For Quick Alerts
ALLOW NOTIFICATIONS  
For Daily Alerts

ಪುರುಷರ ನಿಮಿರು ದೌರ್ಬಲ್ಯ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

|

ಲೈಂಗಿಕ ವೈಫಲ್ಯಕ್ಕೆ ಮಹಿಳೆಯರಷ್ಟೇ ಪುರುಷರ ಕೊರತೆಯೂ ಸಮಾನವಾಗಿ ಕಾರಣವಾಗಿದೆ. ಪುರುಷರ ನಪುಂಸಕತ್ವ ಅಥವಾ ನಿಮಿರು ದೌರ್ಬಲ್ಯ ಹೆಚ್ಚಿನ ಪುರುಷರು ಎದುರಿಸುವ ತೊಂದರೆಯಾಗಿದ್ದು ವಯಸ್ಸಾದಂತೆಯೇ ಈ ದೌರ್ಬಲ್ಯವೂ ಹೆಚ್ಚುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಲವತ್ತು ತಲುಪಿದ ಪುರುಷರಲ್ಲಿ ಈ ದೌರ್ಬಲ್ಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ದೌರ್ಬಲ್ಯವಿರುವ ಪುರುಷರು ಪೂರ್ಣ ಪ್ರಮಾಣದ ನಿಮಿರುತನ ಪಡೆಯಲು ವಿಫಲರಾಗುತ್ತಾರೆ ಅಥವಾ ಸುಲಭಪದಗಳಲ್ಲಿ ಹೇಳಬೇಕೆಂದರೆ ಕಾಮೇಚ್ಛೆಯನ್ನು ಕಳೆದುಕೊಳ್ಳುತ್ತಾರೆ.

ಬಲವಾದ ಆರೋಗ್ಯಕರ ನಿಮಿರುವಿಕೆ ಪಡೆಯುವುದು ಹೇಗೆ?

ಈ ಸ್ಥಿತಿಯಿಂದಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಪುರುಷರು ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ ಹಾಗೂ ಈ ಸ್ಥಿತಿ ಹೆಚ್ಚು ಕಾಲ ಮುಂದುವರೆದರೆ ಇದು ಖಿನ್ನತೆಗೂ ಕಾರಣವಾಗಬಹುದು. ಪುರುಷರಲ್ಲಿ ನಪುಂಸಕತ್ವ ಎದುರಾಗಲು ಕೆಲವಾರು ಕಾರಣಗಳಿವೆ. ರಸದೂತಗಳ ಬದಲಾವಣೆಯ ಪರಿಣಾಮ ಹಾಗೂ ವಯಸ್ಸಾಗುವಿಕೆ ಎರಡು ಪ್ರಮುಖ ಕಾರಣಗಳು. ಇನ್ನುಳಿದಂತೆ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮಟ್ಟ, ಮಧುಮೇಹ ಹಾಗೂ ಸ್ಥೂಲಕಾಯಗಳು ರಕ್ತನಾಳಗಳ ಒಳವ್ಯಾಸವನ್ನು ಇನ್ನಷ್ಟು ಕಿರಿದಾಗಿಸುವ ಮೂಲಕ ನಿಮಿರುವೈಫಲ್ಯಕ್ಕೆ ಕಾರಣವಾಗಬಹುದು.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದ ಪರಿಹಾರಗಳು

ನಿಮಿರು ದೌರ್ಬಲ್ಯಕ್ಕೆ ಮಾನಸಿಕ ಕಾರಣಗಳೂ ಇವೆ. ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ ಮೊದಲಾದವುಗಳು ಈ ತೊಂದರೆ ತಂದೊಡ್ಡಬಲ್ಲವು. ಆದರೆ ಈ ಮನಸ್ಸು ನಿರಾಳವಾದ ಬಳಿಕ ಈ ತೊಂದರೆ ತನ್ನಿಂತಾನೇ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಎದುರಾಗುವ ನಪುಂಸಕತ್ವಕ್ಕೆ ಕೆಲವು ಸುಲಭ ಮನೆಮದ್ದುಗಳು ಲಭ್ಯವಿವೆ ಹಾಗೂ ಸಮರ್ಥವಾಗಿವೆ. ಈ ನಿಟ್ಟಿನಲ್ಲಿ ಕೆಲವು ಆಹಾರಗಳನ್ನು ನಾವು ಸಂಗ್ರಹಿಸಿದ್ದು ಇವುಗಳಲ್ಲಿ ಸೂಕ್ತವಾದುದನ್ನು ಅನುಸರಿಸುವ ಮೂಲಕ ಉತ್ತಮ ಪರಿಹಾರವನ್ನು ಪಡೆಯಬಹುದು.

