For Quick Alerts
ALLOW NOTIFICATIONS  
For Daily Alerts

  ನೋಡಲಿಕ್ಕೆ ಸುಂದರ, ಆದರೆ ಹೃದಯಕ್ಕೆ ಅಷ್ಟೇ ಕೆಟ್ಟದಾದ ಹತ್ತು ಆಹಾರಗಳು

  |

  ಆರೋಗ್ಯದ ದೃಷ್ಟಿಯಿಂದ ಹೃದಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿತಿದ್ದೇವೆ. ಜೀವಮಾನವಿಡೀ ಒಂದು ಕ್ಷಣವೂ ವಿರಮಿಸದೇ ಕಾರ್ಯನಿರ್ವಹಿಸುವ ಹೃದಯ ಅತ್ಯಂತ ಪ್ರಮುಖ ಅಂಗವಾಗಿದ್ದು ಈ ಕಾರಣದಿಂದಲಾದರೂ ಸರಿ, ಅತಿ ಹೆಚ್ಚಿನ ಕಾಳಜಿ ವಹಿಸಲೇಬೇಕಾದ ಅಂಗವೂ ಆಗಿದೆ. ಆದ್ದರಿಂದ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಆಹಾರ ಮತ್ತು ಆಹಾರಕ್ರಮ ಎಲ್ಲವೂ ಹೃದಯಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಲೇಬೇಕಾಗುತ್ತದೆ.

  ಹೃದಯ ಸಂಬಂಧಿ ಕಾಯಿಲೆಗಳು ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿ ಕಾಡುತ್ತವೆ. ಸಮಾನವಾದ ಲಕ್ಷಣಗಳೆಂದರೆ ಉಸಿರು ತೆಗೆದುಕೊಳ್ಳಲು ಕಷ್ಟವಾಗುವುವು, ವಾಕರಿಕೆ, ಸುಸ್ತು ಹಾಗೂ ಎದೆಯ ಭಾಗದಲ್ಲಿ ಸೂಜಿಯಲ್ಲಿ ಚುಚ್ಚಿದಂತೆ ನೋವಾಗುವುದು ಇತ್ಯಾದಿ. Atherosclerosis ಎಂಬ ಕಾಯಿಲೆಯಿಂದ ನರಗಳ ಗೋಡೆಗಳು ಹೆಚ್ಚು ಪೆಡಸಾಗುತ್ತವೆ ಹಾಗೂ ಇದರ ಮೂಲಕ ರಕ್ತಗಳನ್ನು ದೂಡಿಕೊಡಲು ಹೃದಯಕ್ಕೆ ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ. ಇದೂ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ.

  ಪಾದದ ಕಾಲ್ಬೆರಳನ್ನು ಬಗ್ಗಿ ಮುಟ್ಟಿ ನೋಡಿ, ಹೃದಯ ಸಮಸ್ಯೆ ಇದ್ದರೆ ತಿಳಿಯುವುದು

  ಈ ಸ್ಥಿತಿಗೆ ತಳ್ಳಲು ನಮ್ಮ ಕೆಲವು ಆಹಾರಾಭ್ಯಾಸಗಳೇ ಕಾರಣ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅತಿ ಹೆಚ್ಚು ಪರ್ಯಾಪ್ತ ಕೊಬ್ಬು, ಸೋಡಿಯಂ ಹಾಗೂ ಕೊಲೆಸ್ಟ್ರಾಲ್ ಇರುವ ಆಹಾರಗಳ ಸೇವನೆ ಹೃದಯವನ್ನು ಅಪಾಯಕ್ಕೆ ನೂಕುತ್ತವೆ. ಉದಾಹರಣೆಗೆ ಅತಿ ಹೆಚ್ಚಿನ ಉಪ್ಪು ಇರುವ ಆಹಾರ ನಿಮಗೆ ಇಷ್ಟವೇ ಇರಬಹುದು ಆದರೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಸತತವಾಗಿ ಹೀಗೆ ಅಧಿಕ ರಕ್ತದೊತ್ತಡವೇ ಇದ್ದರೆ ಈ ಒತ್ತಡಕ್ಕೆ ತಕ್ಕಂತೆ ರಕ್ತನಾಳಗಳು ಅನಿವಾರ್ಯವಾಗಿ ಗಟ್ಟಿಯಾಗಲೇಬೇಕಾಗುತ್ತದೆ. ಕೊಲೆಸ್ಟಾಲ್ ಜಿಡ್ಡು ರಕ್ತನಾಳಗಳ ಒಳಗೆಲ್ಲಾ ಅಂಟಿಕೊಂಡು ಒಳವಿಸ್ತಾರವನ್ನು ಕಿರಿದಾಗಿಸಿ ಹೃದಯದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತವೆ. ತನ್ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಬನ್ನಿ, ಇಂತಹ ಹತ್ತು ಆಹಾರಗಳು ಯಾವುವು ಎಂಬುದನ್ನು ನೋಡೋಣ;

