದಂತೆ ಕಂಡುಬಂದರೆ ಇದರ ಗಡುವಿನ ದಿನಾಂಕ ಮೀರದಿದ್ದರೂ ಇವುಗಳನ್ನು ಸೇವಿಸಬಾರದು. ಚೆನ್ನಾಗಿದ್ದಂತೆ ಅನ್ನಿಸಿದರೂ ಗಡುವು ದಿನಾಂಕ ಮೀರಿದ್ದರೆ ಸೇವಿಸಬಾರದು. ಈ ಅಹಾರಗಳ ಸೇವನೆಯಿಂದ ಕೆಡುಕು ಉಂಟುಮಾಡುವ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ಹೊಟ್ಟೆ ಸೇರಿ ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು. ಬನ್ನಿ, ಈ ಅಹಾರಗಳು ಯಾವುವು ಎಂಬುದನ್ನು ನೋಡೋಣ...

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಹುಳಿಮಿಶ್ರಿತ ಹಣ್ಣುಗಳಾದ ಬೆರ್ರಿ ಹಣ್ಣುಗಳು, ಅಂದರೆ ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್ರೆರಿ ಮೊದಲಾದವುಗಳನ್ನು ಆದಷ್ಟೂ ತಾಜಾರೂಪದಲ್ಲಿಯೇ ಸೇವಿಸಬೇಕು. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇರುತ್ತದೆ ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ಆದರೆ ಇವುಗಳ ಎಡೆಯಲ್ಲಿ ಸೈಕ್ಲೋಸ್ಪೋರಾ ಎಂಬ ಪರಾವಲಂಬಿ ಜೀವಿಯೂ ಇರುತ್ತದೆ. ಈ ಹಣ್ಣುಗಳು ಹೆಚ್ಚು ಹಣ್ಣಾಗುತ್ತಿದ್ದಂತೆಯೇ ಆವರಿಸುವ ಈ ಜೀವಿಯೂ ಈ ಹಣ್ಣನ್ನು ತಿಂದವರ ಹೊಟ್ಟೆ ಸೇರುತ್ತದೆ. ಬಳಿಕ ಹೊಟ್ಟೆಯುಬ್ಬರಿಕೆ, ವಾಂತಿ, ಅತಿಸಾರ, ಫ್ಲೂ ನಂತಹ ಸೂಚನೆಗಳನ್ನು ಪ್ರಕಟಿಸುತ್ತದೆ. ಆದ್ದರಿಂದ ಈ ಹಣ್ಣುಗಳು ಕೊಂಚವೇ ಹಾಳಾದರೂ ಇವುಗಳನ್ನು ಸರ್ವಥಾ ಸೇವಿಸಬಾರದು.

ಸಿಂಪಿ

ಸಿಂಪಿ

ಸಿಂಪಿ ಅಥವಾ ಕಪ್ಪೆಚಿಪ್ಪಿನ ಮೃದ್ವಂಗಿಗಳು ಅತಿ ಶೀಘ್ರವೇ ಹಾಳಾಗುವ ಆಹಾರವಾಗಿದ್ದು ಕೊಂಚ ಹಾಳಾದರೂ ಇದರಿಂದ ವಾಸನೆ ಸೂಸತೊಡಗುತ್ತದೆ. ಕೊಂಚ ಪರಿಮಳ ಬಂದರೂ ಸರಿ, ಇವನ್ನು ಸೇವಿಸಬಾರದು. ಇವನ್ನು ಸೇವಿಸಿದರೆ ವಾಂತಿ, ಅತಿಸಾರ, ನಡುಕ, ಹೊಟ್ಟೆನೋವು, ಜ್ವರ ಮೊದಲಾದವು ಎದುರಾಗುತ್ತವೆ. ಕೆಲವು ವಿಪರೀತ ಸಂದರ್ಭಗಳಲ್ಲಿ ಇವು ರಕ್ತದ ಸೋಂಕಿಗೂ ಕಾರಣವಾಗಬಹುದು.

