ಪದೇ ಪದೇ ಈ 10 ಆಹಾರ ಪದಾರ್ಥಗಳನ್ನು ಬಿಸಿ ಮಾಡಬೇಡಿ!

Posted By: Arshad Hussain
Subscribe to Boldsky

ಇಂದು ತಾಜಾ ಆಹಾರ ಮಾಡಿಕೊಂಡು ಊಟ ಮಾಡುವಷ್ಟು ವ್ಯವಧಾನ ಮತ್ತು ಸಮಯ ಯಾರಲ್ಲೂ ಉಳಿಯದಿರುವ ಕಾರಣ ಹಾಗೂ ಕೆಲಸಬಾಹುಳ್ಯದಿಂದ ಅಡುಗೆಗೆ ಸಮಯವೇ ಸಿಗದ ಕಾರಣ ಹಿಂದೆ ಮಾಡಿದ್ದ ಆಹಾರವನ್ನು ಮರುಬಿಸಿ ಮಾಡಿಕೊಂಡು ಸೇವಿಸುವುದು ಅನಿವಾರ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಸಮಯಕ್ಕಿಂತಲೂ ಹಣ ಮತ್ತು ಆಹಾರವನ್ನು ಉಳಿಸಲು ಹಿಂದೆ ಮಾಡಿದ ಆಹಾರವನ್ನು ಮರುಬಿಸಿ ಮಾಡಿ ಸೇವಿಸಲಾಗುತ್ತದೆ. ಆದರೆ ನೀವು ಸೇವಿಸುವ ಎಲ್ಲಾ ಆಹಾರಗಳು ಮರುಬಿಸಿ ಮಾಡಿಕೊಂಡು ಸೇವಿಸಿದಾಗ ಆರೋಗ್ಯಕರವಲ್ಲ ಎಂದು ನೀವು ಈ ಮೊದಲು ಊಹಿಸಿದ್ದೀರೇ?

ಕೆಲವು ಆಹಾರಗಳು, ವಿಶೇಷವಾಗಿ ಪ್ರೋಟೀನ್ ಭರಿತ ಆಹಾರಗಳು ಪ್ರತಿಬಾರಿ ಬಿಸಿ ಮಾಡಿದಾಗಲೂ ತಮ್ಮ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕೆಲವು ಆಹಾರಗಳು ಮರುಬಿಸಿ ಮಾಡಲೇಬಾರದು, ಮಾಡಿದರೆ ವಿಷವಾಗುತ್ತದೆ ಎಂದು ವಿವರಿಸಲಾಗಿದೆ. ಏಕೆಂದರೆ ಈ ಆಹಾರಗಳನ್ನು ಮರುಬಿಸಿ ಮಾಡಿದಾಗ ಆಗುವ ಬದಲಾವಣೆ ಬ್ಯಾಕ್ಟೀರಿಯಾಗಳಿಗೆ ಅನುಕೂಲಕರವಾಗುತ್ತದೆ ಹಾಗೂ ಪ್ರೋಟೀನುಗಳು ಸುಲಭವಾಗಿ ಒಡೆದು ಹಾಳಾಗುತ್ತವೆ.

ಒಂದಕ್ಕಿಂತ ಹೆಚ್ಚು ಬಾರಿ ಬಿಸಿಮಾಡಿದರೆ ಆಹಾರಗಳು ವಿಷಾಹಾರವಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಒಮ್ಮೆ ಬಿಸಿ ಮಾಡಿ ತಣ್ಣಗಾದ ಆಹಾರವನ್ನು ಬ್ಯಾಕ್ಟೀರಿಯಾಗಳು ಸುಲಭವಾಗಿ ಆಕ್ರಮಿಸಿಕೊಳ್ಳುತ್ತವೆ. ಹಾಗೂ ಇದನ್ನು ಸೇವಿಸಿದವರ ಆರೋಗ್ಯ ಕೆಡಿಸುತ್ತವೆ. ಆದ್ದರಿಂದ ಆದಷ್ಟೂ ತಾಜಾ ಆಹಾರಗಳನ್ನೇ ತಯಾರಿಸಿ ಸೇವಿಸಿ. ಕೆಳಗೆ ವಿವರಿಸಿದ ಹತ್ತು ಆಹಾರಗಳನ್ನು ಮಾತ್ರ ಎಂದಿಗೂ ಮರುಬಿಸಿ ಮಾಡಬಾರದು.... 

