ಕೊಬ್ಬು ತುಂಬಿದ ಲಿವರ್‌ನ ಸಮಸ್ಯೆಗೆ 10 ಅತ್ಯುತ್ತಮ ಆಹಾರಗಳು

Posted By: Arshad
Subscribe to Boldsky

ಕೊಬ್ಬು ತುಂಬಿದ ಯಕೃತ್ ಎಂಬ ಕಾಯಿಲೆಯ (fatty liver disease) ಬಗ್ಗೆ ಕೇಳಿದ್ದೀರಾ? ಸ್ಥೂಲಕಾಯಕ್ಕೆ ಕಾರಣವಾಗಿರುವ ಕೊಬ್ಬು ಒಂದು ವೇಳೆ ನಮ್ಮ ಯಕೃತ್ ನ ಜೀವಕೋಶಗಳ ಒಳಗೂ ಕಂಡುಬಂದರೆ ಇದನ್ನೇ ಕೊಬ್ಬು ತುಂಬಿದ ಯಕೃತ್ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯ ಪರಿಣಾಮವಾಗಿ ಯಕೃತ್ ನ ಗಾತ್ರ ಹೆಚ್ಚುತ್ತದೆ ಹಾಗೂ ಇದರಿಂದ ಹೊಟ್ಟೆಯ ಮೇಲ್ಗಡೆ, ಬಲಭಾಗದಲ್ಲಿ ಅಪಾರವಾದ ನೋವು ಎದುರಾಗುತ್ತದೆ.

ಈ ಕಾಯಿಲೆಯಲ್ಲಿ ಎರಡು ಬಗೆಗಳಿವೆ. ಒಂದು ಮದ್ಯಪಾನದ ಮೂಲಕ ಎದುರಾದ ಕಾಯಿಲೆ ಹಾಗೂ ಎರಡನೆಯದ್ದು ಇತರ ಕಾರಣಗಳಿಂದ ಎದುರಾದ ಕಾಯಿಲೆ. ಈ ಕಾಯಿಲೆ ಉಲ್ಬಣಗೊಂಡರೆ ಇದು ಯಕೃತ್ ವೈಫಲ್ಯಕ್ಕೆ ಕಾರಣವಾಗುತ್ತದೆ. ಹೆಸರೇ ತಿಳಿಸುವಂತೆ ಮೊದಲ ಬಗೆಯ ಕಾಯಿಲೆ ಮದ್ಯಪಾನದ ಪರಿಣಾಮವಾಗಿದ್ದರೆ ಎರಡನೆಯದಕ್ಕೆ ವ್ಯಾಯಾಮರಹಿತ ಆರಾಮಜೀವನ ಪ್ರಮುಖವಾದ ಕಾರಣವಾಗಿದೆ.

ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಈ ಕೊಬ್ಬಿನ ಇರುವಿಕೆ ಯಾವಾಗ ತಿಳಿದುಬಂದಿದೆಯೋ ಆಗಿನಿಂದಲೇ ಚಿಕಿತ್ಸೆಯನ್ನೂ ಪ್ರಾರಂಭಿಸಿದರೆ ಅಷ್ಟೂ ಉತ್ತಮ. ಮೊದಲಾಗಿ ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಹಾರಕ್ರಮದಲ್ಲಿ ಬದಲಾವಣೆ ಹಾಗೂ ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿರಬೇಕು. ಇದರಿಂದ ಯಕೃತ್‌ನ ಜೀವಕೋಶಗಳು ಹೆಚ್ಚಿನ ಹಾನಿಗೊಳಗಾಗುವುದರಿಂದ ರಕ್ಷಣೆ ಪಡೆಯುತ್ತವೆ ಹಾಗೂ ದೇಹ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಹಾಗೂ ಉರಿಯೂತವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನಿತ್ಯದ ಆಹಾರದಲ್ಲಿ ಆರೋಗ್ಯಕರ ಕೊಬ್ಬು, ಆಂಟಿ ಆಕ್ಸಿಡೆಂಟುಗಳು ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊಬ್ಬಿನಿಂದ ಕೂಡಿದ ಯಕೃತ್ ಕಾಯಿಲೆಯಿಂದ ಸಾಕಷ್ಟು ಮಟ್ಟಿಗೆ ರಕ್ಷಣೆ ಪಡೆಯಬಹುದು. ಬನ್ನಿ, ಈ ಕಾಯಿಲೆಯನ್ನು ರಕ್ಷಿಸಲು ಸೂಕ್ತವಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ... 

