ಹ್ಯಾಂಗ್ ಓವರ್ ಹೆಚ್ಚಿಸುವ ಆಹಾರಗಳು

Posted By: Hemanth
Subscribe to Boldsky

ಗೆಳೆಯರು ಆಯೋಜಿಸಿರುವ ಅಥವಾ ಸಹೋದ್ಯೋಗಿಗಳ ಜತೆಗೆ ನೀವು ಪಾರ್ಟಿಗೆ ಹೋಗಿರುತ್ತೀರಿ. ರಾತ್ರಿಯಿಡಿ ಪಾರ್ಟಿ ಮಾಡುವಾಗ ನಿಮಗೆ ಎಷ್ಟು ಕುಡಿದಿದ್ದೀರಿ ಎನ್ನುವ ಲೆಕ್ಕವೇ ಇರುವುದಿಲ್ಲ. ಅದು ತಲೆಗೆ ಕೂಡ ಹಿಡಿದಿರುತ್ತದೆ. ಇಂತಹ ಸಮಯದಲ್ಲಿ ಮರುದಿನ ಬೆಳಗ್ಗೆ ಏಳುವಾಗ ತಲೆ ಕೂಡ ಭಾರವಾಗುವುದು. ತಲೆ ನೋವಿನಂತೆ ಭಾಸವಾಗುವುದು. ಇದು ಹೆಚ್ಚಿನವರಿಗೆ ಸಾಮಾನ್ಯ. ಒಂದು ಅಧ್ಯಯನದ ಪ್ರಕಾರ ಶೇ.76ರಷ್ಟು ಮಂದಿ ಪುರುಷರಿಗೆ ಇಂತಹ ಸಮಸ್ಯೆಯು ಕಾಡುವುದು. ನಿರ್ಜಲೀಕರಣ, ಸ್ನಾಯುಗಳ ನೋವು, ತಲೆನೋವು, ಆಲಸ್ಯ, ವಾಂತಿ, ಎದೆಬಡಿತ ಹೆಚ್ಚಾಗುವುದು, ವಾಕರಿಕೆ ಮತ್ತು ಬೆಳಕು ನೋಡಲು ಸಾಧ್ಯವಾಗದೆ ಇರುವುದು ಇದರ ಕೆಲವೊಂದು ಲಕ್ಷಣಗಳಾಗಿವೆ.

ಪರಿಣಾಮಕಾರಿಯಾದ ಹ್ಯಾಂಗ್ ಓವರ್ ನಿವಾರಕಗಳು

ಹ್ಯಾಂಗ್ ಓವರ್ ನಿಂದಾಗಿ ನಿಮ್ಮ ದೇಹವು ತುಂಬಾ ಭಾರವಾದಂತೆ ಅನಿಸಿ ಇಡೀ ದಿನ ನೀವು ನಿದ್ರೆಯಲ್ಲೇ ಕಳೆಯಬಹುದು. ಈ ವೇಳೆ ನಿಮಗೆ ಏನೂ ತಿನ್ನುವ ಮನಸ್ಸಾಗುವುದಿಲ್ಲ. ಇದರಿಂದಾಗಿ ಮತ್ತಷ್ಟು ಆಲಸ್ಯವು ನಿಮ್ಮನ್ನು ಕಾಡುವುದು. ಹ್ಯಾಂಗ್ ಓವರ್ ನ್ನು ಮತ್ತಷ್ಟು ಹೆಚ್ಚಿಸುವಂತಹ ಕೆಲವೊಂದು ಆಹಾರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಹ್ಯಾಂಗ್ ಓವರ್ ನಲ್ಲಿ ಇರುವಾಗ ನೀವು ಕಡೆಗಣಿಸಬೇಕಾದ ಕೆಲವು ಆಹಾರ ಮತ್ತು ಪಾನೀಯಗಳ ಬಗ್ಗೆ ನಿಮಗಿಂದು ತಿಳಿಸಿಕೊಡಲಿದ್ದೇವೆ.... 