  ಪ್ಯಾಕ್ ಮಾಡಿದ ಸೂಪ್

  ಪ್ಯಾಕ್ ಮಾಡಿದ ಸೂಪ್

  ಸಾಮಾನ್ಯವಾಗಿ ಹೋಟೆಲುಗಳಲ್ಲಿ ಬಿಸಿಬಿಸಿಯಾಗಿ ಬಡಿಸುವ ಸೂಪ್ ಗಳು ಅವರು ಸ್ವಂತವಾಗಿ ತಯಾರಿಸಿರಿಲಿಕ್ಕಿಲ್ಲ. ಅಥವಾ ಮನೆಯಲ್ಲಿಯೇ ನೀವು ಸಿದ್ಧರೂಪದ ಪ್ಯಾಕೆಟ್ ಬಿಸಿ ಮಾಡಿ ಸೂಪ್ ಸವಿದಿರಬಹುದು. ಆದರೆ ಈ ಸೂಪ್ ಗಳಲ್ಲಿ ರುಚಿಕಾರಕವಾಗಿ ಅಜಿನೋಮೋಟೋ ಎಂದು ನಾವು ಅರಿತಿರುವ MSG (Monosodium Glutamate) ಎಂಬ ರಾಸಾಯನಿಕವನ್ನು ಸೇರಿಸಿರಲಾಗಿರುತ್ತದೆ. ಇದು ಹೃದಯಕ್ಕೆ ಅತ್ಯಂತ ಮಾರಕವಾದ ಲವಣವಾಗಿದೆ. ಅಲ್ಲದೇ ಸೂಪ್ ನಲ್ಲಿ ಹೆಚ್ಚಿನ ಉಪ್ಪು ಸಹಾ ಇದ್ದು ನರಗಳನ್ನು ದೃಢಗೊಳಿಸುತ್ತವೆ, ತನ್ಮೂಲಕ ಹೃದಯದ ಸ್ತಂಭನದ ಸಾಧ್ಯತೆ ಹೆಚ್ಚಿಸುತ್ತದೆ. ಆದ್ದರಿಂದ ಹೃದಯ ಆರೋಗ್ಯಕ್ಕಾದರೂ ಸರಿ, ಮನೆಯಲ್ಲಿಯೇ ಸೂಪ್ ತಯಾರಿಸಿ ಸೇವಿಸಿ.

  ಹುರಿದ ಕೋಳಿಮಾಂಸ

  ಹುರಿದ ಕೋಳಿಮಾಂಸ

  ಇಂದು ಫ್ರೈಡ್ ಚಿಕನ್ ಎಂಬ ಹೆಸರಿನಲ್ಲಿ ದೇಶ ವಿದೇಶದ ಖ್ಯಾತ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಭರ್ಜರಿ ಜಾಹೀರಾತಿನೊಂದಿಗೆ ಭಾರತದಲ್ಲಿ ಮಾರುತ್ತಿವೆ. ಸಿನೇಮಾ ಪರದೆಯ ಹತ್ತು ಪಟ್ಟು ದೊಡ್ಡ ಭಿತ್ತಿಚಿತ್ರಗಳಲ್ಲಿ ಹುರಿದ ಕೋಳಿಯ ಚಿತ್ರವನ್ನು ನೋಡಿದರೆ ಬಾಯಲ್ಲಿ ನೀರೂರದಿರುವ ವ್ಯಕ್ತಿಯೇ ಇರಲಾರರು. ಆದರೆ ಇವು ಎಷ್ಟೇ ಸುಂದರವಾಗಿದ್ದರೂ, ಹೃದಯಕ್ಕೆ ಮಾತ್ರ ವಿಷವೇ ಸರಿ. ಏಕೆಂದರೆ ಒಂದು ಪ್ರಮಾಣದ ಈ ಹುರಿದ ಕೋಳಿಯಲ್ಲಿ 63 ಗ್ರಾಂ ಪರ್ಯಾಪ್ತ ಕೊಬ್ಬು,, 350 mg ಕೆಟ್ಟ ಕೊಲೆಸ್ಟ್ರಾಲ್, 920 ಕ್ಯಾಲೋರಿಗಳಿರುತ್ತವೆ. ಇದು ಹೃದಯಕ್ಕೆ ಎಷ್ಟು ಕೆಟ್ಟದು ಎಂದು ಈ ಅಂಕಿಅಂಶಗಳೇ ಹೇಳುತ್ತವೆ. ಒಮ್ಮೆ ಹತ್ತಿದ ರುಚಿ ಇನ್ನಷ್ಟು ಕೋಳಿಗಳ ಸ್ವಾಹಾಕ್ಕೆ ನಾಂದಿ ಹಾಡುತ್ತದೆ ಹಾಗೂ ದಿನೇ ದಿನೇ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತಾ ಹೋಗುತ್ತದೆ.