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು

ಓಟ್ಸ್, ಬಾರ್ಲಿ, ಕಂದು ಅಕ್ಕಿ ಹಾಗೂ ರೈ (ಸಣ್ಣಗೋಧಿ) ಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಕರಗದ ನಾರು ಇವೆ. ಇವು ಹೃದಯ ಕಾಯಿಲೆ, ಮಧುಮೇಹ ಹಾಗೂ ಇತರ ಗಂಭೀರ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಈ ಅಹಾರಗಳ ಗ್ಲೈಸೆಮಿಕ್ ಕೋಷ್ಟಕ ಕಡಿಮೆ ಇರುತ್ತದೆ ಅಥವಾ ಜೀರ್ಣವಾದ ಬಳಿಕ ಸಕ್ಕರೆ ರಕ್ತದಲ್ಲಿ ಸೇರುವ ಸಮಯ ಹೆಚ್ಚಿರುತ್ತದೆ. ಈ ಆಹಾರಗಳ ಸೇವನೆಯಿಂದ ಕೊಬ್ಬು ತುಂಬಿದ ಯಕೃತ್ ಕಾಯಿಲೆಯಿಂದ ರಕ್ಷಣೆ ಪಡೆಯಬಹುದು.

ಕಾಫಿ

ಕಾಫಿ

ಕಾಫಿಯ ಸೇವನೆಯಿಂದಲೂ ಕೊಬ್ಬು ತುಂಬಿದ ಯಕೃತ್ ಕಾಯಿಲೆಯ ಸಾಧ್ಯತೆ ಕಡಿಮೆಯಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡಂತೆ ಕಾಫಿಯನ್ನು ನಿತ್ಯವೂ ಸೇವಿಸುವವರಲ್ಲಿ ಕಾಫಿ ಸೇವಿಸದೇ ಇರುವವರಿಗಿಂತಲೂ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಅತಿ ಕಡಿಮೆ ಕಂಡುಬಂದಿದೆ. ಕೆಫೀನ್ ಸೇವನೆಯಿಂದ ಕೊಬ್ಬು ತುಂಬಿದ ಯಕೃತ್ ನ ಕಾಯಿಲೆ ಇರುವ ವ್ಯಕ್ತಿಗಳ ಯಕೃತ್ ನಲ್ಲಿರುವ ಕಿಣ್ವಗಳ ಪ್ರಮಾಣ ಕಡಿಮೆಯಾಗುವುದನ್ನೂ ಗಮನಿಸಲಾಗಿದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಬ್ರೋಕೋಲಿ, ಪಾಲಕ್, ಕೇಲ್ ಎಲೆಗಳು, ಟೊಮಾಟೋ ಹಾಗೂ ದೊಣ್ಣೆ ಮೆಣಸುಗಳನ್ನು ಆಹಾರದ ರೂಪದಲ್ಲಿ ಸೇವಿಸುವ ಮೂಲಕ ದೇಹಕ್ಕೆ ಹಲವಾರು ಪೋಷಕಾಂಶಗಳು ಲಭಿಸುತ್ತವೆ. ಅಮೇರಿಕನ್ ಲಿವರ್ ಫೌಂಡೇಶನ್ ಸಂಸ್ಥೆ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಇರುವ ವ್ಯಕ್ತಿಗಳು ಹೆಚ್ಚು ಹೆಚ್ಚಾಗಿ ಈ ತರಕಾರಿಗಳನ್ನು ತಿನ್ನುವಂತೆ ಸಲಹೆ ಮಾಡುತ್ತದೆ.