ಚೀಸ್

ಚೀಸ್

ಚೀಸ್ ನಲ್ಲಿ ಎರಡು ವಿಧಗಳಿವೆ. ದೃಢವಾದ ಚೀಸ್ ಮತ್ತು ಮೃದುವಾದ ಚೀಸ್. ದೃಢ ಚೀಸ್ ಕೊಂಚ ಹೆಚ್ಚು ದಿನ ಕೆಡದೆ ಉಳಿಯುತ್ತದೆ. ಆದರೆ ಮೃದು ಚೀಸ್ ಶೀಘ್ರವಾಗಿ ಹಾಳಾಗುವ ಆಹಾರವಾಗಿದೆ. ಇದರಿಂದ ಕೊಂಚವೇ ಪರಿಮಳ ಸೂಸತೊಡಗಿದರೂ ಸರಿ, ಇದನ್ನು ಸೇವಿಸಬಾರದು. ಹಸಿ ಹಾಲಿನಿಂದ ತಯಾರಿಸಿದ ಮೃದು ಚೀಸ್ ನಲ್ಲಿ ಬ್ಯಾಕ್ಟೀರಿಯಾಗಳು ಬೇಗನೇ ಬೆಳೆಯುವ ಹಾಗೂ ಆಹಾರ ಹಾಳಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಚೀಸ್ ಸೇವನೆಯಿಂದ ಆರೋಗ್ಯ ಕೆಡುತ್ತದೆ.

ಕೆಂಪು ಮಾಂಸ

ಕೆಂಪು ಮಾಂಸ

ಕೆಂಪು ಮಾಂಸದಲ್ಲಿ ಸಾಲ್ಮೊನೆಲ್ಲಾ, ಈ ಕೊಲೈ ಮತ್ತು ಇತರ ಮಾರಕ ಬ್ಯಾಕ್ಟೀರಿಯಾಗಳಿರುತ್ತವೆ. ಸಾಮಾನ್ಯವಾಗಿ ಚೆನ್ನಾಗಿ ಬೇಯಿಸಿದ ಬಳಿಕ ಈ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತವೆ. ಆದರೆ ಗಡುವು ದಿನಾಂಕ ಮೀರುವ ಮುನ್ನವೇ ಈ ಉತ್ಪನ್ನಗಳನ್ನು ಸೇವಿಸಬೇಕು. ಅವಧಿ ಮೀರಿದ ಮಾಂಸದಲ್ಲಿ ಈ ಬ್ಯಾಕ್ಟೀರಿಯಾಗಳು ಅತಿ ಹೆಚ್ಚೇ ಪ್ರಮಾಣದಲ್ಲಿ ವೃದ್ಧಿಯಾಗಿರುತ್ತವೆ.

ಮೊಳಕೆಯೊಡೆದ ಆಹಾರಗಳು

ಮೊಳಕೆಯೊಡೆದ ಆಹಾರಗಳು

ಮೊಳಕೆಯೊಡೆದ ಆಹಾರಗಳು, ವಿಶೇಷವಾಗಿ ಅಲ್ಫಾಫಾ ಮೊದಲಾದ ಆಹಾರಗಳು ಫ್ರಿಜ್ಜಿನಲ್ಲಿರಿಸದೇ ಇದ್ದರೆ ಇದರಲ್ಲಿ ಶೀಘ್ರವೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಹಾಗೂ ವಿಷವಾಗಿಸುತ್ತದೆ. ಅಲ್ಲದೇ ಮೊಳಕೆಯೊಡೆದ ಬಳಿಕ ಸಾಮಾನ್ಯ ತಾಪಮಾನದಲ್ಲಿರಿಸಿದರೆ ಇದು ಅತಿಸೂಕ್ಷ್ಮ ಕ್ರಿಮಿಗಳಿಗೆ ಆಶ್ರಯತಾಣವಾಗುತ್ತದೆ. ಆದ್ದರಿಂದ ತಾಜಾ ಇರುವ ಮತ್ತು ಅವಧಿ ಮೀರದ ಆಹಾರಗಳನ್ನೇ ಸೇವಿಸಬೇಕು.