  ಸಾಸೇಜ್

  ಸಾಸೇಜ್

  ಇವುಗಳನ್ನು ಯಾವುದರಿಂದ ಮಾಡಿದ್ದು ಎಂದು ತಿಳಿದರೆ ಸಾಸೇಜ್ ಪ್ರಿಯರೆಲ್ಲಾ ಇದರ ಸೇವನೆಯನ್ನು ಬಿಡುವುದು ಖಂಡಿತಾ. ಕೋಳಿಯ ಅತಿ ಚಿಕ್ಕ ಮಾಂಸದ ತುಣುಕುಗಳ ಜೊತೆ ಸಾಮಾನ್ಯವಾಗಿ ವ್ಯರ್ಥವಾಗಿ ಎಸೆಯುವ ಕರುಳು ಹಾಗೂ ಇತರ ಅಂಗಗಳನ್ನು ಚಿಕ್ಕದಾರಿ ಅರೆದು ಮಿಶ್ರಣ ಮಾಡಿ ಸಾಸೇಜ್ ಮಾಡುತ್ತಾರೆ. ಹಾಟ್ ಡಾಗ್ ಎಂಬ ಉತ್ಪನ್ನದ ಕಥೆಯೂ ಇದೇ. ಇವುಗಳಲ್ಲಿಯೇ ಅತಿ ಹೆಚ್ಚು ಉಪ್ಪು ಹಾಗೂ ಪರ್ಯಾಪ್ತ ಕೊಬ್ಬು ಇದೆ. ನೂರು ಗ್ರಾಂ ಸಾಸೇಜ್ ನಲ್ಲಿ 301 ಕ್ಯಾಲೋರಿಗಳಿವೆ ಹಾಗೂ ಇವು ನಿಮ್ಮ ರಕ್ತನಾಳಗಳಲ್ಲಿ ಒಂದಾದರೂ ಕಡೆ ರಕ್ತಸಂಚಾರಕ್ಕೆ ತಡೆಯುಂಟುಮಾಡುತ್ತವೆ.

  ಚೀಸ್ ಕೇಕ್

  ಚೀಸ್ ಕೇಕ್

  ಅತಿ ಹೆಚ್ಚಿನ ಸಕ್ಕರೆ ಇರುವ ಚೀಸ್ ಕೇಕ್ ಪ್ರಿಯರಿಗೊಂದು ಎಚ್ಚರಿಕೆಯ ಮಾತು. ಈ ರುಚಿಕರ ಆಹಾರದ ಒಂದು ಪ್ರಮಾಣದಲ್ಲಿ 860 ಕ್ಯಾಲೋರಿಗಳು, 57 ಗ್ರಾಂ ಕೊಬ್ಬು ಹಾಗೂ 80 ಗ್ರಾಂ ಕಾರ್ಬೋ ಹೈಡ್ರೇಟುಗಳಿವೆ. ಆದ್ದರಿಂದ ಈ ತಿಂಡಿಯನ್ನು ತಿನ್ನುವ ಮುನ್ನ ಒಂದು ಬಾರಿ ಯೋಚಿಸಿ.