 ಸೆಲೆರಿ

ಸೆಲೆರಿ

ಇದರಲ್ಲಿರುವ ಹೆಚ್ಚಿನ ಪ್ರಮಾಣದ ನೈಟ್ರೇಟುಗಳು ಮರುಬಿಸಿ ಮಾಡಿದಾಗ ನೈಟ್ರೈಟುಗಳೆಂಬ ವಿಷವಾಗಿ ಪರಿವರ್ತಿತವಾಗುತ್ತವೆ. ಸಾಮಾನ್ಯವಾಗಿ ಸೆಲೆರಿಯನ್ನು ಸೂಪ್ ಗಳಲ್ಲಿ ರುಚಿ ಹೆಚ್ಚಿಸಲೆಂದು ಬಳಸಲಾಗುತ್ತದೆ. ಆದ್ದರಿಂದ ಸೆಲೆರಿ ಬಳಸಿ ತಯಾರಿಸಿದ ಸೂಪ್ ಅನ್ನು ಬಿಸಿಬಿಸಿಯಾಗಿಯೇ ಸೇವಿಸಬೇಕು. ಆದಾಗ್ಯೂ ಸೂಪ್ ಉಳಿದುಬಿಟ್ಟರೆ ಮರುಬಿಸಿ ಮಾಡುವ ಮೊದಲು ಸೆಲೆರಿಯ ದಂಟುಗಳನ್ನು ಸೂಪ್ ನಿಂದ ನಿವಾರಿಸಿಯೇ ಬಿಸಿ ಮಾಡಬೇಕು.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಹಸಿರು ಮತ್ತು ದಪ್ಪನೆಯ ಸೊಪ್ಪುಗಳಾದ ಪಾಲಕ್ ಮತ್ತು ಬಸಲೆ ಸೊಪ್ಪುಗಳನ್ನು ಎಂದಿಗೂ ಮೈಕ್ರೋವೇವ್ ನಲ್ಲಿ ಮರುಬಿಸಿ ಮಾಡಬಾರದು. ಈ ಎಲೆಗಳಲ್ಲಿಯೂ ನೈಟ್ರೇಟುಗಳಿವೆ ಹಾಗೂ ಮರುಬಿಸಿ ಮಾಡಿದಾಗ ಇದು ವಿಷವಾಗಿ ಪರಿವರ್ತನೆಯಾಗುತ್ತದೆ ಹಾಗೂ ಕ್ಯಾನ್ಸರ್ ಕಾರಕ ಗುಣಗಳನ್ನು ಪಡೆಯುತ್ತದೆ. ಅಲ್ಲದೇ ಇದರಲ್ಲಿರುವ ಕಬ್ಬಿಣದ ಅಂಶವೂ ಮರುಬಿಸಿ ಮಾಡಿದಾದ ತುಕ್ಕು ಹಿಡಿಯುವ ಸಂಭವ ಹೆಚ್ಚುತ್ತದೆ. ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಬಿಡುಗಡೆ ಮಾಡಲು ಕಾರಣವಾಗಬಹುದು.