ಕರಿದ ಆಹಾರಗಳು

ಕರಿದ ಆಹಾರಗಳು

ನಿಮಗೆ ಕರಿದ ಮತ್ತು ಎಣ್ಣೆಯಂಶವಿರುವ ಆಹಾರ ತಿನ್ನಬೇಕೆನಿಸುವುದು. ಇದರಲ್ಲಿ ಹೆಚ್ಚಿನ ಕ್ಯಾಲರಿ ಹಾಗೂ ಕಾರ್ಬ್ರೋಹೈಡ್ರೇಟ್ಸ್ ಇರುವುದು. ಆದರೆ ಕರಿದ ತಿಂಡಿಗಳನ್ನು ತಿನ್ನುವುದು ಒಳ್ಳೆಯ ವಿಚಾರವಲ್ಲ. ಯಾಕೆಂದರೆ ಇದರಿಂದ ನೀವು ಮತ್ತಷ್ಟು ಆಲಸ್ಯಕ್ಕೆ ಒಳಗಾಗುತ್ತೀರಿ ಮತ್ತು ದೇಹವು ಹಿಂಡಿದಂತಾಗುವುದು. ಕರಿದ ಮತ್ತು ಎಣ್ಣೆಯಂಶವಿರುವ ಆಹಾರವು ಹೊಟ್ಟೆಗೆ ಕಿರಿಕಿರಿ ಉಂಟುಮಾಡಿ ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡಬಹುದು.

ಕಾಫಿ

ಕಾಫಿ

ಹ್ಯಾಂಗ್ ಓವರ್ ನಿಂದ ಹೊರಬಂದು, ಒಳ್ಳೆಯ ಭಾವನೆ ಬರಲು ಕಾಫಿ ಕುಡಿಯಬೇಕೆಂದು ನೀವು ಬಯಸಬಹುದು. ಆದರೆ ಇದು ತಪ್ಪು, ಕೆಲವು ಕಪ್ ಕಾಫಿ ಕುಡಿಯುವುದರಿಂದ ಹ್ಯಾಂಗ್ ಓವರ್ ಸಮಸ್ಯೆ ಹೆಚ್ಚಾಗಬಹುದು. ದೇಹದಲ್ಲಿ ಕೆಫಿನ್ ದಹಿಸುವಾಗ ಹೆಚ್ಚಿನ ಶಕ್ತಿ ವ್ಯಯವಾಗುವುದು. ಇದರಿಂದ ನಿಶ್ಯಕ್ತಿ ಕಾಡಬಹುದು.

ಬರ್ಗರ್

ಬರ್ಗರ್

ರುಚಿಕರವಾಗಿರುವ ಬರ್ಗರ್ ಯಾರಿಗೆ ತಾನೇ ಇಷ್ಟವಾಗಲ್ಲ? ಪ್ರತಿಯೊಬ್ಬರು ಇದನ್ನು ಇಷ್ಟಪಡುವರು. ಆದರೆ ಮಾಂಸವಿರುವ ಬರ್ಗರ್ ಬೆಳಗ್ಗೆ ಸೇವನೆ ಮಾಡುವುದು ಒಳ್ಳೆಯದಲ್ಲ. ಬರ್ಗರ್ ನಲ್ಲಿ ಹೆಚ್ಚಿನ ಕ್ಯಾಲರಿ ಮತ್ತು ಕೊಬ್ಬುಗಳು ಇವೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಕಾಣಿಸಿಕೊಳ್ಳಬಹುದು. ಇದರಿಂದ ನಿಮಗೆ ದೇಹ ಭಾರವಾಗಬಹುದು.