ಟೋಫು

ಟೋಫು

ಕೊಬ್ಬು ತುಂಬಿದ ಯಕೃತ್ ನಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಟೋಫು ಇನ್ನೊಂದು ಉತ್ತಮ ಆಹಾರವಾಗಿದೆ. ಇದರಲ್ಲಿ ಕಡಿಮೆ ಕೊಬ್ಬು ಹಾಗೂ ಹೆಚ್ಚಿನ ಪ್ರೋಟೀನ್ ಇರುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಎ ಹಾಗೂ ಮೆಗ್ನೀಶಿಯಂ ಇರುತ್ತವೆ. ಟೋಫುವನ್ನು ನಿಯಮಿತವಾಗಿ ಸೇವಿಸುವ ಮೂಲಕ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ ಈಗಾಗಲೇ ಈ ತೊಂದರೆ ಪ್ರಾರಂಭವಾಗಿದ್ದರೆ ಶೀಘ್ರವಾಗಿ ನಿವಾರಣೆಯೂ ಆಗುತ್ತದೆ.

ಮೀನು

ಮೀನು

ಸಾಲ್ಮನ್, ಬಂಗಡೆ, ಟ್ಯೂನಾ ಹಾಗೂ ತಾರ್ಲಿಯಂತಹ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಉರಿಯೂತವನ್ನು ಕಡಿಮೆಗೊಳಿಸುತ್ತವೆ ಹಾಗೂ ಯಕೃತ್ ನಲ್ಲಿರುವ ಕೊಬ್ಬನ್ನು ಕರಗಿಸಲು ನೆರವಾಗುತ್ತವೆ. ಅಲ್ಲದೇ ಒಮೆಗಾ 3 ಕೊಬ್ಬಿನ ಆಮ್ಲಗಳು ಈ ಕಾಯಿಲೆ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತವೆ.

ಹಣ್ಣುಗಳು

ಹಣ್ಣುಗಳು

ಆಂಟಿ ಆಕ್ಸಿಡೆಂಟುಗಳು ಹೆಚ್ಚಿರುವ ಹಣ್ಣುಗಳಾದ ಕಿತ್ತಳೆ, ಪೊಪ್ಪಾಯಿ, ಬ್ಲೂಬೆರಿ, ಚೆರ್ರಿ ಹಣ್ಣುಗಳು, ರಾಸ್ಪ್ರೆರಿ ಹಾಗೂ ಬೆಣ್ಣೆಹಣ್ಣುಗಳ ಸೇವನೆಯಿಂದ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ವಿಶೇಷವಾಗಿ ಬೆಣ್ಣೆಹಣ್ಣಿನಲ್ಲಿರುವ ಪೋಷಕಾಂಶಗಳು ಯಕೃತ್ ಗೆ ಅತಿ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ರಾಸಾಯನಿಕಗಳು ಯಕೃತ್ ಹಾನಿಗೊಳಗಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡುತ್ತವೆ.

ಅಪರ್ಯಾಪ್ತ ಕೊಬ್ಬುಗಳು

ಅಪರ್ಯಾಪ್ತ ಕೊಬ್ಬುಗಳು

ಒಣಫಲಗಳಾದ ಅಕ್ರೋಟು, ಬಾದಾಮಿ ಹಾಗೂ ಇತರ ಆಹಾರಗಳಲ್ಲಿ ಅಪರ್ಯಾಪ್ತ ಕೊಬ್ಬು ಹೆಚ್ಚಿರುತ್ತದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುವ ಜೊತೆಗೇ ಮೆದುಳಿನ ಕ್ಷಮತೆ ಹೆಚ್ಚಿಸುತ್ತವೆ ಹಾಗೂ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆ. ಈ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಇವು ಯಕೃತ್ ನ ಕ್ಷಮತೆಯನ್ನೂ ಹೆಚ್ಚಿಸಲು ನೆರವಾಗುತ್ತವೆ ತನ್ಮೂಲಕ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಆವರಿಸುವ ಸಾಧ್ಯತೆ ಕಡಿಮೆ ಮಾಡುತ್ತವೆ.