ಶುಂಠಿ

ಶುಂಠಿ

ಹಸಿಶುಂಠಿಯಲ್ಲಿ ಅಪಾರವಾದ ಆರೋಗ್ಯಕರ ಗುಣಗಳಿವೆ. ಇದರಲ್ಲಿ ಕಾಮೋತ್ತೇಜಕ ಗುಣವೂ ಒಂದು. ಇದರಲ್ಲಿರುವ ಜಿಂಜೆರಾಲ್ ಎಂಬ ಪೋಷಕಾಂಶ ಈ ಗುಣವನ್ನು ನೀಡುತ್ತದೆ. ಶುಂಠಿಯ ಸೇವನೆಯಿಂದ ಜನನಾಂಗಗಳಲ್ಲಿ ಹೆಚ್ಚಿನ ರಕ್ತಪರಿಚಲನೆ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಶೀಘ್ರಸ್ಖಲನ ಹಾಗೂ ನಿಮಿರುದೌರ್ಬಲ್ಯದ ತೊಂದರೆಗಳೂ ದೂರವಾಗುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ತನ್ನ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳಿಂದಾಗಿ ಬೆಳ್ಳುಳ್ಳಿ ರುಚಿಕಾರಕಕ್ಕಿಂತಲೂ ಹೆಚ್ಚಾಗಿ ಔಷಧೀಯ ರೂಪದಲ್ಲಿಯೇ ಸೇವಿಸಲ್ಪಡುತ್ತದೆ. ಸುಮಾರು ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ಜಗಿದು ನುಂಗುವ ಮೂಲಕ ಪುರುಷರ ನಪುಂಸಕತ್ವವನ್ನು ಕಡಿಮೆ ಮಾಡಬಹುದು ಹಾಗೂ ಆರೋಗ್ಯಕರ ವೀರ್ಯಾಣುಗಳ ಉತ್ಪತ್ತಿಗೆ ನೆರವಾಗುತ್ತದೆ.

ನುಗ್ಗೆಕಾಯಿಯ

ನುಗ್ಗೆಕಾಯಿಯ

ನುಗ್ಗೆಕಾಯಿ ಒಂದು ಉತ್ತಮವಾದ ಕಾಮೋತ್ತೇಜಕ ಆಹಾರವಾಗಿದೆ. ನುಗ್ಗೆಕಾಯಿಯ ಹೂವುಗಳಲ್ಲಿ ಈ ಶಕ್ತಿ ಗರಿಷ್ಟವಾಗಿದೆ. ಕೊಂಚ ನುಗ್ಗೆಹೂವುಗಳನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಈ ಹಾಲನ್ನು ನಿತ್ಯವೂ ಒಂದು ಅಥವಾ ಎರಡು ಬಾರಿ ಸೇವಿಸಬೇಕು. ಇದರಿಂದ ಪುರುಷರ ನಪುಂಸಕತ್ವ ಕಡಿಮೆಯಾಗುತ್ತದೆ ಹಾಗೂ ನಿಮಿರುತನವೂ ಹೆಚ್ಚುತ್ತದೆ.