ಅನ್ನ

ಅನ್ನ

ಆಹಾರ ಗುಣಮಟ್ಟ ಪ್ರಾಧಿಕಾರ (Foods Standards Agency (FSA) ಪ್ರಕಾರ ಅನ್ನವನ್ನು ಮತ್ತೆ ಬಿಸಿಮಾಡಿದರೆ ಇದು ವಿಷಾಹಾರವಾಗುವ ಸಾಧ್ಯತೆ ಹೆಚ್ಚುತ್ತದೆ. ಹೌದು, ಇದು ನಿಜ! ಏಕೆಂದರೆ ಸಾಮಾನ್ಯವಾಗಿ ಯಾವುದೇ ಔಷಧಿಗೆ ಬಗ್ಗದ ಮಾರಕ ಬ್ಯಾಸಿಲಸ್ ಸಿರಿಯಸ್ ಎಂಬ ಬ್ಯಾಕ್ಟೀರಿಯಾ ಅನ್ನದಲ್ಲಿರುತ್ತದೆ. ಅನ್ನವನ್ನು ಬೇಯಿಸಿದಾಗ ಈ ಬ್ಯಾಕ್ಟೀರಿಯಾ ಸತ್ತರೂ ಇದರ ಮೊಟ್ಟೆಗಳು ಬಿಡುಗಡೆಯಾಗುತ್ತವೆ ಹಾಗೂ ಮರುಬಿಸಿ ಮಾಡಿದಾಗ ಇವು ಲಕ್ಷಾಂತರ ಸಂಖ್ಯೆಯಲ್ಲಿ ಮರಿಗಳಾಗಿ ಆಹರವನ್ನು ವಿಷವಾಗಿಸುತ್ತವೆ.

ಅಣಬೆಗಳು

ಅಣಬೆಗಳು

ಎಂದಿಗೂ ಅಣಬೆಯನ್ನು ಒಂದು ಬಾರಿ ಮಾತ್ರವೇ ಬಿಸಿಮಾಡಿ ಸೇವಿಸಬೇಕು, ಅಂದರೆ ಒಮ್ಮೆ ಅಣಬೆಯ ಖಾದ್ಯವನ್ನು ತಯಾರಿಸಿದ ಬಳಿಕ ಮತ್ತೊಮ್ಮೆ ಬಿಸಿ ಮಾಡಲೇಬಾರದು. ಅಣಬೆಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನುಗಳಿವೆ ಹಾಗೂ ಮೊದಲ ಬಾರಿ ತಯಾರಾದಾಗ ಗರಿಷ್ಟ ಪ್ರಮಾಣದಲ್ಲಿ ಲಭಿಸುತ್ತವೆ. ಆದರೆ ಮರುಬಿಸಿ ಮಾಡಿದಾಗ ಈ ಪ್ರೋಟೀನುಗಳು ಇನ್ನಷ್ಟು ಒಡೆಯುತ್ತವೆ ಹಾಗೂ ಇದರ ಸೇವನೆಯಿಂದ ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ. ಆದ್ದರಿಂದ ಅಣಬೆಯ ಯಾವುದೇ ಪದಾರ್ಥವನ್ನು ಮರುಬಿಸಿ ಮಾಡಲೇಬಾರದು.