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ಹ್ಯಾಂಗ್ ಓವರ್ ಹೋಗಲಿ ಎಂದು ನೀವು ಒಂದು ಲೋಟ ಕಿತ್ತಳೆ ಜ್ಯೂಸ್ ಕುಡಿಯಲು ಬಯಸಿದ್ದೀರಾ? ಆದರೆ ಇದು ತಪ್ಪು. ಯಾಕೆಂದರೆ ಕಿತ್ತಳೆಯಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಆಮ್ಲೀಯ ಗುಣಗಳು ಇವೆ. ಇದರಿಂದ ಹೊಟ್ಟೆಗೆ ಇದು ಕಿರಿಕಿರಿ ಉಂಟು ಮಾಡಿ ಬಾಯಾರಿಕೆಯಾದಂತೆ ಆಗಬಹುದು. ಇದಕ್ಕೆ ಬದಲಿಗೆ ಆದಷ್ಟು ನೀರು ಕುಡಿಯಿರಿ.

ಕೋಳಿ, ಹಂದಿ ಮಾಂಸ

ಕೋಳಿ, ಹಂದಿ ಮಾಂಸ

ನೀವು ಹೆಚ್ಚಿನ ಪ್ರಮಾಣದಲ್ಲಿ ಕೋಳಿ, ಹಂದಿ ಅಥವಾ ಬೀಫ್ ಸೇವನೆ ಮಾಡಿದರೆ, ಆಗ ನಿಮಗೆ ಹ್ಯಾಂಗ್ ಓವರ್ ವೇಳೆ ತಲೆನೋವು ಕೂಡ ಕಾಣಿಸುವುದು. ನೀವು ಹ್ಯಾಂಗ್ ಓವರ್ ನಲ್ಲಿ ಇರುವಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಇರುವುದು. ಮಾಂಸ ಸೇವನೆಯಿಂದ ಪ್ರೋಟೀನ್ ಸೇವನೆ ಹೆಚ್ಚಾಗುವುದು ಮತ್ತು ಬೇಕಾಗಿರುವ ಕಾರ್ಬ್ಸ್ ಸಿಗುವುದಿಲ್ಲ.

ಸಕ್ಕರೆಯಿರುವ ಪಾನೀಯಗಳು

ಸಕ್ಕರೆಯಿರುವ ಪಾನೀಯಗಳು

ಸಕ್ಕರೆಯಿರುವ ಪಾನೀಯಗಳನ್ನು ಹ್ಯಾಂಗ್ ಓವರ್ ವೇಳೆ ಕುಡಿದರೆ ಅದರಿಂದ ನಿಮಗೆ ನಷ್ಟವೇ ಹೊರತು, ಲಾಭವಿಲ್ಲ. ಇದರಲ್ಲಿ ಇರುವಂತಹ ಹೆಚ್ಚಿನ ಸಕ್ಕರೆ ಅಂಶವು ನಿಮ್ಮ ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸುವುದು. ಹೊಟ್ಟೆಯ ಸಮಸ್ಯೆಯು ಬರುವುದು.

ಉಪ್ಪಿನಕಾಯಿ

ಉಪ್ಪಿನಕಾಯಿ

ಹ್ಯಾಂಗ್ ಓವರ್ ನಲ್ಲಿ ಇರುವಾಗ ನೀವು ಸೇವಿಸಲೇಬಾರದ ಆಹಾರವೆಂದರ ಅದು ಉಪ್ಪಿನಕಾಯಿ. ಉಪ್ಪಿನಕಾಯಿಯಲ್ಲಿ ನೈಸರ್ಗಿಕವಾಗಿ ಆಮ್ಲೀಯ ಗುಣವಿರುವುದು. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಉಬ್ಬರ ಕಾಣಿಸುವುದು. ಉಪ್ಪಿನಕಾಯಿ ಹೊಟ್ಟೆಯ ಪದರಕ್ಕೆ ಕಿರಿಕಿರಿ ಉಂಟುಮಾಡುವುದು. ಇದಕ್ಕೆ ಬದಲಿಗೆ ನೀವು ಸೌತೆಕಾಯಿ ಉಪ್ಪಿನಕಾಯಿ ತಿನ್ನಿ.