ಖರ್ಜೂರ

ಖರ್ಜೂರ

ಖರ್ಜೂರ ಹೆಚ್ಚು ಶಕ್ತಿಭರಿತ ಆಹಾರವಾಗಿದೆ. ನಿತ್ಯವೂ ಖರ್ಜೂರವನ್ನು ಸೇವಿಸುವ ಪುರುಷರಲ್ಲಿ ಕಾಮೋತ್ಸಾಹ ಹೆಚ್ಚುತ್ತದೆ. ವಿಶೇಷವಾಗಿ ಒಣಖರ್ಜೂರ ಈ ಶಕ್ತಿ ಹೆಚ್ಚಾಗಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಮೂರರಿಂದ ನಾಲ್ಕು ಖರ್ಜೂರಗಳನ್ನು ಬಾದಾಮಿ ಮತ್ತು ಪಿಸ್ತಾದೊಂದಿಗೆ ಸಮಪ್ರಮಾಣದಲ್ಲಿ ಸೇವಿಸಬೇಕು.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಸಹಾ ಒಂದು ಉತ್ತಮವಾದ ಕಾಮೋತ್ತೇಜಕ ಆಹಾರವಾಗಿದೆ. ಇದರಲ್ಲಿರುವ ಬೀಟಾ ಕ್ಯಾರೋಟೀನ್ ನಪುಂಸಕತ್ವವನ್ನು ನಿವಾರಿಸುವ ಗುಣ ಹೊಂದಿದೆ. ಕಾಮೋತ್ತೇಜಕ ಗುಣ ಮತ್ತು ಬೀಟಾ ಕ್ಯಾರೋಟೀನ್ ಗಳು ನಿಮಿರುದೌರ್ಬಲ್ಯವನ್ನು ಕೊನೆಗಾಣಿಸಲು ಸಮರ್ಥವಾಗಿವೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಕ್ಯಾರೆಟ್ ಗಳನ್ನು ಸಾಲಾಡ್ ಮೂಲಕ ಸೇವಿಸುವ ಮೂಲಕ ಅಥವಾ ಒಂದರಿಂದ ಎರಡು ದೊಡ್ಡ ಚಮಚ ಕ್ಯಾರೆಟ್ ತುರಿಯನ್ನು ಒಂದು ಲೋಟ ಬಿಸಿಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯುವ ಮೂಲಕ ಉತ್ತಮ ಪರಿಣಾಮವನ್ನು ಪಡೆಯಬಹುದು.

ಕಸ್ತೂರಿ

ಕಸ್ತೂರಿ

ನಪುಂಸಕತ್ವವನ್ನು ನಿವಾರಿಸಲು ನೂರಾರು ವರ್ಷಗಳಿಂದ ಕಸ್ತೂರಿಯನ್ನು ಬಳಸಲಾಗುತ್ತಾ ಬರಲಾಗಿದೆ. ಕಸ್ತೂರಿಯ ಸೇವನೆಯಿಂದ ಕಾಮೇಚ್ಛೆ ವೃದ್ದಿಸುತ್ತದೆ ಹಾಗೂ ನರಗಳನ್ನು ಸಡಿಲಗೊಳಿಸುವ ಪರಿಣಾಮವನ್ನು ನೀಡುತ್ತದೆ. ನಿಮಿರುತನದ ತೊಂದರೆ ಇರುವ ಪುರಷರು ನಿತ್ಯವೂ ತಮ್ಮ ನಿತ್ಯದ ಆಹಾರದಲ್ಲಿ ಕೊಂಚ ಕಸ್ತೂರಿಯನ್ನು ಚಿಮುಕಿಸಿಕೊಳ್ಳುವ ಮೂಲಕ ಈ ತೊಂದರೆಯಿಂದ ಉತ್ತಮ ಪರಿಹಾರ ಪಡೆಯಬಹುದು.

ಈರುಳ್ಳಿ

ಈರುಳ್ಳಿ

ಪುರುಷರಲ್ಲಿ ನಪುಂಸಕತ್ವದ ತೊಂದರೆಯನ್ನು ನಿವಾರಿಸಲು ನೀರುಳ್ಳಿ ಹೆಚ್ಚು ಭರವಸೆಯ ಆಹಾರವಾಗಿದೆ. ಈರುಳ್ಳಿಯಲ್ಲಿ ನೈಸರ್ಗಿಕ ಕಾಮೋತ್ತೇಜಕ ಗುಣಗಳಿವೆ ಹಾಗೂ ಈ ಗುಣ ನಿಮಿರುತನವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಕೊಂಚವೇ ಹುರಿಯಬೇಕು. ಇದಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ ಸೇವಿಸಿ. ಈ ಆಹಾರವನ್ನು ಸೇವಿಸುವ ಮುನ್ನ ಕನಿಷ್ಠ ಎರಡು ಗಂಟೆಗಳಾದರೂ ಏನನ್ನೂ ತಿಂದರಬಾರದು. ಇದರಿಂದ ಶೀಘ್ರಸ್ಖಲನ ಹಾಗೂ ನಪುಂಸಕತ್ವದ ತೊಂದರೆಗಳು ಪರಿಣಾಮಕಾರಿಯಾಗಿ ಪರಿಹಾರಗೊಳ್ಳುತ್ತವೆ.