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಗಳಲ್ಲಿರುವ ಪೊಟ್ಯಾಶಿಯಂ, ವಿಟಮಿನ್ ಸಿ, ವಿಟಮಿನ್ ಬಿ೬ ಗಳು ಮರುಬಿಸಿ ಮಾಡಿದಾಗ ಅಪಾಯಕಾರಿ ಬ್ಯಾಕ್ಟೀರಿಯಾಗಳ ಧಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಬ್ಯಾಕ್ಟೀರಿಯಾಗಳ ಧಾಳಿಗೆ ಒಳಗಾಗದೇ ಇರಲು ಸಾಧ್ಯವಾದಷ್ಟೂ ಆಹಾರವನ್ನು ತಾಜಾರೂಪದಲ್ಲಿಯೇ ಸೇವಿಸಬೇಕು. ಸಾಧ್ಯವಾಗದಿದ್ದರೆ ಬೇಯಿಸಿದ ಆಲೂಗಡ್ಡೆಗಳನ್ನು ಫ್ರಿಜ್ಜಿನಲ್ಲಿಟ್ಟು ಒಂದೆರಡು ದಿನಗಳ ಒಳಗೇ ಸೇವಿಸಿಬಿಡಬೇಕು.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳಲ್ಲಿ ಸಮೃದ್ಧ ಪ್ರಮಾಣದ ಪ್ರೋಟೀನ್ ಇದೆ. ಇವುಗಳನ್ನು ಬೇಯಿಸಿದಾಗ ಅಥವಾ ಹುರಿದಾಗ ಇದರ ಪ್ರೋಟೀನುಗಳು ಆರೋಗ್ಯಕರವಾಗಿರುತ್ತವೆ. ಆದರೆ ಮರುಬಿಸಿ ಮಾಡಿದಾಗ ಇವು ಇನ್ನಷ್ಟು ಒಡೆದು ಜೀರ್ಣಕ್ರಿಯೆಗೆ ಗಂಭೀರವಾದ ತೊಂದರೆಯುಂಟುಮಾಡಬಹುದು. ಮೊಟ್ಟೆಗಳ ಪದಾರ್ಥಗಳನ್ನು ಆಗಲೇ ತಯಾರಿಸಿ ಬಿಸಿಬಿಸಿಯಾಗಿಯೇ ಸೇವಿಸಬೇಕು. ಅಲ್ಲದೇ ಮೊಟ್ಟೆಯ ಪದಾರ್ಥವನ್ನು ಹೆಚ್ಚು ಕಾಲ ಇಡಲೂಬಾರದು. ಈ ಅಧಿಕ ಪ್ರೋಟೀನ್ ಆಹಾರಗಳಲ್ಲಿ ಹೆಚ್ಚಿನ ಸಾರಜನಕವೂ ಇರುತ್ತದೆ. ಸಮಯ ಕಳೆಯುತ್ತಾ ಹೋದಂತೆ ತಣ್ಣಗಾಗುವ ಈ ಸಾರಜನಕ ಮರುಬಿಸಿ ಮಾಡಿದಾಗ ಆಮ್ಲಜನಕದೊಡನೆ ಸಂಯೋಜನೆಗೊಂಡು ಖಾದ್ಯವನ್ನು ವಿಷಾಹಾರವಾಗಿಸುತ್ತದೆ.