  ಸ್ಟೀಕ್

  ಸ್ಟೀಕ್

  ಈ ಆಹಾರದಲ್ಲಿಯೂ ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಹಾಗೂ ಪರ್ಯಾಪ್ತ ಕೊಬ್ಬು ಇದ್ದು ಹೃದಯವನ್ನು ದುರ್ಬಲಗೊಳಿಸಲು ಸಾಕು. ಅದರಲ್ಲೂ ಬೀಫ್ ಸ್ಟೀಕ್ ಒಂದರಲ್ಲಿ 594 ಕ್ಯಾಲೋರಿ, 18.5 ಗ್ರಾಂ ಕೊಬ್ಬು 191 mg ಕೊಲೆಸ್ಟ್ರಾಲ್ ಇದೆ. ಅಲ್ಲದೇ ಇದನ್ನು ಹುರಿದಾದ ಇದರ ಪ್ರಮಾಣಗಳು ದುಪ್ಪಟ್ಟಾಗುತ್ತವೆ.

  ಬರ್ಗರ್

  ಬರ್ಗರ್

  ಚಿಕ್ಕ ಮಕ್ಕಳಿಂದ ತೊಡಗಿ ಹಿರಿಯರವರೆಗೂ ಎಲ್ಲರೂ ಇಷ್ಟಪಡುವ ಬರ್ಗರ್ ಸಹಾ ಅನಾರೋಗ್ಯಕರ ಆಹಾರವಾಗಿದೆ. ಒಂದು ಬರ್ಗರ್ ನಲ್ಲಿ 29 ಗ್ರಾಂ ಕೊಬ್ಬು, 540 ಕ್ಯಾಲೋರಿಗಳು ಹಾಗೂ 1040 mg ಸೋಡಿಯಂ ಇದೆ. ಇವುಗಳ ಪ್ರಮಾಣ ಹೆಚ್ಚಾದರೆ ಹೃದಯಕ್ಕೆ ಅಪಾರಕಾರಿಯಾಗಿವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ಬರ್ಗರ್ ಗಳಿಗಿಂತ ಮನೆಯಲ್ಲಿಯೇ ತಯಾರಿಸಿ ಸವಿಯುವುದು ಜಾಣತನದ ಕ್ರಮವಾಗಿದೆ.

  ಪಿಜ್ಜಾ

  ಪಿಜ್ಜಾ

  ಹೃದಯದಕ್ಕೆ ಅಪಾಯಕಾರಿಯಾದ ಇನ್ನೊಂದು ಸುಂದರ ಆಹಾರವೆಂದರ ಪಿಜ್ಜಾ. ಇದರಲ್ಲಿ ಅತಿ ಹೆಚ್ಚಿನ, 4.4ಗ್ರಾಂ ಪರ್ಯಾಪ್ತ ಕೊಬ್ಬು ಹಾಗೂ 551 mg ಸೋಡಿಯಂ ಇದೆ. ಅಲ್ಲದೇ ಇದನ್ನು ಗರಿಗರಿಯಾಗಿಸಲು ಸೇರಿಸುವ ಉಪ್ಪು ಇದರ ಸೋಡಿಯಂ ಹೆಚ್ಚಳಕ್ಕೆ ಕಾರಣ ಹಾಗೂ ಇದಕ್ಕೆ ರುಚಿ ಬರಲು ಸೇರಿಸುವ ಸಾಸ್ ನಲ್ಲಿಯೂ ಹೆಚ್ಚಿನ ಉಪ್ಪು ಇರುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಅಪಾರವಾಗಿ ಹೆಚ್ಚಿಸಲು ಹಾಗೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ.

  ಚಿಪ್ಸ್

  ಚಿಪ್ಸ್

  ಸಾಮಾನ್ಯವಾಗಿ ಸಮಯ ಕಳೆಯಲೆಂದು ಸೇವಿಸುವ ಪೊಟಾಟೋ ಚಿಪ್ಸ್, ಕುರುಕು ತಿಂಡಿಗಳ ಮೇಲೆ ಉಪ್ಪನ್ನು ತೆಳುವಾಗಿ ಸಿಂಪಡಿಸಿರುತ್ತಾರೆ. ಆದರೆ ಒಂದು ಪ್ರಮಾಣದ ಉಪ್ಪಿನ ಚಿಪ್ಸ್ ನಲ್ಲಿಯೂ 155 ಕ್ಯಾಲೋರಿ 10.6 ಗ್ರಾಂ ಕೊಬ್ಬು ಹಾಗೂ 149 mg ಸೋಡಿಯಂ ಇದೆ. ಇದರ ಸೇವನೆಯಿಂದ ತೂಕ ಹೆಚ್ಚುವುದು ಮಾತ್ರವಲ್ಲ, ಹೃದಯದ ಮೇಲಿನ ಒತ್ತಡವೂ ಹೆಚ್ಚುತ್ತದೆ.