ಸೋಯಾ ಪ್ರೋಟೀನ್ ಶೇಕ್

ಸೋಯಾ ಪ್ರೋಟೀನ್ ಶೇಕ್

ಸೋಯಾ ಪ್ರೋಟೀನ್ ಶೇಕ್ ಕುಡಿಯುವುದರಲ್ಲಿ ಯಾವುದೇ ತಪ್ಪಿಲ್ಲವಾದರೂ ಹ್ಯಾಂಗ್ ಓವರ್ ವೇಳೆ ಇದರ ಸೇವನೆ ಕಡೆಗಣಿಸಿ. ಯಾಕೆಂದರೆ ಸೋಯಾದಲ್ಲಿ ಹೆಚ್ಚಿನ ಪ್ರೋಟೀನ್ ಇರುವುದು ಮತ್ತು ದೇಹವು ಹೆಚ್ಚು ಪ್ರೋಟೀನ್ ಹೀರಿಕೊಂಡು ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಪಡೆದರೆ ಅದರಿಂದ ಪರಿಸ್ಥಿತಿ ಕೆಡುವುದು. ಇದರಿಂದ ಸೋಯಾ ಪ್ರೋಟೀನ್ ಶೇಕ್ ಕಡೆಗಣಿಸಿ.

ಕ್ರೀಡಾ ಪಾನೀಯಗಳು

ಕ್ರೀಡಾ ಪಾನೀಯಗಳು

ಹೆಚ್ಚಿನ ಕ್ರೀಡಾ ಪಾನೀಯಗಳಲ್ಲಿ ಅಧಿಕ ಕ್ಯಾಲರಿ ಮತ್ತು ಸಕ್ಕರೆಯಂಶವು ಹೆಚ್ಚಾಗಿರುವುದು. ಇದನ್ನು ಕುಡಿದರೆ ಹ್ಯಾಂಗ್ ಓವರ್ ಪರಿಸ್ಥಿತಿ ಮತ್ತಷ್ಟು ಕೆಡುವುದು. ಕ್ರೀಡಾ ಪಾನೀಯದಲ್ಲಿ ಹೆಚ್ಚಿನ ಜೋಳದ ಸಿರಪ್, ಕೃತಕ ರುಚಿ ಮತ್ತು ಬಣ್ಣ ಇರುವುದು. ಇದರಿಂದ ಹ್ಯಾಂಗ್ ಓವರ್ ಸಮಸ್ಯೆ ಮತ್ತಷ್ಟು ಕಾಡುವುದು.

ಕರಿದ ತಿಂಡಿಗಳು

ಕರಿದ ತಿಂಡಿಗಳು

ಕರಿದ ತಿಂಡಿಗಳಲ್ಲಿ ಯಾವುದೇ ಪೋಷಕಾಂಶಗಳು ಇಲ್ಲದೆ ಇರುವ ಕಾರಣದಿಂದ ಇದು ಹ್ಯಾಂಗ್ ಓವರ್ ಸಮಸ್ಯೆಯನ್ನು ಮತ್ತಷ್ಟು ಕೆಡಿಸುವುದು. ಕ್ಯಾಂಡಿ ಬಾರ್, ಕುಕ್ಕೀಸ್, ಪ್ಯಾಸ್ಟ್ರೀಸ್ ಮತ್ತು ಇತರ ಕೆಲವು ತಿಂಡಿಗಳಲ್ಲಿ ಹೆಚ್ಚಿನ ಕ್ಯಾಲರಿ ಇದೆ ಮತ್ತು ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ ಮತ್ತು ಹೆಚ್ಚುವರಿ ಸಕ್ಕರೆಯಂಶವಿದೆ. ಈ ತಿಂಡಿಗಳಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶ ಸಿಗಲ್ಲ. ಇದರಿಂದ ಹ್ಯಾಂಗ್ ಓವರ್ ಸಮಸ್ಯೆ ಕೆಡುವುದು.

English summary

10 Foods And Drinks That Could Worsen A Hangover

When you have a terrible hangover, you body tends to dehydrate and you feel tired and sleepy the whole day. Also, you don't feel like eating foods because you suffer with a bad stomach pain that makes you feel even more tired. Today, in this article, we will talk about the foods and drinks that could worsen a hangover. Here are 10 foods and drinks that you should avoid when you're in a hangover.