ಕೋಳಿಮಾಂಸ

ಕೋಳಿಮಾಂಸ

ಕೋಳಿಯ ಸಾರು ಅಥವಾ ಯಾವುದೇ ಪದಾರ್ಥವನ್ನು ಮತ್ತೆ ಮತ್ತೆ ಬಿಸಿಮಾಡಬಾರದು. ಕೋಳಿಮಾಂಸವೂ ಪ್ರೋಟೀನು ಭರಿತವಾಗಿದ್ದು ಪ್ರತಿಬಾರಿ ಬಿಸಿಮಾಡಿದಾಗಲೂ ಪ್ರೋಟೀನುಗಳು ಹೆಚ್ಚು ಹೆಚ್ಚು ಪುಡಿಯಾಗುತ್ತಾ ಹೋಗುತ್ತವೆ. ಈ ಆಹಾರವನ್ನು ಸೇವಿಸಿದಾಗ ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ.

ಎಣ್ಣೆಗಳು

ಎಣ್ಣೆಗಳು

ಅಕ್ರೋಟ್ ಎಣ್ಣೆ, ಬೆಣ್ಣೆಹಣ್ಣಿನ ಎಣ್ಣೆ, ಹ್ಯಾಜೆಲ್ ನಟ್ ಎಣ್ಣೆ, ದ್ರಾಕ್ಷಿಬೀಜದ ಎಣ್ಣೆ ಹಾಗೂ ಅಗಸೆ ಬೀಜದ ಎಣ್ಣೆಗಳು ಅತಿ ಕಡಿಮೆ ತಾಪಮಾನದಲ್ಲಿಯೇ ಹೊಗೆ ಕಾರತೊಡಗುತ್ತವೆ. ಇದೇ ಕಾರಣಕ್ಕೆ ಈ ಎಣ್ಣೆಗಳನ್ನು ಎಂದಿಗೂ ಮರುಬಿಸಿ ಮಾಡಬಾರದು. ಮರುಬಿಸಿ ಮಾಡಿದರೆ ಇವು ಸ್ಪೋಟಗೊಳ್ಳಬಹುದು! ಇವುಗಳನ್ನು ಎಂದಿಗೂ ಬ್ರೆಡ್ ಮಾಡಲು ಅಥವಾ ಹುರಿಯಲು ಬಳಸಬಾರದು. ಬದಲಿಗೆ ಇವುಗಳನ್ನು ನಿಮ್ಮ ಆಹಾರಗಳಲ್ಲಿ ಚಿಮುಕಿಸಿಕೊಂಡು ಸೇವಿಸಬೇಕು.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಈ ಆಹಾರಗಳನ್ನು ಹೆಚ್ಚು ಕಾಲ ಕೆಡದಂತಿರಿಸಲು ಸಂರಕ್ಷಕಗಳನ್ನು ಬಳಸಿರುತ್ತಾರೆ. ಆದರೆ ಮರುಬಿಸಿ ಮಾಡುವ ಪ್ರಕ್ರಿಯೆಯಲ್ಲಿ, ವಿಶೇಷವಾಗಿ ಮೈಕ್ರೋವೇವ್ ನಲ್ಲಿ ಮರುಬಿಸಿ ಮಾಡಿದಾಗ ಇದು ಅನಾರೋಗ್ಯಕರ ಆಹಾರವಾಗಿ ಬದಲಾಗುತ್ತದೆ. ಈ ಸಂರಕ್ಷಕಗಳು ಪ್ರಬಲ ರಾಸಾಯನಿಕಗಳಾಗಿದ್ದು ಮರುಬಿಸಿ ಮಾಡಿದಾಗ ಈ ರಾಸಾಯನಿಕಗಳೂ ಪರಿವರ್ತನೆಗೊಂಡು ವಿಷಾಹಾರವಾಗುತ್ತವೆ.

ಬೀಟ್ರೂಟ್

ಬೀಟ್ರೂಟ್

ಬೀಟ್ರೂಟ್ ನಲ್ಲಿಯೂ ಅಧಿಕ ಪ್ರಮಾಣದ ನೈಟ್ರೇಟುಗಳಿವೆ ಹಾಗೂ ಮರುಬಿಸಿ ಮಾಡಿದಾಗ ವಿಷಪದಾರ್ಥವಾಗುತ್ತದೆ. ಬೀಟ್ರೂಟ್ ಪದಾರ್ಥ ಮರುಬಿಸಿ ಮಾಡಿದಾಗ ಕ್ಯಾನ್ಸರ್ ಕಾರಕ ಕಣಗಳನ್ನು ಬಿಡುಗಡೆ ಮಾಡುತ್ತದೆ. ಈ ಗುಣಗಳು ಅಪಾಯಕಾರಿ ಮಾತ್ರವಲ್ಲ ಸೇವಿಸುವವರಲ್ಲಿ ನಪುಂಸಕತ್ವವನ್ನು ಮತ್ತು ಕ್ಯಾನ್ಸರ್ ಉಂಟುಮಾಡಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತ ವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

10 Common Foods You Should Not Reheat

Reheating dinner has become common in households where everyone is a workaholic and does not have time to cook. Leftover foods are reheated and eaten to save time and energy in cooking food. But have you ever imagined the foods that you are reheating aren't safe to eat anymore? Research shows that reheating certain foods can be fatal to your health as not every food is meant to be reheated and consumed. It's because of how the foods react with bacteria while they are stored or due to the proteins that are broken down during cooking.