ಶತಾವರಿ

ಶತಾವರಿ

ತನ್ನ ಉತ್ತಮ ಕಾಮೋತ್ತೇಜಕ ಗುಣಗಳಿಂದಾಗಿ ಶತಾವರಿ ಪುರುಷರ ನಪುಂಸಕತ್ವ ನಿವಾರಿಸಲು ಉತ್ತಮ ಆಯ್ಕೆಯಾಗಿದೆ. ನೂರಾರು ವರ್ಷಗಳಿಂದ ಶತಾವರಿಯನ್ನು ನಪುಂಸಕತ್ವದ ತೊಂದರೆಗೆ ಚಿಕಿತ್ಸೆಯ ರೂಪದಲ್ಲಿ ಬಳಸಲಾಗುತ್ತಿದೆ. ಇದಕ್ಕಾಗಿ ಒಣಗಿದ ಶತಾವರಿ ಬೇರುಗಳನ್ನು ಒಂದು ಲೋಟ ಹಾಲಿನಲ್ಲಿ ಚೆನ್ನಾಗಿ ಕುದಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಉತ್ತಮ ಪರಿಹಾರ ಪಡೆಯಬಹುದು.

ಬಾದಾಮಿ

ಬಾದಾಮಿ

ಬಾದಾಮಿಗಳಲ್ಲಿ ವಿಟಮಿನ್ ಇ, ಅವಶ್ಯಕ ಖನಿಜಗಳು ಹಾಗೂ ಆರೋಗ್ಯಕರ ಕೊಬ್ಬು ಅತಿ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಬಾದಾಮಿಯನ್ನು ಅತ್ಯುತ್ತಮ ಕಾಮೋತ್ತೇಜಕ ಆಹಾರವಾಗಿಸಿವೆ. ಬಾದಾಮಿಯ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಒಂದು ದೊಡ್ಡಚಮಚ ಬಾದಾಮಿ ಪುಡಿಯನ್ನು ಒಂದು ಲೋಟ ಬಿಸಿ ಹಾಲಿನಲ್ಲಿ ಕುದಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಪರ್ಯಾಯವಾಗಿ ಒಂದು ಹಿಡಿಯಷ್ಟು ಬಾದಾಮಿಗಳನ್ನು ಕೆಲವು ಘಂಟೆಗಳವರೆಗೆ ನೀರಿನಲ್ಲಿ ನೆನೆಸಿಟ್ಟು ರಾತ್ರಿ ಮಲಗುವ ಮುನ್ನ ಸೇವಿಸಬಹುದು.

ದಾಳಿಂಬೆರಸ

ದಾಳಿಂಬೆರಸ

ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಆಹಾರಗಳಲ್ಲಿ ದಾಳಿಂಬೆ ಪ್ರಮುಖವಾಗಿದೆ. ಇದು ರಕ್ತಪರಿಚಲನೆಯನ್ನು ನಿಯಂತ್ರಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಪುರುಷರಲ್ಲಿ ನಿಮಿರುದೌರ್ಬಲ್ಯವನ್ನೂ ಕಡಿಮೆಗೊಳಿಸುತ್ತದೆ. ಇದಕ್ಕಾಗಿ ತಾಜಾ ದಾಳಿಂಬೆಹಣ್ಣಿನಿಂದ ಸಂಗ್ರಹಿಸಿದ ರಸವನ್ನು ನಿಯಮಿತವಾಗಿ ಸೇವಿಸಬೇಕು.

English summary

10 Best-known Natural Home Remedies For Male Impotency

Male impotency is a condition wherein a man fails to get an erection, or in simple terms - sexual drive. Due to this condition, many a times, men tend to have a low self-esteem and having this problem for a long time can often lead the men into depression as well. Male impotency can be caused by several reasons. Hormonal changes and ageing are 2 of the major factors that can cause erectile dysfunction.
X
Desktop Bottom Promotion