ಕೋಳಿ ಮಾಂಸ

ಕೋಳಿ ಮಾಂಸ

ಒಂದು ವೇಳೆ ಸೂಕ್ತ ರೀತಿಯಲ್ಲಿ ಕೋಳಿಮಾಂಸವನ್ನು ಸಂಗ್ರಹಿಸಿದರೆ ಹೆಚ್ಚು ಕಾಲ ಹಾಳಾಗದೇ ಉಳಿಯುತ್ತದೆ. ಹಸಿ ಕೋಳಿಮಾಂಸದಲ್ಲಿಯೂ ಈ ಕೊಲೈ ಎಂಬ ಬ್ಯಾಕ್ಟೀರಿಯಾಗಳಿರುತ್ತವೆ. ಆದರೆ ಅವಧಿಗೂ ಮೀರಿ ಈ ಮಾಂಸವನ್ನು ಹೆಚ್ಚು ಕಾಲ ಇಟ್ಟಷ್ಟೂ ಈ ಬ್ಯಾಕ್ಟೀರಿಯಾ ವೃದ್ಧಿಯಾಗುವ ವೇಗ ಹೆಚ್ಚುತ್ತದೆ. ಬಳಿಕ ಇವನ್ನು ಸೇವಿಸಿದರೆ ವಿಷಾಹಾರವಾಗುವ ಮತ್ತು ಹೊಟ್ಟೆ ಕೆಡುವ ಸಾಧ್ಯತೆಯೂ ಹೆಚ್ಚುತ್ತದೆ.

ಸಿಗಡಿ

ಸಿಗಡಿ

ಹಸಿ ಸಿಗಡಿಯಲ್ಲಿಯೂ ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ ಹಾಗೂ ಇವುಗಳನ್ನು ಗಡವು ದಿನಾಂಕಕ್ಕೂ ಮುನ್ನವೇ ಸೇವಿಸಬೇಕು. ಒಂದು ವೇಳೆ ಕೊಂಚವೇ ಹಾಳಾದ ಸಿಗಡಿಯನ್ನು ಸೇವಿಸಿದರೆ ಇದು ತೀವ್ರ ತರದ ವಿಷಾಹಾರವಾಗಿ ಪರಿಣಮಿಸುತ್ತದೆ. ಆದ್ದರಿಂದ ಪ್ರತಿ ಬಾರಿ ಸಿಗಡಿಯನ್ನು ಅಡುಗೆಗಾಗಿ ಆಯ್ಕೆ ಮಾಡುವ ಮುನ್ನ ಇದರ ಪರಿಮಳನ್ನು ಪರಿಶೀಲಿಸಿ ಕೊಂಚವೂ ಹಾಳಾದ ಪರಿಮಳ ಬಂದರೂ ಇದನ್ನು ಸೇವಿಸಬಾರದು.

 ಅರೆಬೇಯಿಸಿದ ಮಾಂಸ

ಅರೆಬೇಯಿಸಿದ ಮಾಂಸ

ಅರ್ಧಬೇಯಿಸಿ ಉಳಿದರ್ಧವನ್ನು ಸೇವಿಸುವ ಸಮಯದಲ್ಲಿ ಬೇಯಿಸಿ ತಯಾರಿಸಬಹುದಾದ ಡೆಲಿ ಮೀಟ್ ಎಂಬ ಉತ್ಪನ್ನಗಳು ಸಹಾ ಸಿದ್ಧರೂಪದ ಡಬ್ಬಿಗಳಲ್ಲಿ ಸಿಗುತ್ತವೆ. ಆದರೆ ಇವುಗಳನ್ನು ತೆರೆದ ಬಳಿಕ ಮೂರರಿಂದ ಐದು ದಿನಗಳ ಒಳಗೇ ಸೇವಿಸಬೇಕು. ಈ ಅವಧಿ ಮೀರಿದ ಆಹಾರವನ್ನು ಸೇವಿಸದಿರಲು The Center for Disease Control and Prevention ಇಲಾಖೆ ಸಲಹೆ ನೀಡುತ್ತದೆ. ಆದ್ದರಿಂದ ಈ ಆಹಾರಗಳನ್ನು ಸೇವಿಸುವ ದಿನದಂದೇ ಕೊಂಡು ತರುವುದು ಜಾಣತನವಾಗಿದೆ.