  ವೈವಿಧ್ಯಮಯ ಕಾಫಿಗಳು

  ವೈವಿಧ್ಯಮಯ ಕಾಫಿಗಳು

  ಗ್ರಾಹಕರಿಗೆ ಭಿನ್ನವಾದ ಅನುಭವ ನೀಡಲೆಂದು ಇಂದು ಕಾಫಿಯಲ್ಲಿಯೂ ವಿಚಿತ್ರ ಪ್ರಯೋಗಗಳನ್ನು ಮಾಡಿ ನೀಡಾಲಾಗುತ್ತಿದೆ. ಕಾಫ್ ಶಾಪ್ ಎಂಬ ಹೆಸರಿನಲ್ಲಿ ಈ ಸಂಸ್ಥೆಗಳು ಭಿನ್ನ ಪ್ರಯೋಗದ ಮೂಲಕ Blended coffees ಎಂಬ ಉತ್ಪನ್ನಗಳನ್ನು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಒದಗಿಸುತ್ತವೆ. ಕಾಫಿಯ ಜೊತೆಗೆ ಕ್ರೀಮ್, ಐಸ್ ಕ್ರೀಮ್, ಸಿರಪ್ ಮೊದಲಾದ ಅತಿ ಹೆಚ್ಚು ಕ್ಯಾಲೋರಿ ಹಾಗೂ ಸಕ್ಕರೆಯ ಅಂಶವಿರುವ ಆಹಾರಗಳನ್ನು ಬೆರೆಸಿ ನೋಡಲಿಕ್ಕೆ ಸುಂದರವಾಗಿಸಿ ಒದಗಿಸುತ್ತವೆ. ಆದರೆ ಇವುಗಳ ಸೇವನೆಯಿಂದ ದೇಹದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅತಿಬೇಗನೇ ಏರುತ್ತದೆ ಹಾಗೂ ಮಧುಮೇಹದ ಸಾಧ್ಯತೆಯನ್ನು ಅತಿಯಾಗಿ ಹೆಚ್ಚಿಸಿ ಹೃದಯದ ಕಾಯಿಲೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

  ಫ್ರೆಂಚ್ ಫ್ರೈಸ್

  ಫ್ರೆಂಚ್ ಫ್ರೈಸ್

  ಉದ್ದುದ್ದಕ್ಕೆ ಬೆರಳುಗಳಂತೆ ಕತ್ತರಿಸಿ ಎಣ್ಣೆಯಲ್ಲಿ ಕರಿದ ಆಲುಗಡ್ಡೆ ಸಹಾ ನೋಡಲಿಕ್ಕೆ ಸುಂದರವಾಗಿದ್ದರೂ ಹೃದಯಕ್ಕೆ ಮಾರಕವಾಗಿವೆ. ಇದರಲ್ಲಿ ಅತಿ ಹೆಚ್ಚು ಕಾರ್ಬೋಹೈಡ್ರೇಟುಗಳಿವೆ ಹಾಗೂ ಕೊಬ್ಬು ಮತ್ತು ಸೋಡಿಯಂ ಇದರ ಸೇವನೆಯ ತಕ್ಷಣವೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುತ್ತವೆ. ಒಂದು ವೇಳೆ ಇವನ್ನು ನಿತ್ಯವೂ ಸೇವಿಸಿದರೆ ತೂಕದಲ್ಲಿ ಹೆಚ್ಚಳ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ತುಂಬಿಕೊಳ್ಳಲು ನೇರವಾಗಿ ಕಾರಣವಾಗುತ್ತದೆ ಹಾಗೂ ಹೃದಯದ ಸ್ತಂಭನಕ್ಕೂ ಕಾರಣವಾಗಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

  English summary

  10 Foods Bad For Your Heart

  Heart disease or cardiovascular disease occurs in both men and women. The symptoms in men are more likely to be shortness of breath, nausea, fatigue and chest pain. Atherosclerosis is a common heart disease which is caused by a plague build-up that thickens and stiffens the artery walls. Heart disease or cardiovascular disease occurs in both men and women. The symptoms in men are more likely to be shortness of breath, nausea, fatigue and chest pain. Atherosclerosis is a common heart disease which is caused by a plague build-up that thickens and stiffens the artery walls.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more