ಹಸಿರು ಟೀ

ಹಸಿರು ಟೀ

ಹರಿಸು ಟೀ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನಾವೆಲ್ಲಾ ಅರಿತಿದ್ದೇವೆ. ಈ ನೈಸರ್ಗಿಕ ಟೀ ಯಕೃತ್ ನಲ್ಲಿ ಕೊಬ್ಬು ತುಂಬುವ ಪ್ರಕ್ರಿಯೆಗೆ ತಡೆ ಒಡ್ಡಬಲ್ಲುದು. ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಹಸಿರು ಟೀ ಸೇವನೆಯಿಂದ ಕೊಬ್ಬಿನ ಯಕೃತ್ ನಲ್ಲಿ ಸಂಗ್ರಹ ಕಡಿಮೆಯಾಗುತ್ತದೆ ಹಾಗೂ ಯಕೃತ್ ನ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಇದು ಅತ್ಯಂತ ಆರೋಗ್ಯಕರ ಅಡುಗೆ ಎಣ್ಣೆಯಾಗಿದೆ ಹಾಗೂ ಇದರ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ಬೆಣ್ಣೆ ಅಥವಾ ಮಾರ್ಜರಿನ್ ನಲ್ಲಿರುವ ಕೊಬ್ಬುಗಳಿಗಿಂತ ಹೆಚ್ಚು ಉತ್ತಮವಾಗಿವೆ. ಅಧ್ಯಯನಗಳಲ್ಲಿ ಕಂಡುಕೊಂಡಂತೆ ಆಲಿವ್ ಎಣ್ಣೆಯ ಸೇವನೆಯಿಂದ ಯಕೃತ್ ನಲ್ಲಿರುವ ಕಿಣ್ವಗಳ ಮಟ್ಟ ಕಡಿಮೆಯಾಗುತ್ತದೆ ಹಾಗೂ ತೂಕವನ್ನು ನಿಗ್ರಹಿಸಿ ಕೊಬ್ಬು ತುಂಬಿದ ಯಕೃತ್ ಕಾಯಿಲೆ ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಸೂರ್ಯಕಾಂತಿ ಹೂವಿನ ಬೀಜಗಳು

ಸೂರ್ಯಕಾಂತಿ ಹೂವಿನ ಬೀಜಗಳು

ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಕೊಬ್ಬು ತುಂಬಿದ ಯಕೃತ್ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ ಹಾಗೂ ಇನ್ನಷ್ಟು ಘಾಸಿಗೊಳಗಾಗುವುದರಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬುಗಳಿದ್ದು ಇವುಗಳ ಸೇವನೆಯಿಂದ ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ ಮತ್ತು ಕ್ಷಮತೆ ಹೆಚ್ಚುತ್ತದೆ. ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ೬ ಹಾಗೂ ಮೆಗ್ನೇಶಿಯಂ ಹೇರಳವಾಗಿವೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

 
English summary

fatty liver food disease diet plan

It's very important to treat a fatty liver disease with a proper diet. It is necessary to work towards a healthy weight through diet and exercise. The nutritious foods that you include in your diet will prevent cell damage, make it easier for the body to use insulin and lower inflammation. Having a combination of healthy fats, antioxidants and complex carbohydrates, it will help to prevent fatty liver disease to a great extent.
Story first published: Saturday, March 10, 2018, 23:31 [IST]