ಹಾಲು

ಹಾಲು

ಹೌದು! ಹಾಲು ಸಹಾ ಗಡವು ಮೀರಿದ ದಿನಾಂಕವನ್ನು ಹೊಂದಿದೆ. ಆದರೆ ಈ ಅವಧಿ ಹಾಲನ್ನು ಫ್ರಿಜ್ಜಿನಲ್ಲಿಟ್ಟಾಗ ಮಾತ್ರವೇ ಅನ್ವಯವಾಗುತ್ತದೆ. ಪ್ಯಾಕ್ ತೆರೆದ ಬಳಿಕ ಫ್ರಿಜ್ಜಿನಲ್ಲಿಟ್ಟರೂ ಸರಿ, ಎರಡು ದಿನಗಳ ಒಳಗೆ ಸೇವಿಸಿ ಖಾಲಿ ಮಾಡಬೇಕು. ಸಾಮಾನ್ಯ ತಾಪಮಾನದಲ್ಲಿಟ್ಟ ಹಾಲು ಒಂದೇ ದಿನದಲ್ಲಿ ಹುಳಿ ಬರುತ್ತದೆ. ಈ ಹಾಲನ್ನು ಕುಡಿಯುವುದು ಹೊಟ್ಟೆ ಕೆಡಿಸಲು ಮುಕ್ತ ಆಹ್ವಾನವಾಗಿದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಸಾಮಾನ್ಯವಾಗಿ ಫ್ರಿಜ್ಜಿನಲ್ಲಿರಿಸದಿದ್ದರೂ ಕೆಲಕಾಲ ಕೆಡದೇ ಉಳಿಯುತ್ತದೆ. ಆದರೆ ಫ್ರಿಜ್ಜಿನಲ್ಲಿಟ್ಟರೆ ಹೆಚ್ಚು ದಿನ ಉಳಿಯುತ್ತದೆ. ಮೊಟ್ಟೆ ಹಾಳಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಒಂದು ಸುಲಭ ವಿಧಾನವಿದೆ. ಒಂದು ಪಾತ್ರೆಯಲ್ಲಿ ತಣ್ಣೀರು ಹಾಕಿ ಮೊಟ್ಟೆಯನ್ನು ನೀರಿನಲ್ಲಿ ಹಾಕಿದಾಗ ಮೊಟ್ಟೆ ತೇಲಿದರೆ ಅದು ಮುಳುಗಬೇಕು. ಬದಲಿಗೆ ತೇಲಿದರೆ ಅಥವಾ ಪೂರ್ಣವಾಗಿ ಮುಳುಗದೇ ಇದ್ದರೆ ಇದು ಹಾಳಾಗಿದೆ ಎಂದರ್ಥ. ಹಾಳಾದ ಮೊಟ್ಟೆಯನ್ನು ಸೇವಿಸಿದರೆ ಹೊಟ್ಟೆ ಕೆಡಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

10 Foods Not To Eat Past Their Expiry Date

Have you eaten any foods which are past their expiry date? If yes, then you should know that eating certain foods past their expiry date could make you sick. Sometimes, it is painful to throw away the pricey foods which have already been expired. But it is a general thumb rule to eat foods before they get expired and eat them while they are still fresh.Certain processed foods have a longer shelf-life; for example, canned foods, dried pasta and frozen foods, provided they were stored correctly.
X
Desktop Bottom Promotion